Nirakarane Kannada Lesson Notes, ನಿರಾಕರಣೆ ಗದ್ಯ ನೋಟ್ಸ್, nirakarane lesson with Questions and Answers Pdf, Summary, 1st PUC Kannada Textbook
nirakarane kannada lesson notes
ಲೇಖಕಿಯ ಪರಿಚಯ
ವೀಣಾ ಶಾಂತೇಶ್ವರ
ಜನನ : ೧೯೪೫ ರಲ್ಲಿ ಜನಿಸಿದರು .
ಕಥಾ ಸಂಕಲ : ಕುರಿಗಾಹಿ ಬಿಲ್ಲೇಸುರ
ಕನ್ನಡಕ್ಕೆ ಅನುವಾದಗೊಂಡ ಕೃತಿ :
ಹಿಂದಿಯ ಲೇಖಕ ಆಸ್ತೇಯರ ಕಾದಂಬರಿ
ನದೀ ದ್ವೀಪಗಳು
ನದೀ ದ್ವೀಪಗಳು ಕನ್ನಡಕ್ಕೆ ಅನುವಾದಗೊಂಡ ಕೃತಿ
ಕಥಾಸಂಕಲನಗಳು :
- ಕೊನೆಯದಾರಿ
- ಕವಲು
- ಹಸಿವು
- ಬಿಡುಗಡೆ
ಪ್ರಶಸ್ತಿ ಗಳು :
- ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ
- ಅನುಪಮ ಪ್ರಶಸ್ತಿ
- ದಾನಚಿಂತಾಮಣಿ
- ಅತ್ತಿಮಬ್ಬೆ ಪ್ರಶಸ್ತಿ
- ಕಾತ್ಯಾಯಿನಿ ಸಮ್ಮಾನ್
ಅಭಿನಂದನಾ ಗ್ರಂಥ : ನಿರ್ದಿಂಗತ
ಒಂದು ವಾಕ್ಯದಲ್ಲಿ ಉತ್ತರಿಸಿ
ರಕ್ಷಾ ಕರಂಡವು ಯಾರ ಕೈಯಿಂದ ಕೆಳಗೆ ಬಿದ್ದಿತು ?
ರಕ್ಷಾ ಕರಂಡವು ಭರತಕುಮಾರನ ಮುಂಗೈಯಿಂದ ಕೆಳಗೆ ಬಿದ್ದಿತು .
ಭರತನ ತಂದೆಯ ಹೆಸರೇನು ?
ಭರತನ ತಂದೆಯ ಹೆಸರು ದುಷ್ಯಂತ ಮಹಾರಾಜ
ಶಕುಂತಲೆಯ ತಾಯಿಯ ಹೆಸರೇನು ?
ಶಕುಂತಲೆಯ ತಾಯಿಯ ಹೆಸರು ಮೇನಕೆ
ಯಾರ ಶ್ರೇಯಸ್ಸಿಗಾಗಿ ಶಕುಂತಲೆ ಅರಮನೆಗೆ ಬಂದಿದ್ದಾಳೆ ?
ತನ್ನ ಮಗನಾದ ಭರತಕುಮಾರನ ಶ್ರೇಯಸ್ಸಿಗಾಗಿ ಶಕುಂತಲೆ ಅರಮನೆಗೆ ಬಂದಿದ್ದಾಳೆ .
ಶಕುಂತಲೆಯ ಅಂತಃಪುರದಿಂದ ದುಷ್ಯಂತ ಹೊರ ನಡೆದದ್ದು ಹೇಗೆ ?
ದುಷ್ಕಂತ ಮಹಾರಾಜನು ಭಾರವಾದ ಹೆಜ್ಜೆಗಳನ್ನಿಡುತ್ತಾ ಶಕುಂತಲೆಯ ಅಂತಃಪುರದಿಂದ ಹೊರ ನಡೆದನು .
ಭರತನ ತಂದೆಯ ಹೆಸರೇನು ?
ಭರತನ ತಂದೆಯ ಹೆಸರು ದುಷ್ಯಂತ ಮಹಾರಾಜ
ಶಕುಂತಲೆಯ ತಾಯಿಯ ಹೆಸರೇನು ?
ಶಕುಂತಲೆಯ ತಾಯಿಯ ಹೆಸರು ಮೇನಕೆ
2 – 3 ವಾಕ್ಯಗಳಲ್ಲಿ ಉತ್ತರಿಸಿ
ಆರ್ಯಪುತ್ರ ಬಂದಿದ್ದಾನೆ ಎಂದಾಗ ಶಕುಂತಲೆಯ ಪ್ರತಿಕ್ರಿಯೆ ಏನು ?
ಶಕುಂತಲೆಗೆ ಆಶ್ಚರ್ಯವಾಗುವುದು . ” ಹೌದೆ ? ನಿಜವಾಗಿಯೂ ಆರ್ಯಪುತ್ರ ನನ್ನನ್ನು ಕಾಣಲು , ತನ್ನೊಂದಿಗೆ ಕರೆದೊಯ್ಯಲು ಬಂದಿರುವನೇ ದುಷ್ಕಂತ ? ‘ ‘ ಎಂಬ ಪ್ರಶ್ನೆಗಳ ಸರಮಾಲೆಯೇ ಅವಳಲ್ಲಿ ಮೂಡಿತು .
ಅಪರಾಜಿತಾ ಬಳ್ಳಿಯ ಗುಣ ಯಾವುದು ?
ಅಪರಾಜಿತಾ ಬಳ್ಳಿಯನ್ನು ಭರತಕುಮಾರನ ಜಾತಕರ್ಮ ಸಮಯದಲ್ಲಿ ಪೂಜ್ಯರಾದ ಮಾರೀಚರು ಕೈಗೆ ಕಟ್ಟಿ ತಂದೆ – ತಾಯಿಯ ವಿನ : ಯಾರಾದರೂ ಅದನ್ನು ಮುಟ್ಟಿದರೆ ಅದು ಹಾವಾಗಿ ಮುಟ್ಟಿದವರನ್ನು ಕಚ್ಚುತ್ತಿತ್ತು.
ಶಕುಂತಲೆ ತನ್ನ ಬದುಕು ಏನಾಗಿದೆ ಎಂದು ಯೋಚಿಸುತ್ತಾರೆ ?
ಶಕುಂತಲೆಯು ತನ್ನ ಬದುಕು ಒಂದು ಅಗ್ನಿಕುಂಡವಾಗಿದೆ , ಬೆಂಗಾಡಾಗಿದೆ . ದಾವಾನಲವಾಗಿದೆ , ಬತ್ತಿ ಹೋದ ಸಮುದ್ರ ವಾಗಿದೆ ಎಂದು ಯೋಚಿಸಿದಳು .
ಶಕುಂತರ ಕಂಚಿನ ಧ್ವನಿಯಿಂದ ದುಷ್ಕಂತನಿಗೆ ಹೇಳಿದ್ದೇನು ?
ನನ್ನ ಮನಸ್ಸನ್ನು ಶಾಂತಗೊಳಿಸುವುದಿಲ್ಲವೆ ? ಎಂದ ದುಷ್ಕಂತನಿಗೆ ನಿಲ್ಲು ಮಹಾರಾಜ ‘ ಎಂದು ಕಂಚಿನ ಕಂಠದಲ್ಲಿ ನುಡಿದಳು.
ಅರಮನೆಗೆ ಯಾವ ಕಾರಣಕ್ಕಾಗಿ ಬಂದಿದ್ದೇನೆಂದು ಶಕುಂತಲೆ ಹೇಳುತ್ತಾರೆ ?
ಶಕುಂತಲೆ ‘ ಮಹಾರಾಜ , ನಾನು ಅರಮನೆಗೆ ಬಂದಿರುವುದು ಕುಮಾರನ ಭರತನ ಶ್ರೇಯಸ್ಸಿಗಾಗಿ ಮಾತ್ರ ಆತನ ವಿದ್ಯಾಭ್ಯಾಸ , ಸರಿಯಾಗಿ ತರಬೇತಿ ನಡೆಯಬೇಕು ಎಂಬ ಹಂಬಲದಿಂದ ನಿನ್ನ ನಂತರ ಅವನು ಈ ಸಾಮ್ರಾಜ್ಯದ ಕೀರ್ತಿಯನ್ನು ಎಲ್ಲ ಕಡೆ ಹರಡುವಂತೆ ನೋಡಿಕೊಳ್ಳಬೇಕಲ್ಲ . ಅವನನ್ನು ಹಾಗೆ ಬೆಳೆಸುವ ಜವಾಬ್ದಾರಿ ನಮ್ಮಿಬ್ಬರದಲ್ಲವೆ ? ‘ ‘ ಎಂದು ದುಷ್ಟಂತನಿಗೆ ಹೇಳಿದಳು .
ದುಷ್ಯಂತ ರಾಜನು ಶಕುಂತಲೆಯ ಅಂತಃಪುರದಿಂದ ಹೊರ ನಡೆದಾಗ ಆತನ ಮನಸ್ಥಿತಿ ಹೇಗಿತ್ತು ?
ದುಷ್ಕಂತ ರಾಜನು ಶಕುಂತಲೆಯ ಅಂತಃಪುರದಿಂದ ಹೊರ ನಡೆದಾಗ ಅವನ ಮನಸ್ಸನ್ನು ದುಃಖವೆಂಬ ಕತ್ತಲೆ ಆವರಿಸಿತ್ತು . ಭಾರವಾದ ಹೆಜ್ಜೆಗಳನ್ನಿಡುತ್ತಾ ನಿರಾಸೆ , ಪಶ್ಚಾತ್ತಾಪದ ಮನಸ್ಥಿತಿಯಲ್ಲಿ ಆತನಿದ್ದನು .
5-6 ವಾಕ್ಯಗಳಲ್ಲಿ ಉತ್ತರಿಸಿ
ಶಕುಂತಲೆ ತನ್ನ ಬದುಕನ್ನು ಅರ್ಥೈಸಿಕೊಂಡದ್ದು ಹೇಗೆ ? ತಿಳಿಸಿ .
ತನ್ನನ್ನು ಪ್ರೀತಿಸಿ ತಿರಸ್ಕರಿಸಿದ ದುಷ್ಕಂತ ಮಹಾರಾಜನಿಗಾಗಿ ನಿರೀಕ್ಷೆಯ ನೋವಲ್ಲಿ ನಲುಗುತ್ತಿರುವ ಬದುಕು ತನ್ನದೆಂದು ಶಕುರಿತಲೆ ಯೋಚಿಸುತ್ತಾಳೆ .
ಹಲವು ವರ್ಷಗಳಿಂದ ರಾತ್ರಿ ಹಗಲೆನ್ನದೆ ಅವಮಾನದ ಅಗ್ನಿಯಲ್ಲಿ ಬೇಯುತ್ತಿರುವ , ಬದುಕು ತನ್ನದೆಂದು ಯೋಚಿಸುತ್ತಾಳೆ ಅವಳಲ್ಲಿ ತುಂಬಿರುವುದು ಬರಿ ನೋವಿನ ನೆನಪುಗಳು ಮಳೆ ಸುರಿಯುತ್ತಿರುವ ಅದೆಷ್ಟು ರಾತ್ರಿ ಗಳನ್ನು ತಾನು ಆತನ ನೆನಪಿನಲ್ಲಿ ಕಣ್ಣೀರು ಸುರಿಸುತ್ತಾ ಕಳೆದೆ ? ಆತನ ವ್ಯರ್ಥ ನಿರೀಕ್ಷೆಯಲ್ಲಿ ಸಂಕಟಪಡುತ್ತಾ ಕಳೆದೆ ? ಇಡೀ ತನ್ನ ಜೀವನವೇ ಆತನಿಗಾಗಿ ಕಾಯುವಿಕೆಯಾಗಿ ಹೋಯಿತು .
ತನ್ನ ಬದುಕು ಒಂದು ಅಗ್ನಿಕುಂಡವಾಗಿದೆ , ಬೆಂಗಾಡಾಗಿದೆ . ರಾಮನಲ ವಾಗಿದೆ , ಬತ್ತಿಹೋದ ಸಮುದ್ರವಾಗಿದೆ ಎಂದು ಅರ್ಥೈಸಿರುವಳು .
ದುಷ್ಯಂತ ಮತ್ತು ಶಕುಂತಲೆ ನಡುವೆ ಅಂತಃಪುರದಲ್ಲಿ ನಡೆದ ಮಾತುಗಳನ್ನು ವಿವರಿಸಿ
ಶಕುಂತಲೆಯ ಅಂತಃಪುರಕ್ಕೆ ಬಂದ ದುಷ್ಯಂತ ಮಹಾರಾಜನ ” ದೇವಿ , ನಾನಿಂದು ಪರಮಸುಖಿ ! ‘ ಎಂದಾಗ ಶಕುಂತಲೆ ಏನನ್ನೂ ಹೇಳದೆ ಸುಮ್ಮನಿದ್ದಳು . ದುಷ್ಕಂತನೇ ಮುಂದುವರೆದು ” ವರ್ಷಗಳ ಕಾಲ ತಪಿಸಿರುವ ನನ್ನ ಮನಸ್ಸನ್ನು ಶಾಂತ ಗೊಳಿಸುವುದಿಲ್ಲವೇ ? ಇನ್ನೂ ಏನು ಯೋಚಿಸುತ್ತಿರುವೆ ? ಎಂದು ನಯವಾಗಿ ನುಡಿದಾಗ , ಶಕುಂತಲೆ ಕಂಚಿನ ಕಂಠದಲ್ಲಿ ನಿಲ್ಲು ಮಹಾರಾಜ ‘ ಎಂದಳು .
ಮತ್ತು ಭರತಕುಮಾರನ ಶ್ರೇಯಸ್ಸಿಗಾಗಿ ಮಾತ್ರ ತಾಯಿಯ ಕರ್ತವ್ಯ ನಿರ್ವಹಿಸಲು ತಾಸು ಅರಮನೆಗೆ ಬಂದಿರುವುದಾಗಿ ಹೇಳಿದಳು . ಅವಳ ಮಾತುಗಳಿಂದ ಆಘಾತಗೊಂಡ ದುಷ್ಯಂತ ನೀನಿನ್ನೂ ನನ್ನನ್ನು ಕ್ಷಮಿಸಲಿಲ್ಲವೆ ? ‘ ಎಂದು ಕೇಳಿದಾಗ ಶಕುಂತಲೆಯು ಒಬ್ಬರನ್ನೊಬ್ಬರು ಒಪ್ಪಿಕೊಳ್ಳುವ ಸಂದರ್ಭದಲ್ಲಿ ಮಾತ್ರ ಕ್ಷಮೆಗೆ ಅರ್ಥವಿದೆ ಮಹಾರಾಜ . ಆದರೂ ನಿನ್ನ ಮನಸ್ಸಿಗೆ ಸಮಾಧಾನವಾಗುವಂತಿದ್ದರೆ ಇದೋ , ನಿನ್ನನ್ನು ಕ್ಷಮಿಸಿದ್ದೇನೆ ‘ ಎಂದಳು .
ಇದೇನು ನನಗೆ ಶಿಕ್ಷೆ ಕೊಡಬೇಕೆಂದು ನಿರ್ಧರಿಸಿರುವೆಯಾ ? ” ಎಂಬ ದುಷ್ಯಂತನ ಪ್ರಶ್ನೆಗೆ ಶಕುಂತಲೆ ತಾನು ಶಿಕ್ಷೆ ಕೊಡುವನ್ನು ಕಠಿಣ ಮನಸ್ಸಿನವಳಲ್ಲ ನಂದಳು , ಉಂಗುರ ಕಳೆದುಹೋದುದಕ್ಕೆ ತನಗೆ ಮರವಾಯಿತೆಂದು ದುಷ್ಕಂತ ಸಮರ್ಥಿಸಿಕೊಳ್ಳಲು ಯತ್ನಿಸಿದನು . ಅದಕ್ಕೆ ಶಕುಂತಲೆಯು ” ಉಂಗುರವು ಕಳೆದುಹೋಯಿತೆಂಬ ಕ್ಷುಲ್ಲಕ ನಪದಿಂದ ಒಬ್ಬ ಗಂಡಸು ಹೆಣ್ಣನ್ನು ದೂರ ಮಾಡುವುದಾದರೆ ಆ ಪ್ರೀತಿಗೆ ಅರ್ಥವಿಲ್ಲ .
ನಿರಾಕರಣೆ ಗದ್ಯ ನೋಟ್ಸ್
ಅಂಥವನನ್ನು ಕೂಡಲು ನನ್ನ ಆತ್ಮ ಸಮಾನ ಒಪ್ಪುವುದಿಲ್ಲ . ಹೆಣ್ಣಾಗಿ ನಾನು ಆತ್ಮಸಾಕ್ಷಿಗೆ ವಿರುದ್ಧವಾಗಿ ವರ್ತಿಸಲಾರ . ಪ್ರಾಪ್ತನಾದ ನಿನಗೆ ಹೆಚ್ಚಿಗೆ ಹೇಳಲಾರೆ ಎಂದು ತನ್ನ ಅಂತಿಮ ನಿರ್ಧಾರವನ್ನು ತಿಳಿಸಿದಳು . ದುಷ್ಕಂತ ನಿರ್ವಾಹ ವಿಲ್ಲದೆ ಅಲ್ಲಿಂದ ಹೊರಡಬೇಕಾಯಿತು .
ದುಷ್ಯಂತನನ್ನು ನಿರಾಕರಿಸಲು ಶಕುಂತಲೆ ಕೊಡುವ ಕಾರಣಗಳೇನು ? ತಿರಸಿ
ಪತಿ ಎಂತಹವನೇ ಇರಲಿ , ಆತನನ್ನು ತಿರಸ್ಕರಿಸುವ ಹೀನ ವಿಚಾರ ಆರ್ಯಗೆ ಬರಬಾರದೆಂದು ತಿಳಿದಿದ್ದರೂ ಶಕುಂತಲೆ ದುಷ್ಕಂತನನ್ನು ತಿರಸ್ಕರಿಸುತ್ತಾಳೆ . ತನ್ನನ್ನು ನಿರಾಕರಿಸಿದ ಅಪಮಾನ , ನೋವು ನಿರೀಕ್ಷೆಗಳಲ್ಲಿ ಬೇಯುವಂತೆ ಮಾಡಿದ ದುಷ್ಯಂತನನ್ನು ಕ್ಷಮಿಸುವುದಕ್ಕಿಂತ ಧಿಕ್ಕರಿಸುವುದೇ ಸೂಕ್ತವೆಂದು ತೋರುತ್ತದೆ .
ಆತ ಘಾಸಿಗೊಳಿಸಿದ ಅಂತರಾಳದ ಒಳಗು ಮತ್ತೆ ಚೇತರಿಸಿಕೊಳ್ಳದು . ಆತ್ಮಸಮಾನಕ್ಕೆ ಮಾಯಲಾರದ ಗಾಯವಾಗಿರುವುದರಿಂದ ದುಷ್ಯಂತನಲ್ಲಿ ಮೊದಲಿನ ಪ್ರೀತಿ ಚಿಗುರಲಾರದು .
ದುಷ್ಯಂತ ತನ್ನನ್ನು ಒಪ್ಪಿಕೊಂಡಿರುವಂತೆ ತಾನು ಅವನನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ . ಉಂಗುರ ಕಳೆಯಿತೆಂಬ ಕ್ಷುಲ್ಲಕ ಕಾರಣಕ್ಕಾಗಿ ತನ್ನನ್ನು ದೂರ ಮಾಡಿದ ದುಷ್ಕಂತನ ಪ್ರೀತಿ ಅರ್ಥವಿಲ್ಲದ್ದೆಂದು ಶಕುಂತಲೆಯು ಮುಷ್ಕಂತನನ್ನು ತಿರಸ್ಕರಿಸುತ್ತಾಳೆ.
ನಿರಾಕರಣೆ ಕತೆಯಲ್ಲಿ ಬರುವ ಶಕುಂತಲೆಯ ವ್ಯಕ್ತಿತ್ವವನ್ನು ವಿವರಿಸಿ ,
ನಿರಾಕರಣೆ ಕತೆಯಲ್ಲಿ ಬರುವ ಶಕುಂತಲೆಯು ಸ್ತ್ರೀ ಸಮುದಾಯದ ಅತ್ಮಗೌರವವನ್ನು ಕಾಯುವ ಪುರುಷನ ಅವಕಾಶವಾದಿ ತನವನ್ನು ಧಿಕ್ಕರಿಸುವ ದಿಟ್ಟ ವ್ಯಕ್ತಿತ್ವವನ್ನು ಹೊಂದಿದ ಹೆಣ್ಣಾಗಿದ್ದಾಳೆ . ತನ್ನನ್ನು ಅವಮಾನಿಸಿದ ತನ್ನ ಒಳಗಿನ ಕೋಮಲ ಸುಂದರ ಭಾವನೆಗಳನ್ನು ಹೊಸಕಿಹಾಕಿದ , ಬದುಕನ್ನು ದಾವಾನಲ ಬತ್ತಿದ ಸಮುದ್ರವಾಗಿಸಿದ ಪುರುಷನನ್ನು ಒಪ್ಪಿಕೊಳ್ಳಬಾರದೆಂಬ ತಿಳಿವಳಿಕೆಯುಳ್ಳವಳಾಗಿದ್ದಾಳೆ .
ಪತಿ ಎಂತಹವನೇ ಇರಲಿ ಆತನನ್ನು ತಿರಸ್ಕರಿಸುವ ಹೀನ ವಿಚಾರ ಆರ್ಯಸ್ತ್ರೀಗೆ ಬರಬಾರದು ‘ ಎಂಬ ಸಂಗತಿಯನ್ನು ಮೀರಿಯೂ ಅವಳು ದುಷ್ಕಂತನನ್ನು ನಿರಾಕರಿಸುವ ದಿಟ್ಟತನ ತೋರುತ್ತಾಳೆ .
ದುಷ್ಕಂತನ ಸಮಯಸಾಧಕತನದ ಪ್ರೀತಿಗಿಂತ , ಹೆಣ್ಣಾಗಿ ತನ್ನ ಆತ್ಮಗೌರವ ಮುಖ್ಯ ಎಂದು ಯೋಚಿಸುವ , ಅದನ್ನು ಸ್ಪಷ್ಟವಾಗಿ ದುಷ್ಟಂತನಿಗೆ ಹೇಳಿ , ಅವನನ್ನು ತಿರಸ್ಕರಿಸುವ ದಿಟ್ಟ ವ್ಯಕ್ತಿತ್ವದ ಪಾತ್ರವಾಗಿ ಶಕುಂತಲೆ ‘ ನಿರಾಕರಣೆ ‘ ಕತೆಯಲ್ಲಿ ಚಿತ್ರಿತವಾಗಿದ್ದಾಳೆ .
ಪುರುಷ ಸಮಾಜದ ಬಗ್ಗೆ ಶಕುಂತಲೆಯ ನಿಲುವೇನು ?
ಶಕುಂತಲೆ ಹೆಣ್ಣಿಗೆ ಮಾತ್ರ ನೋವು ಸಂಕಟ ಅಪಮಾನದ ಬದುಕನ್ನು ಪುರುಷ ಸಮಾಜ ಕಲ್ಪಿಸಿದೆಯೆಂದು ಯೋಚಿಸು ತಾಳೆ . ಪುರುಷನಿಗೆ ತಾನು ಮಾಡಿದ ತಪ್ಪಿನಿಂದ ಸುಲಭವಾಗಿ ಪಾರಾಗಲು ನೂರು ದಾರಿಗಳಿವೆ .
ತನ್ನ ಅನುಚಿತ ವರ್ತನೆಯಿಂದ ಬೇರೆಯವರಿಗೆ ಆಗುವ ನೋವಿನ ಹೊಣೆಯಿಂದ ತಪ್ಪಿಸಿಕೊಳ್ಳಲು ಪುರುಷನಿಗೆ ನೂರು ಮಾರ್ಗಗಳಿವೆ .
ಪುರುಷ ತಪ್ಪು ಮಾಡಿದ್ದಾನೆಂದರೆ ಸಮಾಜ ಅದನ್ನು ಗಂಭೀರವಾಗಿ ಪರಿಗಣಿಸುವುದೇ ಇಲ್ಲ . ಲಜ್ಜೆಗೇಡಿತನದ ಬದುಕು ಪುರುಷ ಸಮಾಜದ್ದೆಂದು ಶಕುಂತಲೆ ಯೋಚಿಸುವಳಲ್ಲದೆ ಅತ್ಯಾಭಿಮಾನವಿರುವ ಪ್ರತಿ ಹೆಣ್ಣೂ ಇಂತಹ ಪುರುಷನನ್ನು ಧಿಕ್ಕರಿಸಬೇಕೆಂಬ ಎಲುವನ್ನು ತಾಳಿದ್ದಾಳೆ.