shastri mastara mattavara makkalu notes, ಶಾಸ್ತ್ರಿ ಮಾಸ್ತರ ಮತ್ತವರ ಮಕ್ಕಳು, Shastri Mastharu Mathavara Makkalu, Pdf, Summary, 1st PUC Kannada
Shastri Mastara Mattavara Makkalu Notes
ಲೇಖಕರ ಪರಿಚಯ
ಡಾ ।। ಚೆನ್ನಣ್ಣ ವಾಲೀಕಾರ
ಜನನ : 1942
ಸ್ಥಳ : ರಾಯಚೂರು ಜಿಲ್ಲೆಯ ‘ ಶಂಕರವಾಡೆ
ಮಹಾಪ್ರಬಂಧ
“ ಹೈದರಾಬಾದ್ ಕರ್ನಾಟಕದ ಗ್ರಾಮದೇವತೆಗಳ ಜಾನಪದೀಯ ಅಧ್ಯಯನ “
ಕಾದಂಬರಿಗಳು
- ಒಂದು ಹೆಣ್ಣಿನ ಒಳಜಗತ್ತು
- ಗ್ರಾಮಭಾರತ
ಕವಿತಾ ಸಂಕಲನ
- ಪ್ಯಾಂಥರ್ ಪದ್ಯಗಳು
- ಬಂಡೆದ್ದ ದಲಿತರ ಬೀದಿ ಹಾಡುಗಳು
ಸಂಶೋಧನಾ ಗ್ರಂಥ
- ಜಾನಪದ ಲೋಕ
- ಕರ್ನಾಟಕದ ದೇವದಾಸಿಯರ ಸಮಸ್ಯೆಗಳು
ಪ್ರಶಸ್ತಿಗಳು
- ನಾಟಕ ಸಾಹಿತ್ಯ ಅಕಾಡೆಮಿ
- ಜಾನಪದ ಅಕಾಡೆಮಿ
- ಕರ್ನಾಟಕ ಸಾಹಿತ್ಯ ಅಕಾಡೆಮಿ
- ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳು ಲಭಿಸಿವೆ .
ಒಂದು ವಾಕ್ಯದಲ್ಲಿ ಉತ್ತರಿಸಿ
ಸೇಂಗಾ ಮಾರುವವನ ದಿನದ ಸಂಪಾದನೆ ಎಷ್ಟು ?
ಸೇಂಗಾ ಮಾರುವವನ ದಿನದ ಸಂಪಾದನೆ ಐವತ್ತು ಅರವತ್ತು ರೂಪಾಯಿಗಳು .
ಗಾಡಿ ಶಹಾಬಾದಿಗೆ ಬಂದಾಗ ಸಮಯ ಎಷ್ಟಾಗಿತ್ತು ?
ಗಾಡಿ ಶಹಾಬಾದಿಗೆ ಬಂದಾಗ ರಾತ್ರಿ ಹನ್ನೆರಡು ಗಂಟೆಯಾಗಿತ್ತು .
ಶಾಪ್ತಿಮಾಸ್ತರರ ಹೆಂಡತಿಯ ಹೆಸರೇನು ?
ಶಾಸ್ತ್ರಿಮಾಸ್ತರರ ಹೆಂಡತಿಯ ಹೆಸರು ಅಂಬು ಎಂಬುದು .
ಮಾಸ್ತರರ ಅವಳಿ ಮಕ್ಕಳ ಸಾವು ಹೇಗಾಯಿತು ?
ಮಾಸ್ತರರ ಅವಳಿ ಮಕ್ಕಳು ಶಾಲೆಯಿಂದ ಬರುವಾಗ ಲಾರಿಯಡಿ ಸಿಕ್ಕಿ ಸತ್ತುಹೋದರು .
ಮಾಸ್ತರರಿಗೆ ಇನ್ನೂ ಎಷ್ಟು ವರ್ಷ ಸೇವೆ ಇತ್ತು ?
ಶಾಸ್ತ್ರಿಮಾಸ್ತರರಿಗೆ ಇನ್ನೂ ಹತ್ತು ವರ್ಷಗಳ ಕಾಲ ಸೇವಾವಧಿಯ ಅವಕಾಶವಿತ್ತು .
ಮಾಸ್ತರರು ಮನೆಯ ಮುಂದೆ ಬರೆಸಿ ಹಾಕಿದ ಬೋರ್ಡು ಯಾವುದು ?
” ಅನಾಥ ಬಾಲಕರಾಶ್ರಮ ” ಎಂಬ ಬೋರ್ಡನ್ನು ಮಾಸ್ತರರು ತಮ್ಮ ಮನೆಯ ಮುಂದೆ ಬರೆಸಿ ಹಾಕಿಸಿದರು .
ನಿರೂಪಕರನ್ನು ರೂಪಿಸಿದ ಶಿಲ್ಪಿ ಯಾರು ?
ಶಾಸ್ತ್ರಿಮಾಸ್ತರರೇ ನಿರೂಪಕರನ್ನು ರೂಪಿಸಿದ ಶಿಲ್ಪಿ
ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿರಿ
ಹಾವು ಓದಿದ ಹೈಸ್ಕೂಲ್ ನೆನಪು ಬಂದಾಗ ನಿರೂಪಕರಿಗೆ ಏನನ್ನಿಸಿತು ?
ರಾತ್ರಿ ಒಂದು ಗಂಟೆಯ ಹೊತ್ತಿನಲ್ಲಿ ನಿರೂಪಕರಿಗೆ ತಾವು ಓದಿದ ಹೈಸ್ಕೂಲಿನ ನೆನಪಾಯಿತು . ಐದು ನಿಮಿಷ ನಡೆದು ಹೋದರೆ ಅಲ್ಲಿನ ವಿಶಾಲ ವರಂಡಾದಲ್ಲಿ ಮಲಗಿದರಾಯಿತು ಎನಿಸಿತು . ಅಲ್ಲಿರುವ ಜನಾನನಿಗೆ ತಾವು ಆ ಶಾಲೆಯ ವಿದ್ಯಾರ್ಥಿ ಎಂದರೆ ಮಲಗಲು ಅವಕಾಶ ಕೊಡಬಹುದು ಎನಿಸಿತು .
ನಿರೂಪಕರ ಓರೆಕೋರೆಗಳನ್ನು ತಿದ್ದಿದ ಗುರುಗಳು ಯಾರು ?
ಸೂಡಿ , ಲಾಲ , ಶೆಟ್ಟಿ ಮತ್ತು ದೇಶಪಾಂಡೆ ಎಂಬ ಗುರುಗಳು ನಿರೂಪಕರ ಓಲೆ – ಕೋರೆಗಳನ್ನು ತಿದ್ದಿದ ಗುರುಗಳಾದರೆ , ಶಾಸ್ತ್ರಿಮಾಸ್ತರರು ನಿರೂಪಕರನ್ನು ಕೆತ್ತಿದ ಶಿಲ್ಪಿಯಾಗಿದ್ದರು .
ನಿರೂಪಕರ ತಂದೆ ಅವರನ್ನು ಯಾರು ಯಾರಿಂದ ಅಗಲಿಸಿ ಊರಿಗೆ ಕರೆತಂದರು ?
ಹಂಪಲು , ಬೋರುಳಗಳಿಂದ ಅಗಲಿಸಿ ಊರಿಗೆ ಎಳೆದುತಂದರು . ನಿರೂಪಕರನ್ನು ಅವರ ತಂದೆಯು ದನಗಳನ್ನು , ಗೆಳೆಯರನ್ನು ಪ್ರೀತಿಯ ಹೊಳೆ , ಹಳ್ಳ , ಗಿಡ , ಮರ , ಗುಡ್ಡ ಬೆಟ್ಟ , ಹೆಣ್ಣು
ಪ್ರೈಮರಿ ಶಾಲೆ ಸೇರಿದಾಗ ನಿರೂಪಕರನ್ನು ಅಂಬು ಹೇಗೆ ನೋಡಿಕೊಳ್ಳುತ್ತಿದ್ದರು ?
ಶಾಸ್ತ್ರಿಮಾಸ್ತರರ ಪತ್ನಿ ಅ ೦ ಬವ್ವ ನಿರೂಪಕರಿಗೆ ಸಂಜೆ ಮುಂಜಾನೆ ಸಿಹಿ ತಿಂಡಿ ತಿನಿಸುಗಳನ್ನು ಮಾಡಿದ ಅಡುಗೆಯನ್ನು ತಿನಿಸುತ್ತಾ ಇದ್ದರು . ಸಂತೆಗೆ ಹೋದಾಗ ನಿರೂಪಕರನ್ನೂ ಜೊತೆಗೆ ಕರೆದೊಯ್ದು ಹೋಟೆಲಿನಲ್ಲಿ ಹೊಟ್ಟೆ ತುಂಬ ತಿನಿಸುತ್ತಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು .
ಮಾಸ್ತರರ ಮಕ್ಕಳ ಶವಯಾತ್ರೆಗೆ ಜನ ಹೇಗೆ ಬಂದಿತ್ತು ?
ಶಾಸ್ತ್ರಿಮಾಸ್ತರರ ಅವಳಿ ಮಕ್ಕಳು ಮತ್ತು ಅಂಬವ್ವನ ಶವಯಾತ್ರೆಗೆ ಶಾಲೆಗೆಶಾಲೆ , ಬಜಾರಿಗೆಬಜಾರೆ , ಊರಿಗೆ ಊರೇ ಓಡಿಬಂದಿತು . ಅದು ಶವಯಾತ್ರೆಯಂತಿರದೆ ದೇವರ ಜಾತ್ರೆಗೆ ಜನ ಸೇರಿದಂತೆ ಇತ್ತು .
ಅವಳಿ ಮಕ್ಕಳ ಸಾವಿನ ನಂತರ ಮಾಸ್ತರ ಮತ್ತು ಅಂಬವ್ವನ ಸ್ಥಿತಿ ಏನಾಯಿತು ?
ಮಕ್ಕಳ ಸಾವಿನ ಸುದ್ದಿ ಕೇಳಿದ ಅಂಬವ್ವ ಹೃದಯ ಒಡೆದು ಸತ್ತಳು , ಶಾಸ್ತ್ರಿ ಮಾಸ್ತರರು ಹುಚ್ಚರಾಗಿ ಹೋದರು . ಅವರ ಸ್ಥಿತಿಯು ಮೈಮೇಲೆ ಮುಗಿಲು ಹರಿದುಬಿದ್ದಂತೆ , ಸಿಡಿಲು ಎರಗಿದ೦ತಾಯಿತು .
ಮಾಸ್ತರರು ಬಾಡಿಗೆ ಮನೆಯನ್ನು ಹೇಗೆ ಖರೀದಿಸಿದ್ದರು ?
ನಿವೃತ್ತಿಗೆ ಅರ್ಜಿ ಸಲ್ಲಿಸಿದ ಮಾಸ್ತರರು ಹೆಂಡತಿ ಹೆಸರಲ್ಲಿ , ಮಕ್ಕಳ ಹೆಸರಿನಲ್ಲಿ ಇಟ್ಟಿದ್ದ ಜೀವವಿಮೆ , ಬ್ಯಾಂಕಿನ ಹಣವನ್ನು ಹಿಂತೆಗೆದರು . ಅದಕ್ಕೆ ನಿವೃತ್ತಿಯಿಂದ ಬಂದ ಹಣವನ್ನು ಸೇರಿಸಿ ತಾವು ಬಾಡಿಗೆಗಿದ್ದ ಮನೆಯನ್ನು ಖರೀದಿ ಮಾಡಿದರು .
05-06 ವಾಕ್ಯಗಳಲ್ಲಿ ಉತ್ತರಿಸಿ
ನಿರೂಪಕರ ಬಯಲು ಶಾಲೆಯ ಅನುಭವ ಮತ್ತು ನಂತರ ಶಾಲೆಯ ಅನುಭವಗಳು ಹೇಗಿದ್ದವು ?
ಹುಡುಗರನ್ನು ಕೂಡಿಕೊಂಡು ಬಯಲಿಗೆ ಹೋದರೆ ಅದು ಸ್ವರ್ಗ ಸಮಾನವನಿಸುತ್ತಿತ್ತು . ಹಳ್ಳ , ಕೊಳ್ಳ , ಕೆರೆ , ಬಾವಿ , ಗಿಡ ಮರ ಬಳ್ಳಿ ನಿರೂಪಕರ ಬಯಲು ಶಾಲೆಯ ಅನುಭವಗಳೂ ಅತ್ಯಂತ ಸಂತಸದಾಯಕವಾಗಿದ್ದಿತು . ದನಗಳನ್ನು , ದನಕಾಯುವ ಬೆಟ್ಟ , ಗುಡ್ಡ , ಹಣ್ಣು ಹಂಪಲು ಮುಂತಾದವುಗಳ ಸೊಗಸಿತ್ತು .
ಪೀಪಿ ಊದುತ್ತ ಕೃಷ್ಣನಂತ ಹುಡುಗಿಯರ ಜೊತೆ ಕಣ್ಣು ಮುಚ್ಚಾಲೆ , ಬಳಿ ಚಕಾರಾಟ , ಕೋಲಬಗುಳ್ಳಿ , ಲೋಡ ಲೋಡ ತಿಮ್ಮಯ್ಯ ಮುಂತಾದ ಆಟಗಳ ಹಿಗಿತ್ತು .
ದನಗಳನ್ನು ಎಲ್ಲೋ ಮೇಯಲು ಬಿಟ್ಟು ಇನ್ನೆಲ್ಲೋ ಆಡುತ್ತಾ ಸಂಜೆ ಹಾಡುತ್ತಾ ಕುಣಿಯುತ್ತಾ ಧನವಾಗಿ , ಹಕ್ಕಿಯಾಗಿ , ಮನೆಗೆ ಬರುವುದು ನಿತ್ಯ ಹಬ್ಬವಾಗಿತ್ತು .
ನಂತರ ಅಕ್ಷರದ ಶಾಲೆಯು ನಿರೂಪಕರಿಗೆ ನಾಲ್ಕು ಗೋಡೆಗಳ ಬಂದೀಖಾನೆ ಎನಿಸಿತು . ದನಕಾಯುವ ಬಯಲಶಾಲೆಯ ನೆನಪು ನಿರೂಪಕರನ್ನು ಬಲವಾಗಿ ಕಾಡಿದ್ದರಿಂದ ಅವರು ಅಕ್ಷರ ಕಲಿಯದ ಪ್ರತಿಭಟಿಸಿದರು . ಆದರೆ ಶಾಸ್ತ್ರಿಮಾಸ್ತರ ಮತ್ತು ಅಂಬವ್ವರ ಪ್ರೀತಿಯ ಕಡಲಲ್ಲಿ ಮಿಂದಾಗ ನಿರೂಪಕರಿಗೆ ಅಕ್ಷರಮಳೆ ಧಾರಾಕಾರವಾಗಿ ಸುರಿಯಿತು . ಕೇವಲ ಮೂರು ತಿಂಗಳಲ್ಲಿ ಅಕ್ಷರಗಳೆಲ್ಲವನ್ನು ಕಲಿತರು . ನಿಧಾನವಾಗಿ ಬಯಲು ಶಾಲೆಯ ನೆನಪು ದೂರಾಯಿತು . ಅಕ್ಷರದ ಹೊನಲು ಆಕರ್ಷಕವೆನಿಸಿತು .
ಮಾಸ್ತರರು ಮತ್ತು ಅಂಬವ್ವರ ಪ್ರೀತಿ ಕಡಲಲ್ಲಿ ಕತೆಗಾರರ ಬಾಲ್ಯ ಹೇಗೆ ಕಳೆಯಿತು ?
ಕತೆಗಾರರನ್ನು ಶಾಸ್ತ್ರಿ ಮಾಸ್ತರರು ಮತ್ತು ಅವರ ಧರ್ಮಪತ್ನಿ ಅಂಬವರು ತಮ್ಮ ಕರುಳಕುಡಿಯಂತೆಯೇ ನೋಡಿಕೊಂಡರು . ಅಕ್ಷರ ಕಲಿಯಲು ಒಪ್ಪದ ಕತೆಗಾರರನ್ನು ಅವರು ಎಂದೂ ಒತ್ತಾಯಮಾಡಲಿಲ್ಲ . ಶಾಸ್ತ್ರಿಮಾಸ್ತರರು ಭಾನುವಾರಗಳಂದು ಎಲ್ಲರನ್ನೂ ಸಿನಿಮಾಕ್ಕೆ ಕರೆದೊಯ್ಯುತ್ತಿದ್ದರು .
ಅಂಬಾ ಸಂಜೆ – ಮುಂಜಾನೆ ನಿರೂಪಕರಿಗೆ ಸಿಹಿಸಿಹಿಯಾದ ತಿಂಡಿಗಳನ್ನು ತಾವು ಮಾಡಿದ ಅಡುಗೆಯನ್ನು ಉಣ್ಣಿಸುತ್ತಿದ್ದರು . ತಾವು ಸಂತೆಗೆ ಹೋದಾಗ ಕತೆಗಾರರನ್ನೂ ಜೊತೆಗೆ ಕರೆದೊಯ್ದು ಹೋಟೆಲಿನಲ್ಲಿ ಹೊಟ್ಟೆ ತುಂಬ ತಿಂಡಿ ತಿನ್ನಿಸುತ್ತಿದ್ದರು , ದಂಪತಿಗಳಿಬ್ಬರೂ ಓದಲು ಒತ್ತಾಯ ಮಾಡದೆ , ಕತೆಗಾರರನ್ನು ಸುಮ್ಮನೆ ತಿರುಗಾಡಿಕೊಂಡಿರಲು ಬಿಟ್ಟಿದ್ದರು .
ಹೀಗೆ ಶಾಸ್ತ್ರಿಮಾಸ್ತರ ಅಂಬವರ ಪ್ರೀತಿಯ ಕಡಲಲ್ಲಿ ಮಿಂದ ಮೇಲೆ ಕತೆಗಾರರಿಗೆ ಎಷ್ಟು ದಿನ ಸುಮ್ಮನೆ ಕೂರುವುದು ? ಎನಿಸಿತು . ನಿಧಾನವಾಗಿ ಅವರು ಅಕ್ಷರದತ್ತ ವಾಲಿದರು . ಮುಂದೆಯು ಅವಳಿ ಮಕ್ಕಳನ್ನು ಪಡೆದರೂ ಮಾಸ್ತರ ದಂಪತಿಗಳು ಕತೆಗಾರರನ್ನು ತಮ್ಮ ಹಿರೀಮಗನಂತೆಯೇ ಪೊರೆದರು .
ಅವಳಿ ಮಕ್ಕಳ ಸಾವು ಮಾಸ್ತರರ ಬದುಕನ್ನೇ ಬದಲಾಯಿಸಿದ್ದು ಹೇಗೆ ? ವಿವರಿಸಿ ,
ಅವಳಿ ಮಕ್ಕಳು ಮತ್ತು ತಮ್ಮ ಹೆಂಡತಿ ಅಂಬವ್ವರನ್ನು ಒಟ್ಟಿಗೇ ಕಳೆದುಕೊಂಡ ಶಾಸ್ತ್ರಿಮಾಸ್ತರರಿಗೆ ಸಿಡಿಲೆರಗಿದಂತಾಯಿತು . ಅವರು ಹುಚ್ಚರಾಗಿ ಹೋದರು . ಆರು ತಿಂಗಳ ಕಾಲ ಹಾಸಿಗೆ ಹಿಡಿದು ಮಲಗಿಬಿಟ್ಟರು .
ಕೊನೆಗೆ ಈ ದುಃಖದಿಂದ ಹೊರಬರಲು ಅವರು ಯೋಚಿಸಿದರು . ಹೆಂಡತಿ ಮಕ್ಕಳ ಹೆಸರಲ್ಲಿದ್ದ ಜೀವವಿಮೆ ಮತ್ತು ಬ್ಯಾಂಕಿನ ಹಣವನ್ನು ಹಿಂತೆಗೆದುಕೊಂಡು , ಅದಕ್ಕೆ ತಮ್ಮ ನಿವೃತ್ತಿ ಹಣವನ್ನು ಕೂಡಿಸಿ , ತಾವು ಬಾಡಿಗೆಗಿದ್ದ ಮನೆಯನ್ನು ಖರೀದಿ ಮಾಡಿದರು . ಅದರಲ್ಲೇ ಅನಾಥ ಬಾಲಕರಾಶ್ರಮವನ್ನು ಆರಂಭಿಸಿದರು .
ಶಾಸ್ತ್ರಿ ಮಾಸ್ತರ ಮತ್ತವರ ಮಕ್ಕಳು
ಶಾಲೆಯಲ್ಲಿ ಓದಲು ಬರುವ ನಿರ್ಗತಿಕ , ಬಡವ , ಅನಾಥ ಮಕ್ಕಳಿಗೆ ಊಟ , ವಸತಿ , ಬಟ್ಟೆ ಪುಸ್ತಕಗಳ ಖರ್ಚನ್ನು ತಾವೇ ಭರಿಸಿದರು . ಹೀಗೆ ಮಾಸ್ತರರು ತಮ್ಮ ಮಡದಿ ಮಕ್ಕಳ ಸಾವಿನ ದುಃಖವನ್ನು ನೀಗಿಕೊಳ್ಳಲು ಅನಾಥ ಮಕ್ಕಳ ಸೇವೆ ಮಾಡತೊಡಗಿದರು . ಅದರಲ್ಲೇ ಸುಖವನ್ನು ಕಂಡು , ಬದುಕಿನ ಕಹಿಯನ್ನು ಸಿಹಿಯನ್ನಾಗಿಸಿಕೊಂಡು ಮಹಾತ್ಮರನಿಸಿದರು .
ಅನಾಥ ಬಾಲಕರಾಶ್ರಮ’ವನ್ನು ಶಾಸ್ತ್ರಿಮಾಸ್ತರರು ಹೇಗೆ ಪ್ರಾರಂಭಿಸಿದರು ? ಅದರ ಉದ್ದೇಶವೇನು ?
ಮನೆಯಲ್ಲಿ ನಡೆದ ದುರ್ಘಟನೆಯಿಂದ ಆಘಾತಕ್ಕೊಳಗಾದ ಶಾಸ್ತ್ರಿಮಾಸ್ತರರು ಆರು ತಿಂಗಳು ಶಾಲೆಗೆ ಹೋಗದೆ ಹಾಸಿಗೆ ಹಿಡಿದರು . ಕೊನೆಗೆ ಯೋಚಿಸಿ ನಿರ್ಧಾರಕ್ಕೆ ಬಂದ ಅವರು ಸ್ವಯಂ ನಿವೃತ್ತಿಗೆ ಅರ್ಜಿಸಲ್ಲಿಸಿದರು .
ಅವರ ಸೇವಾವಧಿ ಇನ್ನೂ ಹತ್ತು ವರ್ಷಗಳಿದ್ದವು , ಹೆಂಡತಿ ಮಕ್ಕಳ ಹೆಸರಲ್ಲಿದ್ದ ಬ್ಯಾಂಕು – ಜೀವವಿಮೆ ಹಣವನ್ನು ಹಿಂತೆಗೆದುಕೊಂಡು , ಅದಕ್ಕೆ ತಮ್ಮ ನಿವೃತ್ತಿಯ ಹಣವನ್ನು ಸೇರಿಸಿದರು . ಈ ಹಣದಲ್ಲಿ ತಾವಿದ್ದ ಮನೆಯನ್ನು ಖರೀದಿ ಮಾಡಿದರು .
ಅನಾಥ ಬಾಲಕರಾಶ್ರಮ ‘ ಎಂಬ ಬೋರ್ಡನ್ನು ಬರೆಸಿ , ನಗೆ ನೇತುಹಾಕಿ ಬಾಲಕರಾಶ್ರಮವನ್ನು ಆರಂಭಿಸಿದರು . ಶಾಲೆಗೆ ಬರುವ ನಿರ್ಗತಿಕರ , ಬಡವರ , ಅನಾಥ ಮಕ್ಕಳಿಗೆ ಉಚಿತವಾಗಿ ಬಟ್ಟೆ , ವಸತಿ , ಸೇಟು , ಪುಸ್ತಕಗಳನ್ನು ಒದಗಿಸಿ , ಅವರೆಲ್ಲರ ವಿದ್ಯಾಭ್ಯಾಸಕ್ಕೆ ನೆರವಾಗಬೇಕು , ಅನಾಥರು ವಿದ್ಯಾವಂತರಾಗಬೇಕೆಂಬ ಉದ್ದೇಶವು ಮಾಸ್ತರದಾಗಿತ್ತು , ತಮ್ಮ ಬದುಕಿನ ಕಹಿಯನ್ನು ಮರೆಯಲು ಮಾಸ್ತರರು ಅನಾಥ ಮಕ್ಕಳ ಸೇವೆ ಮಾಡಲು ಉದ್ದೇಶಿಸಿದರು .
ಬದಲಾದ ಶಹಾಬಾದನ್ನು ಲೇಖಕರು ಹೇಗೆ ನಿರೂಪಿಸಿದ್ದಾರೆ ?
ನಿರೂಪಕರು ಚಿಕ್ಕವರಾಗಿದ್ದಾಗ ಶಹಾಬಾದು ಈಗಿನಂತಿರಲಿಲ್ಲ . ನಿರೂಪಕರು ಗಮನಿಸಿದಂತೆ ಶಹಾಬಾದು ತುಂಬ ಬದಲಾಗಿತ್ತು . ಎಸಿಸಿ ಸಿಮೆಂಟ್ ಕಂಪೆನಿ ಮತ್ತು ಎಬಿಎಲ್ ಕಂಪೆನಿಗಳು ಕಾಲಿಟ್ಟಿದ್ದು , ಆ ಕಂಪೆನಿಗಳಲ್ಲಿ ಕೆಲಸ ಮಾಡುವ ಜನರಿಂದ ಶಹಾಬಾದು ಗಿಜಿಗುಡುತ್ತಿತ್ತು .
ಮೊದಲಿನ ಪ್ರಶಾಂತತೆ ಕಂಡುಬರಲಿಲ್ಲ . ಮೊದಲು ಚಿಕ್ಕದಾಗಿದ್ದರು ನಾಲ್ಕು ದಿಕ್ಕಿಗೂ ಒಂದೊಂದು ಮೈಲಿವರೆಗೆ ಬೆಳೆದಿತ್ತು . ನೀರು ತುಂಬುತ್ತಿರುವ , ಶೌಚಾಲಯಕ್ಕೆ ಹೋಗುತ್ತಿರುವ , ಕೆಲಸಕ್ಕಾಗಿ ಹೊರಟಿರುವ , ಊರಿಗೆ ಹೋಗು
ತರಕಾರಿ ತರುತ್ತಿರುವ , ಹೋಟೆಲು – ಅಂಗಡಿಗಳನ್ನು ತೆರೆಯುವ ಜನರಿಂದ ಊರು ತುಂಬಿಹೋಗಿದ್ದನ್ನು ಲೇಖಕರು ವಿವರವಾಗಿ ನಿರೂಪಿಸಿದ್ದಾರೆ . ಕಾಲ ಬದಲಾದಂತೆ ಊರೂ ಬದಲಾಗುತ್ತಿರುವುದನ್ನು ನಿರೂಪಕರು ಗಮನಿಸಿ , ಚಿತ್ರಿಸಿದ್ದಾರೆ .
ಶಾಸ್ತ್ರಿಮಾಸ್ತರರ ವ್ಯಕ್ತಿತ್ವವನ್ನು ನಿರೂಪಿಸಿ .
ಡಾ . ಚೆನ್ನಣ್ಣ ವಾಲೀಕಾರರು ಬರೆದಿರುವ ‘ ಶಾಸ್ತ್ರಿಮಾಸ್ತರ ಮತ್ತವರ ಮಕ್ಕಳು ‘ ಎಂಬ ಸಣ್ಣಕಥೆಯಲ್ಲಿ ಬರುವ ಶಾಸ್ತ್ರಿಮಾಸ್ತರರು ಒಬ್ಬ ಆದರ್ಶ ಗುರುಗಳೆನಿಸಿದ್ದಾರೆ . ಮಕ್ಕಳನ್ನು ಅಕ್ಷರ ಸಂಪರ್ಕಕ್ಕೆ ಕರೆತಂದು ಅವರನ್ನು ವಿದ್ಯಾವಂತರನ್ನಾಗಿ ಮಾಡಬೇಕೆ ೦ ಬ ಮಹದಾಸೆ ಅವರದಾಗಿತ್ತು .
ದನಕಾಯುತ್ತಿದ್ದ ನಿರೂಪಕರನ್ನು ಕಡೆದು ಕೆತ್ತಿ ನಿಲ್ಲಿಸಿದ ಶಿಲ್ಪಿ ಅವರು . ಅಕ್ಷರದಿಂದ ವಂಚಿತರಾದ ಮಕ್ಕಳಿಗೆ ಹೆತ್ತವರ ವಾತ್ಸಲ್ಯ ತೋರಿಸಿ , ಓದಿಸಿದ ಮಹಾಪುರುಷ ಶಾಸ್ತ್ರಿಮಾಸ್ತರರು , ಹೆಂಡತಿ ಮಕ್ಕಳ ಸಾವಿನ ದುಃಖವನ್ನು ಮರೆಯಲು ‘ ಅನಾಥ ಬಾಲಕರಾಶ್ರಮ’ವನ್ನು ಆರಂಭಿಸಿ , ತಮ್ಮ ತನು ಮನ ಧನಗಳೊಂದಿಗೆ ನಿರ್ಗತಿಕ , ಬಡಮಕ್ಕಳ ಸೇವೆ ಮಾಡಿದ ಅಪರೂಪದ ವ್ಯಕ್ತಿತ್ವ ಅವರದಾಗಿತ್ತು .
ಬದುಕಿನಲ್ಲಿ ಬಂದೆರಗುವ ಆಘಾತಕಾರಿ ಕಹಿಯನ್ನು ಸೇವೆಯ ಮೂಲಕ ಸಿಹಿಯನ್ನಾಗಿ ಪರಿವರ್ತಿಸಿಕೊಂಡ ಶಾಸ್ತ್ರಿಮಾಸ್ತರರ ಆದರ್ಶದ ನಿಲುವು ಅನುಕರಣೀಯವಾಗಿದೆ ಎನ್ನಬಹುದು .