ಶಬರಿ ಪಾಠದ ಪ್ರಶ್ನೆ ಮತ್ತು ಉತ್ತರ | 10th Kannada Shabari Lesson Notes – PDF, MCQ Questions Answer kannada

10th Standard Shabari Lesson Notes in Kannada Important MCQ Questions | ಶಬರಿ ಪಾಠದ ಪ್ರಶ್ನೋತ್ತರಗಳು 10ನೇ ತರಗತಿ

ಶಬರಿ ಪಾಠದ ಪ್ರಶ್ನೋತ್ತರಗಳು, shabari lesson mcq questions, 10th kannada shabari lesson notes pdf, sslc kannada shabari lesson notes, sabari pathak question answer kannada

10th Standard Shabari Lesson Notes in Kannada

Spardhavani Telegram

Shabari Lesson Notes in Kannada

ಶಬರಿ ಪಾಠಕ್ಕೆ ಸಂಬಂದಿಸಿದ ಒಂದು ವಾಕ್ಯ ಪ್ರಶ್ನೋತ್ತರಗಳು ಸೇರಿದಂತೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸಂಪೂರ್ಣ ಪ್ರಶ್ನೋತ್ತರಗಳನ್ನು ನೀಡಲಾಗಿದೆ ಇದು ವಿದ್ಯಾರ್ಥಿಗಳಿಗಾಗಿ ಸಂಪೂರ್ಣ ಉಚಿತವಾಗಿದ್ದು ವಿದ್ಯಾರ್ಥಿಗಳು ಇದರ ಉಪಯೋಗ ಪಡೆದುಕೊಳ್ಳಬಹುದು.

Shabari Lesson Notes ಶಬರಿ ಪಾಠದ ಪ್ರಶ್ನೋತ್ತರಗಳು

ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ .

ಶ್ರೀರಾಮನ ತಂದೆಯ ಹೆಸರೇನು ?

ಶ್ರೀರಾಮನ ತಂದೆಯ ಹೆಸರು ದಶರಥ

10th Standard Shabari Lesson Notes in Kannada Important MCQ Questions | ಶಬರಿ ಪಾಠದ ಪ್ರಶ್ನೋತ್ತರಗಳು 10ನೇ ತರಗತಿ
10th Standard Shabari Lesson Notes in Kannada Important MCQ Questions | ಶಬರಿ ಪಾಠದ ಪ್ರಶ್ನೋತ್ತರಗಳು 10ನೇ ತರಗತಿ
ಶ್ರೀರಾಮನಿಗೆ ಸಮರ್ಪಿಸಲು ಶಬರಿ ಏನನ್ನು ಸಂಗ್ರಹಿಸಿದ್ದಳು ?

ಶ್ರೀರಾಮನಿಗೆ ಸಮರ್ಪಿಸಲು ಶಬರಿಯು ಹೂವು ಹಣ್ಣುಗಳನ್ನು ಸಂಗ್ರಹಿಸಿದ್ದಳು .

ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ಯಾರು ?

ಮತಂಗಾಶ್ರಮದಲ್ಲಿ ಶಬರಿ ಎಂಬ ತಪಸ್ವಿನಿಯು ವಾಸವಿದ್ದಳು .

ರಾಮಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು ಯಾರು ?

ದನು ಎಂಬುವವನು ಶಬರಿಯ ವೃತ್ತಾಂತವನ್ನು ತಿಳಿಸಿ ರಾಮಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸುತ್ತಾನೆ . ಈತ ಸುಗ್ರೀವನಲ್ಲಿ ಸಖ್ಯ ಮಾಡಿ ಸೀತೆಯನ್ನು ಮರಳಿ ಪಡೆಯಬಹುದು ಎಂಬ ಸಲಹೆಯನ್ನು ರಾಮಲಕ್ಷ್ಮಣರಿಗೆ ನೀಡುತ್ತಾನೆ .

10th kannada shabari lesson notes pdf

ಶಬರಿ ‘ ಗೀತನಾಟಕದ ಕರ್ತೃ ಯಾರು ?

ಪ.ತಿ. ನರಸಿಂಹಾಚಾರ್ ಅವರು ‘ ಶಬರಿ ‘ ಗೀತನಾಟಕದ ಕರ್ತೃ ಆಗಿದ್ದಾರೆ

ಕೊಟ್ಟಿರುವ ಪ್ರಶ್ನೆಗಳಿಗೆ ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .

10th Standard Shabari Lesson Notes in Kannada

ರಾಮನು ಗಿರಿವನವನ್ನು ಏನೆಂದು ಪ್ರಾರ್ಥಿಸಿದನು ?

“ ಸೀತೆಯು ನಮಗೆ ದೊರೆಯುವಳೇ ? ಭೂಮಿ ಜಾತಿಯು , ಆತ್ಮ ಕಾಮ ಕಲ್ಪಲತೆಯು , ಚೆಲುವೆಯೂ ಆದ ಸೀತೆಯು ದೊರೆಯುವಳೆ ? ಎಲೈ , ಗಿರಿವನಗಳೇ ನಿಮ್ಮನ್ನು ಪ್ರಾರ್ಥಿಸುತ್ತೇನೆ . ಅವಳಿರುವ ನೆಲೆಯನ್ನು ಯಾರು ಬಲ್ಲಿರಿ ? ನನ್ನರಸಿ ನನಗೆ ದೊರೆಯುವಳೆ ? ಹೇಳಿರಿ . ಈ ಚಿಂತೆಯು ನನ್ನ ಮನಸ್ಸನ್ನು ಹಾಳು ಮಾಡುತ್ತಿದೆ . ನನ್ನೆದೆಯನ್ನು ಈ ಜಗವನ್ನು ಬಿಡದೆ ಸುಡುವಂತೆ ಮಾಡುತ್ತಿದೆ ಅಯ್ಯೋ ” ಎಂದು ಶ್ರೀರಾಮನು ರಾಮನು ಗಿರಿವನವನ್ನು ಪ್ರಾರ್ಥಿಸಿದನು .

ಲಕ್ಷ್ಮಣನು ಅಣ್ಣನನ್ನು ಹೇಗೆ ಸಂತೈಸಿದನು ?

ಲಕ್ಷ್ಮಣನು ತನ್ನ ಅಣ್ಣನಾದ ಶ್ರೀರಾಮನನ್ನು ಸಮಾಧಾನಪಡಿಸುತ್ತಾ ತಾಳಿಕೋ ಅಣ್ಣ , ಸೂರ್ಯನೇ ಕಾಂತಿ ಹೀನನಾದರೆ ಆ ಕಾಂತಿಗೆ ತೇಜಸ್ಸಿಗೆ ಸ್ಥಳವೆಲ್ಲಿ ? ಯಾರೂ ಆ ತೇಜಸ್ಸನ್ನು ಕೊಡುತ್ತಾರೆ ಹಾಗೆಯೇ ಶ್ರೀರಾಮನೇ ಧೈರ್ಯ ಕಳೆದುಕೊಂಡರೆ ಧೈರ್ಯ ತುಂಬುವವರಾರು ? ” ಎನ್ನುತ್ತಾನೆ . ಹೀಗೆ ಲಕ್ಷಣಮ ಅಣ್ಣನನ್ನು ಸಂತೈಸಿದನು .

ರಾಮನ ಸ್ವಾಗತಕ್ಕಾಗಿ ಶಬರಿ ಮಾಡಿಕೊಂಡಿದ್ದ ಸಿದ್ಧತೆಗಳೇನು ?

ಆಶ್ರಮದಲ್ಲಿ ನಿನ್ನೆ ಅಲಂಕರಿಸಿದ ಹೂವು ಇನ್ನೂ ಹೊಸದರಂತಿವೆ . ಯಜ್ಞಕುಂಡದಲ್ಲಿ ಅಗ್ನಿ – ಹೊಗೆಯಾಡುತ್ತಿದೆ . ಶಬರಿಯು ಶ್ರೀರಾಮನಿಗಾಗಿ ನಿನ್ನೆ ತಂದಿರಿಸಿದ ಹೂವು ಹಣ್ಣುಗಳನ್ನು ಬೇರ್ಪಡಿಸಿ ಅವುಗಳ ಜಾಗದಲ್ಲಿ ಹೊಸದನ್ನು ಇಡುತ್ತಿದ್ದಾಳೆ . ಆ ಫಲ ಮುಷ್ಪಗಳನ್ನು ಕಂಡು ಹಾಡುತ್ತಾಳೆ , ‘ ಎಲೈ ತಳಿರು , ಹೂಗಳೆ ಅವನ ಸ್ಪರ್ಷವೆಂಬಂತ ನಿಮ್ಮ ಮೃದುತ್ವವಿದೆ ಕೇವಲ ಗಾಳಿಗೇ ಒಣಗಿರುವಿರಿ , ದುಂಬಿಗಳ ಗುಂಪು ನಿಮ್ಮ ಕಂಪನ್ನರಸಿ ಬಂದವು .

ನಿಮ್ಮ ಸುವಾಸನೆಯಿಂದ ಅವನನ್ನು ಉದ್ದೀಪಿಸದೆ ಸೊರಗಿದರಲ್ಲ ? ಎಲೈ ಫಲಗಳೆ ಅವನು ನಿಮ್ಮನ್ನು ಸವಿಯಲಾಗಲಿಲ್ಲ , ಹಾಗಾಗಿ ನೀವು ರುಚಿಗೆಟ್ಟಿದ್ದೀರಿ , ಹದಗೆಟ್ಟು ಹುಳುವಿಗೆ ಆಸರೆಯಾದಿರಿ , ಅವನಿಗೆ ಮೀಸಲಾಗಿಟ್ಟ ಫಲ ಪುಷ್ಟಗಳು ಮಾಸಲಾದರೂ , ನಾನು ಮತ್ತೆ ಮತ್ತೆ ಹೊಸತನ್ನು ತಂದಿಟ್ಟು ಅವನಿಗಾಗಿ ಕಾದಿರುವ ಛಲ ನನ್ನದು ಎಂದು ಹಾಡುತ್ತಾ ಹೂವಿನ ಮಾಲೆಯನ್ನು ಕಟ್ಟುತ್ತಿರುತ್ತಾಳೆ .

10th Standard Shabari Lesson Notes in Kannada

ಶಬರಿಯು ರಾಮಲಕ್ಷ್ಮಣರನ್ನು ಉಪಚರಿಸಿದ ರೀತಿಯನ್ನು ವಿವರಿಸಿ .

ಶಬರಿಯು ಶ್ರೀರಾಮನನ್ನು ಕಂಡು ಬೆರಗಾದಳು . ಅನಂತರ ಶ್ರೀರಾಮನ ಬಳಿಗೆ ಬಂದು ಅವನ ಮೈಯನ್ನು ಮುಟ್ಟಿ ಪಾದಕ್ಕೆ ನಮಸ್ಕರಿಸಿ ಅವನ ಕೈಯ್ಯನು ಕಣ್ಣಿಗೊತ್ತಿಕೊಂಡು ಆನಂದದ ಕಣ್ಣೀರನ್ನು ಸುರಿಸಿದಳು . ಬನ್ನಿ ಬನ್ನಿ ಎಂದು ಪ್ರೀತಿಯಿಂದ ಆಶ್ರಮಕ್ಕೆ ಆಹ್ವಾನಿಸಿದಳು . ಅಯ್ಯೋ ಇಂದು ಏನೂ ಸಿದ್ಧತೆ ನಡೆಸಿಲ್ಲವೆ ಎಂದು ಪೇಚಾಡುತ್ತಾಳೆ .

ನಿನ್ನೆಯಷ್ಟು ಚೆನ್ನಾಗಿ ಸಿದ್ಧತೆ ಮಾಡಿಲ್ಲ ಎಂದು ನೊಂದುಕೊಳ್ಳುತ್ತಾಳೆ . ತಾನು ಪ್ರೀತಿಯಿಂದ ಕಟ್ಟಿದ್ದ ಹೂವಿನ ಮಾಲೆಯನ್ನು ಅವರ ಕೊರಳಿಗೆ ಹಾಕಿ ಹಿಗ್ಗಿ ಸಂಭ್ರಮಿಸಿದಳು . ತಾನು ತಂದ ಹಣ್ಣನ್ನು ನೀಡುತ್ತ ಜಗತ್ತಿನಲ್ಲೇ ಇದರಷ್ಟು ರುಚಿಯಾದ ಹಣ್ಣು ಯಾವುದೂ ಇಲ್ಲ ಇದನ್ನು ಸವಿಯಿರಿ ಎಂದು ನೀಡಿದಳು . ಇದರಿಂದ ಪ್ರಸನ್ನರಾದ ರಾಮಲಕ್ಷ್ಮಣರನ್ನು ಕಂಡು ಶಬರಿ ಧನ್ಯಭಾವದಿಂದ ಆನಂದಿಸಿದಳು , ನರ್ತಿಸಿದಳು .

ಆತಿಥ್ಯ ಸ್ವೀಕರಿಸಿದ ರಾಮಲಕ್ಷ್ಮಣರು ಶಬರಿಗೆ ಏನು ಹೇಳಿದರು ?

ಶ್ರೀರಾಮನು ಶಬರಿಗೆ ‘ ನೀನು ನೀಡಿದ ಆದರ ಆತಿಥ್ಯದಿಂದ ನಾವು ಸುಖ , ಸಂತೋಷದಿಂದ ಇದ್ದೇವೆ . ಅರಣ್ಯದಲ್ಲಿದ್ದರೂ ಸ್ವರ್ಗದಂತಹ ಅನುಭವವಾಗಿದೆ . ಇಂಥ ಸವಿಯಾದ ಹಣ್ಣುಗಳನ್ನು ನೀಡಿರುವ ನಿನಗೆ ನಾವು ಋಣಿಯಾಗಿದ್ದೇವೆ ‘ ಎಂದನು .

ಶ್ರೀರಾಮನು ತಾಯಿ , ಏಕೆ ಈ ಕಣ್ಣೀರು ನೀನು ನಮಗೆ ನೀಡಿದ ಆದರ , ಆತಿಥ್ಯ , ಸತ್ಕಾರಗಳಲ್ಲಿ ಯಾವುದಕ್ಕೂ ಕೊರತೆಯಾಗಿಲ್ಲ . ನಮ್ಮ ಅಯೋಧ್ಯೆಯ ಅರಮನೆಗಿಂತಲೂ ಹೆಚ್ಚಿನ ಸತ್ಕಾರ ಇಲ್ಲಿ ದೊರೆಯಿತು . ಇದು ಕಾಡು ಎಂಬುದನ್ನು ಮರೆತು ನಮ್ಮ ಮನೆ ಎಂಬ ಭಾವನೆ ನಮಗೆ ಬಂದಿದೆ . ನಿನ್ನನ್ನು ನಮ್ಮ ತಾಯಿ ಎಂದು ಭಾವಿಸಿದ್ದೇವೆ ಎಂದರು .

10th Standard Shabari Lesson Notes in Kannada PDF

ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು . ವಾಕ್ಯಗಳಲ್ಲಿ ಉತ್ತರಿಸಿ .
ಶಬರಿಯ ಚಿಂತೆ ಹಿಂಗಿಹೋದ ಸಂದರ್ಭದ ಸ್ವಾರಸ್ಯವನ್ನು ವಿವರಿಸಿ?

ಶಬರಿಯು ತಾನು ಪ್ರೀತಿಯಿಂದ ಕಟ್ಟಿದ್ದ ಹೂವಿನ ಮಾಲೆಯನ್ನು ಅವರ ಕೊರಳಿಗೆ ಹಾಕಿ ಹಿಗ್ಗಿ ಸಂಭ್ರಮಿಸುತ್ತಾಳೆ . ತಾನು ತಂದ ಹಣ್ಣನ್ನು ನೀಡುತ್ತ ಜಗತ್ತಿನಲ್ಲೇ ಇದರಷ್ಟು ರುಚಿಯಾದ ಹಣ್ಣು ಯಾವುದೂ ಇಲ್ಲ , ಇದನ್ನು ಸವಿಯಿರಿ ಎಂದು ನೀಡಿದಳು . ಇದರಿಂದ ಪ್ರಸನ್ನರಾದ ರಾಮಲಕ್ಷ್ಮಣರನ್ನು ಕಂಡು ಶಬರಿ ಧನ್ಯಭಾವದಿಂದ ಆನಂದಿಸಿದಳು , ನರ್ತಿಸಿದಳು . ನಾನು ಈಗ ತುಂಬ ಸುಖಿಯಾಗಿರುವೆನು . ನನ್ನ ಜೀವನದ ಮಹದಾಸೆ ನೆರವೇರಿದೆ . ನನ್ನ ಹಂಬಲ ಅಳಿದ ದುಂಬಿಯಾಗಿರುವೆನು .

ನಾನು ಸುಖಿಯಾಗಿರುವೆನು . ನದಿ , ಹೊಳೆ ಸಮುದ್ರವನ್ನು ಸೇರುವಂತೆ ದೋಣಿಯು ( ಹಡಗು ) ದಡವನ್ನು ( ಬಂದರನ್ನು ) ಸೇರುವಂತೆ ನನ್ನ ಮನಸ್ಸು ನಿರಾಳವಾಗಿದೆ . ನಿಮ್ಮನ್ನು ನೋಡಿ , ನಿಮ್ಮೊಡನೆ ಮಾತನಾಡಿ ನಿಮ್ಮ ದಣಿವನ್ನು ತಣಿಸಿ ನಾನು ಆನಂದಗೊಂಡಿದ್ದೇನೆ . ಇಂದು ನನ್ನ ಮನಸ್ಸಿನ ಭಾರ ಇಳಿದು ಹಗುರವಾಗಿದೆ . ಜೀವನ ಸಾರ್ಥಕವಾಗಿದೆ . ಪರಲೋಕ ಕರ ನೀಡಿ ಕರೆಯುತ್ತಿದೆ . ನಾನು ಅತ್ಯಂತ ಸುಖಿಯಾಗಿರುವೆ .

ಶಬರಿಯ ಸಡಗರ , ಸಂತೋಷ ಮೇಳದವರ ಹಾಡಿನಲ್ಲಿ ಹೇಗೆ ವರ್ಣಿತವಾಗಿದೆ ?

ಶಬರಿಯು ಶ್ರೀರಾಮನನ್ನು ಕಂಡು ಬೆರಗಾದಳು . ಅನಂತರ ಶ್ರೀರಾಮನ ಬಳಿಗೆ ಬಂದು ಅವನ ಮೈಯನ್ನು ಮುಟ್ಟಿ ಪಾದಕ್ಕೆ ನಮಸ್ಕರಿಸಿ ಅವನ ಕೈಯನ್ನು ಕಣ್ಣಿಗೊತ್ತಿಕೊಂಡು ಆನಂದದ ಕಣ್ಣೀರನ್ನು ಸುರಿಸಿದಳು . ಬನ್ನಿ ಬನ್ನಿ ಎಂದು ಪ್ರೀತಿಯಿಂದ ಆಶ್ರಮಕ್ಕೆ ಆಹ್ವಾನಿಸಿದಳು . ಅಯ್ಯೋ ಇಂದು ಏನೂ ಸಿದ್ಧತೆ ನಡೆಸಿಲ್ಲವೆ ಎಂದು ಪೇಚಾಡುತ್ತಾಳೆ . ನಿನ್ನೆಯಷ್ಟು ಚೆನ್ನಾಗಿ ಸಿದ್ಧತೆ ಮಾಡಿಲ್ಲ ಎಂದು ನೊಂದುಕೊಳ್ಳುತ್ತಾಳೆ , ತಾನು ಪ್ರೀತಿಯಿಂದ ಕಟ್ಟಿದ್ದ ಹೂವಿನ ಮಾಲೆಯನ್ನು ಅವರ ಕೊರಳಿಗೆ ಹಾಕಿ ಹಿಗ್ಗಿ ಸಂಭ್ರಮಿಸುತ್ತಾಳೆ .

ತಾನು ತಂದ ಹಣ್ಣನ್ನು ನೀಡುತ್ತ ಜಗತ್ತಿನಲ್ಲೇ ಇದರಷ್ಟು ರುಚಿಯಾದ ಹಣ್ಣು ಯಾವುದು ಇಲ್ಲ ಇದನ್ನು ಸವಿಯಿರಿ ~ ಎಂದು ನೀಡಿದಳು . ಇದರಿಂದ ಪ್ರಸನ್ನರಾದ ರಾಮಲಕ್ಷ್ಮಣರನ್ನು ಕಂಡು ಶಬರಿ ಧನ್ಯಭಾವದಿಂದ ಆನಂದಿಸಿದಳು , ನರ್ತಿಸಿದಳು . ನಾನು ಈಗ ತುಂಬ ಸುಖಿಯಾಗಿಹೆನು . ನನ್ನ ಜೀವನದ ಮಹದಾಸೆ ನೆರವೇರಿದೆ .

ನಾನು ಹಂಬಲ ಅಳಿದ ದುಂಬಿಯಾಗಿರುವೆನು . ನಾನು ಸುಖಿಯಾಗಿರುವೆನು . ನದಿ , ಹೊಳೆಯು ಸಮುದ್ರವನ್ನು ಸೇರುವಂತೆ , ದೋಣಿಯು ( ಹಡಗು ) ದಡವನ್ನು ( ಬಂದರನ್ನು ) ಸೇರುವಂತೆ ನನ್ನ ಮನಸ್ಸು ನಿರಾಳವಾಗಿದೆ . ನಿಮ್ಮನ್ನು ನೋಡಿ , ನಿಮ್ಮೊಡನೆ ಮಾತನಾಡಿ , ನಿಮ್ಮ ದಣಿವನ್ನು ತಣಿಸಿ ನಾನು ಆನಂದಗೊಂಡಿದ್ದೇನೆ , ಇಂದು ನನ್ನ ಮನಸ್ಸಿನ ಭಾರ ಇಳಿದು ಹಗುರವಾಗಿದೆ . ಜೀವನ ಸಾರ್ಥಕವಾಗಿದೆ ಪರಲೋಕ ಕರ ನೀಡಿ ಕರೆಯುತ್ತಿದೆ . ನಾನು ಅತ್ಯಂತ ಸುಖಿಯಾಗಿರುವೆ ಎಂದಳು .

10th Standard Shabari Lesson Notes in Kannada

10th Standard Shabari Lesson Notes in Kannada Important MCQ Questions | ಶಬರಿ ಪಾಠದ ಪ್ರಶ್ನೋತ್ತರಗಳು 10ನೇ ತರಗತಿ
10th Standard Shabari Lesson Notes in Kannada Important MCQ Questions | ಶಬರಿ ಪಾಠದ ಪ್ರಶ್ನೋತ್ತರಗಳು 10ನೇ ತರಗತಿ
ನಂಬಿಕೆಟ್ಟವರಿಲ್ಲ ಎಂಬ ಮಾತು ಶಬರಿಯ ಪಾಲಿಗೆ ಹೇಗೆ ನಿಜವಾಗಿದೆ ?

ಶ್ರೀರಾಮನು ಸಕಲ ಸದ್ಗುಣಗಳ ಸಾಕಾರ ಮೂರ್ತಿ , ಶ್ರೀರಾಮನ ಗುಣಸ್ವಭಾವಗಳ ಸೆಳೆತಕ್ಕೆ ಸಿಕ್ಕಿ ಅವನನ್ನು ಕಾಣುವುದೇ ಜೀವನದ ಏಕೈಕ ಗುರಿ ಎಂದು ಭಾವಿಸಿದ್ದ ಅಸಂಖ್ಯಾತ ಭಕ್ತರಲ್ಲಿ ಶಬರಿಯೂ ಒಬ್ಬಳು . ಈಕೆಯು ಋಷ್ಯಮೂಕ ಪರ್ವತದ ಬಳಿ ತಪಸ್ಸು ಮಾಡಿಕೊಂಡಿದ್ದ ಬ್ರಹ್ಮರ್ಷಿಗಳೆನಿಸಿದ್ದ ಮತಂಗ ಮಹರ್ಷಿಗಳ ಆಶ್ರಯದಲ್ಲಿದ್ದಳು .

ಮತಂಗರು ದಿವ್ಯ ಲೋಕವನ್ನು ಸೇರಿದ ಬಳಿಕ ಶಬರಿಯು ರಾಮಧ್ಯಾನದಲ್ಲಿ ತೊಡಗಿ ಶ್ರೀರಾಮನ ದರ್ಶನಕ್ಕಾಗಿ ಕಾದಿದ್ದಳು . ಶ್ರೀರಾಮನ ಬರುವಿಕೆಗಾಗಿ ಕಾದು ಕಾದು ಕಾತರಿಸಿ ಮುಪ್ಪಾಗಿ ಭಕ್ತಿಯೇ ರೂಪುಗೊಂಡಂತೆ ಇದ್ದ ಶಬರಿಯನ್ನು ದರ್ಶಿಸುತ್ತಾರೆ . ಶಬರಿಯು ತನ್ನ ಆರಾಧ್ಯ ದೈವ ಶ್ರೀರಾಮನನ್ನು ಕಂಡು ಆನಂದಿಸುತ್ತಾಳೆ . ಧನ್ಯತೆಯ ಭಾವನೆಯಿಂದ ಮುಕ್ತಿಯನ್ನು ಬಯಸಿದ ಶಬರಿಗೆ ಶ್ರೀರಾಮನು ಮುಕ್ತಿಯನ್ನು ಕರುಣಿಸುತ್ತಾನೆ . ನಂಬಿಕೆಟ್ಟವರಿಲ್ಲ ಎಂಬ ಮಾತು ಶಬರಿಯ ಪಾಲಿಗೆ ಹೀಗೆ ನಿಜವಾಗಿದೆ .

ಸಂದರ್ಭದೊಂದಿಗೆ ಸ್ವಾರಸ್ಯವನ್ನು ಬರೆಯಿರಿ .

10th Standard Shabari Lesson Notes in Kannada

ಆವುದೀ ಮರುಳು ? ನಮ್ಮೆಡೆಗೆ ಬರುತಿಹುದು ?

ಈ ವಾಕ್ಯವನ್ನು ಪು . ತಿ . ನರಸಿಂಹಾಚಾರ್ ಅವರು ಬರೆದಿರುವ ಶಬರಿ ಎಂಬ ಗೀತ ನಾಟಕದಿಂದ ಆರಿಸಲಾಗಿದೆ . ಆಕರ ಗ್ರಂಥ : ( ಪು.ತಿ.ನ , ವಿರಚಿತ ‘ ಶಬರಿ ‘ ಗೀತನಾಟಕವನ್ನು ಶ್ರೀರಂಗ ಮತ್ತು ನಾ . ಕಸ್ತೂರಿ ಸಂಪಾದಿಸಿರುವ ) ಏಕಾಂಕನಾಟಕಗಳ ಕೃತಿ . ಶ್ರೀರಾಮನು ಲಕ್ಷ್ಮಣನಿಗೆ ಈಗ ನಾವು ದನು ಹೇಳಿದ ವಾರಿಯಲ್ಲಿ ಬಂದಿದ್ದೇವೆಯೆ ?

ಆ ತಪಸ್ವಿನಿಯ ಆಶ್ರಮವು ಇದೆಯೆ ? ಅಲ್ಲಿ ನೋಡು ಎಂದು ಕೇಳಿದನು . ಶಬರಿಯು ತಳಿರು , ಹೂ , ಹಣ್ಣುಹಂಪಲುಗಳನ್ನು ತರುತ್ತಿರುವುದನ್ನು ಕಂಡು ಏನಾದರು ಕಷ್ಟ ಬರಬಹುದೆಂದು ತಿಳಿದು ಅಣ್ಣನನ್ನು ಲಕ್ಷ್ಮಣನು ಮರೆಗೆ ಕರೆದುಕೊಂಡು ಹೋದನು . ಶಬರಿಯ ಓಡಾಟವನ್ನು ಪರೀಕ್ಷಾ ದೃಷ್ಟಿಯಿಂದ ಗಮನಿಸಿದನು .

ನಾಚುತಿಹನೀ ಪೂಜೆಯೇ ನಲುಮೆಯಿಂದ

ಈ ವಾಕ್ಯವನ್ನು ಪು.ತಿ. ನರಸಿಂಹಾಚಾರ್ ಅವರು ಬರೆದಿರುವ ‘ ಶಬರಿ ‘ ಎಂಬ ಗೀತ ನಾಟಕದಿಂದ ಆರಿಸಲಾಗಿದೆ . ಆಕರ ಗ್ರಂಥ : ( ಪು.ತಿ.ನ , ವಿರಚಿತ ‘ ಶಬರಿ ‘ ಗೀತನಾಟಕವನ್ನು ಶ್ರೀರಂಗ ಮತ್ತು ನಾ . ಕಸ್ತೂರಿ ಸಂಪಾದಿಸಿರುವ ) ಏಕಾಂಕನಾಟಕಗಳ ಕೃತಿ ಶ್ರೀರಾಮನು ಶಬರಿಯನ್ನು ಕಂಡು “ ನನಗಾಗಿ ಇಷ್ಟೊಂದು ಹಂಬಲಿಸುತ್ತಿರುವ ತಪಸ್ವಿನಿ ಶಬರಿ ಇವಳೇ ಆಗಿರಬಹುದು . ಆ ಉದರಮುಖ ಎನಿಸಿರುವ ದನು ಹೇಳಿರುವ ಶಬರಿ ಇವಳೆ ಇರಬಹುದು .

ನನ್ನಿಂದ ಇವಳಿಗೆ ಯಾವರೀತಿಯ ಉಪಕಾರವು ಇಲ್ಲದಿದ್ದರೂ ಈ ಶಬರಿಯು ಎಷ್ಟೊಂದು ಪ್ರೀತಿಯಿಂದ , ನಲೆಯಿಂದ ನನ್ನನ್ನು ನೆನೆಯುತ್ತಿದ್ದಾಳೆ , ಈ ಪೂಜ್ಯಳನ್ನು ಕಂಡರೆ ನನಗೆ ಸಂಕೋಚವಾಗುತ್ತಿದೆ ” ಎಂದು ಶ್ರೀರಾಮನು ಹೇಳುತ್ತಾನೆ .

ತಾಯಿ , ಪಾರಿಗರಿಗೆ ಬೀಡಿಲ್ಲಿ ದೊರೆಯುವುದೇ ?

ಈ ವಾಕ್ಯವನ್ನು ಪು.ತಿ. ನರಸಿಂಹಾಚಾರ್ ಅವರು ಬರೆದಿರುವ ಶಬರಿ ಎಂಬ ಗಣಿ ನಾಟಕದಿಂದ ಆರಿಸಲಾಗಿದೆ . ಆಕರ ಗ್ರಂಥ : ( ಪು ವಿರಚಿತ ‘ ಶಬರಿ ‘ ಗೀತನಾಟಕವನ್ನು ಶ್ರೀರಂಗ ಮತ್ತು ನಾ . ಕಸ್ತೂರಿ ಸಂಪಾದಿಸಿರುವ ) ಏಕಾಂಕನಾಟಕಗಳ ಕೃತಿ ಶ್ರೀರಾಮನು ಆಶ್ರಮದ ಬಾಗಿಲಲ್ಲಿ ನಿಂತು “ ತಾಯಿ ದಾರಿಹೋಕರಿಗೆ ಇಲ್ಲಿ ಉಳಿದುಕೊಳ್ಳಲು ಆಶ್ರಯ ದೊರೆಯುವುದೇ ” ಎಂದು ಶಬರಿಯನ್ನು ಕೇಳುತ್ತಾನೆ .

ಆಗ ಶಬರಿಯು ನಡುಗುವ ಎದೆಯಿಂದ ಧ್ವನಿ ಬಂದ ಕಡೆಗೆ ತಿರುಗಿ “ ಎಲೈ ಮಹಾಮರುಷನೇ ನೀನು ಶ್ರೀರಾಮನೇ ? ” ಎಂದು ಕೇಳುತ್ತಾಳೆ , ಅದಕ್ಕೆ ಶ್ರೀರಾಮನು ‘ ಹೌದು ತಾಯಿ ನನ್ನನ್ನು ರಾಮ ಎನ್ನುತ್ತಾರೆ . ನನ್ನ ತಮ್ಮ ( ಸೌಮಿತ್ರಿ ) ಲಕ್ಷ್ಮಣ . ಶಬರಿಯು , ತುಂಬ ಸಡಗರದಿಂದ ‘ ನೀವು ರಾಮ ಲಕ್ಷ್ಮಣರೇ ? ‘ ಎಂದು ಆಶ್ಚರ್ಯದಿಂದ ಕೇಳುತ್ತಾಳೆ.

10th Standard Shabari Lesson Notes in Kannada

ರೂಪಿನಂತ ಮಾತು ಕೂಡ ಎನಿತುಧಾರವಾಗಿದೆ !

ಈ ವಾಕ್ಯವನ್ನು ಪು . ತಿ . ನರಸಿಂಹಾಚಾರ್ ಅವರು ಬರೆದಿರುವ ಶಬರಿ ಎಂಬ ಗೀತ , ನಾಟಕದಿಂದ ಆರಿಸಲಾಗಿದೆ . ಆಕರ ಗ್ರಂಥ : ( ಪು.ತಿ.ನ. ವಿರಚಿತ ‘ ಶಬರಿ ‘ ಗೀತನಾಟಕವನ್ನು ಶ್ರೀರಂಗ ಮತ್ತು ನಾ . ಕಸ್ತೂರಿ ಸಂಪಾದಿಸಿರುವ ) ಏಕಾಂಕನಾಟಕಗಳ ಕೃತಿ . ಶಿರಾಮನು , ತಾಯಿ ಏಕೆ ಈ ಕಣ್ಣೀರು ? ನೀನು ನಮಗೆ ನೀಡದ ಆದರ , ಆತಿಥ್ಯ ಸತ್ಕಾರಗಳಲ್ಲಿ ಯಾವುದಕ್ಕೂ ಕೊರತೆಯಾಗಿಲ್ಲ . ನಮ್ಮ ಅಯೋಧ್ಯೆಯ ಅರಮನೆಗಿಂತಲೂ ಹೆಚ್ಚಿನ ಸತ್ಕಾರ ಇಲ್ಲಿ ದೊರೆಯಿತು . ಇದು ಕಾಡು ಎಂಬುದನ್ನು ಮರೆತು ನಮ್ಮ ಮನೆ ಎಂಬ ಭಾವನೆ ನಮಗೆ ಬಂದಿದೆ . ನಿನ್ನನ್ನು ನಮ್ಮ ತಾಯಿ ಎಂದು ಭಾವಿಸಿದ್ದೇವೆ .

ಆಗ ಶಬರಿಯು ಶ್ರೀರಾಮನಿಗೆ ‘ ನಿನ್ನ ರೂಪದಂತೆಯೇ ನಿನ್ನ ಮಾತು ಕೂಡ ತುಂಬಾ ಉದಾರವಾಗಿದೆ . ನಾನು ಧನ್ಯಳು , ಸಿದ್ಧರ , ಮಣ್ಯಪುರುಷರ , ತಪಸ್ವಿಗಳ ವರ ನನಗೆ ಇಂದು ಲಭಿಸಿದೆ . ನಿಮ್ಮನ್ನು ಕಂಡ ಮಣ್ಯವಂತೆ ನಾನಾಗಿದ್ದೇನೆ . ಇಂದಿಗೆ ನನ್ನ ಚಿಂತೆಯೆಲ್ಲಾ ಕರಗಿಹೋಯಿತು . ಗುರುಗಳನ್ನು ಪೂಜಿಸಿದ ತೃಪ್ತಿ ನನಗೆ ಇದೆ ಎಂದಳು .

ಬೆಳಕಿಗೊಲಿದವರ್ ಉರಿವ ಬತ್ತಿಯ ಕರುಕ ಕಾಣರು?

ಈ ವಾಕ್ಯವನ್ನು ಪು . ತಿ . ನರಸಿಂಹಾಚಾರ್ ಅವರು ಬರೆದಿರುವ ಶಬರಿ ‘ ಎಂಬ ಗೀತ ನಾಟಕದಿಂದ ಆರಿಸಲಾಗಿದೆ . ಆಕರ ಗ್ರಂಥ : ( ಪು.ತಿ.ನ. ವಿರಚಿತ ‘ ಶಬರಿ ‘ ಗೀತನಾಟಕವನ್ನು ಶ್ರೀರಂಗ ಮತ್ತು ನಾ . ಕಸ್ತೂರಿ ಸಂಪಾದಿಸಿರುವ ) ಏಕಾಂಕನಾಟಕಗಳ ಕೃತಿ .

ಜಗತ್ತಿಗೆ ಬೆಳಕನ್ನು ನೀಡುವವರು , ಪರೋಪಕಾರ ಮಾಡುವವರು ತಮ್ಮ ನೋವನ್ನು ಮರೆಯುತ್ತಾರೆ . ತಮ್ಮ ಸಂಕಟವನ್ನು ಮತ್ತೊಬ್ಬರಿಗೆ ಹೇಳುವುದಿಲ್ಲ . ಹೇಗೆ ದೀಪದ ಬತ್ತಿಯ ‘ ಉರಿದ ಕಪ್ಪು ಭಾಗ ಬೇರೆಯವರಿಗೆ ಕಾಣುವುದಿಲ್ಲವೋ ಇವರೂ ಹಾಗೆ . ನೋಡುಗರಿಗೆ ಕೇವಲ ಬೆಳಕು ಮಾತ್ರ ಕಾಣುತ್ತದೆ ಎಂದು ಶ್ರೀರಾಮನು ಲಕ್ಷ್ಮಣನಿಗೆ ಹೇಳಿದನು .

sslc Shabari Lesson Notes

ಹೊಂದಿಸಿ ಬರೆಯಿರಿ

 1. ಮತಂಗ
 2. ಪು.ತಿ.ನ.
 3. ದಶರಥ
 4. ಚಿತ್ರಕೂಟ ಪರ್ವತ
 5. ಭೂಮಿಜಾತೆ

ಸೀರೆ
ಆಶ್ರಮ
ಮೇಲುಕೋಟೆ
ಪರ್ವತ
ರಾಮ
ಅರಣ್ಯ

ಉತ್ತರಗಳು
ಆಶ್ರಮ
ಮೇಲುಕೋಟೆ
ರಾಮ
ಪರ್ವತ
ಸೀತೆ

10th Standard Shabari Lesson Notes in Kannada

ಭಾಷಾ ಚಟುವಟಿಕೆ

ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ

10th Standard Shabari Lesson Notes in Kannada

ಕನ್ನಡ ಸಂಧಿಗಳನ್ನು ಹೆಸರಿಸಿ , ಎರಡೆರಡು ಉದಾಹರಣೆಗಳನ್ನು ಬರೆಯಿರಿ .
 1. ಲೋಪಸಂಧಿ ಉದಾಹರಣೆ : ಸಂಪನ್ನರು + ಆದ = ಸಂಪನ್ನರಾದ
 2. ಆಗಮಸಂಧಿ ಮೈ + ತೋರು = ಮೈದೋರು
ಸಂಸ್ಕೃತ ಸಂಧಿಗಳ ಹೆಸರುಗಳನ್ನು ಸ್ವರ ಮತ್ತು ವ್ಯಂಜನ ಸಂಧಿಗಳಿಗಾಗಿ ವಿಂಗಡಿಸಿ ಬರೆಯಿರಿ ,

ಸಂಸ್ಕೃತ ಸ್ವರ ಸಂಧಿ : ಸವರ್ಣದೀರ್ಘಸಂಧಿ
ಗುಣಸಂಧಿ
ವೃದ್ಧಿಸಂಧಿ
ಯಣ್ ಸಂಧಿ
ಸಂಸ್ಕೃತ ವ್ಯಂಜನ ಸಂಧಿ :
ಜತ್ತ್ವಸಂಧಿ
ಶ್ಚುತ್ವ ಸಂಧಿ
ಅನುನಾಸಿಕ ಸಂಧಿ

ಕೊಟ್ಟಿರುವ ಪದಗಳನ್ನು ಬಿಡಿಸಿ , ಸಂಧಿ ಹೆಸರಿಸಿ
 • ಸುರಾಸುರ = ಸುರ +ಅಸುರ=ಸವರ್ಣದೀರ್ಘ ಸಂಧಿ
  *ಬಲ್ಲೆನೆಂದು =ಬಲ್ಲೆನು+ಎಂದು=ಲೋಪಸಂಧಿ
 • ಸೂರ್ಯೋದಯ = ಗುಣಸಂಧಿ
 • ಮಳೆಗಾಲ =ಮಳೆ+ಕಾಲ=ಆದೇಶ ಸಂಧಿ
  ಅಸ್ತಈಶ್ವರ್ಯ=ಅಷ್ಟ +ಐಶ್ವರ್ಯ=ವೃದ್ಧಿಸಂಧಿ
  ವೇದಿಯಲ್ಲಿ=ವೇಧಿ+ಅಲ್ಲಿ =ಆಗಮಸಂಧಿ

10th Standard Shabari Lesson Notes in Kannada

ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸರಿಯಾದ ನಾಲ್ಕನೆಯ ಸ್ವರ ಬರೆಯಿರಿ .

1.ನಮೋ ನಮೋ : ದ್ವಿರುಕ್ತಿ : : ಧೀರ ಶೂರ

2. ಲೋಪ ಸಂಧಿ : ಸ್ವರ ಸಂಧಿ : : ಆದೇಶ ಸಂಧಿ

3. ಕಟ್ಟಕಡೆಗೆ : ಕಡೆಗೆ ಕಡೆಗೆ : : ಮೊತ್ತಮೊದಲು

4. ಶರಚಂದ್ರ : ಶ್ಚುತ್ವ ಸಂಧಿ :: ದಿಗಂತ

ಉತ್ತರಗಳು | . ಜೋಡುನುಡಿ 2. ವ್ಯಂಜನಸಂಧಿ 3. ಮೊದಲು + ಮೊದಲು 4 , ಜಶ್ವ ಸಂಧಿ

ಕೊಟ್ಟಿರುವ ಗಾದೆಗಳ ಅರ್ಥವನ್ನು ವಿವರಿಸಿ ಬರೆಯಿರಿ
ತಾಳಿದವನು ಬಾಳಿಯಾನು?

ಗಾದೆಗಳು ವೇದಗಳಿಗೆ ಸಮ ಅಥವಾ ವೇದ ಸುಳ್ಳಾದರೂ ಗಾದೆ ಸುಳಲ್ಲ ಎಂಬ ಮಾತುಗಳು ಗಾದೆಗಳ ಮಹತ್ವವನ್ನು ತೋರಿಸುತ್ತವೆ . ಕಿರಿದಾದ ವಾಕ್ಯಗಳಲ್ಲಿ ಹಿರಿದಾದ ಅರ್ಥವನ್ನು ನೀಡುವ ನುಡಿಮುತ್ತುಗಳಾಗಿವೆ . ಇವು ಸತ್ಯವನ್ನು ಪ್ರತಿಬಿಂಬಿಸುತ್ತವೆ . ಇವು ಹಿರಿಯರ ಅನುಭವಾಮೃತಗಳು , ನಮ್ಮ ಬದುಕನ್ನು ಅರ್ಥೈಸಲು ನಮಗೆ ಮಾರ್ಗದರ್ಶಕವಾಗಿವೆ . ಇಲ್ಲಿ ನೀಡಿರುವ ಗಾದೆಯ ಕನ್ನಡದ ಪ್ರಸಿದ್ಧ ಗಾದೆಗಳಲ್ಲಿ ಒಂದೆನಿಸಿದೆ .

ಮಾನವನಿಗೆ ಮುಖ್ಯವಾಗಿರುವ ಗುಣಗಳೆಂದರೆ ಧೈರ್ಯ , ಮನೋಬಲ , ತಾಳ್ಮೆ , ಸಹನೆ ಕಳೆದುಕೊಂಡರೆ ಇವುಗಳೊಂದಿಗೆ ಇರಬೇಕಾದದ್ದು ಸಹನೆ ಬಾಳಲಾಗದು . ಜೀವನದಲ್ಲಿ ಸಂಕಷ್ಟಗಳು ಬರಬಹುದು , ತೊಂದರೆಗಳು ಎದುರಾಗಬಹುದು . ಅವುಗಳನ್ನು ಸಹಿಸಿಕೊಂಡರೆ ಒಳ್ಳೆಯ ದಿನಗಳನ್ನು ಕಾಣಬಹುದು . ಅದಕ್ಕೆ ಬೇಕಾದದ್ದು ಶಾಂತ ಸ್ವಭಾವ . ಅದನ್ನು ರೂಢಿಯಿಂದ ಬೆಳೆಸಿಕೊಳ್ಳಬಹುದು . ತಾಳಿದವನು ಬಾಳುತ್ತಾನೆ . ತಾಳ್ಮೆ ಇಲ್ಲವಾದಲ್ಲಿ ಬಾಳಲಸಾಧ್ಯ . ಇಂತಹ ಗುಣವುಳ್ಳವರನ್ನು ಆದರ್ಶವಾಗಿ ಇಟ್ಟುಕೊಳ್ಳಬಹುದು .

ಮನಸಿದ್ದರೆ ಮಾರ್ಗ?

ಹಿರಿಯರ ಅನುಭವದ ನುಡಿಮುತ್ತೇ ಗಾದೆ . ಕಿರಿಯದಾದ ಮಾತುಗಳಲ್ಲಿ ಹಿರಿಯದಾದ ಅರ್ಥ ಹೇಳುವುದೇ ಗಾದೆಗಳ ವೈಶಿಷ್ಟ್ಯ ಗಾದೆಗಳನ್ನು ಒಬ್ಬರನ್ನು ಇನ್ನೊಬ್ಬರಿಗೆ ಹೋಲಿಸುವಾಗ , ಬುದ್ಧಿವಾದ ಹೇಳುವಾಗ , ತಪ್ಪನ್ನು ಎತ್ತಿ ತಿಳಿ ಹೇಳುವಾಗ , ವಿಶೇಷ ಗುಣಗಳ ಮಹತ್ವವನ್ನು ವಿವರಿಸುವಾಗ ಗಾದೆಗಳನ್ನು ಬಳಸುತ್ತೇವೆ . ಗಾದೆಗಳಿಲ್ಲದ ಭಾಷೆ ಇಲ್ಲ ದೇಶ ಇಲ್ಲ . ಮನಸ್ಸಿದ್ದರೆ ಮಾರ್ಗ ಎನ್ನುವುದು ಒಂದು ಜನಪ್ರಿಯ ಗಾದೆ . ದಿನ ನಿತ್ಯದ ಬದುಕಿನಲ್ಲಿ ಪದೇ ಪದೇ ಬಳಸುತ್ತೇವೆ .

ಯಾವುದೇ ಕಾರ್ಯವನ್ನು ಮಾಡುವಾಗ , ಗುರಿ ಸಾಧಿಸುವಾಗ , ಅಸಾಧ್ಯವಾದದನ್ನು ಸಾಧ್ಯ ಮಾಡಬಹುದು ಎಂದು ನಿರೂಪಿಸಲು ಮನಸ್ಸಿನಿಂದ ಛಲದಿಂದ ಪ್ರಯತ್ನಿಸಬೇಕು . ಆಗ ಗುರಿ ತಲುಪಲು ಮಾರ್ಗ ನಿಚ್ಚಳವಾಗಿ ನಮಗೆ ಗೋಚರವಾಗುತ್ತದೆ . ಅಪಾಯದಲ್ಲಿ ಸಿಕ್ಕಿಕೊಂಡಾಗ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡು ಯೋಚಿಸಿದರೆ ಅದರಿಂದ ಹೊರಬರುವ ಮಾರ್ಗ ತಾನೇತಾನಾಗಿ ಗೋಚರವಾಗುತ್ತದೆ ಎನ್ನುವುದು ಈ ಗಾದೆಯ ಅರ್ಥ .

Shabari Lesson Notes
Shabari Lesson Notes

10th Standard Shabari Lesson Notes in Kannada

ಹೆಚ್ಚುವರಿ ಪ್ರಶೋತ್ತರಗಳು

ಒಂದು ವಾಕ್ಯದಲ್ಲಿ ಉತ್ತರಿಸಿ .

ರಾಮಾಯಣ ಮಹಾ ಕಾವ್ಯ ರಚಿಸಿದವರು ಯಾರು ?

ಆದಿಕವಿ ವಾಲ್ಮೀಕಿಯವರು ರಾಮಾಯಣ ಮಹಾ ಕಾವ್ಯವನ್ನು ರಚಿಸಿದವರು .

ಪು.ತಿ.ನ , ಅವರಿಗೆ ಯಾವ ವಿಶ್ವವಿದ್ಯಾನಿಲಯ ಗೌರವ ಡಿ.ಲಿಟ್ . ಪದವಿ ನೀಡಿ ಗೌರವಿಸಿದೆ ?

ಪು.ತಿ.ನ. ಅವರಿಗೆ ಮೈಸೂರು ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ .

ಮಧುಪರ್ಕ ಎಂದರೇನು ?

ಅತಿಥಿಗಳಿಗೆ ನೀಡುವ ಮೊಸರು , ತುಪ್ಪ , ನೀರು , ಜೇನುತುಪ್ಪ , ಸಕ್ಕರೆ ಮಿಶ್ರಿತ ಪಾನೀಯಗಳನ್ನು ಮಧುಪರ್ಕ ಎನ್ನುತ್ತಾರೆ .

Shabari Lesson Notes
Shabari Lesson Notes

Shabari Lesson Notes FAQ

ನಾಟಕಗಳಲ್ಲಿ ಹಾಡುವುದಕ್ಕಾಗಿ ಇರುವ ಒಂದು ವರ್ಗವನ್ನು ಏನೆನ್ನುತ್ತಾರೆ ?

ನಾಟಕಗಳಲ್ಲಿ ಹಾಡುವುದಕ್ಕಾಗಿ ಇರುವ ಒಂದು ವರ್ಗವನ್ನು ಮೇಳ ಎನ್ನುತ್ತಾರೆ .

ಶಬರಿಯು ಯಾವುದರಲ್ಲಿ ಬೆರೆಯುತ್ತ ಸೀತೆಯನ್ನು ರಕ್ಷಿಸಲಿ ಎಂದು ಶ್ರೀರಾಮನು ಹೇಳುತ್ತಾನೆ ?

ಶಬರಿಯು ಪಂಚಭೂತಗಳಲ್ಲಿ ಬೆರೆಯುತ್ತ ಸೀತೆಯನ್ನು ರಕ್ಷಿಸಲಿ ಎಂದು ಶ್ರೀರಾಮನು ಹೇಳುತ್ತಾನೆ .

ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ

Shabari Lesson Notes kannada

 1. …..ಕವಿ ವಾಲ್ಮೀಕಿ ಪುರುಷೋತ್ತಮನೆಂದು ಬಣ್ಣಿಸಿದ್ದಾರೆ .
 2. .__ಕಾವ್ಯನಾಮದಿಂದ ಪ್ರಸಿದ್ಧರಾಗಿರುವರು ಪುರೋಹಿತ ತಿರುನಾರಾಯಣಯ್ಯಂಗಾರ್ಯ ನರಸಿಂಹಾಚಾರ್ ,
 3. ಶ್ರೀಹರಿಚರಿತೆ ‘ ಕಾವ್ಯಕೃತಿಗೆ_ ಲಭಿಸಿದೆ .
 4. ಋಷ್ಯಮೂಕ ಪರ್ವತದ ಬಳಿ ತಪಸ್ಸು ಮಾಡಿಕೊಂಡಿದ್ದ ಒಬ್ಬ ಬ್ರಹ್ಮರ್ಷಿ__
 5. ಜನಕ ಮಹಾರಾಜನ ಮಗಳು_
 6. ……….. ಜನಕ ಮಹಾರಾಜನು ಸಂತಾನ ಫಲಕ್ಕಾಗಿ ಯಾಗ ಮಾಡಿದನು.
 7. ಚಿತ್ರಕೂಟವು ಒಂದು ಪರ್ವತ , ಇದು ಉತ್ತರ ಭಾರತದ_ ನದಿಯ ಪಕ್ಕದಲ್ಲಿದೆ . 8.ಸುಮಿತ್ರೆಯ ಮಗನಾದುದರಿಂದಎಂದು ಲಕ್ಷ್ಮಣನ ನು ಕರೆಯುತ್ತಾರೆ.
 8. ದನು ದಂಡಕಾರಣ್ಯದಲ್ಲಿ ವಾಸಮಾಡುತ್ತಿದ್ದ
  . ಎಂಬ ಹೆಸರಿನ ರಾಕ್ಷಸ 10. ದನುವಿನ ಮುಖ ಕುಸಿದು ಹೊಟ್ಟೆಯೊಳಗೆ ಸೇರಿಕೊಂಡಿತು . ಹಾಗಾಗಿ ಈತನಿಗೆ ಎಂಬ ಹೆಸರು ಬಂತು . ಯಾಗ ಮಾಡಿದನು

ಉತ್ತರಗಳು

 1. ಶ್ರೀರಾಮನನ್ನು
 2. ಪು.ತಿ.ನ
 3. ಪಂಪ ಪ್ರಶಸ್ತಿ
  4 , ಮತಂಗ
 4. ಸೀತಾ
 5. ಪುತ್ರಕಾಮೇಷ್ಠಿ
  7 , ಪಯೋಷ್ಠಿ
 6. ಸೌಮಿತ್ರಿ
 7. ಕಬಂಧ
 8. ಉದರಮುಖ

Shabari Lesson Notes karnataka

ಪದಗಳನ್ನು ಬಿಡಿಸಿ ಸಂಧಿಯನ್ನು ಹೆಸರಿಸಿರಿ

ಪದಗಳನ್ನು ಬಿಡಿಸಿ ಸಂಧಿಯನ್ನು ಹೆಸರಿಸಿರಿ
 1. ಮನೋಹರವಾದುದು . ಮನೋಹರ +ಆದುದು=ಅಗಮಸಂದಿ
 2. ಆನಂದವನ್ನು- ಆನಂದ +ಅನ್ನು-ಆಗಮಸಂಧಿ
 3. ಪದ್ಯಗಳಿಂದ- ಪದ್ಯಗಳು + ಅನ್ನು=ಲೋಪಸಂಧಿ
  4.ಸಮೃದ್ದವಾಗಿ- ಸಮೃದ್ಧ-ಆಗಿ=ಅಗಮಸಂದಿ
 4. ಸಂಗಮವಾದ – ಸಂಗಮ+ ಆದ-ಅಗಮಸಂಧಿ
 5. ವಾಲ್ಮೀಕಿಯವರು- ವಾಲ್ಮೀಕಿ+ಅದ-ಅಗಮಸಂದಿ
 6. ಲೋಕವನ್ನು- ಲೋಕ+ಅದ-ಅಗಮಸಂದಿ
 7. ಸೀತಾಪಹರಣ- ಸೀತಾ+ಅದ-ಸವರ್ಣಧೀರ್ಘಸಂಧಿ
 8. ಮಹರ್ಷಿ – ಮಹಾ +ಅದ-ಗುಣಸಂದಿ
 9. ಬ್ರಹ್ಮರ್ಷಿ- ಬ್ರಹ್ಮ+ಅದ-ಗುಣಸಂಧಿ

Shabari Lesson Notes prashnottaragalu

ಇನ್ನು ಹೆಚ್ಚು ಓದಿ …….

Leave a Reply

Your email address will not be published. Required fields are marked *