Raithara Atmahatye Essay in Kannada | ರೈತರ ಆತ್ಮಹತ್ಯೆ ಕುರಿತು ಪ್ರಬಂಧ

Raithara Atmahatye Essay in Kannada | ರೈತರ ಆತ್ಮಹತ್ಯೆ ಕುರಿತು ಪ್ರಬಂಧ

Raithara Atmahatye Essay in Kannada, ರೈತರ ಆತ್ಮಹತ್ಯೆ ಕುರಿತು ಪ್ರಬಂಧ, farmer suicide essay in kannada, , raithara atmahatye prabandha in kannada

Raithara Atmahatye Essay in Kannada

“ರೈತರು ದೇಶದ ಬೆನ್ನಲುಬು”
ರೈತರು ಸಾಲದಲ್ಲಿ ಹುಟ್ಟಿ, ಸಾಲದಲ್ಲಿಯೇ ಬೆಳೆದು, ಸಾಲದಲ್ಲಿಯೇ ಸತ್ತು, ಸಾಲವನ್ನೇ
ತಮ್ಮ ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡುವರು,

-ರಾಯಲ್ ಕಮಿಷನ್ ವರದಿ

ಪೀಠಿಕೆ

ಮಳೆ, ಗಾಳಿ, ಚಳಿ, ಬಿಸಿಲೆನ್ನದೆ, ಇರುಳು ಹಗಲೆನ್ನದೆ, ಬೆವರು ಹರಿಸಿ, ಹುತ್ತಿ ಬಿತ್ತಿ ಬೆಳೆದು
ಜಗದೆಲ್ಲಾ ಮಕ್ಕಳಿಗೆ ಉಣಬಡಿಸುವ ರೈತ ಇಂದು ತನ್ನ ಕೂಸಿಗೆ ಕನಿಷ್ಠ ಅವಶ್ಯಕತೆಯನ್ನು
ಪೂರೈಸಲಾಗದ ಅಸಹಾಯಕ ಸ್ಥಿತಿಯಲ್ಲಿ ಇರುವಂತಾಗಿರುವುದು ತುಂಬಾ ಸೋಜಿಗದ ಸಂಗತಿ,

ಇಂದು ಕೃಷಿಯನ್ನೇ ಅವಲಂಬಿಸಿ ಬದುಕುತ್ತಿರುವ ಎಷ್ಟೋ ಕುಟುಂಬಗಳು ತಮ್ಮ ಕೃಷಿಯ ಅಗತ್ಯತೆಗಾಗಿ
ಮಾಡಿದ ಸಾಲಭಾದೆಯನ್ನು ತಳಲಾರದೆ ಅಸಹಾಯಕರಾಗಿ ಸಾಯುವ ಮಾರ್ಗವನ್ನು ಕಂಡು
ಕೊಳ್ಳುತ್ತಿದ್ದಾರೆ.

ದೇಶದ ಬೆನ್ನಲುಬಾಗಿರುವ ರೈತನ ಬಲವನ್ಮರಣದ ದುಸ್ಥಿತಿಯು ಸ್ವಾತಂತ್ಯ ನಂತರ ನಮ್ಮ
ವ್ಯವಸ್ಥೆಯು ಅನ್ನದಾತನನ್ನು ನಡೆಸಿಕೊಂಡ ರೀತಿಗೆ ಹಿಡಿದ ಕನ್ನಡಿಯಾಗಿದೆ.

farmers suiciding in india essay in kannada

ಕೃಷಿಯನ್ನೇ ಅವಲಂಭಿಸಿರುವ ದೇಶದ ಬಹುತೇಕ ಗ್ರಾಮೀಣಿಗರಿಗೆ ಕೃಷಿಕಾಯಕ ಹೊರತು
ಪಡಿಸಿ ಬೇರಾವ ಕೌಶಲ್ಯಗಳು ಗೊತ್ತಿರುವುದಿಲ್ಲ ಹೀಗಾಗಿ ಕೃಷಿಯೊಂದೆ ಅವರಿಗೆ
ಜೀವಾನಾಧಾರವಾಗಿರುತ್ತದೆ,

ಅನಾಧಿಕಾಲದಿಂದಲೂ ನಮ್ಮ ಕೃಷಿಯು ನಿಸರ್ಗದ ವಿದ್ಯಮಾನಗಳನ್ನು
ಅವಲಂಬಿಸಿದೆ, ಆಕಾಲಿಕ ಮಳೆ, ಅತಿವೃಷ್ಟಿ, ಅನಾವೃಷ್ಟಿ, ವೈಜ್ಞಾನಿಕ ಪದ್ಧತಿಯ ಜ್ಞಾನದ ಕೊರತೆ, ಜೊತೆಗೆ
ಬೆಳೆಗೆ ಬರುವ ರೋಗ ಹೀಗೆ ಒಂದಲ್ಲ ಒಂದು ಸಂಕಟ ಇದ್ದೇ ಇರುತ್ತದೆ.

ಇವೆಲ್ಲದರ ನಡುವೆಯು ಒಮ್ಮೊಮ್ಮೆ ಉತ್ತಮ ಇಳುವರಿಯೊಂದಿಗೆ ಒಳ್ಳೆ ಬೆಳೆ ಕೈಗೆ ಸಿಕ್ಕಾಗ ಬೆಲೆ ಮಾತ್ರ ಪಾತಾಳಕ್ಕೆ ಕುಸಿದಿರುತ್ತದೆ,
ಬೆಲೆ ಕುಸಿತದ ಪರಿಣಾಮದಿಂದ ಹೊರಬರಲು ಸರಿಯಾದ ವೈಜ್ಞಾನಿಕ ಪದ್ಧತಿಯ ಶೇಖರಣಾ ವ್ಯವಸ್ಥೆಯ
ಕೊರತೆ.

ಇದರ ಜೊತೆಗೆ ರೈತರ ಕೈ ಹಿಡಿಯಬೇಕಾದ ಆಡಳಿತಯಂತ್ರ ದಲ್ಲಾಳಿಗಳ ಮತ್ತು ವ್ಯಾಪಾರಿಗಳ
ಜೊತೆ ಅಕ್ರಮ ಸ್ನೇಹ ಮಾಡುತ್ತದೆ.

ಹೀಗೆ ರೈತನ ಸಮಸ್ಯೆಗಳು ಒಂದಕೊಂದು ಅಂಟಿಕೊಂಡ ಬೋಗಿಯಂತೆ ಇಂದು ದೊಡ್ಡ ರೈಲಿನ ಉದ್ದವಾಗಿದೆ.

essay on farmers suiciding in karnataka in kannada

ಆತ್ಮಹತ್ಯೆಗೆ ಕಾರಣಗಳು :

1. ಜಗತ್ತಿನಲ್ಲೆ 2ನೇ ಅತಿದೊಡ್ಡ ಕೃಷಿ ಉತ್ಪಾದಕ ದೇಶವಾಗಿರುವ ನಮ್ಮ ರಾಷ್ಟ್ರದಲ್ಲಿ ಒಟ್ಟು ಕೃಷಿ
ಭೂಮಿಯ ಪೈಕಿ 2/3 ರಷ್ಟು ಪ್ರದೇಶದಲ್ಲಿ ರೈತರು ಮಳೆಯನ್ನು ನೆಚ್ಚಿಕೊಂಡು ವ್ಯವಸಾಯ ಮಾಡುತ್ತಾರೆ.
ಹಾಗಾಗಿ ರೈತರು ಮಾಡುವ ವ್ಯವಸಾಯ ಮಳೆಯೊಡನೆ ಆಡುವ ಜೂಜಾಟವಿದ್ದಂತೆ.

ಸಕಾಲಕ್ಕೆ ಮಳೆ ಬಾರದ ಕಾರಣ ಸರಿಯಾದ ಬೆಳೆ ತೆಗೆಯಲು ಸಾದ್ಯವಾಗುವುದಿಲ್ಲ, ಒಮ್ಮೊಮ್ಮೆ ಅಗತ್ಯಕ್ಕಿಂತಲು ಹೆಚ್ಚು ಮಳೆ ಬರುವ ಕಾರಣ ಹಾಗೂ ಅಕಾಲಿಕ ಮಳೆಯಿಂದಾಗಿ ರೈತರು ದೊಡ್ಡ ಮಟ್ಟದಲ್ಲಿ
ನಷ್ಟಕ್ಕೊಳಗಾಗುತ್ತಾರೆ.

2.ಸಾಂಪ್ರದಾಯಿಕ ಬೆಳೆಗಳಿಂದ ವಾಣಿಜ್ಯ ಬೆಳೆಗಳತ್ತ ಮುಖ ಮಾಡಿಕೊಂಡಿದ್ದರಿಂದ ಹೆಚ್ಚಾದ ಉತ್ಪಾದನಾ
ವೆಚ್ಚ, ದುಬಾರಿ ಬಿತ್ತನೆ ಬೀಜ & ರಸಗೊಬ್ಬರಗಳ ಖರೀದಿಗಾಗಿ ಬಂಡವಾಳಕ್ಕೆ ಸಾಂಸ್ಥಿಕ ಸಾಲವನ್ನು
ಬಿಟ್ಟು ಖಾಸಗಿ ಲೇವಾದೇವಿಗಾರರಿಂದ ಹೆಚ್ಚಿನ ಬಡ್ಡಿಗೆ ಸಾಲ ತರುವುದು ಮತು ಸಾಲ ಮರುಪಾವತಿ
ಮಾಡಲು ಸಾಧ್ಯವಾಗದೇ ಇದ್ದಾಗ ಸಾಲ ನೀಡಿದವರು ಮಾಡುವ ಅಪಮಾನಗಳು ರೈತರಿಗೆ ಆತ್ಮಹತ್ಯೆಯ
ಮಾರ್ಗ ಪರಿಚಯಿಸುತ್ತದೆ.

3.ನೀರಾವರಿ ಬೇಸಾಯಲ್ಲಿ ಕಾಲುವೆ ಮತ್ತು ಕೆರೆ ನೀರಿನ ಬೇಸಾಯ ಹೊರತುಪಡಿಸಿ ಶೇಕಡ 60ರಷ್ಟು
ವ್ಯವಸಾಯ ಬಾವಿ ಮತ್ತು ಕೊಳವೆ ಬಾವಿ ನೀರನ್ನು ಅವಲಂಭಿಸಿದೆ. ಕೊಳವೆ ಬಾವಿ ವೈಫಲ್ಯದಿಂದ
ಹೆಚ್ಚಾದ ಸಾಲದ ಹೊರೆ ರೈತರನ್ನು ಸಾವಿನ ಕಡೆಗೆ ಮುಖ ಮಾಡಿಸುತ್ತದೆ.

4.ಬಹುತೇಕ ರೈತರು ಇನ್ನೂ ಸಹ ಹಳೆಯ ಸಾಂಪ್ರದಾಯಿಕ ಪದ್ದತಿಯಿಂದ ವೈಜ್ಞಾನಿಕ ಪದ್ದತಿಗೆ
ಪರಿವರ್ತನೆಯಾಗಿಲ್ಲ.

ಸಂಕಷ್ಟದಲ್ಲಿರುವ ಸಣ್ಣ ಇಡುವಳಿದಾರರು ಅತ್ಯಧುನಿಕ ತಂತ್ರಜ್ಞಾನವನ್ನು
ಅಳವಡಿಸಿಕೊಳ್ಳಲು ಸಾಧ್ಯವಾಗದೇ ಇರುವುದು & ಅವುಗಳ ಬಗ್ಗೆ ಮಾಹಿತಿ ಇಲ್ಲದೆ ಇರುವುದು ರೈತರು
ಆರ್ಥಿಕವಾಗಿ ಸಬಲರಾಗಲು ಸಾದ್ಯವಾಗುತ್ತಿಲ್ಲ.

5.ವಾಣಿಜ್ಯ ಬೆಳೆಗಳನ್ನು ನಿರಂತರವಾಗಿ ಬೆಳೆದು ಇಳುವರಿ ಕಡಿಮೆಯಾಗಿ ಉಂಟಾಗುವ ನಷ್ಠ , ನಕಲಿ
ಬೀಜ, ನಕಲಿ ಗೊಬ್ಬರ & ನಕಲಿ ಕ್ರಿಮಿನಾಶಕ ಕಂಪನಿಗಳ ಮೋಸ ಜಾಲದಿಂದ ಉಂಟಾಗುವ ನಷ್ಟ
ರೈತರನ್ನು ಚೇತರಿಸಿಕೊಳ್ಳಲು ಬಿಡುತ್ತಿಲ್ಲ.

ಇದನ್ನು ಓದಿ : ಪಂಪ ಪೊನ್ನ ರನ್ನ ಕುರಿತು ಮಾಹಿತಿ

6.ರೈತರ ಆದಾಯ ಕಡಿಮೆ, ಖರ್ಚು ಜಾಸ್ತಿ, ನಿಧಾನ ಗತಿಯ ಯೋಜನೆಗಳು & ನೀತಿಗಳು, ಹಾಗೂ
ವಿವಿಧ ರೀತಿಯಾಗಿ ವರ್ಷಪೂರ್ತಿಯಾಗಿ ಬರುವ ಹಬ್ಬಹರಿದಿನಗಳು ರೈತರ ಸಾಲವನ್ನು ಹೆಚ್ಚಿಸುತ್ತದೆ.
ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ ಪ್ರಕಾರ 2005 ರಲ್ಲಿ ಒಟ್ಟು 2474 ಜನ ರೈತರು ಸಾಲ
ಮರುಪಾವತಿ ಮಾಡಲಾಗದೆ ಬ್ಯಾಂಕ್ ಅಧಿಕಾರಿಗಳ ಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ
ಈ ಮೇಲಿನ ಎಲ್ಲಾ ಅಂಶಗಳಿಂದ ಇಂದಿನ ದಿನದೊಂದು ರೈತರು ಆತ್ಮಹತ್ಯೆ
ಮಾಡಿಕೊಳ್ಳುತ್ತಿರುವುದು, ರಾಜ್ಯದಲ್ಲಿ ದಿನನಿತ್ಯದ ವರದಿಯಾಗತ್ತಿದೆ, ಆದ್ದರಿಂದ ಇದನ್ನು ಪರಿಹರಿಸಲು

2 ವಿಧದಲ್ಲಿ ಪರಿಹಾರವನ್ನು ಸೂಚಿಸಬಹುದು

1.ಅಲ್ಪಾವಧಿ ಪರಿಹಾರಗಳು

ತಕ್ಷಣದ ಬಾಕಿ ಹಣ, ಸಬ್ಸಿಡಿ ಹಣ ಪಾವತಿಸಿ ಪರಿಸ್ಥಿತಿಯನ್ನು ಸುಧಾರಿಸುವುದು
ಬೆಳೆ ಪರಿಹಾರ
ಸಾಲಮನ್ನಾ & ಬಡ್ಡಿಮನ್ನಾ
ಮೋಡಬಿತ್ತನೆ
ಕೊಳವೆ ಬಾವಿ ಕೊರೆಸಲು ಸಬ್ಸಿಡಿ ನೀಡುವುದು, ಬೆಂಬಲ ಬೆಲೆ ಘೋಷಿಸಿ ಪ್ರತಿ ತಾಲ್ಲೂಕಿನಲ್ಲಿ
ಖರೀದಿ ಕೇಂದ್ರಗಳನ್ನು ಸ್ಥಾಪಿಸುವುದು

2.ದೀರ್ಘಾವಧಿಯ ಪರಿಹಾರಗಳು

ಸಮಗ್ರಸಾಲ ನೀತಿಯನ್ನು ರೂಪಿಸಿ ರೈತರು ಸಾಂಸ್ಥಿಕ ಸಾಲವನ್ನು ಪಡೆಯಲು ನೆರವಾಗುವ
ನಿಟ್ಟಿನಲ್ಲಿ ಅವರನ್ನು ಜಾಗೃತರಾಗಿಸಿ, ಬ್ಯಾಂಕ್‌ಗಳಲ್ಲಿ ರೈತರಿಗೆ ಸಾಲ ನೀಡುವ ಪ್ರಕ್ರಿಯೆಯನ್ನು
ಸರಳೀಕರಿಸಬೇಕು,
 ಕೃಷಿ ಅವಶ್ಯಕತೆಗಾಗಿ ಮತ್ತು ಯಂತ್ರೋಪಕರಣಗಳಿಗೆ ಸಾಲ ಮಾಡುವ ರೈತರಿಗೆ ಬಡ್ಡಿ ರಹಿತ
ಸಾಲವನ್ನು ನೀಡುವಂತೆ ಸರ್ಕಾರ ನಿಯಮ ರೂಪಿಸಬೇಕು
 ಸಮಗ್ರ ಬೆಳೆ ನೀತಿಯನ್ನು ಜಾರಿಗೆ ತಂದು ಕ್ರಿಮಿನಾಶಕ ಮತ್ತು ರಸಗೊಬ್ಬರ, ಹಾಗೂ ಬಿತ್ತನೆ
ಬೀಜಗಳು ದುಬಾರಿಯಾಗದಂತೆ ಕ್ರಮ ಕೈಗೊಳ್ಳಬೇಕು
 ರೈತರ ಉತ್ಪಾದನಾ ವೆಚ್ಚದ ಕನಿಷ್ಠ 2ರಷ್ಟು ಖಾತರಿ ಬೆಂಬಲ ಬೆಲೆೆಯನ್ನು ನಿಗಧಿಮಾಡಬೇಕು,
ಹಾಗೂ ಎಲ್ಲಾ ಕಡೆ ಖರೀದಿ ಕೇಂದ್ರವನ್ನು ತೆರೆದು ಬೆಲೆ ಕುಸಿತದ ಸಂದರ್ಭದಲ್ಲಿ ಸರ್ಕಾರವು
ರೈತರ ಬೆಳೆಯನ್ನು ನಿಗಧಿ ಮಾಡಿದ ಬೆಲೆಗೆ ಪಾರದರ್ಶಕವಾಗಿ ಖರೀದಿ ಮಾಡಬೇಕು.
 ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಬೆಳೆ ವಿಮೆ ಯೋಜನೆಗಳನ್ನು(ಉದಾ:ಪ್ರಧಾನ ಮಂತ್ರಿ
ಫಸಲ್ ಬಿಮಾ ಯೋಜನೆ) ಸಮರ್ಪಕವಾಗಿ ಜಾರಿ ಮಾಡಬೇಕು ಮತ್ತು ಈ ಯೋಜನೆಗಳ
ಸದುಪಯೋಗ ಕಟ್ಟಕಡೆಯ ರೈತನವರೆಗೆ ತಲುಪಬೇಕು.
 ದಲ್ಲಾಳಿಗಳಿಂದ ರೈತರನ್ನು ಮುಕ್ತಗೊಳಿಸಲು ಮಾರುಕಟ್ಟೆ ವ್ಯವಸ್ಥೆಯ ಬಲವರ್ಧನೆಗೆ ಕೇಂದ್ರ
ಸರ್ಕಾರ ಜಾರಿಗೆ ತಂದಿರುವ ನಾಮ್, ಇ-ರಕ್ಷಕ್ ನಂತಹ ಮತ್ತಷ್ಟು ಯೋಜನೆಗಳನ್ನು ಬೇರು
ಮಟ್ಟದಲ್ಲಿ ಬಲ ಪಡಿಸುವುದು ಮತ್ತು ಆ ಬಗ್ಗೆ ರೈತರಿಗೆ ಅರಿವು ಮೂಡಿಸುವುದು.

ರೈತರ ಮಕ್ಕಳಿಗೆ ಕೌಶಲ್ಯ ತರಬೇತಿ ನೀಡುವುದು
20ಕಿ.ಮೀ ವ್ಯಾಪ್ತಿಯಲ್ಲಿ ಸರ್ಕಾರಿ ಖಾಸಗಿ ಸಹಭಾಗಿತ್ವದಲ್ಲಿ ಶೈಥ್ಯಾಗಾರ ನಿರ್ಮಾಣ
ಸಾಂಸ್ಥಿಕ ಸಾಮಾಜಿಕ ಜವಬ್ದಾರಿ(ಕಾರ್ಪೋರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ)ಯನ್ನು ಕೃಷಿ
ಕ್ಷೇತ್ರಕ್ಕೆ ಉತ್ತೇಜಿಸುವುದು ಮತ್ತು ಸಹಕಾರ ಕೃಷಿಗೆ ರೈತರನ್ನು ಪ್ರೋತ್ಸಹಿಸುವುದರ ಜೊತೆಗೆ
ದುಂದು ವೆಚ್ಚದ ಹಬ್ಬಹರಿದಿನಗಳ ಆಚರಣೆ, ಜೂಜು, ಕುಡಿತ ಮತ್ತಿತರ ಚಟಗಳ
ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವುದು

ಸರ್ಕಾರದ ಪ್ರಮುಖ ಯೋಜನೆಗಳು

1.ಕೃಷಿ ಯಂತ್ರಧಾರೆ ಯೋಜನೆ
2.ಸಾಯಿಲ್ ಹೆಲ್ತ್ ಕಾರ್ಡ್
3.ರೈತ ಸಂಪರ್ಕ ಕೇಂದ್ರಗಳು

4.ರಾಷ್ಟ್ರೀಯ ತೋಟಗಾರಿಕ ಮಿಶನ್
5.ಸಾವಯವ ಭಾಗ್ಯ
6.ಕೃಷಿ ಭಾಗ್ಯ
7.ಸೂರ್ಯ ಜ್ಯೋತಿ ಯೋಜನೆ
8.ಕೃಷಿ ಸಿಂಚಾಯಿ ಯೋಜನೆ
9.ಭೂ ಚೇತನ ಯೋಜನೆ
10.ಪುಡ್ ಪಾರ್ಕ್
11.ರೈಸ್‌ಪಾರ್ಕ್
12.ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ
ಈ ಮೇಲ್ಕಂಡವುಗಳು ಸರ್ಕಾರದಿಂದ ಜಾರಿಗೆ ತಂದ ಯೋಜನೆಗಳಾಗಿ

ಉಪಸಂಹಾರ

ಅನ್ನ ನೀಡುವ ರೈತ ಸಂಕಷ್ಟದಲ್ಲಿರುವನು, ಅವನನ್ನು ಸಂಕಷ್ಟದಿಂದ ಪಾರು ಮಾಡಲು ಪಕ್ಷ ಬೇದವನ್ನು
ಮರೆತು, ಆಡಳಿತ & ವಿರೋಧ ಪಕ್ಷಗಳು ನಿಶ್ವಾರ್ಥಿಗಳಾಗಿ ರೈತರಿಗೆ ಸಹಾಯ ಮಾಡಬೇಕು, ಬರೀ
ಸಮಿತಿಗಳನ್ನು ರಚಿಸುವುದರಿಂದ ಹಾಗೂ ಕಾಟಾಚಾರದ ಯೋಜನೆಗಳನ್ನು ಜಾರಿಗೆ ತರುವುದರಿಂದ
ಸಮಸ್ಯೆ ಬಗೆಹರಿಯುವುದಿಲ್ಲ ಎಂಬುದನ್ನು ಮನಗಾಣಬೇಕು,

ಸಮಿತಿಗಳ ಶಿಫಾರಸ್ಸುಗಳನ್ನು ಯತಾವತ್ತಾಗಿ ಜಾರಿಗೊಳಿಸಿ ಅನ್ನದಾತರ ಆತ್ಮ ಸಾಲಕ್ಕೆ ಹೆದರಿ ಹಾರಿಹೋಗದಂತೆ ಸರ್ಕಾರ ನೋಡಿಕೊಳ್ಳಬೇಕಿದೆ.

ಭಾರತದಲ್ಲಿನ ರೈತರ ಆತ್ಮಹತ್ಯೆಗಳ ಕುರಿತು FAQ ಗಳು

ಭಾರತದಲ್ಲಿ ರೈತರ ಆತ್ಮಹತ್ಯೆಗೆ ಕಾರಣಗಳೇನು?

ನಮ್ಮ ದೇಶದಲ್ಲಿ ರೈತರ ಆತ್ಮಹತ್ಯೆಗೆ ಸಾಕಷ್ಟು ಕಾರಣಗಳಿವೆ. ಬರ ಮತ್ತು ಪ್ರವಾಹದಂತಹ ನೈಸರ್ಗಿಕ ವಿಕೋಪಗಳು ಪ್ರಮುಖ ಕಾರಣ. ಅಂತೆಯೇ, ಬಂಡವಾಳೀಕರಣ ಮತ್ತು ಖಾಸಗೀಕರಣವು ಇತರ ಅಂಶಗಳಾಗಿವೆ. ಇದಲ್ಲದೆ, ಹೆಚ್ಚಿನ ಸಾಲಗಳು ಮತ್ತು ಕುಟುಂಬದ ಒತ್ತಡವೂ ಈ ಸಮಸ್ಯೆಗೆ ಕೊಡುಗೆ ನೀಡುತ್ತದೆ.

ರೈತರ ಆತ್ಮಹತ್ಯೆಗಳನ್ನು ನಾವು ಹೇಗೆ ತಡೆಯಬಹುದು?

ಸಾಮೂಹಿಕ ಪ್ರಯತ್ನದಿಂದ ರೈತರ ಆತ್ಮಹತ್ಯೆ ತಡೆಯಬಹುದು. ಸರಕಾರ ರೈತರಿಗೆ ಆಧುನಿಕ ತಂತ್ರಜ್ಞಾನ ಕಲಿಸಬೇಕು. ಇದಲ್ಲದೆ, ಅವರಿಗೆ ಸರಿಯಾದ ನೀರಾವರಿ ಸೌಲಭ್ಯಗಳನ್ನು ನೀಡಬೇಕು. ಇದು ಅವರ ನಷ್ಟವನ್ನು ಸರಿದೂಗಿಸಲು ನಿಜವಾದ ಬೆಳೆ ವಿಮಾ ಪಾಲಿಸಿಗಳನ್ನು ಪ್ರಾರಂಭಿಸಬೇಕು.

ಇತರೆ ವಿಷಯಗಳನ್ನು ಓದಿ :

ಜಲ ಮಾಲಿನ್ಯ ಬಗ್ಗೆ ಪ್ರಬಂಧ

ವೆಬ್ಸೈಟ್

Leave a Reply

Your email address will not be published. Required fields are marked *