ದೇವನೊಲಿದನ ಕುಲವೇ ಸತ್ಕುಲಂ notes, devanolidana kulave satkulam notes, ದೇವನೊಲಿದನ ಕುಲವೇ ಸತ್ಕುಲಂ ಸಾರಾಂಶ, 1st PUC Kannada Textbook Answers
ದೇವನೊಲಿದನ ಕುಲವೇ ಸತ್ಕುಲಂ notes
ಕವಿ ಪರಿಚಯ
ದೇವನೊಲಿದನ ಕುಲವೇ ಸತ್ಕುಲಂ ‘ ಎಂಬ ಕಾವ್ಯವನ್ನು ಕನ್ನಡದ ಕ್ರಾಂತಿ – ಭಕ್ತಿಕವಿ ಎನಿಸಿಕೊಂಡಿರುವ ಹರಿಹರನು ರಚಿಸಿರುವನು.
ಹರಿಹರ ಕವಿಯು ಬಲ್ಲಾಳ ರಾಜನ ಆಸ್ಥಾನದಲ್ಲಿ ಕೆಲಕಾಲ ಕರಣಿಕನಾಗಿದ್ದನೆಂದು ಪ್ರತೀತಿ ಇದೆ. ಆ ಉದ್ಯೋಗವು ಅವನ ಸ್ವಭಾವಕ್ಕೆ ಸರಿ ಬರುವುದಿಲ್ಲ ಎಂದು ಅದನ್ನು ತ್ಯಜಿಸಿ ನಂತರ ಹಂಪೆಗೆ ಬಂದು ನೆಲೆಸಿದನು . ಈತ ತನ್ನ ಎಲ್ಲ ರಗಳೆಗಳಲ್ಲಿಯೂ ಹಂಪೆಯ ವಿರೂಪಾಕ್ಷನನ್ನು ಸ್ತುತಿಸಿರುವನು .
ಹರಿಹರನು ಪಂಡಿತ ಕವಿಯಾದರೂ ಅವನು ಬರೆದಿರುವ ರಗಳೆಗಳಲ್ಲಿ ಪಾಂಡಿತ್ಯ ಪ್ರದರ್ಶನದ ಹುಚ್ಚು ತೋರಿಲ್ಲ . ಅವನು ರಚಿಸಿರುವ ರಗಳೆಗಳು ವೀರಶೈವ ಭಕ್ತರ ಜೀವನವನ್ನು ಕಥಾವಸ್ತುವನ್ನಾಗಿ ಹೊಂದಿವೆ .
ಐತಿಹಾಸಿಕ ವ್ಯಕ್ತಿಗಳ ಕಥೆಯನ್ನು ಪವಾಡ ಪೂರ್ಣವಾಗಿ ಪೌರಾಣಿಕ ನೆಲೆಯಲ್ಲಿ ಬರೆಯುವುದು ಹರಿಹರನ ವೈಶಿಷ್ಟ್ಯ ಕನ್ನಡ ನೆಲದ ಶಿವಶರಣರಾದ ಅಲ್ಲಮ ಪ್ರಭು , ಬಸವಣ್ಣ , ಅಕ್ಕಮಹಾದೇವಿ ಮೊದಲಾದವರ ಜೀವನ ಕಥೆಯನ್ನು ರಗಳೆಯ ಛಂದಸ್ಸಿನಲ್ಲಿ ಬರೆದಿರುವುದರೊಡನೆ ತಮಿಳುನಾಡಿನ ಅರವತ್ತೂರು ಪುರಾತನರ ಕಥೆಗಳನ್ನು ರಗಳೆಯಲ್ಲಿ ಬರೆದಿದ್ದಾನೆ .
ಕ್ರಿ.ಶ. 12ನೇ ಶತಮಾನದ ಕೊನೆಯಲ್ಲಿ ಹರಿಹರ ಕವಿಯು ಜೀವಿಸಿದ್ದನು.
ತಂದೆ : ಮಹದೇವ ಭಟ್ಟ
ತಾಯಿ : ಶರ್ವಾಣಿ
ತಂಗಿ : ರುದ್ರಾಣಿ
ರಗಳೆ ಕವಿ ಎಂದು ಯಾರನ್ನು ಕರೆಯುತ್ತಾರೆ ?
ಹರಿಹರನನ್ನು ‘ ರಗಳೆ ಕವಿ ‘ ಎಂದೇ ಕನ್ನಡ ಸಾಹಿತ್ಯದಲ್ಲಿ ಗುರುತಿಸಿದ್ದಾರೆ
ಹರಿಹರನ ಸೋರದ ಅಳಿಯ ಯಾರು?
ರಾಘವಾಂಕ
ಹರಿಹರ ಕವಿಯು ಈ ರಗಳೆ ಕಾವ್ಯಗಳೊಡನೆ ‘ ಗಿರಿಜಾ ಕಲ್ಯಾಣ‘ವೆಂಬ ಚಂಪೂಕಾವ್ಯವನ್ನೂ ರಚಿಸಿದ್ದಾನೆ .
ಈ ಕಾವ್ಯದಲ್ಲಿ ಪಾಂಡಿತ್ಯ ಮತ್ತು ಸಂಸ್ಕೃತ ಭೂಯಿಷ್ಯ ಭಾಷಾಶಕ್ತಿಗಳ ಪ್ರದರ್ಶನವನ್ನು ನೋಡಬಹುದು . ಹರಿಹರನು ರಚಿಸಿರುವ
ಪುಷ್ಪರಗಳೆ
- ಗಿರಿಜಾ ಕಲ್ಯಾಣ ಎಂಬ ಚಂಪೂಕಾವ್ಯ,
- ಪಂಪಾಶತಕ,
- ರಕ್ಷಾಶತಕ,
- ಮುಡಿಗೆಯ ಅಷ್ಟಕ .
- ಶಿವ ಶರಣರ ರಗಳೆಗಳನ್ನೂ ರಚಿಸಿದ್ದಾನೆ.ಇದರಲ್ಲಿ 63 ಪುರಾತನರು ಶಿವ ಶರಣರ ರಗಳೆಗಳು ಇವೆ.
ಹರಿಹರನ ರಗಳೆಗಳು
- ಮಹಾದೇವಿಯಕ್ಕನ ರಗಳೆ
- ಬಸವರಾಜದೇವರ ರಗಳೆ
- ಕುಂಬಾರ ಗುಂಡಯ್ಯನ ರಗಳೆ
- ಮಾದಾರ ಚೆನ್ನಯ್ಯ’ನ ರಗಳೆ
- ಪ್ರಭುದೇವರ ರಗಳೆ
- ತಿರುನೀಲಕಂಠದೇವರ ರಗಳೆ
- ನಂಬಿಯಣ್ಣನ ರಗಳೆ
- ಇಳೆಯಾಂಡ ಗುಡಿಮಾರ’ನ ರಗಳೆ
- ರೇವಣಸಿದ್ಧೇಶ್ವರ ರಗಳೆಗಳು’ ಹರಿಹರನ ಪ್ರಮುಖ ರಗಳೆಗಳು.
ಪದ್ಯಗಳ ಭಾವಾರ್ಥ/ ಸಾರಾಂಶ
ಹರಿಹರನು ರಚಿಸಿರುವ ಪ್ರಸ್ತುತ ರಗಳೆಯು ಶಿವಭಕ್ತನಾದ ಮಾದರ ಚೆನ್ನನ ಶಿವಭಕ್ತಿಯನ್ನು ಅನಾವರಣಗೊಳಿಸುತ್ತದೆ . ಮಾದರ ಚೆನ್ನಯ್ಯ 12ನೆಯ ಶತಮಾನದ ಒಬ್ಬ ಪ್ರಮುಖ ವಚನಕಾರ .
ಅವನು ಶಿವನಲ್ಲಿ ಹೊಂದಿದ್ದ ಭಕ್ತಿ ಅಪರೂಪದ್ದು . ಹರಿಹರನು ಮಾದರಚೆನ್ನನ ಭಕ್ತಿ ಭಾವವನ್ನು ತನ್ನ ಈ ರಗಳೆಯಲ್ಲಿ ಹಿಡಿದಿಡುವ ಪ್ರಯತ್ನ ಮಾಡಿರುವನು .
ಶ್ರೀಶಿವನ ಸೆಜ್ಜೆಯೆನಿಸುವ ಚೋಳದೇಶವದು
ಈಶಭಕ್ತವ್ರಜಕೆ ನಿಜಸುಖನವಾಸವದು
ಬೆಳೆಯಿಲ್ಲದಿಳೆಯಿಲ್ಲ ಬನವಿಲ್ಲದೂರಿಲ್ಲ
ನೆಳಲ ತಂಪಿಲ್ಲದಾರವೆಯಿಲ್ಲದೆಡೆಯಿಲ್ಲ
ಕಾವೇರಿ ಸೋಂಕಿದರ ಪಾಪಮಂ ಸೋವೇರಿ
ಕಾವೇರಿ ಸಕಲ ಸಸ್ಯಾಳಿಯಂ ಕಾವೇರಿ
ಹರಿದಳಾ ದೇಶದೊಳು ಹರಭಕ್ತಿರಸದಂತೆ
ಧರಣೀತಳಕ್ಕಮೃತ ವಿಮಲವಾರಿಧಿಯಂತೆ
ಇಂತಪ್ಪ ದೇಶಮಂ ಪಾಲಿಸುವ ಭೂಮಿಪಂ
ಸಂತತಂ ಕರಿಕಾಲ ಚೋಳನೆಂಬಾ ನೃಪಂ
ಪದ್ಯದ ಆರಂಭದಲ್ಲಿ ಹರಿಹರನು ಚೋಳದೇಶದ ವರ್ಣನೆಯನ್ನು ಮಾಡಿರುವನು . ನಾಡಿನ ವರ್ಣನೆಯಿಂದ ಪದ್ಮ ರಚಿಸುವುದು ಪಾರಂಪರಿಕ ಪದ್ಧತಿಯಾಗಿದೆ . ಶಿವನ ನೆಲೆಮನೆಯೆಂಬಂತೆ ಚೋಳದೇಶವು ಕಂಗೊಳಿಸುತ್ತಿದ್ದಿತಂತೆ , ಶಿವಭಕ್ತರ ಸಮೂಹಕ್ಕೆ ಆ ನಾಡು ಸುಖದ ಬೀಡಾಗಿತ್ತು .
ಎಲ್ಲೆಲ್ಲೂ ಸಮೃದ್ಧ ಬೆಳೆ ಕೊಡುವ ಫಲವತ್ತಾದ ಭೂಮಿ , ಹಸಿರು ಕಾಡು ತುಂಬಿ ನಿಂತ ಊರುಗಳು . ತಂಪೆರೆಯುವ ನೆಳಲನ್ನು ನೀಡುವ ಉದ್ಯಾನವನಗಳು ಶೋಭಿಸುತ್ತಿದ್ದವೆಂದು ಹರಿಹರ ವರ್ಣಿಸಿದ್ದಾನೆ .
ಹರಭಕ್ತಿ ರಸವೇ ಹರಿಯುತ್ತಿದೆಯೇನೋ ಎಂಬಂತೆ ಪಾಪವನ್ನು ತೊಳೆಯುವ ಕಾವೇರಿ ಅಲ್ಲಿ ತುಂಬಿ ಹರಿಯುತ್ತಿದ್ದು ಸಕಲ ಸಸ್ಯಾವಳಿಗಳನ್ನು ಪೊರೆಯುತ್ತಿದ್ದಳಂತೆ.
ಕಾವೇರಿ ನದಿಯಿಂದಾಗಿ ಆ ನೆಲವು ಅಮೃತದ ಸಮುದ್ರವೆನಿಸಿದ್ದಿತು . ಇಂತಹ ಈ ಸುಂ ” ಕರಿಕಾಲ ಚೋಳ ” ” ನೆಂಬ ರಾಜನು ಆಳುತ್ತಿದ್ದನೆಂದು ಕವಿ ಹರಿಹರನು ವರ್ಣಿಸಿದ್ದಾನೆ .
devanolidana kulave satkulam notes
ಶಬ್ದಾರ್ಥಗಳು
ಆ ಚೋಳರಾಜನೊಪ್ಪುವ ರಾಜಧಾನಿಯೊಳು
ವಾಚಾಮಗೋಚರವದೆನಿಸಿದಂತವನಿಯೊಳು
ಜಾತಿ ಮಾದರ ಚೆನ್ನನೆಂಬ ನಾಮಂ ತನಗೆ
ಓತಿರ್ಪುದನ್ವರ್ಥವಾಗಿ ಮದುರ್ವರೆಗೆ
ಇರ್ದು ಶಂಕರನ ಗುಪ್ತಾರಾಧನೆಗೆ ನಚ್ಚಿ
ಸಾರ್ದು ಶಿವಭಕ್ತಿಯಂ ಬೀಜದಿಚ್ಚೆಗೆ ಮೆಚ್ಚಿ
ಭಕ್ತ ಚೋಳನ ತುರಂಗ ಬದುಕಬೇಕೆಂದು
ಯುಕ್ತಿಯಿಂ ಕಾಯಕಮನೆಡೆಗೊಂಡನೊಲಿದಂದು
ಕಂಪಣದ ಹುಲ್ಲಕಾಯಕವನೇ ಮರೆ ಮಾಡಿ
ಹಂಪಿಂದ ಶಿವನನರ್ಚಿಸುತಿಪ್ಪನೊಡಗೂಡಿ
ಕರಿಕಾಲ ಚೋಳನ ಆಳ್ವಿಕೆಯಲ್ಲಿ ಆ ಚೋಳದೇಶದ ರಾಜಧಾನಿಯು ವರ್ಣನೆಗೆ ನಿಲುಕದ ಭೂಮಿ ಎನಿಸಿದ್ದಿತು . ಈ ಊರಿನಲ್ಲಿ ಜಾತಿಯಲ್ಲಿ ಮಾದರ ಕುಲದವನಾದ ಚೆನ್ನನೆಂಬುವವನಿದ್ದನು . ಕುಲದ ನಾಮವೂ ಅವ್ಯರ್ಥವಾಗುವಂತೆ ‘ ಮಾದರ ಚೆನ್ನ’ನೆಂಬುದೇ ಅವನ ಹೆಸರಾಗಿತ್ತು .
ಅವನೊಬ್ಬ ಮಹಾ ಶಿವಭಕ್ತನಾಗಿದ್ದನು . ಆದರೆ ಅವನ ಭಕ್ತಿಯು ಅಪ್ರಕಟಿತವಾದುದು . ಯಾರಿಗೂ ತಿಳಿಯದಂತಿತ್ತು . ಅವನೊಬ್ಬ ಗುಪ್ತಭಕ್ತನಾಗಿದ್ದನು . ಕರಿಕಾಲಚೋಳ ರಾಜನ ಕುದುರೆಗೆ ಹುಲ್ಲನ್ನು ಕತ್ತರಿಸಿ ತಂದು ಹಾಕುವ , ಮೇವನ್ನು ಪೂರೈಸುವ ಕಾಯಕ ಮಾದರ ಚೆನ್ನನದಾಗಿತ್ತು .
ಅವನು ಆ ಕಾರ್ಯ ಮಾಡುತ್ತಿದ್ದನಾದರೂ ಅದಕ್ಕಿಂತಲೂ ಮುಖ್ಯವಾಗಿ ಕಾಯಕದ ಜೊತೆಜೊತೆಗೇ ಶಿವನನ್ನು ಅರ್ಚಿಸಿ ಸಂತೋಷಪಡುತ್ತಿದ್ದನು . ಅವನ ವೃತ್ತಿ ಕುದುರೆಗೆ ಹುಲ್ಲು ತರುವುದಾದರೂ ಪ್ರವೃತ್ತಿ ಶಿವಭಕ್ತಿಯಾಗಿತ್ತು.
ಶಬ್ದಾರ್ಥಗಳು
ಒಳಗೆ ಭಕ್ತಿಯತಂಪು ಹೊದಿಗೆ ಜನ್ಮದ ಸೊಂಪು
ಒಳಗೆ ಮುಕ್ತಿಯಗುಂಪು ಹೊದಿಗೆ ಜಾತಿಯಹೆಂಪು
ತಿಲದ ತೈಲದ ತೆದೆ , ಕಾಷ್ಠದಗ್ನಿಯ ತೆರದೆ
ನೆಲದ ಮರೆಯೊಳಗೆ ತೊಳಗುವ ನಿಧಾನದ ತೆರೆದೆ
ಪೆರರರಿಯದಂತೊಳಗೆ ಲಿಂಗಾರ್ಚನೆಯಲಿಪ್ಪ
ಆರವಂತೆ ಹೊಳಿಗೆ ಕುಲಧರ್ಮಕರ್ಮದೊಳಿಪ್ಪ
ಉದಯ ಸಮಯದೊಳೆದ್ದು ಕಾಂತಾರದೊಳು ಪೊಕ್ಕು
ರಾಗದಿಂ ನಿರ್ಮಳನದೀತೀರದೊಳು ಪೊಕ್ಕು
ನುಣ್ಮಳಲ ದಿ೦ಟೆಯೊಳು ತಳಿರಹಸೆಯಲ್ಲಿ ಹಾಸಿ
ಕಣ್ಮನವನಭವನತ್ತಲು ನಿಲಿಸಿ ಕನ್ವಯಿಸಿ
ತಂದು ಸಿಂಹಾಸನದ ಮೇಲೆ ಬಿಜಯಂಗೆಯಿಸಿ
ಕವಿ ಮಾದರ ಚೆನ್ನನ ಭಕ್ತಿಯ ಸೊಗಸುಗಾರಿಕೆಯನ್ನು ಈ ಭಾಗದಲ್ಲಿ ವಿವರಿಸುತ್ತಿದ್ದಾನೆ . ಚೆನ್ನನು ಬಡವನಾದರೂ , ಅವನೊಳಗೆ ಭಕ್ತಿಯ ತಂಪು ಆವರಿಸಿತ್ತು .
ಬದುಕಿನ ಸೊಗಸುಗಾರಿಕೆ , ಮನದೊಳಗೆ ಮುಕ್ತಿಭಾವದ ಸಮೂಹ , ಸಮಾಜದಲ್ಲಿ ಕೀಳು ಜಾತಿಯ ಗುರುತು ಇವೆಲ್ಲವೂ ಅಡಕವಾಗಿದ್ದ ಮಾದರ ಚೆನ್ನನ ಬದುಕು ವಿಶಿಷ್ಟವಾಗಿದ್ದಿತು.
ಕೆಳದರ್ಜೆಯ ಮಾದರ ಚೆನ ಮಾತ್ರ , ಆದರೆ ಅಂತರಂಗದಲ್ಲಿ ಈ ವನನ್ನು ಆವರಿಸಿದ್ದ ಶಿವಭಕ್ತಿ ಇತರರಿಗೆ ಗೋಚರಿಸುತ್ತಿರಲಿಲ್ಲ . ಎಳ್ಳಿನೊಳಗೆ ಅಡಕಗೊಂಡಿರುವ ತೈಲದಂತೆಯೂ , ಮರದೊಳಗೆ ಅಡಗಿಕೊಂಡಿರುವ ಬೆಂಕಿಯಂತೆಯೂ , ವೆಲದ ಅಡಿಯಲ್ಲಿ ಹುದುಗಿಕೊಂಡಿರುವ ನಿಧಿಯಂತೆಯ ಮಾದರ ಚೆನ್ನನ ಗುಪ್ತಭಕ್ತಿಯು ಇತರರಿಗೆ ಗೋಚರಿಸುತ್ತಿರಲಿಲ್ಲ .
ಮನದೊಳಗ ಲಿಂಗಾರ್ಚನಗೈಯುತ್ತಿದ್ದ ಆತ ಹೊರ ಜಗತ್ತಿಗೆ ಮಾತ್ರ ಕುಲಧರ್ಮವನ್ನು ಪಾಲಿಸುತ್ತಿರುವ ಕರ್ಮಯೋಗಿಯಂತಿದ್ದನು .
ಸೂರ್ಯೋದಯದ ಸಮಯದಲ್ಲಿ ಎದ್ದು ಕಾಡಿಗೆ ತೆರಳುತ್ತಿದ್ದ ಮಾದರ ಚನ್ನನು ಅತ್ಯಂತ ಪ್ರೀತಿಯಿಂದ ನದೀಪೀರದಲ್ಲಿ ನುಣ್ಣನೆಯ ಮರಳಿನ ಮೇಲೆ ಹಸಿರು ಪತ್ತೆಗಳನ್ನು ಹಾಸುತ್ತಿದ್ದನು . ಕಣ್ಣು – ಮನಸ್ಸು ಶಿವನಲ್ಲಿ ನೆಲೆಗೊಳಿಸಿ , ಕೈ ಬೀಸಿ ಕರೆದು ಶಿವನನ್ನು ಹಸಿರೆಲೆಯ ಸಿಂಹಾಸನದ ಮೇಲೆ ಪ್ರತಿಷ್ಠಾಪನೆ ಮಾಡುತ್ತಿದ್ದನೆಂದು ಕವಿಯು ವರ್ಣಿಸಿದ್ದಾನೆ .
ದೇವನೊಲಿದನ ಕುಲವೇ ಸತ್ಕುಲಂ notes
ಶಬ್ದಾರ್ಥಗಳು
ಸಂದಣಿನ ದೇಹದಿಂದ ಪೂರಯಿ ಹಾರಯಿಸಿ
ಪರಿಮಳದ ತಿರುಳಪ ಮೊಲ್ಲೆ ಮಲ್ಲಿಗೆಗಳಿಂ
ಹರವರಿಯ ಕಂಪಿಡುವ ಸಂಪಗೆಯರ್ಗಳಿಂ
ಮರುಗ ದವನ ಪಚ್ಚೆ ಪಡ್ಡಳಿಯ ಪೂಗಳಿಂ
ಸುರಗಿ ಸುರಹೊನ್ನೆ ಚಂಗರಗಿಲೆಯ ಪೊಗಳಿo
ಸಂಗಡಿಸಿ ಸಿಂಪಡಿಸಿ ಹೋಗಿ ಹೊಲೆಯಯಿತು
ಲಿಂಗಪೂಜೆಗಳೊಳಗೆ ಮನವಿಟ್ಟು ಮಿರುತಂ
ಒಂದು ತೃಣಜಾಲಮಂ ಕೊಯತ್ತಿನೊಳು ಹೇಳಿ
ಸಂದ ಪ್ರಳಕಂಗಳಲ್ಲಿ ತನ್ನ ಮಯ್ಯೊಳು ಹೆರೆ
ಮಾದರ ಚೆನ್ನನು ಶಿವನಿಗೆ ಆತ್ಮಂತ ಸ್ನೇಹಭಾವದಿಂದ ಪರಿಮಳ ಬೀರುತ್ತಿರುವ ಮೊಲ್ಲೆ ಮಲ್ಲಿಗೆಗಳನ್ನು ಸಂಪಗೆ ಹೂಗಳನ್ನು , ಮರುಗ , ಪಚ್ಚೆ ದವನ , ಕೆಂಪನೆಯ ಜಾಜಿ – ಹೀಗೆ ಬಗೆಬಗೆಯ ಹೂಗಳಿಂದ ಅಲಂಕರಿಸಿ ಆರ್ಚಿಸುತ್ತಿದ್ದನು .
ಇವುಗಳ ಜೊತೆಗೆ ಸುರಗಿ ಸುರಹೊನ್ನ ಕೆಂಪು ಕಣಗಿಲೆ ಹೂಗಳನ್ನು ತಂದು ಶಿವಲಿಂಗವನ್ನು ಸಿಂಗರಿಸುತ್ತಿದ್ದನು . ಹೂಗಳ ಹೊರೆ ಯನ್ನೇ ಶಿವನ ಮೇಲೆ ಹೇರಿ ಮನವಿಟ್ಟು ಲಿಂಗಪೂಜೆಯನ್ನು ಮಾಡುತ್ತಿದ್ದನು .
ಆ ನಂತರ ತನ್ನ ನಿತ್ಯ ಕಾಯಕದಂತೆ ಹುಲ್ಲನ್ನು ಕೊಯ್ದು , ಹೊರಗಟ್ಟಿ ಎತ್ತಿನ ಮೇಲೆ ಹೇರಿಕೊಂಡು ಮನದಲ್ಲಿ ಶಿವಪೂಜೆಯಿಂದ ಲಭಿಸಿದ ಆನಂದವನ್ನು ತುಂಬಿಕೊಂಡು ಹೊರಡುತ್ತಿದ್ದನು .
ಶಬ್ದಾರ್ಥಗಳು
ನಡೆತಂದು ಚೋಳನ ತುರಂಗ ನಿಳಯದ ಮುಂದೆ
ತನೆಯವರ ಪಾದಿಯಲ್ಲಿ ನೂಕಿ ಭರದಿಂದೆ
ಬಳಲುತ ಬಂದು ನಿಜವಿಳಿಯದೊಳು ಕುಳ್ಳಿರ್ದ
ತೊಳತೊಳಿಪ ಶಿವಲಿಂಗದತ್ತ ಚಿತ್ತಂ ಸಾರ್ದು
ಇರೆ ಬೋನಮಂ ಪಿಡಿದರಲ್ಲಿ ತಮ್ಮರಸಿಯರು
ಹರನಿತ್ತುದಂ ಭಕ್ತಿಯಿಂದ ಕಡುಬಡವೆಯರು
ಲಿಂಗ ಪ್ರಸಾದಮಂ ಸಾದರಂ ಕಳ್ಕೊಂಡು
ಜ೦ಗಮನಿಭಾನನಿಪ್ಪಂ ಸುಖಮನೆಡೆಗೊಂಡು
ಈ ತೆಜದೊಳಯವತ್ತು ವತ್ಸರಂ ನಡೆವುತಿರ
ಭೂತಳದೊಳತಿಗುಪೂಂಜೆ ದಳವೇಜುತಿರ
ಹುಲ್ಲುಗಾವಲಿನಿಂದ ಹುಲ್ಲಹೊರೆಯನ್ನು ಹೊತ್ತುಕೊಂಡು ಬಂದ ಮಾದರ ಚೆನ್ನನು ಅದನ್ನು ಕರಿಕಾಲ ಚೋಳನ ಕುದುರೆ ಲಾಯದ ಮುಂದೆ ಹಾಕುತ್ತಿದ್ದನು .
ನಂತರ ಬಳಲಿಕೆಯನ್ನು ಅನುಭವಿಸುತ್ತಾ ತನ್ನ ಮನೆಗೆ ಬಂದು ಕುಳಿತುಕೊಳ್ಳುವರು . ಕುಳಿತಾಕ್ಷಣ ಅವನ ಮನಸ್ಸು ತಳತಳನೆ ಹೊಳೆಯುತ್ತಿದ್ದ ಶಿವಲಿಂಗವನ್ನೇ ಧ್ಯಾನಿಸುತ್ತಿತ್ತು . ಆ ಹೊತ್ತಿಗೆ ಮಾದರ ಚೆನ್ನನ ಪತ್ನಿಯು ಅವನಿಗೆ ಊಟಕ್ಕೆಂದು ತಂದುಕೊಟ್ಟ ಆಹಾರವನ್ನು ಶಿವಕೊಟ್ಟಿದ್ದೆಂಬ ಭಕ್ತಿ ಭಾವದೊಂದಿಗೆ , ಲಿಂಗಕ್ಕೆ ನೈವೇದ್ಯ ಮಾಡಿ , ಅದನ್ನೇ ಪ್ರಸಾದವೆ೦ದು ಜಂಗಮಧರ್ಮದಂತೆ ನೀಡುತ್ತಿದ್ದರು .
ಕಡುಬಡತನ ಕಾಡುತ್ತಿದ್ದರೂ ಇರುವುದನ್ನೇ ದೇವರು ಕೊಟ್ಟಿದ್ದೆಂಬಂತೆ ಸ್ವೀಕರಿಸುವ ಈ ದಂಪತಿಗಳು ಸುಖವಾಗಿಯೇ ಜೀವನವನ್ನು ನಡೆಸುತ್ತಿದ್ದರು . ಈ ರೀತಿಯಲ್ಲಿ ಅರುವತ್ತು ವರ್ಷಗಳ ಕಾಲ ಮಾದರ ಚೆನ್ನನು ಜೀವನವನ್ನು ಸಾಗಿಸಿದನಂತೆ.
ಶಬ್ದಾರ್ಥಗಳು
ಹರನೊಲ್ದು ಚೆನ್ನನಂ ಮೆರೆವೆನೀ ಧರೆಗೆಂದು
ಪುರಹರಂ ಸಲೆ ಸಂತಸಂಬಡುತ್ತಿರಲೊಂದು
ದಿವಸದೊಳು ಎಂದಿನಂದದೊಳು ಹೊಲನಂ ಹೊಕ್ಕು
ಶಿವಲಿಂಗ ಪೂಜೆಯಂ ಮಾಡಿ ಹರುಷಂ ಮಿಕ್ಕು
ಬೇಗದಿಂ ಪುಲುಗೊಯ್ದು ಮೈಲನೊಳು ನೆರೆಹೆರೆ
ರಾಗದಿಂ ಗಳಗಳನೆ ನಡೆತರುತ್ತಂ ಮಿರೆ
ಕಂಪಣದ ತಾಣದೊಳು ಹುಲ್ಲನೊಲವಿಂ ನೂಂಕಿ
ಸೊಂಪೆರೆ ಚಿತ್ತಜಾರಿಯ ಚಿತ್ತಮಂ ಸೋಂಕಿ
ಮನೆಗೆ ಬ೦ದನುಮಿಸುತೆ ಕುಳ್ಳಿರ್ದು ನೆನೆವುತಿರೆ
ವನಿತೆ ತಂದ೦ಬಕಳಮಂ ಮೆಲ್ಲನೀವುತಿರೆ
ಮಾದರ ಚೆನ್ನ
ಮಾದರ ಚೆನ್ನನ ಭಕ್ತಿಯಿಂದ ಸಂತೋಷಗೊಂಡ ಶಿವನಿಗೆ ಮಾದರ ಚೆನ್ನನ ಗುಪ್ತಭಕ್ತಿಯ ವಿಚಾರವನ್ನು ಲೋಕಕ್ಕೆ ತಿಳಿಯುವಂತೆ ಮಾಡಬೇಕೆಂಬ ಮನಸ್ಸಾಯಿತು . ಒಂದು ದಿನ ಮಾದರ ಚೆನ್ನನು ಎಂದಿನಂತೆಯೇ ಹೊಲಕ್ಕೆ ಹೋಗಿ , ನಿತ್ಯದಂತೆ ಶಿವಲಿಂಗ ಪೂಜೆಯನ್ನು ಮಾಡಿ ಹರುಷಪಟ್ಟನು .
ನಂತರ ಬೇಗಬೇಗ ಹುಲ್ಲನ್ನು ಕೊಯ್ದು , ಹೊರೆಯನ್ನು ಕಟ್ಟಿ ಹೊತ್ತುಕೊಂಡು ಪ್ರೀತಿಯಿಂದಲೇ ತನ್ನ ಕಾಯಕವನ್ನು ಮಾಡುತ್ತಾ ಕುದುರೆಗಳಿಗೆ ಮೇವನ್ನು ಹಾಕುವ ಸ್ಥಳದಲ್ಲಿ ಹುಲ್ಲಿನ ಹೊರೆಯನ್ನು ಹಾಕಿದನು .
ದೇವನೊಲಿದನ ಕುಲವೇ ಸತ್ಕುಲಂ notes
ಅವನ ಮನಸ್ಸಿನ ತುಂಬಾ ಶಿವನೇ ತುಂಬಿದ್ದನು . ಶಿವನನ್ನೇ ಧ್ಯಾನಿಸುತ್ತ ತನ್ನ ಮನೆಗೆ ಬಂದು ಕುಳಿತನು ಕುಳಿತಲ್ಲಿಯೂ ಅವನ ಮನಸ್ಸು ಶಿವನನ್ನೇ ಸ್ಮರಿಸುತ್ತಿತ್ತು . ಆಗ ಅವನ ಹೆಂಡತಿಯು ಊಟಕ್ಕೆ ರಾಗಿಯ ಗಂಜಿ , ಅಂಬಲಿಯನ್ನು ನೀಡಿದಳು .
ಶಬ್ದಾರ್ಥಗಳು
ಮಧುರಾಮರುಚಿಯಾಹ ಶಿವಲಿಂಗವಂ ತಾಗ
ಸುಧೆಯ ಕಡುಸವಿಯಿಂದ ನೂರ್ಮಡಿಸಿ ಸವಿಯಾಗ
ಸವಿದು ದಣಿವೆಯ್ದಿಸದೆ ಗುರುಮೂರ್ತಿಯುರವಣಿಸಿ
ಸವಿಸವಿವುತಂಬಕಳವೆಲ್ಲವಂ ಲವಲವಿಸಿ
ಕೊಂಡನೇನೆಂಬೆನಾ ಚೆನ್ನನೊಡನೊಂದಾಗಿ
ಉಂಡನಭವಂ ಸ್ವರ್ಗಮರ್ತ್ಯಕ್ಕೆ ಪೊಸತಾಗಿ
ಇರೆ ನಿತ್ಯನೇಮಕ್ಕೆ ಚೋಳರಾಯಂ ಬಂದು
ಹರನಾಲಯ ೦ ಬೊಕ್ಕು ಕಯುಗಿವುತಂ ನಿಂದು
ದೇವಾನ್ನ ದಿವ್ಯಾನ್ನವಮೃತಾನ್ನಮಂ ಬಡಿಸಿ
ಓವಿ ಸವಿಸಾಲಿಡುವ ಶಾಕಂಗಳು ಬಡಿಸಿ
ಸವಿಯಾದ ಮಾವಿನ ಉಪ್ಪಿನಕಾಯಿಯ ಜೊತೆಗೆ ಅಂಬಲಿಯನ್ನು ಶಿವನು ಕುಡಿದು ಆನಂದಿಸುವನು . ಲೋಕಕ್ಕೆ ಇದು ಅಚ್ಚರಿಯ ಸಂಗತಿಯೆಂದು ಕವಿ ಬಣ್ಣಿಸಿರುವನು .
ಅಮೃತದಂತಹ ರುಚಿಯ ಅಂಬಲಿಯ ಪರಿಮಳವು ಶಿವಲಿಂಗವನ್ನು ತಾಕಿತು . ಅಂಬಲಿಯ ಅತಿಯಾದ ರುಚಿಯಿಂದಾಗಿ ಶಿವನಿಗೆ ಅದನ್ನು ಸವಿಯುವ ಬಯಕೆ ನೂರಡಿಯಾಯಿತು.
ಶಬ್ದಾರ್ಥಗಳು
ಪಪ್ಪಳಂ ಚಿಲುಪಾಲ ಘಟ್ಟಗಳನಲ್ಲಿ
ತುಪ್ಪಮಂ ಕೆನೆಮೊಸರ ಸಕ್ಕರೆಯನಲ್ಲಿ
ಬಿಡಿಸಿ ಹೆಜಸಾರುತಂ ಜವನಿಕೆಯನೋಸರಿಸಿ
ಮೃಡನೆ ಆರಯ್ಕೆಂದು ನಲವಿಂ ನಮಸ್ಕರಿಸಿ
ಹರನಲ್ಲಿ ಏನುವಂ ಮುಟ್ಟಿದಾರಯ್ಯದಿರೆ
ಪರಿಕಿಸದೆ ವಾಸಿಸದೆ ಲೆಕ್ಕಿಸದೆ ಸುಮ್ಮನಿರ
ತೊಟ್ಟಿನಾ ಜವನಿಕೆಯನೊಸರಿಸಿ ಕಾಣುತಂ
ಕಟ್ಟೆನಿಂತೇಕಾಯಿತೆನುತಲುರವಣಿಸುತಂ
ಕಿತ್ತಲಗುತ್ತಿಕೊಂಡಮ್ಮಮ್ಮ ಕೊರಳಲ್ಲಿ
ಒತ್ತಿ ಹೂಡುತ್ತಿರಲು ಶಂಕರಂ ಕಂಡಲ್ಲಿ
ಶಬ್ದಾರ್ಥಗಳು
ಓಹೋ ವಿಚಾರವಿಲ್ಲದೆ ಇಂತು ಮಲ್ಪರೆ
ಆಹ ನಿಮ್ಮರಸುತನವೆಯಲ್ಲಿ ಮಲ್ಪಾರೇ
ಕಂಡಯ್ಯ ಚೋಳ ನಿನಗಿನಿತು ಸ್ಮರಣೆಯಲ್ಲ
ಉಂಡವಾ ಚೆನ್ನನೊಡನಮಗಿಂದು ಹಸಿವಿಲ್ಲ
ಕೇಳಂಬಕಳದ ಸವಿಯದನೇನನೆಂಡೆಫೆಮ್
ಚೋಳಾದಿಗಳು ಪಡೆಯರೇನೆಂದು ಬಣ್ಣಿಪೆಂ
ಎಂದು ಶಿವನಾ ಲಿ೦ಗದೊಳು ಪುಗಲು ಕಾಣುತಂ
ನಿಂದು ಚೋಳಂ ಕೌತುಕಂ ಮಿಕ್ಕು ನೋಡುತಂ
ಬೆರಗಾಗಿ ಬೆಂಡಾಗಿ ಚೆನ್ನನಂ ಚಿಂತಿಸುತ
ಕಥೆಗೊರಳೊಂತುಂಬಲೇ ಎಂದು ಹುರುಡಿಸುತ
ಕರಿಕಾಲ ಚೋಳನ ಮುಂದೆ ಪ್ರತ್ಯಕ್ಷನಾದ ಶಿವನು ” ಏನಯ್ಯಾ ಕರಿಕಾಲ ಚೋಳ ಸ್ವಲ್ಪವೂ ವಿಚಾರಮಾಡದೆ ಇಂತಹ ಕೆಲಸಕ್ಕೆ ಮುಂದಾಗುವುದೆ ? ನನ್ನಲ್ಲಿಯೂ ನಿನ್ನ ಅರಸುಬುದ್ಧಿಯನ್ನು ತೋರುತ್ತಿರುವೆಯಾ ? ನಿನಗೆ ಸ್ವಲ್ಪವೂ ಸೈರಣೆ ಸಹಿಸಿಕೊಳ್ಳುವ ತಾಳೆಯ ಗುಣವಿಲ್ಲವಲ್ಲ .
ಇಂದು ನನಗೆ ಹಸಿವಿಲ್ಲ . ಕಾರಣವೆಂದರೆ ನಾನಿಂದು ಚೆನ್ನನೊಡನೆ ಊಟ ಮಾಡಿದೆ . ಅವನೊಡನೆ ಸವಿದ ಅಂಬಲಿಯ ರುಚಿಯನ್ನು ಏನೆಂದು ಬಣ್ಣಿಸಲಿ ? ಎಂದು ಹೇಳುತ್ತಾ ಶಿವಲಿಂಗದೊಳಗೆ ಐಕ್ಯನಾದನು . ಇದನ್ನು ಚೋಳ ರಾಜನು ಆಶ್ಚರದಿಂದ ನಿಂತು ನೋಡಿದನು . ಬೆಕ್ಕಸ ಬೆರಗಾಗಿ ನಿಂತ ಚೋಳರಾಜನು ಯಾರು ಈ ಚಿನ್ನ ಎಂದು ಚಿಂತಿಸುತ್ತಿದ್ದನು . ಅಂಬಲಿಯನ್ನು ಈ ರೀತಿ ಶಿವನುಂಡನೇ ಎಂದು ಹೊಟ್ಟೆಕಿಚ್ಚಾಯಿತಂತೆ .
ಶಬ್ದಾರ್ಥಗಳು
ಪರಮಂಗೆ ಉಣಲಿತ್ತ ಶರಣನಂ ನೋಡುವೆಂ
ಹರುಷದಿಂದಾನವರ ಕರುಣಮಂ ಸೂಡುವಂ
ನಡೆದಜೆಯದಬ್ಬಸುಖಿ ಕಾಲ್ನಡೆಯೊಳೆಯ್ತರುತ
ಎಡಬಲದ ಮಕುಟವರ್ಧನರೊಡನೆ ನಡೆತರುತೆ
ಪುರಹರ ೦ ಗುಣಲಿತ್ತ ಚೆನ್ನನಂ ತೋದರೇ
ಗುರುಲಿಂಗದೊಡನುಂಡ ಚೆನ್ನನಂ ತೋಟೆರೇ
ಎಂದಲ್ಲಿ ಚಿತ್ತದನುತಾಪದಿಂ ಕೇಳುತಂ
ಅ ೦ ದಲ್ಲಿ ದೆಸೆದೆಸೆಗೆ ದೂತರಂ ಕಳುಪುತಂ
ಚೆನ್ನಯ್ಯನಿಪ್ಪ ಗುಡಿಲಿದೆಯೆಂದು ತೋರುತ್ತಿದೆ .
ಚೆನ್ನಯ್ಯನೊಳಗೈದನೆಂದು ನೆರೆಹೇಳುತಿರೆ
ದೇವನೊಲಿದನ ಕುಲವೇ ಸತ್ಕುಲಂ notes
ಕರಿಕಾಲ ಚೋಳನಿಗೆ ಪರಶಿವನಿಗೆ ಊಟ ಮಾಡಿಸಿದ ಮಹಾಶಿವಶರಣನಾದ ಚೆನ್ನನನ್ನು ನೋಡಬೇಕೆನಿಸಿತು . ಅವನನ್ನು ನೋಡಿ ಪಾವನನಾಗಬೇಕೆ ೦ ದಾತ ಎಂದೂ ಬರಿಗಾಲಿನಲ್ಲಿ ನಡೆದು ಅರಿಯದವ ಅಂದು ನಡೆದುಕೊಂಡೇ ಹೊರಟನಂತೆ . ಅವನ ಎಡಬಲದಲ್ಲಿ ಅವನ ಪರಿವಾರವಿತ್ತು .
ಸಿಕ್ಕವರನ್ನೆಲ್ಲಾ ಶಿವಲಿಂಗದೊಡನೆ ಊಟ ಮಾಡಿದ ಚೆನ್ನನನ್ನು ತೋರುವಿರಾ ? ‘ ‘ ಎಂದು ಕೇಳುತ್ತಾ , ಮನದಲ್ಲೇ ಅನುತಾಪ ಮಾಡುತ್ತಾ ಸಿಕ್ಕ ಸಿಕ್ಕ ಕಡೆ ಹುಡುಕುವಂತೆ , ತನ್ನ ದೂತರನ್ನು ಅಟ್ಟುತ್ತಾ ಬರುತ್ತಿರುವಾಗ , ‘ ಇದೇ ಚೆನ್ನನ ಗುಡಿಸಲೆಂದೂ , ಚೆನ್ನ ಒಳಗಿರುವನೆಂದೂ ‘ ಚೆನ್ನನ ನೆರೆಮನೆಯವರು ರಾಜನಿಗೆ ಚೆನ್ನನ ಮನೆಯನ್ನು ತೋರಿದರು .
ಶಬ್ದಾರ್ಥಗಳು
ಒಳಗೆ ಚೆನ್ನಯ್ಯ ನೆರೆ ಕಂದುತಂ ಕುಂದುತ
ತಿಳಿವೊಡರಿದೇನೆಂದು ಕೋಡುತಂ ಬಾಡುತಂ
ಅರಮನೆಯ ಚಾರರೇಕಾನೇಕ ಶಂಕರಾ
ಆರಸನೇಶನ್ನ ಮನೆಯೇಕೆ ಶಶಿಶೇಖರಾ
ಭಕ್ತನೆಂದರಿಯದಿರ್ದೊಡೆ ಲೇಸು ಬದುಕುವೆಂ
ಭಕ್ತನೆಂದರಿದ ಬಳಿಕಾನೆಂತು ಬದುಕುವಂ
ಎನುತಮಿಠಲಲ್ಲಿ ಗುಡಿಲು ಸುತ್ತಿ ಮುತ್ತು
ತನತನಗೆ ಜಯ ಜೀಯ ಎನುತ ಕಯುಗಿವುತ್ತ
ಇರೆ ಚೋಳರಾಜನತಿ ಭಕ್ತಿಯಿಂದ ಬರುತಿರ್ದ
ನರರೆ ಸಮ್ಯಗ್‌ಜ್ಞಾನಿ ಸತ್ಯನಿಧಿ ಬರುತಿರ್ದ
ರಾಜನು ತನ್ನ ಪರಿವಾರದೊಡನೆ ತನ್ನ ಗುಡಿಸಲಿನ ಬಳಿಗೆ ಬರುತ್ತಿರುವುದನ್ನು ಕಂಡು ಮಾದರ ಚೆನ್ನನಿಗೆ ಆಳುಕಾಯಿತು . ಬೇಕಾದ ದೊರೆಯು ತನ್ನ ಗುಡಿಸಲಿಗೆ ಬರುತ್ತಿರುವುದೇಕೆ ಶಶಿಶೇಖರನೇ ? ‘ ಎಂದು ಚಿಂತಿಸುತ್ತಿದ್ದನು .
ಚನ್ನನಿಗೆ ತಾನು ಶಿವನ ಭಕ್ತನೆಂಬ ವಿಚಾರ ಯಾರಿಗೂ ತಿಳಿಯದಿದ್ದರೆ ಸಾಕನಿಸಿತು . ತಾನು ಭಕ್ತನೆಂಬ ವಿಚಾರವನ್ನು ಅವನು ಗೌಪ್ಯವಾಗಿರಿಸಿಕೊಂಡಿದ್ದನು .
ಒಂದು ವಾಕ್ಯದಲ್ಲಿ ಉತ್ತರಿಸಿ
ಚೋಳ ದೇಶವು ಯಾರಿಗೆ ನೆಲೆಯಾಗಿತ್ತು ?
ಚೋಳದೇಶವು ಶ್ರೀ ಶಿವನ ನೆಲೆ ( ಸೆಜ್ಜೆ ) ಯಾಗಿತ್ತು .
ಚೋಳದೇಶವನ್ನು ಆಳುತ್ತಿದ್ದ ದೊರೆ ಯಾರು ?
ಕರಿಕಾಲ ಚೋಳನೆಂಬ ರಾಜನು ಚೋಳದೇಶವನ್ನು ಆಳುತ್ತಿದ್ದನು .
ಚೆನ್ನಯ್ಯನು ಮಾಡುತ್ತಿದ್ದ ಕಾಯಕ ಯಾವುದು ?
ಚೋಳರಾಜನ ಕುದುರೆಗೆ ಹುಲ್ಲನ್ನು ತಂದುಹಾಕುವ ಕಾಯಕವನ್ನು ಚೆನ್ನಯ್ಯ ಮಾಡುತ್ತಿದ್ದನು .
ಚೆನ್ನಯ್ಯನು ಹುಲ್ಲನ್ನು ಯಾವುದರ ಮೇಲೆ ಹೇರಿಕೊಂಡು ಬರುತ್ತಿದ್ದನು ?
ಚೆನ್ನಯ್ಯನು ಹುಲ್ಲನ್ನು ಎತ್ತಿನ ಮೇಲೆ ಹೇರಿಕೊಂಡು ಬರುತ್ತಿದ್ದನು .
ಶಿವನು ಯಾರ ಜೊತೆ ಊಟ ಮಾಡಿದನು ?
ಶಿವನು ಮಾದರ ಚೆನ್ನನೊಡನೆ ಊಟ ಮಾಡಿದನು .
ಚೆನ್ನಯ್ಯನನ್ನು ಹುಡುಕಲು ಜೋಳರಾಜನು ಯಾರನ್ನು ಕಳುಹಿಸಿದನು ?
ಚೆನ್ನಯ್ಯನನ್ನು ಹುಡುಕಲು ಚೋಳರಾಜನು ತನ್ನ ದೂತರನ್ನು ಕಳುಹಿಸಿದನು .
ಚೋಳರಾಜನು ಚೆನ್ನಯ್ಯನನ್ನು ಶಿವಾಲಯಕ್ಕೆ ಹೇಗೆ ಕರೆತಂದನು ?
ಚೋಳರಾಜನು ಚೆನ್ನಯ್ಯನನ್ನು ಆನೆಯ ಮೇಲೆ ಕೂರಿಸಿಕೊಂಡು ಕರೆತಂದನು .
ಕೈಲಾಸದಲ್ಲಿ ಚೆನ್ನಯ್ಯನಿಗೆ ಯಾವ ಪದವಿ ಲಭಿಸಿತು ?
ಕೈಲಾಸದಲ್ಲಿ ಚೆನ್ನಯ್ಯನಿಗೆ ಶಿವಗಣ ಪದವಿ ಲಭಿಸಿತು .
೨-೩ ವಾಕ್ಯಗಳಲ್ಲಿ ಉತ್ತರಿಸಿ
ಕಾವೇರಿ ನದಿಯ ಮಹಿಮೆ ಎಂತಹುದು ?
ಕಾವೇರಿ ನದಿಯು ಸಕಲ ಸಸ್ಯಾವಳಿಗಳನ್ನು ಪೊರೆವವಳೂ ಮತ್ತು ಸೋರಿಕಿದವರ ಪಾಪವನ್ನು ತೊಳೆಯುವ ಪಾಪನಾಶಿನಿಯೂ ಆಗಿದ್ದಾಳೆಂದು ಹರಿಹರ ಕವಿ ವರ್ಣಿಸಿರುವನು .
ಚೆನ್ನಯ್ಯನ ಗುಪ್ತಭಕ್ತಿ ಯಾವ ರೀತಿಯದು ?
ಚೆನ್ನಯ್ಯನ ಗುಪ್ತಭಕ್ತಿಯು ಆಗೋಚರವಾದುದು ಎಳ್ಳನೊಳಗಿರುವ ತೈಲದಂತೆ , ಕಾಷ್ಠದೊಳಗಣ ಬೆಂಕಿಯಂತೆ ಮತ್ತು ನೆಲದ ಮರೆಯ ನಿಧಾನದಂತ ಗೌಪ್ಯವಾಗಿತ್ತು .
ಶಿವಲಿಂಗವನ್ನು ಯಾವ ಯಾವ ಹೂಗಳಿಂದ ಚಿನ್ನಯ್ಯ ಸಿಂಗರಿಸುತ್ತಿದ್ದನು ?
ಚೆನ್ನಯ್ಯನು ಪರಿಮಳ ಬೀರುತ್ತಿರುವ ಮಲ್ಲಿಗೆ ಹೂಗಳು , ಕಂಪು ಬೀರುವ ಸಂಪಗೆ , ಮರುಗ , ದವನ , ಪಚ್ಚೆ , ಪಡ್ಡಳಿ , ಸುರಗಿ , ಸುರಹೊನ್ನೆ , ಚೆಂಗಣಿಗಿಲೆ ಹೂಗಳಿಂದ ಶಿವಲಿಂಗವನ್ನು ಸಿಂಗರಿಸುತ್ತಿದ್ದನು .
ಚೋಳರಾಜ
ಚೋಳರಾಜನು ಚೆನ್ನಯ್ಯನ ಪಾದಗಳನ್ನು ಹಿಡಿದಾಗ ಅವನ ಪ್ರತಿಕ್ರಿಯೆ ಏನು ?
ಚೋಳರಾಜನು ತನ್ನ ಪಾದಗಳನ್ನು ಹಿಡಿದಾಗ ಚೆನ್ನಯ್ಯನು ‘ ಏನಯ್ಯಾ ಚೋಳರಾಜನೇ , ಭಾನುಕುಲದರ್ಪಣನಾದ ನೀನು ಹೀಗೆ ಮಾಡುವುದ ? ನನ್ನ ಕುಲ ಯಾವುದೆಂಬುದನ್ನು ಅರ್ಥಮಾಡಿಕೊಳ್ಳದೆ ಹೀಗೆ ಮಾಡುವುದೆ ? ” ಎಂದು ಪ್ರತಿಕ್ರಿಯಿಸಿದನು .
ಶಿವನ ಮೇಲೆ ಚೆನ್ನಯ್ಯ ಮುನಿಸಿಕೊಳ್ಳಲು ಕಾರಣವೇನು ?
ತನ್ನ ಗುಪ್ತವಾದ ಭಕ್ತಿಯನ್ನು ಬಯಲು ಮಾಡಿದ್ದಕ್ಕಾಗಿ ಶಿವನ ಮೇಲೆ ಚೆನ್ನಯ್ಯನಿಗೆ ಮುನಿಸುಂಟಾಯಿತು . ಅಲ್ಲದೆ ತನ್ನ ಪಾಡಿಗೆ ತಾನಿರಲು ಬಿಡದೆ ಚೋಳರಾಜನನ್ನು ಕಳುಹಿಸಿ ಕರೆಸಿಕೊಂಡುದಕ್ಕಾಗಿಯೂ ಶಿವನ ಮೇಲೆ ಚೆನ್ನಯ್ಯನಿಗೆ ಮುನಿಟಾಯಿತು .
ಶಿವನು ಚೆನ್ನಯ್ಯನನ್ನು ಹೇಗೆ ಸಮಾಧಾನಪಡಿಸಿದನು ?
ಶಿವನು ಚೆನ್ನಯ್ಯನ ಮುಂದೆ ಪ್ರತ್ಯಕ್ಷನಾಗಿ ” ಎಲೆ ಚಿನ್ನನೆ , ಅವಿಚಾರದಿಂದ ಇಂತಹ ಕೆಲಸ ಮಾಡುವುದೆ ? ನಿನ್ನ ಭಕ್ತಿಯ ವಿಚಾರವನ್ನು ಚೋಳನಿಗೆ ತಿಳಿಸಿದರೆ ಏನಾಯ್ತು ? ‘ ‘ ಎಂದು ಸಂತೈಸಿದನು .
ಐದಾರು ವಾಕ್ಯಗಳಲ್ಲಿ ಉತ್ತರಿಸಿ
ಚನ್ನಯ್ಯ ತನ್ನ ಕಾಯಕವನ್ನು ಹೇಗೆ ಮಾಡುತ್ತಿದ್ದನು ?
ಚೆನ್ನಯ್ಯನು ಸೂರ್ಯೋದಯದ ಸಮಯದಲ್ಲಿದ್ದು ಕಾಡಿಗೆ ತೆರಳುತ್ತಿದ್ದನು . ಅಲ್ಲಿ ನದೀತೀರದಲ್ಲಿ ಶಿವಪೂಜೆಯನ್ನು ಮೊದಲು ಅತ್ಯಂತ ಪ್ರೀತಿ – ಭಕ್ತಿ ಭಾವದಿಂದ ನೆರವೇರಿಸುತ್ತಿದ್ದನು . ಬಗೆ ಬಗೆಯ ಹೂಗಳಿಂದ ಶಿವಲಿಂಗವನ್ನರ್ಚಿಸಿ , ಸಂತಸ ಪಡುತ್ತಾ ಪೂಜೆ ಮುಗಿದ ನಂತರ ಹುಲ್ಲನ್ನು ಕೊಯ್ಯುತ್ತಿದ್ದನು .
ಅವನ ಮನಸ್ಸು ಮಾತ್ರ ಶಿವನಲ್ಲಿ ನೆಲೆಯಾಗಿರುತ್ತಿತ್ತು . ಹುಲ್ಲನ್ನು ಕೊಯ್ದು ಮುಗಿಸಿದ ಮೇಲೆ ಅದನ್ನು ಎತ್ತಿನ ಮೇಲೆ ಹೇರಿಕೊಂಡು ಚೋಳರಾಜನ ಅರಮನೆಯ ಕುದುರೆಲಾಯದ ಕಡೆಗೆ ಹೊರಡುತ್ತಿದ್ದನು . ಚೋಳರಾಜನ ಕುದುರೆಲಾಯದ ಮುಂದೆ ಹುಲ್ಲುಹೊರೆಯನ್ನು ನೂಕಿ , ತನ್ನ ಕೆಲಸ ಮುಗಿಯಿತೆಂಬ ಭಾವದಿಂದ , ಶಿವಧ್ಯಾನ ಮಾಡುತ್ತಾ ತನ್ನ ಮನೆಗೆ ಬಂದು ಕುಳಿತುಕೊಳ್ಳುತ್ತಿದ್ದನು .
ಕುಂತಲ್ಲಿ ನಿಂತಲ್ಲಿ ಮಾಡುವ ಎಲ್ಲ ಕೆಲಸದಲ್ಲೂ ಶಿವನ ಧ್ಯಾನ ಅವನನ್ನು ಆವರಿಸಿಬಿಡುತ್ತಿತ್ತು . ಹೀಗೆ ಚೆನ್ನಯ್ಯನು ಅಂತರಂಗದಲ್ಲಿ ಶಿವಭಕ್ತನೂ , ಬಹಿರಂಗದಲ್ಲಿ ಕಾಯಕ ಯೋಗಿಯೂ ಆಗಿ ತೃಪ್ತಿಯಿಂದ ಬದುಕುತ್ತಿದ್ದನು .
ಶಿವನು ಚೆನ್ನಯ್ಯನ ಮನೆಯಲ್ಲಿ ಊಟ ಮಾಡಿದ ಪ್ರಸಂಗವನ್ನು ವಿವರಿಸಿ ,
ಶಿವನಿಗೆ ಚೆನ್ನಯ್ಯನ ಭಕ್ತಿಭಾವದ ಬಗ್ಗೆ ಮೆಚ್ಚುಗೆಯಾಯಿತು . ಅವನ ಭಕ್ತಿಯ ವಿಚಾರವನ್ನು ಲೋಕಕ್ಕೆ ತಿಳಿಯಪಡಿಸ ಬೇಕೆಂಬ ಇಚ್ಛೆಯಾಯಿತು . ಶಿವ ಮನದಲ್ಲಿ ಈ ನಿರ್ಧಾರ ಮಾಡಿದ ದಿನವೇ ಅವನು ಚೆನ್ನಯ್ಯನೊಡನೆ ಊಟ ಮಾಡಿದನು . ಚೆನ್ನಯ್ಯನ ಹೆಂಡತಿಯು ಕಾಯಕದಿಂದ ಹಿಂದಿರುಗಿದ ತನ್ನ ಪತಿಗೆ ಉಣ್ಣಲು ರಾಗಿಯ ಅಂಬಲಿಯನ್ನು ನೀಡಿದಳು .
ಕರಿಕಾಲ ಚೋಳನು ಶಿವನನ್ನು ಅರ್ಚಿಸುತ್ತಿದ್ದ ರೀತಿಯನ್ನು ವರ್ಣಿಸಿ ,
ಕರಿಕಾಲ ಚೋಳ ನೃಪನೂ ಕೂಡ ಮಹಾಶಿವಭಕ್ತನೇ ಆಗಿದ್ದನು . ಅವನು ಶಿವಾರ್ಚನೆಯನ್ನು ಆಡಂಬರದಿಂದ ನಡೆಸುತ್ತಿದ್ದನೆಂದು ಕವಿ ಹರಿಹರನು ವರ್ಣಿಸಿದ್ದಾನೆ .
ಕರಿಕಾಲನು ನಿತ್ಯನೇಮದಂತೆ ಶಿವಾಲಯಕ್ಕೆ ಬಂದು ನೈವೇದ್ಯವನ್ನು ಆರ್ಪಿಸುತ್ತಿದ್ದನು . ಮೊದಲಿಗೆ ಶಿವನಿಗೆ ಕೈ ಜೋಡಿಸಿ ನಮಸ್ಕರಿಸುತ್ತಿದ್ದನು .
ಆನಂತರ ನೈವೇದ್ಯಕ್ಕೆ ದೇವಾನ್ನವನ್ನು ದಿವ್ಯವಾದ ಅಮೃತಾನ್ನವನ್ನು ಬಡಿಸುತ್ತಿದ್ದನು . ಜೊತೆಗೆ ಉಪಚರಿಸಿ , ಬಗೆಬಗೆಯ ಆಹಾರ ಭಕ್ಷ್ಯಗಳನ್ನು ಶಿವನಿಗೆ ನೀಡುತ್ತಿದ್ದನು . ಹಪ್ಪಳ , ಕೆನೆಹಾಲಿನ ಮಡಕೆಗಳನ್ನು ಅರ್ಪಿಸುವನು .
ತುಪ್ಪ , ಕೆನ ಮೊಸರು , ಸಕ್ಕರೆಗಳನ್ನೆಲ್ಲಾ ನೈವೇದ್ಯ ಮಾಡಿ , ಹಿಂದೆ ಸರಿದು ನಿಂತು ಶಿವನು ಸ್ವೀಕರಿಸಲೆಂದು ಪರದೆಯನ್ನು ಇಳಿಬಿಟ್ಟು ನಿಲ್ಲುತ್ತಿದ್ದನು . ‘ ಶಿವನೇ ಎಲ್ಲವನ್ನೂ ಸ್ವೀಕರಿಸು ‘ ಎಂದು ಭಕ್ತಿಭಾವತುಂಬಿ ಪ್ರಾರ್ಥಿಸುತ್ತಿದ್ದನು . ಇದು ಕರಿಕಾಲ ಚೋಳನು ಶಿವನನ್ನು ಅರ್ಚಿಸುತ್ತಿದ್ದ ರೀತಿಯಾಗಿದ್ದಿತು .
ದೇವನೊಲಿದನ ಕುಲವೇ ಸತ್ಕುಲಂ
ಚೋಳರಾಜ ಚೆನ್ನಯ್ಯನನ್ನು ಹುಡುಕಿದ ಬಗೆ ಹೇಗೆ ?
ಶಿವನು ತಾನು ಮಾದರ ಚೆನ್ನನೊಡನೆ ಉಂಡುದಾಗಿ ಹೇಳಿ ಲಿಂಗವನ್ನು ಸೇರಿಕೊಂಡ ಮೇಲೆ ಚೋಳರಾಜನಿಗೆ ಚೆನ್ನನನ್ನು ನೋಡಲೇಬೇಕೆಂಬ ತವಕ ಉಂಟಾಯಿತು . ಪರಶಿವನೊಡನೆ ಉಂಡ ಮಹಾನುಭಾವನನ್ನು ಕಾಣಬೇಕೆಂಬ ಕಾತುರ ಹೆಚ್ಚಿತು . ಅವನನ್ನು ಕಂಡು ಧನ್ಯನಾಗಬೇಕೆಂದು ಬಯಸಿ ಕಾಲ್ನಡೆಯಲ್ಲೇ ಹೊರಟನು .
ಎಂದೂ ಬರಿಗಾಲಿನಲ್ಲಿ ನಡೆದು ಅರಿಯದ ಪರಮಸುಖಿಯಾದ ಚೋಳರಾಜನು ಅಂದು ಆನೆ ಕುದುರೆಗಳ ಮೇಲೆ ಪಯಣಿಸದ ನಡೆದುಕೊಂಡೇ ಬಂದನು . ಅವನ ಎಡಬಲದಲ್ಲಿ ಅವನ ಪರಿವಾರ ಸಾಗಿ ಬಂದಿತು . ಎದುರಿಗೆ ಸಿಕ್ಕವರನ್ನು ಚಿನ್ನವನ್ನು ತೋರಿಸೆಂದು ಕೇಳುತ್ತಾ ಚೋಳನು ಮುಂದುವರಿದನು .
ಲಿಂಗದೊಡನೆ ಉಂಡ ಚವ್ವನನ್ನು ತೋರಿಲೇ
” ಲಿಂಗದೊಡನೆ ಉಂಡ ಚವ್ವನನ್ನು ತೋರಿಲೇ ‘ ‘ ಎಂದವನು ಪರಿಪರಿಯಾಗಿ ವಿನಂತಿಸಿಕೊಂಡನು . ದಿಕ್ಕು ದಿಕ್ಕಿಗೂ ತನ್ನ ದೂತರನ್ನು ಹುಡುಕಲು ಅಟ್ಟಿದನು . ಕೊನೆಗೆ ನೆರೆಯವರಿಂದ ಚೆನ್ನನ ಮನೆಯನ್ನು ತಿಳಿದುಕೊಂಡು ಅವನಿದ್ದಲ್ಲಿಗೆ ತೆರಳಿದನು .
ಚೆನ್ನಯ್ಯನಿಗೆ ಶಿವನು ಗಣಪದವಿಯನ್ನು ನೀಡಿದ ಪ್ರಸಂಗವನ್ನು ನಿರೂಪಿಸಿ
ಶಿವನು ಮಾದರ ಚೆನ್ನನ ಭಕ್ತಿಯನ್ನು ಮನಸಾರ ಮೆಚ್ಚಿಕೊಂಡನಲ್ಲದ ಅವನ ಗುಪ್ತಭಕ್ತಿಯನ್ನು ಜಗತ್ತಿಗೆ ತಿಳಿಯುವಂತೆ ಮಾಡುವನು , ಚೋಳರಾಜನು ಶಿವನಿಂದ ಮಾದರ ಚನ್ನನು ಭಕ್ತಿಯ ಮಹಿಮೆಯನ್ನು ಅರಿತು ,
ಅವನ ಗುಡಿಸಲಿಗೆ ಬಂದು ಅವನ ಪಾದಕ್ಕೆ ನಮಸ್ಕರಿಸಿದ ನಂತರ , ಚೆನ್ನನನ್ನು ಆನೆಯ ಮೇಲೆ ಮೆರವಣಿಗೆ ಮಾಡಿ ಶಿವಾಲಯಕ್ಕೆ ಕರೆತರುವನು ಇದೆಲ್ಲದರಿಂದಾಗಿ ತನ್ನ ಭಕ್ತಿಯ ವಿಚಾರ ಬಯಲಾದುದರಿಂದ ಇನ್ನು ತಾನು ಬದುಕಿರಬಾರದೆಂದು ಚೆನ್ನನು ಆತ್ಮಾಹುತಿಗೆ ಮುಂದಾದನು .
ಆಗ ಶಿವನು ಪ್ರತ್ಯಕ್ಷನಾಗಿ ಅವನನ್ನು ಸಂತೈಸುವನಲ್ಲದೆ , ಪುಷ್ಪಕ ವಿಮಾನದಲ್ಲಿ ಕುಳ್ಳಿರಿಸಿಕೊಂಡು ಕೈಲಾಸಕ್ಕೆ ಕರೆತಂದನು . ಅಲ್ಲಿ ಚೆನ್ನನನ್ನು ಪಾರ್ವತಿಗೆ ತೋರಿಸುವನು . ಇತರಲ್ಲರಿಗೂ ಮಾದರ ಚೆನ್ನನನ್ನು ಪರಿಚಯಿಸಿ , ಚೆನ್ನನಿಗೆ ಶಿವಗಣ ಪದವಿಯನ್ನು ನೀಡಿ ಸಂತೋಷಿಸುವನು .
ಹೀಗೆ ಮಾದರ ಚೆನ್ನನು ತನ್ನ ಸರಳವಾದ ಮನಃಪೂರ್ವಕವಾದ ಭಕ್ತಿಯಿಂದ ಶಿವಗಣ ಪದವಿಯನ್ನು ಪಡೆದು ಮಹಾಶಿವಶರಣನೆನಿಸಿದನು . ಅವನ ಬದುಕು ಆಡಂಬರದ ಭಕ್ತಿಗಿಂತ , ಅಂತರಂಗದ ಭಕ್ತಿ ಮುಖ್ಯವೆಂಬುದನ್ನು ಸಾರಿ ಹೇಳಿದ .