dvigu samas examples in kannada | ದ್ವಿಗುಸಮಾಸ

dvigu samas examples in kannada

dvigu samas examples in kannada | ದ್ವಿಗುಸಮಾಸ

ದ್ವಿಗುಸಮಾಸ

dvigu samas examples in kannada | ದ್ವಿಗುಸಮಾಸ, dvigu samas ke udaharan in kannada, Dvigu samas|

samasagalu | Kannada grammar | ದ್ವಿಗು ಸಮಾಸ

ಎರಡು+ಕೆಲ=ಇಕ್ಕೆಲ (ಇರ್ಕೆಲ), ಮೂರು+ಮಡಿ=ಮುಮ್ಮಡಿ -ಇಕ್ಕೆಲ, ಮುಮ್ಮಡಿ ಇತ್ಯಾದಿ ಸಮಸ್ತಪದಗಳು ಪೂರ್ವದ ಪದವು ಸಂಖ್ಯಾವಾಚಕವಾಗಿ ಉತ್ತರದಲ್ಲಿರುವ ನಾಮಪದದೊಡನೆ ಸೇರಿ ಆಗಿವೆ. ದ್ವಿಗುಸಮಾಸವೆಂದರೆ ಪೂರ್ವಪದವು ಸಂಖ್ಯಾವಾಚಕವಾಗಿಯೇ ಇರಬೇಕು.

ದ್ವಿಗುಸಮಾಸ:-

“ಪೂರ್ವಪದವು ಸಂಖ್ಯಾವಾಚಕವಾಗಿದ್ದು, ಉತ್ತರದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೇ ದ್ವಿಗುಸಮಾಸವೆನಿಸುವುದು.” (ಇದೂ ಕೂಡ ತತ್ಪುರುಷ ಸಮಾಸದ ಒಂದು ಭೇದವೇ ಎಂದು ಹೇಳುವರು.)

 ಕನ್ನಡ – ಕನ್ನಡ ಶಬ್ದಗಳು ಸೇರಿ ಆಗಿರುವುದಕ್ಕೆ:-

ಒಂದು + ಕಟ್ಟು = ಒಗ್ಗಟ್ಟು (ಕಕಾರಕ್ಕೆ ಗಕಾರಾದೇಶ)

ಎರಡು + ಮಡಿ = ಇಮ್ಮಡಿ         – ,, –

ಮೂರು + ಮಡಿ = ಮುಮ್ಮಡಿ          – ,, –

ನಾಲ್ಕು + ಮಡಿ = ನಾಲ್ವಡಿ (ಮಕಾರಕ್ಕೆ ವಕಾರಾದೇಶ)

ಐದು + ಮಡಿ = ಐವಡಿ (ಐದುಮಡಿ)         ( – ,, – )

ಎರಡು+ ಬಾಳ್ = ಇರ್ವಾಳ್  (ಬಕಾರಕ್ಕೆ ವಕಾರಾದೇಶ)

ಎರಡು + ಮಾತು = ಎರಳ್ಮಾತು

ಒಂದು + ಕಣ್ಣು = ಒಕ್ಕಣ್ಣು

ಮೂರು + ಗಾವುದ = ಮೂಗಾವುದ

ಮೂರು + ಕಣ್ಣು = ಮುಕ್ಕಣ್ಣು

ಸಂಸ್ಕೃತ – ಸಂಸ್ಕೃತ ಶಬ್ದಗಳು ಸೇರಿ ಸಮಾಸವಾಗಿರುವುದಕ್ಕೆ:-

ಪಂಚಗಳಾದ + ಇಂದ್ರಿಯಗಳು = ಪಂಚೇಂದ್ರಿಯಗಳು

ಸಪ್ತಗಳಾದ + ಅಂಗಗಳು = ಸಪ್ತಾಂಗಗಳು

ಪಂಚಗಳಾದ + ವಟಗಳು = ಪಂಚವಟಗಳು

ದಶಗಳಾದ + ವಾಯುಗಳು = ದಶವಾಯುಗಳು

ದಶಗಳಾದ + ಮುಖಗಳು = ದಶಮುಖಗಳು

ತ್ರಿ ಆದ + ನೇತ್ರಗಳು = ತ್ರಿನೇತ್ರಗಳು

ಸಪ್ತಗಳಾದ + ಲೋಕಗಳು = ಸಪ್ತಲೋಕಗಳು

ಅಷ್ಟಾದಶಗಳಾದ + ಪುರಾಣಗಳು = ಅಷ್ಟಾದಶಪುರಾಣಗಳು

ಸಪ್ತಗಳಾದ + ಸ್ವರಗಳು = ಸಪ್ತಸ್ವರಗಳು

ಏಕವಾದ + ಅಂಗ = ಏಕಾಂಗ

ದ್ವಿ ಆದ + ಶಿರ = ದ್ವಿಶಿರ

ಸಪ್ತಗಳಾದ + ಸಾಗರಗಳು = ಸಪ್ತಸಾಗರಗಳು

ಸಮಾಸಗಳು -ಉದಾಹರಣೆಗಳು:-

ಮೂವಡಿ-ಮೂರು+ಮಡಿ=ಮೂವಡಿ(ದ್ವಿಗುಸಮಾಸ)

ನಾಲ್ವಡಿ-ನಾಲ್ಕು+ಮಡಿ=ನಾಲ್ವಡಿ (ದ್ವಿಗುಸಮಾಸ)

ಒರ್ನುಡಿ-ಒಂದು+ನುಡಿ=ಒರ್ನುಡಿ(ದ್ವಿಗುಸಮಾಸ)

ಒರ್ಪಿಡಿ-ಒಂದು+ಪಿಡಿ=ಒರ್ಪಿಡಿ(ದ್ವಿಗುಸಮಾಸ)

ಏವಂದಂ-ಏತರ್ಕೆ+ಬಂದಂ=ಏವಂದಂ(ಕ್ರಿಯಾಸಮಾಸ)

ಏವೋದಂ-ಏತರ್ಕೆ+ಪೋದಂ=ಏವೋದಂ(ಕ್ರಿಯಾಸಮಾಸ)

ಏವೇಳ್ವೆಂ-ಏನಂ+ಪೇಳ್ವೆಂ=ಏವೇಳ್ವೆಂ(ಕ್ರಿಯಾಸಮಾಸ)

ಏಗೆಯ್ದಂ-ಏನಂ+ಗೈದಂ=ಏಗೈದಂ(ಕ್ರಿಯಾಸಮಾಸ)

ಕಿತ್ತಡಿ-ಕಿರಿದು+ಅಡಿ=ಕಿತ್ತಡಿ(ಬಹುವ್ರೀಹಿಸಮಾಸ)

ಕುತ್ತಡಿ-ಕಿರಿದು+ಅಡಿ=ಕುತ್ತಡಿ(ಬಹುವ್ರೀಹಿಸಮಾಸ)

ಕಿತ್ತೀಳೆ-ಕಿರಿದು+ಈಳೆ=ಕಿತ್ತೀಳೆ(ಕ.ಧಾ.ಸ.)

ಕುತ್ತೆಸಳ್-ಕಿರಿದು+ಎಸಳ್=ಕುತ್ತೆಸಳ್(ಕ.ಧಾ.ಸ.)

ಕಿತ್ತೆಸಳ್-ಕಿರಿದು+ಎಸಳ್=ಕಿತ್ತೆಸಳ್(ಕ.ಧಾ.ಸ.)

ಪಂದೊಗಲ್-ಪಚ್ಚನೆ+ತೊಗಲ್=ಪಂದೊಗಲ್(ಕ.ಧಾ.ಸ.)

ಪಂದಲೆ-ಪಚ್ಚನೆ+ತಲೆ=ಪಂದಲೆ(ಕ.ಧಾ.ಸ.)

ಕಿಸುಗಣಗಿಲೆ-ಕೆಚ್ಚನೆ+ಕಣಗಿಲೆ=ಕಿಸುಗಣಗಿಲೆ(ಕ.ಧಾ.ಸ.)

ಪಂದಳಿರ್-ಪಚ್ಚನೆ+ತಳಿರ್=ಪಂದಳಿರ್(ಕಧಾ.ಸ.)

ಕೂರಿಲಿ-ಕೂರ್+ಇಲ್ಲದುದು=ಕೂರಿಲಿ(ಬಹುವ್ರೀಹಿಸಮಾಸ)

ಪಲ್ಲಿಲಿ-ಪಲ್+ಇಲ್ಲಿದುದು=ಪಲ್ಲಿಲಿ(ಬಹುವ್ರೀಹಿಸಮಾಸ)

ಅಗಿಲಿಲಿ-ಅಗಿಲ್+ಇಲ್ಲದುದು=ಅಗಿಲಿಲಿ(ಬಹುವ್ರೀಹಿಸಮಾಸ)

ಮೀಂಗುಲಿ-ಮೀನಂ+ಕೊಲ್ಲುವವ=ಮೀಂಗುಲಿ(ಬಹುವ್ರೀಹಿಸಮಾಸ)

ಅರಗುಲಿ-ಅರಮಂ+ಕೊಲ್ಲುವವ=ಅರಗುಲಿ(ಬಹುವ್ರೀಹಿಸಮಾಸ)

ಬೆಳಗಲಿ-ಬೆಳಕು+ಇಲ್ಲದುದು=ಬೆಳಗಲಿ(ಬಹುವ್ರೀಹಿಸಮಾಸ)

ನಾಣಿಲಿ-ನಾಣ್+ಇಲ್ಲದುದು=ನಾಣಿಲಿ(ಬಹುವ್ರೀಹಿಸಮಾಸ)

ಕಡುಚಾಗಿ-ಕಡಿದು+ಜಾಗವುಳ್ಳವ=ಕಡುಚಾಗಿ(ಬಹುವ್ರೀಹಿಸಮಾಸ)

ಕಡುರಾಗಿ-ಕಡಿದು+ರಾಗವುಳ್ಳವ=ಕಡುರಾಗಿ(ಬಹುವ್ರೀಹಿಸಮಾಸ)

ಮೂವಟ್ಟೆ-ಮೂರು+ಬಟ್ಟೆ=ಮೂವಟ್ಟೆ(ದ್ವಿಗುಸಮಾಸ)

ಮೂಲೋಕ-ಮೂರು+ಲೋಕ=ಮೂಲೋಕ(ದ್ವಿಗುಸಮಾಸ)

ಮುಕ್ಕೊಡೆ-ಮೂರು+ಕೊಡೆ=ಮುಕ್ಕೊಡೆ(ದ್ವಿಗುಸಮಾಸ)

ಮುಪ್ಪೊಳಲ್-ಮೂರು+ಪೊಳಲ್=ಮುಪ್ಪೊಳಲ್(ದ್ವಿಗುಸಮಾಸ)

ಮುಪ್ಪರಿ-ಮೂರು+ಪುರಿ=ಮುಪ್ಪರಿ(ದ್ವಿಗುಸಮಾಸ)

ಮುಮ್ಮಾತು-ಮೂರು+ಮಾತು=ಮುಮ್ಮಾತು(ದ್ವಿಗುಸಮಾಸ)

ಮುಚ್ಚೋಟು-ಮೂರು+ಚೋಟು=ಮುಚ್ಚೋಟು(ದ್ವಿಗುಸಮಾಸ)

ಮೂಗೇಣ್-ಮೂರು+ಗೇಣ್=ಮೂಗೇಣ್(ದ್ವಿಗುಸಮಾಸ)

ಮೂಗಾವುದಂ-ಮೂರು+ಗಾವುದಂ=ಮೂಗಾವುದಂ(ದ್ವಿಗುಸಮಾಸ)

ಮುಯ್ಯಡಿ-ಮೂರು+ಅಡಿ=ಮುಯ್ಯಡಿ(ದ್ವಿಗುಸಮಾಸ)

ಐಗಂಡುಗ-ಐದು+ಕಂಡುಗ=ಐಗಂಡುಗ(ದ್ವಿಗುಸಮಾಸ)

ನಾಲ್ವೆರಲ್-ನಾಲ್ಕು+ಬೆರಲ್=ನಾಲ್ವೆರಲ್(ದ್ವಿಗುಸಮಾಸ)

ಆರುಮಡಿ-ಆರು+ಮಡಿ=ಆರುಮಡಿ(ದ್ವಿಗುಸಮಾಸ)

ನಟ್ಟಡವಿ-ಅಡವಿಯ+ನಡು=ನಟ್ಟಡವಿ(ಅಂಶಿಸಮಾಸ)

ನಟ್ಟಿರುಳ್-ಇರುಳಿನ+ನಡು=ನಟ್ಟಿರುಳ್(ಅಂಶಿಸಮಾಸ)

ನಡುವಗಲ್-ಪಗಲಿನ+ನಡು=ನಡುವಗಲ್(ಅಂಶಿಸಮಾಸ)

ನಡುಮನೆ-ಮನೆಯ+ನಡು=ನಡುಮನೆ(ಅಂಶಿಸಮಾಸ)

ನಡುಬೆನ್ನು-ಬೆನ್ನಿನ+ನಡು=ನಡುಬೆನ್ನು(ಅಂಶಿಸಮಾಸ)

ಕುಡಿವುರ್ವು-ಪುರ್ಬಿನ+ಕುಡಿ=ಕುಡಿವುರ್ವು(ಅಂಶಿಸಮಾಸ)

ತುದಿಮೂಗು-ಮೂಗಿನ+ತುದಿ=ತುದಿಮೂಗು(ಅಂಶಿಸಮಾಸ)

ಮುಂದಲೆ-ತಲೆಯ+ಮುಂದು=ಮುಂದಲೆ(ಅಂಶಿಸಮಾಸ)

ಹಿಂದಲೆ-ತಲೆಯ+ಹಿಂದು=ಹಿಂದಲೆ(ಅಂಶಿಸಮಾಸ)

ಕಿಬ್ಬೊಟ್ಟೆ-ಹೊಟ್ಟೆಯ+ಕೆಳಗು=ಕಿಬ್ಬೊಟ್ಟೆ(ಅಂಶಿಸಮಾಸ)

ಉಂಗುರಚಿನ್ನ-ಉಂಗುರಕ್ಕೆ+ಚಿನ್ನ=ಉಂಗುರಚಿನ್ನ(ತತ್ಪುರುಷಸಮಾಸ)

ತೇರ್ಮರ-ತೇರಿಗೆ+ಮರ=ತೇರ್ಮರ(ತತ್ಪುರುಷಸಮಾಸ)

ಪಕ್ಕಿಗೂಡು-ಪಕ್ಕಿಯ+ಗೂಡು=ಪಕ್ಕಿಗೂಡು(ತತ್ಪುರುಷಸಮಾಸ)

ಅನೆಮರಿ-ಆನೆಯ+ಮರಿ=ಅನೆಮರಿ(ತತ್ಪುರುಷಸಮಾಸ)

ಮರಗಾಲ್-ಮರದ+ಕಾಲ್=ಮರಗಾಲ್(ತತ್ಪುರುಷಸಮಾಸ)

ಮರವಾಳ್-ಮರದ+ಬಾಳ್=ಮರವಾಳ್(ತತ್ಪುರುಷಸಮಾಸ)

ಬೇಹುಚದುರ-ಬೇಹಿನಲ್ಲಿ+ಚದುರ=ಬೇಹುಚದುರ(ತತ್ಪುರುಷಸಮಾಸ)

ಎಣ್ದೆಸೆ-ಎಂಟು+ದೆಸೆ=ಎಣ್ದೆಸೆ(ದ್ವಿಗುಸಮಾಸ)

ಮೂಲೋಕ-ಮೂರು+ಲೋಕ=ಮೂಲೋಕ(ದ್ವಿಗುಸಮಾಸ)

ಐಗಾವುದ-ಐದು+ಗಾವುದ=ಐಗಾವುದ(ದ್ವಿಗುಸಮಾಸ)

ನಾಲ್ಮೊಗ-ನಾಲ್ಕು+ಮೊಗ=ನಾಲ್ಮೊಗ(ದ್ವಿಗುಸಮಾಸ)

ನಾಲ್ಮೊಗಂ-ನಾಲ್ಕು+ಮೊಗಉಳ್ಳವ=ನಾಲ್ಮೊಗಂ(ಬಹುವ್ರೀಹಿಸಮಾಸ)

ಕಂಪುಣಿ-ಕಂಪನ್ನು+ಉಣ್ಬುದುಆವುದೋ=ಕಂಪುಣಿ(ಬಹುವ್ರೀಹಿಸಮಾಸ)

ಕಲ್ಗುಟಿಗ-ಕಲ್ಲನ್ನು+ಕುಟ್ಟುವವನು=ಕಲ್ಕುಟಿಗ(ಬಹುವ್ರೀಹಿಸಮಾಸ)

dvigu samas examples in kannada

karmadharaya samas examples in kannada | ಕರ್ಮಧಾರೆಯ ಸಮಾಸ

Leave a Reply

Your email address will not be published. Required fields are marked *