Akhanda Karnataka Notes in Kannada, ಅಖಂಡ ಕರ್ನಾಟಕ ಪದ್ಯ notes ಸಾರಾಂಶ, akhanda karnataka poem summary and Pdf, Notes, 1st PUC Kannada
Akhanda Karnataka Notes in Kannada
ಅಖಂಡ ಕರ್ನಾಟಕವನ್ನು ಹರಸುತ್ತಿರುವವರು ಯಾರು ?
ಅಖಂಡ ಕರ್ನಾಟಕವನ್ನು ಹರಸುತ್ತಿರುವವರು ದೇವ ಗಾಂಧಿ
ಕನ್ನಡದ ರಾಷ್ಟ್ರಕವಿಗಳು ಯಾರು?
ಮಂಜೇಶ್ವರ ಗೋವಿಂದ ಪೈ
ಕವಿ ಪರಿಚಯ :
ಕುವೆಂಪು ಕವಿ
- ಬಹುಶ್ರುತ ಪ್ರತಿಭೆಯ ಕವಿ ಕುವೆಂಪು ಕನ್ನಡ ಕಾವ್ಯಾರಾಮದ ಕೋಗಿಲೆ ಎನಿಸಿದವರು .
- ಪೂರ್ಣ ಹೆಸರು : ಡಾ . ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ
- ಜನನ : 29 ನೇ ಡಿಸೆಂಬರ್ 1904
- ಮರಣ : 10 ನೇ ನವಂಬರ್ 1994
ಸಾಹಿತ್ಯ ಕೃತಿಗಳು:
- ಪಕ್ಷಿಕಾಶಿ
- ಕೊಳಲು
- ಅಗ್ನಿಹಂಸ
- ಅನುತ್ತರಾ
- ನವಿಲು
- ಪ್ರೇಮ ಕಾಶ್ಮೀರ
- ಚಂದ್ರಮಂಚಕೆ ಬಾ ಚಕೋರಿ
ನಾಟಕಗಳು
- ಬೆರಳ್ ಗೆ ಕೊರಳ್
- ನನ್ನ ಗೋಪಾಲ
- ಯಮನ ಸೋಲು
- ಸ್ಮಶಾನ ಕುರುಕ್ಷೇತ್ರಂ
- ಮಹಾರಾತ್ರಿ
ವಿಚಾರ ಕೃತಿಗಳು
- ದೌಪದಿಯ ಶ್ರೀಮುಡಿ
- ರಸೋವೈಸಃ
- ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ
ಕಾದಂಬರಿ
- ಕಾನೂರು ಹೆಗ್ಗಡತಿ
- ಮಲೆಗಳಲ್ಲಿ ಮದುಮಗಳು
ಮಹಾಕಾವ್ಯ
- ಶ್ರೀರಾಮಾಯಣ ದರ್ಶನಂ
ವೃತ್ತಿ ಜೀವನ :
ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರೂ , ಕುಲಪತಿಗಳೂ ಆಗಿ ಸೇವೆ ಸಲ್ಲಿಸಿದ್ದಾರೆ
ಗೌರವ ಪುರಸ್ಕಾರಗಳು
- ಭಾರತೀಯ ಜ್ಞಾನಪೀಠ ಪ್ರಶಸ್ತಿ
- ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
- ಪದ್ಮವಿಭೂಷಣ ಪ್ರಶಸ್ತಿ
- ಪಂಪ ಪ್ರಶಸ್ತಿ
- ಕರ್ನಾಟಕ ರತ್ನ ಪ್ರಶಸ್ತಿ
1957 ರಲ್ಲಿ ಧಾರವಾಡದಲ್ಲಿ ಜರುಗಿದ 29 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಇವರಿಗೆ ಸಂದಿದೆ .
ಪದ್ಯ
ಅಖಂಡ ಕರ್ಣಾಟಕ :
ಅಲ್ತೂ ನಮ್ಮ ಕೂಗಾಟದ ರಾಜಕೀಯ ನಾಟಕ !
ಹರಸುತಿಹನು ದೇವ ಗಾಂಧಿ
ಮಂತ್ರಿಸಿಹುದು ಋಷಿಯ ನಾಂದಿ
ತನಗೆ ತಾನೆ ಋತಸ್ಯಂದಿ
ಅವಂಧ್ಯೆ ಕವಿಯ ಕಲ್ಪನ
ಒರ್ವನಾದೊಡೋರ್ವನು
ಶಕ್ತಿ ಸರ್ವನಲ್ಪನ ?
ಹಿಂದದೊಂದು ಹಿರಿಯ ಕನಸು
ಇಂದು ಕೋಟಿ ಕೋಟಿ ಮನಸು
ಕೂಡಿ ಮೂಡಿ ನಿಂದ ನನಸು !
ತಡೆವುದೇನೋ ನಿನ್ನ ಕಿನಿಸು
ಒಣರುವಲ್ಪ ಜಲ್ಪನೆ ?
ಭುವನ ವಂದ್ಯೆ , ಕೇಳ್ , ಅವಂಧ್ಯೆ
ಕವಿಯ ವಿಂಧ್ಯ ಕಲ್ಪನೆ !
ಅಲ್ತೂ ನಮ್ಮ ಬೂಟಾಟದ ರಾಜಕೀಯ ನಾಟಕ
ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸುವೊಂದು ಕೃತಕವ ಲ್ತೊ
ಸಿರಿಗನ್ನಡ ಸರಸ್ವತಿಯ
ವಜ್ರಕರ್ಣ ಕುಂಡಲ !
ಅಲ್ತೂ ನಮ್ಮ ನಾಲ್ಕು ದಿನದ ರಾಜಕೀಯ ನಾಟಕ !
ನೃಪತುಂಗನೆ ಚಕ್ರವರ್ತಿ !
ಪಂಪನಲ್ಲಿ ಮುಖ್ಯಮಂತ್ರಿ !
ರನ್ನ ಜನ್ನ ನಾಗವರ್ಮಾ
ರಾಘವಾಂಕ ಹರಿಹರ
ಬಸವೇಶ್ವರ ನಾರಣಪ್ಪ
ಸರ್ವಜ್ಞ ಷಡಕ್ಷರ :
ಸರಸ್ವತಿಯೆ ರಚಿಸಿದೊಂದು
ನಿತ್ಯ ಸಚಿವ ಮಂಡಲ
ತನಗೆ ರುಚಿರ ಕುಂಡಲ !
ಅಲ್ತೂ ನಮ್ಮ ಕೀರಿಶನಿಯ ರಾಜಕೀಯ ನಾಟಕ !
ಬರಿಯ ಹೊಟ್ಟೆ ಬಟ್ಟೆಗಲ್ಲೊ
ಪಕ್ಷ ಜಾತಿ ಕಲಹಕಲ್ಲೊ
ಹಮ್ಮುಬಿಮ್ಮುಸೊಮ್ಮಿಗ ಲ್ತೊ
ಬಣ್ಣ ಚಿಟ್ಟೆ ಬಾಳಿಗ ಲ್ತೊ
ಜೋಳವಾಳಿ ಕೂಳಿಗಲ್ಲೊ
ದರ್ಪ ಸರ್ಪ ಕಾರ್ಕೋಟಕ
ಸ್ವಾರ್ಥ ಫಣಾ ಕ್ರೀಡೆಗಲ್ತೊ
ರಾಜಕೀಯ ಪೇಟಕ ,
ಅಖಂಡ ಕರ್ಣಾಟಕ !
ಸರಸ್ವತಿಯೆ ರಚಿಸಿದೊಂದು ರಾಜಕೀಯ ತ್ರೋಟಕ
ಮೆರೆಯಲಾತ್ಮಸಂಸ್ಕೃತಿ
ಬೆಳಗೆ ಜೀವ ದೀಧಿತಿ
ಪರಮಾತ್ಮನ ಚರಣದೀಪ್ತಿ
ಶರಣ ಹೃದಯದಲಿ ಹೊತ್ತಿ
ಉಸಿರುಸಿರಿನ ಹಣತೆ ಬತ್ತಿ
ಉರಿಯಲೆಂದು ತಣ್ಣಗೆ
ಬಾಳ ಸೊಡರ್‌ಗುಡಿಯನೆತ್ತಿ
ತನ್ನ ಮುಡಿಯ ಬಾನಿಗೆತ್ತಿ
ಸೊಗಸಲೆಂದು ರಸಾಸ್ಪೊರ್ರ್ತಿ
ಭಗವಂತನ ಕಣ್ಣಿಗೆ
ಹಾಡುತಿಹೆನು ಕಂಡ ನಾನು :
ದಿಟ್ಟಿಗೇಡೋ ? ಹುಟ್ಟು ಕುರುಡೋ ?
ಬುದ್ದಿ ಬರಡೋ ? ಬೇರೆ ಹುರುಡೋ ?
ಮೆಳ್ಳಗಣ್ಣ , ಕಾಣೆ ನೀನು ?
ಹೇಳು ! ತಪ್ಪು ನನ್ನದೇನು ?
ಕರ್ನಾಟಕ ಎಂಬುದೇನು
ಹೆಸರೆ ಬರಿಯ ಮಣ್ಣಿಗೆ ?
ಮಂತ್ರ ಕಣಾ ! ಶಕ್ತಿ ಕಣಾ !
ತಾಯಿ ಕಣಾ ! ದೇವಿ ಕಣಾ !
ಬೆಂಕಿ ಕಣಾ ! ಸಿಡಿಲು ಕಣಾ !
ಕಾವ ಕೊಲುವ ಒಲವ ಬಲವ
ಪಡೆದ ಚಲದ ಚಂಡಿ ಕಣಾ
ಋಷಿಯ ಕಾಣ್ವ ಕಣ್ಣಿಗೆ
ವಿರೋಧಿಗಾಸ್ಫೋಟಕ
ಕಂಡ ಕವಿಗಖಂಡ ದೇವಿ ಕಣಾ ಕರ್ಣಾಟಕ
ಸರಸ್ವತಿಯೆ ರಚಿಸಿದೊಂದು ರಾಜಕೀಯ ತ್ರೋಟಕ
ವಿರೋಧಿಗಾಸ್ಫೋಟಕ ,
ಅಖಂಡ ಕರ್ಣಾಟಕ
ಅಲ್ಲೋ ನಾವು ನರಿಪೊಂದು ರಾಜಕೀಯ ನಾಟಕ !
ಅಖಂಡ ಕರ್ಣಾಟಕ !
ಅಖಂಡ ಕರ್ಣಾಟಕ !
ಜಯ್ ಜಯ್ ಜಯ್ ಅಖಂಡ ಕರ್ಣಾಟಕ !
ಒಂದು ವಾಕ್ಯದಲ್ಲಿ ಉತ್ತರಿಸಿ
ಅಖಂಡ ಕರ್ನಾಟಕವನ್ನು ಹರಸುತ್ತಿರುವವರು ಯಾರು ?
ಅಖಂಡ ಕರ್ನಾಟಕವನ್ನು ಹರಸುತ್ತಿರುವವರು ದೇವ ಗಾಂಧಿ
ಇಂದು ಬಂದು ನಾಳೆ ಹೋಗುವುದು ಯಾವುದು ?
ಇಂದು ಒಂದು ನಾಳೆ ಹೋಗುವುದು ರಾಜಕೀಯದ ಮಂತ್ರಿ ಮಂಡಲ
ಸಿರಿಗನ್ನಡವನ್ನು ಯಾವುದಕ್ಕೆ ಹೋಲಿಸಲಾಗಿದೆ ?
ಸಿರಿಗನ್ನಡವನ್ನು ಸರಸ್ವತಿಯ ಪಜಕರ್ಣಕುಂಡಲಕ್ಕೆ ಹೋಲಿಸಲಾಗಿದೆ .
ಅಖಂಡ ಕರ್ನಾಟಕದ ಚಕ್ರವರ್ತಿ ಯಾರು ?
ನೃಪತುಂಗನು ಅಖಂಡ ಕರ್ನಾಟಕದ ಚಕ್ರವರ್ತಿಯಾಗಿದ್ದಾನೆ .
ಅಖಂಡ ಕರ್ನಾಟಕದ ಮುಖ್ಯಮಂತ್ರಿ ಯಾರು ?
ಅಖಂಡ ಕರ್ನಾಟಕದ ಮುಖ್ಯಮಂತ್ರಿ ಆದಿಕವಿ ಪಂಪ ,
ಸರಸ್ವತಿಯು ಯಾವ ಸಂಸ್ಕೃತಿಯನ್ನು ಮೆರೆಯಲು ಕರ್ನಾಟಕವನ್ನು ರಚಿಸಿದ್ದಾಳೆ ?
ಸರಸ್ವತಿಯು ಆತ್ಮಸಂಸ್ಕೃತಿಯನ್ನು ಮರೆಯಲು ಕರ್ನಾಟಕವನ್ನು ರಚಿಸಿದ್ದಾಳೆ .
ಕರ್ನಾಟಕವು ಯಾರ ಹೃದಯಗಳಲ್ಲಿ ಹೊತ್ತಿರುವ ದೀಪವಾಗಿದೆ ?
ಕರ್ನಾಟಕವು ಶರಣರ ಹೃದಯಗಳಲ್ಲಿ ಹೊತ್ತಿರುವ ದೀಪವಾಗಿದೆ .
ಚಲದ ಚಂಡಿ ಯಾರು ?
ಕನ್ನಡ ತಾಯಿಯು ಚಲದ ಚಂಡಿಯೆನಿಸಿದ್ದಾಳೆ .
ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ
ಅಖಂಡ ಕರ್ನಾಟಕ ಬೂಟಾಟದ ರಾಜಕೀಯ ನಾಟಕವಲ್ಲವೇ ?
ಸರಸ್ವತಿಯು ರಚಿಸಿರುವ ಅಖಂಡ ಕರ್ನಾಟಕವು ಶಾಶ್ವತವಾದುದು . ಅದರಲ್ಲಿ ಇಂದು ಬಂದು ನಾಳೆ ಹೋಗುವ ಸಚಿವ ಮಂಡಲವಿಲ್ಲ . ಅದು ಸರಸ್ವತಿಯ ವಜ್ರಕರ್ಣ ಕು ೦ ಡಲವಾಗಿದೆ , ಆದ್ದರಿಂದ ಅದು ರಾಜಕೀಯದ ಬೂಟಾಟದ ನಾಟಕವಲ್ಲ ,
ಸರಸ್ವತಿಯ ಸಚಿವ ಮಂಡಲದ ಸದಸ್ಯರು ಯಾರು ?
ಸರಸ್ವತಿಯ ಸಚಿವ ಮಂಡಲದಲ್ಲಿ ಪಂಪನು ಮುಖ್ಯಮಂತ್ರಿಯಾಗಿದ್ದಾನೆ . ರನ್ನ , ಜನ್ನ , ನಾಗವರ್ಮ , ರಾಘವಾಂಕ , ಹರಿಹರ , ಬಸವೇಶ್ವರ , ನಾರಣಪ್ಪ , ಸರ್ವಜ್ಞ , ಷಡಕ್ಷರರೆಂಬ ಮಹಾಕವಿಗಳು ಸಚಿವಮಂಡಲದ ಉಳಿದ ಸದಸ್ಯರಾಗಿದ್ದಾರೆ .
ಪರಮಾತ್ಮನ ಚರಣದೀಪ್ತಿ ಎಲ್ಲಿ ಮತ್ತು ಹೇಗೆ ಉರಿಯಬೇಕೆಂದು ಕವಿ ಹೇಳಿದ್ದಾರೆ ?
ಪರಮಾತ್ಮನ ಚರಣದೀಪ್ತಿಯು ಶರಣರ ಹೃದಯದಲ್ಲಿ ಹೊತ್ತಿ ಉಸಿರುಸಿರಿನ ಹಣತೆಯೆಂಬ ಬತ್ತಿಯು ತಣ್ಣಗೆ ಉರಿಯಲೆಂದು ಕವಿ ಹೇಳಿದ್ದಾರೆ .
ಮೆಳ್ಳೆಗಣ್ಣನಿಗೆ ಕವಿ ಕೇಳುವ ಪ್ರಶ್ನೆಗಳು ಯಾವುವು ?
ಅಖಂಡ ಕರ್ಣಾಟಕವೆಂಬುದು ಪರಮಾತ್ಮನ ಚರಣ ದೀಪ್ತಿಯಾಗಿರುವುದನ್ನು ಕಂಡ ಕವಿಯು ಮೆಳ್ಳೆಗಣ್ಣನಿಗೆ ” ನಿನಗೆ ಕಣ್ಣು ಕಾಣದೆ ? ಹುಟ್ಟು ಕುರುಡನೋ ? ಬುದ್ದಿಯು ಬರಡೋ ? ಹುರುಡೋ ? ನಿನ್ನದು ಮೆಳ್ಳೆಗಣ್ಣಾದ್ದರಿಂದ ನನಗೆ ಕಾಣುತ್ತಿರುವುದು ನಿನಗೆ ಕಾಣುತ್ತಿಲ್ಲ . ಇದು ನನ್ನ ತಪ್ಪೇನು ? ‘ ಎಂದು ಪ್ರಶ್ನಿಸಿದ್ದಾರೆ .
ಐದಾರು ವಾಕ್ಯಗಳಲ್ಲಿ ಉತ್ತರಿಸಿ
ಕುವೆಂಪು ಅವರು ‘ ಕೂಗಾಟದ ರಾಜಕೀಯ ನಾಟಕ ‘ ಎಂದು ಹೇಳಿರುವ ಹಿನ್ನೆಲೆ ಏನು ?
ಕುವೆಂಪು ಅವರು ಇಂದಿನ ರಾಜಕಾರಣವನ್ನು ಕೂಗಾಟದ ರಾಜಕೀಯ ನಾಟಕ ‘ ಎಂದಿದ್ದಾರೆ . ಇದಕ್ಕೆ ಕಾರಣವೇನೆಂದರೆ , ಇಂದಿನ ರಾಜಕಾರಣಿಗಳು , ಅವರ ಪಕ್ಷ , ಸಚಿವ ಸಂಪುಟ ಎಲ್ಲವೂ ಅಶಾಶ್ವತವಾದುದು .
ಇಂದು ಒಂದು ನಾಳೆ ಹೋಗು ವಂತಹದ್ದು , ಪಕ್ಷಗಳು ನಾಡಿನ ಅಭಿವೃದ್ಧಿಯನ್ನು ಮರೆತು ಪರಸ್ಪರ ಕಚ್ಚಾಟದಲ್ಲಿ ತೊಡಗಿರುತ್ತವೆ . ಅಧಿಕಾರದಲ್ಲಿ ಉಳಿಯಲು ಮತೀಯ ಭಾವನೆಗಳನ್ನು ಜಾತಿಕುಲಗಳನ್ನು ಇಂದಿನ ರಾಜಕಾರಣಿಗಳು ಅಸ್ತ್ರವಾಗಿ ಬಳಸಿಕೊಳ್ಳುತ್ತಾರೆ . ಸ್ವಜನಪಕ್ಷಪಾತ ಮಾಡುತ್ತಾರೆ , ಅಹಂಕಾರ , ಹಮ್ಮು ಬಿಮ್ಮುಗಳನ್ನು ಪ್ರದರ್ಶಿಸುತ್ತಾರೆ .
ಅಲ್ಲದೆ ಕೀರ್ತಿ ಶನಿಯ ಬೆನ್ನುಹತ್ತಿರುವ ಬಣ್ಣದ ಚಿಟ್ಟೆಗಳಿವರು . ಅನ್ನದ ಋಣ ತೀರಿಸಬೇಕೆಂಬ ನಿಷ್ಠೆಯಿಲ್ಲದವರು , ಸ್ವಾರ್ಥಿಗಳು , ಹೀಗಾಗಿ ಇಂದಿನ ರಾಜಕಾರಣಿಗಳದ್ದು ಕೂಗಾಟದ ರಾಜಕೀಯ ನಾಟಕವೆಂದು ಕವಿ ಕುವೆಂಪು ಟೀಕಿಸಿದ್ದಾರೆ .
ಸರಸ್ವತಿಯ ಸಚಿವ ಮಂಡಲವನ್ನು ಕುರಿತು ಬರೆಯಿರಿ
ಕುವೆಂಪು ಅವರು ಅಖಂಡ ಕರ್ನಾಟಕವನ್ನು ಸರಸ್ವತಿಯೇ ರಚಿಸಿರುವ ನಿತ್ಯ ಸಚಿವ ಮಂಡಲವೆಂದಿದ್ದಾರೆ . ಅದು ಇಂದು ಬಂದು ನಾಳೆ ಹೋಗುವಂತಹದಲ್ಲ . ನೃಪತುಂಗನು ಈ ಸಚಿವ ಮಂಡಲದ ಚಿರ ಚಕ್ರವರ್ತಿಯನಿಸಿದ್ದರೆ , ಪಂಪನು ಇಲ್ಲಿ ಮುಖ್ಯಮಂತ್ರಿಯನಿಸಿರುವನು .
ಮಹಾಕವಿಗಳಾದ ರನ್ನ , ಜನ್ನ , ನಾಗವರ್ಮ , ಹರಿಹರ , ರಾಘವಾಂಕ , ಬಸವೇಶ್ವರ , ನಾರಣಪ್ಪ , ಸರ್ವಜ್ಞ , ಷಡಕ್ಷರಿಯಂತಹವರು ಈ ಸಚಿವ ಮಂಡಲದ ನಿತ್ಯ ಸಚಿವರಾಗಿದ್ದಾರೆ . ಇದನ್ನು ಸ್ವತಃ ಸರಸ್ವತಿಯೇ ತನ್ನ ಕಾಂತಿಯ ಕುಂಡಲವೆಂಬಂತೆ ಧರಿಸಿದ್ದಾಳೆಂದು ಕವಿ ಹೇಳಿದ್ದಾರೆ . ಈ ಸಚಿವ ಮಂಡಲವು ಇಂದಿನ ರಾಜಕಾರಣದಂತೆ ನಾಲ್ಕು ದಿನದ ರಾಜಕೀಯ ನಾಟಕದಂತಲ್ಲವೆಂದಿದ್ದಾರೆ .
ಅಖಂಡ ಕರ್ನಾಟಕವು ಬರೀ ರಾಜಕೀಯ ನಾಟಕವಲ್ಲ , ಏಕೆ ?
ಅಖಂಡ ಕರ್ನಾಟಕವು ಬರೀ ರಾಜಕೀಯ ನಾಟಕವಲ್ಲ . ಅದು ಸರಸ್ವತಿಯು ರಚಿಸಿರುವ ಆರಾಜಕೀಯ ರೂಪಕ ( ತೋಟಕ ) , ಅದರೊಳಗೆ ಆತ್ಮಸಂಸ್ಕೃತಿಯು ಮರೆಯುತ್ತಿರಬೇಕು .
ಅದರಲ್ಲಿ ಜೀವನ ದೀಧಿತಿ ಬೆಳಗಬೇಕು . ಪರಮಾತ್ಮನ ಚರಣ ದೀಪ್ತಿ ಶರಣ ಹೃದಯಗಳಲ್ಲಿ ಹೊತ್ತಿರುತ್ತದೆ . ಉಸುರುಸಿರಿನ ಬತ್ತಿಯ ಹಣತೆಯು ತಣ್ಣಗೆ ಉರಿಯುತ್ತದೆ , ರಸಸ್ಪೂರ್ತಿಯು ಭಗವಂತನ ಕಣ್ಣಾಗಬೇಕು . ಇಲ್ಲಿ ಸಿರಿಗನ್ನಡವು ಸರಸ್ವತಿಯ ವಪ್ರಕರ್ಣ ಕುಂಡಲವೆನಿಸಿದೆ . ಅದೊಂದು ಆನಂದ ಕವಿಯ ಕಲ್ಪನೆ ಯಾಗಿದೆ .
ಕರ್ಣಾಟಕವು ಅಲ್ಲಿ ಮಂತ್ರ , ಶಕ್ತಿ , ತಾಯಿ , ದೇವಿ , ಸಿಡಿಲು , ಬೆಂಕಿ ಎಲ್ಲವೂ ಆಗಿದೆ . ಆದ್ದರಿ ೦ ದ ಈ ಶಾಶ್ವತತೆಯು ಅಶಾಶ್ವತವಾದ ರಾಜಕೀಯ ನಾಟಕವಲ್ಲ ಎಂದಿದ್ದಾರೆ ಕವಿ ಕುವೆಂಪು .
ಅಖಂಡ ಕರ್ನಾಟಕ ಪದ್ಯ notes
ರಾಜಕೀಯ ಶಕ್ತಿಯ ಮೇಳೆಸುತ್ತಿರುವ ಇಂದಿನ ಸಂದರ್ಭದಲ್ಲಿ ನಾಡನ್ನು ಒಂದು ಸಾಂಸ್ಕೃತಿಕ ಅಸ್ತಿತ್ವವಾಗಿ ಕಲ್ಪಿಸಲು ಈ ಕವನ ಹೇಗೆ ಪೂರಕವಾಗಿದೆ ?
ಕವಿ ಕುವೆಂಪು ಅವರು ರಚಿಸಿರುವ ಅಖಂಡ ಕರ್ಣಾಟಕ’ವೆಂಬ ಕವಿತೆಯು ಇಂದಿನ ಸಂದರ್ಭದಲ್ಲಿ ಮಾತ್ರವಲ್ಲ , ಸಾರ್ವಕಾಲಿಕವಾಗಿ ಈ ನಾಡನ್ನು ಆಳುವವರಿಗೆ ಸಾಂಸ್ಕೃತಿಕ ಧರ್ಮವನ್ನು ಬೋಧಿಸುವಂತಹದ್ದು , ಇಂದಿನ ದಿನಗಳಲ್ಲಿ ರಾಜಕೀಯ ಪಕ್ಷವೇ ನಾಡನ್ನು ಆಳುವ ಪ್ರತಿನಿಧಿಸುವ ಬಲವಾಗಿದೆ . ಆಳುವವರಿಗೆ ನಮ್ಮ ಸಾಹಿತ್ಯ – ಸಂಸ್ಕೃತಿ – ಪರಂಪರೆಗಳ
Akhanda Karnataka Poem Summary in Kannada
ಅರಿವಿಲ್ಲದಿದ್ದರೆ ಈ ನಾಡನ್ನು ಅಖಂಡವಾಗಿ ಕಟ್ಟಲಾಗದು . ಮೌಲ್ಯಗಳೇ ಕಣ್ಮರೆಯಾಗಿ , ಜಾಕಿ ಲೆಕ್ಕಾಚಾರ , ಸ್ವಜನಪಕ್ಷಪಾತ ಅಧಿಕಾರದಾಹ , ಕೀರ್ತಿಯ ವಾಂಛಲ್ಯಗಳೇ ಬುನಾದಿಯಾಗಿರುವ ಇಂದಿನ ಸಂದರ್ಭದಲ್ಲಿ ಕುವೆಂಪು ಅವರು ಹೇಳಿರುವ ಸಂಸ್ಕೃತಿಯ ಆತ್ಮವನ್ನು ಕಾಣುವ ಒಳಗಣ್ಣು ಆಳುವವರಿಗೆ ಇರಬೇಕಾಗುತ್ತದೆ .
ಎಲ್ಲ ದೃಷ್ಟಿಯಿಂದಲೂ ಕುವೆಂಪು ಅವರ ಕಿವಿಮಾತ ಪೂರಕವೇ , ಇಲ್ಲದಿದ್ದರೆ ಕವಿಯೇ ಹೇಳಿರುವಂತೆ ಕೂಗಾಟದ ಬೂಟಾಟಿಕೆಯ ನಾಟಕವನಿಸುತ್ತದೆ .
ಕರ್ನಾಟಕ ಎಂಬುದು ಬರೀ ಮಣ್ಣಿಗೆ ಹೆಸರಲ್ಲ ಎಂಬುದನ್ನು ಕವಿ ಹೇಗೆ ಹೇಳಿದ್ದಾರೆ ?
ಕುವೆಂಪು ಅವರು ‘ ಕರ್ನಾಟಕ ಎಂದರೆ ಕೇವಲ ಮಣ್ಣಿಗಿರುವ ಹೆಸರಲ್ಲ ಎಂದಿದ್ದಾರೆ . ಅವರು ಹೇಳಿರುವಂತೆ ಕರ್ಣಾಟಕ ಎಂಬುದು ಒಂದು ಮಾತ್ರ , ಅದೊಂದು ಶಕ್ತಿ , ನಮ್ಮೆಲ್ಲರಿಗೂ ತಾಯಿ ಇದ್ದಂತೆ , ನಮ್ಮೆಲ್ಲರ ದೇವಿಯೂ ಕನ್ನಡವೇ ಪ್ರೀತಿಯಿಂದ ಒಲವನ್ನು ಊಡುತ್ತಾಳೆ .
ಬಲವನ್ನು ನೀಡಿ ರಕ್ಷಿಸುತ್ತಾಳೆ , ಇದೆಲ್ಲಾ ನಿಷ್ಠೆ – ಗೌರವಗಳನ್ನು ತೋರುವವರಿಗೆ ಆದರೆ ದ್ರೋಹಿಗಳ ಪಾಲಿಗೆ ಅವಳು ಬೆಂಕಿ , ಸಿಡಿಲುಗಳಂತೆ ಆಸ್ಫೋಟಿಸುವವಳು , ಚಲದ ಚಂಡಿಯಂತಹವಳು ಕವಿಯ ಕಣ್ಣಿಗೆ ಅಖಂಡ ದೇವಿ ಸ್ವರೂಪಳು , ನಾವು ಇಂದು ಕರ್ನಾಟಕ ‘ ನಮ್ಮದೆಂದು ಗಡಿರೇಖೆಗಳನ್ನು ಹಾಕಿಕೊಂಡು ನರ್ತಿಸುತ್ತೇವೆ .
ಈ ಅರ್ಥದ ನಾಡಲ್ಲ ಭೌತಿಕವಲ್ಲದ ಆಭೌತಿಕವಾದ ಸಾಂಸ್ಕೃತಿಕ ಬಲ , ಒಗ್ಗಟ್ಟುಗಳೇ ಕನ್ನಡ ಕರ್ಣಾಟಕಗಳು , ಎರಡೂ ಬೇರೆ ಬೇರೆಯಲ್ಲ ಎಂದು ಕವಿ ತಾವು ಕಂಡ ಕಾಣೆಯನ್ನು ತುಂಬು ಅಭಿಮಾನದಿಂದ ನುಡಿದಿದ್ದಾರೆ .
ಪಿ ಯುಸಿ ಗೆ ಸಂಬಂದಿಸಿದ ಕನ್ನಡ ಇತರೆ ಪಠ್ಯದ ಪ್ರಶ್ನೋತ್ತರಗಳ ಲಿಂಕ್
ಇನ್ನು ಹೆಚ್ಚಿನ ಪ್ರಬಂಧ ಓದಿ :
ಭೂ ಮಾಲಿನ್ಯ ಕುರಿತು ಪ್ರಬಂಧ
ಆರ್ಟಿಕಲ್ 370 ಕುರಿತು ಪ್ರಬಂಧ
ರೈತರ ಆತ್ಮಹತ್ಯೆ ಕುರಿತು ಪ್ರಬಂಧ
ಜಲ ಮಾಲಿನ್ಯ ಬಗ್ಗೆ ಪ್ರಬಂಧ
ಇತರೆ ವಿಷಯಗಳನ್ನು ಓದಲು ಈ ಕೆಳಗೆ ಕಾಣಿಸುವ ವಿಷಯದಮೇಲೆ ಕ್ಲಿಕ್ ಮಾಡಿ
- ಕನ್ನಡ
- ಇತಿಹಾಸ
- ಭೂಗೋಳಶಾಸ್ತ್ರ
- ಭಾರತದ ಸಂವಿಧಾನ
- ವಿಜ್ಞಾನ
- ಅರ್ಥಶಾಸ್ತ್ರ
- ಮಾನಸಿಕ ಸಾಮರ್ಥ್ಯ
- ಇಂಗ್ಲೀಷ್ ವ್ಯಾಕರಣ
- ಪ್ರಚಲಿತ ವಿದ್ಯಮಾನ
- ಸಾಮಾನ್ಯ ಜ್ಞಾನ