ಕೃಷಿ ಸಂಸ್ಕೃತಿ ಮತ್ತು ಜಾಗತೀಕರಣ, Krishi Sanskriti Mattu Jagatikarana Questions and Answers Pdf, Notes, Summary, 1st PUC Kannada Prabandha, essay
ಕೃಷಿ ಸಂಸ್ಕೃತಿ ಮತ್ತು ಜಾಗತೀಕರಣ
ಲೇಖಕರ ಪರಿಚಯ
ಸಿ.ಎಚ್ . ಹನುಮಂತರಾಯ
ಸ್ಥಳ : ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಪಲ್ಲಾಪುರ ತಾಲೂಕಿನ ಚಿಕ್ಕಬೆಳವಂಗಲದ ರೈತ ಕುಟುಂಬದಲ್ಲಿ ಜನಿಸಿದರು
ಕೃತಿ: ವಕೀಲರೊಬ್ಬರ ವಗೈರೆಗಳು
ಪ್ರಶಸ್ತಿ :ಸುವರ್ಣ ಕರ್ನಾಟಕ ರಾಜ್ಯೋತ್ಸವ ‘ ಪ್ರಶಸ್ತಿಯನ್ನಿತ್ತು ಗೌರವಿಸಿದೆ
ಲೇಖಕರು ಸಿಪಾಯಿ ದಂಗೆಯನ್ನು ಏನೆಂದು ಕರೆದಿದ್ದಾರೆ ?
ಲೇಖಕರು ಸಿಪಾಯಿ ದಂಗೆಯನ್ನು ರೈತ ದಂಗೆಯೆಂದೇ ಕರೆದಿದ್ದಾರೆ .
ರೈತರು ಯಾವ ತೆರಿಗೆಯನ್ನು ಪಾವತಿಸಬೇಕಾಯಿತು ?
ರೈತರು ಜಮೀನ್ದಾರಿ ಪದ್ಧತಿಯ ಕಾನೂನಿನಂತೆ ಹಣದ ರೂಪದ ತೆರಿಗೆಯನ್ನು ಪಾವತಿಸಬೇಕಾಯಿತು .
ರೈತರ ಬದಲಿಗೆ ಸ್ವಾತಂತ್ರ್ಯವು ಯಾರ ಕೈಗೆ ಸಿಕ್ಕಿತು ?
ಸ್ವಾತಂತ್ರ್ಯವು ರೈತರಿಗೆ ಸಿಗುವ ಬದಲು ಬಂಡವಾಳಶಾಹಿಗಳ ಕೈಗೆ ಸಿಕ್ಕಿತು .
ವಾಕ್ಯದಲ್ಲಿ ಉತ್ತರಿಸಿ
ಲೇಖಕರು ಸಿಪಾಯಿ ದಂಗೆಯನ್ನು ಏನೆಂದು ಕರೆದಿದ್ದಾರೆ ?
ಲೇಖಕರು ಸಿಪಾಯಿ ದಂಗೆಯನ್ನು ರೈತ ದಂಗೆಯೆಂದೇ ಕರೆದಿದ್ದಾರೆ .
ರೈತರು ಯಾವ ತೆರಿಗೆಯನ್ನು ಪಾವತಿಸಬೇಕಾಯಿತು ?
ರೈತರು ಜಮೀನ್ದಾರಿ ಪದ್ಧತಿಯ ಕಾನೂನಿನಂತೆ ಹಣದ ರೂಪದ ತೆರಿಗೆಯನ್ನು ಪಾವತಿಸಬೇಕಾಯಿತು .
ಬ್ರಿಟಿಷ್ ಸರಕಾರಕ್ಕೆ ತೆರಿಗೆ ಕಟ್ಟಬಾರದೆಂದು ಯಾರು ಹೇಳಿದರು ?
ಬ್ರಿಟಿಷ್ ಸರಕಾರಕ್ಕೆ ತೆರಿಗೆ ಕಟ್ಟಬಾರದೆಂದು ಮಹಾತ್ಮಗಾಂಧಿಯವರು ಹೇಳಿದರು .
ರೈತರ ಬದಲಿಗೆ ಸ್ವಾತಂತ್ರ್ಯವು ಯಾರ ಕೈಗೆ ಸಿಕ್ಕಿತು ?
ಸ್ವಾತಂತ್ರ್ಯವು ರೈತರಿಗೆ ಸಿಗುವ ಬದಲು ಬಂಡವಾಳಶಾಹಿಗಳ ಕೈಗೆ ಸಿಕ್ಕಿತು .
ಶ್ರೀಮಂತ ರೈತರ ಉದಯಕ್ಕೆ ಯಾವುದು ಸಹಾಯಕವಾಯಿತು ?
‘ ಹಸಿರುಕ್ರಾಂತಿ’ಯು ಶ್ರೀಮಂತ ರೈತರ ಉದಯಕ್ಕೆ ಕಾರಣವಾಯಿತು .
ದೇಶಗಳಲ್ಲಿ ಯಾವ ರೀತಿಯ ಚಳುವಳಿ ಹುಟ್ಟಿಕೊಂಡವು ?
ರೈತ ಪರವಾದ ಚಳವಳಿ , ಹೋರಾಟಗಳು ಹುಟ್ಟಿಕೊಂಡವು ಮತ್ತು ದೇಶೀಯ ವಿಮೋಚನಾ ಚಳವಳಿಗಳು ಹುಟ್ಟಿ ಕೊಂಡವು .
ಜಂಕ್‌ಫುಡ್ ಹೋಟೆಲ್‌ಗಳೆಂದು ಹೀಯಾಳಿಸಿದವರು ಯಾರು ?
ಅಮೆರಿಕನ್ನರು ಜಂಕ್‌ಫುಡ್ ಹೋಟೆಲ್ಲುಗಳೆಂದು ಹೀಯಾಳಿಸಿದರು .
2- 3 ವಾಕ್ಯದಲ್ಲಿ ಉತ್ತರಿಸಿ
ರೈತರನ್ನು ಶೋಷಣೆ ಮಾಡಿದವರು ಯಾರು ?
ರೈತರನ್ನು ಸಾಲದ ಸುಳಿಯಲ್ಲಿ ಸಿಲುಕಿಸಿದ ಸಾಹುಕಾರ ವರ್ಗವು ರೈತರಿಗೆ ನೀಡಿದ ಸಾಲಕ್ಕೆ ಸಿಕ್ಕಾಪಟ್ಟೆ ಬಡ್ಡಿ ಹಾಕಿ ರೈತರನ್ನು ಶೋಷಣೆ ಮಾಡಿತು .
ರೈತ ಚಳುವಳಿಗಳು ಎಲ್ಲೆಲ್ಲಿ ನಡೆದವು ?
ಕರ್ನಾಟಕದಲ್ಲಿ ರೈತ ಚಳುವಳಿಗಳು ಕಾಗೋಡು , ದಾಂಡೇಲಿ , ಹಳಿಯಾಳ , ನರಗುಂದ ಮತ್ತು ಶಿವಮೊಗ್ಗದಲ್ಲಿ ನಡೆದವು .
ಸಾಲ ಕೇಳಲು ಹೋದ ಬಡರಾಷ್ಟ್ರಗಳ ಮೇಲೆ ವಿಧಿಸಿದ ನಿರ್ಬಂಧಗಳಾವುವು ?
ಸಾಲ ಕೇಳಲು ಹೋದ ಬಡರಾಷ್ಟ್ರಗಳ ಮೇಲೆ ಮಹಿಳೆ ಮತ್ತು ಶಿಶುಕಲ್ಯಾಣ , ಶಿಕ್ಷಣ , ಆರೋಗ್ಯ , ಸಮಾಜ ಕಲ್ಯಾಣಗಳಂಥ ಯೋಜನೆಗಳಿಗಾಗಿ ಹಣ ವ್ಯಯಿಸಬಾರದೆನ್ನುವ ನಿರ್ಬಂಧಗಳನ್ನು ಹೇರಲಾಯಿತು .
ಕೃಷಿ ಜಮೀನನ್ನು ಯಾರು ಖರೀದಿಸುವಂತಿಲ್ಲ ?
ನಮ್ಮ ಕರ್ನಾಟಕ ರಾಜ್ಯ ಭೂಸುಧಾರಣಾ ಕಾಯ್ದೆಯ ಪ್ರಕಾರ ರೈತ ಅಥವಾ ರೈತ ಕೂಲಿಕಾರರಲ್ಲದವರು ಕೃಷಿ ಜಮೀನುಗಳನ್ನು ಖರೀದಿಸುವಂತಿಲ್ಲ .
ರಾಸಾಯನಿಕಗಳನ್ನು ತಿಂದು ಬೆಳೆಯುವ ಪ್ರಾಣಿಗಳಿಗೆ ಯಾವ ರೋಗಗಳು ಬರುತ್ತವೆ ?
ರಾಸಾಯನಿಕಗಳನ್ನು ತಿನ್ನುವುದರಿಂದ ಪ್ರಾಣಿಗಳು ಅಕಾಲಿಕವಾಗಿ ಬಾತುಕೊಂಡು ಕೊಬ್ಬಿ ಬೆಳೆದು ಕುರಿಗಳೆಲ್ಲಾ ಗೂಳಿಗಳಂತೆ ಕಂಡವು . ಅವುಗಳಲ್ಲಿ ರೋಗ ನಿರೋಧಕ ಶಕ್ತಿಯೇ ಇರದೆ , ಗುರುತಿಸಲಾಗದ ವಿಚಿತ್ರ ರೋಗಗಳಿಗೆ ಬಲಿಯಾಗಿ ಸತ್ತುಹೋದವು .
5-6 ವಾಕ್ಯಗಳಲ್ಲಿ ಉತ್ತರಿಸಿ
ಸಿಪಾಯಿ ದಂಗೆಯನ್ನು ರೈತರ ದಂಗೆಯಂದು ಲೇಖಕರು ಏಕೆ ಕರೆದಿದ್ದಾರೆ ?
ಲೇಖಕರು 1857 ರ ಸಿಪಾಯಿ ದಂಗೆಯನ್ನು ರೈತರ ದಂಗೆಯೆಂದೇ ಕರೆಯಲು ಬಯಸುತ್ತಾರೆ . ಇದಕ್ಕೆ ಅವರು ನೀಡಿರುವ ಕಾರಣವೆಂದರೆ ಸಿಪಾಯಿದಂಗೆ ಸ್ಫೋಟಗೊಳ್ಳುವುದಕ್ಕೆ ಕ್ರಾಂತಿಕಾರಕ ವಾತಾವರಣವನ್ನು ರೈತರು ತಮ್ಮ ಚಳುವಳಿಗಳ ಮೂಲಕ ಸೃಷ್ಟಿ ಮಾಡಿದರೆಂಬ ಸಂಗತಿ .
ಅಲ್ಲದೆ ಸಿಪಾಯಿದಂಗೆಯಲ್ಲಿ ಒಂದೂವರೆ ಲಕ್ಷ ಭಾರತೀಯರು ಕೊಲ್ಲಲ್ಪಟ್ಟರು . ಅವರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಜನ ರೈತಲೇ ಇದ್ದರು . ಅಲ್ಲದೆ ಗಾಂಧೀಜಿಯ ಕರೆಗೆ ಓಗೊಟ್ಟ ರೈತರ ಸ್ವಾತಂತ್ರ್ಯ ಚಳವಳಿಯು ಹಳ್ಳಿಹಳ್ಳಿಗೆ ವ್ಯಾಪಿಸಲು ಸಾಧ್ಯವಾಯಿತು – ಈ ಎಲ್ಲ ಕಾರಣಗಳಿಂದ ಲೇಖಕರು ಇದನ್ನು ರೈತರ ದಂಗೆಯೆಂದೇ ಕರೆಯಲು ಅಪೇಕ್ಷೆಪಟ್ಟಿದ್ದಾರೆ .
ಹತ್ತೊಂಬತ್ತನೆಯ ಶತಮಾನದಲ್ಲುಂಟಾದ ಬರದ ಪರಿಣಾಮಗಳೇನು ?
ಹತ್ತೊಂಬತ್ತನೆಯ ಶತಮಾನದಲ್ಲಿ ಉಂಟಾದ ಭೀಕರ ಪರಿಣಾಮಗಳು ಹೃದಯ ಕಲಕುವಂತಿದೆ . ರೈತರು ಎರೆಮಣ್ಣನ್ನು ತಿಂದು ಹೊಟ್ಟೆ ತುಂಬಿಸಿಕೊಂಡರೆಂಬ ಸುದ್ದಿಗಳು ಹರಡಿದವು , ಸತ್ತವರ ಶವಸಂಸ್ಕಾರ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಯಿತು .
ನಾಯಿ – ನರಿಗಳು ಶವವನ್ನು ತಿನ್ನಲಾರಂಭಿಸಿದವು . ಎಲ್ಲಿ ನೋಡಿದರಲ್ಲಿ ಮನುಷ್ಯರ ಅಸ್ಥಿಪಂಜರಗಳು ಬಂದವು .
ರೈತ ಚಳುವಳಿಗಳ ಬಗ್ಗೆ ಬರೆಯಿರಿ?
ಎಪ್ಪತ್ತರ ದಶಕದಲ್ಲಿ ಭುಗಿಲೆದ್ದ ರೈತ ಚಳುವಳಿಗಳು ಮಧ್ಯಮ ಮತ್ತು ಶ್ರೀಮಂತ ರೈತರ ಬೇಡಿಕೆಗಳನ್ನು ಪ್ರಧಾನ ವಾಗಿರಿಸಿಕೊಂಡ ರೈತ ಹೋರಾಟಗಳಾಗಿದ್ದವು , ಬಡ ರೈತರು ಗಮನಕ್ಕೆ ಬರಲೇ ಇಲ್ಲ . ಈ ಬಗೆಯ ಚಳುವಳಿಗಳು ಸರಕಾರಗಳನ್ನು ನಡುಗಿಸತೊಡಗಿದವು .
ಕರ್ನಾಟಕದಲ್ಲಿ ಕಾಗೋಡು ರೈತ ಹೋರಾಟವು ಅಭೂತಪೂರ್ವ ನೆಲೆಗಟ್ಟನ್ನು ಒದಗಿಸಿಕೊಟ್ಟಿತು . ದಾಂಡೇಲಿ , ಹಳಿಯಾಳಗಳಲ್ಲಿ ರೈತ ಹೋರಾಟವು ನಡೆಯಿತು . ನರಗುಂದ ಮತ್ತು ಶಿವಮೊಗ್ಗ ರೈತ ಚಳುವಳಿಗಳು ನಡೆದವು . ಶಿವಮೊಗ್ಗ ರೈತ ಚಳವಳಿಯ ನಂತರ ರೈತ ಸಂಘಟನೆಗಳು ಒಡೆದು ಹೋಳಾಯಿತೆಂದು ಲೇಖಕರು ಹೇಳಿದ್ದಾರೆ .
ಭೂ ಸುಧಾರಣಾ ಕಾಯ್ದೆ ಎಂದರೇನು ? ಅದರ ಪರಿಣಾಮಗಳೇನು ?
ಕೃಷಿಕ್ಷೇತ್ರದಲ್ಲಿನ ವಿವಿಧ ಸಾಂಸ್ಥಿಕ ಅಂಶಗಳಲ್ಲಿ ಬದಲಾವಣೆ ತರಲು ಸರ್ಕಾರ ಯತ್ನಿಸುವುದನ್ನು ‘ ಭೂ ಸುಧಾರಣೆ ‘ ಎನ್ನಲಾಗಿದೆ .
ಒಕ್ಕಲುತನದ ಸಮಸ್ಯೆಗಳನ್ನು ನಿವಾರಿಸಿ , ಕೃಷಿ ಪ್ರಗತಿಗೆ ಶ್ರಮಿಸುವುದು ಭೂ ಸುಧಾರಣೆಯ ಮುಖ್ಯ ಉದ್ದೇಶ . ಭೂ ಒಡೆತನ , ಭೂ ಒಡೆಯರು ಮತ್ತು ಸರ್ಕಾರಕ್ಕೆ ಇರಬೇಕಾದ ಸಂಬಂಧ , ಗೇಣಿದಾರರ ಹಿತರಕ್ಷಣೆ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಕೃಷಿ ವ್ಯವಸ್ಥೆಯಲ್ಲಿ ತರಲಾಗುವ ಯೋಜಿತ ಮತ್ತು ಕಾನೂನುಬದ್ಧ ಮಾರ್ಪಾಟುಗಳೇ ಭೂ ಸುಧಾರಣಾ ಕಾಲದ’ಗಳು .