Vachanagalu in Kannada Notes, ಕನ್ನಡ ವಚನಗಳು PDF, 1st PUC Kannada Textbook Answers, allama prabhu Vachanagalu Questions and Answers Pdf, Notes , 1st PUC Kannada Vachanagalu Notes
vachanagalu in kannada notes
ಕವಿ ಪರಿಚಯ:
ಅಲ್ಲಮಪ್ರಭು 12 ನೇ ಶತಮಾನದಲ್ಲಿದ್ದ ವಚನಕಾರದಲ್ಲಿ ಮಹತ್ವದ ವಚನಕಾರನೆಂದು ಪ್ರಸಿದ್ಧವಾಗಿರುವರು
ಜನ್ಮಸ್ಥಳ : ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವೆಯಲ್ಲಿ
ತಂದೆ : ನಿರಹಂಕಾರ
ತಾಯಿ : ಸುಜ್ಞಾನಿ
ಬಾಲ್ಯದಲ್ಲಿ ಕಾಮಲತೆ ಎಂಬ ತರುಣಿಯಲ್ಲಿ ಮೋಹಿತನಾಗಿದ್ದು , ಅವಳ ಮರಣದಿಂದ ವಿರಕ್ತಿಯನ್ನು ಹೊಂದಿದನೆಂದು ಹೇಳಲಾಗಿದೆ .
ಅಲ್ಲಮನ ಗುರು : ಅನಿಮಿಷಯ್ಯ
ಅಂಕಿತ ನಾಮ : ಗುಹೇಶ್ವರ
ಅಲ್ಲಮನ ಉದ್ದೇಶ : ಜ್ಞಾನ ಪ್ರಸಾರಣ ಅಲ್ಲಮನ ಉದ್ದೇಶವಾಗಿತ್ತು
ಬಸವಣ್ಣನವರು ಸ್ಥಾಪಿಸಿದ ಶೂನ್ಯಸಿಂಹಾಸನದ ಪೀಠವನ್ನು ಈತ ಅಲಂಕರಿಸಿದ್ದನು.
ಸಂಕೀರ್ಣತೆ ಈತನ ವಚನಗಳ ವೈಶಿಷ್ಟ್ಯವಾಗಿದೆ .
ವಚನಗಳ ಭಾವಾರ್ಥ / ಸಾರಾಂಶ
ಕಾಲುಗಳೆಂಬವು ಗಾಲಿ ಕಂಡಯ್ಯಾ
allama prabhu Vachanagalu Questions and Answers Pdf
ದೇಹವೆಂಬುದು ತುಂಬಿದ ಬಂಡಿ ಕಂಡಯ್ಯಾ
ಬಂದಿಯ ಹೊಡೆವವರೈವರೂ ಮಾನಿಸರು ,
ಒಬ್ಬರಿಗೊಬ್ಬರು ಸಮವಿಲ್ಲಯ್ಯ
ಅದರಿಚ್ಚೆಯನರಿದು ಹೊಡೆಯದಿರ್ದಡೆ
ಅದರಚ್ಚು ಮುರಿಯಿತ್ತು , ಗುಹೇಶ್ವರಾ
ಈ ಮೇಲಿನ ವಚನದಲ್ಲಿ ಅಲ್ಲಮಪ್ರಭುವು ದೇಹವನ್ನು ಬಂಡಿಗೆ ಹೋಲಿಸಿದ್ದಾರೆ . ಬಂಡಿ ಮುಂದೆ ಸಾಗಲು ಗಾಲಿಗಳು ಬೇಕೇಬೇಕು ಹಾಗಾಗಿ ಮನುಷ್ಯನ ದೇಹವೆಂಬ ಬಂಡಿಗೆ ಅವನ ಕಾಲುಗಳೆರಡು ಗಾಲಿಗಳು ಇದಂತೆ ಎಂದಿದ್ದಾರೆ . ಕಾಲು ಓಡಾಡಲು ಅಗತ್ಯವಾದುದರಿಂದ ಅವುಗಳನ್ನು ಬಂಡಿಯ ಚಕ್ರಕ್ಕೆ ಹೋಲಿಸಿರುವುದು ಸೂಕ್ತವಾಗಿದೆ .
ಅಲ್ಲಮಪ್ರಭುಗಳು ದೇಹವನ್ನು ತುಂಬಿದ ಬಂಡಿಗೆ ಹೋಲಿಸಿದ್ದಾರೆ . ತುಂಬಿದ ಬಂಡಿಯನ್ನು ಎಚ್ಚರಿಕೆಯಿಂದ ಮುನ್ನಡೆಸಬೇಕು . ಅದೇ ರೀತಿ ದೇಹವನ್ನು ಅತ್ಯಂತ ಜಾಗರೂಕತೆಯಿಂದ , ಎಚ್ಚರದಿಂದ ನೋಡಿಕೊಳ್ಳಬೇಕು .
ಅಲ್ಲಮಪ್ರಭು ಪಂಚೇಂದ್ರಿಯಗಳನ್ನು ಬಂಡಿ ಹೊಡೆಯುವವರಿಗೆ ಸಮೀಕರಿಸಿದ್ದಾರೆ . ಬಂಡಿ ಹೊಡೆಯುವವನಿಗೆ ಬಂಡಿಯನ್ನು ಜಾಗರೂಕತೆ ಯಿಂದ ಮುನ್ನಡೆಸುವ ಪರಿಣತಿಯಿರಬೇಕು ಎಂದು ತಿಳಿಸಿದ್ದಾರೆ .
ದೇಹವೆಂಬ ಬಂಡಿಯನ್ನು ಹೊಡೆವವರು ನಮ್ಮ ಪಂಚೇಂದ್ರಿಯಗಳು , ನೋಟ , ಸ್ಪರ್ಶ , ಶ್ರವಣ , ರುಚಿ , ಗಂಧಗಳ ಅನುಭವಕ್ಕೆ ಬಲಿಯಾದ ಮನುಷ್ಯ ದೇಹಸುಖಕ್ಕೆ ಬಲಿಯಾಗುವ ಸಂದರ್ಭಗಳೇ ಅಧಿಕ .
ಹಾಗಾಗದಂತೆ ಪಂಚೇಂದ್ರಿಯಗಳ ಮೇಲಿನ ಹಿಡಿತ ಮುಖ್ಯ . ಪಂಚೇಂದ್ರಿಯಗಳೆಲ್ಲವೂ ಒಂದಕ್ಕೊಂದು ಸರಿಸಾಟಿಯಿಲ್ಲದವು . ಎಲ್ಲವೂ ಬೇರೆ ಬೇರೆಯ ಅಗತ್ಯಗಳನ್ನು ಪೂರೈಸುವಂಥವು . ಪಂಚೇಂದ್ರಿಯಗಳ ಮೂಲಕವೇ ನಮಗೆ ಸಕಲ ಅನುಭವಗಳೂ ಲಭಿಸುವುದರಿಂದ , ಅವುಗಳೇ ದೇಹವೆಂಬ ಬಂಡಿಗೆ ಆಧಾರ .
ಆದರೆ ಇಂದ್ರಿಯ ಜನ್ಯವಾದ ಅನುಭವಗಳು ಮನುಷ್ಯನನ್ನು ಎತ್ತೆತ್ತಲೋ ಒಯ್ಯಬಾರದು . ಹಾಗಾದಲ್ಲಿ ಆ ಬಂಡಿಯ ಅಚ್ಚು , ಎಂದರೆ ಆತ್ಮನಾಶವಾಗುತ್ತದೆ . ಆದ್ದರಿಂದ ಪಂಚೇಂದ್ರಿಯಗಳನ್ನು ಬಳಸಿಕೊಂಡೇ ದೇಹವೆಂಬ ಬಂಡಿಯನ್ನು ಮುನ್ನಡೆಸಿ ಆತ್ರೋದ್ಧಾರವನ್ನು ಕಂಡುಕೊಳ್ಳಬೇಕು ಎನ್ನುವುದು ಅಲ್ಲಮಪ್ರಭುವಿನ ಚಿಂತನೆಯಾಗಿದೆ .
ಕನ್ನಡ ವಚನಗಳು | Vachanagalu in Kannada Notes Best No1 Notes
ಶಬ್ದಗಳ ಅರ್ಥ :
ಹೊಟ್ಟೆಯ ಮೇಲೆ ಕಟ್ಟೋಗರದ ಮೊಟ್ಟೆಯ ಕಟ್ಟಿದಡೇನು ?
ಹಸಿವು ಹೋಹುದೇ
ಅಂಗದ ಮೇಲೆ ಲಿಂಗ ಸ್ವಾಯತವಾದಡೇನು ?
ಭಕ್ತನಾಗಬಲ್ಲನೇ ?
ಇಟ್ಟ ಕಲ್ಲು ಮಳೆಯ ಮೇಲೆ ಸಿಲುಕಿದಡೆ ,
ಆ ಕಲ್ಲು ಲಿಂಗವೆ ? ಆ ಮಳೆ ಭಕ್ತನೆ ? ಇಟ್ಟಾತ ಗುರುವೆ
ಇಂತಪ್ಪವರ ಕಂಡಡೆ ನಾಚುವೆನಯ್ಯಾ , ಗುಹೇಶ್ವರಾ .
ಬೆಡಗಿನ ವಚನಗಳಿಂದ ಪ್ರಸಿದ್ಧನಾಗಿರುವ ಅಲ್ಲಮಪ್ರಭುವು ಭಕ್ತರಂತೆ ವೇಷ ತೊಟ್ಟಿರುವ ಡಾಂಭಿಕರ ನಡವಳಿಕೆಯನ್ನು ತನ್ನ ಈ ವಚನದಲ್ಲಿ ವಿಮರ್ಶಿಸಿದ್ದಾನೆ .
ಭಕ್ತಿಯೆಂಬುದು ಶಿವನನ್ನು ಕಾಣಬೇಕೆಂಬ ಉತ್ಕಟವಾದ ಹಸಿವಿನ೦ತೆ . ಹ ಊಟ ಹಾಕಿ ತೃಪ್ತಿಪಡಿಸಬೇಕೇ ಹೊರ ತು , ರುಚಿಯಾದ ಊಟದ ಪೊಟ್ಟಣವನ್ನು ತಂದು ಹಸಿದವನ ಹೊಟ್ಟೆಗೆ ಕಟ್ಟಿದರೆ ಅವನ ಮೇಲ್ನೋಟಕ್ಕೆ ಕಾಣುವುದಿಲ್ಲವಾದರೂ ಹೊಟ್ಟೆಯೊಳಗೆ ಹುಟ್ಟಿ ತಲ್ಲಣಗೊಳಿಸುತ್ತದೆ .
ಹೊಟ್ಟೆ ಹಸಿದವನಿಗೆ ಹೊಟ್ಟೆ ತುಂಬ ಹಸಿವು ಇಂಗುವುದೇ ? ಇಂಗಲಾರದು . ಅದರಂತೆಯೇ ಶಿವಲಿಂಗವನ್ನು ಕರಡಿಗೆಯಲ್ಲಿಟ್ಟು , ಶಿವದಾರವನ್ನು ಮೈಮೇಲೆ ಧರಿಸಿದ್ದ ಮಾತ್ರಕ್ಕೆ ಅವನು ಶಿವಭಕ್ತನಾಗಿ ಬಿಡುವನ ? ಮಳೆಯ ಮೇಲೆ ಬಂಡೆ ಕಲ್ಲು ಬಿದ್ದಿರಲು ಅದು ಶಿವಲಿಂಗ , ಮಳೆಯೇ ಶಿವಭಕ್ತ ಕಲ್ಲನ್ನು ಮಳೆಯ ಮೇಲೆ ಎಸೆದಾತ ಗುರು ಎನ್ನಲಾಗದು .
ಭಕ್ತನಲ್ಲದವನ ಮೈಮೇಲಿನ ಶಿವಲಿಂಗವು ಮಳೆಯ ಮೇಲೆ ಬಿದ್ದಿರುವ ಕಲ್ಲಿನಂತೆ ಎಂದು ಅಲ್ಲಮಪ್ರಭುವು ವಿಮರ್ಶಿಸಿದ್ದಾನೆ . ದೇವರು ನಿಜವಾದ ಭಕ್ತನ ಅಂತರಂಗದಲ್ಲಿರುತ್ತಾನೆ , ಬಾಹ್ಯ ಪ್ರದರ್ಶನ ವಸ್ತುಗಳಲ್ಲಲ್ಲ ಎಂಬುದನ್ನು ಅಲ್ಲಮಪ್ರಭುವು ಈ ವಚನದ ಮೂಲಕ ಸಾರಿದ್ದಾನೆ.
ಕನ್ನಡ ವಚನಗಳು | Vachanagalu in Kannada Notes Best No1 Notes
ಶಬ್ದಗಳ ಅರ್ಥ :
ನಾ ದೇವನಲ್ಲದೆ ನೀ ದೇವನೆ ?
ನೀ ದೇವನಾದಡೆ ಎನ್ನನೇಕೆ ಸಲಹೆ ?
ಅಲೈದು ಒಂದು ಕುಡಿತ ಉದಕವನೆರೆವೆ
ಹಸಿದಾಗ ಒಂದು ತುತ್ತು ಓಗರವನಿಕ್ಕುವೆ .
ನಾದೇವ ಕಾಣಾ , ಗುಹೇಶ್ವರಾ .
ವಚನಕಾರರು ಹಾಗೂ ಭಕ್ತಿಪರಂಪರೆಯ ಕವಿಗಳು ದೇವರನ್ನು ತಮ್ಮ ಹಾಗೆಯೇ ಪರಿಭಾವಿಸಿ ಸಂಪಾದಿಸಬಲ್ಲರು , ಜಗಳವಾಡಬಲ್ಲರು , ಸವಾಲು ಎಸೆಯಬಲ್ಲರು.
ಈ ವಚನದಲ್ಲಿ ಅಲ್ಲಮನು ಪ್ರಭು ಮನುಷ್ಯನನ್ನು ಸಲಹುವವನು ದೇವರು ಎಂಬ ಭಾವನೆಯು ಸುಳ್ಳಾಗುವಂತೆ ಹಸಿವ ನೀರಡಿಕೆಗಳು ಮನುಷ್ಯನನ್ನು ತಲ್ಲಣಗೊಳಿಸುವುದರಿಂದ ದೇವರಿಗೆ ಸವಾಲು ಹಾಕಿದ್ದಾನೆ .
ದೇವರೇ ಆಗಿದ್ದರೆ ನೀನು ಏಕೆ ಸಲಹುತ್ತಿಲ್ಲ ? ಮನುಷ್ಯನಾದ ನಾನೇ ಹಸಿದವನಿಗೆ ತುತ್ತು ಊಟವನ್ನು , ಬಾಯಾರಿಕೇಯದವನಿಗೆ ನೀರನ್ನು ಕೊಡಬಲ್ಲೆ . ಹಾಗಾಗಿ ನಿನ್ನ ಹೆಚ್ಚುಗಾರಿಕೆಯೇನೂ ಇಲ್ಲ . ಸಲಹದ ನೀನು ದೇವರಲ್ಲ . ಸಲಹುವ ನಾನೇ ( ಇಲ್ಲಿ ನಾನು ಎನ್ನುವುದು ಸಲಹುವ ಯಾರಾದರೂ ಸರಿ ಎಂಬರ್ಥದಲ್ಲಿದೆ ) ದೇವರು ಎಂದಿದ್ದಾರೆ .
ಇದು ತಾನು ದೇವರಿಗಿಂತ ಶ್ರೇಷ್ಠ ಎಂಬ ಅಹಂ ತೋರಿಸುವುದಿಲ್ಲ . ಬದಲಿಗೆ ಮನುಷ್ಯನ ಮೂಲಭೂತ ಸಮಸ್ಯೆಯಾ ಹಸಿವು , ನೀರಡಿಕೆಗಳನ್ನು ನೀಗಿಸಬೇಕಾದ ಮಹತ್ವವನ್ನು ತಿಳಿಸುತ್ತದೆ . ‘ ಹಸಿವಿಗನ್ನವನಿಕ್ಕಿ ವಿಷವನಿಳುಹಬಲ್ಲೆಡೆ ವಸುಧೆಯೊಳಗಾತನೆ ಗಾರುಡಿಗ ರಾಮನಾಥ ‘ ಎನ್ನುವ ದಾಸಿಮಯ್ಯನ ಮಾತನ್ನು ಇಲ್ಲಿ ನೆನಪಿಸಿಕೊಳ್ಳಬಹುದು . ಇಲ್ಲಿ ಅಲ್ಲಮನ ಜೀವಪರವಾದ ಚಿಂತನೆ ಪ್ರಕಟವಾಗಿದೆ .
ಶಬ್ದಗಳ ಅರ್ಥ :
ಹೊಟ್ಟೆಯ ಮೇಲೆ ಕಟ್ಟೋಗರದ ಮೊಟ್ಟೆಯ ಕಟ್ಟಿದಡೇನು ?
ಹಸಿವು ಹೋಹುದೇ
ಅಂಗದ ಮೇಲೆ ಲಿಂಗ ಸ್ವಾಯತವಾದಡೇನು ?
ಭಕ್ತನಾಗಬಲ್ಲನೇ ?
ಇಟ್ಟ ಕಲ್ಲು ಮೆಳೆಯ ಮೇಲೆ ಸಿಲುಕಿದಡೆ
ಆ ಕಲ್ಲು ಲಿಂಗವೆ ? ಆ ಮಳೆ ಭಕ್ತನೆ ? ಇಟ್ಟಾತ ಗುರುವೆ ?
ಇಂತಪ್ಪವರ ಕಂಡಡೆ ನಾಚುವೆನಯ್ಯಾ , ಗುಹೇಶ್ವರಾ .
12ನೇ ಶತಮಾನದ ಬಹುಮುಖ್ಯ ವಚನಕಾರರಲ್ಲಿ ಒಬ್ಬರಾದ ಅಲ್ಲಮಪ್ರಭುಗಳು ರಚಿಸಿರುವ ವಚನವಿದಾಗಿದೆ . ಇಲ್ಲಿ ಆಡಂಬರ ಹಾಗೂ ಯಾಂತ್ರಿಕ ಭಕ್ತಿಯನ್ನು ಪ್ರಶ್ನಿಸಿರುವರಲ್ಲದೆ ಶರಣ ಮತ್ತು ಆರಾಧನೆಯ ನಡುವಿನ ವ್ಯತ್ಯಾಸವನ್ನು ಇಲ್ಲಿ ಖಂಡಿಸಿರುವರು
ಬೆಡಗಿನ ವಚನಗಳಿಂದ ಪ್ರಸಿದ್ಧನಾಗಿರುವ ಅಲ್ಲಮಪ್ರಭುವು ಭಕ್ತರಂತೆ ವೇಷ ತೊಟ್ಟಿರುವ ಡಾಂಭಿಕರ ನಡೆವಳಿಕೆಯನ್ನು ತನ್ನ ಈ ವಚನದಲ್ಲಿ ವಿಮರ್ಶಿಸಿದ್ದಾನೆ . ಭಕ್ತಿಯೆಂಬುದು ಶಿವನನ್ನು ಕಾಣಬೇಕೆಂಬ ಉತ್ಕಟವಾದ ಹಸಿವಿನಂತೆ , ಹಸಿವು ಮೇಲ್ನೋಟಕ್ಕೆ ಕಾಣುವುದಿಲ್ಲವಾದರೂ ಹೊಟ್ಟೆಯೊಳಗೆ ಹುಟ್ಟಿ ತಲ್ಲಣಗೊಳಿಸುತ್ತದೆ .
2nd PUC Kannada Vachanagalu Notes
ಹೊಟ್ಟೆ ತುಂಬಾ ಊಟ ಹಾಕಿ ಹೊಟ್ಟೆ ಹಸಿದವನಿಗೆ ತೃಪ್ತಿಪಡಿಸಬೇಕೇ ಹೊರತು , ರುಚಿಯಾದ ಊಟದ ಪೊಟ್ಟಣವನ್ನು ತಂದು ಹಸಿದವನ ಹೊಟ್ಟೆಗೆ ಕಟ್ಟಿದರೆ ಅವನ ಹಸಿವು ಇಂಗುವುದೇ ? ಕಂಡಿತ ಇಂಗಲಾರದು ಹಾಗಾಗಿ.
ಅದರಂತೆಯೇ ಶಿವಲಿಂಗವನ್ನು ಕರಡಿಗೆಯಲ್ಲಿಟ್ಟು , ಶಿವದಾರವನ್ನು ಮೈಮೇಲೆ ಧರಿಸಿದ ಮಾತ್ರಕ್ಕೆ ಅವನು ಶಿವಭಕ್ತನಾಗಿಬಿಡುವನೆ ? ಮಳೆಯ ಮೇಲೆ ಕಲ್ಲು ಬಿದ್ದಿರಲು ಅದು ಶಿವಲಿಂಗ , ಮಳೆಯೇ ಶಿವಭಕ್ತ , ಕಲ್ಲನ್ನು ಎಸೆದಾತ ಗುರು ಎನ್ನಲಾಗದು .
ಭಕ್ತನಲ್ಲದವನ ಮೈಮೇಲಿನ ಶಿವಲಿಂಗವು ಮೆಳೆಯ ಮೇಲೆ ಬಿದ್ದಿರುವ ಕಲ್ಲಿನಂತೆ ಎಂದು ಅಲ್ಲಮಪ್ರಭುವು ವಿಮರ್ಶಿಸಿದ್ದಾನೆ . ದೇವರು ನಿಜವಾದ ಭಕ್ತನ ಅಂತರಂಗದಲ್ಲಿರುತ್ತಾನೆ , ಬಾಹ್ಯ ಪ್ರದರ್ಶನದ ವಸ್ತುಗಳಲ್ಲಲ್ಲ ಎಂಬುದನ್ನು ಅಲ್ಲಮಪ್ರಭುವು ಈ ವಚನದ ಮೂಲಕ ಸಾರಿದ್ದಾನೆ .
2nd puc kannada notes vachanagalu
ಕನ್ನಡ ವಚನಗಳು
ನಾ ದೇವನಲ್ಲದೆ ನೀ ದೇವನೆ ?
ನೀ ದೇವನಾದಡೆ ಎನ್ನನೇಕೆ ಸಲಹೆ ?
ಆರೈದು ಒಂದು ಕುಡಿತೆ ಉದಕವನೆರೆವೆ ,
ಹಸಿದಾಗ ಒಂದು ತುತ್ತು ಓಗರವನಿಕ್ಕುವೆ .
ನಾದೇವ ಕಾಣಾ , ಗುಹೇಶ್ವರಾ .
Vachanagalu in Kannada Notes
ಭಕ್ತಿಪರಂಪರೆಯ ಹಾಗೂ ವಚನಕಾರರು ಕವಿಗಳು ದೇವರನ್ನು ತಮ್ಮ ಹಾಗೆಯೇ ಪರಿಭಾವಿಸಿ ಸಂವಾದಿಸಬಲ್ಲರು , ಜಗಳವಾಡಬಲ್ಲರು , ಸವಾಲು ಎಸೆಯಬಲ್ಲರು . ಈ ವಚನದಲ್ಲಿ ಅಲ್ಲಮನು ಮನುಷ್ಯನನ್ನು ಸಲಹುವವನು ದೇವರು ಎಂಬ ಭಾವನೆಯು ಸುಳ್ಳಾಗುವಂತೆ ಹಸಿವು , ನೀರಡಿಕೆಗಳು ಮನುಷ್ಯನನ್ನು ತಲ್ಲಣಗೊಳಿಸುವುದರಿಂದ ದೇವರಿಗೆ ಸವಾಲು ಹಾಕಿದ್ದಾನೆ .
ಮನುಷ್ಯನಾದ ನಾನೇ ಹಸಿದವನಿಗೆ ತುತ್ತು ಊಟವನ್ನು ಬಾಯಾರಿದವನಿಗೆ ನೀರನ್ನು ಕೊಡಬಲ್ಲೆ . ಹಾಗಾಗಿ ನಿನ್ನ ಹೆಚ್ಚುಗಾರಿಕೆಯೇನೂ ಇಲ್ಲ . ಸಲಹದ ನೀನು ದೇವರಲ್ಲ . ಸಲಹುವ ನಾನೇ ದೇವರು ಎಂದಿದ್ದಾನೆ .
ಇದು ತಾನು ದೇವರಿಗಿಂತ ಶ್ರೇಷ್ಠ ಎಂಬ ಅಹಂ ತೋರಿಸುವುದಿಲ್ಲ . ಬದಲಿಗೆ ಮ ಮೂಲಭೂತ ಸಮಸ್ಯೆಯಾದ ಹಸಿವು , ನೀರಡಿಕೆಗಳನ್ನು ನೀಗಿಸಬೇಕಾದ ಮಹತ್ವವನ್ನು ತಿಳಿಸುತ್ತದೆ . ‘ ಹಸಿವಿಗನ್ನವನಿಕ್ಕಿ ವಿಷವನಿಳುಹಬಲ್ಲೆಡೆ ವಸುಧೆಯೊಳಗಾತನೆ ಗಾರುಡಿಗ ರಾಮನಾಥ ‘ ಎನ್ನುವ ದಾಸಿಮಯ್ಯನ ಮಾತನ್ನು ಇಲ್ಲಿ ನೆನಪಿಸಿಕೊಳ್ಳಬಹುದ .
ಕನ್ನಡ ವಚನಗಳು | Vachanagalu in Kannada Notes Best No1 Notes
ಒಂದು ವಾಕ್ಯದಲ್ಲಿ ಉತ್ತರಿಸಿ
ಅಕ್ಕನು ಹೇಳುವ ತೊದರು ಯಾವುದು ?
ಅಕ್ಕನು ರತ್ನದ ಸಂಕೋಲೆಯನ್ನು ತೊಡರು ಎಂದಿದ್ದಾರೆ
ಲೋಕದ ಚೇಷ್ಟೆಗೆ ಬೀಜವಾದುದು ಯಾವುದು
ಲೋಕದ ಚೇಷ್ಟೆಗೆ ರವಿಯು ಬೀಜವಾಗಿದ್ದಾನೆ
ಭವ ಯಾವಾಗ ಕೆಡುವುದು ?
ಆತ್ಮಪರಮಾತ್ಮನಲ್ಲಿ ಲೀನವಾದಾಗ ಭವ ಕೆಡುವುದು
ಸತ್ಯವ ನುಡಿವುದು ಯಾವುದರ ಶೃಂಗಾರವಾಗಬೇಕು ?
ಸತ್ಯವನ್ನು ನುಡಿಯುವುದು ನಾವು ಆಡುವ ಮಾತಿಗೆ ಶೃಂಗಾರವಾಗಬೇಕು
ಅಕ್ಕ ಹೇಳುವ ಬಂಧನ ಯಾವುದು ?
ಅಕ್ಕ ಹೇಳುವ ಬಂಧನ ಮುತ್ತಿನ ಬಲೆ ಎಂಬುದು
ಅಕ್ಕನ ವಚನಗಳ ಅಂಕಿತ ಯಾವುದು ?
ಚೆನ್ನಮಲ್ಲಿಕಾರ್ಜುನ
ಕರಣಂಗಳ ಚೇಷ್ಟೆಗೆ ಬೀಜವಾದುದು ಯಾವುದು ?
ಕರಣಂಗಳ ಚೇಷ್ಟೆಗೆ ಮನವೇ ಬೀಜ
ಕಣ್ಣೆ ಶೃಂಗಾರ ಯಾವುದು
ಗುರುಹಿರಿಯರನ್ನು ನೋಡುವುದೇ ಕಣ್ಣುಗಳಿಗೆ ಶೃಂಗಾರ
ಕಾಲುಗಳನ್ನು ಯಾವುದಕ್ಕೆ ಹೋಲಿಸಲಾಗಿದೆ ?
ಕಾಲುಗಳನ್ನು ದೇಹವೆಂಬ ಬಂಡಿಯ ಗಾಲಿಗಳಿಗೆ ಹೋಲಿಸಲಾಗಿದೆ
ದೇಹವೆಂಬುದು ಏನು ?
ದೇಹವೆಂಬುದು ‘ ತುಂಬಿದ ಬಂಡಿ ‘ ಎಂದಿದ್ದಾರೆ ಅಲ್ಲಮಪ್ರಭು
ಕಟ್ಟೋರಗದ ಮೊಟ್ಟೆಯನ್ನು ಎಲ್ಲಿ ಕಟ್ಟಲಾಗಿದೆ ?
ಕಟ್ಟೋಗರದ ಮೊಟ್ಟೆಯನ್ನು ಹಸಿದವರ ಹೊಟ್ಟೆಯ ಮೇಲೆ ಕಟ್ಟಲಾಗಿದೆ
ಇಟ್ಟ ಕಲ್ಲು ಎಲ್ಲಿ ಸಿಲುಕಿದರೆ ಲಿಂಗವೆಂದು ಕೇಳುತ್ತಾನೆ ?
ಇಟ್ಟ ಕಲ್ಲು ಮಳೆಯ ಮೇಲೆ ಸಿಲುಕಿದಡೆ ಲಿಂಗವೇ ? ಎಂದು ಕೇಳಿದ್ದಾರೆ
ಹಸಿದಾಗ ಏನನ್ನು ನೀಡಬೇಕೆಂದು ಅಲ್ಲಮ ಹೇಳುತ್ತಾನೆ ?
ಹಸಿದಾಗ ಒಂದು ತುತ್ತು ಓಗರ ( ಅನ್ನವನ್ನು ನೀಡಬೇಕೆಂದು ಅಲ್ಲಮ ಹೇಳಿದ್ದಾನೆ
ದಯ ಧರ್ಮದ ಮೊನೆ ಯಾವುದಕ್ಕೆ ಇರುವುದಿಲ್ಲ ?
ದಯ ಧರ್ಮದ ಮೊನೆಯು ಇರಿಯುವ ಆಯುಧಕ್ಕೆ ಇರುವುದಿಲ್ಲ
ತಪವನ್ನು ಘಟ್ಟಿವಾಳಯ್ಯ ಏನೆಂದು ಕರೆಯುತ್ತಾರೆ ?
ಘಟ್ಟಿವಾಳಯ್ಯನವರು ತಪವನ್ನು ಬಂಧನವೆಂದು ಕರೆದಿದ್ದಾರೆ
ನಗೆಗೆ ಈಡಾಗುವುದು ಯಾವುದು ?
ಕಟ್ಟಿನ ವ್ರತದ ಭಾಷೆಯು ನಗೆಗೀಡಾಗುವುದು
ಭಾಷೆಹೀನರ ಕಂಡಾಗ ಏನಾಯಿತು ?
ಭಾಷೆಹೀನರನ್ನು ಕಂಡಾಗ ನಾಚಿಕೆಯಾಯಿತು
ಘಟ್ಟಿವಾಳಯ್ಯನವರ ವಚನಗಳ ಅಂಕಿತ ಯಾವುದು
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ‘ ಎಂಬುದು ಘಟ್ಟಿವಾಳಯ್ಯನವರ ವಚನಗಳ ಅಂಕಿತ
ಕನ್ನಡ ವಚನಗಳು | Vachanagalu in Kannada Notes Best No1 Notes
ಕನ್ನಡ ವಚನಗಳು | Vachanagalu in Kannada Notes Best No1 Notes
2 – 3 ವಾಕ್ಯಗಳಲ್ಲಿ ಉತ್ತರಿಸಿ
ಕೈದು , ಕಾಳೋರಗಗಳಿಗೆ ಏನೇನು ಇರುವುದಿಲ್ಲ ?
ಇರಿವ ಕೈದುವಿಗೆ ದಯಧರ್ಮಗಳಿರುವುದಿಲ್ಲ . ಕಾಳೋರಗದ ದಾಡೆಯಲ್ಲಿ ಅಮೃತದ ಸುಧೆ ಇರುವುದಿಲ್ಲ .
ತಗಹು , ಸೂತಕಗಳು ಯಾವುವು ?
ನೇಮವೆಂಬುದು ತಗಹು ( ಕಟ್ಟುಪಾಡು ) ಮತ್ತು ಶೀಲವೆಂಬುದು ಸೂತಕ ಎಂದು ಘಟ್ಟಿವಾಳಯ್ಯನವರು ಅಭಿಪ್ರಾಯ ಪಟ್ಟಿದ್ದಾರೆ .
ಕಾಲು ಮತ್ತು ದೇಹವನ್ನು ಯಾವುದಕ್ಕೆ ಹೋಲಿಸಲಾಗಿದೆ ?
ದೇಹವನ್ನು ತುಂಬಿದ ಬಂಡಿಗೆ ಹೋಲಿಸಲಾಗಿದೆ ಮತ್ತು ಕಾಲುಗಳನ್ನು ಬಂಡಿಯ ಗಾಲಿಗಳಿಗೆ ಹೋಲಿಸಲಾಗಿದೆ .
ಯಾರನ್ನು ಕಂಡರೆ ಅಲ್ಲಮ ನಾಚುವೆನೆಂದು ಹೇಳುವನು ?
ಆಡಂಬರ ಮತ್ತು ಯಾಂತ್ರಿಕ ಭಕ್ತರನ್ನು ಅಲ್ಲಮಪ್ರಭುವು ವಿಡಂಬಿಸಿದ್ದಾರೆ . ಅಂಗದ ಮೇಲೆ ಲಿಂಗವ ಧರಿಸಿ , ಅಂತರಂಗ ಭಕ್ತಿಯಿಲ್ಲದೆ ಭಕ್ತರಂತೆ ಮೆರೆವವರನ್ನು ಕಂಡರೆ ತಾವು ನಾಚುವುದಾಗಿ ಅಲ್ಲಮಪ್ರಭುವು ಹೇಳುವನು .
ಅಲ್ಲಮ ಏನನ್ನು ನೀಡುವುದರಿಂದ ನಾ ದೇವ ಎಂದು ಹೇಳುತ್ತಾನೆ ?
ದೇಹ ನೀರಡಿಕೆಗೆ ಒಳಗಾದಾಗ ಆರೈದು ಕುಡಿತೆ ಉದಕವನ್ನೆರೆವುದರಿಂದ , ಹಸಿದಾಗ ಒಂದು ತುತ್ತು ಅನ್ನ ( ಓಗರ ) ವನ್ನು ನೀಡಿ ಆರೈಕೆ ಮಾಡುವುದರಿಂದಾಗಿ ‘ ನಾ ದೇವ ‘ ಎಂದು ದೇವರಿಗೆ ಹೇಳಿದ್ದಾನೆ.
ಕೈದು , ಕಾಳೋರಗಗಳಿಗೆ ಏನೇನು ಇರುವುದಿಲ್ಲ ?
ಇರಿವ ಕೈದುವಿಗೆ ದಯಧರ್ಮಗಳಿರುವುದಿಲ್ಲ . ಕಾಳೋರಗದ ದಾಡೆಯಲ್ಲಿ ಅಮೃತದ ಸುಧೆ ಇರುವುದಿಲ್ಲ .
ತಗಹು , ಸೂತಕಗಳು ಯಾವುವು ?
ನೇಮವೆಂಬುದು ತಗಹು ( ಕಟ್ಟುಪಾಡು ) ಮತ್ತು ಶೀಲವೆಂಬುದು ಸೂತಕ ಎಂದು ಘಟ್ಟಿವಾಳಯ್ಯನವರು ಅಭಿಪ್ರಾಯ ಪಟ್ಟಿದ್ದಾರೆ
ರತ್ನ ಮುತ್ತು ಏನನ್ನು ಸೂಚಿಸುತ್ತವೆ ?
ರತ್ನವು ತೊಡರಿನ ಸಂಕೋಲೆಯನ್ನೂ ಮುತ್ತು ಬಲೆಯ ಬಂಧನವನ್ನೂ ಸೂಚಿಸುತ್ತವೆ .
ಲೋಕ ಹಾಗೂ ಕರಣಗಳ ಚೇಷ್ಟೆಗೆ ಬೀಜ ಯಾವುದು ?
ಲೋಕದ ಚೇಷ್ಟೆಗೆ ರವಿಯು ಬೀಜ , ಕರಣಗಳ ಚೇಷ್ಟೆಗೆ ಮನವೇ ಬೀಜ .
ಕಣ್ಣು ಹಾಗೂ ಕರ್ಣಗಳಿಗೆ ಶೃಂಗಾರ ಯಾವುದು ?
ಗುರುಹಿರಿಯರನ್ನು ನೋಡುವುದು ಕಣ್ಣಿಗೆ ಶೃಂಗಾರ , ಪುರಾತನರ ಸಂಗೀತವನ್ನು ಕೇಳುವುದು ಕರ್ಣಕ್ಕೆ ಶೃಂಗಾರ.
ಕನ್ನಡ ವಚನಗಳು | Vachanagalu in Kannada Notes Best No1 Notes
5-6 ವಾಕ್ಯಗಳಲ್ಲಿ ಉತ್ತರಿಸಿ :
ಲೋಕದ ಭಜನೆಯಲ್ಲಿ ಸಿಲುಕಿದವರಿಗೆ ಮುಕ್ತಿಯಿಲ್ಲ ಎಂಬುದನ್ನು ಅಕ್ಕ ಹೇಗೆ ನಿರೂಪಿಸಿದ್ದಾಳೆ ?
ಅಕ್ಕಮಹಾದೇವಿಯು ಮಹಾ ಅನುಭಾವಿಯಾದ ಶಿವಶರಣೆ . ಅವಳು ಲೌಕಿಕದಿಂದ ಬಿಡಿಸಿಕೊಂಡು ಅಲೌಕಿಕದಲ್ಲಿ ಬದುಕಿದವಳು . ಲೋಕದ ಮಾಯೆಯನ್ನು ಅಕ್ಕಮಹಾದೇವಿ ಮುತ್ತು ರತ್ನ , ಚಿನ್ನಗಳಿಗೆ ಹೋಲಿಸಿ , ಅವುಗಳ ಮಾಯೆಗೆ ಸಿಲುಕಿದವರಿಗೆ ಮುಕ್ತಿಯಿಲ್ಲ ಎಂದಿರುವಳು.
ಬೇಡಿಯು ಕಬ್ಬಿಣದಾದ್ದರೇನು , ರತ್ನದ್ದಾದರೇನು ? ಅದು ಬಂಧನವೇ ತಾನೆ ? ಅದೇರೀತಿ ಬಲೆಯು ಮುತ್ತಿನದಾದ ರೇನು , ನೂಲಿನದಾದರೇನು ? ಬಂಧಿಸಿಯೇ ಬಂಧಿಸುತ್ತದೆ . ಚಿನ್ನದ ಕತ್ತಿಯಾದರೇನು ? ಅದರಿಂದ ತಲೆಯನ್ನು ಕತ್ತರಿಸಿದರೆ ಸಾಯದೇ ಉಳಿಯುವುದಿಲ್ಲ .
ಹೀಗೆಯೇ ಜಗದ ಮಾಯೆ ಕೂಡ ನಮ್ಮನ್ನು ಆಕರ್ಷಿಸಿ , ಬಂಧಿಸಿಡುತ್ತದೆ . ಈ ಬಂಧನದಲ್ಲಿ ಸಿಲುಕಿ , ಅದರ ಭಜನೆಯಲ್ಲಿ ತೊಡಗುವವರಿಗೆ ಮುಕ್ತಿ ಸಿಗದು . ಲೌಕಿಕದ ಆಕರ್ಷಣೆ , ಜನನ – ಮರಣಗಳ ಸಂಕೋಲೆಯಿಂದ ಬಿಡಿಸಿಕೊಳ್ಳಬೇಕು . ಆಗ ಮಾತ್ರ ಮುಕ್ತಿ ದೊರಕೀತು ಎಂಬುದು ಅಕ್ಕಮಹಾದೇವಿಯ ಅಭಿಪ್ರಾಯವಾಗಿದೆ.
ಹುಟ್ಟು – ಸಾವನ್ನು ಮೀರುವುದು ಹೇಗೆಂದು ಅಕ್ಕಮಹಾದೇವಿ ತನ್ನ ವಚನದಲ್ಲಿ ವಿವರಿಸಿದ್ದಾಳೆ ?
ಅಕ್ಕಮಹಾದೇವಿ ಒಬ್ಬ ಅನುಭಾವಿ ಕವಯಿತ್ರಿ . ಹುಟ್ಟು – ಸಾವು , ಜಗದ ಜಂಜಡಗಳಿಂದ ಬಿಡಿಸಿಕೊಳ್ಳದಿದ್ದರೆ ಅಲೌಕಿಕ ವಾದ ಆನಂದ ದೊರೆಯದೆಂಬುದನ್ನು ಪ್ರತಿಪಾದಿಸಿದಳು . ಅವಳ ಅಭಿಪ್ರಾಯದಲ್ಲಿ ನಮ್ಮ ಎಲ್ಲ ಆಸೆ , ಆಕಾಂಕ್ಷೆ , ಮಾಯೆ , ಸೆಳೆತ , ಆಕರ್ಷಣೆಗಳಿಗೆ ನಮ್ಮಮನಸ್ಸೆ ಮೂಲಕಾರಣ .
ಮನಸ್ಸನ್ನು ಈ ಸೆಳೆತದಲ್ಲಿ ಹರಿಯಬಿಡಬಹುದು ಅಥವಾ ನಿಯಂತ್ರಿಸಿಕೊಂಡು ಅವುಗಳಿಂದ ಬಿಡಿಸಿಕೊಳ್ಳಬಹುದು . ಎಲ್ಲವೂ ನಮ್ಮ ಕೈಯಲ್ಲಿದೆ .
ಇರುವ ಒಂದು ಮನಸ್ಸನ್ನು ದೇವರಲ್ಲಿ ನೆಲೆಗೊಳಿಸಿಕೊಂಡರೆ ಉಳಿದೆಲ್ಲ ಮಾಯೆಯಿಂದ ಪಾರಾದಂತೆ , ದೇವನಲ್ಲಿ ಮನವನ್ನು ಅಥವಾ ಆತ್ಮವನ್ನು ಲೀನಗೊಳಿಸಿಕೊಂಡವನು ಭವವನ್ನು ಜಯಿಸಿದಂತೆ ಎಂಬುದು ಮಹಾದೇವಿಯಕ್ಕನ ಅಭಿಪ್ರಾಯವಾಗಿದೆ . ಅವಳು ಸ್ವತಃ ಚೆನ್ನಮಲ್ಲಿಕಾರ್ಜುನನಲ್ಲಿ ಮನಸ್ಸನ್ನು ನೆಲೆಗೊಳಿಸಿ ಭವವನ್ನು ಜಯಿಸಿದವಳು .
ಆದ್ದರಿಂದ ಹುಟ್ಟು – ಸಾವನ್ನು ಗೆಲ್ಲಲು ಪರಮಾತ್ಮನಲ್ಲಿ ಮನವನ್ನು ಲೀನಗೊಳಿಸುವುದೇ ಸುಲಭ ಮಾರ್ಗವೆಂದು ಸ್ವಾನುಭವದಿಂದ ವಿವರಿಸಿದ್ದಾಳೆ .
ಕನ್ನಡ ವಚನಗಳು | Vachanagalu in Kannada Notes Best No1 Notes
ಬದುಕು ಸಾರ್ಥಕವಾಗಬೇಕಾದರೆ ಯಾವ ಅಂಶಗಳು ಇರಬೇಕೆಂದು ಅಕ್ಕಮಹಾದೇವಿ ಹೇಳುತ್ತಾಳೆ ?
ಅಕ್ಕಮಹಾದೇವಿಯು ಬದುಕಿನ ಸಾರ್ಥಕತೆಯನ್ನು ತನ್ನ ವಚನವೊಂದರಲ್ಲಿ ಸೊಗಸಾಗಿ ವಿವರಿಸಿರುವಳು . ಅವಳ ಅಭಿಪ್ರಾಯದಂತೆ ಗುರುಹಿರಿಯರನ್ನು ನೋಡುವುದೇ ಕಣ್ಣಿಗೆ ಭೂಷಣ . ಹಿಂದಿನವರ ಸಂಗೀತವನ್ನು ಕೇಳುವುದು ಕಿವಿಗೆ ಅಲಂಕಾರ .
ನಮ್ಮ ಮಾತು ಮೌಲ್ಯಯುತವೆನಿಸಿಕೊಳ್ಳಬೇಕಾದರೆ ಸದಾ ಸತ್ಯವನ್ನೇ ನುಡಿಯಬೇಕು , ಸುಳ್ಳಾಡಬಾರದು . ಇನ್ನೊಬ್ಬರೊಂದಿಗೆ ಸಂಭಾಷಿಸುವಾಗ ಸದ್ಭಕ್ತರ ನುಡಿಗಳನ್ನು ಉಲ್ಲೇಖಿಸಬೇಕು , ಚರ್ಚಿಸಬೇಕು . ಹಾಗೆಯೇ ನಾವು ಮಾಡುವ ದಾನ ಶ್ರೇಷ್ಠವೆನಿಸಿಕೊಳ್ಳಬೇಕಾದರೆ ಸತ್ಪಾತ್ರರಿಗೆ , ಅರ್ಹರಿಗೆ ದಾನ ಮಾಡಬೇಕು .
ಅದು ಕೊಡುವ ಕೈಗೆ ಭೂಷಣ . ಶಿವಶರಣರ ಸಮೂಹದೊಡನೆ ಜೀವಿಸುವುದರಿಂದ ಜೀವನಕ್ಕೆ ಅರ್ಥ ಲಭಿಸುತ್ತದೆ . ಈ ರೀತಿಯಲ್ಲದವನ ಬದುಕಿನಿಂದ ಯಾವ ಉಪಯೋಗವೂ ಇಲ್ಲ . ಬದುಕು ಸಾರ್ಥಕಗೊಳ್ಳಬೇಕಾದರೆ ಈ ಮೇಲೆ ಹೇಳಿದ ರೀತಿಯಲ್ಲಿ ಬದುಕನ್ನು ನಡೆಸುವುದು ಅವಶ್ಯ ಎಂಬುದು ಅಕ್ಕಮಹಾದೇವಿಯ ಅಭಿಪ್ರಾಯವಾಗಿದೆ .
ಕನ್ನಡ ವಚನಗಳು | Vachanagalu in Kannada Notes Best No1 Notes