10th Class Kannada Shabari Lesson Summary | ಶಬರಿ ಪಾಠದ ಸಾರಾಂಶ ಕನ್ನಡ

10th Shabari Lesson Summary in Kannada Best No1 Notes | ಶಬರಿ ಪಾಠದ ಸಾರಾಂಶ ಬರೆಯಿರಿ

10th shabari lesson summary in kannada , shabari lesson saramsha in kannada , ಶಬರಿ ಪಾಠದ ಸಾರಾಂಶ ಕನ್ನಡ , 10th class kannada shabari lesson summary in kannada

10th Shabari Lesson Summary in Kannada

ಈ ಲೇಖನದಲ್ಲಿ ಶಬರಿ ಪಾಠದ ಸಾರಾಂಶವನ್ನು ಕೊಡಲಾಗಿದೆ ಇದು ವಿದ್ಯಾರ್ಥಿಗಳಿಗೆ ತುಂಬಾನೇ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ . ಹಾಗೂ ಇದು ಸಂಪೂರ್ಣ ಉಚಿತವಾಗಿದೆ ಇತರ ವಿದ್ಯಾರ್ಥಿಗಳಿಗೂ ಶೇರ್ ಮಾಡಿ.

Spardhavani Telegram

ಶಬರಿ ಪಾಠದ ಸಾರಾಂಶ

ಭಾರತೀಯರ ಪವಿತ್ರಗ್ರಂಥಗಳಲ್ಲಿ ರಾಮಾಯಣವೂ ಒಂದು. ಆದಿಕವಿ ವಾಲ್ಮೀಕಿ ಶ್ರೀರಾಮನನ್ನು ಪುರುಷೋತ್ತಮನೆಂದು ಬಣ್ಣಿಸಿದ್ದಾರೆ. ಶ್ರೀರಾಮನು ಸಕಲ ಸದ್ಗುಣಗಳ ಸಾಕಾರ ಮೂರ್ತಿ, ಶ್ರೀರಾಮನ ಗುಣಸ್ವಭಾವಗಳ ಸೆಳೆತಕ್ಕೆ ಸಿಕ್ಕಿ ಅವನನ್ನು ಕಾಣುವುದೇ ಜೀವನದ ಏಕೈಕ ಗುರಿ ಎಂದು ಭಾವಿಸಿದ್ದ ಅಸಂಖ್ಯಾತ ಭಕ್ತರಲ್ಲಿ ಶಬರಿಯೂ ಒಬ್ಬಳು. ಈಕೆಯು ಋಷ್ಯಮೂಕ ಪರ್ವತದ ಬಳಿ ತಪೋನಿರತರಾದ, ಬ್ರಹ್ಮರ್ಷಿಗಳೆನಿಸಿದ್ದ ಮತಂಗ ಮಹರ್ಷಿಗಳ ಆಶ್ರಯದಲ್ಲಿದ್ದಳು, ಮತಂಗರು ದಿವ್ಯಲೋಕವನ್ನು ಸೇರಿದ ಬಳಿಕ ಶಬರಿಯು ರಾಮಧ್ಯಾನದಲ್ಲಿ ತೊಡಗಿ ಶ್ರೀರಾಮನ ದರ್ಶನಕ್ಕಾಗಿ ಕಾದಿದ್ದಳು.

ಶಬರಿ ಪಾಠದ ಸಾರಾಂಶ ಕನ್ನಡ

ಸೀತಾಪಹರಣದ ಅನಂತರ, ಶೋಕತಪ್ತರಾದ ರಾಮಲಕ್ಷ್ಮಣರು ಸೀತೆಯನ್ನು ಹುಡುಕುತ್ತಿರುವಾಗ ದನು ಎಂಬುವವರ ಸೂಚನೆಯಂತೆ ಮತಂಗಾಶ್ರಮವನ್ನು ಪ್ರವೇಶಿಸುತ್ತಾರೆ. ಅಲ್ಲಿ ಶ್ರೀರಾಮನ ಬರುವಿಕೆಗಾಗಿ ಕಾದು ಕಾದು ಕಾತರಿಸಿ ಮುಪ್ಪಾಗಿ ಭಕ್ತಿಯ ರೂಪುಗೊಂಡಂತೆ ಇದ್ದ ಶಬರಿಯನ್ನು ದರ್ಶಿಸುತ್ತಾರೆ, ಶಬರಿಯು ತನ್ನ ಆರಾಧ್ಯ ದೈವ ಶ್ರೀರಾಮನನ್ನು ಕಂಡು ಆನಂದಿಸುತ್ತಾಳೆ, ಧನ್ಯತೆಯ ಭಾವನೆಯಿಂದ ಮುಕ್ತಿಯನ್ನು ಬಯಸಿದ ಶಬರಿಗೆ ಶ್ರೀರಾಮನು ಮುಕ್ತಿಯನ್ನು ಕರುಣಿಸಿದ ಸಂದರ್ಭವನ್ನು ಮೂತಿ, ನರಸಿಂಹಾಚಾರ್‌ರವರು ತಮ್ಮ ಗೀತನಾಟಕದಲ್ಲಿ ಸೊಗಸಾಗಿ ವರ್ಣಿಸಿದ್ದಾರೆ.

ಈ ಗೀತನಾಟಕದ ಆರಂಭದಲ್ಲಿ ಮತಂಗಾಶ್ರಮದ ಪರ್ಣಶಾಲೆಯ ಮುಂದಿನ ವನದಲ್ಲಿ ಶಬರಿಯು ಶ್ರೀರಾಮನ ಆಗಮನಕ್ಕಾಗಿ ಎಂದಿನಂತೆ ಕಾದಿದ್ದಾಳೆ, ಶಬರಿಯು ತಪಸ್ವಿನಿಯಂತೆ ಕೃಷ್ಣಾಜಿನಾಂಬರವನ್ನು ಧರಿಸಿದ್ದಾಳೆ, ವೃದ್ಧಿಯಾಗಿರುವ ಶಬರಿಯು ಬುದ್ಧಿಹೀನಳಂತೆ ಕಾಣುತ್ತಾಳೆ.

10th Shabari Lesson Summary in Kannada pdf

“ಶ್ರೀರಾಮ ನೀನೆಂದು ಇಲ್ಲಿಗೆ ಬರುವೆ? ನಾನು ನಿಂತಲ್ಲಿಯೇ ನಿನಗಾಗಿ ಕಾದಿರುವೆ. ನೀನಿರುವ ಸ್ಥಳವನ್ನು ನಾನು ತಿಳಿದಿಲ್ಲ. ನೀನಿರುವ ಕಡೆಗೆ ಬರುವ ದಾರಿಯನ್ನೂ ಅರಿತಿಲ್ಲ. ನೀನು ಬಂದೇ ಬರುವ ಎಂಬ ನಂಬಿಕೆಯಿಂದ, ನೆಚ್ಚಿನಿಂದ, ಹುಚ್ಚಿನಿಂದ, ಆಸೆಯಿಂದ ಕಾದಿರುವೆ” ಎಂದು ಹೇಳುತ್ತಾ ಶಬರಿಯು ಬನದೊಳಗೆ ಹೋಗುವಳು.

ಈ ಕಡೆ ರಾಮ ಲಕ್ಷ್ಮಣರು ಶಬರಿಯು ಇರುವ ಮತಂಗ ಆಶ್ರಮದ ಕಡೆಗೆ ಮಾತನಾಡಿಕೊಂಡು ಬರುತ್ತಿರುತ್ತಾರೆ.

ಸೀತೆಯು ನಮಗೆ ದೊರೆಯುವಳೇ? ಭೂಮಿ, ಜಾತೆಯು, ಆತ್ಮಕಾಮ ಕಲ್ಪಲತೆಯು, ಚೆಲುವೆಯೂ ಆದ ಸೀತೆಯು ದೊರೆಯುವಳೆ? ಎಲೈ ಗಿರಿವನಗಳೇ, ನಿಮ್ಮನ್ನು ಪ್ರಾರ್ಥಿಸುತ್ತೇನೆ. ಅವಳಿರುವ ನೆಲೆಯನ್ನು ಯಾರು ಬಲ್ಲಿರಿ? ನನ್ನರಸಿ ನನಗೆ ದೊರೆಯುವಳೆ ಹೇಳಿರಿ. ಈ ಚಿಂತೆಯು ನನ್ನ ಮನಸ್ಸನ್ನು ಹಾಳುಮಾಡುತ್ತಿದೆ. ನನ್ನೆದೆಯನ್ನು ಈ ಜಗವನ್ನು ಬಿಡದೆ ಸುಡುವಂತೆ ಮಾಡುತ್ತಿದೆ. ಅಯ್ಯೋ’ ಎಂದು ಶ್ರೀರಾಮನು ಪ್ರಲಾಪಿಸುತ್ತಾನೆ.

ಆಗ ಲಕ್ಷ್ಮಣನು ತನ್ನ ಅಣ್ಣನಾದ ಶ್ರೀರಾಮನನ್ನು ಸಮಾಧಾನ ಪಡಿಸುತ್ತಾ “ತಾಳಿಕೋ ಅಣ್ಣ, ಸೂರ್ಯನೇ ಕಾಂತಿಹೀನನಾದರೆ ಆ ಕಾಂತಿಗೆ ತೇಜಸ್ಸಿಗೆ ಸ್ಥಳವೆಲ್ಲಿ? ಯಾರು ಆ ತೇಜಸ್ಸನ್ನು ಕೊಡುತ್ತಾರೆ? ಹಾಗೆಯೇ ಶ್ರೀರಾಮನೇ ಧೈರ್ಯಕಳೆದುಕೊಂಡರೆ ಧೈರ್ಯ ತುಂಬುವವರಾರು?” ಎನ್ನುತ್ತಾನೆ.

10th class kannada shabari lesson summary in kannada

ಆಗ ಶ್ರೀರಾಮನು “ಸೀತೆಯ ನೆನಪು, ಅವಳ ಸೆಳೆತಕ್ಕೆ ಸಿಲುಕಿದರೆ ನನ್ನಲ್ಲಿ ಈ ಶೋಕದ ಉಲ್ಕೆ ಅನಿವಾರ್ಯವಾಗುತ್ತದೆ. ಲಕ್ಷ್ಮಣ, ಇಲ್ಲಿ ನೋಡು ತಪಸ್ವಿಗಳ ಬೀಡು ಕಾಣುತ್ತದೆ” ಎಂದನು. ಇದನ್ನು ನೋಡಿದರೆ ನನಗೆ ಸೀತೆಯ ನೆನಪು ಮರುಕಳಿಸುತ್ತಿದೆ’ ಎಂಬ ಮಾತುಗಳನ್ನು ಹೇಳುತ್ತಾನೆ. ಶ್ರೀರಾಮನ ಮಾತುಗಳನ್ನು ಕೇಳಿ ಲಕ್ಷ್ಮಣನು ಈ ರೀತಿ ಹೇಳಿದನು. “ಹೌದು ನಿಜವಾಗಿಯೂ ಈ ವಾತಾವರಣವನ್ನು ನೋಡಿದರೆ ಚಿತ್ರಕೂಟವು ನೆನಪಾಗುತ್ತಿದೆ, ಇದರ ಜೊತೆಗೆ ಅತ್ತಿಗೆಯು ಜೊತೆಯಲ್ಲಿದ್ದದ್ದು ನೆನಪಾಗುತ್ತಿದೆ. ನಾನು ಪಾಪಿ, ನನ್ನ ಅಹಂಕಾರಕ್ಕೆ ಮನ್ನಣೆ ನೀಡಿ ನಾನು ಅತ್ತಿಗೆಯನ್ನು ಒಂಟಿಯಾಗಿ ಬಿಟ್ಟೆ. ಆಗ ಶ್ರೀರಾಮನು “ಮರುಗದಿರು ತಮ್ಮ, ಆದದ್ದು ಆಯಿತು. ಆ ವಿಧಿ ನಿಮ್ಮನ್ನು

shabari lesson saramsha in kannada

ಹಾಗೆ ಮೋಡಿ ಮಾಡಿತ್ತು, ಈಗ ನಾವು ದನು ಹೇಳಿದ ದಾರಿಯಲ್ಲಿ ಬಂದಿದ್ದೇವೆಯೆ? ಆ ತಪಸ್ವಿನಿಯ ಆಶ್ರಮವು ಇದೆಯೆ? ಅಲ್ಲಿ ನೋಡು ಎಂದು ಹೇಳಿದನು. ಶಬರಿಯು ತಳಿರು, ಹೂ, ಹಣ್ಣು-ಹಂಪಲುಗಳನ್ನು ತರುತ್ತಿರುವುದನ್ನು ಕಂಡು ಏನಾದರು ಕಷ್ಟ ಬರಬಹುದೆಂದು ತಿಳಿದು ಅಣ್ಣನನ್ನು ಲಕ್ಷ್ಮಣನು ಮರೆಗೆ ಕರೆದುಕೊಂಡು ಹೋದನು. ಶಬರಿಯ ಓಡಾಟವನ್ನು ಪರೀಕ್ಷಾ ದೃಷ್ಟಿಯಿಂದ ಗಮನಿಸಿದನು.

ಶಬರಿಯು ಶ್ರೀರಾಮನನ್ನು ಸ್ಮರಿಸುತ್ತಾ ಈ ರೀತಿ ಹೇಳುತ್ತಾಳೆ “ಶ್ರೀರಾಮನು ಬಾರದಿದ್ದರೆ ನನಗೇನೂ ತೋಚುವುದಿಲ್ಲ. ಅತ್ಯಂತ ಸಿಹಿಯಾದ ಈ ಹಣ್ಣುಗಳನ್ನು ತಿನ್ನದಿದ್ದರೆ ಇವನ್ನು ಏನು ತಾನೆ ಮಾಡಲಿ? ಅವನಿಗಾಗಿ ನೀಡಲು ತೆಗೆದಿರಿಸಿರುವ ಮೊಸರು, ತುಪ್ಪ, ನೀರು, ಜೇನು ತುಪ್ಪ, ಸಕ್ಕರೆ ಮಿಶ್ರಿತ ಪಾನೀಯಗಳನ್ನು ಯಾರಿಗೆ ನೀಡಲಿ? ಬೇಗ ಬಾ ಶ್ರೀರಾಮ, ನೀನು ಕತ್ತಲಲ್ಲಿ ಚಂದ್ರನಂತೆ ಕಾಂತಿ ಹಾಗೂ ತಂಪನ್ನು ನೀಡುವವನು. ರಾಮಚಂದ್ರ ಬೇಗ ಬಾ ಬಂದು ಈ ಹಣ್ಣು, ಹೂವು ಎಲ್ಲವನ್ನು ತೆಗೆದುಕೋ, ಶ್ರೀರಾಮ ಬರದಿದ್ದರೆ ನನಗೆ ಏನೂ ಸೇರುವುದಿಲ್ಲ” ಎಂದು ಮರುಗುತ್ತಾ ಪರ್ಣಶಾಲೆಯೊಳಗೆ ಹೋಗುತ್ತಾಳೆ. ಆಗ ರಾಮಲಕ್ಷ್ಮಣರು ಕಾಣಿಸಿಕೊಳ್ಳುತ್ತಾರೆ.

ಶ್ರೀರಾಮನು ಶಬರಿಯನ್ನು ಕಂಡು “ನನಗಾಗಿ ಇಷ್ಟೊಂದು ಹಂಬಲಿಸುತ್ತಿರುವ ತಪಸ್ವಿನಿ ಶಬರಿ ಇವಳೇ ಆಗಿರಬಹುದು. ಆ ಉದರಮುಖ ಎನಿಸಿರುವ ದನು ಹೇಳಿರುವ ಶಬರಿ ಇವಳ ಇರಬಹುದು. ನನ್ನಿಂದ ಇವಳಿಗೆ ಯಾವ ರೀತಿಯ ಉಪಕಾರವು ಇಲ್ಲದಿದ್ದರೂ ಈ ಶಬರಿಯು ಎಷ್ಟೊಂದು ಪ್ರೀತಿಯಿಂದ, ನಲ್ಲೆಯಿಂದ ನನ್ನನ್ನು ನೆನೆಯುತ್ತಿದ್ದಾಳೆ. ಈ ಪೂಜ್ಯಳನ್ನು ಕಂಡರೆ ನನಗೆ ಸಂಕೋಚವಾಗುತ್ತಿದೆ” ಎಂದು ಶ್ರೀರಾಮನು ಹೇಳುತ್ತಾನೆ.

ಆಗ ಲಕ್ಷಣನು “ಅಣ್ಣ ಈ ವೃದ್ಧೆಯೂ ತಪಸ್ವಿನಿಯೂ ಆಗಿರುವ ಶಬರಿಯು ನಿನ್ನನ್ನು ನೋಡದೇ ಇಷ್ಟೊಂದು ಮೋಡಿಗೊಳಗಾಗಿದ್ದಾಳೆ, ಇನ್ನು ನಿನ್ನನ್ನು ನೋಡಿದ ಮೇಲೆ ಈಕೆಯ ಪ್ರೀತಿ ಹೇಗೆ ಉಕ್ಕಿ ಹರಿಯಬಹುದೂ” ಎನ್ನುತ್ತಾನೆ.

ಆಗ ಶ್ರೀರಾಮ ‘ಇವಳ ರೂಪಕ್ಕಿಂತ ನಾಮ (ಹೆಸರೇ)ವೇ ಮಿಗಿಲು. ಇವಳ ಆತ್ಮ ಕಾಮಧೇನುವಿನಂತೆ, ನನ್ನ ನೋಡಿದ ನಂತರ ಅವಳ ಕುತೂಹಲ, ಆಶ್ಚರ್ಯ, ಬೆರಗು ಎಷ್ಟಿಹುದೋ ತಿಳಿಯುವುದು ಎಂದನು. ಆಗ ಲಕ್ಷಣನು. ‘ನಾನು ನಿನ್ನನ್ನು ನಿತ್ಯವೂ ನೋಡುತ್ತಿದ್ದರೂ ಅದರಲ್ಲಿ ನನ್ನ ಬೆರಗು ತಣಿಯುತ್ತಿಲ್ಲ. ಆ ತಪಸ್ವಿನಿಯ ಆಶ್ರಮದಲ್ಲಿ ಶಬರಿಯು ಆಶ್ಚರ್ಯಗೊಳ್ಳುವ ಪರಿಯನ್ನು ಪರೀಕ್ಷಿಸೋಣ ಬಾ’ ಎಂದನು. ಶಬರಿಗೆ ಮೊದಲು ಶ್ರೀರಾಮನೇ ಕಾಣಿಸಬೇಕೆಂದು ಲಕ್ಷ್ಮಣನು ರಾಮನ ಹಿಂದೆ ಹೋದನು.

10th Shabari Lesson Summary in Kannada kseeb

ಆಶ್ರಮದಲ್ಲಿ ನಿನ್ನೆ ಆಲಂಕರಿಸಿದ ಹೂವು ಇನ್ನೂ ಹೊಸದರಂತಿದೆ. ಯಜ್ಞಕುಂಡದಲ್ಲಿ ಆಗಿ ಹೊಗೆಯಾಡುತ್ತಿದೆ, ಶಬರಿಯು ಶ್ರೀರಾಮನಿಗಾಗಿ ನಿನ್ನ ತಂದಿರಿಸಿದ ಹೂವು ಹಣ್ಣುಗಳನ್ನು ಬೇರ್ಪಡಿಸಿ ಅವುಗಳ ಜಾಗದಲ್ಲಿ ಹೊಸದನ್ನು ಇಡುತ್ತಿದ್ದಾಳೆ. ಆ ಫಲ ಪುಷ್ಪಗಳನ್ನು ಕಂಡು ಹಾಡುತ್ತಾಳೆ, ‘ಎಲೈ ತಳಿರು, ಹೂಗಳೆ ಅವನ ಸ್ಪರ್ಷವೆಂಬಂತ ನಿಮ್ಮ ಮೃದುತ್ವವಿದೆ. ಕೇವಲ ಗಾಳಿಗೇ ಒಣಗಿರುವಿರಿ, ದುಂಬಿಗಳ ಗುಂಪು ನಿಮ್ಮ ಕಂಪನ್ನರಸಿ ಬಂದವು, ನಿಮ್ಮ ಸುವಾಸನೆಯಿಂದ ಅವನನ್ನು ಉದ್ದೀಪಿಸದೆ ಸೊರಗಿದರಲ್ಲ!

10th Shabari Lesson Summary in Kannada Best No1 Notes | ಶಬರಿ ಪಾಠದ ಸಾರಾಂಶ ಬರೆಯಿರಿ
10th Shabari Lesson Summary in Kannada Best No1 Notes | ಶಬರಿ ಪಾಠದ ಸಾರಾಂಶ ಬರೆಯಿರಿ

ಎಲೈ ಫಲಗಳೇ ಅವನು ನಿಮ್ಮನ್ನು ಸವಿಯಲಾಗಲಿಲ್ಲ. ಹಾಗಾಗಿ ನೀವು ರುಚಿಗಟ್ಟಿದ್ದೀರಿ ಹದಗೆಟ್ಟು ಹುಳುವಿಗೆ ಆಸರೆಯಾದಿರಿ, ಅವನಿಗೆ ಮೀಸಲಾಗಿಟ್ಟ ಫಲ ಪುಷ್ಪಗಳು ಮಾಸಲಾದರೂ ನಾನು ಮತ್ತೆ ಮತ್ತೆ ಹೊಸತನ್ನು ತಂದಿಟ್ಟು ಅವನಿಗಾಗಿ ಕಾದಿರುವ ಛಲ ನನ್ನದು ಎಂದು ಹಾಡುತ್ತಾ ಹೂವಿನ ಮಾಲೆಯನ್ನು ಕಟ್ಟುತ್ತಿರುತ್ತಾಳೆ.

ಯಾವಾಗ ನಾನು ಶ್ರೀರಾಮನನ್ನು ಕಾಣುವೆ? ಅವನು ದಶರಥನ ಮತ್ರನಂತೆ, ಸಾಧು ಸಜ್ಜನರ ಮಿತ್ರನಂತೆ, ಅವನು ಧೀರ, ಶೂರ, ವೀರ, ಗಂಭೀರ, ಸದ್ಗುಣಗಳ ಸಾಕಾರ ಮೂರ್ತಿಯಂತೆ, ಅವುಗಳ ಸಾರವೇ ಮೈವೆತ್ತಂತೆ ಇರುವನಂತೆ, ಅಂಥ ಶ್ರೀರಾಮನನ್ನು ನಾನು ಯಾವಾಗ ಕಾಣವನು? ಶ್ರೀರಾಮನು ಬಿಲ್ಲು ಹಿಡಿದು ಬರುತ್ತಾನಂತೆ! ಶತ್ರುಗಳನ್ನು ಹೆದರಿಸುವವರನ್ನು ಎದುರಿಸುವನಂತೆ ಆದರೂ ತುಂಬಾ ಸೌಮ್ಯ ಸ್ವಭಾವದವನಂತೆ, ಮಗುವಿನ ಮುಗ್ಧತೆ ಉಳ್ಳವನಾಗಿರುವನಂತೆ, ಅರಸುತನವನ್ನೇ ತೊರೆದನಂತೆ, ತಪಸ್ವೀತನವನ್ನು ತನ್ನದಾಗಿಸಿಕೊಂಡನಂತೆ, ತಮ್ಮ ಲಕ್ಷ್ಮಣನೊಡನೆ ಕಾಡಿನಲ್ಲಿ ಬರುತ್ತಿದ್ದರೂ ಯಾವ ಭಯವೂ ಅವನಿಗೆ ಇಲ್ಲವಂತೆ, ಕೆಟ್ಟಕನಸು ಕಂಡ ರಾತ್ರಿ ಕಳೆದು ಸುಪ್ರಭಾತದಂತೆ ಇರುವನಂತೆ ಗುರುಗಳು, ತಪಸ್ವಿಗಳು ಸಾಧಕರೆ ಮೆಚ್ಚುವಂಥ ಸನ್ಮಂಗಳ ಮೂರ್ತಿಯಂತೆ ಅಂಥ ಶ್ರೀರಾಮನನ್ನು ಯಾವಾಗ ಕಾಣುವನೋ ಎಂದು ಹೇಳುತ್ತಾ ತಾನು ಕಟ್ಟಿದ್ದ ಪುಷ್ಪಮಾಲೆಗೆ ಪ್ರೀತಿಯಿಂದ ಚುಂಬಿಸುತ್ತಾಳೆ.

10th Shabari Lesson Summary in Kannada

ಶ್ರೀರಾಮನು ಆಶ್ರಮದ ಬಾಗಿಲಲ್ಲಿ ನಿಂತು ತಾಯಿ, ದಾರಿಹೋಕರಿಗೆ ಇಲ್ಲಿ ಉಳಿದುಕೊಳ್ಳಲು ಆಶ್ರಯ ದೊರೆಯುವುದೇ” ಎಂದು ಶಬರಿಯನ್ನು ಕೇಳುತ್ತಾನೆ. ಆಗ ಶಬರಿಯು ನಡುಗುವ ಎದೆಯಿಂದ ಧ್ವನಿ ಬಂದ ಕಡೆಗೆ ತಿರುಗಿ “ಎಲೈ ಮಹಾಪುರುಷನೇ, ನೀನು ಶ್ರೀರಾಮನೇ” ಎಂದು ಕೇಳುತ್ತಾಳೆ, ಅದಕ್ಕೆ ಶ್ರೀರಾಮನ ‘ಹೌದು ತಾಯಿ, ನನ್ನನ್ನು ರಾಮ ಎನ್ನುತ್ತಾರೆ. ನನ್ನ ತಮ್ಮ ಸೌಮಿತ್ರಿ (ಲಕ್ಷ್ಮಣ).

ಶಬರಿಯು ತುಂಬ ಸಡಗರದಿಂದ ‘ನೀವು ರಾಮಲಕ್ಷ್ಮಣರೇ?’ ಎಂದು ಆಶ್ಚರ್ಯದಿಂದ ಕೇಳುತ್ತಾಳೆ. (ಶಬರಿಯು ರಾಮಲಕ್ಷ್ಮಣರನ್ನು ಹೇಗೆ ಉಪಚರಿಸಿದಳು ಎಂದು ಮೇಳದವರು

ತಮ್ಮ ಹಾಡಿನಲ್ಲಿ ವರ್ಣಿಸುತ್ತಾರೆ).

ಶಬರಿಯು ಶ್ರೀರಾಮನನ್ನು ಕಂಡು ಬೆರಗಾದಳು. ಅನಂತರ ಶ್ರೀರಾಮನ ಬಳಿಗೆ ಬಂದು ಅವನ ಮೈಯನ್ನು ಮುಟ್ಟಿ ಪಾದಕ್ಕೆ ನಮಸ್ಕರಿಸಿ ಅವನ ಕೈಯನ್ನು ಕಣ್ಣಿಗೊತ್ತಿಕೊಂಡು ಆನಂದದ ಕಣ್ಣೀರನ್ನು ಸುರಿಸಿದಳು. ‘ಬನ್ನಿ, ಬನ್ನಿ’ ಎಂದು ಪ್ರೀತಿಯಿಂದ ಆಶ್ರಮಕ್ಕೆ ಆಹ್ವಾನಿಸಿದಳು. ಅಯ್ಯೋ ಇಂದು ಏನೂ ಸಿದ್ಧತೆ ನಡೆಸಿಲ್ಲವೆ ಎಂದು ಪೇಚಾಡುತ್ತಾಳೆ. ನಿನ್ನೆಯಷ್ಟು ಚೆನ್ನಾಗಿ ಸಿದ್ಧತೆ ಮಾಡಿಲ್ಲ ಎಂದು ನೊಂದುಕೊಳ್ಳುತ್ತಾಳೆ. ತಾನು ಪ್ರೀತಿಯಿಂದ ಕಟ್ಟಿದ್ದ ಹೂವಿನ ಮಾಲೆಯನ್ನು ಅವರ ಕೊರಳಿಗೆ ಹಾಕಿ ಹಿಗ್ಗಿ ಸಂಭ್ರಮಿಸುತ್ತಾಳೆ. ತಾನು ತಂದ ಹಣ್ಣನ್ನು ನೀಡುತ್ತ ಜಗತ್ತಿನಲ್ಲೇ ಇದರಷ್ಟು ರುಚಿಯಾದ ಹಣ್ಣು ಯಾವುದೂ ಇಲ್ಲ. ಇದನ್ನು ಸವಿಯಿರಿ’ ಎಂದು ನೀಡಿದಳು. ಇದರಿಂದ ಪ್ರಸನ್ನರಾದ ರಾಮಲಕ್ಷ್ಮಣರನ್ನು

ಕಂಡು ಶಬರಿ ಧನ್ಯಭಾವದಿಂದ ಆನಂದಿಸಿದಳು, ನರ್ತಿಸಿದಳು. ನಾನು ಈಗ ತುಂಬ ಸುಖಿಯಾಗಿಹೆನು. ನನ್ನ ಜೀವನದ ಮಹದಾಸೆ ನೆರವೇರಿದೆ. ನನ್ನ ಹಂಬಲ ಆಳಿದ ದುಂಬಿಯಾಗಿರುವನು, ನಾನು ಸುಖಿಯಾಗಿರುವೆನು, ನದಿ, ಹೊಳೆಯು ಸಮುದ್ರವನ್ನು ಸೇರುವಂತೆ. ದೋಣಿಯು (ಹಡಗು),

shabari lesson saramsha in kannada

ದಡವನ್ನು (ಬಂದರನ್ನು ಸೇರುವಂತೆ ನನ್ನ ಮನಸ್ಸು ನಿರಾಳವಾಗಿದೆ. ನಿಮ್ಮನ್ನು ನೋಡಿ, ನಿಮ್ಮೊಡನೆ ಮಾತನಾಡಿ ನಿಮ್ಮ ದಣಿವನ್ನು ತಣಿಸಿ ನಾನು ಆನಂದಗೊಂಡಿದ್ದೇನೆ, ಇಂದು ನನ್ನ ಮನಸ್ಸಿನ ಭಾರ ಇಳಿದು ಹಗುರವಾಗಿದೆ. ಜೀವನ ಸಾರ್ಥಕವಾಗಿದೆ. ಪರಲೋಕ ಕರ ನೀಡಿ ಕರೆಯುತ್ತಿದೆ. ನಾನು ಅತ್ಯಂತ ಸುಖಿಯಾಗಿರುವೆ.

ಆಗ ಶ್ರೀರಾಮನು ಶಬರಿಗೆ ‘ನೀನು ನೀಡಿದ ಆದರ ಆತಿಥ್ಯದಿಂದ ನಾವೂ ಸುಖ, ಸಂತೋಷದಿಂದ ಇದ್ದೇವೆ, ಅರಣ್ಯದಲ್ಲಿದ್ದರೂ ಸ್ವರ್ಗದಂತಹ ಅನುಭವವಾಗಿದೆ. ಇಂಥ ಸವಿಯಾದ ಹಣ್ಣುಗಳನ್ನು ನೀಡಿರುವ ನಿನಗೆ ನಾವು ಋಣಿಯಾಗಿದ್ದೇವೆ ಎಂದನು.

ಶ್ರೀರಾಮನ ಮಾತುಗಳನ್ನು ಕೇಳಿ ತನ್ನ ಉದ್ವೇಗವನ್ನು ನಿಗ್ರಹಿಸಿಕೊಂಡು ಕಣ್ಣುಗಳಲ್ಲಿ ಕಂಬನಿಯನ್ನು ತುಂಬಿಕೊಂಡು ನನ್ನಾಸೆಯಂತೆ ನೀವು ನಮ್ಮ ಆಶ್ರಮಕ್ಕೆ ಬಂದಿದ್ದೀರ. ತುಂಬಾ ದಣಿದಿದ್ದೀರ, ಹಸಿವು ಬಾಯಾರಿಕೆಯಿಂದ ಬಳಲಿದ್ದೀರ? ನಾನು ಬಡವಳು, ಒಬ್ಬಳೇ ಏನು ತಾನೆ ಮಾಡುತ್ತಾಳೆ ಎಂದು ಮರುಕ ತಳೆದಿದ್ದೀರಾ? ಎಂದು ಶಬರಿಯು

ಆಗ ಶ್ರೀರಾಮನು ತಾಯಿ ಏಕೆ ಈ ಕಣ್ಣೀರು, ನೀನು ನಮಗೆ ನೀಡಿದ ಆದರ, ಆತಿಥ್ಯ, ಸತ್ಕಾರಗಳಲ್ಲಿ ಯಾವುದಕ್ಕೂ ಕೊರತೆಯಾಗಿಲ್ಲ. ನಮ್ಮ ಅಯೋಧ್ಯೆಯ ಅರಮನೆಗಿಂತಲೂ ಹೆಚ್ಚಿನ ಸತ್ಕಾರ ಇಲ್ಲಿ ದೊರೆಯಿತು, ಇದು ಕಾಡು ಎಂಬುದನ್ನು ಮರೆತು ನಮ್ಮ ಮನೆ ಎಂಬ ಭಾವನೆ ನಮಗೆ ಬಂದಿದೆ. ನಿನ್ನನ್ನು ನಮ್ಮ ತಾಯಿ ಎಂದು ಭಾವಿಸಿದ್ದೇವೆ. ಆಗ ಶಬರಿಯು ಶ್ರೀರಾಮನಿಗೆ ನಿನ್ನ ರೂಪದಂತೆಯೇ ನಿನ್ನ ಮಾತು ಕೂಡ

ತುಂಬಾ ಉದಾರವಾಗಿದೆ. ನಾನು ಧನ್ಯಳು. ಸಿದ್ಧರ, ಪುಣ್ಯಪುರುಷರ, ತಪಸ್ವಿಗಳ ವರ ನನಗೆ ಇಂದು ಲಭಿಸಿದೆ. ನಿಮ್ಮನ್ನು ಕಂಡ ಮಣ್ಯವಂತೆ ನಾನಾಗಿದ್ದೇನೆ. ಇಂದಿಗೆ ನನ್ನ ಚಿಂತೆಯೆಲ್ಲಾ ಕರಗಿಹೋಯಿತು, ಗುರುಗಳನ್ನು ಪೂಜಿಸಿದ ತೃಪ್ತಿ ನನಗೆ ಇದೆ ಎಂದಳು. ಆಗ ಶ್ರೀರಾಮನು ನಿನ್ನಂಥ ಶಿಷ್ಠೆಯನ್ನು ಪಡೆದ ನಿನ್ನ ಗುರುಗಳು ಎಂಥ ಮಹಿಮಾನ್ವಿತರು ಆಗಿದ್ದಾರೆ. ನಾನು ಅವರ ಮಹಿಮೆ ಕೇಳಿದ್ದೇನೆ. ಅವರು ಶಾಂತ ಸ್ವಭಾವದವರು. ಈ ಶಾಂತಿಯ ವನ, ಆಶ್ರಮ ನಮ್ಮ ದುಃಖವನ್ನೆಲ್ಲಾ ಮರೆಸಿತು. ನೀನು ಪರಿಶುದ್ಧ ಪ್ರೇಮವುಳ್ಳವಳು, ಇಂದು ನಮ್ಮ ಸುದಿನ ಎಂದು ಭಾವಿಸುತ್ತೇವೆ’ ಎಂದು ಶಬರಿಗೆ ಹೇಳಿದನು.

ಆಗ ಶಬರಿಯು ‘ಶ್ರೀರಾಮ ನನ್ನನ್ನು ಏಕೆ ಹೊಗಳುತ್ತಿರುವೆ? ಇದೆಲ್ಲಾ ನಮ್ಮ ಗುರುಗಳಾದ ‘ಮತಂಗ ಋಷಿಗಳ ಕೃಪೆ, ನಮ್ಮ ಗುರುಗಳು ನಿಮ್ಮ ಆಗಮನದ ಬಗ್ಗೆ ಹೇಳಿದ್ದ ಮಾತುಗಳು ಇಂದು ನಿಜವೆನಿಸಿದೆ’ ಎಂದು ಹೇಳುತ್ತಾ ವೈರಾಗ್ಯದಿಂದ ಹಾಡುತ್ತಾಳೆ, ನೀಲಗಗನದ ನಡುವ ಪ್ರಕಾಶಿಸುತ್ತಿರುವ ಸೂರ್ಯನಿಂದ ಆಚೆ ಇರುವ ಮಾಯಾಲೋಕವನ್ನು ನಾನು ಪ್ರವೇಶಿಸಬೇಕು. ಹಕ್ಕಿಯಂತೆ ಹಾರಿ, ಮೋಡದಂತೆ ತೇಲಿ, ಮಿಂಚಿನಂತೆ, ಈ ಸಂಸಾರದಿಂದ ಮಾಯವಾಗಲು ಬಯಸುತ್ತೇನೆ.

ಆಗ ಶ್ರೀರಾಮನು ‘ನೀನು ನಮ್ಮನ್ನು ತಾಯಿಯಂತೆ ಆದರಿಸಿ ಈ ರೀತಿ ವೈರಾಗ್ಯದ ಮಾತನ್ನು ಆಡುವುದು ಸರಿಯೆ? ಎಂದನು. ಅದಕ್ಕೆ ಶಬರಿಯು “ನನಗೆ ಪುಣ್ಯ ಲೋಕ ದೊರೆಯಲೆಂದು ಹರಸಿ” ಎಂದಳು. ಅದಕ್ಕೆ ಶ್ರೀರಾಮನು ನಮ್ಮನ್ನು ಇಷ್ಟು ಪ್ರೀತಿಯಿಂದ

10th Shabari Lesson Summary in Kannada Best No1 Notes | ಶಬರಿ ಪಾಠದ ಸಾರಾಂಶ ಬರೆಯಿರಿ
10th Shabari Lesson Summary in Kannada Best No1 Notes | ಶಬರಿ ಪಾಠದ ಸಾರಾಂಶ ಬರೆಯಿರಿ

ಶಬರಿ ಪಾಠದ ಸಾರಾಂಶ

ಕಂಡ ನಿನಗೆ ಮರಣವೆ? ಎಂದನು. ಮರಣವಲ್ಲ, ಮುಕ್ತಿ ಬೇಕು. ಅದೇ ನನ್ನ ಪ್ರತಿಜ್ಞೆ ಎಂದಳು ಶಬರಿ. ಮನಸ್ಸು ಒಪ್ಪಿದರೂ ಹೃದಯ ಒಪ್ಪುತ್ತಿಲ್ಲ ಎಂದನು. ನೀನು ಒಲಿದು ಒಪ್ಪಿದರೆ ಮುಕ್ತಿ ತಪ್ಪದೆ ದೊರೆಯುವುದು ಎನ್ನುತ್ತಾಳೆ.

ಆಗ ಶ್ರೀರಾಮನು ನಾನು ನಿನ್ನ ಅಪೇಕ್ಷೆಗೆ ಬೆರಗಾಗಿದ್ದೇನೆ. ನಿನ್ನ ಇಷ್ಟಾರ್ಥ ಸಿದ್ಧಿಸಲಿ ಎಂದನು. ಶಬರಿಯು ಸಂತೋಷದಿಂದ ಅಗ್ನಿಕುಂಡವನ್ನು ಪ್ರದಕ್ಷಿಣೆ ಮಾಡಿ, ಕಾಡು, ಮೇಡು ಬೆಟ್ಟ ಗುಡ್ಡಗಳಿಗೆ ವಂದಿಸಿದಳು, ಶಬರಿಯುಳಿಯುವುದಿಲ್ಲ. ಎಂಬ ಅಭಿಪ್ರಾಯ ರಾಮನದಾಗಿತ್ತು.

ಆಗ ಲಕ್ಷ್ಮಣನು ನಾವು ಯಾರು ಎಲ್ಲಿಂದ ಬಂದೆವು, ಏಕೆ ಬಂದೆವು ಎಂದು ಕೇಳದೆ ಮಕ್ಕಳಂತೆ ನಮ್ಮನ್ನು ಕಂಡಳು ನಮಗೆ ಒಲಿದಳು, ನಲಿದಳು ತನ್ನ ದುಃಖ ಮರೆತಳು ಎಂದನು.

ಜಗತ್ತಿಗೆ ಬೆಳಕನ್ನು ನೀಡುವವರು, ಪರೋಪಕಾರ ಮಾಡುವವರು ತಮ್ಮ ನೋವನ್ನು ಮರೆಯುತ್ತಾರೆ. ತಮ್ಮ ಸಂಕಟವನ್ನು ಮತ್ತೊಬ್ಬರಿಗೆ ಹೇಳುವುದಿಲ್ಲ. ಹೇಗೆ ದೀಪದ ಬತ್ತಿಯ ಉರಿದ ಕಪ್ಪು ಭಾಗ ಬೇರೆಯವರಿಗೆ ಕಾಣುವುದಿಲ್ಲವೋ ಇವರೂ ಹಾಗೆ. ನೋಡುಗರಿಗೆ ಕೇವಲ ಬೆಳಕು ಮಾತ್ರ ಕಾಣುತ್ತದೆ ಎಂದು ಶ್ರೀರಾಮನು ಲಕ್ಷ್ಮಣನಿಗೆ ಹೇಳಿದನು. ಆಗ ಲಕ್ಷ್ಮಣನು ನಮ್ಮ ಅತ್ತಿಗೆಯೂ ಹೀಗೆಯೇ ನಮಗಾಗಿ ಕಾದಿರಬಹುದು. ಕಾಡಿನ ರಾಕ್ಷಸರ ಕಡೆಯಿಂದ ನಮ್ಮನ್ನು ಈ ಶಬರಿಯ ಪ್ರೀತಿಯು ಎಳೆದು ತಂದಿತು.

ಆಗ ಶ್ರೀರಾಮನಿಗೆ ಮತ್ತೆ ಸೀತೆಯ ನೆನಪಾಗಿ ಹಾ ಪ್ರಿಯೆ, ಚಂದ್ರಮುಖಿ ಪ್ರಾಣಸಖಿ ಎಲ್ಲಿರುವೆ? ಹೇಗಿರುವೆ? ನಿನ್ನನ್ನು ಸಜೀವವಾಗಿ ಕಾಣುವೆನೆ? ಎಂದು ಪ್ರಲಾಪಿಸುತ್ತಾನೆ. ಆಗ ಲಕ್ಷ್ಮಣನು “ಭೂಮಿತಾಯಿಯು ತನ್ನ ಮಗಳಾದ ಸೀತಾದೇವಿಯನ್ನು ರಕ್ಷಿಸುವಳು. ಅವಳು ಎಲ್ಲಿದ್ದರೂ ತವರು ಮನೆಯಲ್ಲಿ ಇರುವಂತೆ ಸಲಹುತ್ತಾಳೆ. ಧೈರ್ಯದಿಂದ ಇರು’ ಎಂದನು. ಆಗ ಶ್ರೀರಾಮನು ಹೌದು ಲಕ್ಷ್ಮಣ ಈ ವಿಷಯವನ್ನು ನಾನು ಮರೆತಿದ್ದೆ, ಶಬರಿಯು ಪಂಚಭೂತಗಳಲ್ಲಿ ಬೆರೆಯುತ್ತ ಸೀತೆಯನ್ನು ರಕ್ಷಿಸಲಿ ಎಂದು ಹೇಳುತ್ತಾನೆ.

ಇನ್ನಷ್ಟು ಓದಿ

10ನೇ ತರಗತಿ ಕನ್ನಡ ಶಬರಿ ಪಾಠದ ಪ್ರಶ್ನೋತ್ತರಗಳು

ಲಂಡನ್ ನಗರ ಪಾಠದ ಪ್ರಶ್ನೆ ಉತ್ತರಗಳು

13 thoughts on “10th Class Kannada Shabari Lesson Summary | ಶಬರಿ ಪಾಠದ ಸಾರಾಂಶ ಕನ್ನಡ

Leave a Reply

Your email address will not be published. Required fields are marked *