ಸರ್‌.ಎಂ. ವಿಶ್ವೇಶ್ವರಯ್ಯನವರ ಬಗ್ಗೆ | Visvesvaraya Information in Kannada | SSLC 10TH NOTES

Visvesvaraya Information in Kannada | ಸರ್‌.ಎಂ. ವಿಶ್ವೇಶ್ವರಯ್ಯನವರ ಬಗ್ಗೆ | SSLC 10TH NOTES

visvesvaraya information in kannada, ಸರ್‌.ಎಂ. ವಿಶ್ವೇಶ್ವರಯ್ಯನವರ ಬಗ್ಗೆ, SSLC 10TH NOTES, Sir M Vishweshwaraiah Prose, about sir m visvesvaraya , ಸರ್ ಎಂ ವಿಶ್ವೇಶ್ವರಯ್ಯ ನವರ ಜೀವನ ಚರಿತ್ರೆ

Visvesvaraya Information in Kannada

ಸರ್ ಎಂ.ವಿ ಎಂದು ಜನಪ್ರಿಯರಾಗಿದ್ದ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ರವರು, ಭಾರತದ ಗಣ್ಯ ಅಭಿಯಂತರರಲ್ಲಿ ಒಬ್ಬರು. ಇವರು 1912 ರಿಂದ 1918ರವರೆಗೆ ಮೈಸೂರು ಸಂಸ್ಥಾನದ ದಿವಾನರಾಗಿದ್ದವರು. ಇವರ ಹುಟ್ಟಿದ ದಿನವನ್ನು ಭಾರತ ದೇಶದಾದ್ಯಂತ ಅಭಿಯಂತರ ದಿನ ಎಂದು ಆಚರಿಸುತ್ತಾರೆ.

ಸರ್ ಎಂ ವಿಶ್ವೇಶ್ವರಯ್ಯ ಜೀವನ ಚರಿತ್ರೆ ಮತ್ತು ಸಾಧನೆ

Visvesvaraya Information in Kannada Top 1 Essay For Free  | ಸರ್ ಎಂ ವಿಶ್ವೇಶ್ವರಯ್ಯ ಅವರ ಜೀವನ ಚರಿತ್ರೆ
Visvesvaraya Information in Kannada Top 1 Essay For Free | ಸರ್ ಎಂ ವಿಶ್ವೇಶ್ವರಯ್ಯ ಅವರ ಜೀವನ ಚರಿತ್ರೆ

Vishweshwaraiah Jeevana Charitre in Kannada

ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ :

ಬ್ರಿಟೀಷ್ ಸರ್ಕಾರ ವಿಶ್ವೇಶ್ವರಯ್ಯ ಅವರಿಗೆ ಯಾವ ಪದವಿಯನ್ನು ನೀಡಿ ಗೌರವಿಸಿದೆ ?

ಉ . ‘ ಸರ್ ‘ ಪದವಿಯನ್ನು ನೀಡಿ ಗೌರವಿಸಿದೆ .

ವಿಶ್ವೇಶ್ವರಯ್ಯ ಅವರನ್ನು ದಿವಾನರಾಗಿ ನೇಮಿಸಿದವರು ಯಾರು ?

ಉ . ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರು .

ವಿಶ್ವೇಶ್ವರಯ್ಯ ಅವರು ಹುಟ್ಟು ಹಬ್ಬದ ನೆನಪಿಗಾಗಿ ಯಾವ ದಿನಾಚರಣೆಯನ್ನು ಮಾಡಲಾಗುತ್ತಿದೆ ?

ಉ . ಇಂಜಿನಿಯರ್‌ ದಿನಾಚರಣೆ ‘ ಯನ್ನು ಮಾಡಲಾಗುತ್ತದೆ.

ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ : Visvesvaraya Information in Kannada Notes

ಶಿಕ್ಷಣದ ಬಗ್ಗೆ ವಿಶ್ವೇಶ್ವರಯ್ಯ ಅವರು ಏನೆಂದು ಹೇಳಿದ್ದಾರೆ ?

ಉ . “ ಶಿಕ್ಷಣಕ್ಕಾಗಿ ಶಿಕ್ಷಣವಿರಬೇಕು ಅದು ಕೆಲವೇ ಜನರ ಸೊತ್ತಾಗದೆ ಪ್ರಗತಿಪರ ರಾಜ್ಯದಲ್ಲಿ ಎಲ್ಲರ ಆಜನ್ಮ ಸಿದ್ಧ ಹಕ್ಕಾಗಬೇಕು ಎಂದಿದ್ದಾರೆ .

ನೆಹರೂ ಅವರು ಸರ್ . ಎಂ . ವಿಶ್ವೇಶ್ವರಯ್ಯ ಅವರ ಬಗ್ಗೆ ಏನೆಂದು ಹೇಳಿದ್ದಾರೆ ?

ಉ . “ ದುರಾದೃಷ್ಟವಶಾತ್ , ಭಾರತೀಯರಾದ ನಾವು ಹೆಚ್ಚು ಮಾತನಾಡುವವರು ಮತ್ತು ನುಡಿದಂತೆ ನಡೆಯಲಾರದವರೆಂಬ ದೂಷಣೆಗೆ ಒಳಗಾಗಿದ್ದೇವೆ . ತಾವು ಈ ಮಾತಿಗೆ ಬಹುದೊಡ್ಡ ರೀತಿಯಲ್ಲಿ ಹೊರತಾಗಿದ್ದೀರಿ . ತಾವು ಕಡಿಮೆ ಮಾತನಾಡಿದ್ದೀರಿ . ಹೆಚ್ಚು ಕೆಲಸ ಮಾಡಿದ್ದೀರಿ ಅದನ್ನು ನಾವು ತಮ್ಮಿಂದ ಕಲಿಯೋಣ ” ಎಂದು ನೆಹರು ಹೇಳಿದ್ದಾರೆ .

ಹಣಕಾಸು ನೀತಿಯಲ್ಲಿ ವಿಶ್ವೇಶ್ವರಯ್ಯ ಅವರು ಮಾಡಿದ ಮಾರ್ಪಾಡುಗಳಾವುವು ?

Visvesvaraya Information in Kannada essay

ಉ . ರಾಜ್ಯದ ಆರ್ಥಿಕ ಚಟುವಟಿಕೆಗಳಿಗೆ ಭದ್ರ ಬುನಾದಿ ಹಾಕುವ ಉದ್ದೇಶದಿಂದ ಹಣಕಾಸು ನೀತಿಯಲ್ಲಿ ಮಾರ್ಪಾಡು ಮಾಡಿದರು .

ಇದಕ್ಕಾಗಿ 1913 ರಲ್ಲಿ ಮೈಸೂರು ಬ್ಯಾಂಕನ್ನು ಸ್ಥಾಪಿಸಿದರು . ಅನಂತರ ಉಳಿತಾಯ ಬ್ಯಾಂಕ್‌ಗಳು ಅಸ್ತಿತ್ವಕ್ಕೆ ಬಂದವು . ಕೈಗಾರಿಕೆಗಳ ಅಭಿವೃದ್ಧಿಗೆ ಫೀಡರ್‌ ಬ್ಯಾಂಕ್‌ ಹಾಗೂ ಕೈಗಾರಿಕಾ ಹೂಡಿಕೆ ಮತ್ತು ಅಭಿವೃದ್ಧಿ ನಿಧಿಗಳು ರಚಿತಗೊಂಡವು . ಸಾರ್ವಜನಿಕ ಜೀವ ವಿಮಾ ಯೋಜನೆ ಜಾರಿಗೆ ತಂದರು .

ರೈತರಿಗೆ ಹಾಗೂ ಕರಕುಶಲ ಕೆಲಸಗಾರರಿಗೆ ಸಾಲದ ಸೌಲಭ್ಯ ನೀಡಲು ಸಹಕಾರಿ ಕ್ಷೇತ್ರವನ್ನು ಬಲವರ್ಧನೆಗೊಳಿಸಿದರು .

ಪ್ರಾಂತೀಯ ಸಹಕಾರಿ ಬ್ಯಾಂಕ್‌ಗಳನ್ನು ಸ್ಥಾಪಿಸಿದರು . ರಾಜ್ಯದ ಆಸ್ತಿಯನ್ನು ಹೆಚ್ಚಿಸಿ ಆದಾಯ ತರುವುದರ ಮೂಲಕ ಅಭಿವೃದ್ಧಿ ಕಾವ್ಯಗಳ ಪ್ರಭಾವವನ್ನು ಅಳೆಯಲು ಅನುಕೂಲವಾಗುವಂತೆ ಆಯವ್ಯಯದಲ್ಲಿ ಹೊಸ ದೃಷ್ಟಿ ಕೋನವನ್ನು ಕಂಡುಕೊಂಡರು .

ಖಂಡದಲ್ಲಿ ಯಾವ ಸಂಸ್ಥಾನವೂ ಕಾಣದ ಅಭಿವ್ಯಕ್ತಿಯನ್ನು ಮೈಸೂರು ರಾಜ್ಯವು ಕಂಡುದರಿಂದ ಮೈಸೂರು ಮಾದರಿ ಮೈಸೂರು ರಾಜ್ಯ ಎಂಬ ಕೀರ್ತಿ ಪಡೆಯಿತು .

Visvesvaraya Information in Kannada Top 1 Essay For Free  | ಸರ್ ಎಂ ವಿಶ್ವೇಶ್ವರಯ್ಯ ಅವರ ಜೀವನ ಚರಿತ್ರೆ
Visvesvaraya Information in Kannada Top 1 Essay For Free | ಸರ್ ಎಂ ವಿಶ್ವೇಶ್ವರಯ್ಯ ಅವರ ಜೀವನ ಚರಿತ್ರೆ

ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ : Visvesvaraya Information in Kannada 10th

ವಿಶ್ವೇಶ್ವರಯ್ಯ ಅವರು ಮೈಸೂರು ದಿವಾನರಾಗಿ ಸಲ್ಲಿಸಿದ ಸೇವೆಯನ್ನು ಕುರಿತು ಬರೆಯಿರಿ .

ಉ . ವಿಶ್ವೇಶ್ವರಯ್ಯನವರು ದಿವಾನರಾಗಿದ್ದಾಗ ಆಡಳಿತದಲ್ಲಿ ಹೊಸ ಮಾದರಿಯನ್ನು ಅನುಷ್ಟಾನಗೊಳಿಸಿ ಕಛೇರಿ ಕೆಲಸ ಕಾರ್ಯಗಳಲ್ಲಿ ಸುಧಾರಣೆ ತಂದರು .

ಅಲ್ಲದೆ ದಕ್ಷತೆ ಮತ್ತು ಪ್ರಾಮಾಣಿಕತೆಗೆ ಒತ್ತು ನೀಡಿದರು . ಸಂಸ್ಥಾನದಲ್ಲಿ ಸ್ಥಳೀಯ ಮಟ್ಟದಲ್ಲಿ ಕೇಂದ್ರೀಕೃತವಾಗಿದ್ದ ನ್ಯಾಯಾಂಗ ಮತ್ತು ಕಾರ್ಯಾಂಗಗಳ ಅಧಿಕಾರವನ್ನು ಪ್ರತ್ಯೇಕಗೊಳಿಸಿದರು . ರಾಜ್ಯ ಪ್ರವಾಸ ಮಾಡಿ ಅಜಮಾಯಿಷಿ ಕಾರ್ಯ ನಡೆಸಿದರು .

ಸಮರ್ಥ ಕಾರ್ಯ ನಿರ್ವಹಣೆಗಾಗಿ ಸಮಿತಿ ರಚನೆಗೆ ಪ್ರಾಶಸ್ತ್ರ ನೀಡಿದರು . ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿದರು .

ಗಾಂಧೀಜಿಯವರು ಮೈಸೂರಿನ ಆಡಳಿತ ರೀತಿಯನ್ನು ಮುಕ್ತ ಕಂಠದಿಂದ ಹೊಗಳಿದರು . ಶಿಕ್ಷಣ ಕ್ಷೇತ್ರ ಬೆಳೆಸಿದರು . ಶಾಲಾ ಕಾಲೇಜು , ಕನ್ನಡ ಸಾಹಿತ್ಯ ಪರಿಷತ್‌ ಸ್ಥಾಪನೆ , ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ , ಕಾಗದದ ಕಾರ್ಖಾನೆ , ಸಕ್ಕರೆ ಕಾರ್ಖಾನೆ , ಔಷಧಿ , ಸೋಪು , ಬಟ್ಟೆ ಹೀಗೆ ನೂರಾರು ಕೈಗಾರಿಕೆಗಳನ್ನು ಸ್ಥಾಪಿಸಿದರು .

ಆರ್ಥಿಕ ಕ್ಷೇತ್ರದಲ್ಲಿ ಮೈಸೂರು ಬ್ಯಾಂಕ್ ಸ್ಥಾಪಿಸಿದರು . ಮೈಸೂರು ಅರಮನೆ , ಟೌನ್ ಹಾಲ್ ಆಸ್ಪತ್ರೆ , ಲಲಿತ ಮಹಲ್ , ಮುಂತಾದವು ನಿರ್ಮಾಣವಾದುವು ಹೀಗೆ ಮೈಸೂರನ್ನು ಮಾದರಿ ರಾಜಧಾನಿಯಾಗಿಸಿದರು .

Visvesvaraya Information in Kannada pdf

ಶಿಕ್ಷಣ ಕ್ಷೇತ್ರಕ್ಕೆ ವಿಶ್ವೇಶ್ವರಯ್ಯ ಅವರು ಸಲ್ಲಿಸಿದ ಕೊಡುಗೆಯನ್ನು ತಿಳಿಸಿ .

ಉ . ವಿಶ್ವೇಶ್ವರಯ್ಯ ನವರು ಆಧುನಿಕ ಶಿಕ್ಷಣವೇ ಎಲ್ಲ ಸಮಸ್ಯೆಗಳಿಗೂ ಪರಮೋಚ್ಛ ಪರಿಹಾರವೆಂದು ನಂಬಿದ್ದರು . ಶಿಕ್ಷಣ ಸಂಜೀವಿನಿ ಎಂದು ತಿಳಿದು ವಿವಿಧ ಯೋಜನೆಗಳನ್ನು ರೂಪಿಸಿದರು .

ಅದಕ್ಕಾಗಿ 1913 ರಲ್ಲಿ ಪ್ರಾಥಮಿಕ ಶಿಕ್ಷಣ ನಿಬಂಧನೆಯನ್ನು ಜಾರಿಗೆ ತಂದರು . ಪ್ರೌಢ ಶಿಕ್ಷಣ ಶಾಲೆಗಳು ಮದ್ರಾಸ್ ವಿಶ್ವವಿದ್ಯಾಲಯದ ನಿಯಂತ್ರಣಕ್ಕೆ ಒಳಪಟ್ಟಿದ್ದವು .

ಇದನ್ನು ಬದಲಿಸಿ ಸಂಸ್ಥಾನವೇ ಪ್ರತ್ಯೇಕವಾದ ಪ್ರೌಢ ಶಿಕ್ಷಣದ ಅಂತಿಮ ಪರೀಕ್ಷೆ ನಡೆಸುವಂತೆ ಮಾಡಿದರು . ಮೈಸೂರು ವಿಶ್ವವಿದ್ಯಾನಿಲಯದ ಸ್ಥಾಪನೆ , ‘ ಶಿಕ್ಷಣಕ್ಕಾಗಿ ಶಿಕ್ಷಣವಿರಬೇಕು , ಅದು ಕೆಲವರ ಸ್ವತ್ತಾಗದೆ ಪ್ರಗತಿಪರ ರಾಜ್ಯದಲ್ಲಿ ಎಲ್ಲರ ಆಜನ್ಮ ಸಿದ್ಧ ಹಕ್ಕಾಗಬೇಕು ” ಎಂದಿದ್ದರು .

ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣಕ್ಕೆ ಆದ್ಯತೆ ನೀಡಿದರು . ಬೆಂಗಳೂರಿನಲ್ಲಿ ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆಗಳನ್ನು ಆರಂಭಿಸಿದರು .

ಮಹಿಳಾ ಶಿಕ್ಷಣದ ಬಗ್ಗೆ ಸಹಾನೂಭೂತಿ ಇದ್ದ ಇವರು ಗೃಹ ಶಿಕ್ಷಣ ಶಾಲೆಗಳನ್ನು ಸ್ಥಾಪಿಸಿದರು . ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಕೊಡಿಸಿದರು .

ಗ್ರಂಥಾಲಯ ಸ್ಥಾಪಿಸಿದರು . ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಿಸಿದರು . ಹೀಗೆ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಿದರು .

ವಿಶ್ವೇಶ್ವರಯ್ಯ ಅವರು ಮುಂಬೈ ಪ್ರಾಂತ್ಯದಲ್ಲಿ ………….ಆಗಿ ಸೇವೆ ಪ್ರಾರಂಭಿಸಿದರು

ಸಹಾಯಕ ಇಂಜಿನಿಯರ್

Visvesvaraya Information in Kannada Top 1 Essay For Free  | ಸರ್ ಎಂ ವಿಶ್ವೇಶ್ವರಯ್ಯ ಅವರ ಜೀವನ ಚರಿತ್ರೆ
Visvesvaraya Information in Kannada Top 1 Essay For Free | ಸರ್ ಎಂ ವಿಶ್ವೇಶ್ವರಯ್ಯ ಅವರ ಜೀವನ ಚರಿತ್ರೆ

FAQ

ಬ್ರಿಟೀಷ್ ಸರ್ಕಾರ ವಿಶ್ವೇಶ್ವರಯ್ಯ ಅವರಿಗೆ ಯಾವ ಪದವಿಯನ್ನು ನೀಡಿ ಗೌರವಿಸಿದೆ ?

ಸರ್ ‘ ಪದವಿಯನ್ನು ನೀಡಿ ಗೌರವಿಸಿದೆ .

ವಿಶ್ವೇಶ್ವರಯ್ಯ ಅವರು ಹುಟ್ಟು ಹಬ್ಬದ ನೆನಪಿಗಾಗಿ ಯಾವ ದಿನಾಚರಣೆಯನ್ನು ಮಾಡಲಾಗುತ್ತಿದೆ ?

ಇಂಜಿನಿಯರ್‌ ದಿನಾಚರಣೆ ‘ ಯನ್ನು ಮಾಡಲಾಗುತ್ತದೆ.

SSLC ಪಠ್ಯಕ್ರಮದ ಇನ್ನಷ್ಟುವಿಷಯಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಎಸ್ ಎಸ್ ಎಲ್ ಸಿ ಇಂಗ್ಲಿಷ್ ಮಾದರಿ ಪ್ರಶ್ನೆಪತ್ರಿಕೆ

ಶಬರಿ ಪಾಠದ ಪ್ರಶ್ನೋತ್ತರಗಳು

ಲಂಡನ್ ನಗರ ಪಾಠದ ಪ್ರಶ್ನೆ ಉತ್ತರಗಳು

ಪ್ರಬಂಧಗಳ ಪಟ್ಟಿ

ಇತರೆ ವಿಷಯಗಳನ್ನು ಓದಲು ಈ ಕೆಳಗೆ ಕಾಣಿಸುವ ವಿಷಯದಮೇಲೆ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *