Tallanisadiru Kandya Talu Manave । ತಲ್ಲಣಿಸದಿರು ಕಂಡ್ಯ ತಾಳು ಮನವೇ

Tallanisadiru Kandya Talu Manave । ತಲ್ಲಣಿಸದಿರು ಕಂಡ್ಯ ತಾಳು ಮನವೇ

Tallanisadiru Kandya Talu Manave, ತಲ್ಲಣಿಸದಿರು ಕಂಡ್ಯ ತಾಳು ಮನವೇ, Questions and Answers Pdf, Notes, Summary, 1st PUC Kannada, written by

Tallanisadiru Kandya Talu Manave

ಕವಿ ಪರಿಚಯ

ಹರಿದಾಸ ಪರಂಪರೆಯ ಪ್ರಮುಖ ಕವಿಗಳಲ್ಲಿ ಕನಕದಾಸರು ಒಬ್ಬರು

ತಂದೆ : ಬೀರಪ್ಪ

ತಾಯಿ : ಬಜ್ಜನ್ನ

ಸ್ಥಳ : ಹಾವೇರಿ ಜಿಲ್ಲೆಯ ಕಾಗಿನೆಲೆಯ ಸಮೀಪ ಬಾಡ ಗ್ರಾಮ

ಬೈರಪ್ಪ ದಂಪತಿಗಳು ಸಂತಾನಾಪೇಕ್ಷೆಯಿಂದಾಗಿ ತಿರುಪತಿ ಮಾಡಿ , ಹರಕೆ ಹೊತ್ತರು , ಕೆಲವು ದಿನಗಳಲ್ಲಿಯೇ ಅವರ ಆಸೆ ಪೂರೈಸಿತು . ತಿರುಪತಿ ತಿಮ್ಮಪ್ಪನ ವರಪ್ರಸಾದದಿಂದ ಕಳೆದುಕೊಂಡು ತಾಯಿಯ ಮಾರ್ಗದರ್ಶನದಲ್ಲಿ ದಂಡನಾಯಕನ ಹೊಣೆ ಹೊತ್ತನು , ಅವನು ಅಧಿಕಾರ ವಹಿಸಿಕೊಂಡ ಹುಟ್ಟಿದ ಮಗುವಿಗೆ ತಿಮ್ಮಪ್ಪನೆಂದೇ ನಾಮಕರಣ ಮಾಡಿದರು .

ಪ್ರೌಢವಯಸ್ಸಿಗೆ ಬರುವ ವೇಳೆಗೆ ತಿಮ್ಮಪ್ಪ ತಂದೆಯನ್ನು ಆರಂಭದಲ್ಲಿ ಭೂಮಿಯನ್ನು ಅಗೆಯುತ್ತಿದ್ದಾಗ ಏಳು ಕೊಪ್ಪರಿಗೆ ಹೊತ್ತಿನ ನಿಧಿ ದೊರೆಯಿತಂತೆ . ಸಿಕ್ಕಿದ ಹೊನ್ನನ್ನು ಬಡವರ ಉದ್ಧಾರಕ್ಕೆ , ಗುಡಿಗಳ ಜೀರ್ಣೋದ್ಧಾರಕ್ಕಾಗಿ ವಿನಿಯೋಗಿಸಿದನಂತೆ .

ಈ ಕಾರಣದಿಂದ ಜನರು ಆತನನ್ನು ‘ ಕನಕ ‘ , ‘ ಕನಕನಾಯಕ ‘ ಎಂದು ಕರೆಯಲಾರಂಭಿಸಿದರು . ಕಾಲಕ್ರಮೇಣ ‘ ಕನಕನಾಯಕ ‘ ಎಂಬ ಹೆಸರೇ ರೂಢಿಯಲ್ಲಿ ಬಂದಿತು .

ಮೊಟ್ಟಮೊದಲು ಕನಕನು ರಾಮಾನುಜ ಮತದ ( ಶ್ರೀವೈಷ್ಣವ ಗುರುಗಳಾದ ) ಶ್ರೀತಾತಾಚಾರರನ್ನು ಭೇಟಿಯಾದನು . ಅವರ ಉಪದೇಶದಿಂದ ನೆಮ್ಮದಿ ಪಡೆದ ಕನಕನಾಯಕ ತನ್ನನ್ನು ಶ್ರೀಹರಿಗೆ ಅರ್ಪಿಸಿಕೊಂಡು ದಾಸನಾಗಿರುವುದಾಗಿ ನಿರ್ಧರಿಸಿ ದನು . ಹೀಗೆ ಕನಕನಾಯಕ ‘ ಕನಕದಾಸ’ನಾದರು . ಕಾಲಕ್ರಮೇಣ ವಿಜಯನಗರದ ಸಾಮ್ರಾಟರ ರಾಜಗುರುಗಳಾಗಿದ್ದ ಶ್ರೀವ್ಯಾಸರಾಯರಿಂದ ಪ್ರಭಾವಿತರಾಗಿ ‘ ಹರಿಭಕ್ತ ಸಾರ’ದಂಥ ಕೃತಿಗಳನ್ನು ರಚಿಸಿದರು .

॥ಪ ॥ ತಲ್ಲಣಿಸದಿರು ಕಂಡ್ಯ ತಾಳು ಮನವೆ

ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ …

ಬೆಟ್ಟದಾ ತುದಿಯಲ್ಲಿ ಹುಟ್ಟಿದ ವೃಕ್ಷಕ್ಕೆ

ಕಟ್ಟೆಯನ್ನು ಕಟ್ಟಿ ನೀರೆರೆದವರು ಯಾರೊ

ಪುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾಗಿರಲು

ಗಟ್ಟಾಗಿ ಸಲುಹುವನು ಇದಕೆ ಸಂಶಯವಿಲ್ಲ


ಅಡವಿಯೊಳಗಾಡುವ ಮೃಗಪಕ್ಷಿಗಳಿಗೆಲ್ಲ

ಅಡಿಗಡಿಗೆ ಆಹಾರವಿತ್ತವರು ಯಾರೊ

ಪಡೆದ ಜನನಿಯ ತೆರದಿ ಸ್ವಾಮಿ ಹೊಣೆಗೀಡಾಗಿ

ಬಿಡದೆ ರಕ್ಷಿವನು ಇದಕೆ ಸಂಶಯವಿಲ್ಲ

ನವಿಲಿಗೆ ಚಿತ್ರ ಬರೆದವರು ಯಾರು

ಪವಳದ ಲತೆಗೆ ಕಂಪಿಟ್ಟವರು ಯಾರು

ಸವಿಮಾತಿನರಗಿಳಿಗೆ ಹಸುರು ಬರದವರು ಯಾರು

ಅವನ ಸಲಹುವನು ಇದಕೆ ಸಂಶಯವಿಲ್ಲ .

ಕಲ್ಲಿನಲ್ಲಿ ಹುಟ್ಟಿ ಕೂಗುವ ಕಪ್ಪೆಗಳಿಗೆಲ್ಲ

ಅಲ್ಲಲ್ಲಿಗಾಹಾರ ತಂದೀವರಾರು

ಬಲ್ಲಿದನು ಕಾಗಿನೆಲೆಯಾದಿಕೇಶವರಾಯ

ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ

ಶಬ್ದಾರ್ಥ

ಪದ್ಯಗಳ ಭಾವಾರ್ಥ

ಅಡವಿಯೊಳಗಾಡುವ ಮೃಗಪಕ್ಷಿಗಳಿಗೆಲ್ಲ

ಅಡಿಗಡಿಗೆ ಆಹಾರವಿತ್ತವರು ಯಾರೂ
ಪಡೆದ ಜನನಿಯ ತೆರದಿ ಸ್ವಾಮಿ ಹೊಣೆಗೀಡಾಗಿ

ಬಿಡದೆ ರಕ್ಷಿವನು ಇದಕೆ ಸಂಶಯವಿಲ್ಲ

ತಲ್ಲಣಿಸದಿರು ಕಂಡ್ಯ ತಾಳು ಮನವೇ ‘ ಕನಕದಾಸರು ರಚಿಸಿರುವ ಸುಪ್ರಸಿದ್ಧ ಕೀರ್ತನೆಯಿಂದ ಈ ಮೇಲಿನ ಪದ್ಯಭಾಗವನ್ನು ಸ್ವೀಕರಿಸಲಾಗಿದೆ . ಬದುಕಿನಲ್ಲಿ ಎದುರಾಗುವ ಕಷ್ಟಗಳನ್ನು ಕಂಡು ತಳಮಳಗೊಳ್ಳುವ ಅಗತ್ಯವಿಲ್ಲ .

ನಮ್ಮೆಲ್ಲರನ್ನೂ ಸೃಷ್ಟಿಸಿದ ಭಗವಂತನೇ ಎಲ್ಲರನ್ನೂ ಕಾಪಾಡುತ್ತಾನೆಂಬ ಸತ್ಯವನ್ನು ಕನಕದಾಸರು ಈ ಪದ್ಯಭಾಗದಲ್ಲಿ ನಿರೂಪಿಸಿದ್ದಾರೆ .

ಕಾಡಿನಲ್ಲಿ ನಾನಾ ಬಗೆಯ ಪ್ರಾಣಿಗಳಿವೆ , ಅವುಗಳ ಆಹಾರ ಕ್ರಮವೇ ಬೇರೆ ಬೇರೆಯಾದುದು . ಅಂತೆಯೇ ಬಗೆಬಗೆಯ ಪಕ್ಷಿ ಸಂಕುಲಗಳು ವಾಸಿಸುತ್ತವೆ .

ಅವುಗಳಿಗೆ ಬೇಕಾದ ಆಹಾರವನ್ನು ಹೊತ್ತುಹೊತ್ತಿಗೆ ನೀಡಿ ಅವುಗಳನ್ನೆಲ್ಲಾ ಪೊರೆಯುವವನು ದೇವನಲ್ಲವೆ ? ಹಾಗೆಯೇ ಹೆತ್ತ ತಾಯಿ ತನ್ನ ಮಗುವನ್ನು ಸಾಕಿ ಬೆಳೆಸಿ ಕಾಪಾಡಲು ಹೊಣೆಗಾರಳು .

ಅಂತೆಯೇ ದೇವರೂ ಕೂಡ ಹೆತ್ತ ತಾಯಿಯ ರೀತಿಯಲ್ಲಿ ನಮ್ಮೆಲ್ಲರನ್ನೂ ಕೈ ಬಿಡದೆ ಕಾಪಾಡಿ , ಕಷ್ಟಗಳಿಂದ ಪಾರು ಮಾಡುತ್ತಾನೆ . ಇದರಲ್ಲಿ ಯಾವ ಅನುಮಾನವೂ ಬೇಡವೆಂದು ಕನಕದಾಸರು ಹೇಳಿರುವರು .

ಒಂದು ವಾಕ್ಯದಲ್ಲಿ ಉತ್ತರಿಸಿ

ವೃಕ್ಷ ಎಲ್ಲಿ ಹುಟ್ಟಿತು ?

ವೃಕ್ಷವ ಬೆಟ್ಟದ ತುದಿಯಲ್ಲಿ ಹುಟ್ಟಿತು

ಮೃಗಪಕ್ಷಿಗಳು ಎಲ್ಲಿ ಆಡುತ್ತಿದ್ದವು ?

ಮೃಗಪಕ್ಷಿಗಳು ಅಡವಿಯೊಳಗೆ ಆಡುತ್ತಿದ್ದವು

ಯಾವ ತೆರದಿ ಸ್ವಾಮಿ ನಮ್ಮನ್ನು ಬಿಡದೆ ರಕ್ಷಿಸುವನು ?

ಹೆತ್ತ ತಾಯಿಯ ತೆರದಿ ಸ್ವಾಮಿ ನಮ್ಮನ್ನು ಬಿಡದೆ ರಕ್ಷಿಸುವನು

ಆರಗಿಳಿಗೆ ಯಾವ ಬಣ್ಣವನ್ನು ಬರೆಯಲಾಗಿದೆ

ಅರಗಿಳಿಗೆ ಹಸುರು ಬಣ್ಣವನ್ನು ಬರೆಯಲಾಗಿದೆ

ಕಪ್ಪೆಗಳು ಎಲ್ಲಿ ಹುಟ್ಟಿ ಕೂಗುತ್ತವೆ ?

ಕಪ್ಪೆಗಳು ಕಲ್ಲಿನಲ್ಲಿ ಹುಟ್ಟಿ ಕೂಗುತ್ತವೆ

ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ

ವೃಕ್ಷವನ್ನು ಆದಿಕೇಶವ ಹೇಗೆ ಸಲಯುತ್ತಾನೆ ?

ಬೆಟ್ಟದ ತುದಿಯಲ್ಲಿ ಹುಟ್ಟಿದ ವೃಕ್ಷವನ್ನು ಆದಿಕೇಶವನೇ ನೀರೆರೆದು ಬೆಳೆಸುತ್ತಾನೆ .

ಮೃಗಪಕ್ಷಿಗಳನ್ನು ಆದಿಕೇಶವ ಹೇಗೆ ರಕ್ಷಿಸುತ್ತಾನೆ ?

ಅಡವಿಯಲ್ಲಿ ಆಡುತ್ತಿರುವ ಮೃಗಗಳಿಗೆ ಮತ್ತು ಪಕ್ಷಿಗಳಿಗೆಲ್ಲಾ ಆದಿಕೇಶವನು ಹೊತ್ತು ಹೊತ್ತಿಗೆ ಅವುಗಳಿರುವಲ್ಲಿಯೇ ಆಹಾರವನ್ನು ಒದಗಿಸುತ್ತಾನೆ . ಅವುಗಳ ಜೀವಿತಾವಧಿಯವರೆಗೂ ಅವುಗಳನ್ನೆಲ್ಲಾ ರಕ್ಷಿಸುತ್ತಾನೆ .

ಐದಾರು ವಾಕ್ಯಗಳಲ್ಲಿ ಉತ್ತರಿಸಿ

ಎಲ್ಲವನ್ನು ರಕ್ಷಿಸುವ ದೇವರು ನಮ್ಮನ್ನೂ ರಕ್ಷಿಸುತ್ತಾನೆ ಎಂಬುದನ್ನು ಕನಕದಾಸರು ಹೇಗೆ ಹೇಳಿದ್ದಾರೆ ?

ಕನಕದಾಸರು ‘ ತಲ್ಲಣಿಸದಿರು ಕಂಡ್ಯ ತಾಳು ಮನವೇ ‘ ಎಂಬ ಕೀರ್ತನೆಯಲ್ಲಿ ದೇವರು ಎಲ್ಲರನ್ನೂ ಸಲಹುತ್ತಾನೆಂದು ಭರವಸೆ ತುಂಬಿದ್ದಾರೆ .

ಎಲ್ಲವನ್ನೂ ಎಂದರೆ ಭೂಮಿ ಮೇಲಿರುವ ಸಸ್ಯವರ್ಗ , ಪ್ರಾಣಿ – ಪಕ್ಷಿ ವರ್ಗಗಳನ್ನು ದೇವರೇ ಸಲಹು ತಿರುವುದು , ಮರವೊಂದು ಬೆಟ್ಟದ ತುದಿಯಲ್ಲಿ ಹುಟ್ಟಿದರೆ ಅದಕ್ಕೆ ಕಟ್ಟೆ ಕಟ್ಟಿ ನೀರೆರೆಯುವುದು ದೇವರೇ ಹೊರತು ಮನುಷ್ಯರಲ್ಲ .

ಅದೇ ರೀತಿ ಅಡವಿಯಲ್ಲಾಡುವ ಮೃಗ – ಪಕ್ಷಿಗಳಿಗೆ ಹೊತ್ತು ಹೊತ್ತಿಗೆ ಆಹಾರ ಒದಗಿಸುವವನೂ ದೇವನೇ . ಎಲ್ಲೋ ಕಲ್ಲಿನಲ್ಲಿ ಹುಟ್ಟುವ ಕಪ್ಪೆಗೂ ಆದಿರುವಲ್ಲಿಯೇ ದೇವರು ಆಹಾರ ದೊರಕುವಂತೆ ಮಾಡುವನೆಂದ ಮೇಲೆ ನಮ್ಮೆಲ್ಲರನ್ನೂ ಆತ ರಕ್ಷಿಸುವುದರಲ್ಲಿ ಯಾವ ಸಂಶಯವೂ ಇಲ್ಲ .

ಏಕೆಂದರೆ ಹೆತ್ತ ತಾಯಿ ತನ್ನ ಮಗುವನ್ನು ಪೊರೆಯುವ ಹೊಣೆಗಾರಳು . ಅದರಂತೆಯೇ ನಮ್ಮೆಲ್ಲರ ಜನನಕ್ಕೆ ಕಾರಣವಾದ ದೇವರೇ ಸಲಹುವ ಹೊಣೆಯನ್ನು ಹೊರುತ್ತಾನೆಂಬುದು ಖಚಿತ ಅಭಿಪ್ರಾಯ ವಾಗಿದೆ .

ಕನಕದಾಸರು ” ತಲ್ಲಣಿಸದಿರು ಮನವೇ ” ಎನ್ನಲು ಕಾರಣವೇನು ?

ಕನಕದಾಸರು ‘ ತಲ್ಲಣಿಸದಿರು ಮನವೇ ‘ ‘ ಎಂದಿರುವುದು ಮೇಲುನೋಟಕ್ಕೆ ತಮ್ಮ ಮನಸ್ಸಿಗೆ ತಾವೇ ಧೈರ್ಯ ಹೇಳುವಂತಿದೆ . ಆದರೆ ಅವರು ದೇವರು ಸಲಹುವನೆಂಬುದಕ್ಕೆ ನೀಡಿರುವ ಉದಾಹರಣೆಗಳ ಲೋಕಾನುಭವವನ್ನು ಗಮನಿಸಿದರೆ ಅವರು ‘ ತಲ್ಲಣಿಸದಿರು ಮನವೇ ‘ ಎಂದಿರುವುದು ತಳಮಳಕ್ಕೊಳಗಾದ ಎಲ್ಲ ಮನಗಳಿಗೆ ಎಂಬುದು ಗೋಚರಿಸುತ್ತದೆ .

ಬದುಕಿನಲ್ಲಿ ಸುಖ – ದುಃಖ ಕಷ್ಟಗಳೆಲ್ಲ ಒಂದನ್ನೊಂದು ಹಿಂಬಾಲಿಸುತ್ತದೆ . ಕಷ್ಟ ಬಂದಾಗ ಹೆದರಬಾರದು , ಬದಲಿಗೆ ದೈವದಲ್ಲಿ ನಂಬಿಕೆಯಿಡ ಬೇಕು , ದೇವರಿದ್ದಾನೆ ಎಂಬ ಸ್ಥೆರ್ಯವೇ ಕಷ್ಟಗಳನ್ನೆಲ್ಲ ಎದುರಿಸಲು ಬಲ ನೀಡುತ್ತದೆ.

ಅಲ್ಲದೆ ದೇವರು ಕಷ್ಟಕೊಟ್ಟು ಸುಮ್ಮನೆ ನೋಡುತ್ತಾ ಕೂರುವುದಿಲ್ಲ . ಬದಲಿಗೆ ಆತ ಕೈ ಹಿಡಿದು ಕಾಪಾಡುವ ಹೊಣೆಯನ್ನೂ ಹೊರುವುದರಿಂದ ತಲ್ಲಣಿಸುವ ಅಗತ್ಯವಿಲ್ಲ . ಎಂದು ಕನಕದಾಸರು ಹೇಳಿದ್ದಾರೆನ್ನಬಹುದು .

ಸಂದರ್ಭ ಸೂಚಿಸಿ , ಸ್ವಾರಸ್ಯವನ್ನು ವಿವರಿಸಿ

” ಕಟ್ಟೆಯನು ಕಟ್ಟಿ ನೀರೆರೆದವರು ಯಾರೊ .. “

ಕನಕದಾಸರು ರಚಿಸಿರುವಂತಹ ‘ ತಲ್ಲಣಿಸದಿರು ಕಂಡ್ಯ ತಾಳು ಮನವೇ ‘ ಎಂಬ ಕೀರ್ತನೆಯಿಂದ ಈ ವಾಕ್ಯವನ್ನು ಆರಿಸಿಕೊಳ್ಳಲಾಗಿದೆ . ದೇವರು ನಮ್ಮನ್ನು ಸಲಹುವ ಸರ್ವಶಕ್ತನೆಂಬುದನ್ನು ವಿವರಿಸುತ್ತಾ ಕನಕದಾಸರು ಉದಾಹರಣೆಯಾಗಿ ಬೆಟ್ಟದ ತುದಿಯಲ್ಲಿ ಹುಟ್ಟಿ ಬೆಳೆಯುವ ಮರದ ವಿಚಾರವನ್ನು ಪ್ರಸ್ತಾಪಿಸಿರುವರು

ಮರವೊಂದು ಬೆಟ್ಟದ ತುದಿಯಲ್ಲಿ ಹುಟ್ಟಿ ಬೆಳೆಯು ಇದೆ . ಯಾರೂ ಅದನ್ನು ಬೀಜನೆಟ್ಟು ಬೆಳೆಸುವುದಿಲ್ಲ . ನೀರು ಉಣಿಸಿ ಸಲಹುವುದಿಲ್ಲ . ದೇವರೇ ಅದನ್ನು ಸೃಷ್ಟಿಸಿದವನು ಹೆಮ್ಮರವಾಗಿ ಬೆಳೆಸಿದವನು , ಅದರಂತೆಯೇ ನಮ್ಮೆಲ್ಲರನ್ನೂ ದೇವರು ಕಾಪಾಡುವುದರಲ್ಲಿ ಯಾವ ಅನುಮಾನವೂ ಇಲ್ಲವೆಂದು ಕನಕದಾಸರು ತುಂಬ ಚನ್ನಾಗಿ ಹೇಳಿದ್ದಾರೆ .

ಪವಳದ ಲತೆಗೆ ಕೆ೦ಪಿಟ್ಟವರು ಯಾರು .

ಕನಕದಾಸರು ರಚಿಸಿರುವ ‘ ತಲ್ಲಣಿಸದಿರು ಕಂಡ್ಯ ತಾಳು ಮನವೇ ‘ ಎಂಬ ಕೀರ್ತನೆಯಲ್ಲಿ ದೇವರ ಸೃಷ್ಟಿಯ ಮಹತ್ವವನ್ನು ವಿವರಿಸುತ್ತಾ ಈ ವಾಕ್ಯವನ್ನು ರಚಿಸಿದ್ದಾರೆ . ಜಗತ್ತಿನ ಸುಂದರ ಸಂಗತಿಗಳ ಹಿಂದೆ ದೇವರ ಕೈವಾಡವಿದೆ ಎಂದಿದ್ದಾರೆ ಕನಕದಾಸರು . ಇದಕ್ಕೆ ಉದಾಹರಣೆಯಾಗಿ , ಅವರು ಹವಳದ ಕಂಪನ್ನು ಪ್ರಸ್ತಾಪಿಸಿರುವರು .

ಎಲ್ಲರಿಗೂ ಮನಮೋಹಕವೆನಿಸುವ ಹವಳದ ಬಳ್ಳಿಗೆ ಕೆಂಪುಬಣ್ಣವನ್ನು ನೀಡಿದವನು ದೇವನೇ ತಾನೇ ? ಅದರಂತೆಯೇ ಯಾರಿಗೆ ಏನು ಕೊಡಬೇಕೆಂಬ ಸಂಗತಿಯನ್ನು ದೇವನು ಬಲ್ಲವನಾಗಿದ್ದನು . ಸಲಹುವ ತನ್ನ ಕೆಲಸವನ್ನು ತಪ್ಪದೆ ಮಾಡುತ್ತಾನೆ . ಇದರಲ್ಲಿ ಯಾವ ಅನುಮಾನವೂ ಬೇಡವೆಂದು ಕನಕದಾಸರು ಹೇಳಿದ್ದಾರೆ .

ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ .

” ಕನಕದಾಸರು ರಚಿಸಿರುವ ‘ ತಲ್ಲಣಿಸದಿರು ಕಂಡ ತಾಳು ಮನವೇ ‘ ಎಂಬ ಪ್ರಸಿದ್ಧವಾದ ಕೀರ್ತನೆಯ ಪಲ್ಲವಿ ಮತ್ತು ಪ್ರತಿಚರಣದ ಕೊನೆಯಲ್ಲಿ ಬರುವ ವಾಕ್ಯವಿದಾಗಿದೆ ಮತ್ತು ಭಗವಂತನೇ ಎಲ್ಲರನ್ನೂ ಕಾಪಾಡುತ್ತಾನೆ ಎಂಬ ಇಡೀ ಕೀರ್ತನೆಯ ಸಾರಾಂಶವನ್ನು ಆಶಯವನ್ನು ಈ ಮೇಲಿನ ವಾಕ್ಯವು ಸಾಬೀತುಪಡಿಸಿದೆ .

ಬದುಕಿನಲ್ಲಿ ಎದುರಾಗುವ ಅನೇಕ ಕಷ್ಟಕೋಟಲೆಗಳಿಗೆ ಸಿಲುಕಿ ತಳಮಳಗೊಳ್ಳುವ ಮನಸುಗಳು ನಮ್ಮನ್ನು ರಕ್ಷಿಸುವ ವರಿಲ್ಲವೇ ? ಎಂದು ಹಂಬಲಿಸುತ್ತವೆ .

ಇಂತಹ ಮನಸುಗಳಿಗೆ ಕವಿ ಕನಕದಾಸರು ತಮ್ಮ ಕೀರ್ತನೆಯಲ್ಲಿ ಎಲ್ಲರನ್ನೂ ಸಲಹುವ ದೇವನಿರುವಾಗ ಭಯವೇಕೆ ? ನಮ್ಮೆಲ್ಲರನ್ನೂ ದೇವರು ತಪ್ಪದೆ ಸಲುಹುತ್ತಾನೆಂದು ವಿವರಿಸುವ ಪ್ರತಿ ಸಂದರ್ಭದಲ್ಲಿಯೂ “ ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ ‘ ಎಂಬ ಮಾತನ್ನು ಪುನರಾವರ್ತಿಸಿದ್ದಾರೆ .

ಇತರ ಪ್ರಮುಖ ವಿಷಯಗಳ ಮಾಹಿತಿ ಲಿಂಕ್

ದೇವನೊಲಿದನ ಕುಲವೇ ಸತ್ಕುಲಂ

ದ್ವಿತೀಯ ಪಿಯುಸಿ ಕನ್ನಡ ನೋಟ್ಸ್

ಕನ್ನಡ ವಚನಗಳು

One thought on “Tallanisadiru Kandya Talu Manave । ತಲ್ಲಣಿಸದಿರು ಕಂಡ್ಯ ತಾಳು ಮನವೇ

Leave a Reply

Your email address will not be published. Required fields are marked *