jyothishya artha purnavo | ಜ್ಯೋತಿಷ್ಯವು ಅರ್ಥಪೂರ್ಣವೋ? ಅರ್ಥರಹಿತವೋ?

jyothishya artha purnavo | ಜ್ಯೋತಿಷ್ಯವು ಅರ್ಥಪೂರ್ಣವೋ? ಅರ್ಥರಹಿತವೋ?

jyothishya artha purnavo , ಜ್ಯೋತಿಷ್ಯವು ಅರ್ಥಪೂರ್ಣವೋ? ಅರ್ಥರಹಿತವೋ?,Jyotishya Artharahitavo? 1st PUC kannada notes, Pdf, Summary, Chapter 18

jyothishya artha purnavo

ಕವಿ ಪರಿಚಯ

ಡಾ । ಎಚ್ . ನರಸಿಂಹಯ್ಯ

ಜನನ : 1930

ಸ್ಥಳ : ಇಂದಿನ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ‘ ಹೊಸೂರು ‘ ಎಂಬ ಹಳ್ಳಿಯಲ್ಲಿ ಜನಿಸಿದರು .

ಆತ್ಮಕಥನ : ‘ ಹೋರಾಟದ ಹಾದಿ ‘

ನಿಧನ :2004

ಒಂದು ವಾಕ್ಯದಲ್ಲಿ ಉತ್ತರಿಸಿ :

ಜ್ಯೋತಿಷ್ಯದ ಉಗಮವು ಎಲ್ಲಿ ಕಂಡುಬರುತ್ತದೆ ?

 ಪ್ರಾಚೀನ ಜ್ಯೋತಿಷ್ಯದ ಉಗಮವು ಖಗೋಳಶಾಸ್ತ್ರದಲ್ಲಿ ಕಂಡುಬರುತ್ತದೆ .

ಯಾವುದು ಹಾಸ್ಯಾಸ್ಪದ ಸಂಗತಿ ?

ಮನುಷ್ಯನ ಎಲ್ಲ ಗುಣಗಳನ್ನು ಗ್ರಹಗಳಿಗೆ ಆರೋಪಿಸುವುದು ಹಾಸ್ಯಾಸ್ಪದ ಸಂಗತಿಯಾಗಿದೆ . ಜಾತಕಗಳನ್ನು ಹೇಗೆ ಬರೆಯಲಾಗುತ್ತದೆ ? ವ್ಯಕ್ತಿ ಹುಟ್ಟಿದಾಗ ಕಂಡುಬರುವ ಗ್ರಹಗತಿಗಳ ಆಧಾರದಿಂದ ಜಾತಕಗಳನ್ನು ಬರೆಯಲಾಗುತ್ತದೆ .

ಜ್ಯೋತಿಷಿಗಳ ಭವಿಷ್ಯವಾಣಿ ಓದಲು ಹೇಗಿರುತ್ತದೆ ?  

ಜ್ಯೋತಿಷಿಗಳ ಭವಿಷ್ಯವಾಣಿ ಓದಲು ತಮಾಷೆಯಾಗಿರುತ್ತದೆ

ಜನ ನಿರಾಶೆ , ಸಮಸ್ಯೆಗಳಲ್ಲಿದ್ದಾಗ ಯಾವುದರ ಮೊರೆ ಹೋಗುತ್ತಾರೆ ?

ಮೂಢನಂಬಿಕೆಗಳು ವಾಯು , ಜಲಮಾಲಿನ್ಯಕ್ಕಿಂತ ಹೆಚ್ಚು ಅಪಾಯಕಾರಿ .

ಜ್ಯೋತಿಷ್ಯ ಮುಗ್ಧ ಜನರನ್ನು ಹೇಗೆ ಶೋಷಿಸುತ್ತದೆ ?

 ಜ್ಯೋತಿಷ್ಯ ಮುಗ್ಧ ಜನರನ್ನು ಭಯದಲ್ಲಿರಿಸಿ , ಅವರ ಸುಲಿಗೆಗೆ ಕಾರಣವಾಗುತ್ತದೆ .

ವಾಯು , ಜಲಮಾಲಿನ್ಯಕ್ಕಿಂತ ಯಾವುದು ಹೆಚ್ಚು ಅಪಾಯಕಾರಿಯಾಗಿರುತ್ತದೆ ?

ಮೂಢನಂಬಿಕೆಗಳು ವಾಯು , ಜಲಮಾಲಿನ್ಯಕ್ಕಿಂತ ಹೆಚ್ಚು ಅಪಾಯಕಾರಿ .

ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ :

ವಿಜ್ಞಾನದ ಸಿದ್ಧಾಂತಗಳು ಹೇಗೆ ರೂಪುಗೊಳ್ಳುತ್ತವೆ ?

ವಿಜ್ಞಾನದ ಎಲ್ಲ ಸಿದ್ಧಾಂತಗಳು , ನಿಯಮಗಳು ಹೊಸ ಸಂಶೋಧನೆಯ ಬೆಳಕಿನಲ್ಲಿ ಪುನರ್‌ರಚಿತವಾಗುತ್ತವೆ . ವಸ್ತುನಿಷ್ಠತೆ , ಪುನರಾವೃತ್ತಿಯ ಸಾಮರ್ಥ್ಯ , ದೃಢತೆ , ವಿಶ್ವಮಾನ್ಯತೆ – ಈ ಎಲ್ಲಾ ಅಂಶಗಳ ಮೇಲೆ ವಿಜ್ಞಾನದ ಸಿದ್ಧಾಂತಗಳು ರೂಪುಗೊಳ್ಳ ಬೇಕಿದೆ .

2ಜ್ಯೋತಿಷ್ಯದ ಪ್ರಕಾರ ಗ್ರಹಗಳನ್ನು ?ಅವುಗಳು ಯಾವುವು ?

 ಜ್ಯೋತಿಷ್ಯದ ಪ್ರಕಾರ ಒಂಬತ್ತು ಗ್ರಹಗಳಿವೆ . ಸೂರ್ಯ , ಚಂದ್ರ , ರಾಹು , ಕೇತು , ಬುಧ , ಶುಕ್ರ , ಮಂಗಳ , ಗುರು ಮತ್ತು ಶನಿಗಳೇ ಈ ನವಗ್ರಹಗಳು ,

ರಾಹುಕಾಲ , ಗುಳಿಕಕಾಲ ಮತ್ತು ಯಮಗಂಡಕಾಲಗಳ ಬಗ್ಗೆ ಲೇಖಕರ ಅಭಿಪ್ರಾಯವೇನು ?

ಜ್ಯೋತಿಷ್ಯವು ರಾಹುಕಾಲ , ಗುಳಿಕಕಾಲ , ಯಮಗಂಡಕಾಲ , – ಈ ಮೂರು ಅಂಶಗಳನ್ನು ಆಡಿಭಾಯವಾಗಿ ಹೊಂದಿದೆ . ಆದರೆ ಜ್ಯೋತಿಷಿ ಹೇಳುವ ನವಗ್ರಹಗಳಲ್ಲಿ ರಾಹು , ಕೇತುಗಳು ಅಸ್ತಿತ್ವದಲ್ಲಿಯೇ ಇಲ್ಲದಿರುವಾಗ ರಾಹುಕಾಲ , ಗುಳಿಕಕಾಲ , ಯಮಗಂಡ ಕಾಲಗಳಿಗೆ ಸಹಜವಾಗಿಯೇ ಯಾವ ಅರ್ಥವೂ ಇಲ್ಲವೆಂಬುದು ಲೇಖಕರ ಅಭಿಪ್ರಾಯವಾಗಿದೆ .

ಬುದ್ಧನು ‘ ವಿನಯ ಪಿಟಿಕಾ ‘ ಗ್ರಂಥದಲ್ಲಿ ಯಾರಿಂದ ದೂರವಿರಬೇಕೆಂದು ಎಚ್ಚರಿಸಿದ್ದಾನ ?

ನಡೆಸುತ್ತಾರೋ ಅವರಿಂದ ದೂರವಿರಬೇಕು ‘ ಎಂದು ಎಚ್ಚರಿಸಿದ್ದಾನೆ . ಬುದ್ದನು ತನ್ನ ವಿನಯ ಪಿಟಿಕಾ ‘ ಎಂಬ ಗ್ರಂಥದಲ್ಲಿ ” ಯಾರು ನಕ್ಷತ್ರಗಳ ಲೆಕ್ಕಾಚಾರದಂತಹ ತಂತ್ರಗಳಿಂದ ಜೀವನ

 ಐದಾರು ವಾಕ್ಯಗಳಲ್ಲಿ ಉತ್ತರಿಸಿ :

ಪ್ರಕೃತಿಯ ಘಟನೆಗಳು ಆದಿ ಮಾನವನ ಮನಸ್ಸಿನ ಮೇಲೆ ಉಂಟುಮಾಡಿದ ಪರಿಣಾಮಗಳೇನು ?

ಪ್ರಕೃತಿಯ ಘಟನೆಗಳು ಆದಿ ಮಾನವನಿಗೆ ಭಯ – ಭಕ್ತಿಯನ್ನುಂಟು ಮಾಡಿದ್ದು ಅವನ ಬಹುಪಾಲು ನಂಬಿಕೆಗಳು ಈ ಹಿನ್ನೆಲೆಯಲ್ಲಿಯೇ ರೂಪುಗೊಂಡಿರಬೇಕೆಂದು ಎಚ್ .

ನರಸಿಂಹಯ್ಯನವರು ಅಭಿಪ್ರಾಯಪಟ್ಟಿದ್ದಾರೆ . ಅವರು ಹೇಳಿರುವಂತೆ ಮಿಂಚು – ಗುಡುಗುಗಳು ಅವನಿಗೆ ಸಾಕಷ್ಟು ಭಯವನ್ನು ಉಂಟುಮಾಡಿರಬೇಕು . ಮಧ್ಯಾಹ್ನದಲ್ಲಿ ಗ್ರಹಣಗಳು ನಡೆದು , ಕತ್ತಲು ಮುಸುಕಿದಾಗ ಧೈರ್ಯಶಾಲಿಯನಿಸಿದವನಲ್ಲೂ ನಡುಕ ಉಂಟಾಗಿರಬಹುದು .

ಭೂಕಂಪವು ಅವನಲ್ಲಿ ದಿಗಿಲನ್ನು ತಂದಿರಬಹುದು . ಕನಸು , ರೋಗ , ಸಾವು ಇವೆಲ್ಲವೂ ಅವನಿಗೆ ರಹಸ್ಯವಾಗಿ ತೋರಿರಬಹುದೆಂದು ಲೇಖಕರು ಹೇಳಿದ್ದಾರೆ .

 ಜ್ಯೋತಿಷ್ಯ ಏಕೆ ವಿಜ್ಞಾನವಾಗಲಾರದು ? ವಿವರಿಸಿ ,

ಯಾವುದೇ ಒಂದು ವಿಷಯವು ವಿಜ್ಞಾನವೆನಿಸಿಕೊಳ್ಳಬೇಕಾದರೆ ಅದು ವಸ್ತುನಿಷ್ಠತೆ , ಪುನರಾವೃತ್ತಿಯ ಸಾಮರ್ಥ್ಯ , ದೃಢತೆ , ನಿಖರತೆ , ವಿಶ್ವಮಾನ್ಯತೆ – ಈ ಎಲ್ಲ ರೀತಿಯ ಅಂಶಗಳನ್ನು ತೃಪ್ತಿಪಡಿಸಬೇಕಾಗುತ್ತದೆ .

ಜ್ಯೋತಿಷ್ಯವು ಅರ್ಥಪೂರ್ಣವೋ? ಅರ್ಥರಹಿತವೋ?

ಆದರೆ ಜ್ಯೋತಿಷ್ಯ ಹೇಳುವ ನವಗ್ರಹಗಳಲ್ಲಿ ರಾಹು , ಕೇತುಗಳು , ಅಸ್ತಿತ್ವದಲ್ಲೇ ಇಲ್ಲ . ಸೂರ್ಯ – ಚಂದ್ರರೂ ಗ್ರಹಗಳಲ್ಲ . ಅಲ್ಲದೆ ಭೂಮಿಯಿಂದ ಮಿಲಿಯನ್‌ಗಟ್ಟಲೆ ದೂರದಲ್ಲಿರುವ ಗ್ರಹಗಳು ಮನುಷ್ಯನ ನಡೆವಳಿಕೆಯ ಮೇಲೆ ಪ್ರಭಾವ ಬೀರುತ್ತದೆಂಬುದೂ ಹಾಸ್ಯಾಸ್ಪದ ಜ್ಯೋತಿಷ್ಯವು ರಾಹುಕಾಲ , ಗುಳಿಕಕಾಲ , ಯಮಗಂಡ ಕಾಲಗಳನ್ನೂ ಅಡಿಪಾಯವಾಗಿರಿಸಿಕೊಂಡಿದೆ .

ಅಸ್ತಿತ್ವದಲ್ಲೇ ಇರದ ರಾಹು – ಕೇತುಗಳಿಂದಾಗಿ ರಾಹುಕಾಲ ಮುಂತಾದವುಗಳಿಗೆ ಸಹಜವಾಗಿಯೇ ಯಾವ ಅರ್ಥವೂ ಇಲ್ಲ . ಗ್ರಹಗಳ ಗತಿಯನ್ನು ಆಧರಿಸಿ ಜ್ಯೋತಿಷಿಗಳು ರಚಿಸುವ ಜಾತಕಗಳೂ ಸಹ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಇರುತ್ತವೆ . ನಿಖರತೆ ಇಲ್ಲದ ಈ ಬಗೆಯ ಜ್ಯೋತಿಷ್ಯವನ್ನು ವಿಜ್ಞಾನವನ್ನಲು ಸಾಧ್ಯವಿಲ್ಲ ಎನ್ನಬಹುದು .

ಸ್ವಾಮಿ ವಿವೇಕಾನಂದರು ಜ್ಯೋತಿಷ್ಯದ ಬಗ್ಗೆ ತಾಳಿರುವ ಅಭಿಪ್ರಾಯವೇನು ?

ಮನುಷ್ಯನ ಭವಿಷ್ಯದ ನಿರ್ಣಯಕ್ಕೆ ಅವನೇ ಕಾರಣ ಹೊರತು ಜ್ಯೋತಿಷ್ಯವಲ್ಲ ಎಂದು ದೃಢವಾಗಿ ನಂಬಿದ್ದ ಸ್ವಾಮಿ ವಿವೇಕಾನಂದರು ಜ್ಯೋತಿಷ್ಯದ ಬಗ್ಗೆ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ . ಅವರ ಮಾತಿನಲ್ಲಿ ಹೇಳುವುದಾದರೆ ” ನಕ್ಷತ್ರಗಳ ಪ್ರಭಾವ   

ನನ್ನ ಮೇಲೆ ಆಗುವುದಾದರೆ ಆಗಲಿ , ಅದು ನನ್ನ ಜೀವನದ ಮೇಲೆ ಪ್ರಭಾವ ಬೀರಿದರೆ ಅದಕ್ಕೆ ಯಾವ ಬೆಲೆಯೂ ಇಲ್ಲ . ಜ್ಯೋತಿಷ್ಯ ಮತ್ತು ಇತರ ಸಂಗತಿಗಳು ಸಾಮಾನ್ಯವಾಗಿ ದುರ್ಬಲ ಮನಸ್ಸಿನ ಗುರುತುಗಳು , ಇಂತಹವುಗಳು ಬದುಕಿನಲ್ಲಿ ಪ್ರಾಮುಖ್ಯ ಪಡೆದುಕೊಂಡ ಕೂಡಲೇ ವೈದ್ಯರನ್ನು ಕಂಡು ಉತ್ತಮ ಆಹಾರ ಮತ್ತು ವಿಶ್ರಾಂತಿಯನ್ನು ತೆಗೆದುಕೊಳ್ಳುವುದು ಒಳ್ಳೆಯದು .

ಇದು ವಿವೇಕಾನಂದರು ಜ್ಯೋತಿಷ್ಯದ ಬಗ್ಗೆ ತಾಳಿರುವ ಅಭಿಪ್ರಾಯವಾಗಿದೆ .

ಶಿಕ್ಷಣದ ಮುಖ್ಯ ಉದ್ದೇಶ ಏನಾಗಬೇಕು ?

ಶಿಕ್ಷಣದ ಮುಖ್ಯ ಉದ್ದೇಶ ಸಮಾಜದ ಸುಧಾರಣೆ ಎಂಬುದು ಸರ್ವವಿಧಿತ ಆದ್ದರಿಂದ ಅಧ್ಯಾಪಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು ಯಾವುದೇ ಶಿಕ್ಷಣ ಕ್ರಮದ ಮುಖ್ಯ ಉದ್ದೇಶವಾಗಬೇಕು .

ಪ್ರಶ್ನಿಸದ , ಪರಿಶೀಲಿಸದ ಯಾವುದನ್ನೂ ಒಪ್ಪಿಕೊಳ್ಳಬಾರದೆಂಬುದನ್ನು ಶಿಕ್ಷಣ ಹೇಳಿಕೊಡಬೇಕು , ಭಗವದ್ಗೀತೆ , ಬೈಬಲ್ ಅಥವಾ ಖುರಾನ್ ಆಗಿರಲಿ ಅವು ನಮ್ಮ ವೈಜ್ಞಾನಿಕ ಆಲೋಚನೆಗಳನ್ನು ತೃಪ್ತಿಪಡಿಸಬೇಕು – ಈ ದಿಸೆಯಲ್ಲಿ ಶಿಕ್ಷಣ ನೀಡಬೇಕೆಂದು ಡಾ ಏಚ್ಚೆನ್ ಹೇಳಿದ್ದಾರೆ .

ಜ್ಯೋತಿಷ್ಯವು ಅರ್ಥಪೂರ್ಣವೋ ಆರ್ಥರಹಿತವೋ ? ವಿಶ್ಲೇಷಿಸಿ .

ವೈಜ್ಞಾನಿಕ ವಿಚಾರಗಳನ್ನು ಸಂತೃಪ್ತಗೊಳಿಸದ ಜ್ಯೋತಿಷ್ಯವು ಎಂದೂ ವಿಜ್ಞಾನದಂತೆ ಅರ್ಥಪೂರ್ಣವೆನಿಸದು . ಅರ್ಥರಹಿತವಾದುದೆಂಬುದಕ್ಕೆ ಹಲವು ಪುರಾವೆಗಳನ್ನು ಒದಗಿಸಬಹುದು .

ಉದಾಹರಣೆಗೆ , ಅಸ್ತಿತ್ವದಲ್ಲಿರದ ರಾಹು – ಕೇತುಗಳನ್ನು ಜ್ಯೋತಿಷ್ಯವು ಗ್ರಹಗಳೆನ್ನುವುದು , ಸೂರ್ಯ ಒಂದು ನಕ್ಷತ್ರ , ಚಂದ್ರ ಭೂಮಿಯ ಉಪಗ್ರಹ ಆದರೂ ನವಗ್ರಹಗಳಲ್ಲಿ ಇವುಗಳಿಗೆ ಸ್ಥಾನವುಂಟು . ರಾಹುಕಾಲವೂ ಅರ್ಥಹೀನವೇ , ಏಕೆಂದರೆ ರಾಹು ಅಸ್ತಿತ್ವದಲ್ಲಿಲ್ಲ . ಇದಲ್ಲದೆ ಜ್ಯೋತಿಷಿಗಳು ಜಾತಕ ನೋಡಿ ಮಾಡಿಸಿದ ಮದುವೆಗಳು ಮುರಿದು ಬಿದ್ದಿವೆ .

Jyothishya Artha Purnavo

ಭೂಕಂಪ – ಚಂಡಮಾರುತಗಳಿಗೆ ಬಲಿಯಾಗುವ ಸಾವಿರಾರು ಜನರ ಜಾತಕ ಒಂದೇ ರೀತಿಯಾಗಿರಲು ಸಾಧ್ಯವಿಲ್ಲ . ಇಬ್ಬರು ಜ್ಯೋತಿಷಿಗಳ ನಡುವಿನ ಜಾತಕ ಫಲದಲ್ಲಿ ಸಾಮ್ಯತೆಯೇ ಇರದೆ ತಮಾಷೆ ಎನಿಸುತ್ತದೆ . ಈ ಮುಂತಾದ ಕಾರಣಗಳಿಂದಾಗಿ ಜ್ಯೋತಿಷ್ಯ ಅರ್ಥರಹಿತವನ್ನಬಹುದು .

ಸಂದರ್ಭ ಸೂಚಿಸಿ , ಸ್ವಾರಸ್ಯವನ್ನು ವಿವರಿಸಿ :

“ ರೈಲು ಹೊರಡಲು ಜ್ಯೋತಿಷ್ಯದ ಅನುಮತಿಯನ್ನು ಯಾರೂ ಕೇಳುವುದಿಲ್ಲ . ”

ಡಾ || ಎಚ್ . ನರಸಿಂಹಯ್ಯನವರು ಬರೆದಿರುವ ‘ ತೆರೆದ ಮನ ‘ ಕೃತಿಯಿಂದ ಆಯ್ದುಕೊಳ್ಳಲಾದ ‘ ಜ್ಯೋತಿಷ್ಯ – ಅರ್ಥಪೂರ್ಣವೋ ಅರ್ಥರಹಿತವೋ ? ‘ ಎಂಬ ವೈಚಾರಿಕ ಲೇಖನದಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ

ನರಸಿಂಹಯ್ಯನವರು ಜ್ಯೋತಿಷ್ಯವು ರಾಹುಕಾಲ , ಗುಳಿಕಕಾಲ ಮತ್ತು ಯಮಗಂಡಕಾಲಗಳನ್ನು ಅಡಿಪಾಯ ವಾಗಿರಿಸಿಕೊಂಡಿರುವುದನ್ನು ವಿಶ್ಲೇಷಿಸುತ್ತಾ , ಜ್ಯೋತಿಷ್ಯವು ರಾಹುಕಾಲದಲ್ಲಿ ಮದುವೆ , ಪ್ರಯಾಣವನ್ನು ನಿಷೇಧಿಸಿದೆ .

ಆದರೆ ವಾಸ್ತವವಾಗಿ ಎಷ್ಟೋ ವಿಮಾನಗಳು , ನೂರಾರು ರೈಲುಗಳು ರಾಹುಕಾಲದಲ್ಲಿಯೇ ನಿತ್ಯವೂ ಓಡಾಡುತ್ತಿವೆ .

ಅವುಗಳು ರಾಹುಕಾಲವನ್ನು ಕಾಯುವುದಿಲ್ಲ . ಅದೇ ರೀತಿ ರೈಲು ಹೊರಡಲು ಜ್ಯೋತಿಷ್ಯದ ಅನುಮತಿಯನ್ನು ಯಾರೂ ಕೇಳುವುದಿಲ್ಲ ಎಂದು ಹೇಳಿ , ಜ್ಯೋತಿಷ್ಯದ ಅಸ್ತಿತ್ವವನ್ನು ನಿರಾಕರಿಸಿರುವ ಸಂದರ್ಭವಿದಾಗಿದೆ .

 2 ) “ ಶೇ 90 ಕ್ಕೂ ಹೆಚ್ಚು ಜನರ ಮದುವೆಗಳು ಯಾವುದೇ ಜಾತಕವಿಲ್ಲದೆ ನಡೆಯುತ್ತವೆ .

” ಡಾ || ಎಚ್ . ನರಸಿಂಹಯ್ಯನವರ ‘ ಜ್ಯೋತಿಷ್ಯ – ಅರ್ಥಪೂರ್ಣವೋ ಅರ್ಥರಹಿತವೋ ? ‘ ಎಂಬ ಲೇಖನದಿಂದ ಈ ಲೇಖಕರು ಈ ಮೇಲಿನ ಮಾತನ್ನಾಡಿದ್ದಾರೆ . ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ .

ಜಾತಕದ ಆಧಾರದ ಮೇಲೆ ಮದುವೆಗಳು ಫಲಿಸುತ್ತವೆಂಬುದನ್ನು ನಿರಾಕರಿಸುತ್ತಾ ಜಾತಕವನ್ನು ಆಧರಿಸಿ ನಡೆದ ಎಷ್ಟೋ ಮದುವೆಗಳು ವಿಫಲವಾಗಿರುವುದನ್ನು ಉದಾಹರಿಸುವ ಲೇಖಕರು , ಮದುವೆಗಳು ವಧು – ವರರ ಗುಣಸ್ವಭಾವಕ್ಕಿಂತ ಅವರ ಜಾತಕವನ್ನೇ ನಂಬಿ ಮಾಡುವ ಮನುಷ್ಯರ ನಂಬಿಕೆಯನ್ನು ವಿಡಂಬಿಸಿದ್ದಾರೆ .

ಜಾತಕ ಸೂಚಿಸುವುದಕ್ಕಿಂತ ಮೊದಲೇ ವಿಧವೆ – ವಿಧುರರಾದ ಉದಾಹರಣೆಗಳಿವೆ .

ಅಲ್ಲದೆ , ಜಗತ್ತಿನಲ್ಲಿಯೇ ಶೇಕಡ ತೊಂಬತ್ತಕ್ಕೂ ಎಚ್ . ನರಸಿಂಹಯ್ಯನವರು . ಹೆಚ್ಚು ಜನರ ಮದುವೆ ಯಾವುದೇ ಜಾತಕಗಳಿಲ್ಲದೆ ನಡೆದಿವೆ . ಅವರು ಸುಖವಾಗಿಯೂ ಇದ್ದಾರೆ ಎಂದು ಹೇಳಿದ್ದಾರೆ ಲೇಖಕ

“ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ , ”

ಡಾ | ಎಚ್ . ನರಸಿಂಹಯ್ಯನವರು ಬರೆದಿರುವ ‘ ಜ್ಯೋತಿಷ್ಯ- ಅರ್ಥಪೂರ್ಣವೋ ಅರ್ಥರಹಿತವೋ ? ‘ ಎ ೦ ಬ ವೈಚಾರಿಕ ಲೇಖನದಲ್ಲಿ ಈ ಮೇಲಿನ ವಾಕ್ಯವನ್ನು ಗಮನಿಸಬಹುದಾಗಿದೆ . ದಿನಪತ್ರಿಕೆಗಳಲ್ಲಿ ನಾವು ನೋಡುವ ಜ್ಯೋತಿಷಿಗಳ ದಿನಭವಿಷ್ಯವನ್ನು ಉಲ್ಲೇಖಿಸುತ್ತಾ ಲೇಖಕರು ” ಅವು ಓದಲು ತಮಾಷೆಯಾಗಿರುತ್ತದೆ .

ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ನಿಖರತೆ ಇರುವುದಿಲ್ಲ ‘ ಎಂದು ಅಭಿಪ್ರಾಯಪಡುತ್ತಾರೆ . ಏಕೆಂದರೆ ಅವು ಒಂದಕ್ಕಿಂತ ಹೆಚ್ಚು ಅರ್ಥವನ್ನು ಕೊಡುತ್ತಿರುತ್ತದೆ .

ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಇಬ್ಬರು ಜ್ಯೋತಿಷಿಗಳ ಭವಿಷ್ಯವು ಏಕವಾಗಿರದೆ ಭಿನ್ನವಾಗಿದ್ದು , ಕೇವಲ ಊಹೆಗಳಿಂದ ಕೂಡಿರುತ್ತವೆಂದು ಲೇಖಕರು ಹೇಳಿದ್ದಾರೆ .

“ ಜ್ಯೋತಿಷ್ಯ ಒಂದು ವಾಣಿಜ್ಯವಾಗಿದೆ . ”

ಡಾ || ಎಚ್ . ನರಸಿಂಹಯ್ಯನವರು ರಚಿಸಿರುವ ‘ ಜ್ಯೋತಿಷ್ಯ – ಅರ್ಥಪೂರ್ಣವೋ ಅರ್ಥರಹಿತವೋ ? ‘ ಎಂಬ ವಿಚಾರಪೂರ್ಣ ಲೇಖನದಲ್ಲಿ ಲೇಖಕರೇ ಈ ಮೇಲಿನ ಮಾತನ್ನು ಆಡಿದ್ದಾರೆ .

ಜ್ಯೋತಿಷ್ಯವು ವಿಧಿವಾದವನ್ನು ಸಮರ್ಥಿಸುತ್ತದೆ . ಇದನ್ನು ನಂಬುವ ಜನರು ನಿರಾಶೆಯಲ್ಲಿದ್ದಾಗ , ತೊಂದರೆ – ಸಮಸ್ಯೆ ಗಳಲ್ಲಿದ್ದಾಗ ಜ್ಯೋತಿಷಿಗಳ ಮೊರೆಹೋಗುತ್ತಾರೆ .

Jyothishya Artha Purnavo

ಗ್ರಹಗಳ ಅನಿಷ್ಟ ಗತಿಯಿಂದ ಉಂಟಾಗುವ ಘೋರ ಪರಿಣಾಮಗಳನ್ನು ಜನರಿಗೆ ವಿವರಿಸಿ ಹೇಳುವ ಜ್ಯೋತಿಷಿಗಳು ಅಮಂಗಳ ನಿವಾರಣೆಗಾಗಿ ಶಾಂತಿ – ಹೋಮ ಮಾಡಿಸಲು ಜನರಿಂದ ಸಾವಿರಾರುಗಟ್ಟಲೆ ಹಣ ಕೀಳುತ್ತಾರೆ . ಹೀಗೆ ಸಮಸ್ಯೆಗಳನ್ನು ಎದುರಿಸುವ ಜನರನ್ನು ಶೋಷಿಸಿ ಜೇಬುತುಂಬಿಸಿಕೊಳ್ಳುವ ಜ್ಯೋತಿಷಿಗಳಿಂದಾಗಿ ಜ್ಯೋತಿಷ್ಯವು ಒಂದು ವಾಣಿಜ್ಯವಾಗಿವೆ .

1st PUC kannada notes, Pdf, Summary, Chapter 18

ಜ್ಯೋತಿಷಿಗಳಿಗೆ ಇದು ಬದುಕುವ ಮಾರ್ಗವಾಗಿದೆ ಎಂದು ನರಸಿಂಹಯ್ಯನವರು ವಿವರಿಸಿದ್ದಾರೆ .

“ ಸಮಾಜದ ಸುಧಾರಣೆ ಶಿಕ್ಷಣದ ಒಂದು ಉದ್ದೇಶ .

ಡಾ || ಎಚ್ . ನರಸಿಂಹಯ್ಯನವರು ಬರೆದಿರುವ ‘ ಜ್ಯೋತಿಷ್ಯ – ಅರ್ಥಪೂರ್ಣವೋ ಅರ್ಥರಹಿತವೋ ? ‘ ಎಂಬ ಲೇಖನದ ಅಂತ್ಯಭಾಗದಲ್ಲಿ ಲೇಖಕರೇ ಈ ಮೇಲಿನ ಮಾತನ್ನು ಆಡಿದ್ದಾರೆ .

ಜ್ಯೋತಿಷ್ಯವನ್ನು ಅವೈಜ್ಞಾನಿಕವೆಂದು ತೀರ್ಮಾನಿಸಿದ ಎಚ್ . ನರಸಿಂಹಯ್ಯನವರು ಶಿಕ್ಷಣವು ಅಧ್ಯಾಪಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಬೇಕೆಂದು ಅಪೇಕ್ಷೆಪಟ್ಟಿದ್ದಾರೆ . ಯಾವುದನ್ನೂ ಪ್ರಶ್ನಿಸದ , ಪರಿಶೀಲಿಸದ ಒಪ್ಪಿಕೊಳ್ಳಬಾರದು .

ಇದು ಶಿಕ್ಷಣದ ಮೂಲಕ ಒದಗಬೇಕು . ಸಮಾಜ ಸುಧಾರಣೆಯನ್ನೇ ಮುಖ್ಯ ಆಶಯವಾಗುಳ್ಳ ಶಿಕ್ಷಣವು     

ಅವಿದ್ಯಾವಂತ ಮೂಢನಂಬಿಕೆಯುಳ್ಳವನನ್ನು ವಿದ್ಯಾವಂತ ಮೂಢನಂಬಿಕೆಯುಳ್ಳವನನ್ನಾಗಿ ಪರಿವರ್ತಿಸುವಂತಾಗಬಾರದು ಎಂಬುದು ಲೇಖಕರ ಆಶಯವಾಗಿದೆ .

ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಮೂಲಕ ಶಿಕ್ಷಣವು ಸಮಾಜವನ್ನು ಸುಧಾರಣೆ ಮಾಡಬೇಕೆಂಬ ಅಪೇಕ್ಷೆಯನ್ನು ಲೇಖಕರು ವ್ಯಕ್ತಪಡಿಸಿದ್ದಾರೆ .

ಇತರೆ ಪ್ರಮುಖ ವಿಷಯಗಳ ಲಿಂಕ್

ಗಾಂಧಿ ಪಾಠದ ನೋಟ್ಸ್

ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು

ಹಲುಬಿದಳ್ ಕಲ್ಮರಂ ಕರಗುವಂತೆ notes

Leave a Reply

Your email address will not be published. Required fields are marked *