ಭಾಗ್ಯಶಿಲ್ಪಿಗಳು ಪಾಠದ ಸಾರಾಂಶ | Bhagya Shilpigalu Lesson Summary in Kannada

Class 10 Kannada Bhagya Shilpigalu Summary Free | ಭಾಗ್ಯಶಿಲ್ಪಿಗಳು ಪಾಠದ ಸಾರಾಂಶ

Class 10 Kannada Bhagya Shilpigalu Summary, ಭಾಗ್ಯಶಿಲ್ಪಿಗಳು ಪಾಠದ ಸಾರಾಂಶ , Kannada Lesson 4 Bhagya Shilpigalu Questions and Answers, Summary, Notes Pdf, Siri Kannada

Class 10 Kannada Bhagya Shilpigalu Summary

ಈ ಲೇಖನದಲ್ಲಿ ಭಾಗ್ಯಶಿಲ್ಪಿಗಳು ಪಾಠದ ಸಾರಾಂಶ ನೀಡಲಾಗಿದೆ ಇದು ಸಂಪೂರ್ಣವಾಗಿ ಉಚಿತವಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು.

Spardhavani Telegram

ಭಾಗ್ಯಶಿಲ್ಪಿಗಳು ಪಾಠದ ಸಾರಾಂಶ

Class 10 Kannada Bhagya Shilpigalu Summary Free | ಭಾಗ್ಯಶಿಲ್ಪಿಗಳು ಪಾಠದ ಸಾರಾಂಶ
Class 10 Kannada Bhagya Shilpigalu Summary Free | ಭಾಗ್ಯಶಿಲ್ಪಿಗಳು ಪಾಠದ ಸಾರಾಂಶ

ಮೈಸೂರು ಸಂಸ್ಥಾನದ ಒಡೆಯರ್ ರಾಜಸಂತತಿಯ 24 ನೆಯ ರಾಜರು ನಾಲ್ವಡಿ ಕೃಷ್ಣರಾಜ ಒಡೆಯರು . 1902 ರ ಆಗಸ್ಟ್‌ನಲ್ಲಿ ಮೈಸೂರು ರಾಜ್ಯದ ನೇರ ಉಸ್ತುವಾರಿ ಕೃಷ್ಣರಾಜ ಒಡೆಯರ್ ಸುಪರ್ದಿಗೆ ಬಂದಿತು . ಆಗ ದಿವಾನರಾಗಿದ್ದ ಸರ್.ಕೆ. ಶೇಷಾದ್ರಿ ಅಯ್ಯರ್ ಅವರ ಸಹಕಾರದೊಡನೆ ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ನಾಲ್ವಡಿ ಕೃಷ್ಣರಾಜ ಒಡೆಯರು ಕಂಕಣ ಬದ್ಧರಾದರು .

bhagya shilpigalu lesson summary in kannada

ಇವರ ಕಾಲದಲ್ಲಿ ಇಡೀ ಭಾರತದಲ್ಲಿ ಯಾವ ಸಂಸ್ಥಾನವೂ ಕಾಣದ ಅಭಿವೃದ್ಧಿಯನ್ನು ಮೈಸೂರು ರಾಜ್ಯವು ಕಂಡುದರಿಂದ ಮೈಸೂರು ಸಂಸ್ಥಾನಕ್ಕೆ ‘ ಮಾದರಿ ಮೈಸೂರು ‘ ಎಂಬ ಕೀರ್ತಿ ಪ್ರಾಪ್ತವಾಯಿತು . ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ‘ ಪ್ರಜಾ ಪ್ರತಿನಿಧಿ ಸಭೆ’ಯು ನೂತನ ಸ್ವರೂಪವನ್ನು ಪಡೆದು , ನಿಜವಾದ ಜನ ಪ್ರತಿನಿಧಿ ಸಭೆಯಾಗಿ ಪರಿವರ್ತನೆಯಾಯಿತು . ನಾಲ್ವಡಿ ಕೃಷ್ಣರಾಜರು 1907 ರಲ್ಲಿ ನ್ಯಾಯ ವಿಧಾಯಕ ಸಭೆಯನ್ನು ಸಹ ಸ್ಥಾಪಿಸಿದರು .

ಇದರ ಸದಸ್ಯರ ಸಂಖ್ಯೆ – 50. ಇದರಲ್ಲಿ ಜನರಿಂದ ಆಯ್ಕೆಯಾದರು 22 ಸದಸ್ಯರು , ಸ್ಥಳೀಯ ಸಂಸ್ಥೆಗಳನ್ನು ರಚಿಸಿ ಆಡಳಿತ ವಿಕೇಂದ್ರಿಕರಣಕ್ಕೆ ಅನುವು ಮಾಡಿಕೊಟ್ಟರು . ನಗರಪಾಲಿಕೆಗಳು ಹಾಗೂ ಗ್ರಾಮ ಪಂಚಾಯಿತಿಗಳು ಕಾರ್ಯನಿರ್ವಹಿಸಲು ಆರಂಭ ಮಾಡಿದವು . ಮೈಸೂರು , ಅರಸೀಕೆರೆ , ಬೆಂಗಳೂರು ಚಿಕ್ಕಬಳ್ಳಾಪುರ , ಚಿಕ್ಕ ಚಾಜೂರು ಚಿತ್ರದುರ್ಗ , ನಂಜನಗೂಡು – ಚಾಮರಾಜನಗರ , ತರೀಕೆರೆ – ಶಿವಮೊಗ್ಗ , ಆನಂದಪುರ ಈ ಎಲ್ಲ ರೈಲು ಮಾರ್ಗಗಳನ್ನು 1931 ರ ವೇಳೆಗೆ ಪೂರೈಸಲಾಯಿತು .

bhagya shilpigalu kannada summary

ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು ಉಚಿತ ಮತ್ತು ಕಡ್ಡಾಯವಾಗಿ ನೀಡುವ ಕಾರ್ಯ ಪ್ರಾರಂಭವಾಯಿತು . ನಾಡಿನಲ್ಲೇ ಮೊಟ್ಟಮೊದಲ ವಿಶ್ವವಿದ್ಯಾ ನಿಲಯವಾದ ಮೈಸೂರು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಸಲ್ಲುತ್ತದೆ . ಹಲವಾರು ಸಾಮಾಜಿಕ ಕಾನೂನುಗಳನ್ನು ಜಾರಿಗೆ ತಂದರು . ಪಂಡಿತ್ ಜವಹರಲಾಲ್ ನೆಹರು ಅವರು ಬೆಂಗಳೂರಿನಲ್ಲಿ ನಡೆದ ವಿಶ್ವೇಶ್ವರಯ್ಯ ಅವರ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡುತ್ತಾ , “ ದುರದೃಷ್ಟವಶಾತ್

Class 10 Kannada Bhagya Shilpigalu Summary kseeb


ಭಾರತೀಯರಾದ ನಾವು ಹೆಚ್ಚು ಮಾತನಾಡುವವರು ಮತ್ತು ನುಡಿದಂತೆ ನಡೆಯಲಾರದವರೆಂಬ ದೂಷಣೆಗೆ ಒಳಗಾಗಿದ್ದೇವೆ . ತಾವು ಈ ಮಾತಿಗೆ ಬಹುದೊಡ್ಡ ರೀತಿಯಲ್ಲಿ ಹೊರತಾಗಿದ್ದೀರಿ . ತಾವು ಕಡಿಮೆ ಮಾತನಾಡಿದ್ದೀರಿ ; ಹೆಚ್ಚು ಕೆಲಸ ಮಾಡಿದ್ದೀರಿ ಅದನ್ನು ನಾವು ತಮ್ಮಿಂದ ಕಲಿಯೋಣ ” ಎಂದು ವಿಶ್ವೇಶ್ವರಯ್ಯ ಅವರ ಬಗ್ಗೆ ಈ ರೀತಿ ನುಡಿದರು . ಅವರ ಒಂದೊಂದು ಮಾತುಗಳು ಸರ್ ಎಂ.ಎ. ಅವರಿಗೆ ಅಕ್ಷರಶಃ ಸಲ್ಲುತ್ತಿದ್ದವು .

ಇವರು ಭಾರತದ ಆಧುನಿಕತೆಯ ಹರಿಕಾರರಾಗಿ ವಾಸ್ತವ ಚಿಂತನೆ , ನಿಸ್ವಾರ್ಥ ನಡತೆ , ಸುಸಂಗತ ವೈಜ್ಞಾನಿಕ ದೃಷ್ಟಿ ಯೋಜನೆ ಮತ್ತು ದಕ್ಷ ಆಡಳಿತದ ತಳಹದಿಯ ಮೇಲೆ ಹೊಸ ರಾಷ್ಟ್ರ ನಿರ್ಮಿಸಲು ಮುಂದಾದವರು . ವಿಶ್ವೇಶ್ವರಯ್ಯ ಅವರು ಪ್ರಸಕ್ತ ಶಕ 1860 ಸೆಪ್ಟೆಂಬರ್ 15 ರಂದು ಶ್ರೀನಿವಾಸಶಾಸ್ತ್ರಿ ಮತ್ತು ವೆಂಕಟಲಕ್ಷ್ಮಮ್ಮ ಅವರ ಎರಡನೆಯ ಮಗನಾಗಿ ಜನಿಸಿದರು .

ಮೂಲತಃ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆ ಗಿಡಲೂರು ತಾಲೂಕಿನ ‘ ಮೋಕ್ಷಗುಂಡಂ ‘ ಅಗ್ರಹಾರಕ್ಕೆ ಸೇರಿದವರು . ಕಾರಣಾಂತರದಿಂದ ಕರ್ನಾಟಕಕ್ಕೆ ವಲಸೆ ಬಂದು ಚಿಕ್ಕಬಳ್ಳಾಪುರ ಸಮೀಪದಲ್ಲಿರುವ ಮುದ್ದೇನಹಳ್ಳಿಯಲ್ಲಿ ನೆಲೆಸಿದರು . ಆವತಿ ವಂಶಕ್ಕೆ ಸೇರಿದ್ದ ಚಿಕ್ಕಬಳ್ಳಾಪುರದ ಪಾಳೆಯಗಾರ ಭೈರೇಗೌಡ ಮುದ್ದೇನಹಳ್ಳಿ ಮತ್ತು ಬಂಡಹಳ್ಳಿ ಗ್ರಾಮಗಳನ್ನು ಇವರ ಮನೆತನಕ್ಕೆ ಉಂಬಳಿಯಾಗಿ ನೀಡಿದ್ದನು .

ವಿಶ್ವೇಶ್ವರಯ್ಯ ಅವರ ಪೂರ್ವಜರು ಈ ರಾಜರಲ್ಲಿ ವಂಶಪಾರಂಪರ್ಯವಾಗಿ ಸೇವೆ ಸಲ್ಲಿಸುತ್ತಿದ್ದರು . ಮೊದಲಿನಿಂದಲೂ ಅವರ ಮನೆತನಕ್ಕೆ ‘ ಮೋಕ್ಷಗುಂಡಂ ‘ ಎಂಬ ಅವರ ಮೂಲ ಸ್ಥಳದ ಹೆಸರು ಸೇರಿಕೊಂಡಿತ್ತು . ವೆಂಕಟಲಕ್ಷ್ಮಮ್ಮ ಅವರಿಗೆ ಮಕ್ಕಳು ಹೆಚ್ಚು ಓದಿ ದೊಡ್ಡ ವ್ಯಕ್ತಿಗಳಾಗಬೇಕೆಂಬ ಹಂಬಲವಿತ್ತು . ಅದಕ್ಕಾಗಿ ಸಂಸಾರವನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರಿಸಿದರು . ವಿಶ್ವೇಶ್ವರಯ್ಯ ಅವರ ಪ್ರಾಥಮಿಕ ಶಿಕ್ಷಣ ಚಿಕ್ಕಬಳ್ಳಾಪುರದಲ್ಲಿ ನಡೆಯಿತು .

ಇವರ ಗುರುಗಳಾಗಿದ್ದ ನಾಥಮುನಿನಾಯ್ಡು ಅವರಿಗೆ ಶಿಷ್ಯನ ಸನ್ನಡತೆ , ಶಿಸ್ತು ತುಂಬ ಹಿಡಿಸಿತ್ತು . ಅವರು ಒಳ್ಳೆಯ ಪುಸ್ತಕಗಳನ್ನು ಓದುವಂತೆ ಮಾರ್ಗದರ್ಶನ ಮಾಡುತ್ತಿದ್ದರು . ಇದರಿಂದ ವಯಸ್ಸಿಗೆ ಮೀರಿದ ಜ್ಞಾನ ಸಂಪಾದನೆಗೆ ಅವಕಾಶವಾಯಿತು . ಮುಂದೆ ಸೋದರ ಮಾವ ಎಚ್ , ರಾಮಯ್ಯ ಅವರ ಮಾರ್ಗದರ್ಶನದಂತೆ ಬೆಂಗಳೂರಿನ ವೆಸ್ಲಿಯನ್ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣವನ್ನೂ ಸೆಂಟ್ರಲ್ ಕಾಲೇಜಿನಲ್ಲಿ ಎರಡು ವರ್ಷಗಳ ಇಂಟರ್ ಮೀಡಿಯಟ್ ಮತ್ತು ಮೂರು ವರ್ಷಗಳ ಜಿ.ಎ. ಪದವಿ ಶಿಕ್ಷಣವನ್ನೂ ಪಡೆದರು .

ಅಂದಿನ ಮೈಸೂರು ದಿವಾನರಾಗಿದ್ದ ಸಿ . ರಂಗಾಚಾರ್ಲುರವರು ನೀಡಿದ ವಿದ್ಯಾರ್ಥಿ ವೇತನ ಸೌಲಭ್ಯವನ್ನು ಬಳಸಿಕೊಂಡು ಪೂನಾದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲ್.ಸಿ.ಇ. ಡಿಪ್ಲೋಮಾ ಶಿಕ್ಷಣವನ್ನು ಪ್ರಥಮ ಸ್ಥಾನದಲ್ಲಿ ಪಡೆದು ಜೇಮ್ಸ್ ಬರ್ಕ್ಲಿ ಬಹುಮಾನಕ್ಕೂ ಪಾತ್ರರಾದರು .

ವಿಶ್ವೇಶ್ವರಯ್ಯನವರು 1884 ರಲ್ಲಿ ಮುಂಬೈ ಪ್ರಾಂತ್ಯದ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಆಗಿ ಸೇವೆ ಪ್ರಾರಂಭಿಸಿದರು . ಖಾನೇಶ ಮತ್ತು ನಾಸಿಕ್ ಜಿಲ್ಲೆಗಳಲ್ಲಿ ಹರಿಯುತ್ತಿದ್ದ ಪಂಜ್ರಾ ನದಿಯ ನೀರಾವರಿ ಕಾಲುವೆಗೆ ತೂಬು ಮೇಲ್ದಾಲುವೆಯನ್ನು ನಿರ್ಮಿಸುವ ಕಾರ್ಯದಲ್ಲಿ ಯಶಸ್ಸು ಗಳಿಸಿ ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾದರು . ಮುಂಬೈ ಸರ್ಕಾರದ ಸೂಚನೆಯ ಮೇರೆಗೆ ಸಿಂದ್ ಪ್ರಾಂತ್ಯದ ಸುಕ್ಕೂರು ಪಟ್ಟಣಕ್ಕೆ ಕುಡಿಯುವ ನೀರಿನ ಪೂರೈಕೆಯ ಕಾರ್ಯವನ್ನು ಯಶಸ್ವಿಯಾಗಿ

Class 10 Kannada Bhagya Shilpigalu Summary Free | ಭಾಗ್ಯಶಿಲ್ಪಿಗಳು ಪಾಠದ ಸಾರಾಂಶ
Class 10 Kannada Bhagya Shilpigalu Summary Free | ಭಾಗ್ಯಶಿಲ್ಪಿಗಳು ಪಾಠದ ಸಾರಾಂಶ

Class 10 Kannada Bhagya Shilpigalu Summary pdf


ಪೂರೈಸಿದರು . ಅಂದಿನ ಮುಂಬೈ ಪ್ರಾಂತ್ಯದ ಗವರ್ನರ್ ಆಗಿದ್ದ ಲಾರ್ಡ್ ಸಂಡ್ ಹರ್ಸ್ಟ್ ಅವರು ಇವರನ್ನು ಮುಕ್ತಕಂಠದಿಂದ ಹಾಡಿ ಹೊಗಳಿದರು . ಮುಂದೆ ನಾಲ್ಕು ವರ್ಷಗಳ ಕಾಲ ಮುಂಬೈ ಪ್ರಾಂತ್ಯದ ಸ್ಯಾನಿಟರಿ ಎಂಜಿನಿಯರ್ ಆಗಿ ನೇಮಕಗೊಂಡರು .

ಈ ಹುದ್ದೆಗೆ ನೇಮಕವಾದ ಪ್ರಥಮ ಭಾರತೀಯರು ಎಂಬುದು ಗಮನಾರ್ಹ ಅಂಶ . ಸ್ವತಂತ್ರ ಚಿಂತನೆಯನ್ನು ಮೈಗೂಡಿಸಿಕೊಂಡಿದ್ದ ವಿಶ್ವೇಶ್ವರಯ್ಯ ಅವರು ವೈಜ್ಞಾನಿಕ ಅನ್ವೇಷಣೆಗಾಗಿ ಸ್ವಂತ ಖರ್ಚಿನಲ್ಲಿ ಜಪಾನ್ , ಯುರೋಪ್ ಮತ್ತು ಅಮೇರಿಕ ದೇಶಗಳಿಗೆ ಭೇಟಿ ನೀಡಿದರು .

ಪುಟಿಯುವ ಚೈತನ್ಯ , ನಾಳೆ ಮಾಡುವುದನ್ನು ಇಂದೇ ಮಾಡು , ಇಂದು ಮಾಡುವುದನ್ನು ಈಗಲೇ ಮಾಡಬೇಕೆಂಬ ತುಡಿತ ಅವರದಾಗಿತ್ತು . ವಿಶ್ವೇಶ್ವರಯ್ಯ ಅವರು ಮೂರು ವರ್ಷಗಳ ಕಾಲ ಮೈಸೂರು ಸಂಸ್ಥಾನದಲ್ಲಿ ಮುಖ್ಯ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸಿದರು . ಕಾವೇರಿ ನದಿಗೆ ಕನ್ನಂಬಾಡಿ ಜಲಾಶಯ ನಿರ್ಮಾಣ ಯೋಜನೆ ಪ್ರಾರಂಭ , ರೈಲು ಮಾರ್ಗಗಳ ವಿಸ್ತರಣೆಗೆ ಕ್ರಮ ತಾಂತ್ರಿಕ ಶಿಕ್ಷಣದ ಅಭಿವೃದ್ಧಿಗೆ ಯೋಜನೆ , ಮಾರಿಕಣವೆ ಜಲಾಶಯದ ನೀರು ಹಂಚಿಕೆ ಪುನರ್ವ್ಯವಸ್ಥೆ , ಸಣ್ಣ ನೀರಾವರಿ ವ್ಯವಸ್ಥೆಗೆ ಮರುಜೀವ , ಇವೆಲ್ಲ ಅಭಿವೃದ್ಧಿ ಕಾರ್ಯಗಳ ಕುರುಹು .

ಇವುಗಳಿಗೂ ಮಿಗಿಲಾಗಿ ಇಲಾಖೆಯಲ್ಲಿ ಕ್ರಮಬದ್ಧ ಕಾರ್ಯನೀತಿ , ಸಂಸ್ಥಾನದಲ್ಲಿ ಶಿಸ್ತಿನ ಆಡಳಿತ , ಜನರಿಗೆ ಆಧುನಿಕ ಜೀವನ ವ್ಯವಸ್ಥೆಗೆ ಪೂರ್ವಸಿದ್ಧತೆ ಹೇಗಿರಬೇಕೆಂಬ ತಿಳುವಳಿಕೆ ನೀಡಿದ್ದು , ಇವು ಇವರು ಉಂಟುಮಾಡಿದ ಆಡಳಿತ ಮತ್ತು ನೈತಿಕ ಪ್ರಭಾವಗಳು . ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರು ವಿಶ್ವೇಶ್ವರಯ್ಯ ಅವರನ್ನು ದಿವಾನರನ್ನಾಗಿ ನೇಮಿಸುವ ಮೂಲಕ ಹೊಸ ಮನ್ವಂತರಕ್ಕೆ ಅಡಿಪಾಯ ಹಾಕಿದರು . ಆಡಳಿತದಲ್ಲಿ ಹೊಸ ಮಾದರಿಯನ್ನು ಅನುಷ್ಠಾನಗೊಳಿಸಿ ಕಚೇರಿಯ ಕೆಲಸ ಕಾರ್ಯಗಳಲ್ಲಿ ಸುಧಾರಣೆ ತಂದರು .

ಅಷ್ಟೇ ಅಲ್ಲದೆ ದಕ್ಷತೆ ಮತ್ತು ಪ್ರಾಮಾಣಿಕತೆಗೆ ಒತ್ತು ನೀಡಿದರು . ಆದರ್ಶ ಪುರುಷರೊಬ್ಬರು ದಿವಾನರಾದದ್ದು ಮೈಸೂರು ಸಂಸ್ಥಾನದ ಪುಣ್ಯ ವಿಶೇಷವೇ ಸರಿ ಎಂದು ಜನರು ಹಾಡಿ ಹೊಗಳಿದರು . ಗಾಂಧೀಜಿ ಅವರು ಮೈಸೂರಿನ ಆಡಳಿತ ರೀತಿಯನ್ನು ಮುಕ್ತಕಂಠದಿಂದ ಹೊಗಳಿದರು , ಇದರಿಂದ ‘ ಮೈಸೂರು ಮಾದರಿ ‘ ಎಂಬ ಹೊಸ ಆಡಳಿತ ಮಾದರಿ ಜನ್ಮತಾಳಿತು . ವಿಶ್ವೇಶ್ವರಯ್ಯ ಅವರು ಆಧುನಿಕ ಶಿಕ್ಷಣವೇ ಎಲ್ಲ ಸಮಸ್ಯೆಗಳಿಗೂ ಪರಮೋಚ್ಚ ಪರಿಹಾರವೆಂದು ನಂಬಿದ್ದರು .

ಶಿಕ್ಷಣ ಸಂಜೀವಿನಿ ಎಂಬುದನ್ನರಿತಿದ್ದ ಅವರು ಶಿಕ್ಷಣದ ವಿವಿಧ ಯೋಜನೆಗಳನ್ನು ರೂಪಿಸಿದರು . ಅದಕ್ಕಾಗಿ 1913 ರಲ್ಲಿ ಪ್ರಾಥಮಿಕ ಶಿಕ್ಷಣ ನಿಬಂಧನೆಯನ್ನು ಜಾರಿಗೆ ತಂದರು . ಪ್ರೌಢಶಿಕ್ಷಣ ಶಾಲೆಗಳು ಮದ್ರಾಸ್ ವಿಶ್ವವಿದ್ಯಾನಿಲದ ನಿಯಂತ್ರಣಕ್ಕೆ ಒಳಪಟ್ಟಿದ್ದವು . ಇದನ್ನು ಬದಲಿಸಿ ಸಂಸ್ಥಾನವೇ ಪ್ರತ್ಯೇಕವಾದ ಪೌಢಶಿಕ್ಷಣದ ಅಂತಿಮ ಪರೀಕ್ಷೆ ನಡೆಸುವ ಯೋಜನೆಯನ್ನು ಆರ್ಥಿಕ ಪರಿಷತ್ತಿನ ಮೂಲಕ ರೂಪುಗೊಳಿಸಿದರು .

Class 10 Kannada Bhagya Shilpigalu Summary

ಮೈಸೂರು ವಿಶ್ವವಿದ್ಯಾನಿಲಯದ ಸ್ಥಾಪನೆ ಇವರ ದೂರದೃಷ್ಟಿಯ ಮತ್ತೊಂದು ಫಲಶ್ರುತಿ . “ ಶಿಕ್ಷಣಕ್ಕಾಗಿ ಶಿಕ್ಷಣವಿರಬೇಕು . ಅದು ಕೆಲವೇ ಜನರ ಸೊತ್ತಾಗದೆ ಪ್ರಗತಿಪರ ರಾಜ್ಯದಲ್ಲಿ ಎಲ್ಲರ ಆಜನ್ಮಸಿದ್ಧ ಹಕ್ಕಾಗಬೇಕು ” ಎಂಬುದನ್ನು ಮನಗಂಡ ಇವರು ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣಕ್ಕೆ ಆದ್ಯತೆ ನೀಡಿದರು . ಇದಕ್ಕಾಗಿಯೇ ಬೆಂಗಳೂರಿನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಶಾಲೆ , ಮೈಸೂರಿನಲ್ಲಿ ಚಾಮರಾಜೇಂದ್ರ ತಾಂತ್ರಿಕ


ಸಂಸ್ಥೆಗಳನ್ನು ಪ್ರಾರಂಭಿಸಿದರು . ಮಹಿಳಾ ಶಿಕ್ಷಣದ ಬಗ್ಗೆ ಸಹಾನುಭೂತಿ ಹೊಂದಿದ್ದ ಇವರು ಗೃಹಶಿಕ್ಷಣ ಶಾಲಿಗಳನ್ನು ಸ್ಥಾಪಿಸಿದರು . ವಿದ್ಯಾರ್ಥಿವೇತನವನ್ನು ಕೊಡುವುದರ ಮೂಲಕ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುವು ಮಾಡಿಕೊಟ್ಟರು . ಇದಲ್ಲದೆ ಭಾಷೆ , ಸಾಹಿತ್ಯ ಮತ್ತು ಸಂಶೋಧನೆಗಳಿಗೂ ಪ್ರೋತ್ಸಾಹ ನೀಡಿದರು . ಓದುವ ಹವ್ಯಾಸ ಬೆಳೆಸುವ ದೃಷ್ಟಿಯಿಂದ ಗ್ರಂಥಾಲಯಗಳ ವ್ಯವಸ್ಥೆಗೆ ಆಸ್ತಿಭಾರ ಹಾಕಿದರು .

Class 10 Kannada Bhagya Shilpigalu Summary notes

ಏಕೀಕೃತ ಕರ್ನಾಟಕದ ರಚನೆ ಮತ್ತು ಕನ್ನಡ ಭಾಷೆ ಹಾಗೂ ಸಾಹಿತ್ಯಗಳ ಬಗ್ಗೆ ಸಾರ್ವಜನಿಕರಲ್ಲಿ ಉಂಟಾಗಿದ್ದ ಒಲವನ್ನು ಮನಗಂಡು ‘ ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದ್ದು ಇವರ ಕಾಲದ ಮತ್ತೊಂದು ಮಹತ್ವದ ಸಾಧನೆ . ವಿಶ್ವೇಶ್ವರಯ್ಯ ಅವರು ಕೈಗಾರಿಕೆಗೆ ಅಗ್ರ ಪ್ರಾಶಸ್ಯ ನೀಡಿದ್ದರು . ‘

Class 10 Kannada Bhagya Shilpigalu Summary Free | ಭಾಗ್ಯಶಿಲ್ಪಿಗಳು ಪಾಠದ ಸಾರಾಂಶ
Class 10 Kannada Bhagya Shilpigalu Summary Free | ಭಾಗ್ಯಶಿಲ್ಪಿಗಳು ಪಾಠದ ಸಾರಾಂಶ

Class 10 Kannada Bhagya Shilpigalu Summary karnataka

ಕೈಗಾರಿಕೀಕರಣ ಇಲ್ಲವೇ ಅವನತಿ ‘ ಎಂಬ ಘೋಷಣೆ ಮಾಡಿದರು . ಭದ್ರಾವತಿಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ಸ್ಥಾಪಿಸುವುದು ಅವರ ಮಹತ್ವದ ಗುರಿಯಾಗಿತ್ತು . ಇದಲ್ಲದೆ ಹೆಂಚಿನ ಕಾರ್ಖಾನೆ , ಮೂಳೆ ಮತ್ತು ಗೊಬ್ಬರ ತಯಾರಿಕಾ ಸ್ಥಾವರ , ಸಕ್ಕರೆ ಕಾರ್ಖಾನೆ , ಔಷಧಿ ತಯಾರಿಕಾ ಘಟಕ , ಗಂಧದ ಎಣ್ಣೆ , ಬೆಂಕಿಕಡ್ಡಿ ಹಾಗೂ ಕಾಗದದ ಕಾರ್ಖಾನೆಗಳು ಸ್ಥಾಪಿತವಾದವು . ಸೋಪು ಹಾಗು ಲೋಹ ತಯಾರಿಕೆ , ಕಲೆ ಮತ್ತು ಕರಕುಶಲ ಡಿಪೋ , ಕೃಷ್ಣರಾಜೇಂದ್ರ ಬಟ್ಟೆ ಗಿರಣಿ , ಕಾಗದದ ತಿರುಳು , ರಟ್ಟು , ಪೆನ್ಸಿಲ್ , ಬೆಂಕಿಕಡ್ಡಿ ಮತ್ತು ಪೀಠೋಪಕರಣಗಳ ತಯಾರಿಕಾ ಘಟಕಗಳು -ಹೀಗೆ ನೂರಾರು ಕೈಗಾರಿಕೆಗಳು ಪ್ರಾರಂಭಗೊಂಡವು .

ರಾಜ್ಯದ ಆರ್ಥಿಕ ಚಟುವಟಿಕೆಗಳಿಗೆ ಭದ್ರ ಬುನಾದಿ ಹಾಕುವ ಉದ್ದೇಶದಿಂದ ಹಣಕಾಸು ನೀತಿಯಲ್ಲಿ ಮಾರ್ಪಾಡು ಮಾಡಿದರು . ಇದಕ್ಕಾಗಿ 1913 ರಲ್ಲಿ ಮೈಸೂರು ಬ್ಯಾಂಕನ್ನು ಸ್ಥಾಪಿಸಿದರು . ರೈತರು ಹಾಗೂ ಕರಕುಶಲ ಕೆಲಸಗಾರರಿಗೆ ಸಾಲದ ಸೌಲಭ್ಯ ನೀಡಲು ಸಹಕಾರಿ ಕ್ಷೇತ್ರವನ್ನು ಬಲವರ್ಧನೆಗೊಳಿಸಿದರು . ಗೊಮ್ಮಟ ವ್ಯಕ್ತಿತ್ವದ ದಾರ್ಶನಿಕ ನೇತಾರರಾಗಿ ‘ ಆಡು ಮುಟ್ಟದ ಸೊಪ್ಪಿಲ್ಲ ‘ ಎಂಬ ಗಾದೆ ಮಾತಿನಂತೆ ಬೆಳೆದ ವಿಶ್ವೇಶ್ವರಯ್ಯ ಅವರಿಗೆ ಬ್ರಿಟಿಷ್ ಸರ್ಕಾರ ‘ ಸರ್ ‘ ಪದವಿಯನ್ನು ನೀಡಿ ಗೌರವಿಸಿತು .

Class 10 Kannada Bhagya Shilpigalu Summary sslc

ಅವರ ಸಾಧನೆಯನ್ನು ಗುರುತಿಸಿ ಭಾರತ ಸರ್ಕಾರ ದೇಶದ ಅತ್ಯುನ್ನತ ‘ ಭಾರತರತ್ನ ‘ ಪ್ರಶಸ್ತಿಯನ್ನು ಸಲ್ಲಿಸಿತು . ಸೆಪ್ಟೆಂಬರ್ 15 , 1960 ರಂದು ಶತಮಾನೋತ್ಸವ ಅಭಿನಂದನೆ ‘ ಎಂ.ವಿ ‘ , ಅಭಿನಂದನಾ ಗ್ರಂಥವನ್ನು ಪ್ರಕಟಿಸಲಾಯಿತು . 102 ವರ್ಷಗಳ ತುಂಬುಜೀವನ ಪೂರೈಸಿದ ಸರ್ ಎಂ.ವಿ. ಅವರು 1962 ರಲ್ಲಿ ಇಹಲೋಕ ತ್ಯಜಿಸಿದರು . ಇವರ ಹುಟ್ಟು ಹಬ್ಬದ ನೆನಪಿಗಾಗಿ ಇಂದಿಗೂ ‘ ಎಂಜಿನಿಯರ್‌ ದಿನಾಚರಣೆ’ಯನ್ನು ಮಾಡಲಾಗುತ್ತಿದೆ .

ಇನ್ನಷ್ಟು ಓದಿ

Leave a Reply

Your email address will not be published. Required fields are marked *