Buddha Bisilurinavanu Kannada Notes । ಬುದ್ಧ ಬಿಸಿಲೂರಿನವನು ನೋಟ್ಸ್

Buddha Bisilurinavanu Kannada Notes । ಬುದ್ಧ ಬಿಸಿಲೂರಿನವನು ನೋಟ್ಸ್

buddha bisilurinavanu kannada notes, ಬುದ್ಧ ಬಿಸಿಲೂರಿನವನು ನೋಟ್ಸ್, Questions and Answers Pdf, Notes, Summary, 1st PUC Kannada Textbook Answers

Buddha Bisilurinavanu Kannada Notes

ಕವಿ ಪರಿಚಯ :

ನಾಗತಿಹಳ್ಳಿ ಚಂದ್ರಶೇಖರ್

ಜನನ : 1958 ಆಗಸ್ಟ್ 15


ಸ್ಥಳ : ನಾಗತಿಹಳ್ಳಿ, ಮಂಡ್ಯ ಜಿಲ್ಲೆ, ಕರ್ನಾಟಕ


ಉದ್ಯೋಗ : ಬರಹಗಾರ,ಪ್ರಕಾಶಕ ,ನಿರ್ಮಾಪಕ, ನಿರ್ದೇಶಕ

Spouse(s) : ಶೋಭಾ


ಮಕ್ಕಳು : ಸಿಹಿ ನಾಗತಿಹಳ್ಳಿ , ಕನಸು ನಾಗತಿಹಳ್ಳಿ

ಕಥಾಸಂಕಲನ

  • ಮಲೆನಾಡಿನ ಹುಡುಗಿ
  • ಬಯಲು ಸೀಮೆ ಹುಡುಗ
  • ಬಾ ನಲ್ಲೆ ಮಧುಚಂದ್ರಕೆ

ಕಾದಂಬರಿ

ವಲಸೆ ಹಕ್ಕಿಯ ಹಾಡು

ಪ್ರವಾಸ ಕಥನ
  • ಅಯನ
  • ನನ್ನ ಗ್ರಹಿಕೆಯ ಈಜಿಪ್ಟ್
  • ನನ್ನ ಗ್ರಹಿಕೆಯ ನೇಪಾಳ

ಜನಪ್ರಿಯ ಚಿತ್ರಗಳು

  • ಅಮೆರಿಕಾ ಅಮೆರಿಕಾ
  • ಬಾ ನಲ್ಲೆ ಮಧುಚಂದ್ರಕೆ
  • ಪ್ಯಾರಿಸ್ ಪ್ರಣಯ
  • ಉಂಡೂ ಹೋದ ಕೊಂಡೂ ಹೋದ
  • ಒಲವೆ ಜೀವನ ಲೆಕ್ಕಾಚಾರ
  • ಮಾತಾಡ್ ಮಾತಾಡ್ ಮಲ್ಲಿಗೆ
ಪ್ರಶಸ್ತಿಗಳು
  • ರಾಜ್ಯ ಪ್ರಶಸ್ತಿ
  • ಫಿಲ್‌ಫೇರ್ ಪ್ರಶಸ್ತಿ

 ಗೌತಮ ಜನಿಸಿದ್ದು ಎಲ್ಲಿ ?

ಲುಂಬಿನಿ ಉದ್ಯಾನವನದಲ್ಲಿ ಗೌತಮ ಬುದ್ಧನು ಜನಿಸಿದನು .

ಬುದ್ಧನಿಗೆ ಜ್ಞಾನೋದಯವಾದ ದಿನ ಯಾವುದು ?

ಬುದ್ಧನಿಗೆ ವೈಶಾಖ ಪೂರ್ಣಿಮೆಯಂದು ಜ್ಞಾನೋದಯವಾಯಿತು .

ಸಿದ್ಧಾರ್ಥನ ಮಗನ ಹೆಸರು

ರಾಜ ಶುದ್ಧೋದನ

ಒಂದು ವಾಕ್ಯದಲ್ಲಿ ಉತ್ತರಿಸಿ

 ಗೌತಮ ಜನಿಸಿದ್ದು ಎಲ್ಲಿ ?

ಲುಂಬಿನಿ ಉದ್ಯಾನವನದಲ್ಲಿ ಗೌತಮ ಬುದ್ಧನು ಜನಿಸಿದನು .

ಬುದ್ಧನಿಗೆ ಜ್ಞಾನೋದಯವಾದ ದಿನ ಯಾವುದು ?

ಬುದ್ಧನಿಗೆ ವೈಶಾಖ ಪೂರ್ಣಿಮೆಯಂದು ಜ್ಞಾನೋದಯವಾಯಿತು .

ನೇಪಾಳದ ವಿಮಾನ ಹೇಗಿತ್ತು ?

ನೇಪಾಳದ ವಿಮಾನಗಳು ನಮ್ಮ ಹಳೆಯ ಮೆಟಡಾರ್‌ಗಳಿಗೆ ರೆಕ್ಕೆ ಜೋಡಿಸಿದಂತಿದ್ದವು .

ಮಾಯಾದೇವಿ ದೇವಾಲಯ ಹೇಗಿತ್ತು ?

 ಮಾಯಾದೇವಿ ದೇವಾಲಯದ ಶ್ವೇತವರ್ಣದಿಂದ ಕೂಡಿ ಚೌಕಾಕಾರದಲ್ಲಿತ್ತು . ಆಶೋಕ ಸ್ತಂಭ ಎಲ್ಲಿದೆ ? ಆಶೋಕ ಸ್ತಂಭವು ಮಾಯಾದೇವಿ ದೇವಾಲಯದ ಬಳಿಯಿರುವ ಉದ್ಯಾನದಲ್ಲಿದೆ .

ಯಾವ ಪ್ರವಾಸಾನುಭವದಲ್ಲಿ ಲುಂಬಿನಿಯ ಬಗೆಗೆ ವಿವರಗಳಿವೆ ?

ಚೀನಾ ಯಾತ್ರಿಕನಾದ ಹುಯನ್‌ತ್ಸಾಂಗ್‌ನ ಪ್ರವಾಸಾನುಭವದಲ್ಲಿ ಲುಂಬಿನಿಯ ಬಗೆಗೆ ವಿವರಗಳಿವೆ .

 ಕಪಿಲವಸ್ತುವಿನ ಇಂದಿನ ಹೆಸರೇನು ?

 ಕಪಿಲವಸ್ತುವಿನ ಇಂದಿನ ಹೆಸರು ಲಾರ್‌ಕೋಟ್ ಎಂಬುದು .

ಅರಮನೆಯ ಗಾರ್ಡು ಲೇಖಕರನ್ನು ಏನೆಂದು ಕೇಳಿದನು ?

ಅರಮನೆಯ ಗಾರ್ಡು ‘ ‘ ಕಾಫಿಗೇನಾದ್ರೂ ಕೊಡಿ ‘ ಎಂದು ಲೇಖಕರನ್ನು ಕೇಳಿದನು .

ಲೇಖಕರ ಮನಸ್ಸಿನಲ್ಲಿ ಗಾಢವಾಗಿ ಅಷ್ಟೊತ್ತಿದ್ದು ಯಾವುದು ?

ಗೌತಮನಿಲ್ಲದ ಅರಮನೆ ಮತ್ತು ತಾವೇ ಕಟ್ಟಿಕೊಂಡ ಕಲ್ಪನೆಯ ಅರಮನೆಗಳು ಲೇಖಕರ ಮನಸ್ಸಿನಲ್ಲಿ ಗಾಢವಾಗಿ ಉಳಿದವು .

2-3 ವಾಕ್ಯದಲ್ಲಿ ಉತ್ತರಿಸಿ :

ಮಹಾನ್ ವ್ಯಕ್ತಿಗಳ ದರ್ಶನ ಅರ್ಥವಾಗುವುದು ಹೇಗೆ ?

ಮಹಾನ್ ವ್ಯಕ್ತಿಗಳ ದರ್ಶನವನ್ನು ಆಶಯವನ್ನು ಅರ್ಥಮಾಡಿಕೊಳ್ಳಲು ಅವರ ಕೃತಿಗಳು ನೆರವಾಗುತ್ತವೆ .

ನೇಪಾಳದ ವೈಮಾನಿಕ ಸಾರಿಗೆ ವ್ಯವಸ್ಥೆ ಹೇಗಿದೆ ?

ನೇಪಾಳಿ ಸರ್ಕಾರ ಅಲ್ಲಿನ ಪುಟ್ಟ ಪುಟ್ಟ ಊರುಗಳಲ್ಲಿ ವಿಮಾನ ನಿಲ್ದಾಣವನ್ನು ಸ್ಥಾಪಿಸಿ ಇಪ್ಪತ್ತೈದು ಜನ ಕೂರಬಹುದಾದ ವಿಮಾನಗಳನ್ನು ಹಾರಲು ಬಿಟ್ಟಿವೆ .

ವಿಮಾನ ದರ ಶ್ರೀಸಾಮಾನ್ಯನ ಕೈಗೆಟುಕುವಂತಿದ್ದು ಗಂಟೆಗೊಮ್ಮೆ ಟ್ಯಾಕ್ಸಿಗಳಂತೆ ಸಂಚರಿಸುತ್ತವೆ . ನೇಪಾಳದಂತಹ ಪುಟ್ಟ ದೇಶದಲ್ಲಿ ಸುಮಾರು ೩೦ ಕ್ಕೂ ಹೆಚ್ಚು ವಿಮಾನ ಸಂಪರ್ಕಗಳಿವೆ . ಇದೊಂದು ಉತ್ತಮ ವ್ಯವಸ್ಥೆಯಾಗಿದೆ .

ಗೌತಮನ ಮನೋಲೋಕವನ್ನು ನಿರಂತರವಾಗಿ ವಹಿಸಿದ ಪ್ರಶ್ನೆಗಳು ಯಾವುವು ?

ಗೌತಮನ ಮನೋಲೋಕವನ್ನು ನಿರಂತರವಾಗಿ ದಹಿಸುತ್ತಿದ್ದ ಪ್ರಶ್ನೆಗಳಿವು , ಬದುಕು ಎಂದರೇನು ? ಅದರ ಉದ್ದೇಶ ವೇನು ? ರೋಗ , ಮುತ್ತು , ಮರಣಗಳನ್ನು ಗೆಲ್ಲುವುದು ಸಾಧ್ಯವೆ ? ಮನುಷ್ಯನ ಸಂಕಟಗಳ ಮೂಲ ಯಾವುದು ? – ಈ ಎಲ್ಲ ಪ್ರಶ್ನೆಗಳೂ ಅವನನ್ನು ಸುಡುತ್ತಿದ್ದವು .

05-06ವಾಕ್ಯಗಳಲ್ಲಿ ಉತ್ತರಿಸಿ :

ಲುಂಬಿನಿ ಪಯಣದ ಅನುಭವಗಳೇನು ?

 ಲುಂಬಿನಿಯನ್ನು ತಲುಪಲು ಬಹುದೂರದ ರಸ್ತೆಯಣ ಮಾಡಬೇಕು . ಗುಡ್ಡಗಾಡನ್ನು ಇಳಿದು , ಬಟಾಬಯಲನ್ನು ಹಿಡಿದು ಸಾಗಲು ಗಂಟೆಗಟ್ಟಲೆ ಸಮಯ ಬೇಕು , ಏಕೆಂದರೆ ಅದು ಬರೀ ಬೆಟ್ಟಗಳ ತಪ್ಪಲು , ನೇಪಾಳ ಸರ್ಕಾರ ವಿಮಾನದ ವ್ಯವಸ್ಥೆ ಯನ್ನೂ ಕಲ್ಪಿಸಿದೆ . ಹಿಮಪರ್ವತಗಳನ್ನು ತಂಪುಗಾಳೆಯನ್ನೂ ಮರೆತು ರಣಬಿಸಿಲಿಗೆ ಒಡ್ಡಿಕೊಂಡಾಗ ಸಿಗುವುದು ಲುಂಬಿನಿ . ಭಾರತದ ಗಡಿಯತ್ತ ಇರುವ ಪುಟ್ಟ ಗ್ರಾಮವದು .

ಲೇಖಕರು ಲುಂಬಿನಿ ಶಿಖರಾಗ್ರದಲ್ಲಿರುವ ತಂಪಾದ ಊರೆಂದು ಭಾವಿಸಿದ್ದರಂತೆ . ಅಲ್ಲಿಗೆ ಬಂದ ಮೇಲಷ್ಟೇ ಅವರಿಗೆ ಬುದ್ಧ ಬಿಸಿಲೂರಿನವನು ಎಂದು ತಿಳಿದುದು – ಹೀಗೆ ಲುಂಬಿನಿಯ ಪಯಣ ಸುಖಕರ ವಂದೇನೂ ಅನ್ನಿಸಲಿಲ್ಲವೆಂದೂ ಲೇಖಕರು ಹೇಳಿದ್ದಾರೆ .

ಸೌತಮನ ಮನಸ್ಸಿನ ಉರಿ ಯಾವ ಬಗೆಯದೆಂದು ಲೇಖಕರು ಊಹಿಸಿದ್ದಾರೆ ?

 ಗೌತಮನು ಹುಟ್ಟಿದ್ದು ವೈಶಾಖ ಪೂರ್ಣಿಮೆಯಂದು , ಅವನಿಗೆ ಜ್ಞಾನೋದಯವಾದುದೂ ವೈಶಾಖ ಪೂರ್ಣಿಮೆಯಂದ ಇಲ್ಲಿ ಶಾಖವೆಂಬುದು ಒಂದು ಸಂಕೇತವೆಂದು ಲೇಖಕರು ಊಹಿಸುತ್ತಾರೆ .

ಏಕೆಂದರೆ ತಮನ ಮನಸ್ಸನ್ನು ನಿರಂತರವಾಗಿ ದಹಿಸುತ್ತಿದ್ದ ಪ್ರಶ್ನೆಗಳು ಅನೇಕವಿದ್ದು , ಬದುಕು – ಆದರ ಅರ್ಥ , ರೋಗ , ಮುಪ್ಪು , ಮರಣಗಳ ರಹಸ್ಯ ಮನುಷ್ಯನ ಸಂಕಟಗಳ ಮೂಲ – ಮುಂತಾದವು ಬುದ್ಧನ ಮನಸ್ಸನ್ನು ನಿರಂತರವಾಗಿ ದಹಿಸುತ್ತಿದ್ದವು .

ಅವನಿಗೆ ಮುಂದೆ ತಾನು ರಾಜನಾದರೆ ಈ ಪ್ರಶ್ನೆಗಳಿಗೆ ಉತ್ತರ ದೊರೆಯಲಾರದೆನಿಸಿತು . ಆದ್ದರಿಂದ ಬುದ್ಧ ಏಕಾಂತದ , ಸಂನ್ಯಾಸದ ದಾರಿಯನ್ನು ಹುಡುಕಿಕೊಂಡನೆಂದು ಲೇಖಕರು ಊಹಿಸಿದ್ದಾರೆ .

ಮಾಯಾದೇವಿ ದೇವಾಲಯದ ಪರಿಸರ ಹೇಗಿತ್ತು ?

 ಮಾಯಾದೇವಿಯ ದೇವಾಲಯ ಶ್ವೇತವರ್ಣದಿಂದ ಕೂಡಿದ್ದು ಚೌಕಾಕಾರದಲ್ಲಿ ನಿಂತಿರುವುದು , ಅಲ್ಲಿನ ಪರಿಸರ ತುಂಬಾ ಶುಭ್ರವಾಗಿರುವುದು . ಅಲ್ಲಿ ಆರಾಧನೆ , ಅರ್ಚನೆ , ಆಚರಣೆಗಳ ಕಂದಾಚಾರವಿಲ್ಲ . ಇಚ್ಛೆ ಇದ್ದವರು ತ 0 ಪು ಹಾಸಿನ ಮೇಲೆ ಕುಳಿತು ಧ್ಯಾನಿಸಲು ಅವಕಾಶವಿದೆ .

ಇಲ್ಲಿನ ಕೇಂದ್ರ ಭಾಗದಲ್ಲಿ ಗೌತಮನು ಜನಿಸಿದ ಜಾಗವೆಂದು ಒಂದು ಕಲ್ಲನ್ನಿರಿಸಿದ್ದಾರೆ , ಅದು ಹಸಿರು ಬಣ್ಣದಿಂದ ಕೂಡಿ ಪಾಚಿಗಟ್ಟಿದಂತೆ ಕಾಣುತ್ತಿತ್ತೆಂದು ಲೇಖಕರು ವರ್ಣಿಸಿದ್ದಾರೆ . ಗೌತಮನ ಜನನಕ್ಕೆ ಈ ಕಲ್ಲು ಸಾಕ್ಷಿ ಯಾಗಿತ್ತೋ ಇಲ್ಲವೋ , ಆದರೆ ಚರಿತ್ರೆ ಪುರಾಣಗಳು ಸಂಧಿಸುವ ಅಮೂರ್ತ ಸಂಕೇತದಂತೆ ಆ ಶಿಲೆ ಕಾಣಿಸಿತೆಂದು ಲೇಖಕರು ವಿವರಿಸಿದ್ದಾರೆ .

ಲೇಖಕರ ಕುಟುಂಬದವರೂ ಸೇರಿದಂತೆ ಅನೇಕರು ಅಲ್ಲಿ ಕುಳಿತು ಧ್ಯಾನಿಸುತ್ತಿದ್ದರಂತೆ . ಒಟ್ಟಿನಲ್ಲಿ ಮಾಯಾದೇವಿ ದೇವಾಲಯ ಅತ್ಯಂತ ಸುಂದರವಾಗಿತ್ತೆಂದು ಲೇಖಕರು ಹೇಳಿದ್ದಾರೆ .

ಕಪಿಲವಸ್ತುವಿನಲ್ಲಿ ಲೇಖಕರ ನಿರಾಸೆಗೆ ಕಾರಣವೇನು ?

 ಲೇಖಕರು ” ಕಪಿಲವಸ್ತುವಿನಿಂದ ಹೊರಟು ಅನೇಕಾನೇಕ ಪ್ರಾಚೀನ ಸ್ಮಾರಕಗಳನ್ನು ನೋಡುತ್ತ ಹೋದರೂ ಗಾಢವಾಗಿ ಅಷ್ಟೊತ್ತಿದ್ದು ಗೌತಮ ಇಲ್ಲದ ಅರಮನೆ ಮತ್ತು ಅವರೇ ಕಟ್ಟಿಕೊಂಡ ಕಲ್ಪನೆಯ ಅರಮನೆ ಮಾತ್ರ . ಬೌದ್ಧ ಧರ್ಮವು ಪ್ರಚಲಿತವಾಗಿರುವ ಎಲ್ಲ ದೇಶಗಳೂ ಲುಂಬಿನಿಯಲ್ಲಿ ಪೈಪೋಟಿಯಿಂದ ಅದ್ದೂರಿಯಾದ ವರ್ಣರಂಜಿತ ಮೊನಾಸ್ತ್ರಿಗಳನ್ನು ನಿರ್ಮಿಸಿವೆ .

ಸೈಕಲ್ ರಿಕ್ಷಾ ಏರಿ ಇವನ್ನೆಲ್ಲ ಸುತ್ತಿ ಬಂದವು . ಆದರೆ ಹೃದಯಕ್ಕೆ ನಾಟಿದ್ದು ಗೌತಮ ಇಲ್ಲದ ಅರಮನೆಯ ಕತೆ ಹೇಳುವ ಉದ್ಯಾನವನ ಮಾತ್ರ . ನಮ್ಮ ಎದೆಯ ನಿಧಿಯಂತೆ ಪೋಷಿಸಿಕೊಂಡಿದ್ದ ಸುವರ್ಣ ಅಕಾರಗಳು ದೊಪ್ಪನೆ ಕುಸಿದು ಬಿದ್ದು ಘೋರ ನಿರಾಶೆಯಾಗಿ , ಆದರೆ ಆ ನಿರಾಶೆಯಲ್ಲಿಯೇ ಅದೇ ತಾಣದಲ್ಲಿ ನಮ್ಮದೇ ಆದ ಸುವರ್ಣ ಶಿಲ್ಪವನ್ನು ಕ್ಷಣಾರ್ಧದಲ್ಲಿ ಕಲ್ಪಿಸಿಕೊಳ್ಳುವ ಸ್ಪೋಪಜ್ಞ ಸೋಜಿಗವನ್ನು ಕಪಿಲವನ್ನು ಕಟ್ಟಿಕೊಟ್ಟಿತು ‘ ‘ ಎಂದಿದ್ದಾರೆ .

ಬುದ್ಧ ಬಿಸಿಲೂರಿನವನು ನೋಟ್ಸ್

 ಇಟ್ಟಿಗೆ ಕಟ್ಟಡಗಳ ಮೇಲೆ ಲೇಖಕರು ಏನೇನು ಚರ್ಚಿಸಿದರು ?

ಲೇಖಕರು ಮತ್ತು ಅವರ ಮಡದಿ – ಮಕ್ಕಳು ಎಲ್ಲರೂ ಇಟ್ಟಿಗೆ ಕಟ್ಟಡಗಳ ಮೇಲೆ ನಿಂತು ಇಲ್ಲದ ಅರಮನೆಯನ್ನು ಕಲ್ಪಿಸಿಕೊಂಡು ಗೌತಮನ ಜೀವನದ ಅನೇಕ ವಿಷಯವನ್ನು ಚರ್ಚಿಸಿದರು .

ಆ ಜಾಗದಲ್ಲಿ ಗೌತಮನು ಆಟವಾಡಿರಬಹುದು , ಇಲ್ಲಿ ಊಟ ಮಾಡಿರಬಹುದು , ಇಲ್ಲಿ ಪಟ್ಟಾಭಿಷೇಕವಾಗಿರಬಹುದು , ಈ ಜಾಗವು ಗೌತಮ – ಯಶೋಧರೆಯರ ಕೋಣೆ ಇದ್ದಿರಬಹುದು . ರಾಹುಲನ ಗೆಳೆಯರು ಅಲ್ಲಿ ಆಡಿರಬಹುದು , ಮಾಯಾದೇವಿಯು ಈ ಗವಾಕ್ಷಿಯಿಂದ ಮಗನನ್ನು ಕೂಗಿರಬಹುದು ,

ಇದೇ ತಿರುವಿ ನಲ್ಲಿ ಗೌತಮ ನಗರದರ್ಶನದಲ್ಲಿ ಮುಪ್ಪಿನ ಮುದುಕನನ್ನು , ಹಣ್ಣು ಹಣ್ಣು ರೋಗಿಯನ್ನು ಶವಯಾತ್ರೆಯನ್ನು ಕಂಡಿರಬಹುದು , ಮಧ್ಯರಾತ್ರಿಯಲ್ಲಿ ಗೌತಮನು ಈ ಬಾಗಿಲಿನಿಂದಲೇ ಹೊರಗೆ ನಡೆದಿರಬಹುದು – ಹೀಗೆ ಅನೇಕ ವಿಚಾರಗಳನ್ನು ಅವರೆಲ್ಲ ಚರ್ಚಿಸಿದರು .

ಕಪಿಲವಸ್ತುವಿನ ಉದ್ಯಾನವನದ ಬಗ್ಗೆ ಲೇಖಕರು ನೀಡುವ ವಿವರಗಳನ್ನು ಸಂಗ್ರಹಿಸಿರಿ ,

 ಲೇಖಕರ ಕುಟುಂಬವು ಲುಂಬಿನಿಯನ್ನು ನೋಡಿಯಾದ ಮೇಲೆ ಕಪಿಲವಸ್ತುವಿಗೆ ಬಂದಿತು . ಅದನ್ನು ಇಂದು ಲಾರ್‌ಕೋಟ್ ಎನ್ನುವರೆಂದು ಲೇಖಕರು ಹೇಳಿದ್ದಾರೆ .

ಅಲ್ಲಿ ಲುಂಬಿನಿಯಲ್ಲಿದ್ದಂತಹುದೇ ಒಂದು ಉದ್ಯಾನವನ್ನು ನಿರ್ಮಿಸಿದ್ದರು . ಈ ಉದ್ಯಾನದಲ್ಲಿಯೇ ಬುದ್ಧನ ತಂದೆ ಶುದ್ಧೋದನನ ಅರಮನೆಯಿದ್ದಿತೆಂದು ತಿಳಿದು ಲೇಖಕರು ಪುಳಕಗೊಂಡರು . ಗೌತಮನು ಬಾಲ್ಯ ಮತ್ತು ಯೌವನಗಳನ್ನು ಕಳೆದ ಸ್ಥಳವಿದು . ಅದೊಂದು ಅಪೂರ್ವ ಜಾಗವಾಗಿತ್ತು .

ಗೌತಮ ಬುದ್ಧನಾಗುವ ಮೊದಲು , ಸಿದ್ದಿಯ ಅರ್ಥ ಗಳಿಸಿ ಸಿದ್ಧಾರ್ಥನಾಗುವ ಮೊದಲು ಇಪ್ಪತ್ತೊಂದು ವರ್ಷಗಳ ಕಾಲ ರಾಜಕುಮಾರನಾಗಿದ್ದ ಪರಿಸರ ಈ ಉದ್ಯಾನವೆಂದು ಲೇಖಕರು ವರ್ಣಿಸಿದ್ದಾರೆ .

ಅಲ್ಲಿ ಬಿದ್ದಿದ್ದ ಇಟ್ಟಿಗೆಯ ಅರೆಬರ ಆಕೃತಿ , ವಿನ್ಯಾಸಗಳಲ್ಲಿ ಸಾವಿರಾರು ವರ್ಷಗಳ ಕತೆಯನ್ನು ಹೇಳುತ್ತವೆಂದಿದ್ದಾರೆ . – ಹೀಗೆ ಕಪಿಲವಸ್ತುವಿನ ಉದ್ಯಾನವನದ ಪರಿಸರವು ಅನೇಕ ನೆನಪುಗಳನ್ನು – ಊಹೆಗಳನ್ನು ಕಲ್ಪನೆಗಳನ್ನು ಹೊಮ್ಮಿಸುವಂಥದ್ದಾಗಿದ್ದಿತು .

ಸಂದರ್ಭಸೂಚಿಸಿ , ಸ್ವಾರಸ್ಯವನ್ನು ವಿವರಿಸಿ :

 “ ಬಿಸಿಲೇ ಗೌತಮನನ್ನು ಸಂನ್ಯಾಸಕ್ಕೆ ದೂಡಿರಬೇಕು .

” ಶ್ರೀ ನಾಗತಿಹಳ್ಳಿ ಚಂದ್ರಶೇಖರ್ ಅವರು ಬರೆದಿರುವ ‘ ಬುದ್ಧ ಬಿಸಿಲೂರಿನವನು ‘ ಎಂಬ ಸೊಗಸಾದ ಪ್ರವಾಸಕಥನದಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ . ಲೇಖಕರು ಮತ್ತವರ ಕುಟುಂಬ ಲುಂಬಿನಿಯು ಯಾವುದೋ ಶಿಖರಾಗ್ರದ ತಂಪು ಪ್ರದೇಶದಲ್ಲಿರಬಹುದೆಂದು ಭಾವಿಸಿದ್ದರು .

ಆದರೆ ಅಲ್ಲಿಗೆ ಹೋದಾಗ ಬುದ್ಧ ಬಿಸಿಲೂರಿನವನೆಂಬುದು ಅರ್ಥವಾಯಿತು . ಈ ಬಿಸಿಲಿನಲ್ಲಿ ಬುದ್ಧ ಬೆಳದಿಂಗಳಂತೆ

ಆವತರಿಸಿರಬಹುದೆಂದು ಚಿ ೦ ತಿಸಿದರಂತೆ ಲೇಖಕರ ಮಗಳಾದ ಸಿಹಿಪಟ್ಟಿಯು ಅಲ್ಲಿನ ಬಿಸಿಲಿನ ಝಳವನ್ನು ಅನುಭವಿಸುತ್ತಾ ‘ ಈ ಬಿಸಿಲೇ ಗೌತಮನನ್ನು ಸನ್ಯಾಸಕ್ಕೆ ದೂಡಿರಬೇಕು ‘ ಎಂದಳಂತೆ , ಲೇಖಕರಿಗೂ ಅದು ನಿಜವಿರಬಹುದನ್ನಿಸಿತಂತೆ . ಲುಂಬಿನಿಯ ಬಿಸಿಲಿಗೆ ಲೇಖಕ ಮತ್ತು ಅವರ ಮಗಳು ಪ್ರತಿಕ್ರಿಯಿಸಿದ ಬಗೆ ಇದಾಗಿದೆ .

ಇನ್ನು ಮುಂದೆ ಅನಗತ್ಯವಾಗಿ ಕೋಪಿಸಿಕೊಳ್ಳುವುದಿಲ್ಲ .

” ಶ್ರೀ ನಾಗತಿಹಳ್ಳಿ ಚಂದ್ರಶೇಖರ್ ಅವರ ‘ ಬುದ್ಧ ಪಿಸಿಲೂರಿನವನು ‘ ಎಂಬ ಪ್ರವಾಸಕಥನದಿಂದಾಯ್ದುಕೊಂಡಿರುವ ವಾಕ್ಯವಿದು ,

ಲೇಖಕರು ಮಾಯಾದೇವಿಯ ದೇವಾಲಯದಲ್ಲಿ ಈ ಮೇಲಿನಂತೆ ಶಪಥಗೈದರು . ಲೇಖಕರ ಮಗಳಾದ ಕನಸು ಪುಟ್ಟಿಯು ಗೌತಮ ಜನಿಸಿದ ಈ ಪವಿತ್ರವಾದ ಜಾಗದಲ್ಲಿ ಯಾವುದಾದರೊಂದು ದೌರ್ಬಲ್ಯವನ್ನು ದುರ್ಗುಣವನ್ನು ಬಿಟ್ಟು ಬಿಡುವುದು ಒಳ್ಳೆಯದು , ಏನಾದರೂ ಶಪಥ ಮಾಡೆಂದು ಒತ್ತಾಯಿಸಿದಾಗ ಲೇಖಕರು ಜಾಗರೂಕತೆಯಿಂದ ಇನ್ನು ಮುಂದೆ ಅನಗತ್ಯವಾಗಿ ಕೋಪಿಸಿಕೊಳ್ಳುವುದಿಲ್ಲ ‘ ಎಂದು ಶಪಥ ಮಾಡಿದರಂತೆ .

Buddha Bisilurinavanu Kannada Notes

ಮಗಳು ‘ ಅನಗತ್ಯ ‘ ಎಂಬ ಪದವನ್ನು ಸೇರಿಸುವ ಅಗತ್ಯವಿರಲಿಲ್ಲ ಎಂದು ಆಕ್ಷೇಪಿಸಿದಳು . ಮಗಳ ಒತ್ತಾಯಕ್ಕೆ ಈ ಶಪಥ ಮಾಡಿದರೂ ಕೆಟ್ಟದನ್ನು ತ್ಯಜಿಸಲು , ಒಳ್ಳೆಯದನ್ನು ಮಾಡಲು ಎಲ್ಲಾ ಸ್ಥಳವೂ ಸೂಕ್ತವೆಂದು ಲೇಖಕರು ಅರ್ಥಪೂರ್ಣವಾಗಿ ನುಡಿದಿದ್ದಾರೆ .

ಗವಾಕ್ಷಿಯಿಂದ ಮಗನನ್ನು ಕೂಗಿರಬಹುದು .

 ” ಶ್ರೀ ನಾಗತಿಹಳ್ಳಿ ಚಂದ್ರಶೇಖರ್ ಅವರ ‘ ಬುದ್ಧ ಬಿಸಿಲೂರಿನವನು ‘ ಎಂಬ ಪ್ರವಾಸಕಥನದಲ್ಲಿ ಈ ಮೇಲಿನ ವಾಕ್ಯವನ್ನು ಗಮನಿಸುತ್ತೇವೆ .

ಲೇಖಕರು ತಮ್ಮ ಕುಟುಂಬದ ಸದಸ್ಯರೊಂದಿಗೆ ಲುಂಬಿನಿಯಿಂದ ಇಪ್ಪತ್ತೇಳು ಕಿಲೋಮೀಟರ್ ದೂರದಲ್ಲಿದ್ದ ಕಪಿಲವಸ್ತುವಿಗೆ ಭೇಟಿಯಿತ್ತರು . ಅಲ್ಲಿನ ಉದ್ಯಾನವನದಲ್ಲಿ ಶುದ್ಧೋದನನ ಅರಮನೆ ಇದ್ದಿತಂತೆ .

ಅಲ್ಲಿದ್ದದ್ದು ಅರಬರ ಇಟ್ಟಿಗೆಗಳ ಕಟ್ಟಡ ಮಾತ್ರ .ಅಲ್ಲಿಗೆ ಹೋದ ಲೇಖಕರು ಇಲ್ಲದ ಅರಮನೆಯನ್ನು ಊಹಿಸಿಕೊಂಡು ಇಲ್ಲೇ ಗೌತಮನು ಆಟವಾಡಿರಬಹುದು .

ಈ ಕಿಟಕಿಯಿಂದ ಮಾಯಾದೇವಿ ತನ್ನ ಮಗನನ್ನು ಕೂಗಿ ಕರೆದಿರಬಹುದು – ಎಂದೆಲ್ಲಾ ಊಹಿಸಿಕೊಂಡ ಸಂದರ್ಭದಲ್ಲಿ ಈ ಮೇಲಿನ ವಾಕ್ಯವನ್ನು ಬರೆದಿದ್ದಾರೆ .

  ‘ ಬುದ್ಧನೇ ಇಲ್ಲದ ಅರಮನೆಗೊಬ್ಬ ಗಾರ್ಡು !!

 ಶ್ರೀ ನಾಗತಿಹಳ್ಳಿ ಚಂದ್ರಶೇಖರ್ ಅವರು ಬರೆದಿರುವ ‘ ಬುಡ್ಡ ಬಿಸಿಲೂರಿನವನು ‘ ಎಂಬ ಪ್ರವಾಸಕಥನದಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ .

 ಕಪಿಲವಸ್ತುವಿನಲ್ಲಿದ್ದ ಉದ್ಯಾನವನದಲ್ಲಿ ಶುದ್ಧೋದನನ ಅರಮನೆಯಿದ್ದ ಜಾಗವನ್ನು ಲೇಖಕರು ಸಂದರ್ಶಿಸಿದರು . ಅರೆಬರೆ ಇಟ್ಟಿಗೆಯ ಕಟ್ಟಡಗಳಲ್ಲಿ ಇಲ್ಲದ ಅರಮನೆಯನ್ನು ಕಟ್ಟಿಕೊಂಡು ಕಲ್ಪನಾಲೋಕದಲ್ಲಿ ವಿಹರಿಸುತ್ತಾ ಹೊರಬರುತ್ತಿರು ವಾಗ ‘ ಕಾಫಿಗೆ ದುಡ್ಡು ಕೊಡಿ ‘ ಎಂಬ ಆಗುಂತಕ ಧ್ವನಿಯನ್ನು ಕೇಳಿ ಲೇಖಕರು ವಾಸ್ತವಕ್ಕಿಳಿದರು .

ನೋಡಿದರೆ ಒಬ್ಬ ಸೆಕ್ಯೂರಿಟಿ ಗಾರ್ಡು ! ಬುದ್ಧನೇ ಇಲ್ಲದ ಆರಮನೆಗೊಬ್ಬ ಗಾರ್ಡು ಎಂದು ಲೇಖಕರಿಗೆ ತಮಾಷೆ ಎನಿಸಿತು .ಅವನೊಡ್ಡಿದ ರಿಜಿಸ್ಟರ್‌ನಲ್ಲಿ ವಿವರ ಬರೆದು ಅಲ್ಲಿಂದ ಹಿಂದಿರುಗಿದರು .

ಇತರೆ ಪ್ರಮುಖ ವಿಷಯಗಳ ಮಾಹಿತಿ ಲಿಂಕ್

ಶಾಸ್ತ್ರಿ ಮಾಸ್ತರ ಮತ್ತವರ ಮಕ್ಕಳು

ಜ್ಯೋತಿಷ್ಯವು ಅರ್ಥಪೂರ್ಣವೋ? ಅರ್ಥರಹಿತವೋ?

ಗಾಂಧಿ ಪಾಠದ ನೋಟ್ಸ್

Leave a Reply

Your email address will not be published. Required fields are marked *