kannada letter writing | ಕನ್ನಡ ಪತ್ರಲೇಖನಗಳು

kannada letter writing | ಕನ್ನಡ ಪತ್ರಲೇಖನಗಳು

Kannada Letter Writing, ಕನ್ನಡ ಪತ್ರಲೇಖನಗಳು, kannada patra lekhana galu, kannada patralekhana in kannada, kannada letter writing format, pdf,gk

kannada letter writing

ಪತ್ರಲೇಖನ ಎಂದರೇನು?

ನಮ್ಮ ಎದುರಿಗೆ ಇರುವವರ ಜೊತೆ ಸಂಭಾಷಣೆ ನಡೆಸಿದಂತೆ ದೂರದಲ್ಲಿರುವ (ಬೇರೆಡೆಯಲ್ಲಿ ವಾಸಿಸುತ್ತಿರುವ)ವ್ಯಕ್ತಿಗಳ ಜೊತೆ ಮಾತುಕತೆಗೆ ,ಪರಸ್ಪರ ವಿಚಾರ ವಿನಿಮಯಕ್ಕೆ ಬಳಕೆಯಾಗುವ ಪರಿಣಾಮಕಾರಿ ಸಾಧನ ಪತ್ರ


( ಕುಡಿಯುವ ನೀರಿನ ವ್ಯವಸ್ಥೆ ಕುರಿತು ) ಕುಡಿಯುವ ನೀರಿಗೆ ಸಂಬಂಧಿಸಿ ಸರಿಯಾದ ವ್ಯವಸ್ಥೆ ಮಾಡಬೇಕೆಂದು ವಿಜ್ಞಾಪಿ ನಗರಸಭೆಯ ಮುಖ್ಯಾಧಿಕಾರಿಗಳಿಗೆ ಪತ್ರ

ಯ . ರ . ವ .

ಚನ್ನಗಿರಿ

ನಗರಸಭಾ ಅಧ್ಯಕ್ಷರು ,

ಚನ್ನಗಿರಿ .

ಮಾನ್ಯರೇ ,

ಕಳೆದ ಎರಡು ವರ್ಷಗಳಿಂದ ಮಳೆಯಿಲ್ಲದ ಪರಿಣಾಮವಾಗಿ ನಮ್ಮ ಭಾಗದ ಜನರಿಗೆ ಅತೀವ ತೊಂದರೆಯಾಗಿದೆ . ನಮ್ಮ ಹಳ್ಳಿಯ ಜನರಂತೂ ತತ್ತರಿಸಿ ಹೋಗಿದ್ದಾರೆ . ಇದ್ದ ಕೆರೆಯು ಬತ್ತಿ ಹೋಗಿದೆ . ನೀರಿನ ತೊಂದರೆಯಾಗಿದೆ . ಒಂದು ಕೊಡ ನೀರಿಗಾಗಿ ಪರದಾಡುವ ಪ್ರಸಂಗ ಬಂದಿದೆ .

ಹತ್ತು ಸಾವಿರ ಜನಸಂಖ್ಯೆ ಇರುವ ನಮ್ಮ ಹಳ್ಳಿಯನ್ನು ರಾಜಕಾರಣಿಗಳು ಮರೆತಿದ್ದಾರೆ . ನಮಗೆ ಇದು ತುಂಬ ವಿಷಾದನೀಯ , ನಮಗೆ ಒಂದು ಶಾಶ್ವತ ನೀರಿನ ವ್ಯವಸ್ಥೆ ಮಾಡುವುದು ಅತ್ಯವಶ್ಯವಾಗಿದೆ . ಹತ್ತಿರದಲ್ಲಿದ್ದ ದೊಡ್ಡ ನಗರದಿಂದ ನೀರನ್ನು ಪಡೆದು , ಒಂದು ದೊಡ್ಡ ನೀರಿನ ಟ್ಯಾಂಕ್ ನಿರ್ಮಿಸಬೇಕು . ನಳದಿಂದ ನಿತ್ಯ ನೀರಿನ ಸರಬರಾಜು ಮಾಡಬೇಕು ಅಲ್ಲಿಯವರೆಗೆ ಕೊಳವೆ ಭಾವಿ ಹಾಕಿಸಿ ನೀರಿನ ಸರಬರಾಜು ಮಾಡಬೇಕಾಗಿ ವಿನಂತಿ.

ನಮ್ಮ ಈ ಮನವಿಯನ್ನು ತಾವು ಓದಿ ಅದನ್ನು ಕಾರ್ಯರೂಪದಲ್ಲಿ ತರುವಿರೆಂದು ನಂಬಿರುವೆ .

ಚನ್ನಗಿರಿ ತಮ್ಮ ವಿಶ್ವಾಸಿಕ ,

10-6-2012 ಯ . ರ . ವ .

kannada letter writing format

ವೈಯಕ್ತಿಕ ಪತ್ರ ( ತಂದೆಗೆ ಮಗನ ಪತ್ರ )

ನೀವು ಬಿ . ಚಂದ್ರಶೇಖರನೆಂದು ತಿಳಿದು ನೀವು ಕೈಗೊಳ್ಳಲಿರುವ ಶಾಲಾ ಪ್ರವಾಸಕ್ಕಾಗಿ ಹಣ ಕಳಿಸುವಂತೆ ಪ್ರಾರ್ಥಿಸಿ ನಿಮ್ಮ ತಂದೆಗೆ ಪತ್ರ ಬರೆಯಿರಿ .

ಬಿ ಚಂದ್ರಶೇಖರ

ರಾಜನಗರ

2-9-2012

ತೀರ್ಥರೂಪ ತಂದೆಯವರಿಗೆ

ನಿಮ್ಮ ಚಿರಂಜೀವ ಅ.ಬ.ಕ. ಮಾಡುವ ವಂದನೆಗಳು .

ಇಲ್ಲಿ ನನ್ನ ಅಭ್ಯಾಸ ಚೆನ್ನಾಗಿ ನಡೆದಿದೆ . ಪರೀಕ್ಷೆಯ ನಂತರದ ಬಿಡುವಿನಲ್ಲಿ ನಮ್ಮ ಶಾಲೆಯ ವತಿಯಿಂದ ಬಾದಾಮಿ , ಐಹೊಳೆ , ಪಟ್ಟದಕಲ್ಲು , ಶಿವಯೋಗ ಮಂದಿರ ಮುಂತಾದ ಸ್ಥಳಗಳಿಗೆ ಪ್ರವಾಸವನ್ನು ಏರ್ಪಡಿಸಿರುವವು . ಅದಕ್ಕೆ ತಗಲುವ ವೆಚ್ಚ ಕೇವಲ ರೂಪಾಯಿ 200 / – . ಈ ಪ್ರವಾಸವು ಶೈಕ್ಷಣಿಕ ಪ್ರವಾಸವಿದ್ದು ನನಗೂ ಹೋಗುವ ಬಯಕೆ .

ಕಾರಣ ಪತ್ರ ತಲುಪಿದ ಕೂಡಲೆ ಹಣವನ್ನು ಕಳುಹಿಸಿ ಕೊಡಲು ವಿನಂತಿ . ಇದರೊಂದಿಗೆ ತಮ್ಮ ಆಶೀರ್ವಾದವೂ ಬೇಕು . ಮಾತೋಶ್ರೀ ತಾಯಿಯವರಿಗೆ ನನ್ನ ನಮಸ್ಕಾರಗಳು . ಉತ್ತರ ಬರೆಯಿರಿ .

ತಮ್ಮ ಪ್ರೀತಿಯ

ಗೆ- ಚಂದ್ರು

ಶ್ರೀ ಬಸವರಾಜ ಕೆ .

ಮೈಸೂರು – ಬೆಂಗಳೂರು ರೋಡ ,

39 , ದ್ವಿತೀಯ ಕ್ರಾಸ್ , ರಾಜ್ ಲೇಔಟ್ , ಬೆಂಗಳೂರು -54 .

Kannada Letter Writing

ಒಂದು ಅರ್ಜಿ

ನಿಮ್ಮ ಹಳ್ಳಿಯಲ್ಲಿ ಜನ ಮುಗಳ ಅಂಗಡಿಯನ್ನು ಪ್ರಾರಂಭಿಸಲು ಸಂಬಂಧಿಸಿದ ಅಧಿಕಾರಿಗಳನ್ನು ಉದ್ದೇಶಿಸಿ ಅರ್ಜಿ ಬರೆಯಿರಿ.


ಮಾನ್ಯ ಜಿಲ್ಲಾಧಿಕಾರಿಗಳು

ಧಾರವಾಡ ಜಿಲ್ಲೆ ಧಾರವಾಡ

ಯ . ರ . ವ .

10-6-2012

ವಿಷಯ : ಪತರ ವಸ್ತುಗಳ ನ್ಯಾಯಬೆಲೆ ಅಂಗಡಿ ಪ್ರಾರಂಭಿಸಲು ಅರ್ಜಿ

ಯ . ರ . ವ .

ಸುರಪುರ

10-6-2012

ಮಾನ್ಯರೇ ,

ಕಳಗೆ ಸಹಿ ಮಾಡಿದ ನಾನು ಯ.ರ.ವ. ಸುರಪುರದ ನಿವಾಸಿ , ಮಹತ್ವದ ವಿಷಯವೊಂದನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ . ನಮ್ಮ ಗ್ರಾಮದ ಜನಸಂಖ್ಯೆ ಹದಿನೈದು ಸಾವಿರ . ಆದರೂ ಇಲ್ಲಿ ಪಡಿತರ ವಸ್ತುಗಳ ನ್ಯಾಯಬೆಲೆ ಅಂಗಡಿ ಇಲ್ಲ . ಸದ್ಯ ನಾವು ನಮ್ಮೂರಿಗೆ ಸಮೀಪವಿರುವ ನರಸಾಪುರಕ್ಕೆ ವಾರಕ್ಕೊಂದು ಸಲ ಹೋಗಿ ಪಡಿತರ ವಸ್ತುಗಳನ್ನು ತರುತ್ತಿದ್ದೇವೆ . ಇದರಿಂದ ವಿಪರೀತ ಖರ್ಚು ಬರುತ್ತದೆ ಹಾಗೂ ಅನಾನುಕೂಲವೂ ಆಗುತ್ತದೆ . ನಗರವಾಸಿಗಳಾದ ಶ್ರೀಮಂತರಿಗೂ ಸಹ ಪಡಿತರ ವಸ್ತುಗಳನ್ನು ನ್ಯಾಯಬೆಲೆಯಲ್ಲಿ ಒದಗಿಸಲಾಗುತ್ತದೆ . ಆದರೆ ಹಳ್ಳಿಯಲ್ಲಿಯ ಬಡವರು ಈ ಅವಕಾಶದಿಂದ ವಂಚಿತರಾಗಿದ್ದಾರೆ .

ಪರಮ ದಯಾಳುಗಳಾದ ತಾವು ಈ ವಿಷಯವನ್ನು ಪರಾಮರ್ಶಿಸಬೇಕು . ನಮ್ಮ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿಯೊಂದನ್ನು ಆದಷ್ಟು ಬೇಗ ಮಂಜೂರು ಮಾಡಬೇಕಾಗಿ ವಿನಂತಿ ,

ಸುರಪುರ ತಮ್ಮ ವಿಧೇಯ

10-6-2012 ಯ . ರ . ವ

ಇತರೆ ಲಿಂಕ್ :

> ಕನ್ನಡ ಪ್ರಬಂಧ

> ಕನ್ನಡ ಅಣಕು ಪರೀಕ್ಷೆ ಭಾಗ -04

Leave a Reply

Your email address will not be published.