ಎಂದಿಗೆ notes, endige notes in kannada and Question answer, endige kannada summary in kannada, endige notes in kannada, 1st PUC Kannada
ಎಂದಿಗೆ notes
ಎಂದಿಗಯ್ಯ ಎಂದಿಗೆ ? ಎಂದಿಗೋ , ಎಂದಿಗೆ ?
ನನ್ನ ನಾಡ ಮಂದಿಗೆ
ತಿಳಿವು ಹೊಳೆವುದೆಂದಿಗೆ ?
ನಾಡ ನೂರು ಕೋಟಿ ಗಂಡು ಹೆಣ್ಣು ಕೂಸು ಕುನ್ನಿಗೆ
ಹುಟ್ಟಿಗಂಟಿ ಬಂದ ಚಿತ್ತದಾಸ್ಯ ಕಳೆವುದೆಂದಿಗೆ ?
ನೆನ್ನೆ ವೈಭವದ ನೆನಹ ಭೂತಗಣವೆ ಕುಣಿದಿದೆ
ಯುಗಯುಗಾಂತರದ ನಾಡ ಹಿರಿಮೆ ಕನಸ ಮತ್ತೆ ಕನಸಿ ನೆ
ನಹ ಜೊಲ್ಲ ಬೆರೆಸಿ ತೊನೆಸಿ
ನಾಡು ತಣಿದಿದೆ .
ಕಡಲನ್ನು ಕಡೆದಾಗ ಏನು ಬಂತು ?
ಕಡಲನ್ನು ಕಡೆಗೋಲಿನಿಂದ ಕಡೆದಾಗ ಎದೆ ಬಂದಿತು .
ಕಾತ್ರವಧೆ ಮಾಡಿದವನು ಯಾರು ?
ಕ್ಷಾತ್ರವದ ಮಾಡಿದವನು ಪರಶುರಾಮ .
ಮೆಲುಕು ಹಾಕಿ ಹಾಕಿ ಹಾಕಿ ದವಡೆ ದಣಿದಿದೆ ,
ಅಳಿದ ಸಿರಿಯ ಅಣಕವಾಡು ಒಂದೆಸಮನೆ ನಡೆದಿದೆ
ಅಂತ ಕಾಣದಾಗಿದೆ .ಸೂಡಿನೆಂದೆದ್ದು ಬಂದ ಶವದ ಸುತ್ತ ಕುಳಿತ ಜನತೆ
ಮೆಚ್ಚಿ ತಲೆಯ ತೂಗಿದೆ
ನಿತ್ಯ ರುದ್ರ ನೃತ್ಯ ಹೃದಯರಂಗದಲ್ಲಿ ನಡೆದಿದೆ .
ಉನ್ಮತ್ತ ನಾಟ್ಯಕೆಂದೆ ನಾಡು ತಾಳ ಹೊಡೆದಿದೆ .
ಒಪ್ಪಿ ತೊಡೆಯ ಬಡಿದಿದೆ .
endige kannada summary
ಯಾವ ಜೀವದ ಯೋಗಬಲವೊ ಉಗ್ರ ತಾಪಸಿಯರ ಮಹಿಮೆಯೊ ,
ಅಂತು ಬಂದಿದೆ ಬಿಡುಗಡೆ .
ಸುರಿದ ನೆತ್ತರ ಕೆಂಪ ಸಿರಿಯೊ ಮಣ್ಣಿಗೊದಗಿದ ತಣ್ಣ ಕರೆಯೊ ,
ಹಸುರ ಮೆರೆಯಿತು ಮರುಧರೆ .
ಕಡಲ ಕಡೆಗೋಲಿಟ್ಟು ಕಡೆಯಲು
ಅಯ್ಯೋ ಬಂತೇ ವಿಷ ವಿಷ .
ನೆಚ್ಚಿ ಕಡೆಯಲು ಮೆಚ್ಚಿ ದುಡಿಯಲು
ಬಾರದಾಯಿತೆ ಅಮೃತ .
ಅಂತು ಬಂದಿತು ಬಂದೆ ಬಂದಿತು ಎಂಥ ಎಂಥಾ ಬಿಡುಗಡೆ
ಮೋಸ ಸುಳ್ಳಿಗೆ ಲಂಚ ಸುಲಿಗೆಗೆ
ಹೃದಯದಾಳದ ಕೊಚ್ಚೆ ಹರಿವಿಗೆ ಇನ್ನು ಇಲ್ಲವೆ ತಡೆಬಡೆ !
ಕಡಲುಗಳ್ಳರ ಕಾಟ ಕೊನೆಗಂಡರೇನಂತೆ ?
ಒಡಲುಗಳ್ಳರು ಇನ್ನು ಇಲ್ಲೆ ಇಹರೊ :
ರೈತ ಮಕ್ಕಳು ಬಯಸಿ ಬೆಳೆದ ಬೆಳೆಸನು ಸುಲಿದು
ಸುಖಪಡುವ ರಕ್ಕಸರು ನಡುವೆ ಇಹರೋ
ನರನಸ್ಥಿಪಂಜರದ ಅಡಿಗಲ್ಲ ಮೇಲಿವರು
ಸುಸ್ಥಿರವು ಎನುವಂಥ ಭವನಗಳನು
ನಿರ್ಮಿಸುವ ಕ್ರೂರ ಜನ ತೂಗಲೆಂದೇ ಬಂದು ,
ಕೂಸ ಕೊರಳನೆ ಹಿಸುಕಲೆಳಸುತಿಹರು .
ಸುಡಗಾಡ ನಡುವಲ್ಲೆ ಸುಖದ ಸುಪ್ಪತ್ತಿಗೆಯ
ಹಾಸಿ ಮಲಗುವ ಜನರು ನಾಡೊಳಿಹರು .
ಬೂಟುಕಾಲಿನೇಟು ಬಿದ್ದರಿನ್ನು ಸುಮ್ಮನಿರುವರೆ ?
ಕಿವಿಯ ತುಂಬ ಕಲ್ಲಿನೇಟು ತಿಂದ ಕುನ್ನಿ ಮರಿಯ ಕೂಗು !
ಕೇಳದಲ್ಲೋ ಗರ್ಜನೆ ,
ಕಿವಿ ಬಿರಿಯುವ ಮೃಗರಾಜನ ತುಂಬುಕೊರಳ ಗರ್ಜನೆ
ರಕ್ತಪಾನಮತ್ತ ಈ ರಾಕ್ಷಸಗಣ ಹತ್ಯಕೆ
ಕ್ಷಾತ್ರವಧೆಗೆ ನಿಂತ ಜಾಮದಗ್ನಿಯಂತೆ ಕೆರಳಿ ನಿಂತು
ಗಂಡುಗೊಡಲಿಯುಟ್ಟು ಜನತೆ ಹೆಜ್ಜೆಯಿಡುವುದೆ೦ದಿಗೆ ,
ನಡೆವುದೆಂದು ಮುಂದಕೆ ?
ಎಂದಿಗೆ notes
ಇರುಳ ಬಸಿರ ಬಗೆದು ಉದಯರಾಗ ಬರುವುದೆಂದಿಗೆ
ನನ್ನ ನಾಡ ಮಂದಿಗೆ ? ನಾಡ ಮೂಲೆ ಮೂಲೆಗೆ ರಾಜ ಬೀದಿ ಸಂದಿಗೆ
ಕ್ರಾಂತಿಭಾನು ಹೊಳೆದು ಹೊಂಬೆಳಕ ಚೆಲ್ಲುದೆ೦ದಿಗೆ ?
ಎ೦ದಿಗಯ್ಯ ಎಂದಿಗೆ ?
ನನ್ನ ನಾಡ ಮ೦ದಿಗೆ
ಕಾವಳವಿದು ಕಳೆದು ಮತ್ತೆ ತಿಳಿವು ಹೊಳೆವುದೆ೦ದಿಗೆ
ಹುಟ್ಟಿಗಂಟಿ ಬಂದ ಚಿತ್ತದಾಸ್ಯ ಕಳೆವುದೆಂದಿಗೆ
ಒಂದು ವಾಕ್ಯದಲ್ಲಿ ಉತ್ತರಿಸಿ
ಹುಟ್ಟಿನೊಂದಿಗೆ ಅಂಟಿ ಬಂದ ಯಾವುದನ್ನು ಕಳೆಯಬೇಕು ?
ಹುಟ್ಟಿನೊಂದಿಗೆ ಅಂಟಿ ಬಂದ ಚಿತ್ತವಾಸ್ಯ ಕಳೆಯಬೇಕು .
ದನದ ಏಕ ದಣಿವಿದೆ ?
ಹಳೆಯದನ್ನು ಮೆಲುಕು ಹಾಕಿ ಹಾಕಿ ದಪಡೆ ದಣಿದಿದೆ .
ನಾಡು ಯಾವುದಕ್ಕೆ ತಾಳೆ ಹೊಡೆದಿದೆ ?
ಉನ್ಮತ್ತ ಪಾಟ್ಕಕೆ೦ದ ನಾಡು ತಾಳ ಹೊಡೆದಿದೆ .
ಕಡಲನ್ನು ಕಡೆದಾಗ ಏನು ಬಂತು ?
ಕಡಲನ್ನು ಕಡೆಗೋಲಿನಿಂದ ಕಡೆದಾಗ ಎದೆ ಬಂದಿತು .
ನಾಡಿಗೆಯಾರ ಕಾಟ ಕೊನೆಗೊಂಡಿದೆ
ನಾಡಿಗೆ ಕಡಲುಗಳ್ಳರು ಕಾಟ ಕೊನೆಗೊಂಡಿತು .
ಕಾತ್ರವಧೆ ಮಾಡಿದವನು ಯಾರು ?
ಕ್ಷಾತ್ರವದ ಮಾಡಿದವನು ಪರಶುರಾಮ .
ಇರುವ ಬಸಿದು ಬಗದು ಬರಬೇಕಾಗಿರುವುದು ಯಾವುದು ?
ಇರುಳ ಬಸಿರನ್ನು ಬಗೆದು ಬರಬೇಕಾಗಿರುವುದು ಉಪಯರಾಗ
ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ
ಚಿತ್ರದಸ್ಯ ಕಳೆಯಬೇಕಾಗಿರುವುದು ಯಾರು ಯಾರಿ
ಚಿತ್ತದಾಸ್ಯಕಳೆಯಬೇಕಾಗಿರುವುದು ನಾಡಿನ ಜನರಿಗೆ ನಾಡಿನಲ್ಲಿರುವ ನೂರು ಕೋಟಿ ಗಂಡಸರು , ಹೆಂಗಸರು ಮಕ್ಕಳಿಗೆ ಚಿತ್ತವಾಸ್ತವು ಕಳೆಯಬೇಕಾಗಿದೆ .
ನಾಡಿ ಮಂದಿಗೆ ಯಾವುದರ ಬಲ ಹಾಗೂ ಮಹಿಮೆಯಿಂದ ಬಯರ್ಗಯಾಗಿದೆ
ನಾಡಮಂದಿಗೆ ನಾಡಿಗಾಗಿ ಹೋರಾಟದ ಜೀವಗಳ ಯೋಗದ ಬಲ ಹಾಗೂ ಉಗ್ರ ತಾಪಸಿಗಳ ಮಹಿಮೆಯಿಂದ ಬಿಡುಗಡೆ ದೂರವ ನಾಡಿನ ಬಿಡುಗಡೆಯಲ್ಲಿ ಯಾವುದಕ್ಕೆ ಅವಗಳು ಇಲ್ಲವಾಗಿವ
ಎಂದಿಗೆ notes
ನಾಡಿನ ಬಿಡುಗಡೆಯಲ್ಲಿ ಯಾವುದಕ್ಕೆ ಅಡೆತಡೆಗಳು ಇಲ್ಲವಾಗಿವೆ ?
ನಾಡಿಗೆ ಬಿಡುಗಡೆಯೇನೋ ಬಂದಿದೆ ಆದರೆ ಈಗ ಮೋಸ ಸುಳ್ಳು ಲಂಚ ಸುಲಿಗೆ ಹೃದಯ ಕಲ್ಮಷಗಳಿಗೆ ಅಡೆತಡೆಗಳೇ ಇಲ್ಲವಾಗಿವೆ .
ನಾಡಿನ ಒಳಗಿನ ಮತ್ತು ಹೊರಗಿನ ಕಳ್ಳರು ಯಾರು ?
ನಾಡಿಗೆ ಸಮುದ್ರ ಮಾರ್ಗದ ಮೂಲಕ ನುಸುಳಿದ ವಿದೇಶಿಯರು ಹೊರಗಿನ ಕಡಲುಗಳ್ಳರಾಗಿದ್ದಾರೆ . ಈಗ ನಾಡನ್ನು ದೋಚುತ್ತಿರುವವರು ನಮ್ಮನ್ನು ಆಳುತ್ತಿರುವ ರಾಜಕಾರಣಿಗಳೇ ಒಳಗಿನ ಕಳ್ಳರಾಗಿದ್ದಾರೆ .
ರಾಕ್ಷಪಗಣ ಹತ್ಯೆಗೆ ಜನ ಹೇಗೆ ಹೆಜ್ಜೆ ಇಡಬೇಕು ?
ರಾಕ್ಷಸಗಣದ ಹತ್ಯೆಗೆ ಜನರು ಕ್ಷತ್ರಿಯರ ಪಧೆಗೆ ಕೆರಳಿ ನಿಂತ ಜಾಮದಗ್ನಿಯಂತೆ , ಗಂಡುಗೊಡಲಿಯಿಟ್ಟು ಬಿಟ್ಟ ಹೆಜ್ಜೆಯನ್ನು ಮುಂದಕ್ಕಿಡಬೇಕು . ಹೆಚ್ಚುವರಿ ಪ್ರಶ್ನೆ : ಪ್ರಶ್ನೆಕೋಶದಿಂದ ಕಡಲನ್ನು ಕಡೆದಾಗ ಆದದ್ದೇನು ? ಕಡಲನ್ನು ಕಡೆಗೋಲಿನಿಂದ ಕಡೆದಾಗ ಎಷ ‘ ಮೂಡಿಬಂತು .
ಐದಾರು ವಾಕ್ಯಗಳಲ್ಲಿ ಉತ್ತರಿಸಿ
ನಾಡಜನರ ಗತವೈಭವದ ಕನಸನ್ನು ಕವಿ ಹೇಗೆ ವಿಡಂಬಿಸಿದ್ದಾರೆ ?
ನಾಡಿನ ಜನತೆಗೆ ವರ್ತಮಾನದ ಬಗ್ಗೆಯಾಗಲೀ , ಭವಿಷ್ಯತ್ತಿನ ಬಗ್ಗೆಯಾಗಲಿ ಚಿಂತೆಯಿಲ್ಲ ಚಿತ್ತದಾಸ್ಯವನ್ನು ಆವರಿಸಿರುವ ಅವರು ಗತವೈಭವದ ಕನಸಿನಲ್ಲೇ ಮುಳುಗಿ ಹೋಗಿದ್ದಾರೆ . ಅವರೊಳಗೆ ಹಳೆಯ ನೆನಪುಗಳ ಭೂತಗಣ ಕುಣಿಯುತ್ತಿದೆ . ಸಾವಿರಾರು ವರ್ಷಗಳಿಂದ ನಾಡ ಹಿರಿಮೆಯನ್ನು ಹೊಗಳಿಕೊಂಡು ಬಂದುದೇ ಆಯಿತು . ನಾಡ ಜನರ ದವಡೆಗಳೆಲ್ಲ ಹಳೆಯ ನೆನಪುಗಳನ್ನು ಮೆಲುಕು ಹಾಕಿ ಹಾಕಿ ದಣಿದುಹೋಗಿದೆಯಂತೆ ಕಳೆದುಕೊಂಡಿರುವ ಸಂಪತ್ತಿನ ನೆನಪಿಗೆ ಕನವರಿಕೆಗೆ ಅಂತ್ಯವೇ ಇಲ್ಲವಾಗಿದೆ .
ಸಮಾಧಿಯಿಂದ ಹೂತ ಹಣವನ್ನು ಹೊರತೆಗೆದು ಮತ್ತೆ ಮತ್ತೆ ಸತ್ತವರಿಗಾಗಿ ಅಳುವ ರೀತಿಯಿದೆಂದು ಕವಿ ವಿಡಂಬಿಸಿರುವರು . ಎಲ್ಲರ ಹೃದಯದಲ್ಲೂ ಈ ಗತವೈಭವದ ನೆನಪುಗಳ ಉನ್ಮತ್ತ ನಾಟ್ಯ ನಡೆದಿದೆ , ಜನರೆಲ್ಲಾ ಇದಕ್ಕೆ ತಾಳ ಹಾಕುತ್ತಾ ತಲೆದೂಗಿಕೊಂಡಿದ್ದಾರೆಂದು ಕವಿ ವಿಡಂಬನೆ ಮಾಡಿದ್ದಾರೆ .
endige notes in kannada
ಒಡಲುಗಳ್ಳರು ನಾಡನ್ನು ಹೇಗೆ ಸುಲಿಗೆ ಮಾಡುತ್ತಿದ್ದಾರೆ ?
ಒಡಲುಗಳ್ಳರೆ೦ದರೆ ನಾಡಿನ ಒಳಗಿರುವ ಕಳ್ಳರು , ರೈತರು ಬೆವರು ಸುರಿಸಿ ಹೊಲಗದ್ದೆಗಳಲ್ಲಿ ದುಡಿದು ಬೆಳೆಯನ್ನು ಬೆಳೆಯುತ್ತ ಆದರೆ ಅವರಿಗೆ ದುಡಿಮೆಗೆ ತಕ್ಕ ಪ್ರತಿಫಲ ದೊರೆಯುತ್ತಿಲ್ಲ . ದಲ್ಲಾಳಿಗಳು , ಮಧ್ಯವರ್ತಿಗಳು ಅದನ್ನು ದೋಚು ತ್ತಿದ್ದಾರೆ . ಕಷ್ಟಪಡುವವರು ದುಡಿವ ರೈತರಾದರೆ , ಸುಖಿಸುವವರು ಇಂತಹ ರಾಕ್ಷಸರು ಜನ ಬಡತನದಲ್ಲಿ ಹೊಟ್ಟೆಗಿಲ್ಲದೆ ಸಾಯುತ್ತಿದ್ದಾರೆ . ಅವರ ಹೊಟ್ಟೆಯ ಮೇಲೆ ಹೊಡೆವ ದುರುಳರು ಬಡವರ ಸಮಾಧಿಯ ಮೇಲೆ ಭವ್ಯವಾದ ಶಾಶ್ವತವಾದ ಸೌಧಗಳನ್ನು ಅಭಿವೃದ್ಧಿಯ ಹೆಸರಲ್ಲಿ ನಿರ್ಮಿಸುತ್ತಿದ್ದಾರೆ .
ಮಗುವನ್ನು ತೂಗಲೆಂದು ಒಂದು ಕೊರಳನ್ನ ಹಿಸುಕುವ ಕೇಡಿಗಳಿವ ರಂದು ಕವಿ ಹೇಳಿದ್ದಾರೆ . ಏಕೆಂದರೆ ಉದ್ಧಾರ ಮಾಡುತ್ತೇವೆಂದು ಅಧಿಕಾರಕ್ಕೆ ಬರುವ ಮುನ್ನ ಭರವಸೆ ನೀಡಿ , ಅಧಿಕಾರ ದಕ್ಕಿಡಾಗ ಸುಲಿಗೆ ಮಾಡಲು ಆರಂಭಿಸುತ್ತಾರೆ . ಕಷ್ಟದಿಂದ ಜನರೆಲ್ಲಾ ಸತ್ತು ಸಮಾಧಿ ಸೇರಿದರೆ , ಅದರಲ್ಲಿ ಸುಖದ ಸುಪ್ಪತ್ತಿಗೆಯನ್ನು ಮಾಡಿ ಮಲಗುವ ಒಡಲುಗಳ್ಳರಿವರೆಂದು ಕವಿ ಹೇಳಿದ್ದಾರೆ .
ನಾಡಜನರ ದಾಸ್ಯ ಮನೋಭಾವ ಹಾಗೂ ನಿಷ್ಕ್ರಿಯತೆಯ ಬಗ್ಗೆ ಕವಿಯ ಪ್ರತಿಕ್ರಿಯೆಯೇನು ?
ನಾಡ ಜನರಿಗೆ ಹುಟ್ಟಿನಿ೦ದಲೇ ‘ ಚಿತ್ತದಾಸ ‘ ಅಂಟಿಕೊಂಡು ಬಂದಿರುತ್ತದೆ ಎಂದು ಕವಿ ವಿಡಂಬಿಸಿದ್ದಾರೆ . ನಮ್ಮ ದೇಶದಲ್ಲಿರುವ ನೂರು ಕೋಟಿ ಜನರದೂ ಇದೇ ಪ್ರವೃತ್ತಿ ಸ್ವಂತ ಬುದ್ಧಿಯೇ ಈ ಜನಕ್ಕಿಲ್ಲ . ತಿಳಿವು ಅವರಿಂದ ದೂರ ಉಳಿವಿದೆ . ಎಲ್ಲರಲ್ಲೂ ಯುಗಯುಗಾಂತರದಿಂದ ಗತವೈಭವದ ಭೂತ ಕಾಣುತ್ತಿದೆ . ಹಿಂದಿನ ವೈಭವದ ದಿನಗಳನ್ನು ಮೆಲುಕು ಹಾಕುತ್ತಾ , ಅಳಿದುಹೋದ ಸಂಪತ್ತಿನ ಬಗ್ಗೆ ಮರುಗುತ್ತಾ ಜನ ನಿಷ್ಕ್ರಿಯರಾಗಿದ್ದಾರೆ . ಅವರು ಚಿತ್ತದಾಸ್ಯ ಮತ್ತು ನಿಷ್ಕ್ರಿಯತೆ ‘ ಗಳಿಂದ ಬಿಡಿಸಿಕೊಂಡು ಕ್ರಾಂತಿ ಮಾಡಿ ಬದಲಾವಣೆ ತರುತ್ತಿಲ್ಲ .
ಇಂತಹ ಜನರ ಬದುಕಿಗಾಗಲಿ , ಇಂತಹ ಜನರಿರುವ ನಾಡಿಗಾಗಲಿ ‘ ಬೆಳಕು ‘ ಮೂಡುವುದು ಸಾಧ್ಯವೇ ? ಎಂಬುದು ಕವಿಯ ಪ್ರಶ್ನೆ ದೇಶದೊಳಗಿರುವ ಕಳ್ಳರು ಈ ದೇಶದ ಜನರನ್ನು ಸುಳ್ಳು – ವಂಚನೆಗಳಿಂದ ಸುಲಿಗೆ ಮಾಡಿ , ದೇಶದ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿದ್ದರೂ ಈ ಜನಕ್ಕೆ ಅದರ ಬಗ್ಗೆ ಅರಿವೇ ಇಲ್ಲ . ಆದ್ದರಿಂದ ಜನರು ಮೊದಲು ಅರಿವಿನ ಬೆಳಕನ್ನು ಸಂಪಾದಿಸಿಕೊಂಡು ಕ್ರಿಯಾಶೀಲರಾಗಬೇಕೆಂದು ಕವಿಯು ಪ್ರತಿಕ್ರಿಯಿಸಿ ದ್ದಾರೆ .
ಸ್ವಾಭಿಮಾನದ ನಾಡನ್ನು ಕಟ್ಟುವಲ್ಲಿ ಕವಿಯು ಹೊಂದಿರುವ ಆಶಯಗಳನ್ನು ವಿವರಿಸಿ ,
ಸ್ವಾಭಿಮಾನದ ನಾಡನ್ನು ಕಟ್ಟಬೇಕೆಂಬ ಆಶಯವನ್ನು ಕವಿ ಬಿ.ಸಿ. ರಾಮಚಂದ್ರ ಶರ್ಮರು ತಮ್ಮ ಎಂದಿಗೆ ” ಕವಿತೆಯಲ್ಲಿ ವ್ಯಕ್ತಪಡಿಸಿದ್ದಾರೆ . ಬೂಟುಕಾಲಿನಿಂದ ಒದೆಯುವವರ ವಿರುದ್ಧ ತಿರುಗಿ ನಿಂತು ಸಿಂಹದ ಹಾಗೆ ಗರ್ಜಿಸಬೇಕೆಂಬುದು ಕವಿಯ ಪ್ರಮುಖ ಆಶಯವಾಗಿದೆ .
ಪರಶುರಾಮನು ಗಂಡುಕೊಡಲಿಯನ್ನು ಕೈಯಲ್ಲಿ ಹಿಡಿದುಕೊಂಡು ಕ್ಷತ್ರಿಯ ವಧೆ ಮಾಡಿದಂತೆ , ನಾಡಿನ ಜನರು ತಮ್ಮ ಈ ರಕ್ತ ಹೀರುತ್ತಿರುವ ಪಾನಮತ್ತ ರಾಕ್ಷಸಗುಣದ ಹತ್ಯೆಗೆ ಮುಂದಾಗಬೇಕೆಂದು ಅವರು ಕರೆ ನೀಡಿದ್ದಾರೆ , ಜನರಲ್ಲಾ ಅರಿವನ್ನು ಮೂಡಿಸಿಕೊಂಡು ತಮ್ಮನ್ನು ಶೋಷಿಸುವವರ ವಿರುದ್ಧ ಸಂಘಟಿತರಾಗಬೇಕು .
ಅವರ ‘ ಕ್ರಾಂತಿ’ಯ ಬಿಟ್ಟ ಹೆಜ್ಜೆನಾಡಿನಲ್ಲಿ ಬೆಳಕನ್ನು ಚೆಲ್ಲಿ ಹೊಂಬೆಳಕನ್ನು ನಾಡಿನ ಮೂಲೆ ಮೂಲೆಗೆ , ಸಂದಿ ಸಂದಿಗೆ , ರಾಜಬೀದಿಗೆ ಚೆಲ್ಲುತ್ತದೆಂಬ ಆಶಯ ಗಳನ್ನು ಕವಿಯು ವ್ಯಕ್ತಪಡಿಸಿದ್ದಾರೆ .
ಸಂದರ್ಭ ಸೂಚಿಸಿ ಸ್ವಾರಸ್ಯವನ್ನು ವಿವರಿಸಿ
ಹುಟ್ಟಿಗಂಟಿ ಬಂದ ಚಿತ್ತದಾಸ್ಯ ಕಳೆವುದೆಂದಿಗೆ ?
ಡಾ ।। ಬಿ.ಸಿ. ರಾಮಚಂದ್ರ ಶರ್ಮರು ರಚಿಸಿರುವ ‘ ಎಂದಿಗೆ ‘ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸ ಲಾಗಿದೆ . ಕವಿಯು ನಮ್ಮನಾಡಿನ ಜನರ ಚಿತ್ತದಾಸ್ಯವು ಎಂದಿಗೆ ಅಳಿಯುವುದೆಂದು ಇಲ್ಲಿ ಪ್ರಶ್ನಿಸುತ್ತಿದ್ದಾರೆ . ಕವಿಯು ಸ್ವಂತ ತಿಳಿವಳಿಕೆಯಿಲ್ಲದೆ ಬದುಕುತ್ತಿರುವ ,
ಇತರರ ಆದೇಶವನ್ನು ಪ್ರಶ್ನಿಸದೆ ಪಾಲಿಸುವವರನ್ನು ‘ ಚಿತ್ತದಾಸ್ಯ ‘ ರ೦ದು ಕರೆದಿದ್ದಾರೆ . ನಾಡಿನ ಕೋಟಿ ಕೋಟಿ ಜನರಲ್ಲಿ ಈ ಬಗೆಯ ಚಿತ್ತದಾಸ್ಯವು ಹುಟ್ಟಿನಿಂದಲೂ ಜೊತೆಗೆ ಅಂಟಿಕೊಂಡು ಬಂದಿದೆ . ಈ ಚಿತ್ತದಾಸ್ಯವು ಯಾವಾಗ ಕೊನೆಗೊಳ್ಳುತ್ತದೋ ? ಎಂದು ವಿಷಾದದಿಂದ ಪ್ರಶ್ನಿಸಿದ್ದಾರೆ . ಚಿತ್ತದಾಸ್ಯವನ್ನು ಜನರು ಕಳೆದುಕೊಂಡು ಬದುಕಬೇಕೆಂಬುದು ಕವಿಯ ಮುಖ್ಯ ಕಾಳಜಿಯಾಗಿದೆ .
ಎಂದಿಗೆ notes
ಆಳಿದ ಸಿರಿಯ ಅಣಕವಾಡು ಒಂದೆಸಮನೆ ನಡೆದಿದೆ .
ಡಾ ।। ಬಿ . ಸಿ . ರಾಮಚಂದ್ರಶರ್ಮ ಅವರು ಬರೆದಿರುವ ‘ ಎಂದಿಗೆ ‘ ಎಂಬ ಕವಿತೆಯಲ್ಲಿ ಈ ಮೇಲಿನ ವಾಕ್ಯವನ್ನು ಕಾಣಬಹುದು . ಹಿಂದಿನ ಸಂಪತ್ತಿನ ವೈಭವವನ್ನೇ ಕನವರಿಸುವ ಪ್ರವೃತ್ತಿಯನ್ನು ಕವಿ ಇಲ್ಲಿ ಟೀಕಿಸಿದ್ದಾರೆ . ಹಿಂದಿನ ನೆನಪುಗಳು , ಇತಿಹಾಸದ ಮೆಲುಕುಗಳು ಬೇಕು ನಿಜ . ಆದರೆ ಅವು ವರ್ತಮಾನವನ್ನು ಆಳಬಾರದು .
ಹಿಂದಿನ ಘಟನೆಗಳನ್ನೇ ಮೆಲುಕು ಹಾಕುತ್ತ ಕುಳಿತುಕೊಳ್ಳಬಾರದು . ಈಗ ಆಗಬೇಕಾಗಿರುವುದನ್ನು ಯೋಚಿಸುವ ಅಗತ್ಯದ ಜೊತೆಗೆ , ಭವಿಷ್ಯತ್ತನ್ನು ರೂಪಿಸುವುದರ ಕುರಿತು ಚಿಂತಿಸುವ , ಹೊಸದನ್ನು ನಿರ್ಮಿಸುವುದರತ್ತ ಗಮನ ಹರಿಸಬೇಕು . ಅದರ ಬದಲು ಹಿ೦ ದಿನ ಗತವೈಭವದ ಬಗ್ಗೆಯಾಗಲಿ , ಕಳೆದು ಹೋಗಿರುವ ಸಿರಿ ಸಂಪತ್ತಿನ ಬಗ್ಗೆಯಾಗಲಿ ಯೋಚಿಸುವುದರಿಂದ ಏನೂ ಉಪಯೋಗ ವಿಲ್ಲ . ಆದರೂ ಅದನ್ನೇ ಜನ ಮೆಲುಕು ಹಾಕುತ್ತಾ ಕಾಲ ಕಳೆಯುತ್ತಿದ್ದಾರೆಂದು ಕವಿ ವಿಷಾದಿಸಿದ್ದಾರೆ .
ಅ೦ತು ಬ೦ದಿತು ಬಂದೆ ಬಂದಿತು ಎಂಥ ಎಂಥಾ ಬಿಡುಗಡೆ .
ಡಾ ಬಿ.ಸಿ. ರಾಮಚಂದ್ರಶರ್ಮ ಅವರು ಬರೆದಿರುವ ‘ ಎಂದಿಗೆ ‘ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಂಡಿದೆ . ನಮಗೆ ಸ್ವಾತಂತ್ರ್ಯವನ್ನು ಯಾರೋ ಪುಣ್ಯವಂತ ಸತ್ಪುರುಷರು ತಂದಿತ್ತರು . ಆದರೆ ಬಂದ ಈ ಬಿಡುಗಡೆಯಾದರೂ ಎಂಥದ್ದು ? ಎಂದು ಕವಿ ವಿಷಾದಿಸಿದ್ದಾರೆ .
1st PUC Kannada
ಸ್ವಾತಂತ್ರ್ಯ ಬಂದಾಕ್ಷಣ ನಮ್ಮ ದೇಶದಲ್ಲಿ ಸುಳ್ಳು ಸುಲಿಗೆ , ಲಂಚ ಮುಂತಾದವು ಹೆಚ್ಚಾದವು . ಆಡಳಿತಗಾರರಿಗೆ ಹೃದಯವೆಂಬುದಿರದೆ , ಕೊಚ್ಚೆಯ ಗುಂಡಿಯಾಗಿದೆ . ಇವರನ್ನು ನಿಯಂತ್ರಿಸುವವರೇ ಇಲ್ಲವಾಗಿದ್ದಾರೆ . ಇಂತಹ ಸ್ವಾತಂತ್ರ್ಯ ಬೇಕಿತ್ತೇ ? ಇದಕ್ಕಾಗಿಯೇ ಹುತಾತ್ಮರು ಸ್ವಾತಂತ್ರ್ಯವನ್ನು ತಂದಿತ್ತರೇ ? ಎಂದು ಕವಿಯು ವಿಷಾದದಿಂದ ಪ್ರಶ್ನಿಸಿದ್ದಾರೆ .
ಒಡಲುಗಳ್ಳರು ಇನ್ನು ಇಲ್ಲಿ ಇಹರೂ .
ಡಾ ಬಿ.ಸಿ. ರಾಮಚಂದ್ರಶರ್ಮ ಅವರ ಬರೆದಿರುವ ‘ ಎಂದಿಗೆ ‘ ಎಂಬ ಕವಿತೆಯಲ್ಲಿ ಈ ಮೇಲಿನ ವಾಕ್ಯವಿದೆ . ದೇಶದೊಳಗಿರುವ ಕಳ್ಳರನ್ನು ಕುರಿತು ಈ ಮಾತನ್ನಾಡಿದ್ದಾರೆ . ನಮ್ಮ ದೇಶವನ್ನಾಳಿದ ವಿದೇಶಿಯರೆಲ್ಲಾ ಸಮುದ್ರಮಾರ್ಗದ ಮೂಲಕ ನಮ್ಮ ದೇಶಕ್ಕೆ ಬಂದು ಇಲ್ಲಿನ ಸಂಪತ್ತನ್ನು ದೋಚಿದರು .
ಆದ್ದರಿಂದ ಕವಿ ಅವರನ್ನು ಕಡಲುಗಳ್ಳರೆಂದಿದ್ದಾರೆ . ಈ ಕಡಲುಗಳ್ಳರನ್ನು ಓಡಿಸಿದ್ದಾಯಿತು ಆದರೆ ನಮ್ಮಲ್ಲೇ ಇರುವ ಕಳ್ಳರು ಇದ್ದಾರಲ್ಲ , ಅವರನ್ನೇ ಕವಿ ‘ ಒಡಲುಗಳ್ಳರೆಂದಿದ್ದಾರೆ . ಬಡವರನ್ನು ರೈತರನ್ನು ಶೋಷಿಸಿ , ಅವರ ಸಮಾಧಿಯ ಮೇಲೆ ಭವ್ಯ ಕಟ್ಟಡಗಳನ್ನು ನಿರ್ಮಿಸುವ ಅಧಿಕಾರಶಾಹಿಯ ಕರಾಳಮುಖವನ್ನು ಕವಿ ಈ ಮೇಲಿನ ವಾಕ್ಯದ ಮೂಲಕ ಕುಟುಕಿದಾರೆನಬಹುದು .
ಕ್ರಾಂತಿಭಾನು ಹೊಳೆದು ಹೊಂಬೆಳಕ ಚೆಲ್ಲುದೆಂಬ ?
ಡಾ ಬಿ.ಸಿ. ರಾಮಚಂದ್ರಶರ್ಮರು ಬರೆದಿರುವ ‘ ಎಂದಿಗೆ ‘ ಎಂಬ ಕವಿತೆಯ ಕೊನೆಯ ಭಾಗದಲ್ಲಿ ಈ ಮೇಲಿನ ವಾಕ್ಯವನ್ನು ಕಾಣಬಹುದು . ನಮ್ಮ ನಾಡಿನ ಮಂದಿಗೆ ‘ ಬದಲಾವಣೆ ‘ ಎಂದಿಗಾಗುವುದೆಂದು ಕವಿ ಪ್ರಶ್ನಿಸಿದ್ದಾರೆ . ನಮ್ಮ ನಾಡಿನ ಜನರನ್ನು ನಾಡನ್ನು ಆವರಿಸಿರುವ ಕತ್ತಲೆಯೆಂಬ ಅಜ್ಞಾನ ಬಡತನ ಶೋಷಣೆಗಳೆಲ್ಲವೂ ದೂರಾಗಿ ಬದಲಾವಣೆಯೆಂಬ ಬೆಳಕು ಮೂಡಬೇಕಾದರೆ ಕ್ರಾಂತಿಯಾಗಬೇಕು . ಕ್ರಾಂತಿಯ ಸಂಘಟನೆಗೆ ಜನರಲ್ಲಿ ತಿಳಿವಳಿಕೆ ಮೂಡಬೇಕು .
ಅವರಲ್ಲಿ ಕ್ರಾಂತಿಯ ವಿಚಾರ ಹೊಳೆದು ನಾಡ ಮೂಲೆ ಮೂಲೆಗೂ ರಾಜ ಬೀದಿ ಸಂದಿಗೂ ಹೊಂಬೆಳಕು ‘ ಮೂಡಿ ಅವರ ಬದುಕು ಯಾವಾಗ ಬೆಳಗುವುದೆಂದು ಕವಿ ಇಲ್ಲಿ ಪ್ರಶ್ನಿಸುತ್ತಿದ್ದಾರೆ . ದಾಸ್ಯವೆಂಬ ಕತ್ತಲಿಂದ ಈ ನಾಡಿನ ಜನ ಬಿಡುಗಡೆಗೊಳ್ಳಲೆಂಬ ಆಶಯ ಕವಿಯದಾಗಿದೆ .
ಟಿಪ್ಪಣಿ :
ಎಂದಿಗೆ ‘ ಕವಿತೆಯ ಆಶಯ
ಭಾರತಕ್ಕೆ ರಾಜಕೀಯ ಸ್ವಾತಂತ್ರ್ಯ ಲಭಿಸಿದರೂ ಗತಕಾಲದ ಹುಸಿ ವೈಭವದಲ್ಲಿಯೇ ಕಾಲ ಕಳೆಯುತ್ತಾ ಹೊರಗಿನವರು ದೋಚಿದ್ದಕ್ಕಿಂತ ಹೆಚ್ಚಾಗಿ ಒಳಗಿನವರ ದುರಾಸೆ ಹಾಗೂ ದುಷ್ಕಾರ್ಯಗಳನ್ನು ವ್ಯಂಗ್ಯವಾಗಿ ಈ ಕವಿತೆಯಲ್ಲಿ ಚಿತ್ರಿಸಲಾಗಿದೆ . ದಾಸ್ಯಕ್ಕೆ ಬಲಿಯಾದ ದೇಶದ ದೊಡ್ಡ ದುರಂತ ಸ್ವಂತಿಕೆಯ ಆಕಾಲಮರಣವೆನ್ನುತ್ತಾರೆ ಕವಿ ಬಿ.ಸಿ. ರಾಮಚಂದ್ರಶರ್ಮರು . ಇದೇ ಎಂದಿಗೆ ‘ ಕವಿತೆಯ ಆಶಯವಾಗಿದೆ .
ಎಂದಿಗೆ notes
ಒಡಲುಗಳ್ಳರು .
ದೇಶದೊಳಗಿನ ಕಳ್ಳರನ್ನು ಕವಿ ರಾಮಚಂದ್ರ ಶರ್ಮರು ಒಡಲುಗಳ್ಳರು ಎಂದಿರುವರು . ಒಳಗಿನ ಕಳ್ಳರು ನಮ್ಮ ಮಧ್ಯೆ ಒಳ್ಳೆಯವರಂತೆ ಇದ್ದು ಒಳಗೊಳಗೇ ದೋಚುವವರು , ಆಳುವವರನ್ನು ರಾಜಕಾರಣಿಗಳನ್ನು ಕವಿ ಒಡಲುಗಳ್ಳರೆಂದಿದ್ದಾರೆ . ದೇಶವನ್ನು ಬಡತನದಲ್ಲೇ ಇಟ್ಟು ತಾವು ಮಾತ್ರ ದಿನೇ ದಿನೇ ಸಿರಿವಂತರಾಗುವವರೇ ಒಡಲುಗಳ್ಳರು , ದೇಶದ ಪ್ರಾಕೃತಿಕ ಸಂಪನ್ಮೂಲಗಳನ್ನು ಲೂಟಿ ಮಾಡುವ ಜನರಿವರು .
ಕಡಲುಗಳ್ಳರು .
ಬ್ರಿಟಿಷರೇ ಮೊದಲಾದ ವಿದೇಶೀಯರನ್ನು ಕಡಲುಗಳ್ಳರು ಎನ್ನಲಾಗಿದೆ . ಬ್ರಿಟಿಷರು ವ್ಯಾಪಾರಕ್ಕೆಂದು ನಮ್ಮ ದೇಶಕ್ಕೆ ಸಮುದ್ರ ಮಾರ್ಗದ ಮೂಲಕ ಬಂದರು . ಬಂದವರು ದೇಶವನ್ನೇ ಸೂರೆಗೈದು ಸಂಪನ್ಮೂಲಗಳನ್ನು ಸಮುದ್ರದ ಮೂಲಕವೇ ತಮ್ಮದೇಶಕ್ಕೆ ಹೊತ್ತೊಯ್ದರು . ಆದ್ದರಿಂದ ಇವರನ್ನು ಕಡಲುಗಳ್ಳರು ಎನ್ನಲಾಗಿದೆ .