Shabari Lesson Notes, ಶಬರಿ ಪಾಠದ ಪ್ರಶ್ನೋತ್ತರಗಳು, class, 10th kannada text book, sslc siri kannada text book, 10th kannada grammar, kseeb, pdf
Shabari Lesson Notes questions And Answers
ಶ್ರೀ ರಾಮನ ತಂದೆಯ ಹೆಸರೇನು?
1. ಶ್ರೀ ರಾಮನ ತಂದೆಯ ಹೆಸರೇನು?
ಶ್ರೀ ರಾಮನ ತಂದೆಯ ಹೆಸರು ದಶರಥ.
ಶಬರಿ ಗೀತನಾಟಕದ ಕರ್ತೃ ಯಾರು?
ಶಬರಿ ಗೀತನಾಟಕದ ಕರ್ತೃ ಪು.ತಿ. ನರಸಿಂಹಾಚಾರ್ಯರು.
02-03 ವಾಕ್ಯಗಳಲ್ಲಿ ಉತ್ತರಿಸಿ
- ರಾಮನು ಗಿರಿವನವನ್ನು ಏನೆಂದು ಪ್ರಾರ್ಥಿಸಿದನು?
ರಾಮನು “ಎಲೈ ಗಿರಿ ವನವೇ ನಾನು ನಿಮ್ಮನ್ನು ಬೇಡಿಕೊಳ್ಳತ್ತಿದ್ದೇನೆ ಹೇಳಿರಿ ನನ್ನ ಪ್ರೀತಿಯ ರಾಣಿ ಸೀತೆಯು ದೊರೆಯುವಳೇ ?
ದೊರೆಯುವುದಿಲ್ಲವೋ ? ಅವಳು ಇರುವ ನೆಲೆ ಯಾರಾದರೂ ತಿಳಿದಿರುವಿರಾ. ನನ್ನ ಹೃದಯದ ಈ ದುಃಖವು ನಾಶವಾಗುತ್ತಿಲ್ಲವಲ್ಲ.” ಎಂದು
ಗಿರಿವನಗಳನ್ನು ಪ್ರಾರ್ಥಿಸುತ್ತಾನೆ. - ಲಕ್ಷ್ಮಣನು ಅಣ್ಣನನ್ನು ಹೇಗೆ ಸಂತೈಸಿದನು ತಿಳಿಸಿ.
ಲಕ್ಷ್ಮಣನು “ತಾಳಿಕೋ ಅಣ್ಣ ತಾಳಿಕೋ ಸರ‍್ಯನೇ ಕಾಂತಿ ಕಳೆದುಕೊಂಡರೆ ಕಾಂತಿಯನ್ನು ನೀಡುವವರು ಯಾರು? ರಾಮನೇ ಧೈರ್ಯ
ಕಳೆದುಕೊಂಡರೆ ಈ ಲೋಕಕ್ಕೆ ¸ ನೀಡುವವರು ಯಾರು ? ಎಂದು ಅಣ್ಣನನ್ನು ಸಂತೈಸಿದನು. - ರಾಮನ ಸ್ವಾಗತಕ್ಕಾಗಿ ಶಬರಿ ಮಾಡಿಕೊಂಡಿದ್ದ ಸಿದ್ಧತೆಗಳೇನು?
ರಾಮನ ಸ್ವಾಗತಕ್ಕಾಗಿ ಶಬರಿ ಕಡುಸವಿಯಾದ ಬಗೆಬಗೆಯ ಹಣ್ಣು – ಹಂಪಲುಗಳನ್ನು, ಜೇನುತುಪ್ಪ ಅಧಿಕವಾಗಿರುವ ಮಧುಪರ್ಕವೆಂಬ
ಪಾನೀಯವನ್ನು , ತಳಿರು , ಸುವಾಸನೆಯಿಂದ ಕೂಡಿದ ಹೂವುಗಳನ್ನು ಸಂಗ್ರಹಿಸಿ ಸಿದ್ಧತೆಮಾಡಿಕೊಂಡಿದ್ದಳು. - ಶಬರಿಯು ರಾಮಲಸ್ಕ್ಮಣರನ್ನು ಉಪಚರಿಸಿದ ರೀತಿಯನ್ನು ವಿವರಿಸಿ.
ರಾಮ-ಲಕ್ಷ್ಮಣ ಬಂದು ತನ್ನ ಮುಂದೆ ನಿಂತಿರುವದನ್ನು ಕಂಡು ಶಬರಿ ಬೆರಗಾದರೆ . ಬೆರಗು ಕಳೆದ ಮೇಲೆ ರಾಮನ ಹತ್ತಿರಕ್ಕೆ ಬಂದು
ಮೈಯನ್ನು ಮುಟ್ಟಿ ಪಾದಕ್ಕೆ ಬಿದ್ದಳು. ಕೈಯನ್ನು ಕಣ್ಣಿಗೆ ಒತ್ತಿಕೊಂಡು ಆನಂದದ ಕಣ್ಣೀರನ್ನು ಸುರಿಸಿದಳು. ಬನ್ನಿರಿ ಎಂದು ಗದ್ಗದಿಸುತ್ತಾ ಅಯ್ಯೋ
ಏನೂ ಸಿದ್ಧವೇ ಇಲ್ಲ. ನಿನ್ನೆಯಷ್ಟು ಚೆಂದವಿಲ್ಲ ಎನ್ನುತ್ತ ಬಹಳ ಹಂಬಲದಿಂದ ತನ್ನ ಮನದ ಬಯಕೆಯಂತೆ ಬಗೆ ಬಗೆಯ ಸುವಾಸನೆಯನ್ನು
ಬೀರುವ ಹೂಮಾಲೆಯನ್ನು ರಾಮನ ಕೊರಳಿಗೆ ಹಾಕಿ ಸಂಭ್ರಮಿಸಿದಳು. ತಾನು ತಂದಿದ್ದ ರುಚಿಯಾದ ಹಣ್ಣುಗಳನ್ನು ತಾನೆ ರಾಮಲಕ್ಷö್ಮಣರ
ಕೈಯೊಳಗೆ ಇಟ್ಟು ಜಗದೊಳಗೆ ಇದರಷ್ಟು ರುಚಿಯಾದ ಹಣ್ಣು ಯಾವುದು ಇಲ್ಲ , ನಿಮಗಾಗಿಯೇ ತಂದಿರುವೆನು ಎಂದು ತಿನ್ನಲು ಹೇಳಿದಳು.
ಮಧುಪರ್ಕವನ್ನು ಸವಿಯಲು ಕೊಟ್ಟು ಉಪಚರಿಸಿದಳು. - ಆತಿಥ್ಯ ಸ್ವೀಕರಿಸಿದ ರಾಮಲಕ್ಷ್ಮಣರು ಶಬರಿಗೆ ಏನು ಹೇಳಿದರು?
ಆತಿಥ್ಯ ಸ್ವೀಕರಿಸಿದ ರಾಮಲಕ್ಷ್ಮಣ “ತಾಯಿ ನಿನ್ನ ಪ್ರೀತಿಯಲ್ಲಿ , ನಿನ್ನ ಸುಖದಲ್ಲಿ ನಾವು ಸುಖಿಗಳಾಗಿದ್ದೇವೆ. ಕಾಡಿನಲ್ಲಿ ಈ ಆನಂದ ಕಾಣುವ
ಪುಣ್ಯಕ್ಕೆ ಎಂದೆದಿಗೂ ನಿನಗೆ ನಾವು ಚಿರಋಣಿಗಳಾಗಿದ್ದೇವೆ. ನಿಮ್ಮ ಆತಿಥ್ಯದಲ್ಲಿ ಸ್ವಲ್ಪವೂ ಕೊರೆತ ಕಾಣಲಿಲ್ಲ. ನಮ್ಮ ಅಯೋದ್ಯೇಯ
ಅರಮನೆಯಲ್ಲೂ ಕೂಡ ಇದಕ್ಕಿಂತ ಹಿತವಾದದ್ದು ಇಲ್ಲ. ಇಂದು ನಾವು ಕಾಡು ಎಂಬುದನ್ನು ಮರೆತು ಮನೆಯೆಂದೇ ತಿಳಿದೆ. ಇಷ್ಟೊಂದು ಪ್ರೀತಿ
ತೋರುವ ನಿನ್ನನ್ನು ತಾಯಿ ಎಂದೆ ತಿಳಿದೆವು” ಎಂದು ಶಬರಿಗೆ ಹೇಳಿದರು.
shabari lesson notes tili kannada
ಒಂದು ವಾಕ್ಯಗಳಲ್ಲಿ ಉತ್ತರಿಸಿ.
1. ಶ್ರೀ ರಾಮನ ತಂದೆಯ ಹೆಸರೇನು?
ಶ್ರೀ ರಾಮನ ತಂದೆಯ ಹೆಸರು ದಶರಥ.
2. ಶ್ರೀರಾಮನಿಗೆ ಸಮರ್ಪಿಸಲು ಶಬರಿ ಏನನನ್ನ ಸಂಗ್ರಹಿಸಿದ್ದಳು?
ಶ್ರೀರಾಮನಿಗೆ ಸಮರ್ಪಿಸಲು ಶಬರಿ ಪರಿಮಳದ ಹೂವು, ರುಚಿಕರವಾದ ಹಣ್ಣುಹಂಪಲುಗಳು ಮತ್ತುಮಧುಪರ್ಕ
ಎಂಬ ಪಾನಿಯವನ್ನುಸಂಗ್ರಹಿಸಿದ್ದಳು.
3. ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ಯಾರು?
ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ಶಬರಿ.
4. ರಾಮಲಕ್ಶ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು ಯಾರು ?
ರಾಮಲಕ್ಶ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು ದನು ಮಹರ್ಷಿ.
5. ಶಬರಿ ಗೀತನಾಟಕದ ಕರ್ತೃ ಯಾರು?
ಶಬರಿ ಗೀತನಾಟಕದ ಕರ್ತೃ ಪು.ತಿ. ನರಸಿಂಹಾಚಾರ್ಯರು.
shabari lesson notes pdf
10.ಶಬರಿಯ ಪೂಣ್ಕೆ ಏನಾಗಿತ್ತು ?
ಶಬರಿಯ ಪೂಣ್ಕೆ ಮುಕ್ತಿ ಬಯಸುವುದಾಗಿತ್ತು.
ಕವಿ ಪರಿಚಯ
ಪು.ತಿ.ನರಸಿಂಹಚಾರ್
ಪು.ತಿ.ನ. ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಪುರೋಹಿತ ತಿರುನಾರಾಯಣಯ್ಯಂಗಾರ್ಯ ನರಸಿಂಹಾಚಾರ್
ಇವರು ಕ್ರಿ.ಶ.೧೯೦೫ ರಲ್ಲಿ ಮಂಡ್ಯ ಜಿಲ್ಲೆಯ ಮೇಲುಕೋಟೆ ಎಂಬ ಊರಿನಲ್ಲಿ ಜನಿಸಿದ್ದಾರೆ.
ಇವರು ಶಬರಿ, ಅಹಲ್ಯೆ, ಗೋಕುಲ ನಿರ್ಗಮನ, ವಿಕಟಕವಿವಿಜಯ, ಹಂಸದಯಂತಿ ಮತ್ತು ಇತರ ರೂಪಕಗಳು,
ಹಣತೆ, ರಸಸರಸ್ವತಿ, ಗಣೇಶದರ್ಶನ, ಶಾರದಯಾಮಿನಿ, ಶ್ರೀಹರಿಚರಿತೆ, ರಥಸಪ್ತಮಿ ಮುಂತಾದ ಕೃತಿಗಳನ್ನು
ರಚಿಸಿದ್ದಾರೆ.
ಇವರ ಹಂಸದಮಯಂತಿ ಮತ್ತು ಇತರ ರೂಪಕಗಳು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಹಾಗೂ ಶ್ರೀಹರಿಚರಿತೆ ಕಾವ್ಯಕ್ಕೆ ಪಂಪಪ್ರಶಸ್ತಿ ಗಳನ್ನು ಪಡೆದಿದ್ದಾರೆ.
shabari lesson notes 2022
ಇನ್ನು ಹೆಚ್ಚು ಓದಿ …….
ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು notes
ಶಾಲೆಯ ಮುಖ್ಯೋಪಾಧ್ಯಾಯರಿಗೆ ರಜೆಯ ಪತ್ರ