Shishu Makkaligolida Mahadeva Kannada Notes, Download Chapter 6 ಶಿಶು ಮಕ್ಕಳಿಗೊಲಿದ ಮಾದೇವ Questions and Answers Pdf, Summary
ಶಿಶು ಮಕ್ಕಳಿಗೊಲಿದ ಮಾದೇವ
ಕವಿ ಪರಿಚಯ
ಪಿ. ಕೆ. ರಾಜಶೇಖರ್ ಅವರು ಕನ್ನಡದ ಜಾನಪದ ವಿದ್ವಾಂಸರಲ್ಲಿ ಪ್ರಮುಖರು.
ತಂದೆ : ಡಿ. ಕೆಂಪೇಗೌಡ
ತಾಯಿ : ಪುಟ್ಟಮ್ಮ
ಕೃತಿ: ಸುಮಾರು ೮೫ಕ್ಕೂ ಕವಿತೆ, ಭಾಷಾಶಾಸ್ತ್ರ, ಜಾನಪದ, ಮಕ್ಕಳ ಸಾಹಿತ್ಯ, ಜೀವನಚರಿತ್ರೆ, ಅನುವಾದ, ಸಂಪಾದಿತ ಕೃತಿ ಮುಂತಾದುವುಗಳನ್ನು ರಚಿಸಿದ್ದಾರೆ.
ಸೇವೆ : ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಶ್ರೇಷ್ಠ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಪ್ರಕಟಣೆ: ಸಂಶೋಧಕರಾಗಿರುವಾಗಲೇ 1500 ಪುಟಗಳ ಬೃಹತ್ಗಾತ್ರದ “ಮಲೆಯ ಮಹದೇಶ್ವರ ಜನಪದ ಮಹಾಕಾವ್ಯ”ವನ್ನು ವಕ್ತೃಗಳಿಂದ ಸಂಗ್ರಹಿಸಿ ಪ್ರಕಟಿಸಿ, ಈ ಮೇರುಕೃತಿಯ ಜನಪ್ರಿಯತೆಗೆ ಕಾರಣಕರ್ತೃವಾಗಿದ್ದಾರೆ.
ಸಂಗ್ರಹಣೆ: ನೂರಾರು ಗೀತೆ , ನಾಟಕ , ಒಗಟು , ಗಾದೆಗಳ ಸಂಗ್ರಹವನ್ನು ಮಾಡಿರುವರು .ಅವರು ಸಂಗ್ರಹಿಸಿರುವ ‘ ಮಲೆಯ ಮಾದೇಶ್ವರ ಎಂಬ ಮಹಾಕಾವ್ಯದಿಂದ ‘ ಶಿಶು ಮಕ್ಕಳಿಗೊಲಿದ ಮಾದೇವ ಎಂಬ ಪ್ರಸ್ತುತ ಭಾಗವನ್ನು ಆಯ್ದುಕೊಳ್ಳಲಾಗಿದೆ .
ಒಂದು ವಾಕ್ಯದಲ್ಲಿ ಉತ್ತರಿಸಿ
1st PUC Kannada Notes Shishu Makkaligolida Mahadeva
ಮಾದೇವ ಎಲ್ಲಿ ಒದಗಿದ್ದಾನೆ ?
ಮಾದೇವನು ಮೂಡಾಲ ಮಲೆಯಲ್ಲಿ ಯೋಗದಲ್ಲಿ ಒರಗಿದ್ದಾನೆ .
ಯಾರ ಮಕ್ಕಳನ್ನು ಮಾದೇವ ದತ್ತುವಾಗಿ ಪಡೆದನು ?
ಸತ್ಯವಂತೆ ಸಂಕಷ್ಟ ಮಕ್ಕಳನ್ನು ಮಾದೇವ ದತ್ತುವಾಗಿ ಪಡೆದನು .
ತಿಮಕ್ಕಳು ಹೂ ತರಲು ಎಲ್ಲಿಗೆ ಹೋಗಿದ್ದರು ?
ಶಿಶುಮಕ್ಕಳು ಹೂ ತರಲು ಕಡ್ಡಿಹಳ್ಳಕ್ಕೆ ಹೋಗಿದ್ದರು .
ಮಾದೇವ ಮಕ್ಕಳ ಸತ್ಯ ನೋಡಲು ಏನು ಮಾಡಬೇಕೆನ್ನುತ್ತಾನೆ ?
ಮಾಯದಂತಹ ಮಳೆ ಸುರಿಸಿ ಮಕ್ಕಳ ಸತ್ಯವನ್ನು ಪರೀಕ್ಷಿಸಬೇಕೆಂದರು .
ಮಾದೇಶ್ವರರು ಮಳೆಯನ್ನು ಕಳುಹಿಸು ಎಂದು ಯಾರನ್ನು ಕೇಳುತ್ತಾರೆ ?
ಮಾದೇಶ್ವರರು ಮಳೆಯನ್ನು ಕಳುಹಿಸಲು ದೇವೇಂದ್ರನನ್ನು ಕೇಳಿದರು .
ವಾಯುದೇವನನ್ನು ಎಂತಹ ಸುಂಟರಗಾಳಿ ಕಳುಹಿಸು ಎಂದು ಮಾದೇವ ಕೇಳುತ್ತಾನೆ ?
ಮಾದೇವ ವಾಯುದೇವನನ್ನು ಜಗತ್ತನ್ನೆಲ್ಲಾ ಬುಗುರಿಯಂತೆ ಗರಗರನೆ ತಿರುಗಿಸುವಂತಹ ಸುಂಟರಗಾಳಿಯ ಕಳುಹಿಸಬೇಕೆಂದು ಕೇಳಿದನು .
ಗಂಗೆ ಸುರಿಯುವ ರಭಸಕ್ಕೆ ಏನೇನು ಒಂದಾದವು ?
ಗಂಗೆ ಸುರಿಯುವ ರಭಸಕ್ಕೆ ಆಕಾಶ – ಭೂಮಿಗಳು ಒಂದಾದವು .
ಗಂಗಮ್ಮ ಏನನ್ನು ಹೊತ್ತುಕೊಂಡು ಹೋದಳು ?
ಗಂಗಮ್ಮ ಮದ್ದಾನೆಗಳ ಹಿಂಡನ್ನೇ ಹೊತ್ತುಕೊಂಡು ಹೋದಳು .
ನೀರಿನ ಸುಳಿಗೆ ಸಿಲುಕಿದ ಮಾದೇವ ಹೇಗೆ ತಿರುಗಿದನು ?
ನೀರಿನ ಸುಳಿಗೆ ಸಿಲುಕಿದ ಮಾದೇವ ಗರಗರನೆ ತಿರುಗಿದನು .
ಕಾರೆಂಬೊ ಕತ್ತಲಲ್ಲಿ ಎಂತಹ ಮಳೆ ಬಂತು ?
ಕಾರೆಂಬೊ ಕತ್ತಲಲ್ಲಿ ಬೋರೆಂಬೊ ಮಳೆಯು ಬಂದಿತು .
ಮಾದೇವ ಯಾವುದಕ್ಕೆ ಒಲಿದನು ?
ಮಾದೇವ ಮಕ್ಕಳ ಪ್ರೇಮಕ್ಕೆ ಒಲಿದನು .
ನಂಬದವರ ಮನದಲ್ಲಿ ಮಾದೇವ ಹೇಗಿರುತ್ತಾನೆ ?
ನಂಬಿದವರ ಮನದಲ್ಲಿ ಮಾದೇವ ತುಂಬಿ ತುಳುಕಾಡುತ್ತಾನೆ .
2-3 ವಾಕ್ಯಗಳಲ್ಲಿ ಉತ್ತರಿಸಿ
ಮಾದೇವನ ಶಿಶುಮಕ್ಕಳ ಹೆಸರೇನು ?
ಬ್ಯಾಡರ ಕನ್ನಯ್ಯ , ಕಾರಯ್ಯ ಮತ್ತು ಬಿಲ್ಲಯ್ಯ ಎಂಬುವು ಮಾದೇವನ ಶಿಶುಮಕ್ಕಳ ಹೆಸರಾಗಿದ್ದವು .
ಸಿಡಿಲು – ಗುಡುಗುಗಳನ್ನು ಕಳುಹಿಸು ಎಂದು ಮಾದೇವ ಯಾರನ್ನು ಕೇಳುತ್ತಾನೆ ?
ಮಾದೇವನು ಗುಡುಗಾಜಮ್ಮನನ್ನು ಕರೆದು ಗುಡುಗನ್ನು ಕಳಿಸುವಂತೆ ಹೇಳಿದನು . ಅವಳ ಮಗನಾದ ಬೊಮ್ಮರಾಯಪ್ಪ ನನ್ನು ಕರೆದು ಭಯಂಕರವಾದ ಸಿಡಿಲನ್ನು ಕಳಿಸಲು ಹೇಳಿದನು .
Shishu Makkaligolida Mahadeva Kannada Notes
ಮಳೆಯನ್ನು ನೋಡಿ ಕನ್ನಯ್ಯ ತನ್ನೊಳಗೆ ಏನೆಂದುಕೊಳ್ಳುತ್ತಾನೆ ?
ಮಾಯದಂತಹ ಮಳೆಗೆ ದೊಡ್ಡ ಅಪ್ಪಾನ ಮುಳುಗೋದ ಮೇಲೆ ನಾವು ಬಾಳಬಹುದೇ ಮಾದೇವ ? ಎಂದು ಮಳೆಯನ್ನು ಕಂಡ ಕನ್ನಯ್ಯ ಮನದೊಳಗೆ ಯೋಚಿಸುವನು . ಮಳೆಯ ಕಾರಣ ತಿಳಿಯದು , ಆದರೆ ಈ ಕೆಟ್ಟಗಂಗೆಯು ನಮ್ಮನ್ನು ಬಿಡುವುದಿಲ್ಲ ನಿಂದವನು ಯೋಚಿಸಿದನು .
ಶಿಶು ಮಕ್ಕಳು ಬಾಯಿ ಬಾಯಿ ಏಕೆ ಬಡಿದುಕೊಳ್ಳುತ್ತಾರೆ ?
ಮಾಯದಂತಹ ಮಳೆಯ ಪರಿಣಾಮ , ಪ್ರವಾಹದ ರೂಪದಲ್ಲಿ ಬಂದ ಹುಚ್ಚು ಗಂಗಮ್ಮ ಮಾದೇಶ್ವರನ ಗುಡಿಯನ್ನು ಮುಳುಗಿಸಿದ್ದನ್ನು ಕಂಡು ಶಿಶು ಮಕ್ಕಳು ಬಾಯಿ ಬಾಯಿ ಬಡಿದುಕೊಂಡರು
ಬಲಿಯ ಕಲ್ಲನ್ನು ಕನ್ನಯ್ಯ ಬಲವಾಗಿ ಹಿಡಿದುಕೊಳ್ಳುವುದು ಏಕೆ ?
ಸುಳಿಯಲ್ಲಿ ಸಿಕ್ಕಿ ಗಿರಗಿರನೆ ಸುತ್ತುವ ಮಾದೇವನನ್ನು ಕಂಡು ಕನ್ನಯ್ಯ ಈ ಗಂಗೆಯು ನನ್ನಪ್ಪ ಮಾದೇವನನ್ನು ಎಳೆದಂತೆ ನನ್ನನ್ನೂ ಎಳೆದೊಯ್ಯಬಹುದೆಂದು ಯೋಚಿಸಿ , ಬಲಿಯ ಕಲ್ಲನ್ನು ಬಲವಾಗಿ ತಬ್ಬಿಕೊಂಡನು .
ಶಿಶುಮಕ್ಕಳು ನಾವು ಸತ್ತರೂ ಚಿಂತಿಲ್ಲ ಎನ್ನಲು ಕಾರಣವೇನು ?
ಸುಳಿಗೆ ಸಿಲುಕಿ ಗಿರಗಿರನೆ ತಿರುಗುತ್ತಿರುವ ಮಾದೇಶ್ವರನನ್ನು ಹಿಡಿದುಕೊಳ್ಳುವಾಗ ನಾವು ಸತ್ತರೂ ಚಿಂತೆಯಿಲ್ಲ ಎಂದು ಶಿಶುಮಕ್ಕಳು ಹೇಳಿದರು . ಅವರಿಗೆ ತಮ್ಮ ಪ್ರಾಣಕ್ಕಿಂತಲೂ ಮಾದೇಶ್ವರನನ್ನು ಕಾಪಾಡುವುದು ಮುಖ್ಯವೆನಿಸಿತು .
ಮಾದೇವ ತನ್ನ ಶಿಶು ಮಕ್ಕಳಿಗೆ ಏನೇನು ನೀಡಿ ಸಲಹಿದನು ?
ಮಾದೇವ ತನ್ನ ಶಿಶುಮಕ್ಕಳಿಗೆ ಹಾಲು , ಬೆಣ್ಣೆ , ತುಪ್ಪ ಸಕ್ಕರೆಗಳನ್ನು ನೀಡಿ ಸಲಹಿದನು .
ಶಿಶುಮಕ್ಕಳ ಪ್ರೇಮಕ್ಕೆ ಮಾದೇವ ಹೇಗೆ ಒಲಿದನು ? ಶಿಶುಮಕ್ಕಳ ಪ್ರೇಮಕ್ಕೆ ಸೋತ ಮಾದೇವ ಶಿಶುಮಕ್ಕಳನ್ನು ತಮ್ಮ ಎಡಬಲದಲ್ಲಿ ತಬ್ಬಿಕೊಳ್ಳುವನು . ಅವರನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಗುಡಿಗೆ ಬಂದನು .
ಮಾದೇವ ಎಲ್ಲಿ ಒದಗಿದ್ದಾನೆ ?
ಮಾದೇವನು ಮೂಡಾಲ ಮಲೆಯಲ್ಲಿ ಯೋಗದಲ್ಲಿ ಒರಗಿದ್ದಾನೆ .
ಯಾರ ಮಕ್ಕಳನ್ನು ಮಾದೇವ ದತ್ತುವಾಗಿ ಪಡೆದನು ?
ಸತ್ಯವಂತೆ ಸಂಕಷ್ಟ ಮಕ್ಕಳನ್ನು ಮಾದೇವ ದತ್ತುವಾಗಿ ಪಡೆದನು.
ಪ್ರಥಮ ಪಿಯುಸಿ ಕನ್ನಡ ಇತರೆ ಪಠ್ಯಗಳು
- ದುರ್ಯೋಧನ ವಿಲಾಪ
- ವಚನಗಳು ( ಅ ) ಅಲ್ಲಮಪ್ರಭು ( ಆ ) ಘಟ್ಟಿವಾಳಯ್ಯ ( ಇ ) ಅಕ್ಕಮಹಾದೇವಿ
- ದೇವನೊಲಿದನ ಕುಲವೇ ಸತ್ಕುಲಂ
- ಹಲುಬಿದಳ್ ಕಲ್ಮರಂ ಕರಗುವಂತೆ
- ತಲ್ಲಣಿಸದಿರು ಕಂಡ್ಯ ತಾಳು ಮನವೇ