London Nagara Notes in Kannada | ಲಂಡನ್ ನಗರ ಪಾಠದ ಪ್ರಶ್ನೆ ಉತ್ತರಗಳು

London Nagara Notes in Kannada | ಲಂಡನ್ ನಗರ ಪಾಠದ ಪ್ರಶ್ನೆ ಉತ್ತರಗಳು

London Nagara Notes in Kannada, ಲಂಡನ್ ನಗರ ಪಾಠದ ಪ್ರಶ್ನೆ ಉತ್ತರಗಳು, question answer, text book, pdf text book pdf download, ಲಂಡನ್ ನಗರ ನೋಟ್ಸ್

London Nagara Notes in Kannada


ಅ . ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ .

1. ಲಂಡನ್ನಿನ ರಸ್ತೆಗಳಲ್ಲಿ ನಿಲ್ಲುವುದನ್ನು ತಪ್ಪಿಸಲು ಮಾಡಿರುವ ವ್ಯವಸ್ಥೆಯೇನು ?

ಉ . ಭೂಗರ್ಭದಲ್ಲಿ ಸಂಚಾರ ನಿರ್ಮಿಸಿದ್ದಾರೆ .

2. ನೆಲ್ಸನ್ ರವರ ಮೂರ್ತಿಯಿರುವ ಸ್ಥಳದ ಹೆಸರೇನು ?

ಉ . ಟಾಫಲ್ಟಾರ್ ಸ್ಪೇರ್ ‘ ಎಂಬುದು .

3. ವೆಸ್ಟ್ ಮಿನ್‌ಸ್ಟರ್ ಅಬೆ ಯಾರ ಸ್ಮಾರಕವಾಗಿದೆ ?

ಉ . ಸಂತರು , ಸಾರ್ವಭೌಮರು , ಕವಿಗಳ ಸ್ಮಾರಕವಾಗಿದೆ .

4. ಆಂಗ್ಲ ಸಾಮ್ರಾಜ್ಯದ ವೈಭವ ಕಂಡು ಬರುವ ಓಣಿ ಯಾವುದು ?

ಉ . ಚೇರಿಂಗ್ ಕಾಸ್ ‘ ಎಂಬ ಓಣಿ ,

ಆ . ಕೊಟ್ಟಿರುವ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿರಿ .

1. ವೂಲವರ್ಥ ಅಂಗಡಿಯಲ್ಲಿ ಸಿಗುವ ವಸ್ತುಗಳಾವುವು ?

ಉ . ಬೂಟು , ಕಾಲುಚೀಲ , ಚಣ್ಣ , ಸಾಬೂನು , ಔಷಧ , ಪುಸ್ತಕ , ಅಡಿಗೆಯ ಪಾತ್ರೆ , ಇಲೆಕ್ಟಿಕ್ ದೀಪ ಸಾಮಾನು , ಫೋಟೋ , ಅಡವಿಯ ಹೂವು , ಯುದ್ಧ ಸಾಮಗ್ರಿ ಈ ಎಲ್ಲವೂ ದೊರೆಯುತ್ತವೆ .

London Nagara Notes in Kannada

2. ಲಂಡನ್ನಿನ ಹೆಣ್ಣು ಮಕ್ಕಳು ಯಾವ ಯಾವ ಕೆಲಸದಲ್ಲಿ ನಿಯುಕ್ತರಾಗಿರುತ್ತಾರೆ ?

ಉ . ಅಂಗಡಿಗಳಲ್ಲಿ , ಉಪಾಹಾರ ಗೃಹಗಳಲ್ಲಿ ಮಾಣಿಯಾಗಿ ಟೈಪಿಸ್ಟ್ ಆಗಿ , ಕಾರಕೂನರಾಗಿ ಸಿನಿಮಾ ಗೃಹಗಳಲ್ಲಿ ಜಾಗತೋರಿಸುವವರಾಗಿ ಕಾಲೇಜಿನಲ್ಲಿ ಸಿಪಾಯಿಣಿಯರಾಗಿ ಕೆಲಸ ಮಾಡುತ್ತಾರೆ .

3. ಟೊಪ್ಪಿಗೆಯ ವಿಶೇಷತೆಯನ್ನು ಲೇಖಕರು ಹೇಗೆ ದಾಖಲಿಸಿದ್ದಾರೆ ?

ಉ . ಇಲ್ಲಿಯ ಹೆಣ್ಣುಮಕ್ಕಳ ಟೊಪ್ಪಿಗೆಯನ್ನು ಕುತೂಹಲದಿಂದ ನೋಡಿದಾಗ ಒಂದು ಟೊಪ್ಪಿಗೆಯಂತೆ ಇನ್ನೊಂದಿರುವುದಿಲ್ಲ . ಸಿಕ್ಕಬಿದ್ದ ಪುಚ್ಚವಾದರೂ ಕನಿಷ್ಠ ಪಕ್ಷಕ್ಕೆ ಬೇರೆಯಾಗಿರುತ್ತದೆ . ಕೊಟ್ಟಾವಧಿ ಟೊಪ್ಪಿಗೆಗಳನ್ನು ಪರೀಕ್ಷಿಸಿದರೆ ಮನಗಾಣಬಹುದು . ಮನುಷ್ಯರಂತೆ ಟೊಪ್ಪಿಗೆಯೂ ಬಂದಂತೆ ಮತ್ತೊಂದು ಇಲ್ಲ ಎಂದಿದ್ದಾರೆ .

4. ಪೋಯೆಟ್ ಕಾರ್ನರ್ ನಲ್ಲಿ ಯಾವ ಯಾವ ಕವಿಗಳ ಸಮಾಧಿಗಳಿವೆ ?

ಉ . ಕಿಪ್ಲಿಂಗ್ , ಜಾನ್‌ಸನ್ , ಗೋಲ್ಡಸ್ಮಿತ್ , ಡಾಯ್ಸನ್ , ಮಾಕಾಲೆ , ಡಿಸೇಲಿ , ಬೆನ್‌ಜಾನ್ಸನ್ , ಹಾರ್ಡಿ ವೆರ್ಡ್ಸ್‌ವರ್ತ ಮುಂತಾದವರ ಸಮಾಧಿಗಳಿವೆ .

5. ಸಾಮ್ರಾಟರ ರಾಜ್ಯಾಭಿಷೇಕವಾಗುವ ಸಿಂಹಾಸನದ ಮೇಲಿರುವ ಕಲ್ಲು ಪಾಟಿಯ ವಿಶೇಷತೆಯೇನು

ಉ . ಸಾಮ್ರಾಟರ ರಾಜ್ಯಾಭಿಷೇಕವಾಗುವಾಗ ಅವರ ಸಿಂಹಾಸನದ ಮೇಲೆ ಒಂದು ಕಲ್ಲು ಪಾಟಿಯನ್ನು ಹಾಕುತ್ತಾರೆ . ಪಟ್ಟಾಭಿಷೇಕವಾಗುವಾಗ ಮಾತ್ರ ಸಾಮ್ರಾಟರು ಇದರ ಮೇಲೆ ಕೂಡ ಬೇಕು .

2 ನೇ ಎಡ್ವರ್ಡನು ಸ್ಕಾಟ್‌ಲೆಂಡಿನ ಅರಸರಿಂದ ಇದನ್ನು ಕಿತ್ತುಕೊಂಡು ಬಂದನಂತೆ . ಅಂದಿನಿಂದ ಎಲ್ಲ ಸಾಮಾಟರ ಅಭಿಷೇಕವು ಈ ಕಲ್ಲಿನ ಮೇಲೆಯೇ ಆಗಿದೆ .

ಇ . ಈ ಪ್ರಶ್ನೆಗಳಿಗೆ ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿ .

1. ಲಂಡನ್ ನಗರ ವೀಕ್ಷಣೆಯಲ್ಲಿ ಲೇಖಕರು ಗುರುತಿಸಿರುವ ವಿಶೇಷತೆಗಳೇನು ?

ಉ . ಲೇಖಕರು ಲಂಡನ್‌ನಗರಕ್ಕೆ ಪ್ರವಾಸ ಹೋದಾಗ ಅಲ್ಲಿನ ಅನುಭವಗಳನ್ನು ಕುರಿತು ಹೀಗೆ ಹೇಳಿದ್ದಾರೆ . ಅಲ್ಲಿ ಪ್ರಯಾಣ ದಟ್ಟಣೆಯನ್ನು ಕಡಿಮೆ ಮಾಡಲು ಭೂಗರ್ಭದಲ್ಲಿ ಟ್ರಾಮ್ ಬಸ್ಸುಗಳನ್ನು ಬಳಸುತ್ತಾರೆ . ವೊಲವರ್ಥ ಎಂಬ ಸ್ಟೇಷನರಿ ಅಂಗಡಿಗೆ ಹೋಗಿದ್ದರು . ಅಲ್ಲಿ ಅಗತ್ಯಕ್ಕೆ ಬೇಕಾದ ಎಲ್ಲಾ ವಸ್ತುಗಳೂ ದೊರೆಯುತ್ತವೆ ಎಂದು ಹೇಳಿದ್ದಾರೆ . ಸ್ಟಾಂಡ್‌ದಲ್ಲಿನ ಸ್ಯಾವೋಯ್ ಸಿಂಪಿಗಳಲ್ಲಿಗೆ ಭೇಟಿ ನೀಡಿದ್ದರು . ಲಂಡನ್ ನಗರದಲ್ಲಿ ಎಲ್ಲಾ ಕಡೆ ಅಂದರೆ ಅಂಗಡಿ , ಹೋಟೆಲ್ , ಟೈಪಿಸ್ಟ್ , ಕಾರಕೂನ , ಸಿನಿಮಾ ಗೃಹ ಹೀಗೆ ಎಲ್ಲಾ ಕಡೆಯಲ್ಲೂ ಹೆಣ್ಣು ಮಗಳೇ ಕೆಲಸ ಮಾಡುತ್ತಿರುವರೆಂದಿದ್ದಾರೆ . ಅಲ್ಲಿರುವ ಇಂಡಿಯಾ ಆಫೀಸ್ ತುಂಬಾ ಚೆನ್ನಾಗಿದೆ . ಹಾಗೆ ಆಂಗ್ಲರ

London Nagara Notes in Kannada

ಸಾಮ್ರಾಜ್ಯದ ವೈಭವ ನೋಡಲು ಚೇರಿಂಗ್ ಕ್ರಾಸ್ ಎಂಬ ಓಣಿಗೆ ಹೋಗಿದ್ದರು . ಅಲ್ಲಿನ ಬೀದಿಬೀದಿಗಳಲ್ಲಿ ಮೂಲೆ ಮೂಲೆಗಳಲ್ಲಿ ಇತಿಹಾಸ ಪ್ರಸಿದ್ಧ ವ್ಯಕ್ತಿಗಳ ಕೆತ್ತನೆ ಇದೆ . ಟ್ರಾಫಾರ್ ಸೈರ್ ಎಂಬಲ್ಲಿ ನೆಲ್ಸನ್ ಮೂರ್ತಿ ನೋಡಿದರು . ಹೆಣ್ಣುಮಕ್ಕಳು ಹಾಕಿಕೊಳ್ಳುವ ವೈವಿಧ್ಯಮಯ ಟೋಪಿ ಬಗ್ಗೆ ತಿಳಿಸಿದ್ದಾರೆ . ವೆಸ್ಟ್ ಮಿನ್‌ಸ್ಟರ್ ಅಬೆ ಪ್ರಾರ್ಥನಾ ಮಂದಿರ ಪೊಯೆಟ್ಸ್ ಕಾರ್ನ‌್ರನಲ್ಲಿನ ಪ್ರಸಿದ್ಧ ಕವಿ , ಲೇಖಕರ ಮೂರ್ತಿಗಳನ್ನು ಕಂಡರು . ಹಾಗೇ ವಿಜ್ಞಾನಿಗಳ ಪರಿಚಯ , ಅರಮನೆ , ಸಿಂಹಾಸನದ ವೈಶಿಷ್ಟ್ಯ ಹೀಗೆ ಇದ್ದ ಕೆಲವು ದಿನಗಳಲ್ಲಿ ಅಪಾರ ಜ್ಞಾನ ಅನುಭವ ಪಡೆದನೆಂದು ಹೇಳಿದ್ದಾರೆ .

2. ವೆಸ್ಟ್ ಮಿನ್ಸ್ಟರ್ ಅಬೆ ! ಪ್ರಾರ್ಥನಾ ಮಂದಿರ ಒಂದು ವಿಶೇಷ ಸ್ಮಾರಕ ವಿವರಿಸಿ .

ಉ , ವೆಸ್ಟ್ ಮಿನ್‌ಸ್ಟರ್ ಅಬೆ ! ಇದೊಂದು ಪ್ರಾರ್ಥನಾ ಮಂದಿರ . ಒಂದು ಸಾವಿರದ ವರ್ಷದಷ್ಟು ಹಳೆಯ ಕಟ್ಟಡ ಇಂದಿಗೂ ಅಚ್ಚಳಿಯದೆ ಉಳಿದಿದೆ . ಇಲ್ಲಿ ಸಂತರು , ಸಾರ್ವಭೌಮರು , ಕವಿ ಮುಂಗವರು ಹೀಗೆ ಸತ್ತವರ ಸ್ಮಾರಕವಾಗಿದೆ . ಇಂಥ ಮಂದಿರ ಜಗತ್ತಿನಲ್ಲೆಲ್ಲೂ ಇಲ್ಲ . ( ಮರ್ತೃತ್ವವೇ ಎಷ್ಟು ಗೋರಿಗುಂಪುಗಳು ಇಲ್ಲಿವೆ ನೋಡಿ ಅಂಜು ) ಎಂದು 300 ವರ್ಷಗಳ ಹಿಂದೆ ಬ್ಯೂಮಾಂಟ್ ಎಂಬ ಕವಿ ಹಾಡಿದ್ದಾನೆ . ಗೋಲ್ಡ್ ಸ್ಟಿಕ್ ಹಾಗೂ ಎಡಿಸನ್ ಎಂಬ ಪ್ರಖ್ಯಾತ ಸಾಹಿತಿಗಳು ( ವೆಸ್ಟ್ ಮಿನ್ಸ್ಟರ್ ಅಭಿಯ ಸಂದರ್ಶನ ) ಎಂಬ ವಿಷಯದ ಬಗ್ಗೆ ಉತ್ತಮವಾದ ನಿಬಂಧಗಳನ್ನು ಬರೆದಿದ್ದಾರೆ . ಇಂದಿಗೂ ಇದು ಕಣ್ಣಿಗರ ಸ್ಪೂರ್ತಿಯ ತವರು ಮನೆಯಾಗಿದೆ .

ಸಂದರ್ಭದೊಡನೆ ಸ್ವಾರಸ್ಯವನ್ನು ವಿವರಿಸಿ .

1. “ ನಿಮ್ಮ ದೇಶದ ಗೌರವವನ್ನು ಕಾಯಿರಿ ! ಇದು ದೊಡ್ಡದಾದ ರಾಷ್ಟ್ರ

ಉ . ಈ ವಾಕ್ಯವನ್ನು ವಿ.ಕೃ ಗೋಕಾಕ್ ಬರೆದಿರುವ ಲಂಡನ್ ನಗರ ಎಂಬ ಪಾಠದಿಂದ ಆರಿಸಿದೆ . ಟ್ರಾಫಲಾರ್ ಸೇರ್‌ನ ಬೀದಿ ಬೀದಿಗಳಲ್ಲಿ ಮೂಲೆ ಮೂಲೆಗಳಲ್ಲಿ ದೇಶಕ್ಕಾಗಿ ದುಡಿದ ಮಹಾಪುರುಷರ ಮೂರ್ತಿಗಳಿರುವುದನ್ನು ಕಂಡು ಈ ಮಾತನ್ನು ಹೇಳಿದ್ದಾರೆ .

2. ” ಹೊತ್ತು ! ಹೊತ್ತು ! ಹೊತ್ತೇ ಹಣ . “

ಉ . ಈ ವಾಕ್ಯವನ್ನು ವಿ.ಕೃ. ಗೋಕಾಕ್ ಬರೆದಿರುವ ಲಂಡನ್ ನಗರ ಎಂಬ ಪಾಠದಿಂದ ಆರಿಸಿದೆ . ಲಂಡನ್‌ನಲ್ಲಿ ಎಲ್ಲರೂ ಒಂದಲ್ಲ ಒಂದು ಕಾರ್ಯದಲ್ಲಿ ನಿರತರಾಗಿರುತ್ತಾರೆ . ಅದರಲ್ಲೂ ಮಕ್ಕಳೇ ಎಲ್ಲಾ ಕಡೆ ಕೆಲಸ ಮಾಡುತ್ತಿರುವುದನ್ನು ನೋಡಿ ಅಲ್ಲಿ ಹೊತ್ತಿಗೆ ಎಲ್ಲಾ ಮಹತ್ವ ಅದಕ್ಕೆ ತಕ್ಕಂತೆ ದುಡಿಯಬೇಕು . ಆದ್ದರಿಂದ ಹೊತ್ತೇ ಹಣ ಎಂದು ಹೇಳಿದ್ದಾರೆ .

3. ಯಾರನ್ನೂ ತುಳಿದರೇನು , ಎಲ್ಲಿ ಹೆಜ್ಜೆ ಹಾಕಿದರೇನು ?

ಎಲ್ಲವೂ ಅಷ್ಟೇ ! ಮಣ್ಣು , ಮಣ್ಣು

ಉ . ಈ ವಾಕ್ಯವನ್ನು ವಿ.ಕೃ. ಗೋಕಾಕ್ ಬರೆದಿರುವ ಲಂಡನ್ ನಗರ ಎಂಬ ಪಾಠದಿಂದ ಆರಿಸಿದೆ . ಈ ಮಾತನ್ನು ಲೇಖಕರು , ಪೊಯಟ್ಸ್‌ ಕಾರ್ನ‌್ರಗೆ ಭೇಟಿ ನೀಡಿದ್ದಾಗ ಅಲ್ಲಿ ಕವಿಗಳ ಹೆಸರು ಸ್ಮರಣೆಯನ್ನು ಕೆಳಗೆ ಹಾಸುಗಲ್ಲಿನಲ್ಲಿ ಹಾಕಿದ್ದರಂತೆ ಅದನ್ನು ತುಳಿದು ಹೋಗಬೇಕಾಗಿದ್ದಾಗ ಲೇಖಕರು ಈ ಮಾತನ್ನು ಹೇಳಿದ್ದಾರೆ .

4. “ ಪ್ರವಾಸವು ಶಿಕ್ಷಣದ ಒಂದು ಭಾಗವಾಗಿದೆ .

” ಉ . ಈ ವಾಕ್ಯವನ್ನು ವಿ.ಕೃ. ಗೋಕಾಕ್ ಬರೆದಿರುವ ಲಂಡನ್ ನಗರ ಎಂಬ ಪಾಠದಿಂದ ಆರಿಸಿದೆ . ಲೇಖಕರು ಲಂಡನ್ ನಗರಕ್ಕೆ ಪ್ರವಾಸ ಹೋಗಿ ಅಲ್ಲಿನ ಅನೇಕ ಸ್ಥಳಗಳಿಗೆ ಭೇಟಿ ನೀಡಿ ಜ್ಞಾನ ಮತ್ತು ಅನುಭವವನ್ನು ಹೆಚ್ಚಿಸಿಕೊಂಡು ಹಿಂದಿರುಗಿದಾಗ ಬೇಕನ್ನು ಹೇಳಿರುವ ಈ ಮೇಲಿನ ಮಾತನು ನೆನಪು ಮಾಡಿಕೊಳ್ಳುತ್ತಾರೆ .

ಉ . ಇಲ್ಲಿ ಬಿಟ್ಟಿರುವ ಪದಗಳನ್ನು ಸರಿಯಾದ ಪದಗಳಿಂದ ತುಂಬಿರಿ

ಲಂಡನ್ ಪಟ್ಟಣವೆಂದರೆ ಒಂದು ……….ಜಗತ್ತು

ಉ . ಸ್ವತಂತ್ರ್ಯ

2. ವೂಲವರ್ಥ ಎಂಬುದು ……………. ಅಂಗಡಿ

ಸ್ಟೇಷನರಿ

3. ಮನೆ ಹಿಡಿದು ಇರುವ …………..ಬುದ್ದಿ ಮನೆಯಮಟ್ಟದ್ದೇ

ತರುಣ

4. ಆಬೆಯಲ್ಲಿರುವ ಸಂಹಾಸನಕ್ಕೆ …………..ಎಂದು ಹೆಸರು

ಉ . ಸ್ಟೋನ್ ಆಫ್ ಸ್ಟೋನ್

5. ವೆಸ್ಟ್ ಮಿನ್ ಸ್ಟರ್ ಅಬೆ ಎಂಬುದು

ಉ . ಪಾರ್ಥನಾ ಮಂದಿರ

London Nagara Notes in Kannada

ಊ ಈ ಪದಗಳನ್ನು ಬಿಡಿಸಿ ಸಂಧಿಯ ಹೆಸರನ್ನು ಬರೆಯಿರಿ .

ಒಮೊಮ್ಮೆ = ಒಮೆ + ಒಮ್ಮೆ = ಲೋಪಸಂಧಿ

ಜಾಗವನ್ನು = ಜಾಗ + ಅನ್ನು = ಆಗಮಸಂಧಿ

ಅತ್ಯಾದರ = ಅತಿ + ಆದರ = ಯಣ್ ಸಂಧಿ

ವಾಚನಾಲಯ = ವಾಚನ + ಆಲಯ = ಸವರ್ಣದೀರ್ಘಸಂಧಿ

ಸಂಗ್ರಹಾಲಯ = ಸಂಗ್ರಹ + ಆಲಯ = ಸವರ್ಣದೀರ್ಘಸಂಧಿ

ಓಣಿಯಲ್ಲಿ = ಓಣಿ + ಅಲ್ಲಿ = ಆಗಮಸಂಧಿ

ಈ ಪದಗಳ ಅರ್ಥ ಬರೆದು ಅವುಗಳನ್ನು ನಿಮ್ಮ ಸ್ವಂತ ವಾಕ್ಯಗಳಲ್ಲಿ ಪ್ರಯೋಗಿಸಿ .

1. ದಂಗುಬಡಿ = ದಿಗ್ಬ್ರಮೆ

ಉ . ಹೆದ್ದಾರಿಯಲ್ಲಿ ನಡೆದ ಭೀಕರ ಅಪಘಾತವನ್ನು ನೋಡಿ ಜನ ದಂಗು ಬಡಿದವರಂತಾಗಿದ್ದರು .

2. ಮನಗಾಣು = ತಿಳಿಯುವುದು

ಉ . ಕೆಲವರು ಜಾಹೀರಾತುಗಳನ್ನು ನಂಬಿ ಮೋಸ ಹೋಗುವುದನ್ನು ಮನಗಾಣಬಹುದು .

3. ಅಚ್ಚಳಿ = ನಾಶವಾಗದೆ

ಉ . ಬೇಲೂರಿನ ಶಿಲ್ಪಕಲೆ ಅಚ್ಚಳಿಯದೆ ನಿಂತಿದೆ .

4. ದುರಸ್ತಿ = ಸರಿಪಡಿಸುವುದು

ಉ . ಭಗ್ನಾವಸ್ಥೆಯಲ್ಲಿದ್ದ ದೇವಾಲಯವನ್ನು ದುರಸ್ತಿ ಮಾಡಲಾಗಿದೆ .

5. ಘನತರ = ಹೆಚ್ಚುಗಾರಿಕೆ

ಉ . ಕುತುಬಿನಾರ್‌ ಘನತರವಾದ ಸ್ಮಾರಕವಾಗಿದೆ .

6. ನಿಟ್ಟಿಸಿ ನೋಡು = ದಿಟ್ಟಿಸಿ , ದೀರ್ಘವಾಗಿ ನೋಡು

ಉ . ಮಕ್ಕಳು ತಪ್ಪು ಮಾಡಿದಾಗ ಪೋಷಕರು ನಿಟ್ಟಿಸಿ ನೋಡುತ್ತಾರೆ .

7. ಮೂಲೆಗೊತ್ತು = ಕಡೆಗಣಿಸಿ

ಉ . ಕೆಲವು ರಾಜಕಾರಣಿಗಳು ಚುನಾವಣೆಯಲ್ಲಿ ಗೆದ್ದ ನಂತರ ಜನರನ್ನು ಮೂಲೆಗೊತ್ತುತ್ತಾರೆ .

8. ದಿಕ್ಕು ತಪ್ಪು = ದಾರಿ ತಪ್ಪು

ಉ . ಕೆಲವು ಉಗ್ರಗಾಮಿಗಳು ಯುವಕರ ದಿಕ್ಕು ತಪ್ಪಿಸುತ್ತಾರೆ .

9. ವಶೀಲಿ = ಪ್ರಭಾವ , ವರ್ಚಸ್ಸು

ಉ . ಮೂಢ ನಂಬಿಕೆಗೊಳಗಾದವರು ಯಂತ್ರ , ಮಂತ್ರಗಳಿಗೆ ವಶೀಲರಾಗುತ್ತಾರೆ.

ಎಸ್ ಎಸ್ ಎಲ್ ಸಿ ಇತರ ವಿಷಯಗಳ ನೋಟ್ಸ್ ಓದಿರಿ …

ಶಬರಿ ಪಾಠದ ಪ್ರಶ್ನೋತ್ತರಗಳು

ಎಸ್ ಎಸ್ ಎಲ್ ಸಿ ಮಾದರಿ ಪ್ರಶ್ನೆ ಪತ್ರಿಕೆಗಳು 2022

ಎಸ್ ಎಸ್ ಎಲ್ ಸಿ ಇಂಗ್ಲಿಷ್ ಮಾದರಿ ಪ್ರಶ್ನೆಪತ್ರಿಕೆ

sslc mcq questions

10th English Question Paper

ಪ್ರಬಂಧಗಳ ಪಟ್ಟಿ

ಇತರೆ ವಿಷಯಗಳನ್ನು ಓದಲು ಈ ಕೆಳಗೆ ಕಾಣಿಸುವ ವಿಷಯದಮೇಲೆ ಕ್ಲಿಕ್ ಮಾಡಿ

Leave a Reply

Your email address will not be published.