370 Article Essay in Kannada | ಆರ್ಟಿಕಲ್ 370 ಕುರಿತು ಪ್ರಬಂಧ

370 Article Essay in Kannada | ಆರ್ಟಿಕಲ್ 370 ಕುರಿತು ಪ್ರಬಂಧ

370 Article Essay in Kannada, ಆರ್ಟಿಕಲ್ 370 ಕುರಿತು ಪ್ರಬಂಧ, about 370 article in kannada,370 Vidi prabanda kannada essay, prabanda in kannada

370 Article Essay in Kannada

“ ಒಂದು ರಾಷ್ಟ್ರದಲ್ಲಿ ಎರಡು ಕಾನೂನು

ಇಬ್ಬರು ಮುಖ್ಯಸ್ಥರು ಹಾಗೂ ಎರಡು ಧ್ವಜಗಳು ನಡೆಯುವುದಿಲ್ಲ

ದೀನದಯಾಳ್ ಉಪಾಧ್ಯಾಯ

ದೇಶದ ಆಡಳಿತ ವ್ಯವಸ್ಥೆಯಲ್ಲಿ ವಿಶೇಷ ಸ್ಥಾನಮಾನದೊಂದಿಗೆ ಪ್ರತ್ಯೇಕವಾಗಿದ್ದ ಜಮ್ಮು & ಕಾಶ್ಮೀರವನ್ನು ಎರಡಾಗಿ ವಿಭಜಿಸಿ ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸುವುದರೊಂದಿಗೆ ಜಮ್ಮು & ಕಾಶ್ಮೀರದ 370 ನೇ ವಿಧಿ ಮತ್ತು 35 ಎ ವಿಧಿಗಳನ್ನು ರದ್ದು ಮಾಡಲಾಗಿದೆ .

ಈ ರದ್ದತಿಯಿಂದ ಇನ್ನು ಮುಂದೆ ಜಮ್ಮು & ಕಾಶ್ಮೀರ ರಾಜ್ಯವನ್ನು ಜಮ್ಮು & ಕಾಶ್ಮೀರ ಡಿವಿಷನ್ ಮತ್ತು ಲಡಾಖ್ ಡಿವಿಷನ್ ಎಂದು ವಿಭಜಿಸಿ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಪರಿವರ್ತಿಸಲಾಗುತ್ತಿದೆ .

ಯಾವ ರಾಜ್ಯಗಳಿಗೆ, ಭಾರತೀಯ ಸಂವಿಧಾನದ 370 ನೇ ವಿಧಿ ಸಂಬಂಧಿಸಿದೆ

ಜಮ್ಮು ಮತ್ತು ಕಾಶ್ಮೀರ

ಆರ್ಟಿಕಲ್ 370 ಅನ್ನು ಭಾರತೀಯ ಸಂವಿಧಾನದ ಯಾವ ಭಾಗದಲ್ಲಿ ರಚಿಸಲಾಗಿದೆ.

XXI

370 ನೇ ವಿಧಿಯ ಹಿನ್ನೆಲೆ :

ಭಾರತದ ಸ್ವತಂತ್ರ್ಯದ ನಂತರ 549 ಸಂಸ್ಥಾನಗಳು ಭಾರತದೊಂದಿಗೆ ವಿಲೀನವಾದವು . ಆದರೆ ಜಮ್ಮು & ಕಾಶ್ಮೀರವನ್ನು ಆಳುತ್ತಿದ್ದ ರಾಜಾ ಹರಿಸಿಂಗ್ ಸ್ವತಂತ್ರವಾಗಿ ಇರಲು ಬಯಸಿದ್ದ .

ಆದರೆ ಪಾಕಿಸ್ತಾನದ ಗೆರಿಲ್ಲಾಗಳು ಕಾಶ್ಮೀರವನ್ನು ಒತ್ತುವರಿ ಮಾಡಿಕೊಂಡರು .

ಅವರಿಂದ ತನ್ನ ಸಾಮ್ರಾಜ್ಯ ರಕ್ಷಿಸಿಕೊಳ್ಳಲು ರಾಜಾ ಹರಿಸಿಂಗ್ ಭಾರತದೊಂದಿಗೆ ವಿಲೀನವಾಗಲು ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂರವರ ನಡುವೆ 1947 ಅಕ್ಟೋಬರ್ 26 ರಂದು ಒಪ್ಪಂದವಾಗಿತ್ತು .

ಇದನ್ನು “ ವಿಲೀನ ಒಪ್ಪಂದ ” ಎನ್ನುವರು . ಜಮ್ಮು & ಕಾಶ್ಮೀರಕ್ಕೆ ವಿಶೇಷಾಧಿಕಾರ ಮತ್ತು ವಿಶೇಷ ಸ್ಥಾನಮಾನ ನೀಡುವ ಷರತ್ತು ಈ ವಿಲೀನ ಒಪ್ಪಂದದಲ್ಲೇ ಇತ್ತು .

370 ನೇ ವಿಧಿಯನ್ನು 1949 ರಲ್ಲಿ ರೂಪಿಸಿ ‘ ತಾತ್ಕಾಲಿಕ ಕರಾರು ‘ ಎಂದೇ ಉಲ್ಲೇಖಿಸಲ್ಪಟ್ಟಿದ್ದು ಸಂವಿಧಾನದ 21 ನೇ ಭಾಗದಲ್ಲಿ ಈ ವಿಧಿಯ ಉಲ್ಲೇಖವಿದೆ .

ಈ ವಿಧಿಯ ಅಂಶಗಳು :

1. ಜಮ್ಮು & ಕಾಶ್ಮೀರಕ್ಕೆ ತನ್ನದೇ ಆದ ಪ್ರತ್ಯೇಕ ಸಂವಿಧಾನವನ್ನು ಹೊಂದಲು ಈ ವಿಧಿಯು ಅವಕಾಶ ನೀಡುತ್ತದೆ . ಭಾರತ ಸಂವಿಧಾನದಿಂದ ಜಮ್ಮು & ಕಾಶ್ಮೀರಕ್ಕೆ ವಿನಾಯಿತಿ ನೀಡುತ್ತದೆ .

2. ಜಮ್ಮು & ಕಾಶ್ಮೀರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ / ಸಂಸತ್ತಿನ ಅಧಿಕಾರವನ್ನು ಈ ವಿಧಿಯು ಸೀಮಿತಗೊಳಿಸುತ್ತದೆ .

ಭದ್ರತೆ , ವಿದೇಶಾಂಗ ವ್ಯವಹಾರ ಮತ್ತು ಸಂಪರ್ಕಕ್ಕೆ ಸಂಬಂಧಿಸಿದಂತೆ ಮಾತ್ರ ಭಾರತದ ಸಂಸತ್ತು ಜಮ್ಮು & ಕಾಶ್ಮೀರದ ಮೇಲೆ ಕಾನೂನು ರೂಪಿಸಬಹುದು .

3. ಕೇಂದ್ರ ಸರ್ಕಾರದ ಇತರ ಯಾವುದೇ ಸಂವಿಧಾನಿಕ ಅಧಿಕಾರವನ್ನು ಜಮ್ಮು & ಕಾಶ್ಮೀರದ ಮೇಲೆ ಅನ್ವಯಿಸುವ ಮುನ್ನ ಜಮ್ಮು & ಕಾಶ್ಮೀರದ ಒಪ್ಪಿಗೆ ಪಡೆಯಬೇಕು . ಇದಕ್ಕೆ ಜಮ್ಮು & ಕಾಶ್ಮೀರದ ಸಂವಿಧಾನ ರಚನಾ ಸಭೆಯ ಸಮ್ಮತಿ ಅಗತ್ಯ .

4.ಜಮ್ಮು & ಕಾಶ್ಮೀರದ ಸಂವಿಧಾನ ರಚನಾ ಸಭೆಯು , ಸಭೆ ಸೇರುವವರಿಗೆ ಮಾತ್ರ ರಾಜ್ಯ ಸರ್ಕಾರಕ್ಕೆ ಸಮ್ಮತಿ ಸೂಚಿಸುವ ಅಧಿಕಾರವಿರುತ್ತದೆ .

ಅಧಿಕಾರ ಹಂಚಿಕೆಯನ್ನು ಜಮ್ಮು & ಕಾಶ್ಮೀರದ ಸಂವಿಧಾನ ರಚನಾ ಸಭೆಯು ಅಂತಿಮಗೊಳಿಸಿದ ನಂತರ ಅದರಲ್ಲಿ ಯಾವುದೇ ಬದಲಾವಣೆ ಮಾಡಲು ಅವಕಾಶವಿಲ್ಲ .

5. ಜಮ್ಮು & ಕಾಶ್ಮೀರದ ಸಂವಿಧಾನ ರಚನಾ ಸಭೆಯ ಶಿಫಾರಸ್ಸಿನ ಆಧಾರದ ಮೇಲೆ ಭಾರತ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಬಹುದು ಎಂದು 370 ವಿಧಿಯ 3 ನೇ ಅವಧಿಯನ್ನು ರದ್ದುಗೊಳಿಸಬಹುದು ಎಂದು 370 ವಿಧಿಯ 3 ನೇ ಸೆಕ್ಷನ್‌ನಲ್ಲಿ ವಿವರಿಸಲಾಗಿದೆ .

ಈ ವಿಧಿಯು ಸಿಂದುತ್ವ ಕಳೆದುಕೊಳ್ಳುತ್ತದೆ ಎಂದು ಘೋಷಿಸುವ ಅಧಿಕಾರವನ್ನು ರಾಷ್ಟ್ರಪತಿ ಅವರಿಗೆ 3 ನೇ ಸೆಕ್ಷನ್ ನೀಡುತ್ತದೆ .

6. ಭಾರತ ಸ್ವಾತಂತ್ರ್ಯದ ನಂತರ 1965 ರವರೆಗೆ ಜಮ್ಮು & ಕಾಶ್ಮೀರದ ಮುಖ್ಯಮಂತ್ರಿಯವರನ್ನು ಪ್ರಧಾನಿ ‘ ಎಂದು ರಾಜ್ಯಪಾಲರನ್ನು ಸಾದರೆ – ಇ – ರಿಯಾಸತ್ ಎನ್ನುತ್ತಿದ್ದರು .

35 ಎ ವಿಧಿಯ ಬಗ್ಗೆ

1954 ರ ಮೇ 14 ರಂದು ರಾಷ್ಟ್ರಪತಿಯವರ ಆದೇಶದ ಮೂಲಕ 370 ನೇ ವಿಧಿಗೆ ಪೂರಕವಾಗಿ 35 ಎ ವಿಧಿಯನ್ನು ಸೇರಿಸಲಾಯಿತು .

ಇದನ್ನು ಮೂಲ ಸಂವಿಧಾನದಲ್ಲಿ ಸೇರಿಸಿಲ್ಲ ಬದಲಿಗೆ ಸಂವಿಧಾನದ ಅನುಬಂಧದಲ್ಲಿ 35 ಎ ವಿಧಿಯನ್ನು ಪಟ್ಟಿ ಮಾಡಲಾಗಿದೆ .

ಅಂಶಗಳು

1. ಜಮ್ಮು & ಕಾಶ್ಮೀರದ ಶಾಶ್ವತ ನಿವಾಸಿಗಳು ಯಾರು ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ಇದು ನೀಡುತ್ತದೆ .

2. ಶಾಶ್ವತ ನಿವಾಸಿಗಳ ಹಕ್ಕುಗಳನ್ನು ಇದು ನಿರ್ಧರಿಸುತ್ತದೆ . ಈ ಪ್ರಕಾರ ಶಾಶ್ವತ ನಿವಾಸಿಗಳು ಮಾತ್ರ ರಾಜ್ಯದಲ್ಲಿ ಸ್ಥಿರಾಸ್ತಿಯನ್ನು ಖರೀದಿಸಬಹುದು . ಸರ್ಕಾರಿ ನೌಕರಿ ಪಡೆಯಬಹುದು ಮತ್ತು ವ್ಯವಹಾರಗಳನ್ನು ನಡೆಸಬಹುದು . 3. ವಿದ್ಯಾರ್ಥಿ ವೇತನ ಸೇರಿದಂತೆ ಸರ್ಕಾರದ ಯಾವುದೇ ನೆರವನ್ನು ರಾಜ್ಯದ ಶಾಶ್ವತ ನಿವಾಸಿಗಳಿಗೆ ಮಾತ್ರ ಇದು ಸೀಮಿತಗೊಳಿಸುತ್ತದೆ .

370 ನೇ ವಿಧಿ ಮತ್ತು 35 ಎ ವಿಧಿಗಳನ್ನು ರದ್ದು ಮಾಡಲು ಕಾರಣಗಳು

370 ನೇ ವಿಧಿಯ ಕಾರಣದಿಂದಾಗಿ 1989 ರಿಂದ 2018 ರ ನಡುವೆ ರಾಜ್ಯದಲ್ಲಿ 41,849 ಮಂದಿಯ ಹತ್ಯೆಯಾಗಿದೆ .

ಜಮ್ಮು & ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ನೆಲೆಯಾಗಲು 370 ನೇ ವಿಧಿಯೇ ದೊಡ್ಡ ತೊಡಬೇಕಾಗಿತ್ತು .

ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡಲು ಮತ್ತು ಬಡತನ ಮಡುಗಟ್ಟಲು ಇದು ಕಾರಣವಾಗಿತ್ತು .

ಇದು ಮಹಿಳೆಯರು , ದಲಿತರು ಮತ್ತು ಆದಿವಾಸಿಗಳಿಗೆ ಮಾರಕವಾಗಿತ್ತು .

ಇದು ಭಯೋತ್ಪಾದನೆಯ ಮೂಲವಾಗಿತ್ತು . ಕಾಶ್ಮೀರ ಕಣಿವೆಯನ್ನು ಭಯೋತ್ಪಾದನೆಯಿಂದ ಮುಕ್ತಗೊಳಿಸುವ ಉದ್ದೇಶದಿಂದ 370 ನೇ ವಿಧಿಯನ್ನು ರದ್ದುಗೊಳಿಸಲಾಯಿತು .

ಸಂವಿಧಾನದ 370 ನೇ ವಿಧಿ ಜಾರಿಯಾಲ್ಲಿದ್ದ ಕಾರಣ ಜಮ್ಮು & ಲಡಾಖ್ ಭಾಗದ ಜನರಿಗೆ ಬಹಳಷ್ಟು ಸಮಸ್ಯೆ ಉಂಟಾಗಿದ್ದು ಕಾಶ್ಮೀರದ ಜನರು ಈ ವಿಧಿಯ ಎಲ್ಲ ಸೌಲಭ್ಯಗಳನ್ನು ಅನುಭವಿಸುತ್ತಿದ್ದರು .

ವಿಶೇಷವಾಗಿ ಹೊರ ರಾಜ್ಯದವರನ್ನು ವಿವಾಹವಾದ ಮಹಿಳೆಯರಿಗೆ ಪಾಲಕರ ಆಸ್ತಿಯಲ್ಲಿ ಪಾಲು ಸಿಗುತ್ತಿರಲಿಲ್ಲ .

ಕಾಶ್ಮೀರದ ಜನರಿಗೆ ಅಪ್ಯಾಯಮಾನವಾಗಿರುವ ವಿಶೇಷ ಸವಲತ್ತುಗಳು ಜಮ್ಮು & ಲಡಾಖ್ ಭಾಗದ ಜನರಿಗೆ ಕಂಟಕವಾಗಿ ಪರಿಣಮಿಸಿತು .

ಇಂಡಿಯನ್ ಪೀನಲ್ ಕೋಡ್ ಬದಲಿಗೆ ರಣವೀರ್ ಪೀನಲ್ ಕೋಡ್ ಜಾರಿಯಲ್ಲಿತ್ತು .

ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಆಗಿಲ್ಲ . ಸಂಪೂರ್ಣವಾಗಿ ದೇಶದಲ್ಲಿ 2002 ರಲ್ಲಿ ಲೋಕಸಭೆ ಮತದಾರ ಕ್ಷೇತ್ರಗಳ ಮರುವಿಂಗಡಣೆ ಆಗಿದ್ದರೂ ಜಮ್ಮು & ಕಾಶ್ಮೀರದಲ್ಲಿ ಆಗಿರಲಿಲ್ಲ . ರಾಜ್ಯದಲ್ಲಿ ಇತರೆ ಹಿಂದುಳಿದ ವರ್ಗದವರಿಗೆ ಮೀಸಲಾತಿ ಇಲ್ಲ . ಪರಿಶಿಷ್ಟ ಪಂಗಡದವರಿಗೂ 1991 ರ ವರೆಗೂ ಮೀಸಲಾತಿ ಇರಲಿಲ್ಲ .

ಈಗ ಅವರಿಗೆ ಉದ್ಯೋಗ ಶಿಕ್ಷಣದಲ್ಲಿ ಮೀಸಲಾತಿ ನೀಡಲಾಗಿದ್ದರೂ ರಾಜಕೀಯ ಮೀಸಲಾತಿ ಇಲ್ಲ .

ಭಾರತದ ಇನ್ನಿತರೆ ರಾಜ್ಯಗಳಲ್ಲಿ ವಿಧಾನ ಸಭೆಗಳ ಕಾಲಾವಧಿ 5 ವರ್ಷಗಳಾಗಿದ್ದರೂ , ಜಮ್ಮು & ಕಾಶ್ಮೀರದ ವಿಧಾನ ಸಭೆ ಅವಧಿ 6 ವರ್ಷಗಳಾಗಿತ್ತು . * ಆರ್.ಟಿ.ಐ ಅನ್ವಯವಾಗುತ್ತಿರಲಿಲ್ಲ .

ಜನಪ್ರತಿನಿಧಿಗಳು ಜಮ್ಮು & ಕಾಶ್ಮೀರದ ಹೆಸರಿನಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸುತ್ತಿದ್ದರೆ ಹೊರತು ಭಾರತ ಸಂವಿಧಾನದ ಹೆಸರಿನಲ್ಲಿ ಅಲ್ಲ .

ಜಮ್ಮು & ಕಾಶ್ಮೀರರ ಪ್ರತ್ಯೇಕ ಸಂವಿಧಾನ ಮತ್ತು ಪ್ರತ್ಯೇಕ ಧ್ವಜ ಸಂಹಿತೆ ಅಸ್ತಿತ್ವದಲ್ಲಿತ್ತು .

ಕಾಶ್ಮೀರಿಗಳು ಬಡವರಾಗಿ ಉಳಿದಿದ್ದಾರೆ . ಕಾಶ್ಮೀರದ ಜಮೀನಿಗೆ ಈಗ ಬೇಡಿಕೆಯೂ ಇಲ್ಲ ಬೆಲೆಯೂ ಇಲ್ಲ . ಜಮೀನಿನ ಮಾಲಿಕತ್ವ ಸಮಸ್ಯೆ ಇರುವುದರಿಂದ ಯಾರೂ ಇಲ್ಲಿ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಮುಂದಾಗುತ್ತಿಲ್ಲ .

ಈ ರದ್ದತಿಯಿಂದ ಆಗುವ ಅನಾನುಕೂಲಗಳು

370 ನೇ ವಿಧಿ ಅಸಿಂಧುಗೊಳಿಸುವ ಮೂಲಕ ಭಾರತದ ಇತರ ಭಾಗಗಳ ಜೊತೆ ಜಮ್ಮು & ಕಾಶ್ಮೀರಕ್ಕೆ ಇದ್ದ ಸಂವಿಧಾನಿಕ ಹಾಗೂ ಐತಿಹಾಸಿಕ ಸಂಪರ್ಕ ಕೊನೆಗೊಂಡು , 1940 ರ ದಶಕದಲ್ಲಿದ್ದ ಪ್ರಕುಬ್ಧತೆ ಮತ್ತೆ ಬರಬಹುದು ಪಾಕಿಸ್ತಾನ ಜಾಗತಿಕ ಮಟ್ಟದಲ್ಲಿ ಭಾರತದೊಂದಿಗೆ ಯುದ್ಧ ಮಾಡುವ ಸಾಧ್ಯತೆ .

370 ನೇ ವಿಧಿ ಮತ್ತು 35 ಎ ವಿಧಿಗಳ ರದ್ದತಿಯಿಂದ ಇಡೀ ರಾಜ್ಯದ ಜನಸಂಖ್ಯೆ ಮತ್ತು ಜನಾಂಗೀಯ ಸ್ವರೂಪವೇ ಏರುಪೇರಾಗಬಹುದು .

ಜಮ್ಮು & ಕಾಶ್ಮೀರವನ್ನು ಭಾರತದೊಂದಿಗೆ ವಿಲೀನ ಮಾಡುವ ವೇಳೆ ‘ ರಾಜಾ ಹರಿಸಿಂಗ ಅವರೊಂದಿಗೆ ಮಾಡಿಕೊಂಡ ಷರತ್ತಿನ ಉಲ್ಲಂಘನೆಯಾಗುತ್ತದೆ . ಕಾರಣ ಷರತ್ತು ಹೀಗಿತ್ತು – ” ವಿಲೀನ ಪತ್ರದಲ್ಲಿನ ನನ್ನ ಷರತ್ತುಗಳನ್ನು ಯಾವುದೇ ತಿದ್ದುಪಡಿಕಾಯ್ದೆ ಅಥವಾ 1947 ರ ಭಾರತದ ಸ್ವಾತಂತ್ರ್ಯ ಕಾಯ್ದೆಯ ಮೂಲಕ ಬದಲಿಸುವಂತಿಲ್ಲ . ನಾನು ಒಪ್ಪಿಗೆ ಸೂಚಿಸಿರುವ ಪೂರಕ ಒಪ್ಪಂದದ ಮೂಲಕವಷ್ಟೇ ಅಂತಹ ಬದಲಾವಣೆಗಳನ್ನು ಮಾಡಬೇಕು )

ಸುಪ್ರೀಂಕೋರ್ಟ್‌ನ ಆದೇಶ :

ಭಾರತದ ಸ್ಟೇಟ್ ಬ್ಯಾಂಕ್ ಮತ್ತು ಸಂತೋಷ್ ಗುಪ್ತ ನಡುವಿನ ವ್ಯಾಜ್ಯದಲ್ಲಿ ಸುಪ್ರೀಂಕೋರ್ಟ್ ಈ ಕೆಳಕಂಡಂತೆ ಆದೇಶಿಸಿದೆ . ಸಂವಿಧಾನದ 370 ನೇ ವಿಧಿಯನ್ನು ಜಮ್ಮು ಮತ್ತು ಕಾಶ್ಮೀರದ ಸಂವಿಧಾನ ರಚನಾ ಸಭೆಯ ಒಪ್ಪಿಗೆ ಮೂಲಕವಷ್ಟೇ ರದ್ದುಪಡಿಸಬಹುದು ಎಂದು ಸಂವಿಧಾನದ 370 ( 3 ) ನೇ ವಿಧಿಯು ಹೇಳುತ್ತದೆ .

ರಾಜ್ಯದ ಸಂವಿಧಾನ ಸಭೆಯು ರದ್ದಾಗಿರುವ ಕಾರಣ 370 ನೇ ವಿಧಿಯು ನೀಡುವ ವಿಶೇಷ ಅಧಿಕಾರವು ಶಾಶ್ವತವಾಗಿ ಮಾರ್ಪಟ್ಟಿದೆ .

370 ನೇ ವಿಧಿ ಮತ್ತು 35 ಎ ವಿಧಿಯ ರದ್ಧತಿಯ ಪರಿಣಾಮಗಳು

1. ಕಾಶ್ಮೀರಿಗಳಿಗೆ ಇನ್ನು ದ್ವಿಪೌರತ್ವವಿಲ್ಲ .

2. ಅಲ್ಪಸಂಖ್ಯಾತರಿಗೆ ಶೇ .16 ಮೀಸಲಾತಿ ,

3. ಸಂವಿಧಾನದ 360 ನೇ ವಿಧಿ ಕಾಶ್ಮೀರಕ್ಕೆ ಅನ್ವಯ .

4. ವಿಧಾನಸಭೆ ಅವಧಿ 6 ವರ್ಷದಿಂದ 5 ವರ್ಷಕ್ಕೆ ಇಳಿಕೆ ಆಗಲಿದೆ .

5. ಮಹಿಳೆಯರ ನೇಮಕಕ್ಕೆ ಅವಕಾಶ ಹೊಸ ನಿಯಮದ ಪ್ರಕಾರ ಲೆಫ್ಟಿನೆಂಟ್ ಗವರ್ನರ್ ಅವರಿಗೆ ಮಹಿಳಾ ವಿಧಾನಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯ ಕಡಿಮೆ ಎಂದು ಕಂಡು ಬಂದರೆ ಇಬ್ಬರು ಮಹಿಳಾ ಪ್ರತಿನಿಧಿಗಳನ್ನು ನಾಮನಿರ್ದೇಶನದ ಮೂಲಕ ಆಯ್ಕೆ ಮಾಡಬಹುದು .

6. ಬೇರೆ ರಾಜ್ಯಗಳಂತೆ ಇಲ್ಲಿನ ಪಂಚಾಯತಿಗಳಿಗೂ ಅದೇ ಮಾದರಿ ಹಕ್ಕುಗಳಿರಲಿವೆ .

7. ಮಕ್ಕಳಿಗೆ ಶಿಕ್ಷಣದ ಹಕ್ಕು ಕಾನೂನಿನ ಅನುಕೂಲ ಸಿಗಲಿದೆ .

8.ಕಾಶ್ಮೀರಿ ಪಂಡಿತರ ವಾಪಸಾತಿಗೆ ಅನುಕೂಲ : 1990 ರ ದಶಕದಲ್ಲಿ ಕಾಶ್ಮೀರ ಕಣಿವೆಯನ್ನು ತೊರೆದಿದ್ದ ಕಾಶ್ಮೀರಿ ಪಂಡಿತರು ಮರಳಿ ಬರಲು ಸಹಕಾರಿಯಾಗಿದೆ . 1990 ರಲ್ಲಿ ಕಣಿವೆಯಿಂದ 7.5 ಲಕ್ಷ ಮಂದಿ ಒತ್ತಾಯ ಪೂರ್ವಕವಾಗಿ ಕಾಶ್ಮೀರಿ ಪಂಡಿತರವನ್ನು ಗಡಿಪಾರು ಮಾಡಲಾಗಿತ್ತು .

9. ಪ್ರತ್ಯೇಕ ಸಂವಿಧಾನ ಮತ್ತು ಪ್ರತ್ಯೇಕ ಧ್ವಜವಿಲ್ಲ .

10. ಕಾನೂನು ಸುವ್ಯವಸ್ಥೆ ಕೇಂದ್ರದ ಕೈಯಲ್ಲಿ ನೂತನವಾಗಿ ರಚಿತವಾದ ಈ ಕೇಂದ್ರಾಡಳಿತ ಪ್ರದೇಶದಲ್ಲಿ ಎಲ್ಲ ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆ ಮೇಲೆ ಕೇಂದ್ರ ಸರ್ಕಾರ ಇನ್ನು ಮುಂದೆ ಸಂಪೂರ್ಣ ಅಧಿಕಾರ ಹೊಂದಿರಲಿದೆ .

11. ಜಮ್ಮು & ಕಾಶ್ಮೀರದಲ್ಲಿ ಇನ್ನು ಮುಂದೆ ರಾಜ್ಯಪಾಲರ ಸ್ಥಾನವನ್ನು ರಾಷ್ಟ್ರಪತಿಗಳ ಆಡಳಿತಾತ್ಮಕ ಪ್ರತಿನಿಧಿಯಾಗಿರುವ ಲೆಫ್ಟಿನೆಂಟ್ ಗವರ್ನರ್ ಅವರು ತುಂಬಲಿದ್ದಾರೆ .

12. ಪ್ರಸ್ತುತ ಇರುವ ಜಮ್ಮು ಹೈಕೋರ್ಟ್‌ನ ವ್ಯಾಪ್ತಿಗೆ ಲಡಾಖ್ ಕೇಂದ್ರ ಪ್ರದೇಶವು ಸೇರಿದ್ದು ಎರಡಕ್ಕೂ ಒಂದೇ ಹೈಕೋರ್ಟ್‌ ಇರಲಿದೆ .

13. ಜಮ್ಮು & ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಹಾಗು ಲಡಾಖ್ ಕೇಂದ್ರಾಡಳಿತ ಪ್ರದೇಶದಲ್ಲಿ ಯಾವುದೇ ಸ್ವರೂಪದ ಉದ್ದಿಮೆ ಅಥವಾ ವ್ಯವಹಾರವನ್ನು ಇನ್ನು

14. ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಸಂಸ್ಥೆಗಳು ಮತ್ತು ವ್ಯವಹಾರಿಕ ಸಂಸ್ಥೆಗಳು ಇಲ್ಲಿ ಸ್ಥಾಪನೆಯಾಗಲಿವೆ . ಮುಂದೆ ನಡೆಸಬಹುದು .

15. ಪ್ರವಾಸೋಧ್ಯಮವು ತ್ವರಿತವಾಗಿ ಬೆಳೆಯಲಿದೆ .

370 ನೇ ವಿಧಿ ಹಾಗೂ 35 ಎ ವಿಧಿಯ ರದ್ದತಿಯ ಪರಿಣಾಮಗಳನ್ನು ಆಲಿಸಿದಾಗ ಈ ಉದ್ದೇಶಕ್ಕಾಗಿ ಹೋರಾಟ ಮಾಡಿ ಹುತಾತ್ಮರಾದ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಆತ್ಮಕ್ಕೆ ಶಾಂತಿ ಸಿಕ್ಕಿದೆ ಎಂದು ಹೇಳಬಹುದು .

ಜಮ್ಮು & ಕಾಶ್ಮೀರ ಮತ್ತು ಲಡಾಖ್‌ಗೆ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ಜಮ್ಮು & ಕಾಶ್ಮೀರ ಶಾಸನ ಸಭೆ ಹೊಂದಿರಲಿದ್ದು , ಇದು ದೆಹಲಿ ಮತ್ತು ಪಾಂಡಿಚೇರಿ ಸ್ಥಾನಮಾನ ಪಡೆಯಲಿದೆ . ಈ ಮೂಲಕ ಪ್ರಸ್ತುತವಾಗಿ ವಿಸ್ತೀರ್ಣದಲ್ಲಿ ಅತಿ ದೊಡ್ಡ ಕೇಂದ್ರಾಡಳಿತ ಪ್ರದೇಶವಾಗಿದೆ .

ಲಡಾಖ್‌ನಲ್ಲಿ ಯಾವುದೇ ವಿಧಾನ ಸಭೆ ಇರುವುದಿಲ್ಲ ಲೆಫ್ಟಿನಂಟ್ ಗವರ್ನರ್ ಇರುತ್ತಾರೆ .

ಉಪಸಂಹಾರ

ಒಟ್ಟಾರೆಯಾಗಿ 370 ನೇ ವಿಧಿ ಮೂಲತಃ ಕಾಶ್ಮೀರದ ಸ್ವಾಯತ್ತೆತೆಗೆ ಸಂಬಂಧಿಸಿದ ವಿಚಾರ . ಅಲ್ಲಿನ ಜನರ ಬದುಕಿಗೆ ಹತ್ತಿರವಾದ ಪ್ರಶ್ನೆಯೂ ಹೌದು .

ವಿಧಿ 35 ಎ ಶಾಶ್ವತ ನಿವಾಸಿಗಳ ಹಕ್ಕುಗಳನ್ನು ನಿರ್ಧರಿಸುತ್ತಿತ್ತು , ಅದನ್ನು ಪ್ರಜಾತಾಂತ್ರಿಕ ಚೌಕಟ್ಟಿನಲ್ಲೇ ನಿರ್ಧರಿಸಬೇಕಿತ್ತು ಎಂಬುದು ಒಂದು ಕಡೆಯಾದರೆ ಈ ರದ್ದತಿಯಿಂದ ಕಾಶ್ಮೀರ ಹಾಗೂ ಲಡಾಖ್ ಪ್ರದೇಶಗಳಿಗೆ ಇಂದು ಸ್ವಂತಂತ್ರ ಸಿಕ್ಕಂತಾಗಿದೆ .

ಜಮ್ಮು & ಕಾಶ್ಮೀರ ಪ್ರದೇಶದ ಅಭಿವೃದ್ಧಿಯ ಕನಸು ನನಸಾಗಲಿದೆ ಹಾಗೂ ದೇಶ ಒಂದೇ ಎಂಬ ಭಾವನೆ ಉಂಟು ಮಾಡುವ ಈ ತೀರ್ಮಾನ ಒಳ್ಳೆಯ ನಡೆಯಾಗಿದ್ದು ಭಾರತೀಯರ ಪಾಲಿಗೆ 2019 ಆಗಸ್ 5 ಸುವರ್ಣಾಕರಗಳಲ್ಲಿ ಬರೆದಿಡುವ ದಿನವಾಗಿದೆ .

ಇನ್ನು ಹೆಚ್ಚಿನದನ್ನು ಓದಿ :ಜಲ ಮಾಲಿನ್ಯ ಬಗ್ಗೆ ಪ್ರಬಂಧ

ಇತರೆ ಪ್ರಬಂಧಗಳು :

ರೈತರ ಆತ್ಮಹತ್ಯೆ ಕುರಿತು ಪ್ರಬಂಧ

ಜಲ ಮಾಲಿನ್ಯ ಬಗ್ಗೆ ಪ್ರಬಂಧ

ವೆಬ್ಸೈಟ್

Leave a Reply

Your email address will not be published. Required fields are marked *