ತತ್ಸಮ ತದ್ಭವ ಪದಗಳ ಪಟ್ಟಿ 100 | Tatsama Tadbhava Words List In Kannada

ತತ್ಸಮ ತದ್ಭವ ಪದಗಳ ಪಟ್ಟಿ 100 | Tatsama Tadbhava Words List In Kannada

tatsama tadbhava words list in kannada, ತತ್ಸಮ ತದ್ಭವ ಪದಗಳು, Tatsama Tadbhava in Kannada, Tatsama Tadbhava Words List in Kannada, Grammer in Kannada, Kannada Vakyagalu Kannada Grammar Tatsama Tadbhava in Kannada 100 Words ತತ್ಸಮ ತದ್ಭವ ಪಟ್ಟಿ Pdf, ತತ್ಸಮ ತದ್ಭವ ಪದಗಳ ಪಟ್ಟಿ 100 ,
ತತ್ಸಮ ತದ್ಭವ ಪಟ್ಟಿ pdf

Tatsama Tadbhava Words List In Kannada

Spardhavani Telegram

ಅಲ್ಪಸ್ವಲ್ಪ ವ್ಯತ್ಯಾಸ ಹೊಂದಿ ಕನ್ನಡಕ್ಕೆ ಬಂದಿರುವ ಸಂಸ್ಕೃತ ಶಬ್ದಗಳ ಪಟ್ಟಿ:-

ಸಂಸ್ಕೃತ ರೂಪವ್ಯತ್ಯಾಸ ರೂಪಸಂಸ್ಕೃತ ರೂಪವ್ಯತ್ಯಾಸ ರೂಪ
ದಯಾದಯೆ, ದಯಗ್ರೀವಾಗ್ರೀವೆ, ಗ್ರೀವ
ಕರುಣಾಕರುಣೆ, ಕರುಣಶಮಾಶಮೆ
ನಾರೀನಾರಿವಧವಧೆ
ನದೀನದಿಅಭಿಲಾಷಅಭಿಲಾಷೆ
ವಧೂವಧುಪ್ರಶ್ನಪ್ರಶ್ನೆ
ಸರಯೂಸರಯುಉದಾಹರಣೆಉದಾಹರಣೆ
ಸ್ವಯಂಭೂಸ್ವಯಂಭುಸರಸ್ವತೀಸರಸ್ವತಿ
ಮಾಲಾಮಾಲೆಲಕ್ಷ್ಮೀಲಕ್ಷ್ಮಿ
ಸೀತಾಸೀತೆಗೌರೀಗೌರಿ
ಬಾಲಾಬಾಲೆಭಾಮಿನೀಭಾಮಿನಿ
ಲೀಲಾಲೀಲೆಕಾಮಿನೀಕಾಮಿನಿ
ಗಂಗಾಗಂಗೆಕುಮಾರೀಕುಮಾರಿ
ನಿಂದಾನಿಂದೆಗೋದಾವರೀಗೋದಾವರಿ
ಶಾಲಾಶಾಲೆಕಾವೇರೀಕಾವೇರಿ
ರಮಾರಮೆಶಾಸ್ತ್ರೀಶಾಸ್ತ್ರಿ
ಉಮಾಉಮೆಭಿಕ್ಷಾಭಿಕ್ಷಾ, ಭಿಕ್ಷೆ
ದಮಾದಮೆಯಾತ್ರಾಯಾತ್ರೆ
ಕ್ಷಮಾಕ್ಷಮೆಜ್ವಾಲಾಜ್ವಾಲೆ
ಆಶಾಆಶೆರೇಖಾರೇಖೆ
ಸಂಸ್ಥಾಸಂಸ್ಥೆಮುದ್ರಾಮುದ್ರೆ
ನಿದ್ರಾನಿದ್ರೆದ್ರಾಕ್ಷಾದ್ರಾಕ್ಷೆ
ಯವನಿಕಾಯವನಿಕೆಮಾತ್ರಾಮಾತ್ರೆ
ದ್ರೌಪದೀದ್ರೌಪದಿಶಾಖಾಶಾಖೆ
ವೇಳಾವೇಳೆವಾಲುಕಾವಾಲುಕ
ಭಾಷಾಭಾಷೆಗಾಂಧಾರೀಗಾಂಧಾರಿ
-ಇತ್ಯಾದಿಗಳು
ತತ್ಸಮ ತದ್ಭವ ಉದಾಹರಣೆ

ಮೇಲಿನ ಎಲ್ಲ ಉದಾಹರಣೆಗಳಲ್ಲಿ ಮುಖ್ಯವಾಗಿ ಸಂಸ್ಕೃತದ ಆ ಕಾರಂತ ಶಬ್ದಗಳು ಎ ಕಾರಾಂತಗಳಾಗಿವೆ (ಮಾಲಾ-ಮಾಲೆ ಇತ್ಯಾದಿ); ಕೆಲವು ಅ ಕಾರಾಂತಗಳೂ ಎ ಕಾರಂತಗಳಾಗಿವೆ (ವಧ-ವಧೆ); ಕೆಲವು ದೀರ್ಘಾಂತಗಳು ಹ್ರಸ್ವಾಂತಗಳಾಗಿವೆ (ಲಕ್ಷ್ಮೀ-ಲಕ್ಷ್ಮಿ); ಕೆಲವು ಆಕಾರಂತಗಳು ಅಕಾರಾಂತಗಳಾಗಿಯೂ ಆಗಿವೆ (ದಯಾ-ದಯ); ಹೀಗೆ ಸ್ಥೂಲವಾಗಿ ತಿಳಿಯಬಹುದು.  ಹೀಗೆ ಅಲ್ಪಸ್ವಲ್ಪ ವ್ಯತ್ಯಾಸಗೊಂಡ ಮೇಲೆ ಇವು ಕನ್ನಡದ ಪ್ರಕೃತಿಗಳಾಗುವುವು.  ಇವುಗಳ ಮೇಲೆ ಕನ್ನಡದ ಪ್ರತ್ಯಯಗಳನ್ನು ಹಚ್ಚಬಹುದು. (ಇಂಥವನ್ನೇ ಸಮ ಸಂಸ್ಕೃತಗಳೆಂದು ಕೆಲವರು ಕರೆಯುವರೆಂದು ಹಿಂದೆ ತಿಳಿಸಿದೆ).


ಶಬ್ದದ ಕೊನೆಯಲ್ಲಿರುವ ಋಕಾರವು ಅ ಅರ ಎಂದು ವ್ಯತ್ಯಾಸಗೊಳ್ಳುವುವು.  ಕೆಲವು ಎಕಾರಾಂತಗಳೂ ಆಗುವುವು.  ಅನಂತರ ಕನ್ನಡ ಪ್ರಕೃತಿಗಳಾಗುವುವು.

ಸಂಸ್ಕೃತ ರೂಪವ್ಯತ್ಯಾಸ ರೂಪಸಂಸ್ಕೃತ ರೂಪವ್ಯತ್ಯಾಸ ರೂಪ
ಕರ್ತೃಕರ್ತ, ಕರ್ತಾರನೇತೃನೇತಾರ
ದಾತೃದಾತ, ದಾತಾರಸವಿತೃಸವಿತಾರ
ಪಿತೃಪಿತ, ಪಿತರಭರ್ತೃಭರ್ತಾರ
ಮಾತೃಮಾತೆಹೋತೃಹೋತಾರ

ಕೆಲವು ನಕಾರಾಂತ ಶಬ್ದಗಳು ಕೊನೆಯ ನಕಾರವನ್ನು ಲೋಪ ಮಾಡಿಕೊಂಡು ಕನ್ನಡ ಪ್ರಕೃತಿಗಳಾಗುವುವು.

ಸಂಸ್ಕೃತ ರೂಪವ್ಯತ್ಯಾಸ ರೂಪಸಂಸ್ಕೃತ ರೂಪವ್ಯತ್ಯಾಸ ರೂಪ
ರಾಜನ್ರಾಜಬ್ರಹ್ಮನ್ಬ್ರಹ್ಮ
ಕರಿನ್ಕರಿಪುರೂರವನ್ಪುರೂರವ
ಆತ್ಮನ್ಆತ್ಮಯುವನ್ಯುವ
ಧಾಮನ್ಧಾಮಮೂರ್ಧನ್ಮೂರ್ಧ

ಕೆಲವು ವ್ಯಂಜನಾಂತ ಶಬ್ದಗಳು ಕೊನೆಯ ವ್ಯಂಜನವನ್ನು ಲೋಪ ಮಾಡಿಕೊಂಡಾಗಲೀ ಅಥವಾ ಇನ್ನೊಂದು ಅದೇ ವ್ಯಂಜನ ಮತ್ತು ಉಕಾರದೊಡನಾಗಲೀ ವ್ಯತ್ಯಾಸಗೊಂಡು ಕನ್ನಡ ಪ್ರಕೃತಿಗಳಾಗುತ್ತವೆ.

ಸಂಸ್ಕೃತ ರೂಪ  ಬದಲಾವಣೆಯಾದ ರೂಪಗಳು

ಧನಸ್ಧನುಧನುಸ್ಸು(ಸ್ + ಉ)
ಶಿರಸ್ಶಿರಶಿರಸ್ಸು(ಸ್ + ಉ)
ಯಶಸ್ಯಶಯಶಸ್ಸು(ಸ್ + ಉ)
ಮನಸ್ಮನಮನಸ್ಸು(ಸ್ + ಉ)
ತೇಜಸ್ತೇಜತೇಜಸ್ಸು(ಸ್ + ಉ)
ವಯಸ್ವಯವಯಸ್ಸು(ಸ್ + ಉ)
ಪಯಸ್ಪಯಪಯಸ್ಸು(ಸ್ + ಉ)
ಶ್ರೇಯಸ್ಶ್ರೇಯಶ್ರೇಯಸ್ಸು(ಸ್ + ಉ)

ಕೆಲವು ಸಂಸ್ಕೃತದ ಪ್ರಥಮಾವಿಭಕ್ತ್ಯಂತ ಏಕವಚನಗಳು ತಮ್ಮ ಕೊನೆಯ ವ್ಯಂಜನದೊಡನೆ ಇನ್ನೊಂದು ಅದೇ ವ್ಯಂಜನ ಮತ್ತು ಉಕಾರ ಸೇರಿಸಿಕೊಂಡು ಕನ್ನಡದ ಪ್ರಕೃತಿಗಳಾಗುತ್ತವೆ.

ಸಂಸ್ಕೃತದಲ್ಲಿ  ಪ್ರಥಮಾ  ಏಕವಚನದ ರೂಪವಿಕಾರಗೊಂಡ ರೂಪ
ಪ್ರತಿಪತ್ಪ್ರತಿಪತ್ತು
ಕ್ಷುತ್ಕ್ಷುತ್ತು
ಸಂಪತ್ಸಂಪತ್ತು
ವಿಯತ್ವಿಯತ್ತು
ವಿಪತ್ವಿಪತ್ತು
ದಿಕ್ದಿಕ್ಕು
ತ್ವಕ್ಕುತ್ವಕ್
ವಾಕ್ವಾಕ್ಕು
ಸಮಿತ್ಸಮಿತ್ತು
Tatsama Tadbhava Words List In Kannada
Tatsama Tadbhava Words List In Kannada
Tatsama Tadbhava Words List In Kannada

ಸಂಸ್ಕೃತದ ಪ್ರಥಮಾವಿಭಕ್ತಿಯ ಬಹುವಚನಾಂತವಾಗಿರುವ ಕೆಲವು ಪುಲ್ಲಿಂಗ ವ್ಯಂಜನಾಂತ ಶಬ್ದಗಳು ತಮ್ಮ ಕೊನೆಯ ವಿಸರ್ಗವನ್ನು ಲೋಪಮಾಡಿಕೊಂಡು ಕನ್ನಡದ ಪ್ರಕೃತಿಗಳಾಗುತ್ತವೆ.

ಪ್ರಥಮಾ ವಿಭಕ್ತಿ ಬಹುವಚನ ರೂಪವಿಕಾರ ರೂಪ
ವಿದ್ವಾಂಸಃ     –ವಿದ್ವಾಂಸ
ಹನುಮಂತಃ   –ಹನುಮಂತ
ಶ್ವಾನಃ        –ಶ್ವಾನ
ಭಗವಂತಃ    –ಭಗವಂತ
ಶ್ರೀಮಂತಃ    –ಶ್ರೀಮಂತ
Tatsama Tadbhava Words List In Kannada

ಸಂಸ್ಕೃತದ ಕೆಲವು ವ್ಯಂಜನಾಂತ ಶಬ್ದಗಳು ಆ ವ್ಯಂಜನದ ಮುಂದೆ, ಒಂದು ಅ ಕಾರದೊಡನೆ ಅಂದರೆ ಅಕಾರಾಂತಗಳಾಗಿ ಕನ್ನಡದ ಪ್ರಕೃತಿಗಳಾಗುತ್ತವೆ.

ವ್ಯಂಜನಾಂತ ಸಂಸ್ಕೃತ ಶಬ್ದವಿಕಾರಗೊಂಡ ರೂಪ
ದಿವ್ದಿವ
ಚತುರ್ಚತುರ
ಬುಧ್ಬುಧ
ಕುಕುಭ್ಕುಕುಭ
ವೇದವಿದ್ವೇದವಿದ
ಸಂಪದ್ಸಂಪದ
ಮರುತ್ಮರುತ
ಗುಣಭಾಜ್ಗುಣಭಾಜ
Tatsama Tadbhava Words List In Kannada

ಈ ಮೇಲೆ ಇದುವರೆಗೆ ಹೇಳಿದ ಸಂಸ್ಕೃತದಿಂದ ಕನ್ನಡಕ್ಕೆ ಬರುವ ಶಬ್ದಗಳು ಕೊನೆಯಲ್ಲಿ ಅಲ್ಪಸ್ವಲ್ಪ ವಿಕಾರಹೊಂದಿದ ಬಗೆಗೆ ಸ್ಥೂಲವಾಗಿ ತಿಳಿದಿದ್ದೀರಿ.  ಇವನ್ನು ಅಲ್ಪಸ್ವಲ್ಪ ವಿಕಾರವನ್ನು ಕೊನೆಯಲ್ಲಿ ಹೊಂದಿದ ತದ್ಭವ ಶಬ್ದಗಳೆಂದು ಹೇಳಬೇಕು (ಇವನ್ನು ಕೆಲವರು ಸಮಸಂಸ್ಕೃತ ಎಂದೂ ಹೇಳುವರೆಂದು ಹಿಂದೆ ತಿಳಿಸಿದೆ).
ಈಗ ಶಬ್ದದ ಮೊದಲು, ಮಧ್ಯದಲ್ಲಿಯೂ ಹೆಚ್ಚಾಗಿ ವಿಕಾರ ಹೊಂದಿದ ಅನೇಕ ಶಬ್ದಗಳ ಸ್ಥೂಲ ಪರಿಚಯ ಮಾಡಿಕೊಳ್ಳೋಣ.
ಸಂಸ್ಕೃತದಲ್ಲಿ ಶ, ಷ ಗಳನ್ನು ಹೊಂದಿರುವ ಶಬ್ದಗಳು ಕನ್ನಡದಲ್ಲಿ ಸಕಾರವಾಗಿರುವ, ಮತ್ತು ಯಕಾರಕ್ಕೆ ಜಕಾರ ಬಂದಿರುವ ತದ್ಭವ ಶಬ್ದಗಳು (ಕನ್ನಡ ಪ್ರಕೃತಿಗಳು) ಆಗುತ್ತವೆ.

ಸಂಸ್ಕೃತ ರೂಪವಿಕಾರ ರೂಪಸಂಸ್ಕೃತ ರೂಪವಿಕಾರ ರೂಪಸಂಸ್ಕೃತ ರೂಪವಿಕಾರ ರೂಪ
ಶಶಿಸಸಿಔಷಧಔಸದಯೋಧಜೋದ
ಶಂಕಾಸಂಕೆಶೇಷಾಸೇಸೆಯುದ್ಧಜುದ್ದ
ಶಾಂತಿಸಾಂತಿಮಷಿಮಸಿಯವಾಜವೆ
ಆಕಾಶ(i) ಆಗಸ
(ii) ಆಕಾಸ
ಪಾಷಾಣಪಾಸಾಣವಿದ್ಯಾಬಿಜ್ಜೆ
ಯಶಜಸವಂಧ್ಯಾಬಂಜೆ
ಶಿರಸಿರಯವನಿಕಾಜವನಿಕೆಧ್ಯಾನಜಾನ
ಕಲಶಕಳಸಯಮಜವಯತಿಜತಿ
ಶೂಲಸೂಲಕಾರ‍್ಯಕಜ್ಜಯಂತ್ರಜಂತ್ರ
ಶುಚಿಸುಚಿಯೌವನಜವ್ವನಯುಗಜುಗ
ಅಂಕುಶಅಂಕುಸಯಾತ್ರಾಜಾತ್ರೆಯುಗ್ಮಜುಗುಮ
ಶುಂಠಿಸುಂಟಿಯೋಗಿನ್ಜೋಗಿವಿದ್ಯಾಧರಬಿಜ್ಜೋದರ
ಪಶುಪಸುರಾಶಿರಾಸಿಉದ್ಯೋಗಉಜ್ಜುಗ
ಹರ್ಷಹರುಸಶಾಣಸಾಣೆಸಂಧ್ಯಾಸಂಜೆ
ವರ್ಷವರುಸಪರಶುಪರಸುದ್ಯೂತಜೂಜು
ಭಾಷಾಬಾಸೆದಿಶಾದೆಸೆ
ವೇಷವೇಸದಶಾದಸೆ
Tatsama Tadbhava Words List In Kannada

ವರ್ಗದ ಪ್ರಥಮಾಕ್ಷರಗಳಿಂದ ಕೂಡಿದ ಅನೇಕ ಸಂಸ್ಕೃತ ಶಬ್ದಗಳು ಅದೇ ವರ್ಗದ ಮೂರನೆಯ ವರ್ಣಗಳಾಗುತ್ತವೆ.  ಅವು ಇಂಥ ಸ್ಥಾನದಲ್ಲಿಯೇ ಇರಬೇಕೆಂಬ ನಿಯಮವಿಲ್ಲ.

ಸಂಸ್ಕೃತ ರೂಪವಿಕಾರ ರೂಪಸಂಸ್ಕೃತ ರೂಪವಿಕಾರ ರೂಪಸಂಸ್ಕೃತ ರೂಪವಿಕಾರ ರೂಪ
ಡಮರುಕಡಮರುಗಸೂಚಿಸೂಜಿಜಾತಿಜಾದಿ
ಆಕಾಶಆಗಸವಚಾಬಜೆವಸತಿಬಸದಿ
ದೀಪಿಕಾದೀವಿಗೆಕಟಕಕಡಗಚತುರಚದುರ
ಮಲ್ಲಿಕಾಮಲ್ಲಿಗೆಅಟವಿಅಡವಿಭೂತಿಬೂದಿ
ಪೈತೃಕಹೈತಿಗೆತಟತಡದೂತಿದೂದಿ

ಸಂಸ್ಕೃತದಲ್ಲಿ ಮಹಾಪ್ರಾಣಾಕ್ಷರಗಳಿಂದ ಕೂಡಿದ ಅನೇಕ ಅಕ್ಷರಗಳು ಅಲ್ಪಪ್ರಾಣಗಳಾಗಿ ಕನ್ನಡ ಪ್ರಕೃತಿಗಳಾಗುತ್ತವೆ.

ಸಂಸ್ಕೃತ ರೂಪವಿಕಾರ ರೂಪಸಂಸ್ಕೃತ ರೂಪವಿಕಾರ ರೂಪಸಂಸ್ಕೃತ ರೂಪವಿಕಾರ ರೂಪ
ಛಂದಚಂದಘಟಕಗಡಗೆಧನದನ
ಛಾಂದಸಚಾಂದಸಘೋಷಣಾಗೋಸಣೆಧೂಪದೂಪ
ಛವಿಚವಿಗೋಷ್ಠಿಗೊಟ್ಟಿನಿಧಾನನಿದಾನ
ಕಂಠಿಕಾಕಂಟಿಕೆಘೂಕಗೂಗೆಧೂಸರದೂಸರ
ಶುಂಠಿಸುಂಟಿಅರ್ಘಅಗ್ಗಧೂಳಿದೂಳಿ
ಫಾಲಪಾಲಝಟತಿಜಡಿತಿವಿಧಿಬಿದಿ
ಫಣಿಪಣಿಢಕ್ಕೆಡಕ್ಕೆಕುಸುಂಭಕುಸುಬೆ
ಘಂಟಾಗಂಟೆರೂಢಿರೂಡಿ
Tatsama Tadbhava Words List In Kannada

ಸಂಸ್ಕೃತದ ಕೆಲವು ಖಕಾರವುಳ್ಳ ಶಬ್ದಗಳು ಗಕಾರಗಳಾಗಿ ಛಕಾರದ ಒತ್ತಿನಿಂದ ಕೂಡಿದ ಅಕ್ಷರವು ಅಲ್ಪಪ್ರಾಣದ ಒತ್ತಿನಿಂದ ಕೂಡಿ ಠಕಾರವು ಡಕಾರವಾಗಿ, ಛಕಾರವು ಸಕಾರವಾಗಿಯೂ, ಥಕಾರವು ದಕಾರವಾಗಿಯೂ ಮತ್ತು ಟಕಾರವಾಗಿಯೂ, ಹಕಾರವಾಗಿಯೂ ರೂಪಾಂತರ ಹೊಂದಿ ಕನ್ನಡ ಪ್ರಕೃತಿಗಳಾಗುತ್ತವೆ.
ಉದಾಹರಣೆಗಳು:

ಖಕಾರ ಗಕಾರವಾಗುವುದಕ್ಕೆಛಕಾರವು ಸಕಾರವಾಗಿರುವುದಕ್ಕೆಠಕಾರ ಡಕಾರವಾದುದಕ್ಕೆ
ಮುಖಮೊಗಛುರಿಕಾಸುರಿಗೆಕುಠಾರಕೊಡಲಿ
ವೈಶಾಖಬೇಸಗೆಛತ್ರಿಕಾಸತ್ತಿಗೆಮಠಮಡ
ಥಕಾರವು ದಕಾರವಾದುದಕ್ಕೆಥಕಾರವು  ಟಕಾರವಾದುದಕ್ಕೆಥಕಾರವು ಹಕಾರವಾದುದಕ್ಕೆ
ವೀಥಿಬೀದಿಗ್ರಂಥಿಗಂಟುಗಾಥೆಗಾಹೆ
ಛಕಾರದ ಒತ್ತಕ್ಷರವು ಅಲ್ಪಪ್ರಾಣದ ಒತ್ತಿನಿಂದ ಕೂಡಿದುದಕ್ಕೆ
ಇಚ್ಛಾಇಚ್ಚೆ
Tatsama Tadbhava Words List In Kannada

ಇನ್ನೂ ಅನೇಕ ವಿಕಾರ ರೂಪಗಳನ್ನು ಈ ಕೆಳಗೆ ಗಮನಿಸಿರಿ :-

ಸಂಸ್ಕೃತ  ರೂಪವಿಕಾರ ರೂಪಸಂಸ್ಕೃತ  ರೂಪವಿಕಾರ ರೂಪ
ಕಪಿಲೆಕವಿಲೆಕುರುಂಟಗೋರಟೆ
ತ್ರಿಪದಿತಿವದಿಮಾನುಷ್ಯಮಾನಸ
ಪಿಶುನಹಿಸುಣಮರೀಚಮೆಣಸು
ಪಿಪ್ಪಲಿಹಿಪ್ಪಲಿಅನ್ಯಾಯಅನ್ನೆಯ
ಪಾದುಕಾಹಾವುಗೆಸಾಹಸಸಾಸ
ಪರವಶಹರವಸಗಹನಗಾನ
ಕಬಳಕವಳಕುಕ್ಕುಟಕೋಳಿ
ಸಿಬಿಕಾಸಿವಿಗೆನಿಷ್ಠಾನಿಟ್ಟೆ
ವಶಾಬಸೆಅಮೃತಅಮರ್ದು
ವಂಚನಾಬಂಚನೆಅಂಗುಷ್ಠಉಂಗುಟ
ವಸಂತಬಸಂತಪಿಷ್ಟಹಿಟ್ಟು
ವೀಣಾಬೀಣೆಇಷ್ಟಕಾಇಟ್ಟಿಗೆ
ವೀರಬೀರಕೂಷ್ಮಾಂಡಕುಂಬಳ
ವಾಲಬಾಲದಾಡಿಮದಾಳಿಂಬೆ
ಶ್ರವಣಸವಣತೃತೀಯಾತದಿಗೆ
ಪ್ರಸರಪಸರಚತುರ್ಥೀಚೌತಿ
ಪತಿವ್ರತೆಹದಿಬದೆವರ್ಧಮಾನಬದ್ದವಣ (ಔಡಲ)
ವೇತ್ರಬೆತ್ತ
ಸೂತ್ರಿಕಾಸುತ್ತಿಗೆವಿನಾಯಕಬೆನಕ
ವೃಷಭಬಸವಸುರಪರ್ಣೀಸುರಹೊನ್ನೆ
ವ್ಯಾಘ್ರಬಗ್ಗಮರುವಕಮರುಗ
ರಕ್ಷಾರಕ್ಕೆಸರ್ವಸಬ್ಬ
ಪಕ್ಷಪಕ್ಕಶ್ರೀಖಂಡಸಿರಿಕಂಡ
ಲಕ್ಷಲಕ್ಕವೀರಶ್ರೀಬೀರಸಿರಿ
ಅಕ್ಷರಅಕ್ಕರಅಂದೋಲಿಕಾಅಂದಣ
ಭಿಕ್ಷಾಬಿಕ್ಕೆಬಾಹುವಲಯಬಾಹುಬಳೆ
ಕ್ಷಪಣಸವಣತ್ರಿಗುಣತಿಗುಣ
ಕ್ಷಾರಕಾರತ್ರಿವಳಿತಿವಳಿ
ಯಮಳಜವಳವಲ್ಲಿಬಳ್ಳಿ
ಚರ್ಮಸಮ್ಮವಸತಿಬಸದಿ
ಚರ್ಮಕಾರಸಮ್ಮಕಾರಶೀರ್ಷಕಸೀಸಕ
ಶಿಲ್ಪಿಗಚಿಪ್ಪಿಗವರ್ತಿಬತ್ತಿ
ಶಷ್ಕುಲಿಚಕ್ಕುಲಿಕರ್ತರಿಕತ್ತರಿ
ಹಂಸಅಂಚೆಶರ್ಕರಾಸಕ್ಕರೆ
ತುಳಸಿತೊಳಚಿಕರ್ಕಶಕಕ್ಕಸ
ಕಾಂಸ್ಯಕಂಚುರಾಕ್ಷಸರಕ್ಕಸ
ನಿತ್ಯನಿಚ್ಚಅರ್ಕಎಕ್ಕ
ವಿಸ್ತಾರಬಿತ್ತರದ್ರೋಣಿದೋಣಿ
ವ್ಯವಸಾಯಬೇಸಾಯಭ್ರಮರಬವರ
ಶಯ್ಯಾಸಜ್ಜೆಪ್ರಭಾಹಬೆ
ಜಟಾಜಡೆಪ್ರಣಿತೆಹಣತೆ
ತೈಲಿಕತೆಲ್ಲಿಗಪುಸ್ತಕಹೊತ್ತಗೆ
ಇಳಾಎಳೆಕುಸ್ತುಂಬರಕೊತ್ತುಂಬರಿ
ಸ್ಪರ್ಶಪರುಸಬ್ರಹ್ಮಬೊಮ್ಮ
ಸ್ಪಟಿಕಪಳಿಗೆರತ್ನರನ್ನ
ಶ್ಮಶಾನಮಸಣಪ್ರಜ್ವಲಪಜ್ಜಳ
ತಾಂಬೂಲತಂಬುಲಬಿಲ್ವಪತ್ರಬೆಲ್ಲವತ್ತ
ಆರಾಮಅರವೆಕನ್ಯಕಾಕನ್ನಿಕೆ
ಬಂಧೂಕಬಂದುಗೆಮೃತ್ಯುಮಿಳ್ತು
ಗೋಧೂಮಗೋದುವೆಕಾವ್ಯಕಬ್ಬ
ಬರ್ಭೂರಬೊಬ್ಬುಳಿದಂಷ್ಟ್ರದಾಡೆ
ಪ್ರಯಾಣಪಯಣಕಹಳಾಕಾಳೆ
ದ್ವಿತೀಯಾಬಿದಿಗೆಋಷಿರಿಸಿ
ಅಶೋಕಅಸುಗೆಮೃಗಮಿಗ
ಉದ್ಯೋಗಉಜ್ಜುಗಭೃಂಗಾರಬಿಂಗಾರ
ಸಂಜ್ಞಾಸನ್ನೆಪ್ರಗ್ರಹಹಗ್ಗ
ಯಜ್ಞಾಜನ್ನಆಶ್ಚರ‍್ಯಅಚ್ಚರಿ
ಕ್ರೌಂಚಕೊಂಚೆಸ್ವರ್ಗಸಗ್ಗ
ಸುಧಾಸೊದೆಜ್ಯೋತಿಷಜೋಯಿಸ
ಭುಜಂಗಬೊಜಂಗಅಮಾವಾಸ್ಯಾಅಮಾಸೆ
ಕೌಪೀನಕೋವಣಧ್ವನಿದನಿ
ಮಯೂರಮೋರಜ್ವರಜರ
ಗೂರ್ಜರಗುಜ್ಜರಸರಸ್ವತಿಸರಸತಿ
ಆರ‍್ಯಅಜ್ಜವರ್ಧಕಿಬಡಗಿ
ವ್ಯವಹಾರಬೇಹಾರಕಾಷ್ಠಕಡ್ಡಿ
ನಿಯಮನೇಮಚತುರ್ದಂತಚೌದಂತ
ಪತ್ತನಪಟ್ಟಣದೃಷ್ಟಿದಿಟ್ಟ
ಅತಸೀಅಗಸೆದಿಶಾಬಲಿದೆಸೆಬಲಿ
ತ್ವರಿತತುರಿಹಏಕಶರಎಕ್ಕಸರ
ಆಜ್ಞೆಆಣೆಚತುಷ್ಕಚೌಕ
ಶಾಣಸಾಣೆಚತುರ್ವೇದಿಚೌವೇದಿ
ಜೀರಿಕಾಜೀರಿಗೆಸಹದೇವಸಾದೇವ
ವಿಜ್ಞಾನಬಿನ್ನಣಸಹವಾಸಿಸಾವಾಸಿ
ಕಲಮಾಕಳವೆಮಹಾಪಾತಕಮಾಪಾತಕ
ಕಂಬಲಕಂಬಳಿಪಂಜರಪಕ್ಷಿಹಂಜರವಕ್ಕಿ
ಅರ್ಗಲಅಗುಳಿದಿಶಾಬಲಿದೆಸೆವಲಿ
ಕುದ್ದಾಲಗುದ್ದಲಿರತ್ನಮಣಿರನ್ನವಣಿ
ದ್ಯೂತಜೂಜುಅಂತಃಪುರಅಂತಪುರ
ಗ್ರಂಥಿಗಂಟುಅಚ್ಚಮಲ್ಲಿಕಾಅಚ್ಚಮಲ್ಲಿಗೆ
ಕುಕ್ಷಿಕುಕ್ಕೆಅಕ್ಷರಮಾಲಾಅಕ್ಕರಮಾಲೆ
ಚರ್ಮಪಟ್ಟಿಕಾಚಮ್ಮಟಿಗೆಕ್ಷೀರಾಗಾರಾಕೀಲಾರ
ದೇವಕುಲದೇಗುಲಗೂಢಾಗಾರಗೂಡಾರ
ದೀಪಾವಳಿಕಾದೀವಳಿಗೆ ಉತ್ಸಾಹ ಉಚ್ಚಾಹ
Tatsama Tadbhava Words List In Kannada

ಹೀಗೆ ಅನೇಕ ಸಂಸ್ಕೃತ-ಪ್ರಾಕೃತ ಭಾಷಾಶಬ್ದಗಳು ಕನ್ನಡಕ್ಕೆ ಬರುವಾಗ ರೂಪಾಂತರ ಹೊಂದಿ ಬರುವುದನ್ನು ಇದುವರೆಗೆ ಸ್ಥೂಲವಾಗಿ ಹೇಳಲಾಗಿದೆ.
ಇದುವರೆಗೆ ಸಂಸ್ಕೃತದ ಅನೇಕ ಶಬ್ದಗಳು ರೂಪಾಂತರ ಹೊಂದಿ ಕನ್ನಡಕ್ಕೆ ಬಂದ ಬಗೆಗೆ ತಿಳಿದಿರುವಿರಿ.  ಕನ್ನಡದ ಅನೇಕ ಶಬ್ದಗಳು ಕಾಲಕಾಲಕ್ಕೆ ರೂಪಾಂತರ ಹೊಂದಿವೆ.
ಹಳೆಗನ್ನಡದ ಅನೇಕ ಶಬ್ದಗಳು ಈಗಿನ ಕನ್ನಡದಲ್ಲಿ (ಹೊಸಗನ್ನಡದಲ್ಲಿ) ರೂಪಾಂತರ ಹೊಂದಿ ಪ್ರಯೋಗವಾಗುತ್ತಿವೆ.  ಅವುಗಳ ಬಗೆಗೆ ಈಗ ಸ್ಥೂಲವಾಗಿ ಮುಖ್ಯವಾದ ಕೆಲವು ಅಂಶಗಳನ್ನು ನೀವು ಅವಶ್ಯ ತಿಳಿಯಬೇಕು.
 ಪಕಾರಾದಿಯಾದ ಅನೇಕ ಶಬ್ದಗಳು ಹಕಾರಾದಿಯಾಗುತ್ತವೆ.

ಹಳಗನ್ನಡಹೊಸಗನ್ನಡಹಳಗನ್ನಡಹೊಸಗನ್ನಡ
ಪಾಲ್ಹಾಲುಪಂಬಲಿಸುಹಂಬಲಿಸು
ಪಾವ್ಹಾವುಪಣೆಹಣೆ
ಪಾಸುಹಾಸುಪರಡುಹರಡು
ಪರಿಹರಿಪರದಹರದ
ಪರ್ಬುಹಬ್ಬುಪಲವುಹಲವು
ಪೊರಳ್ಹೊರಳುಪಲ್ಲಿಲಿಹಲ್ಲಿಲ್ಲದ
ಪೊಳೆಹೊಳೆಪಲ್ಲಿಲಿವಾಯ್ಹಲ್ಲಿಲದ ಬಾಯಿ
ಪೊರೆಹೊರೆಪವ್ವನೆಹವ್ವನೆ
ಪೂಹೂಪಳ್ಳಹಳ್ಳ
ಪನಿಹನಿಪಕ್ಕಿಹಕ್ಕಿ
ಪಿಂಡುಹಿಂಡುಪಗೆಹಗೆ
ಪತ್ತುಹತ್ತುಪೊರಮಡುಹೊರಹೊರಡು
ಪುಲಿಹುಲಿಪೆರ್ಚುಹೆಚ್ಚು
ಪಣ್ಹಣ್ಣುಪುಗುಹುಗು
ಪಂದೆಹಂದೆಪೊಗುಹೊಗು
ಪಂದರಹಂದರಪಿಂಗುಹಿಂಗು
ಪಗಲ್ಹಗಲುಪಿಂತೆಹಿಂದೆ
ಪಂದಿಹಂದಿಪಳಿಹಳಿ
ಪಂದೆಹಂದೆಪೋಳ್ಹೋಳು
ಪೊಸಹೊಸಪಲ್ಲಿಹಲ್ಲಿ
ಪೋಗುಹೋಗುಪಲ್ಹಲ್ಲು
ಪರ್ಚುಹಂಚುಪಸಿಹಸಿ
ಪರಸುಹರಸುಪಸುರ್ಹಸುರು
ಪೀರ್ಹೀರುಪಾಡುಹಾಡು
ಪುದುಗುಹುದುಗುಪುರ್ಬುಹುಬ್ಬು
ಪಿರಿಯಹಿರಿಯಪರ್ಬುಹಬ್ಬು
ಪದುಳಹದುಳಪೆರ್ಮೆಹೆಮ್ಮೆ
ಪರ್ದುಹದ್ದುಪಿರಿದುಹಿರಿದು
ಪರ್ಬುಗೆಹಬ್ಬುವಿಕೆ
Tatsama Tadbhava Words List In Kannada

ಮೇಲಿನ ಉದಾಹರಣೆಗಳಲ್ಲಿ ಕೆಲವು ಕಡೆ ಅಂತ್ಯದಲ್ಲಿರುವ ಲ್ ವ್ ಎಂಬ ವ್ಯಂಜನಾಂತ ಶಬ್ದಗಳು ಉಕಾರಾಂತಗಳಾಗಿರುವುದನ್ನು ಗಮನಿಸಿರಿ.  (ಉದಾ:- ಪಾಲ್-ಹಾಲು, ಪಾವ್-ಹಾವು__ಇತ್ಯಾದಿ)
ಈಗ ಕೊನೆಯ ವ್ಯಂಜನಗಳು ಯಾವ ಯಾವ ವ್ಯತ್ಯಾಸ ಹೊಂದುತ್ತವೆಂಬುದನ್ನು ತಿಳಿಯಿರಿ.
(ಳ ವ್ಯಂಜನಗಳು ಅಂತ್ಯದಲ್ಲಿ ಉಳ್ಳ ಕೆಲವು ಶಬ್ದಗಳು ಉಕಾರಾಂತಗಳಾಗುತ್ತವೆಕೆಲವು ಇದೇ ಇನ್ನೊಂದು ವ್ಯಂಜನದಿಂದ ಕೂಡಿ ದ್ವಿತ್ವ (ಒತ್ತಕ್ಷರಗಳೆನಿಸುತ್ತವೆಯಕಾರಾಂತಗಳು ಇಕಾರಾಂತಗಳಾಗುತ್ತವೆ ಮತ್ತು ದ್ವಿತ್ವವುಳ್ಳ ವುಗಳಾಗುತ್ತವೆ.
ಉದಾಹರಣೆಗೆ:-
 ನಕಾರಾಂತವು ಉಕಾರಾಂತವಾಗುವುದಕ್ಕೆ ಮತ್ತು ದ್ವಿತ್ವದೊಡನೆ ಉಕಾರಾಂತ ವಾಗುವುದಕ್ಕೆ:-

ನಾನ್-ನಾನುನೀನ್-ನೀನು
ಏನ್-ಏನುಅವನ್-ಅವನು
ಆನ್-ಆನುತಿನ್-ತಿನ್ನು
ಸೀನ್-ಸೀನುಪೊನ್-ಪೊನ್ನು (ಹೊನ್ನು)
ತಾನ್-ತಾನುಎನ್-ಎನ್ನು

(ii) ಣಕಾರಾಂತಗಳು ಉಕಾರಾಂತವಾಗುವುದಕ್ಕೆ ಮತ್ತು ದ್ವಿತ್ವದಿಂದ ಕೂಡಿದ ಉಕಾರಾಂತಗಳಾಗುವುದಕ್ಕೆ:-

ಕಣ್-ಕಣ್ಣುಪುಣ್-ಹುಣ್ಣು
ಉಣ್-ಉಣ್ಣುಪಣ್-ಹಣ್ಣು
ಮಣ್-ಮಣ್ಣುಮಾಣ್-ಮಾಣು
ಪೆಣ್-ಹೆಣ್ಣುಕಾಣ್-ಕಾಣು

ಲಕಾರಂತ ಶಬ್ದಗಳು ದ್ವಿತ್ವದಿಂದ ಕೂಡಿ ಉಕಾರಾಂತವಾಗುವುದಕ್ಕೆ ಮತ್ತು ದ್ವಿತ್ವವಿಲ್ಲದೆ ಉಕಾರಾಂತಗಳಾಗುವುದಕ್ಕೆ

ಬಿಲ್-ಬಿಲ್ಲುಅರಲ್-ಅರಲುಸೊಲ್-ಸೊಲ್ಲು
ನಿಲ್-ನಿಲ್ಲುಸೋಲ್-ಸೋಲುಕಾಲ್-ಕಾಲು
ಕಲ್-ಕಲ್ಲುಒರಲ್-ಒರಲುಪಾಲ್-ಪಾಲು
ಪುಲ್-ಹುಲ್ಲುಜೋಲ್-ಜೋಲುಸಿಡಿಲ್-ಸಿಡಿಲು
ಕೊಲ್-ಕೊಲ್ಲುನೂಲ್-ನೂಲುಅರಿಲ್-ಅರಿಲು
ಮಡಿಲ್-ಮಡಿಲುಪೋಲ್-ಪೋಲುನರಲ್-ನರಲು
ಬಳಲ್-ಬಳಲುಚಲ್-ಚಲ್ಲು
Tatsama Tadbhava Words List In Kannada

ಳಕಾರಾಂತಗಳಾದ ಶಬ್ದಗಳು ಉಕಾರಾಂತಗಳಾಗುವುದಕ್ಕೆ ಮತ್ತು ಇನ್ನೊಂದು ಳಕಾರದೊಡನೆ ಉಕಾರಾಂತಗಳಾಗುವುದಕ್ಕೆ

ಮರಳ್-ಮರಳುಉಗುಳ್-ಉಗುಳುಉರುಳ್-ಉರುಳು
ಮರುಳ್-ಮರುಳುತಳ್-ತಳ್ಳುಪೊರಳ್-ಪೊರಳು
ಸೀಳ್-ಸೀಳುಮುಳ್-ಮುಳ್ಳುನುಸುಳ್-ನುಸುಳು
ತಾಳ್-ತಾಳುಜೊಳ್-ಜೊಳ್ಳುಕೂಳ್-ಕೂಳು
ಮುಸುಳ್-ಮುಸುಳುಪುರುಳ್-ಹುರುಳುಕೇಳ್-ಕೇಳು
ಒರಳ್-ಒರಳುಆಳ್-ಆಳುಪಾಳ್-ಹಾಳು
ಅರಳ್-ಅರಳುಬಗುಳ್-ಬಗುಳು
(ಬೊಗಳು)
ಕಳ್-ಕಳ್ಳು
ಬಾಳ್-ಬಾಳುಕೊಳ್-ಕೊಳ್ಳು

 ರಕಾರಾಂತಗಳಾದ ಶಬ್ದಗಳು ಉಕಾರಾಂತಗಳಾಗುವುದಕ್ಕೆ

ನಾರ್-ನಾರುಬಸಿರ್-ಬಸಿರು
ಕಾರ್-ಕಾರುತಳಿರ್-ತಳಿರು
ಸೋರ್-ಸೋರುಮೊಸರ್-ಮೊಸರು
ಸೇರ್-ಸೇರುಬೆಮರ್-ಬೆವರು (ಬೆಮರು)
ತೆಮರ್-ತೆವರುಉಸಿರ್-ಉಸಿರು
Tatsama Tadbhava Words List In Kannada

ಯಕಾರಾಂತ ಶಬ್ದಗಳು ಇಕಾರಾಂತ ಮತ್ತು ದ್ವಿತ್ವದಿಂದ ಕೂಡಿದ ಇಕಾರಾಂತ ಗಳಾಗುವುದಕ್ಕೆ

ತಾಯ್-ತಾಯಿಕಾಯ್-ಕಾಯಿಬಯ್-ಬಯ್ಯಿ
ನಾಯ್-ನಾಯಿಕಯ್-ಕಯ್ಯಿಪೊಯ್-ಪೊಯ್ಯಿ
ಸಾಯ್-ಸಾಯಿಮೆಯ್-ಮೆಯ್ಯಿನೆಯ್-ನೆಯ್ಯಿ
images 37
ತತ್ಸಮ ತದ್ಭವ ಪದಗಳ ಪಟ್ಟಿ 100 | Tatsama Tadbhava Words List In Kannada

ಅನುಸ್ವಾರದಿಂದ ಕೂಡಿದ ಎಷ್ಟೋ ಶಬ್ದಗಳು ಅದಿಲ್ಲದೆ ಹೊಸಗನ್ನಡದಲ್ಲಿ ರೂಪಾಂತರವಾಗಿವೆ.

ತೋಂಟ-ತೋಟನೊರಂಜು-ನೊರಜುಸಿಡುಂಬು-ಸಿಡುಬು
ಕುಸುಂಬೆ-ಕುಸುಬೆತುಳುಂಕು-ತುಳುಕುಸೇಂದು-ಸೇದು
ಪೊಸಂತಿಲ್-ಹೊಸತಿಲುಬಣಂಜಿಗ-ಬಣಜಿಗಕರಂಡಗೆ-ಕರಡಗೆ
ಬಣಂಬೆ-ಬಣವೆತುರುಂಬು-ತುರುಬುಜಿನುಂಗು-ಜಿನುಗು
ಕೊಡಂತಿ-ಕೊಡತಿನಾಂದು-ನಾದುಮುಸುಂಕು-ಮುಸುಗು
ಕವುಂಕುಳ್-ಕಂಕುಳಪಲುಂಬು-ಹಲುಬುಸೆರೆಂಗು-ಸೆರಗು
ಒರಂತೆ-ಒರತೆಮೀಂಟು-ಮೀಟುಬೆಡಂಗು-ಬೆಡಗು
ತೋಂಟಿಗ-ತೋಟಿಗ
Tatsama Tadbhava Words List In Kannada
ತತ್ಸಮ ತದ್ಭವ ಪದಗಳ ಪಟ್ಟಿ 100 | Tatsama Tadbhava Words List In Kannada
ತತ್ಸಮ ತದ್ಭವ ಪದಗಳ ಪಟ್ಟಿ 100 | Tatsama Tadbhava Words List In Kannada

ಇನ್ನೂ ಕೆಲವು ರೂಪಾಂತರಗಳನ್ನು ನೋಡಿರಿ.

ಕಳ್ತೆ[1]-ಕರ್ತೆ-ಕತ್ತೆಎಳ್‌ನೆಯ್- ಎಣ್ಣೆ
ಗಳ್ದೆ-ಗರ್ದೆ-ಗದ್ದೆಬೆಳ್‌ನೆಯ್- ಬೆಣ್ಣೆ
ಪೊಳ್ತು­-ಪೊತ್ತು- ಹೊತ್ತುಕಾಣ್ಕೆ-ಕಾಣಿಕೆ
ಅಪ್ಪುದು- ಅಹುದು- ಹೌದುಪೂಣ್ಕೆ-ಪೂಣಿಕೆ (ಹೂಣಿಕೆ)
ತನತ್ತು-ತನ್ನತು- ತನ್ನಬಳಲ್ಕೆ-ಬಳಲಿಕೆ
ನಿನತ್ತು-ನಿನ್ನತು-ನಿನ್ನಒರ‍್ಮೆ-ಒಮ್ಮೆ
ಎನಿತ್ತು-ಎನಿತು, ಎಸುಟು-ಎಷ್ಟುನುರ್ಗು-ನುಗ್ಗು
ಅನಿತ್ತು- ಅನಿತು, ಅಸುಟು- ಅಷ್ಟುತರ್ಗು-ತಗ್ಗು
ಚುರ್ಚು- ಚುಚ್ಚುಗುರ್ದು-ಗುದ್ದು
ಕರ್ಚು-ಕಚ್ಚುಪರ್ದು-ಹದ್ದು
ಬಿರ್ದು- ಬಿದ್ದುತೋರ್ಪ-ತೋರುವ
ಉರ್ದು- ಉದ್ದುಕಾರ್ದ-ಕಾರಿದ
ಇರ್ಪ- ಇರುವಅಲ್ಲಂ-ಅಲ್ಲ
ಪೀರ್ದಂ­-ಹೀರಿದನುತಣ್ಣು-ತಂಪು
ಸೇರ್ದಂ-ಸೇರಿದನುತೆಳು- ತಿಳುವು
ಕರ್ಪು-ಕಪ್ಪುನೇರ್ಪು- ನೇರ
ಕೆರ್ಪು-ಕೆರಕಲ್ತು-ಕಲಿತು
ಬೆಳ್ಪು- ಬಿಳುಪು
Tatsama Tadbhava Words List In Kannada

ಇತರೆ ವಿಷಯ

Leave a Reply

Your email address will not be published. Required fields are marked *