ಕೃಷ್ಣೇಗೌಡನ ಆನೆ ಕನ್ನಡ ನೋಟ್ಸ್‌ | Krishnegowdana Aane Notes In Kannada

ಕೃಷ್ಣೇಗೌಡನ ಆನೆ ಕನ್ನಡ ನೋಟ್ಸ್‌ | Krishnegowdana Aane Notes In Kannada

krishnegowdana aane notes in kannada, 2 PUC Krishnegowdana Aane Kannada Notes, ಕೃಷ್ಣೇಗೌಡನ ಆನೆ ಕನ್ನಡ ನೋಟ್ಸ್‌, ಕೃಷ್ಣೇಗೌಡನ ಆನೆ ಕನ್ನಡ ನೋಟ್ಸ್‌ ಪ್ರಶ್ನೋತ್ತರಗಳು, 2nd PUC Kannada Krishnegowdana Aane Notes Question Answer Guide Pdf Download
,

Krishnegowdana Aane Notes In Kannada

ನಮ್ಮ ಟೆಲಿಗ್ರಾಮ್ ಗ್ರೂಪ್ ಗೆ ಈಗಲೇ ಜಾಯಿನ್ ಆಗಿ

ಕೃಷ್ಣೇಗೌಡನ ಆನೆ ಕನ್ನಡ ಪ್ರಶ್ನೋತ್ತರಗಳನ್ನು ನೀಡಲಾಗಿದೆ ಇದು ಸಂಪೂರ್ಣವಾಗಿ ಉಚಿತವಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

ಕೃಷ್ಣೇಗೌಡನ ಆನೆ ಕನ್ನಡ ನೋಟ್ಸ್‌ | Krishnegowdana Aane Notes In Kannada
ಕೃಷ್ಣೇಗೌಡನ ಆನೆ ಕನ್ನಡ ನೋಟ್ಸ್‌ | Krishnegowdana Aane Notes In Kannada

I. ಒಂದು ಅಂಕದ ಪ್ರಶ್ನೆಗಳು (ಒಂದು ವಾಕ್ಯದಲ್ಲಿ ಉತ್ತರಿಸಿ):

ದುರ್ಗಪ್ಪ ಯಾವುದನ್ನು ತರ್ಲೆ ಡಿಪಾರ್ಟ್‌ಮೆಂಟ್ ಎಂದು ಹೇಳಿದ?
ದುರ್ಗಪ್ಪನ ಪ್ರಕಾರ ಟೆಲಿಫೋನ್‌ ಡಿಪಾರ್ಟ್‌ಮೆಂಟ್ ತರಲೆಯದಾಗಿತ್ತು.

ಕೃಷ್ಣಗೌಡರ ಆನೆ ಮೊದಲು ಯಾವ ಮಠದಲ್ಲಿತ್ತು?
ಕೃಷ್ಣಗೌಡರ ಆನೆಯು ಮೊದಲು ಗೂಳೂರು ಮಠದಲ್ಲಿತ್ತು.

ಕೃಷ್ಣಗೌಡರ ಆನೆಯ ಹೆಸರೇನು?
ಗೌರಿ ಎಂಬುದು ಕೃಷ್ಣಗೌಡರ ಆನೆಯ ಹೆಸರು.

ಆನೆಗೆ ಜಗದ್ಗುರುಗಳನ್ನು ಹೊರುವ ಕೆಲಸ
ಅಡ್ಡಪಲ್ಲಕ್ಕಿಯಲ್ಲಿ ಗುರುಗಳನ್ನು ಹೊರಲಾ ಭಿಸಿದ್ದರಿಂದ ಆನೆಗೆ ಜಗದ್ಗುರುಗಳನ್ನು ಹೊರುವ ಕೆಲಸ ಸ್ಪಿಹೋಯಿತು.

ಕೃಷ್ಣಗೌಡರ ಆನೆಯ ಮಾವುತನ ಹೆಸರೇನು?
ಕೃಷ್ಣಗೌಡರ ಆನೆಯ ಮಾವುತನ ಹೆಸರು ವೇಲಾಯುಧ.

ರೆಹಮಾನ್ ‘ಐ ವಿಟ್‌ನೆಸ್’ ಎಂದು ಯಾರನ್ನು ತೋರಿಸಿದನು?
ರೆಹಮಾನ್ ‘ಐ ವಿಟ್‌ನೆಸ್’ ಎಂದು ತನ್ನ ಹೆಂಡತಿ ಜುಬೇದಾಳನ್ನು ತೋರಿಸಿದನು.

ಕೃಷ್ಣೇಗೌಡನ ಆನೆ ಕನ್ನಡ ನೋಟ್ಸ್‌ | Krishnegowdana Aane Notes In Kannada
ಕೃಷ್ಣೇಗೌಡನ ಆನೆ ಕನ್ನಡ ನೋಟ್ಸ್‌ | Krishnegowdana Aane Notes In Kannada

ನಿರೂಪಕರ ಇಕಾಲಜಿಸ್ಟ್ ಗೆಳೆಯ ಯಾರು?
ಪ್ರಕಾಶ್ ಎಂಬುವವರು ನಿರೂಪಕರ ಇಕಾಲಜಿಸ್ಟ್ ಗೆಳೆಯ:

ಆನೆ ಇಲ್ಲದ್ದರಿಂದ ವೇಲಾಯುಧ ಎಲ್ಲಿ ಕೆಲಸಕ್ಕೆ ಸೇರಿದನು.
ಆನೆ ಇಲ್ಲದ್ದರಿಂದ ವೇಲಾಯುಧ ಶಿವೇಗೌಡರ ಸಾಮಿಲ್ಲಿನಲ್ಲಿ ಕೆಲಸಕ್ಕೆ ಸೇರಿದನು.

ಪೊಲೀಸರು ಏನೆಂದು ಮಹಜರು ಬರೆದುಕೊಂಡರು?
ಪೊಲೀಸರು ‘ನಾಗರಾಜನ ಕೋವಿ ಸಿಕ್ಕಿದೆ, ಹೆಣ ಸಿಕ್ಕಿಲ್ಲ’ ಎಂದು ಮಹಜರು
ಬರೆದುಕೊಂಡರು

ನಿರೂಪಕರಿಗೆ ಯಾವ ಕೆಲಸ ಖಾಯವಾಗಿತ್ತು?
ಈ ತಿಂಗಳಿಗೊಮ್ಮೆ ಜೀಪಿನ ಗೇರ್‌ಬಾಕ್ಸ್ ರಿಪೇರಿಯ ಕೆಲಸ ನಿರೂಪಕರಿಗೆ ಖಾಯಮ್ಮಾಗಿತ್ತು.

ಶಿವೇಗೌಡರು ರಾತ್ರಿ ಆನೆ ಕರೆದುಕೊಂಡು ಹೋದುದ್ದೇಕೆ?
ಕಳ್ಳನಾಟಾ ಸಾಗಿಸಲು ಶಿವೇಗೌಡರು ರಾತ್ರೋರಾತ್ರಿ ಆನೆಯನ್ನು ಕರೆದೊಯ್ದರು.

ಪೋಸ್ಟ್ನ್ ಜಬ್ಬಾರನಿಗೆ ಒದಗಿದ ತೊಂದರೆ ಏನು?

ಪೋಸ್ಟೈನ್ ಜಬ್ಬಾರನಿಗೆ ನಾಯಿ ಕಚ್ಚಿತ್ತು.

ಜಬ್ಬಾರ್ ವೆಟರರಿ ಆಸ್ಪತ್ರೆಗೆ ಬರಲು ಕಾರಣವೇನು?
ಮುನ್ಸಿಪಾಲಿಟಿ ಪ್ರೆಸಿಡೆಂಟರ ಹೆಸರೇನು?

ನಾಯಿ ಕಚ್ಚಿದ್ದರಿಂದ ಇಂಜೆಕ್ಷನ್ ತೆಗೆದುಕೊಳ್ಳಲು ಜಬ್ಬಾರ್ ವೆಟರರಿ ಆಸ್ಪತ್ರೆಗೆ ಬಂದಿದ್ದನು.
ಮುನ್ಸಿಪಾಲಿಟಿ ಪ್ರೆಸಿಡೆಂಟರ ಹೆಸರು ಖಾನ್ ಸಾಹೇಬರು.

ನಿರೂಪಕರ ಪ್ರಕಾರ ಮುನ್ಸಿಪಾಲಿಟಿ ಪ್ರೆಸಿಡೆಂಟರ ಕರ್ತವ್ಯ ಯಾವುದು?
ನಿರೂಪಕರ ಪ್ರಕಾರ ಪಟ್ಟಣದ ಸ್ವಚ್ಛತೆಯನ್ನು ಕಾಪಾಡುವುದು ಮುನ್ಸಿಪಾಲಿಟಿ ಪ್ರೆಸಿಡೆಂಟರ ಕರ್ತವ್ಯವಾಗಿತ್ತು.

ಯಾವ ವಿಷಯ ಪ್ರಸ್ತಾಪಿಸಲು ಲೇಖಕರು ಮೀಟಿಂಗಿಗೆ ಹೋಗಿದ್ದರು?
ಬೀದಿನಾಯಿಗಳ ನಿರ್ಮೂಲನದ ವಿಚಾರ ಪ್ರಸ್ತಾಪಿಸಲು ನಿರೂಪಕರು ಮೀಟಿಂಗಿಗೆ ಹೊಗಿದ್ದರು

ರೇಂಜರ್ ಆನೆಗೆ ಶೂಟ್ ಮಾಡುವಂತೆ ಯಾರಿಗೆ ಸೂಚಿಸಿದರು?
ರೇಂಜರ್ ಆನೆಗೆ ಶೂಟ್ ಮಾಡುವಂತೆ ಫಾರೆಸ್ಟರ್ ನಾಗರಾಜನಿಗೆ ತಿಳಿಸಿದರು.

ಆನೆಶಾಸ್ತ್ರದವನು ಏನೆಂದು ಭವಿಷ್ಯ ನುಡಿದಿದ್ದನು?
ಆನೆಶಾಸ್ತದವನು ಆನೆಯಿಂದ ಐದು ಜನರಿಗೆ ಸಾವೆಂದು ಭವಿಷ್ಯ ನುಡಿದಿದ್ದನು.

ನಾಗರಾಜ ಕೋವಿ ಹಿಡಿದು ಎಲ್ಲಿ ಕುಳಿತಿದ್ದ?
ನಾಗರಾಜ ಕೋವಿ ಹಿಡಿದು ಶಿಕಾರಿ ಗಂಡಿಯಲ್ಲಿ ಕುಳಿ

ದುರ್ಗಪ್ಪ ಏನನ್ನು ಕೇಳಿ ಪಡೆಯಲು ಬಂದಿದ್ದನ
ದುರ್ಗಪ್ಪ ಕೊಡಲಿಯನ್ನು ಕೇಳಿ ಪಡೆಯಲು ಬಂದಿದ್ದನು.

ಟೆಲಿಫೋನ್ ಕಂಬದ ಮೇಲೆ ಮೃತನಾದ ಲೈನ್‌ಮನ್ ಯಾರು?
ಲೈನ್‌ಮನ್ ತಿಪ್ಪಣ್ಣ ಕಂಬದ ಮೇಲೆ ಮೃತನಾದ ದುರ್ದೈವಿ.

ಟೆಲಿಫೋನ್ ಸಿಬ್ಬಂದಿ ಯಾರ ವಿರುದ್ಧ ಮುಷ್ಕರ ಹೂಡಿದರು?
ಟೆಲಿಫೋನ್ ಸಿಬ್ಬಂದಿಗಳು ಎಲೆಕ್ನಿಕ್ ಡಿಪಾರ್ಟ್‌ಮೆಂಟಿನವರ ವಿರುದ್ಧ ಮುಷ್ಕರ ಮಾಡಿದರು.

ಕೃಷ್ಣೇಗೌಡನ ಆನೆ ಕನ್ನಡ ನೋಟ್ಸ್‌ | Krishnegowdana Aane Notes In Kannada
ಕೃಷ್ಣೇಗೌಡನ ಆನೆ ಕನ್ನಡ ನೋಟ್ಸ್‌ | Krishnegowdana Aane Notes In Kannada

ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ : ( ಎರಡು ಅಂಕದ ಪ್ರಶ್ನೆಗಳು )

ಆನೆ ಮರತಳ್ಳುವ ಬಗೆಯನ್ನು ನಿರೂಪಕರು ಹೇಗೆ ವಿವರಿಸಿದ್ದಾರೆ ?

ಆನೆ ಮರ ತಳ್ಳುವ ಬಗೆಯನ್ನು ನಿರೂಪಕರು ಬಹಳ ಸೊಗಸಾಗಿ ವರ್ಣಿಸಿದ್ದಾರೆ . “ ದೊಡ್ಡ – ದೊಡ್ಡ ಮರಗಳಿಗೆ ಹಣೆಹಚ್ಚಿ ಅದು ಒಮ್ಮೆ ತಳ್ಳಿದರೆ ಸಾಕು ಬೇರುಗಳೆಲ್ಲ ಪಟಪಟ ನೆಲದಿಂದೆದ್ದು ಮರ ಬುಡ ಸಮೇತ ಪಲ್ಟಾಯಿಸಿ ಬಿಡುತ್ತದೆ . ತೀರಾ ದೊಡ್ಡ ಮರಗಳಾದರೆ ಅವುಗಳ ಬುಡದಲ್ಲಿನ ಮಣ್ಣು ಬಿಡಿಸಿ ಅದರ ಬೇರುಗಳನ್ನು ಕಡಿದು ಇಗೆ ತಳ್ಳಲು ಹೇಳುತ್ತಿದ್ದರು . ಎಂತಹ ಮರಗಳಾದರೂ ಆನೆಯ ದೈತ್ಯಶಕ್ತಿಯ ಎದುರು ಚೀತ್ಕರಿಸಿ ನೆಲಕ್ಕೆ ಉರುಳುತ್ತಿದ್ದವು .

ನಮ್ಮ ಕಡೆ ಕೆಮ್ಮುವುದು ಕಾಲಿಂಗ್ ಬೆಲ್ ಇದ್ದ ಹಾಗೆ ಎಂದು ನಿರೂಪಕರು ಹೇಳಿದ್ದೇಕೆ ?

ಲೇಖಕರಾದ ತೇಜಸ್ವಿಯವರು ಮಲೆನಾಡಿನ ಘಟ್ಟಪ್ರದೇಶದಲ್ಲಿ ಕೆಮ್ಮುವುದು ಕಾಲಿಂಗ್ ಬೆಲ್ ಇದ್ದ ಹಾಗೆ ಎಂದು ಆಲಕಾರಿಕವಾಗಿ ಹೇಳಿದ್ದಾರೆ . “ ಏಕೆಂದರೆ ಬಹುಶಃ ಭಾಷೆ ಉಪಯೋಗಿಸಿ ಕರೆಯಬೇಕೆಂದರೆ ಕೆಲವು ತೊಂದರೆಗಳು ಎದ್ದು ತೋರುತ್ತದೆ . ಮನೆಯವರ ಹೆಸರು ಗೊತ್ತಿರಬಹುದು , ಗೊತ್ತಿಲ್ಲದೆಯೂ ಇರಬಹುದು .ಆದರೆ ಹೆಸರು ಹಿಡಿದು ಕರೆಯಬೇಕೋ ಬೇಡವೋ ? ಏಕವಚನ ಉಪಯೋಗಿಸಿ ಬೇಕೋ ? ಬಹುವಚನ ಉಪಯೋಗಿಸಬೇಕೋ ? ಈ ಎಲ್ಲಾ ಬಿಕ್ಕಟ್ಟುಗಳಿಗೆ ಒಮ್ಮೆ ಉಪಾಯ ಎಂದರೆ ಒಂದೆರಡು ಸಾರಿ ಕೆಮ್ಮಿದರೆ ಒಳಗಿನಿಂದ ಹೊರ ಬರುವುದು ಅಥವಾ ಅಲ್ಲೆ ಇದ್ದರೆ ತಿರುಗಿ ನೋಡಬಹುದು .

ಕೊಂಬೆ , ಲೈನ್ ಮೇಲೆ ಬೀಳಲು ಆನೆಯೇ ಕಾರಣ ಎಂಬುದಕ್ಕೆ ದುರ್ಗಪ್ಪ ಹೇಳಿದ ಸಂಗತಿಗಳಾವುವು ?

ಮರದ ಕೆಳಗೆ ಬುಟ್ಟಿಗಟ್ಟಲೆ ಬಿದ್ದಿರುವ ಆನೆ ಅದ್ದಿಯನ್ನು ನೋಡಿ ಆನೆಯು ಎಲೆ ತಿನ್ನಲು ಬಂದು ಕೊಂಬೆ ಎಳೆದು ಆ ಕೊಂಬೆ ತಂತಿಯ ಮೇಲೆ ಬಿದ್ದು ಎಲ್ಲಾ ಲೈನ್ ಡೆಡ್ ಆಗಿದೆ . ಆ ಕೊಂಬೆ ಕಡಿದು ಪಕ್ಕ ಸರಿಸುವವರೆಗೂ ಅಲ್ಲಿ ಕರೆಂಟ್ ಇಲ್ಲ ಎಂದು ಹೇಳಿದನು . ಅಲ್ಲದೆ ಶಿವೇಗೌಡರ ಸಾಮಿಲ್‌ನ ಹತ್ತಿರ ಕೊಂಬೆ ಮುರಿದು ಎಲೆಕ್ನಿಕ್ ವೈರ್‌ ಮೇಲೆ ಬಿದ್ದಿರುವುದಾಗಿ ದುರ್ಗಪ್ಪ ಹೇಳಿದ .

ಕೃಷ್ಣಗೌಡರ ಆನೆ ಹುಟ್ಟಿ ಬೆಳೆದ ಬಗೆ ಹೇಗೆ ?

ಗೂಳೂರು ಮಠದ ಆನೆ ಹಾಕಿದ ಮರಿಯೇ ಕೃಷ್ಣಗೌಡರ ಬಳಿ ಇದ್ದ ಆನೆ . ಇದು ಹುಟ್ಟಿದ್ದು ಬೆಳೆದದ್ದು ಎಲ್ಲ ಊರಿನಲ್ಲಿ ಜನಗಳ ನಡುವೆಯೇ . ಆದ್ದರಿಂದ ಮೂಡಿಗೆರೆಯ ಪೇಟೆಗೆ ಬಹಳ ಒಗ್ಗಿತ್ತು . ದನಕರುಗಳು ಓಡಾಡುವ ಹಾಗೆ ಪೇಟೆ ಬೀದಿಯಲ್ಲಿ ಓಡಾಡಿಕೊಂಡಿತ್ತು . ಸ್ಕೂಲ್ ಮಕ್ಕಳು ಹತ್ತಿರ ಬರಲು ಹೆದರಿದ್ದರಿಂದಲೇ ಅವರು ದೂರದಿಂದಲೇ ‘ ಗೌರಿ ‘ ಎಂದು ಕೂಗಿದರೆ ಸಾಕು ಸೊಂಡಿಲೆತ್ತಿ ಸಲಾಮ್ ಮಾಡುತ್ತಿತ್ತು . ಅಂಗಡಿಯವರು ಖರ್ಚಾಗದ ಹಣ್ಣು ಇಟ್ಟಿರುತ್ತಿದ್ದರು . ಈ ಆನೆ ಖಾಯಂ ಆಗಿ ಎಲ್ಲಾ ಪೆಟ್ಟಿಗೆ ಅಂಗಡಿಗಳ ಬಳಿಗೂ ಹೋಗಿ ಅದನ್ನೆಲ್ಲ ಸೊಂಡಿಲಲ್ಲಿ ತಗೊಂಡು ತಿನ್ನುತ್ತಿತ್ತು . ಹೀಗೆ ಕೃಷ್ಣಗೌಡರ ಆನೆ ಹುಟ್ಟಿ ಬೆಳೆದಿತ್ತು .

ಮಠದವರಿಗೆ ಆನೆಗಿಂತ ವೇಲಾಯುಧನನ್ನು ಸಾಕಲು ಪ್ರಾಸಾದುದೇಕೆ ?

ಮಠದವರಿಗೆ ಆನೆಗಿಂತ ವೇಲಾಯುಧವನ್ನು ಸಾಕುವುದು ಹೆಚ್ಚು ತ್ರಾಸವಾಗಿತ್ತು . ಏಕೆಂದರೆ ಇಪ್ಪತ್ತನಾಲ್ಕು ಗಂಟೆಯೂ ಕುಡಿದೇ ಇರುತ್ತಿದ್ದ . ಈ ಮಾವುತ ಮಠದ ಸಾತ್ವಿಕ ವಾತಾವರಣಕ್ಕೆ ದೊಡ್ಡ ತಲೆ ನೋವಾಗಿದ್ದ , ಅವನ ದುರ್ನಡತೆಗಳಿಂದಾಗಿ ಅವನಿಗೆ ಛೀಮಾರಿ ಹಾಕಿ ಒಮ್ಮೆ ಓಡಿಸಿದಾಗ ಆನೆ ಅನೇಕ ದಿನಗಳವರೆಗೆ ಯಾರ ಮಾತನ್ನು ಕೇಳದೆ ಊಟವನ್ನು ವರ್ಜಿಸಿದ್ದರಿಂದ ವೇಲಾಯುಧ ನನ್ನ ಪುನಃ ಕೇರಳದಿಂದ ಕರೆ ತರಲಾಯಿತು . ಇದನ್ನು ತಿಳಿದ ವೇಲಾಯುಧ ಮಠಕ್ಕೆ ಮತ್ತಷ್ಟು ಕಿರುಕುಳ ಕೊಡಲಾರಂಭಿಸಿದ . ಇದರಿಂದ ಮಠದವರಿಗೆ ಮತ್ತಷ್ಟು ತಾಸವಾಯಿತು .

ಆನೆ ಸಾಕುವುದರ ಬಗ್ಗೆ ಜನರ ನಂಬಿಕೆ ಏನಾಗಿತ್ತು ?

ಆನೆ ಸಾಕುವುದು ಎಂದರೆ ಎಲೆಕ್ಷನ್ನಿಗೆ ನಿಂತ ಹಾಗೆ ! ಮನೆ ಮಠ ಎಲ್ಲಾ ಹಾಳು ಮಾಡಿಕೊಂಡು ಹೆಂಡತಿ ಮಕ್ಕಳ ಬಾಯಿಗೆ ಮಣ್ಣು ಹಾಕುವ ಕ್ಷಿಪ್ರ ಮಾರ್ಗ ಇದೆಂದು ಎಲ್ಲಾ ಜನರು ದೃಢವಾಗಿ ನಂಬಿದ್ದರು .

ಕೃಷ್ಣೇಗೌಡನ ಆನೆ ಕನ್ನಡ ನೋಟ್ಸ್‌ | Krishnegowdana Aane Notes In Kannada
ಕೃಷ್ಣೇಗೌಡನ ಆನೆ ಕನ್ನಡ ನೋಟ್ಸ್‌ | Krishnegowdana Aane Notes In Kannada

ಸೊರಗಿದ್ದ ಆನೆಯನ್ನು ಕೃಷ್ಣಗೌಡ ಹೇಗೆ ಸಾಕಿದ ?

ಮಠದಲ್ಲಿ ಬರಿ ಒಣಹುಲ್ಲು , ಮೊಸರನ್ನು ತಿಂದು ಸೊರಗಿದ್ದ ಆನೆಗೆ ಕೃಷ್ಣಗೌಡನು ಬದನೆಸೊಪ್ಪು , ಹಸಿಹುಲ್ಲು , ಹಿಂಡಿ , ಬೆಲ್ಲ , ಗೆಣಸು ಎಲ್ಲ ಕೊಟ್ಟು ಕೃಷ್ಣಗೌಡ ಪಗಡುದಸ್ತಾಗಿ ಬೆಳೆಸಿ ಸಾಕಿದ್ದನು .

ಕಾಡಾನೆಗಳ ಹಾವಳಿಗೆ ಪ್ರಕಾಶ ನೀಡಿದ ಕಾರಣಗಳೇನು ?

ಕಾಡಾನೆಗಳ ಹಾವಳಿಗೆ ಪ್ರಕಾಶ್ ನೀಡಿದ ಕಾರಣವೆಂದರೆ “ ಅರಣ್ಯ ಇಲಾಖೆಯವರು ಕಾಡಿನ ಮರಗಳನ್ನು ತೆಗೆದು ನೀಲಗಿರಿ , ಆಕೇಶಿಯಾ ಮುಂತಾದ ಆನೆಗಳಿಗೆ ನಿರುಪಯುಕ್ತವಾದುದನ್ನು ನೆಡುತ್ತಿರುವುದು ” ಆಗಿದೆ ಎಂದು ಹೇಳಿದನು .

ಕಾಡಪ್ಪ ಶೆಟ್ಟರು ಯಾವ ವರ್ತಮಾನವನ್ನು ಮುಟ್ಟಿಸಿದರು ?

“ ಕೃಷ್ಣಗೌಡನ ಆನೆಯ ಮೇಲೆ ಅಯ್ಯಪ್ಪಸ್ವಾಮಿ ಪೋಟೋ ಇಟ್ಟು ಮೆರವಣಿಗೆ ಮಾಡುತ್ತಿದ್ದಾಗ ಅದಕ್ಕೆ ಇದ್ದಕ್ಕಿದ್ದಂತೆ ತಲೆಕೆಟ್ಟು ಅಂಬಾರಿ ಸಮೇತ ಕಾಡಿಗೆ ಓಡಿ ಹೋಯ್ತು ” ಎಂಬುದಾಗಿ ಕಾಡಪ್ಪ ಶೆಟ್ಟರು ವರ್ತಮಾನವನ್ನು ಮುಟ್ಟಿಸಿದರು .

ದುರ್ಗಪ್ಪ ಏಕೆ ಬಂದಿರಬಹುದೆಂದು ನಿರೂಪಕರು ಯೋಚಿಸಿದರು ?

ಎಲೆಕ್ಟಿಕ್ ಲೈನ್ ಮ್ಯಾನ್ ದುರ್ಗಪ್ಪ ಕೈಯಲ್ಲಿ ಕಟ್ಟಿಂಗ್ ಪ್ರೈಯರ್ ಹಾಗೂ ತಂತಿ – ಅಲ್ಲಿಯವರೆಗೆ ಬಂದಿದ್ದಾನೆಂದು ಅರ್ಥ ಬರುತ್ತಿತ್ತು . ಹಾಗಿದ್ದರೆ ಏನೋ ಇನಾಮು ಸಿಂಬಿ ಹಿಡಿದುಕೊಂಡು ನಿಂತದ್ದನ್ನು ನೋಡಿ ಏನೂ ಕೆಲಸವಿಲ್ಲದೆ ಪುರುಸೊತ್ತಾಗಿದ್ದರಿಂದ ಕೇಳಲೋ ಅಥವಾ ಚಂದಾ ವಸೂಲಿನೋ , ಇಲ್ಲವೇ ಮನೆ ಉಪಯೋಗಕ್ಕೆ ಕಾಫಿ ಬೀಜವನ್ನೋ ಏಲಕ್ಕಿಯನ್ನೂ ಕೇಳಲು ಈ ರೀತಿ ಪೀಠಿಕೆ ಹಾಕುತ್ತಿದ್ದಾನೆಂದು ಯೋಚಿಸಿದರು .

.ನಿರೂಪಕರಿಗೆ ಆನೆಗಳ ಬಗ್ಗೆ ಯಾವ ಅನುಮಾನ ಮೂಡಿತು ?

ಹೊತ್ತುಕೊಂಡಿದ್ದ ಮೈ ತುಂಬಾ ಸಿಂಗಾರ ಮಾಡಿಕೊಂಡು ಬೆನ್ನ ಮೇಲೆ ಅಂಬಾರಿ ಆನೆಯನ್ನು ಕಾಡಾನೆಗಳು ತಮ್ಮ ಗುಂಪಿಗೆ ಸೇರಿಕೊಳ್ಳುತ್ತವೆಯೇ ಎಂದು ನನಗೆ ಅನುಮಾನ ಆಯ್ತು .

ಫಾರೆಸ್‌ ಡಿಪಾರ್ಟ್‌ಮೆಂಟಿನವರ ನಂಬರ್ ಒನ್ ಎನಿಮಿಗಳು ಯಾರು ಯಾರು ?

ಫಾರೆಸ್ ಡಿಪಾರ್ಟ್‌ಮೆಂಟಿನವರ ನಂಬರ್‌ ಒನ್‌ ಎನಿಮಿಗಳು ಎಲೆಕಿಕ್ ಡಿಪಾರ್ಟ್ ಮೆಂಟೆನವರು , ಟೆಲಿಫೋನ್ ಡಿಪಾರ್ಟ್‌ಮೆಂಟಿನವರು ಹಾಗೂ ಪಿಡಬ್ಲೂಡಿ ಡಿಪಾರ್ಟ್‌ಮೆಂಟಿನವರು .

ಫಾರೆಸ್ಟ್ ಡಿಪಾರ್ಟ್‌ಮೆಂಟಿನ ಮುಂದಿದ್ದ ತುಕ್ಕು ಹಿಡಿದ ವಾಹನಗಳ ಸ್ಥಿತಿ ಹೇಗಿತ್ತು ?

ಫಾರೆಸ್ಟ್ ಡಿಪಾರ್ಟ್‌ಮೆಂಟಿನ ಕಾರುಗಳೆಲ್ಲ ತುಕ್ಕು ಹಿಡಿದು ಕುಗುರುತ್ತ ಕುಳಿತಿದ್ದವು . ಒಂದು ಕಾರಿನ ಚಕ್ರದ ಮೇಲೆ ಹುತ್ತವೇ ಬೆಳೆದಿತ್ತು . ಇನ್ನೊಂದೆರಡರ ಮೇಲೆ ಯಾವೊ ಕಾಡಬಳ್ಳಿಗಳು ಹಬ್ಬ ತೊಡಗಿದ್ದವು . ಅವುಗಳ ಸದ್ಯದ ಶೋಚನೀಯ ಸ್ಥಿತಿ ನೋಡಿದರೆ ಎಂದಾದರೂ ರಸ್ತೆ ಮೇಲೆ ಓಡಾಡುತ್ತಿದ್ದವೇ ಎಂಬ ಅನುಮಾನ ಬರುವುದು , ಅವುಗಳ ಮೇಲಿನ ಕೇಸು ಇತ್ಯರ್ಥವಾಗುವುದರೊಳಗೆ ಅವುಗಳೆಲ್ಲ ತುಕ್ಕಿನ ಮುದ್ದೆಗಳಾಗಿ ಗುಜರಿಯವರಿಗೂ ಕೆಲಸಕ್ಕೆ ಬರುತ್ತಿರಲಿಲ್ಲ . ಇದು ಫಾರೆಸ್ಟ್ ಡಿಪಾರ್ಟ್‌ಮೆಂಟಿನ ಮುಂದಿದ್ದ ತುಕ್ಕು ಹಿಡಿದ ವಾಹನಗಳ ಸ್ಥಿತಿಯಾಗಿತ್ತು .

ನಾಗರಾಜ ದುರ್ಗಪ್ಪನ ಮೇಲೆ ಏನೆಂದು ರೇಗಿದನು ?

ದುರ್ಗಪ್ಪ ತಾನು ಮರಕಡಿದಿಲ್ಲವೆಂದು , ಕೃಷ್ಣಗೌಡರ ಆನೆ ಕೊಂಬೆಯನ್ನು ಮುರಿದು ಬೀಳಿಸಿದೆಯೆಂದು ಹೇಳಿದ್ದಕ್ಕೆ ನಾಗರಾಜ ಹಾಗಂತ ಹೇಳದೆ ಬರೊಡ್ತೀಯಾ ? ಹಾಗಿದ್ರೆ ಹೇಳು ಅದನ್ನು ಎಳಕೊಂಡು ಬಂದು ಅಂಬಾಸಿಡರ್ ಕಾರಿನ ಜೊತೆ ಕಟ್ಟಾಕಿ ಬರೆ ಹಾಕಿಬಿಡ್ತೀನಿ . ನಿನ್ನ ಮಕಾರೇನಿದ್ರು ಬರಣಿಗೇಲಿ ಇರಬೇಕು . ಹಂಗಿದ್ರೆ ಮಾತ್ರ ನಾನು ಆಕ್ಷನ್ ತಗೊಳ್ಳೋದು ಎಂದು ಗುಡುಗಿದ .

ಕೃಷ್ಣೇಗೌಡನ ಆನೆ ಕನ್ನಡ ನೋಟ್ಸ್‌ | Krishnegowdana Aane Notes In Kannada
ಕೃಷ್ಣೇಗೌಡನ ಆನೆ ಕನ್ನಡ ನೋಟ್ಸ್‌ | Krishnegowdana Aane Notes In Kannada
ಅಧ್ಯಾಯ 1ಕದಡಿದ ಸಲಿಲಂ ತಿಳಿವಂದದೆಇಲ್ಲಿ ಕ್ಲಿಕ್ ಮಾಡಿ
ಅಧ್ಯಾಯ 2ವಚನಗಳುಇಲ್ಲಿ ಕ್ಲಿಕ್ ಮಾಡಿ
ಅಧ್ಯಾಯ 3ಇನ್ನು ಹುಟ್ಟದೆಯಿರಲಿ ನರಿಯರೆನ್ನವೋಲುಇಲ್ಲಿ ಕ್ಲಿಕ್ ಮಾಡಿ
ಅಧ್ಯಾಯ 4ಪುಟಯಂ ಬಾಲಕನೆಂಬರೆಇಲ್ಲಿ ಕ್ಲಿಕ್ ಮಾಡಿ
ಅಧ್ಯಾಯ 5ಜಾಲಿಯ ಮರದಂತೆಇಲ್ಲಿ ಕ್ಲಿಕ್ ಮಾಡಿ
ಅಧ್ಯಾಯ 6ಹಬ್ಬಲಿ ಅವರ ರಸಬಲ್ಲಿಇಲ್ಲಿ ಕ್ಲಿಕ್ ಮಾಡಿ
ಅಧ್ಯಾಯ 7ಬೆಳಗು ಜಾವಾಇಲ್ಲಿ ಕ್ಲಿಕ್ ಮಾಡಿ
ಅಧ್ಯಾಯ 8ಮುಂಬೈ ಜಾತಕಇಲ್ಲಿ ಕ್ಲಿಕ್ ಮಾಡಿ
ಅಧ್ಯಾಯ 9ಶಿಲುಬೆ ಏರಿದ್ದನೆಇಲ್ಲಿ ಕ್ಲಿಕ್ ಮಾಡಿ
ಅಧ್ಯಾಯ 10ಒಂದು ಹೂ ಹೆಚ್ಚಿಗೆ ಇಡುತೀನಿಇಲ್ಲಿ ಕ್ಲಿಕ್ ಮಾಡಿ
ಅಧ್ಯಾಯ 11ಹಟ್ಟಿ ಚಿಟ್ಟ ಮಟ್ಟುಇಲ್ಲಿ ಕ್ಲಿಕ್ ಮಾಡಿ
ಅಧ್ಯಾಯ 12ಒಮ್ಮೆ ನಗುತ್ತೇವೆಇಲ್ಲಿ ಕ್ಲಿಕ್ ಮಾಡಿ

ಸಂಬಂದಿಸಿದ ಇತರೆ ವಿಷಯಗಳು

ಪ್ರಬಂಧಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *