ಪ್ರಥಮ ಪಿಯುಸಿ ಕನ್ನಡ ಮಹಾತ್ಮರ ಗುರು ನೋಟ್ಸ್ | Mahatmara Guru Notes 1st PUC Kannada

ಪ್ರಥಮ ಪಿಯುಸಿ ಕನ್ನಡ ಮಹಾತ್ಮರ ಗುರು ನೋಟ್ಸ್ | Mahatmara Guru Notes 1st PUC Kannada

Mahatmara Guru Notes in Kannada, ಮಹಾತ್ಮರ ಗುರು notes, mahatma guru kannada notes with Questions and Answers Pdf, Summary,ಪ್ರಥಮ ಪಿ.ಯು.ಸಿ ಮಹಾತ್ಮರ ಗುರು ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 1st PUC Mahatmara Guru Kannada Notes Question Answer Summary Mcq Pdf Download Kannada Medium Karnataka State Syllabus Kseeb Solutions For Class 11 Kannada Chapter 6 Notes 1st Puc Kannada 6th Lesson Notes Mahatmara Guru Class 11 Kannada Mahatmara Guru Lesson Notes 1st PUC Kannada, 1st Puc Kannada 6th Chapter Mahatmara Guru Notes

Mahatmara Guru Notes in Kannada

Spardhavani Telegram

ಲೇಖಕರ ಪರಿಚಯ

ಮುಗಳವಳ್ಳಿ ಕೇಶವ ಧರಣಿ

ಜನನ : 1956

ಸ್ಥಳ : ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಮುಗಳವಳ್ಳಿ

ಪ್ರೌಢಪ್ರಬಂಧ : ರಸ್ತೆ ಸುರಕ್ಷತೆ : ಸಮಸ್ಯೆಗಳು ಮತ್ತು ಪರಿಹಾರಗಳು

ರಸ್ತೆ ಸುರಕ್ಷತೆ : ಸಮಸ್ಯೆಗಳು ಮತ್ತು ಪರಿಹಾರಗಳು ‘ ಎಂಬ ಪ್ರೌಢಪ್ರಬಂಧಕ್ಕೆ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ

ಕೃತಿಗಳು :

  • ಅಂಬೇಡ್ಕರ್ ಅಮರವಾಣಿ
  • ರಸ್ತೆ ಅಪಘಾತಗಳನ್ನು ತಪ್ಪಿಸುವುದು ಹೇಗೆ ?
  • ರಸ್ತೆ ಸುರಕ್ಷತೆ ಮಕ್ಕಳಿಗೆ ಕಲಿಸೋಣ
  • ಮೂಢನಂಬಿಕೆಗಳು
  • ವೈಚಾರಿಕತೆ
  • ಜೀವನ ರಕ್ಷೆ

Mahatmara Guru Notes in Kannada PDF

ಪ್ರಥಮ ಪಿಯುಸಿ ಕನ್ನಡ ಮಹಾತ್ಮರ ಗುರು ನೋಟ್ಸ್ | Mahatmara Guru Notes 1st PUC Kannada
ಪ್ರಥಮ ಪಿಯುಸಿ ಕನ್ನಡ ಮಹಾತ್ಮರ ಗುರು ನೋಟ್ಸ್ | Mahatmara Guru Notes 1st PUC Kannada

ಒಂದು ವಾಕ್ಯದಲ್ಲಿ ಉತ್ತರಿಸಿ Mahatmara Guru Notes in Kannada

ಶೋಷಿತ ಜನಾಂಗದವರ ಬಾಳಿನಲ್ಲಿ ನೈತಿಕ ಧೈರ್ಯದ ನಂದಾದೀಪ ಹಚ್ಚಿದವರು ಯಾರು ?

ಕುದುಲ್ ರಂಗರಾಯರು ಶೋಷಿತ ಜನಾಂಗದವರ ಬಾಳಿನಲ್ಲಿ ನೈತಿಕ ಧೈರ್ಯದ ನಂದಾದೀಪವನ್ನು ಹಚ್ಚಿದ ಮಹಾತ್ಮರು .

ಬಡವರ ವಕೀಲರೆಂದು ಪ್ರಸಿದ್ಧರಾದವರು ಯಾರು ?

ಕುದುಲ್ ರಂಗರಾವ್ ಅವರು ಬಡವರ ವಕೀಲರೆಂದು ಪ್ರಸಿದ್ಧರಾದರು .

ರಂಗರಾವ್‌ ಸ್ಥಾಪಿಸಿದ ಸಂಸ್ಥೆಯ ಹೆಸರೇನು ?

ರಂಗರಾವ್ ಡಿ.ಸಿ.ಎಂ. ( ಡಿಪ್ರೆಸ್ ಕ್ಲಾಸಸ್ ಮಿಷನ್ ) ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದರು .

ರಂಗರಾವ್ ಕೈಗಾರಿಕಾ ತರಬೇತಿ ಶಾಲೆಯನ್ನು ಎಲ್ಲಿ ಸ್ಥಾಪಿಸಿದರು ?

ಅವರು ದಲಿತರಿಗೆ ವೃತ್ತಿಪರ ಶಿಕ್ಷಣ ನೀಡಲು ಶೇಡಿಗುಡ್ಡೆ ಎಂಬಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆಯನ್ನು ಸ್ಥಾಪಿಸಿದರು .

ರಂಗರಾವ್ ಕೋರ್ಟ್ ಹಿಲ್ಸ್‌ನಲ್ಲಿ ಯಾವ ಸಂಘ ಸ್ಥಾಪಿಸಿದರು ?

ಅವರು ದಲಿತರ ಆರ್ಥಿಕಾಭಿವೃದ್ಧಿ ಮತ್ತು ಸಹಕಾರ ಮನೋವೃತ್ತಿ ಬೆಳವಣಿಗೆಗಾಗಿ ಕೋರ್ಟ್ ಹಿಲ್ಸ್‌ನಲ್ಲಿ ‘ ‘ ಆದಿ ದ್ರಾವಿಡ ಸಹಕಾರ ಸಂಘ’ವನ್ನು ಸ್ಥಾಪಿಸಿದರು .

ಸರ್ಕಾರ ರಂಗರಾವ್ ಅವರಿಗೆ ನೀಡಿದ ಬಿರುದು ಯಾವುದು ?

ಸರ್ಕಾರವು ರಂಗರಾವ್ ಅವರಿಗೆ ‘ ರಾವ್ ಬಹದ್ದೂರ್ ‘ ಎಂಬ ಬಿರುದನ್ನು ನೀಡಿತು .

Mahatmara Guru Notes in Kannada 1st puc

ಮಹಾತ್ಮರ ಗುರು Notes | Mahatmara Guru Notes in Kannada
ಮಹಾತ್ಮರ ಗುರು Notes | Mahatmara Guru Notes in Kannada

2-3 ವಾಕ್ಯಗಳಲ್ಲಿ ಉತ್ತರಿಸಿ Mahatmara Guru Notes in Kannada

ಸಾಮಾಜಿಕ ಸುಧಾರಣಾ ಚಳವಳಿಯ ಪ್ರಮುಖ ನಾಯಕರನ್ನು ಹೆಸರಿಸಿ .

ಭಾರತದಲ್ಲಿ ಆರಂಭವಾದ ಸಾಮಾಜಿಕ ಸುಧಾರಣಾ ಚಳವಳಿಯ ಪ್ರಮುಖ ನಾಯಕರೆಂದರೆ ಮಹಾತ್ಮ ಜ್ಯೋತಿಬಾ ಪುಲೆ , ಶಾಹು ಮಹಾರಾಜ್ , ನಾರಾಯಣ ಗುರು , ನಾಲ್ವಡಿ ಕೃಷ್ಣರಾಜ ಒಡೆಯರ್‌ , ಮಹಾತ್ಮಗಾಂಧಿ , ಬಾಬಾ ಸಾಹೇಬ್ ಅಂಬೇಡ್ಕರ್‌ ಮೊದಲಾದವರು

ಮಂಗಳೂರು ಜಿಲ್ಲಾ ಕೋರ್ಟಿನಲ್ಲಿ ನಡೆದ ಘಟನೆ ಯಾವುದು ?

1888 ರಲ್ಲಿ ಮಂಗಳೂರು ಜಿಲ್ಲಾ ಕೋರ್ಟಿನ ಪೇದೆ ಕೆಲಸಕ್ಕೆ ಬೆಂದೂರು ಬಾಬು ಎಂಬ ಅಸ್ಪೃಶ್ಯ ವ್ಯಕ್ತಿ ಅರ್ಜಿ ಸಲ್ಲಿಸಿದನು . ಆಂಗ್ಲ ನ್ಯಾಯಾಧೀಶರು ಅವನನ್ನು ಕೆಲಸಕ್ಕೆ ನೇಮಿಸಿದರು .

ಇದರಿಂದ ಕುಪಿತರಾದ ಮೇಲ್ಪಾತಿಯವರು ನ್ಯಾಯಾಲಯವನ್ನು ಬಹಿಷ್ಕರಿಸಿದರಲ್ಲದೆ , ನ್ಯಾಯಾಧೀಶರಿಗೆ ಕೊಲೆ ಬೆದರಿಕೆ ಹಾಕಿದರು.

ರಂಗರಾವ್ ಅವರ ಸಮಾಧಿಯ ಮೇಲೆ ಬರೆದ ಹೇಳಿಕೆ ಯಾವುದು ?

ರಂಗರಾವ್ ಅವರ “ ನನ್ನ ಶಾಲೆಯಲ್ಲಿ ಕಲಿತ ದಲಿತ ಜನಾಂಗದ ಮಕ್ಕಳು ವಿದ್ಯಾವಂತರಾಗಿ , ದೊಡ್ಡವರಾಗಿ , ಸರ್ಕಾರಿ ನೌಕರಿಗೆ ಸೇರಿ , ನಮ್ಮೂರ ರಸ್ತೆಗಳಲ್ಲಿ ಕಾರಿನಲ್ಲಿ ಓಡಾಡಬೇಕು .

ಮಹಾತ್ಮರ ಗುರು notes

ಆಗ ರಸ್ತೆಯಲ್ಲಿ ಏಳುವ ಧೂಳು ನನ್ನ ತಲೆಗೆ ತಾಗಬೇಕು , ಆಗ ನನ್ನ ಜನ್ಮ ಸಾರ್ಥಕವಾಗುತ್ತದೆ ” ಎಂಬ ಹೇಳಿಕೆಯನ್ನು ಅವರ ಸಮಾಧಿಯ ಮೇಲೆ ಬರೆಯಲಾಗಿದೆ .

ರಂಗರಾವ್ ಅವರು ಪ್ರಾರಂಭಿಸಿದ ಹೆಣ್ಣುಮಕ್ಕಳ ಹಾಸ್ಟೆಲ್‌ನಿಂದ ಉಂಟಾದ ಪ್ರಯೋಜನವೇನು ?

ರಂಗರಾವ್ ಅವರು ದಲಿತರ ವಿಮೋಚನೆ ಆಗಬೇಕಾದರೆ ಮೊದಲು ದಲಿತ ಮಹಿಳೆಯರ ವಿಮೋಚನ ಆಗಬೇಕೆಂಬುದನ್ನು ಅರಿತಿದ್ದರು .

ಆದ್ದರಿಂದ ಅವರು ದಲಿತ ಮಹಿಳೆಯ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡಿದರಲ್ಲದೆ , ದೂರದ ಹಳ್ಳಿಗಳಿಂದ ಬರುವ ಹೆಣ್ಣುಮಕ್ಕಳಿಗೆ ನಗರದ ಶೇಡಿಗುಡ್ಡೆಯಲ್ಲಿ ಹಾಸ್ಟೆಲ್ ತೆರೆದರು . ಇದರಿಂದ ದಲಿತ ಹೆಣ್ಣುಮಕ್ಕಳಿಗೆ ಶಿಕ್ಷಣ – ರಕ್ಷಣೆ ಎರಡೂ ದೊರೆಯಿತು .

ರಂಗರಾವ್ ಅಂತರ್ಜಾತಿ ವಿವಾಹಕ್ಕೆ ನೀಡಿದ ಪ್ರೋತ್ಸಾಹ ಗಾಂಧಿಯವರ ಮೇಲೆ ಬೀರಿದ ಪ್ರಭಾವ ಏನು ?

ರಂಗರಾವ್ ಅವರು ಅಂತರ್ಜಾತಿ ವಿವಾಹವನ್ನು ಪ್ರೋತ್ಸಾಹಿಸುವ ಸಲುವಾಗಿ ತಮ್ಮ ಕುಟುಂಬದಲ್ಲೇ ಅವಕಾಶ ನೀಡಿ ತಮ್ಮ ಮಗಳು ರಾಧಾಬಾಯಿಯನ್ನು ಮದ್ರಾಸಿನ ಡಾ .

ಸುಬ್ರಾಯನ್‌ಗೆ ಕೊಟ್ಟು ಮದುವೆ ಮಾಡಿದರು . ಇದು ಗಾಂಧೀಜಿಯವರ ಮೇಲೆ ಪ್ರಭಾವ ಬೀರಿದ್ದರಿಂದ ಗಾಂಧೀಜಿಯವರು ತಮ್ಮ ಮಗನಿಗೆ ರಾಜಾಜಿಯವರ ಮಗಳ ಜೊತೆ ಮದುವೆ ಮಾಡಿ ಅಂತರ್ಜಾತಿ ವಿವಾಹಕ್ಕೆ ಅವಕಾಶ ಒದಗಿಸಿದರು .

ರಂಗರಾವ್ ರಾಜಕೀಯ ಮೀಸಲಾತಿಗಾಗಿ ಹೇಗೆ ಪ್ರಯತ್ನಿಸಿದರು ?

ರಂಗರಾವ್ ದಕ್ಷಿಣ ಕನ್ನಡ ಜಿಲ್ಲೆಯ ದಲಿತ ಸಮುದಾಯಕ್ಕೆ ರಾಜಕೀಯ ಮೀಸಲಾತಿ ಒದಗಿಸಲು , ಸ್ಥಳೀಯ ಸಂಸ್ಥೆ ಗಳಾದ ಜಿಲ್ಲಾ ಬೋರ್ಡ್ ಮತ್ತು ಪುರಸಭೆಗಳಲ್ಲಿ ದಲಿತ ಜನಾಂಗದ ಸದಸ್ಯರಿಗೆ ಅವಕಾಶ ನೀಡಬೇಕೆಂದು ಒತ್ತಾಯಿಸಲು ಜನರನ್ನು ಸಂಘಟಿಸಿ ಹೋರಾಟಕ್ಕಿಳಿದರು .

ಅವರ ಅನವರತ ಹೋರಾಟದ ಫಲವಾಗಿ ಅಂಗರ ಮಾಸ್ತರ್ ಮತ್ತು ಗೋವಿಂದ ಮಾಸ್ತರ್ ಎಂಬ ಇಬ್ಬರು ದಲಿತರು ಪ್ರಪ್ರಥಮ ಬಾರಿಗೆ ಸ್ಥಳೀಯ ಸಂಸ್ಥೆಗಳಿಗೆ ಸದಸ್ಯರಾದರು .

ಡಿ.ಸಿ.ಎಂ. ಸಂಸ್ಥೆಗೆ ಯಾರು ಯಾರು ಭೇಟಿ ನೀಡಿದ್ದರು ?

ಅಂದಿನ ಕಾಲದಲ್ಲಿ ಬೆಂಗಳೂರಿಗೆ ಆಗಮಿಸುತ್ತಿದ್ದ ಪ್ರಮುಖರೆಲ್ಲರೂ ತಪ್ಪದೇ ಡಿ.ಸಿ.ಎಂ. ಸಂಸ್ಥೆಗೆ ಭೇಟಿ ನೀಡುತ್ತಿದ್ದರು . ಗುರುದೇವ ರವೀಂದ್ರನಾಥ ಠಾಗೋರ್ , ದೀನಬಂಧು ಸಿ.ಎಸ್ .

ಆಂಡೂಸ್ , ಡಾ . ಅನಿಬೆಸೆಂಟ್ , ಗೋಪಾಲಕೃಷ್ಣ ಗೋಖಲೆ ಮತ್ತು ಜಿ.ಕೆ. ದೇವಧರ್ ಮುಂತಾದ ಪ್ರಮುಖರು ಡಿ.ಸಿ.ಎಂ. ಸಂಸ್ಥೆಗೆ ಬೇಟಿ ನೀಡಿ ಕುದುಲ್ ರಂಗರಾವ್ ಅವರ ಮಾನವೀಯ ಸೇವೆಯನ್ನು ಕಣ್ಣಾರೆ ಕಂಡು ಅಭಿನಂದಿಸಿದ್ದಾರೆ .

ರಂಗರಾವ್ ತಮ್ಮ ಉಯಿಲಿನಲ್ಲಿ ಏನು ಬರೆದಿದ್ದರು ?

ಗಂಗರಾವ್ ಅವರು ತಮ್ಮವಿಲ್‌ನಲ್ಲಿ ಅಸ್ಪೃಶ್ಯ ಜನಾಂಗದಲ್ಲೇ ಅತಿಯಾಗಿ ಹಿಂದುಳಿದವರೆನಿಸಿದ ಜಾಡಮಾಲಿಗಳು ನನ್ನ ಪಾರ್ಥಿವ ಶರೀರಕ್ಕೆ ಶವಸಂಸ್ಕಾರ ಮಾಡಬೇಕು . ಆಗ ಮಾತ್ರ ನನಗೆ ಚಿರಶಾಂತಿ ದೊರೆಯುವುದು ‘ ಎಂದು ಬರೆದಿದ್ದರು .

ಗಾಂಧೀಜಿಯವರು ರಂಗರಾವ್ ಬಗ್ಗೆ ಏನು ಹೇಳಿದರು ?

ಗಾಂಧೀಜಿಯವರು ” ಪೂಜ್ಯ ರಂಗರಾವ್‌ರಿಂದ ಸಾರ್ವಜನಿಕ ಸೇವಾನಿಷ್ಠೆಯನ್ನು ಮನಗಾಣಿಸಿಕೊಂಡೆ . ಅವರು ನಮಗೆ ಒಂದು ಉತ್ತಮ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ . ಅಸ್ಪೃಶ್ಯ ಜನಾಂಗದ ಪುನರುದ್ಧಾರ ಕಾರ್ಯದಲ್ಲಿ ಮುನ್ನಡೆದ ರಂಗರಾವ್ ನನಗೆ ಸ್ಫೂರ್ತಿ , ಮಾರ್ಗದರ್ಶಕ , ನನ್ನ ಗುರುಗಳು ‘ ಎಂದು ಹೇಳಿದ್ದಾರೆ.

Mahatmara Guru Notes in Kannada pdf notes

ಪ್ರಥಮ ಪಿಯುಸಿ ಕನ್ನಡ ಮಹಾತ್ಮರ ಗುರು ನೋಟ್ಸ್ | Mahatmara Guru Notes 1st PUC Kannada
ಪ್ರಥಮ ಪಿಯುಸಿ ಕನ್ನಡ ಮಹಾತ್ಮರ ಗುರು ನೋಟ್ಸ್ | Mahatmara Guru Notes 1st PUC Kannada

ರಂಗರಾವ್ ಸಮಾಧಿಯ ಮೇಲೆ ಬರೆದ ಹೇಳಿಕೆ ಯಾವುದು?

ರಂಗರಾವ್ ಅವರ ಸಮಾಧಿಯ ಮೇಲೇ “ನನ್ನ ಶಾಲೆಯಲ್ಲಿ ಕಲಿತ ದಲಿತ ಮಕ್ಕಳು ವಿದ್ಯಾವಂತರಾಗಿ ,ದೊಡ್ಡವರಾಗಿ ,ಸರಕಾರಿ ನೌಕರಿಗೆ ಸೇರಿ ನಮ್ಮೂರ ರಸ್ತೆಗಳಲ್ಲಿ ಓಡಾಡಬೇಕು ಆಗ ರಸ್ತೆಯಲ್ಲಿ ಏಳುವ ಧೂಳು ನನ್ನ ತಲೆಗೆ ತಾಕಬೇಕು ಆಗ ನನ್ನ ಜನ್ಮ ಸಾಥ್ರಕವಾಗುತ್ತದೆ ಎಂದು ಬರೆಯಲಾಗಿದೆ

Mahatmara Guru Notes in Kannada

ಪ್ರಥಮ ಪಿಯುಸಿ ಕನ್ನಡ ಮಹಾತ್ಮರ ಗುರು ನೋಟ್ಸ್ | Mahatmara Guru Notes 1st PUC Kannada
ಪ್ರಥಮ ಪಿಯುಸಿ ಕನ್ನಡ ಮಹಾತ್ಮರ ಗುರು ನೋಟ್ಸ್ | Mahatmara Guru Notes 1st PUC Kannada

ಇತರೆ ವಿಷಯಗಳನ್ನು ಓದಿರಿ

Leave a Reply

Your email address will not be published. Required fields are marked *