Magu Mattu Hannugalu Kannada Notes, ಮಗು ಮತ್ತು ಹಣ್ಣುಗಳು ಸಾರಾಂಶ, magu mattu hannugalu question answer Pdf, Notes, Summary, 1st PUC Kannada
Magu Mattu Hannugalu Kannada Notes
ಕವಿ ಪರಿಚಯ
ಎಚ್.ಎಸ್ . ಶಿವಪ್ರಕಾಶ್
ವಿದ್ಯಾಭ್ಯಾಸ : ಬೆಂಗಳೂರು ವಿ.ವಿ.ಯಿಂದ ಇಂಗ್ಲಿಷ್ ಎಂ.ಎ. ಪದವಿ
ವೃತ್ತಿ : ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಕಲೆ ಮತ್ತು ಸೌಂದರ್ಯ ‘ ವಿಭಾಗದ ಪ್ರಾಧ್ಯಾಪಕರಾಗಿದ್ದರು . ‘
ಕವಿತಾ ಸಂಕಲನ :
- ಅಣುಕ್ಷಣ ಚರಿತೆ
- ನವಿಲು ನಾಗರ
- ಮಳೆ ಬಿದ್ದ ನೆಲದಲ್ಲಿ
- ಮಳೆಯ ಮಂಟಪ
- ಸೂರ್ಯಜಲ
ನಾಟಕಗಳು :
- ಮಹಾಚೈತ್ರ
- ಮಂಟೆಸ್ವಾಮಿ ಕಥೆ
- ಸುಲ್ತಾನ್ ಟಿಪ್ಪು
- ಮಾದಾರಿ ಮಾದಯ್ಯ
- ಶಿಲಿಪ್ಪದಿಗಾರಂ
ಕೇಂದ್ರ ಹಾಗೂ ರಾಜ್ಯ ಸಾಹಿತ್ಯ ಅಕಾಡೆಮಿಯ ಪುರಸ್ಕಾರಗಳಿಗೆ ಭಾಜನರಾಗಿರುವ ಶ್ರೀಯುತರು ಈಗ ಬರ್ಲಿನ್‌ನಲ್ಲಿರುವ ‘ ರವೀಂದ್ರನಾಥ ಟ್ಯಾಗೋರ್ ಕೇಂದ್ರ’ದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವರು.
ಮಗು ಮತ್ತು ಹಣ್ಣುಗಳು
ಮಗುವು ಯಾವುದರ ಹಾಗೆ ಬಾಗಬೇಕು ?
ಮಗುವು ಬಾಳೆಯ ಹಣ್ಣಿನ ಹಾಗೆ ಕೊಂಚ ಬಾಗಬೇಕು
ಅರಳಿಸಿದ ದಾಳಿಂಬೆ ಯಾವ ರೀತಿ ಕಾಣುತ್ತದೆ ?
ದಳವಳ ಕೊಯ್ದು ಅರಳಿಸಿದ ದಾಳಿಂಬೆಯು ಥಳಥಳ ಕೆಂಡ ಬಣ್ಣ ಮಣಿ ಮಣಿಯೂ ತನಿರಸದ ಹನಿ ಹನಿಯಂತ ಕಾಣುತ್ತದೆ .
ಹಣ್ಣಿನಂಗಡಿ ಮುಂದೆ ಕಣ್ಣರಳಿಸುವ ಮಗು
ಇಲ್ಲಿ ಈ ತಿರುವಿನಲ್ಲಿ ಥಟ್ಟನವತರಿಸಿದ ಕಪ್ಪು ಲಾರಿಯ ಹಾಗೆ
ಗಾಳಿ ಕೀಟಲೆ ಉಗುರೊ
ತುಂಟರೆಸೆಯುವ ಕಲ್ಲೊ ಕಾಯಿಯಲ್ಲೇ ನಿನ್ನ ಕೆಡವದಿರಲಿ
ಹಣ್ಣಿನಂಗಡಿಯಾಗು ನೀನೂನು
ಗಿರವಿಯಂಗಡಿ ಗುಜರಿಗಳ ಧೂಳು ಹಬ್ಬಿದ
ಊರ ಮಾರುಕಟ್ಟೆಯ ನಡುವೆ
ಹಣ್ಣಾಗಬೇಕು ಮಗು .
ಮೈಯೆಲ್ಲ ಮಾಗಿ ಹಣ್ಣಿನ ಸುಕ್ಕು ಬರುವವರೆಗೆ
ಪಕ್ವತನ ಬಿರಿದ ಬಾಳೆಹಣ್ಣಿದೆಯಲ್ಲ
ಅದರ ಹಾಗೇ ಕೊಂಚ ಬಾಗಬೇಕು
ಕೊಬ್ಬಿದರೆ ಚಕೋತನೆಯ ಹಾಗೆ
ಕುಗ್ಗಿದರೆ ನಿಂಬೆಹಣ್ಣಿನ ಹಾಗೆ
ಹುಳಿಗಟ್ಟುವುದು ನಿನ್ನೊಳಗೆ
ಸರಿಗಾತ್ರವಾಗಿ ಸಮನಿಸಲಿ ನಿನ್ನತನ
ಕಿತ್ತಲೆಯ ಹಾಗೆ , ಮೋಸಂಬಿ ಹಾಗೆ
ರಸಪೂರಿ ಮಾವಿನ ಹಣ್ಣಿನಂತೆ .
ಅಂಜೂರದಂತೆ ಅಪರೂಪವಾಗು ಜನರ ಕಣ್ಣಿಗೆ
ಕಂಡರೆ ಕಾಣು ಕಲ್ಲಂಗಡಿಯಾಗಿ
ಬೇಸಿಗೆ ಕಮರಿರುವ ಕಣ್ಣುಗಳಿಗೆ ,
ದಳದಳ ಕೊಯ್ದು ಅರಳಿಸಿದ ದಾಳಿಂಬೆಯೊಳಗೆ
ಥಳಥಳ ಕೆಂಡ ಬಣ್ಣ ಮಣಿ ಮಣಿ
ಹನಿ ಹನಿ ತನಿರಸದ ಖನಿಯಾಗು
ಹಬ್ಬಿಕೋ ದ್ರಾಕ್ಷಿ ಬಳ್ಳಿಯ ಹಾಗೆ
ಆಯುಷ್ಯ , ಚಪ್ಪರದ ಉದ್ದಗಲ ;
ತಬ್ಬಿಕೋ ಬಿಡಬೇಡ ;
ಹಣ್ಣು ತೊಡಿಸಲು ನಿನಗೆ
ತಾನೆ ಮಣ್ಣಾಗುತ – ಬರಲು ತೋಟಗಾತಿ
ಬೆಳೆಯ ರಾಕೆಟ್ಟುಯನ ಹೊರಡದಿರು ಸೇಬು ಹಣ್ಣಿನ ಜೊತೆಗೆ
ಎಲ್ಲರಿಗೂ ದಕ್ಕುವ ಎಲಚಿಯಾಗು.
ಒಂದು ವಾಕ್ಯದಲ್ಲಿ ಉತ್ತರಿಸಿ
ಮಗು ಕಣ್ಣನ್ನು ಎಲ್ಲಿ ಅರಳಿಸುತ್ತದೆ ?
ಮಗುವು ಹಣ್ಣಿನಂಗಡಿಯ ಮುಂದೆ ಕಣ್ಣರಳಿಸುತ್ತದೆ
ತಿರುವಿನಲ್ಲಿ ಅವತರಿಸುವ ವಾಹನ ಯಾವುದು ?
ಬಾರಿಯು ತಿರುವಿನಲ್ಲಿ ಅವತರಿಸುವ ವಾಹನವಾಗಿದೆ .
ಮಗುವು ಯಾವುದರ ಹಾಗೆ ಬಾಗಬೇಕು ?
ಮಗುವು ಬಾಳೆಯ ಹಣ್ಣಿನ ಹಾಗೆ ಕೊಂಚ ಬಾಗಬೇಕು
ಯಾವ ಹಣ್ಣಿನಂತೆ ಮಗುವು ಕೊಬ್ಬಬಾರದು ?
ಮಗುವು ಚಕೋತ ಹಣ್ಣಿನಂತೆ ಕೊಬ್ಬಬಾರದು .
ಅವ್ಯದ ಕಣ್ಣಿಗೆ ಯಾವ ಹಣ್ಣಿನಂತೆ ಮಗು ಆಪರೂಪವಾಗಬೇಕು ?
ಅನ್ನದ ಕಣ್ಣಿಗೆ ಮಗುವು ಅಂಜೂರದ ಹಣ್ಣಿನಂತೆ ಅಪರೂಪವಾಗಬೇಕು .
ಆಯುಷ್ಯದ ಚಪ್ಪರಕ್ಕೆ ಮಗು ಹೇಗೆ ಹಬ್ಬಿಕೊಳ್ಳಬೇಕು ?
ಆಯುಷ್ಯದ ಚಪ್ಪರದ ಉದ್ದಗಲಕ್ಕೂ ಮಗುವು ದ್ರಾಕ್ಷಿಯ ಬಳ್ಳಿಯಂತೆ ಹಬ್ಬಿಕೊಳ್ಳಬೇಕು .
ಬೆಲೆಯ ರಾಕೆಟ್ಟು ಯಾನದಲ್ಲಿ ಹೊರಟ ಹಣ್ಣು ಯಾವುದು ?
ಬೆಲೆಯ ರಾಕೆಟ್ಟು ಯಾನದಲ್ಲಿ ಹೊರಟ ಹಣ್ಣು ಸೇಬು .
ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ
ಮಗು ಬದುಕಿನಲ್ಲಿ ಯಾವ ಯಾವ ತೊಂದರೆಗಳಿಗೆ ಒಳಗಾಗಬಾರದು ?
ಮಗುವುಬದುಕಿನ ತಿರುವಿನಲ್ಲಿ ಥಟ್ಟನೆ ಅವತರಿಸಿದ ಕಪ್ಪು ಲಾರಿಯಂತಹ ಕೀಟಲೆ ಗಾಳಿಗೋ , ತುಂಟರೆಸೆಯುವ ಕಲ್ಲಿನ ಹೊಡೆತಕ್ಕೆ ಸಿಲುಕಿ ಕಾಯಿಯಲ್ಲೇ ನೆಲಕ್ಕೆ ಬೀಳಬಾರದು .
ಮಗುವು ಹಣ್ಣಿನಂಗಡಿಯಂತಾಗಬೇಕಾದುದು ಎಲ್ಲಿ ?
ಮಗುವುಹಣ್ಣಿನಂಗಡಿಯಂತಾಗಬೇಕಾಗಿರುವುದು ಗಿರವಿ ಅಂಗಡಿ , ಗುಜರಿಗಳ ಧೂಳು ಹಬ್ಬಿರುವ ಊರ ಮಾರುಕಟ್ಟೆಯ
ಮಗುವಿನಲ್ಲಿ ಸಮನಿಸಬೇಕಾದ ಗುಣಗಳು ಯಾವುವು ?
ಮಗುವಿನಲ್ಲಿ ಹುಳಿ ಮತ್ತು ಸಿಹಿ ಸಮನಿಸಿರುವ ಕಿತ್ತಲೆ , ಮೋಸಂಬಿ ಮತ್ತು ಮಾವಿನ ಹಣ್ಣಿನ ಹಾಗೆ ಗುಣಗಳಿರಬೇಕು .
ಅರಳಿಸಿದ ದಾಳಿಂಬೆ ಯಾವ ರೀತಿ ಕಾಣುತ್ತದೆ ?
ದಳವಳ ಕೊಯ್ದು ಅರಳಿಸಿದ ದಾಳಿಂಬೆಯು ಥಳಥಳ ಕೆಂಡ ಬಣ್ಣ ಮಣಿ ಮಣಿಯೂ ತನಿರಸದ ಹನಿ ಹನಿಯಂತ ಕಾಣುತ್ತದೆ .
ಮಗು ಮತ್ತು ಹಣ್ಣುಗಳು ಸಾರಾಂಶ
ಐದಾರು ವಾಕ್ಯಗಳಲ್ಲಿ ಉತ್ತರಿಸಿ
ಮಗು ಹಣ್ಣುಗಳಿಂದ ಕಲಿಯಬೇಕಾದ ಗುಣಗಳು ಯಾವುವು ? ವಿವರಿಸಿ .
ಮಗುವು ಹಣ್ಣಿನಂಗಡಿಯಂತಾಗಿ ಬಗೆಬಗೆಯ ಹಣ್ಣುಗಳ ಗುಣವನ್ನು ರೂಢಿಸಿಕೊಂಡು ಪಕ್ವಗೊಳ್ಳಬೇಕು . ಬಾಳೆಯ ಹಣ್ಣಿನಂತ ಬಾಗುವುದನ್ನು ಕಲಿಯಬೇಕು . ಚಕೋತ , ನಿಂಬೆಗಳಂತೆ ಹುಳಿಗಟ್ಟಿಉಬ್ಬಿ – ಕುಗ್ಗಬಾರದು . ಕಿತ್ತಲೆ , ಮೋಸಂಬಿ , ರಸಪೂರಿ ಮಾವಿನಂತೆ ಹುಳಿ – ಸಿಹಿಗಳು ಸರಿಗಾತ್ರದಲ್ಲಿ ಮಗುವಿನೊಳಗೆ ಸಮನಿಸಿರಬೇಕು .
ಅಲ್ಲದೆ ಮಗುವು ಜನರ ಕಣ್ಣಿಗೆ ಅಂಜೂರದಂತೆ ಅಪರೂಪದ ವ್ಯಕ್ತಿತ್ವ ಹೊಂದಿರಬೇಕು , ಕಲ್ಲಂಗಡಿಯಂತೆ ಬೆಂದ ಮನಕ್ಕೆ ತಂಪೆರೆಯಬೇಕು , ದಾಳಿಂಬೆಯಂತೆ ತನಿರಸದ ಖನಿಯಾಗಬೇಕು , ಸುಖವಿರಲಿ , ಕಷ್ಟ ಬರಲಿ ಸಿಹಿ – ಹುಳಿ ದ್ರಾಕ್ಷಿಯಂತೆ ಆಯುಷ್ಯದ ಚಪ್ಪರಕ್ಕೆ ದಟ್ಟವಾಗಿ ಹಬ್ಬಿಕೊಳ್ಳುವುದನ್ನು ಕಲಿಯಬೇಕು . ಕೈಗೆಟುಕದ ಸೇಬಿನ ಬೆಲೆಯಂತಾಗದ ಎಲ್ಲರಿಗೂ ದಕ್ಕುವ ಒದಗುವ ಎಲಚಿ ಹಣ್ಣಿನಂತೆ ಮಗುವು ಬಾಳಬೇಕು .
ಈ ರೀತಿಯಲ್ಲಿ ಬೇರೆ ಬೇರೆ ಹಣ್ಣುಗಳ ವಿಭಿನ್ನ ಬಗೆಯ ರುಚಿ , ಮಾಗುವಿಕೆ , ಲಭ್ಯತೆ ಹಾಗೂ ಅಪರೂಪತೆಗಳ ಅಂಶಗಳನ್ನು ವಿವರಿಸಲಾಗಿದೆ.
ಮಗುವಿನ ವಿಕಸನದ ಗುಣಗಳನ್ನಾಗಿ ಕವಿ ನಿರೂಪಿಸಿದ್ದಾರೆ.
ಮಗುವಿನ ವ್ಯಕ್ತಿತ್ವಕ್ಕೂ ಹಾಗೂ ಹಣ್ಣುಗಳಿಗೂ ಕವಿ ಹೇಗೆ ಸಂಬಂಧಗಳನ್ನು ಕಲ್ಪಿಸಿದ್ದಾನೆ ? ವಿವರಿಸಿ . “
ಮಗು ಮತ್ತು ಹಣ್ಣುಗಳು ‘ ಎಂಬ ಕವಿತೆಯಲ್ಲಿ ಮಗುವಿನ ವ್ಯಕ್ತಿತ್ವಕ್ಕೂ ಮತ್ತು ಹಣ್ಣುಗಳ ಗುಣ – ರುಚಿಗಳಿಗೂ ಸಂಬಂಧ ಕಲ್ಪಿಸಿ ಆ ನೆಲೆಯಲ್ಲಿ ಮಗುವಿನ ವ್ಯಕ್ತಿತ್ವವು ವಿಕಸನಗೊಳ್ಳಬೇಕೆಂದು ಕವಿಯು ಆಶಿಸಿದ್ದಾರೆ , ಬಾಳೆಹಣ್ಣಿನ ಬಾಗುವಿಕೆ ಕಿತ್ತಲೆ – ಮೂಸಂಬಿ ರಸಪೂರಿ ಹಣ್ಣುಗಳ ಹುಳಿ – ಸಿಹಿ ಸಮಸೂತ್ರವನ್ನು ಮಗುವು ಕಲಿಯಲೆಂದಿದ್ದಾರೆ .
ಅಲ್ಲದೆ ಕಲ್ಲಂಗಡಿ , ಅಂಜೂರ , ದಾಳಿಂಬೆ , ದ್ರಾಕ್ಷಿಗಳ ಗುಣವೂ ಮಗುವಿನ ವ್ಯಕ್ತಿತ್ವವನ್ನು ತುಂಬಬೇಕು . ಮಗುವಿನ ವ್ಯಕ್ತಿತ್ವ ಸೇಬಿನ ಬೆಲೆಯಂತೆ ಗಗನಮುಖಿ ಯಾಗದೆ , ಎಲ್ಲರಿಗೂ ದಕ್ಕುವ ಎಲಚಿಯಂತೆ ಬಾಳಬೇಕೆಂದು ಹೇಳಿರುವ ಕವಿಯು ಮಗುವನ್ನು ಹಣ್ಣಿನಂಗಡಿಯ ೦ ತಾಗ ಬೇಕೆ ೦ ದಿದ್ದಾರೆ .
ಹಣ್ಣುಗಳ ವಿವಿಧ ಗುಣಗಳು ಮಗುವಿನ ವ್ಯಕ್ತಿತ್ವದಲ್ಲಿ ಮೇಲೆಸಿದ ಮೌಲ್ಯವಾಗಬೇಕೆಂಬುದು ಕವಿಯ ಆಶಯ ವಾಗಿದೆ .
ಸಂದರ್ಭ ಸೂಚಿಸಿ , ಸ್ವಾರಸ್ಯವನ್ನು ವಿವರಿಸಿ