ವಿಭಕ್ತಿ ಪ್ರತ್ಯಯಗಳು ಕನ್ನಡ | Kannada Vibhakti Pratyaya

ವಿಭಕ್ತಿ ಪ್ರತ್ಯಯಗಳ ಪಟ್ಟಿ, Vibhakti Pratyaya in Kannada

ವಿಭಕ್ತಿ ಪ್ರತ್ಯಯಗಳ ಪಟ್ಟಿ, Vibhakti Pratyaya in Kannada, Vibhakti Pratyaya Galu, Kannada Vibhakti Pratyaya, Vibakthi Prathyagalu, Examples,PDF, kannada vibhakti pratyaya, ವಿಭಕ್ತಿ ಪ್ರತ್ಯಯಗಳು ಕನ್ನಡ

ವಿಭಕ್ತಿ ಪ್ರತ್ಯಯಗಳ ಪಟ್ಟಿ

ಕನ್ನಡ ವೀಭಕ್ತಿ ಪ್ರತ್ಯಯ ದ ಪಟ್ಟಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ಇದು ಸಂಪೂರ್ಣವಾಗಿ ಉಚಿತವಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

ವಿಭಕ್ತಿ ಪ್ರತ್ಯಯಗಳ ಪಟ್ಟಿ

ವಿಭಕ್ತಿ ಪ್ರತ್ಯಯಗಳ ಪಟ್ಟಿ । Vibhakti Pratyaya in Kannada Best No1 Information
ವಿಭಕ್ತಿ ಪ್ರತ್ಯಯಗಳ ಪಟ್ಟಿ । Vibhakti Pratyaya in Kannada Best No1 Information

ವಿಭಕ್ತಿ ಎಂದರೇನು

ಒಂದು ವಾಕ್ಯ ಸಾಲಿನಲ್ಲಿ ಇರುವ ಹೆಸರುಪದಗಳ (ನಾಮಪದಗಳ) ನಡುವಣ, ಇಲ್ಲವೆ ಹೆಸರುಪದ ಮತ್ತು ಕ್ರಿಯಾಪದಗಳ ನಡುವಣ ನಂಟನ್ನು ತಿಳಿಸುವ ಪದದ ಪ್ರತ್ಯಯಗಳನ್ನು ವಿಭಕ್ತಿ-ಪ್ರತ್ಯಯಗಳು ಎಂದು ಸಂಸ್ಕೃತದಲ್ಲಿ ಕರೆಯುವರು.

ವಿಭಕ್ತಿ ಪ್ರತ್ಯಯ ಉದಾಹರಣೆಗಳು

ವಿಭಕ್ತಿ ಪ್ರತ್ಯಯಗಳು ಇದುವರೆಗೆ ನಾಮಪ್ರಕೃತಿ , ಲಿಂಗ ಮತ್ತು ವಚನಗಳ ಬಗೆಗೆ ಅರಿತಿರುವಿರಿ . ನಾಮಪ್ರಕೃತಿಗಳಿಗೆ ಆ ವಿಧವಾದ ವಿಭಕ್ತಿಪ್ರತ್ಯಯಗಳು ಅನೇಕ ಕಾರಕಾರ್ಥಗಳಲ್ಲಿ ಸೇರುವುವು .

ಈಗ ಹಾಗೆ ಬರುವ ಪ್ರತ್ಯಯಗಳಾವುವು ? ಅವುಗಳ ಪ್ರಯೋಜನವೇನು ಎಂಬುದನ್ನು ತಿಳಿಯೋಣ .

ಈ ಕೆಳಗಿನ ವಾಕ್ಯಗಳನ್ನು ನೋಡಿರಿ :

ಭೀಮನು ತನ್ನ ಬಲಗಾಲಿನಿಂದ ಚೆಂಡನ್ನು ಒದೆದನು ” ಈ ವಾಕ್ಯವು – ಭೀಷ್ ಬಲಗಾಲು , ಚೆಂಡು – ಹೀಗೆ ಕೇವಲ ನಾಮಪ್ರಕೃತಿಗಳನ್ನೇ ಹೇಳಿ ಒದೆದನು ಎಂದಿದ್ದರೆ ಅರ್ಥವಾಗುತ್ತಿರಲಿಲ್ಲ . “ ಭೀಮ , ತಾನು , ಬಲಗಾಲು , ಚೆಂಡು ” ಈ ನಾಲ್ಕು ಪ್ರಕೃತಿಗಳಿಗೆ ಪರಸ್ಪರ ವಾಕ್ಯದಲ್ಲಿ ಒಂದು ಸಂಬಂಧವಿದೆ . ಈ ಸಂಬಂಧವನ್ನು ಪ್ರತ್ಯಯಗಳು ಉಂಟುಮಾಡುತ್ತವೆ .

ಹೇಗೆಂಬುದನ್ನು ನೋಡಿರಿ . ‘ ಭೀಮ ‘ ಎಂಬ ಪ್ರಕೃತಿಯ ಮೇಲೆ ಉ ‘ ಪ್ರತ್ಯಯ ಸೇರಿದಾಗ ಭೀಮನು ‘ ಎಂಬ ಕರ್ತಪದವಾಗಿ ಒದೆಯುವ ಕೆಲಸ ಮಾಡಿದನು ಎಂಬ ಅರ್ಥವು ಹೊಳೆಯುವುದು – ಮುಂದಿನ ಪ್ರಶ್ನೆ ಏನನ್ನು ಒದೆದನು ? ಎಂಬುದು .

ಆಗ ‘ ಚೆಂಡು ‘ ಎಂಬ ಪ್ರಕೃತಿಯಮೇಲೆ ಕರ್ಮಾರ್ಥದ ‘ ಅನ್ನು ಪ್ರತ್ಯಯ ಸೇರಿ ಚೆಂಡನ್ನು ‘ ಎಂಬ ಕರ್ಮಪದವಾಯಿತು . ಒದೆಯುವುದಕ್ಕೆ ಇದು ಕರ್ಮವಾಯಿತು . ಇದರಂತೆ ಮುಂದೆ ಯಾವುದರಿಂದ ? ಎಂಬ ಪ್ರಶ್ನೆ ಹುಟ್ಟುವುದು .

ಆಗ ‘ ಬಲಗಾಲು ‘ ಎಂಬ ಪ್ರಕೃತಿಯ ಮುಂದೆ ಸಾಧನಾರ್ಥಕ ( ಕರಣಾರ್ಥಕ ) ಇಂದ ‘ ಪ್ರತ್ಯಯವು ಸೇರಿ ‘ ಬಲಗಾಲಿನಿಂದ ‘ ಎಂಬ ಕರಣಾರ್ಥಕ ಪದದ ಸಂಬಂಧವುಟಾಯಿತು . ‘ ತಾನು ‘ ಎಂಬ ಪ್ರಕೃತಿಯ ಮೇಲೆ ಅ ಎಂಬ ಸಂಬಂಧಾರ್ಥಕ ಪ್ರತ್ಯಯ ಸೇರಿ ತನ್ನ ಸಂಬಂಧವಾದ ಬಲಗಾಲಿ ನಿಂದ ಎಂಬ ಸಂಬಂಧವು ಸೂಚಿತವಾಗುವುದು . ಇಲ್ಲಿ ಬಂದಿರುವ ನಾಲ್ಕು ಪ್ರಕೃತಿಗಳ ಮೇಲೂ

‘ ಭೀಮನು ‘ ಎಂಬಲ್ಲಿಯ ‘ ಉ ‘ ಪ್ರತ್ಯಯ ಕರ್ತಥ್ರದಲ್ಲೂ , ೨. ಚೆಂಡನ್ನು ‘ ಎಂಬಲ್ಲಿಯ ಅನ್ನು ಪ್ರತ್ಯಯ ಕರ್ಮಾರ್ಥದಲ್ಲೂ , ವಿಭಕ್ತಿಪ್ರತ್ಯಯಗಳು ಏಳು ಮಾತ್ರ .

ಸಂಶೋಧನೆಯನ್ನು ಸೇರಿಸಿದರೆ ಎಂಟಾಗುವುವು . ಆದರೆ ಸಂಶೋಧನೆಯು ಪ್ರಥಮಾ ವಿಭಕ್ತಿಯಲ್ಲಿಯೇ ಸೇರಿ ಸಂಶೋಧನಾ ಪ್ರಥಮಾವಿಭಕ್ತಿಯೆನಿಸುವುದು .

ವಿಭಕ್ತಿ ಪ್ರತ್ಯಯ ಕನ್ನಡ

ಇಲ್ಲಿ ಸ್ಪಷ್ಟತೆಗೋಸುಗ ೮ ವಿಭಕ್ತಿಯೆಂದು ಹೇಳಿದೆ . ಇವುಗಳಲ್ಲಿ ಷಷ್ಟಿ , ಸಂಶೋಧನೆಯನ್ನುಳಿದು ಉಳಿದ ಆರು ವಿಭಕ್ತಿಗಳು ಕಾರಕಾರ್ಥಗಳೆನಿಸುವುವು .

ವಿಭಕ್ತಿ ಪ್ರತ್ಯಯಗಳ ಪಟ್ಟಿ

ತನ್ನ ‘ ಎಂಬಲ್ಲಿಯ ‘ ಅ ‘ ಪ್ರತ್ಯಯ ಸಂಬಂಧದಲ್ಲೂ ,

‘ ಬಲಗಾಲಿನಿಂದ ‘ ಎಂಬಲ್ಲಿಯ ‘ ಇಂದ ‘ ಪ್ರತ್ಯಯ ಸಾಧನಾರ್ಥದಲ್ಲೂ ಎಂದರೆ ಕರಣಾರ್ಥದಲ್ಲೂ ಸೇರಿ ವಾಕ್ಯದಲ್ಲಿ ಪರಸ್ಪರ ಸಂಬಂಧವನ್ನುಂಟುಮಾಡುವುವು .

ಕೇವಲ ಪ್ರಕೃತಿಗಳನ್ನೇ ಪ್ರಯೋಗ ಮಾಡುವುದು ಸಾಧ್ಯವಿಲ್ಲ . ಪ್ರಯೋಗ ಬಾರದು ಎಂಬುದು ಮೇಲಿನ ವಿವರಣೆಯಿಂದ ಅರ್ಥವಾಗುವುದು .

ಅಲ್ಲದೆ ಉ , ಅನ್ನು , ಇಂದ , ಇತ್ಯಾದಿ ಪ್ರತ್ಯಯಗಳೂ ಪ್ರಯೋಗಕ್ಕೆ ಯೋಗ್ಯವಲ್ಲ . ಕೆಲವು ಕಡೆ ವಾಕ್ಯಗಳಲ್ಲಿ ವಿಭಕ್ತಿಪ್ರತ್ಯಯವು ಇಲ್ಲದಂತೆ ಕಂಡುಬಂದರೂ ಅವು ಬಂದು ಲೋಪವಾಗಿವೆಯೆಂದು ಭಾವಿಸಬೇಕು .

vibhakti pratyaya endarenu in kannada

Vibhakti Pratyaya in Kannada | ವಿಭಕ್ತಿ ಪ್ರತ್ಯಯಗಳ ಪಟ್ಟಿ
ಉದಾಹರಣೆಗೆ :

“ ಭೀಮನು ಚೆಂಡನ್ನು ಎಸೆದನು ” -ಎಂಬ ವಾಕ್ಯವು “ ಭೀಮ ಚೆಂಡನ್ನು ಎಸೆದನು ” -ಹೀಗೆ ಪ್ರಯೋಗಿಸಲ್ಪಟ್ಟರೆ ‘ ಭೀಮ ‘ ಎಂಬುದರ ಮೇಲೆ ವಿಭಕ್ತಿಪ್ರತ್ಯಯವೇ ಬಂದಿಲ್ಲವೆಂದು ಹೇಳಲಾಗದು . ಆದರೆ ಅಲ್ಲಿ ‘ ಉ ‘ ಎಂಬ ವಿಭಕ್ತಿಪ್ರತ್ಯಯ ಬಂದು ಲೋಪವಾಗಿದೆ ಎಂದು ತಿಳಿಯಬೇಕು . ಹಾಗಾದರೆ ವಿಭಕ್ತಿಪ್ರತ್ಯಯವೆಂದರೇನು ? ಎಂಬ ಬಗೆಗೆ ಕೆಳಗಿನಂತೆ ಸೂತ್ರವನ್ನು ಹೇಳಬಹುದು .

ವಿಭಕ್ತಿ ಪ್ರತ್ಯಯಗಳ ಪಟ್ಟಿ

ಕರ್ತ , ಕರ್ಮ , ಕರಣ , ಸಂಪ್ರದಾನ , ಅಪಾದಾನ , ಆಧಿಕರಣಾಧಿಕಾರಕಾರ್ಥ ಗಳನ್ನು ವಿಭಾಗಿಸಿಕೊಡುವ ಶಬ್ದರೂಪವೇ ವಿಭಕ್ತಿ ಎನಿಸುವುದು .

ಷಷ್ಠಿವಿಭಕ್ತಿಯು ಕಾರಕಾರ್ಥಗಳಲ್ಲಿ ಸೇರಿಲ್ಲ . ಅದರ ಹಾಗೆ ಸಂಶೋಧನಾ ವಿಭಕ್ತಿಯೂ ಸೇರಿಲ್ಲ . ಕೇವಲ ಪ್ರಥಮಾ , ದ್ವಿತೀಯಾ , ತೃತೀಯಾ , ಚತುರ್ಥಿ , ಪಂಚಮೀ , ಸಪ್ತಮೀ ಈ ಆರು ವಿಭಕ್ತಿಗಳೇ ಕಾರಕಾರ್ಥಗಳನ್ನು ವಿಭಾಗಿಸಿ ಕೊಡುವಂಥವುಗಳು .

ವಿಭಕ್ತಿ ಪ್ರತ್ಯಯಗಳ ಪಟ್ಟಿ

120274917 1454561524734714 3689035064677014844 n

vibhakti pratyaya in kannada examples ವಿಭಕ್ತಿ ಪ್ರತ್ಯಯಗಳ ಪಟ್ಟಿ

ಏಕವಚನ ಬಹುವಚನ

ಪ್ರಥಮಾ

ಅ+ ಉ = ಅಣ್ಣ+ ನ+ ಉ = ಅಣ್ಣನು ಅಣ್ಣಂದಿರು
ದ್ವಿತೀಯ –
ಅಣ್ಣ+ ಅನ್ನು = ಅಣ್ಣ+ ನ+ ಅನ್ನು = ಅಣ್ಣನನ್ನು ಅಣ್ಣಂದಿರನ್ನು
ತೃತೀಯಾ
ಅಣ್ಣ+ ಇಂದ = ಅಣ್ಣ+ ನ+ ಇಂದ = ಅಣ್ಣನಿಂದ ಅಣ್ಣಂದಿರಿಂದ
ಚತುರ್ಥೀ
ಅಣ್ಣ+ ಇಗೆ = ಅಣ್ಣ+ ನ+ ಇಗೆ = ಅಣ್ಣನಿಗೆ ಅಣ್ಣಂದಿರಿಗೆ
ಪಂಚಮೀ
ಅಣ್ಣ+ ದೆಸೆಯಿಂದ= ಅಣ್ಣ+ ನ+ ದೆಸೆಯಿಂದ= ಅಣ್ಣನದೆಸೆಯಿಂದ ಅಣ್ಣಂದಿರದೆಸೆಯಿಂದ
ಷಷ್ಠೀ
ಅಣ್ಣ+ ಅ = ಅಣ್ಣ+ ನ+ ಅ = ಅಣ್ಣನ ಅಣ್ಣಂದಿರ
ಸಪ್ತಮೀ
ಅಣ್ಣ+ ಅಲ್ಲಿ = ಅಣ್ಣ+ ನ+ ಅಲ್ಲಿ = ಅಣ್ಣನಲ್ಲಿ ಅಣ್ಣಂದಿರಲ್ಲಿ
ಸಂಬೋಧನಾ
ಅಣ್ಣ+ ಏ = ಅಣ್ಣ+ ನ+ ಏ = ಅಣ್ಣನೇ ಅಣ್ಣಂದಿರೇ
ಅಣ್ಣ+ ಆ = ಅಣ್ಣ+ ಆ = ಅಣ್ಣಾ ಅಣ್ಣಂದಿರಾ

‘ಅಣ್ಣ’ ಎಂಬ ಅಕಾರಾಂತ ಪುಲ್ಲಿಂಗದಲ್ಲಿ ಏಕವಚನದಲ್ಲಿ ವಿಭಕ್ತಿಪ್ರತ್ಯಯಗಳು ಎಲ್ಲ
ಕಡೆಗೂ ಪ್ರಕೃತಿಗೂ ಪ್ರತ್ಯಯಕ್ಕೂ ಮಧ್ಯದಲ್ಲಿ ‘ನ’ ಕಾರವು ಆಗಮವಾಗಿ ಬರುತ್ತದೆ.
ಸಂಬೋಧನೆಯಲ್ಲಿ ‘ಆ’ ಪ್ರತ್ಯಯ ಪರವಾದಾಗ ಮಾತ್ರ ‘ನ’ ಕಾರಾಗಮವಾಗುವುದಿಲ್ಲ.

ವಿಭಕ್ತಿ ಪ್ರತ್ಯಯಗಳ ಪಟ್ಟಿ

‘ಅ’ ಕಾರಾಂತ ಸ್ತ್ರೀಲಿಂಗ ‘ಅಕ್ಕ’ ಶಬ್ದ

ಏಕವಚನ ಬಹುವಚನ

ಪ್ರಥಮಾ

ಅಕ್ಕ+ ಉ = ಅಕ್ಕ+ ನ+ ಉ = ಅಕ್ಕನು ಅಕ್ಕಂದಿರು

ದ್ವಿತೀಯಾ
ಅಕ್ಕ+ ಅನ್ನು = ಅಕ್ಕ+ ನ+ ಅನ್ನು = ಅಕ್ಕನನ್ನು ಅಕ್ಕಂದಿರನ್ನು

ತೃತೀಯಾ
ಅಕ್ಕ+ ಇಂದ = ಅಕ್ಕ+ ನ+ ಇಂದ = ಅಕ್ಕನಿಂದ ಅಕ್ಕಂದಿರಿಂದ

ಚತುರ್ಥೀ
ಅಕ್ಕ+ ಇಗೆ = ಅಕ್ಕ+ ನ+ ಇಗೆ = ಅಕ್ಕನಿಗೆ ಅಕ್ಕಂದಿರಿಗೆ

ಪಂಚಮೀ –
ಅಕ್ಕ+ ದೆಸೆಯಿಂದ= ಅಕ್ಕ+ ನ+ ದೆಸೆಯಿಂದ= ಅಕ್ಕನ ದೆಸೆಯಿಂದ ಅಕ್ಕಂದಿರ ದೆಸೆಯಿಂದ
ಷಷ್ಠೀ
ಅಕ್ಕ+ ಅ = ಅಕ್ಕ+ ನ+ ಅ = ಅಕ್ಕನ ಅಕ್ಕಂದಿರ

ವಿಭಕ್ತಿ ಪ್ರತ್ಯಯಗಳ ಪಟ್ಟಿ

ಸಪ್ತಮೀ

ಅಕ್ಕ+ ಅಲ್ಲಿ = ಅಕ್ಕ+ ನ+ ಅಲ್ಲಿ = ಅಕ್ಕನಲ್ಲಿ ಅಕ್ಕಂದಿರಲ್ಲಿ

ಸಂಬೋಧನಾ

ಅಕ್ಕ+ ಏ = ಅಕ್ಕ+ ನ+ ಏ = ಅಕ್ಕನೇ ಅಕ್ಕಂದಿರೇ
ಪುಲ್ಲಿಂಗದಂತೆಯೇ ಈ ಸ್ತ್ರೀಲಿಂಗ ಅಕಾರಾಂತ ಪ್ರಕೃತಿಯ ಮೇಲೆ ಏಕವಚನದಲ್ಲಿ
ವಿಭಕ್ತಿಪ್ರತ್ಯಯಗಳು ಸೇರುವಾಗ ಬಹುಶಃ ಎಲ್ಲ ಕಡೆಗೂ ‘ನ’ ಕಾರಾಗಮ ಬಂದಿರುವುದನ್ನು ಕಾಣಬಹುದು. ಸಂಬೋಧನೆಯಲ್ಲಿ ‘ಆ’ ವಿಭಕ್ತಿಪ್ರತ್ಯಯ ಸೇರಿದಾಗ ಮಾತ್ರ ‘ನ’ ಕಾರಾ
ಗಮವಿಲ್ಲ

‘ಅ’ ಕಾರಾಂತ ನಪುಂಸಕಲಿಂಗ ಪ್ರಕೃತಿ_ ಮರ

ವಿಭಕ್ತಿ ಏಕವಚನ ಬಹುವಚನ
ಪ್ರಥಮಾ – ಮರ + ಉ = ಮರ + ವ + ಉ = ಮರವು ಮರಗಳು
ದ್ವಿತೀಯಾ – ಮರ + ಅನ್ನು = ಮರ + ವ + ಅನ್ನು = ಮರವನ್ನು ಮರಗಳನ್ನು
ತೃತೀಯಾ – ಮರ + ಇಂದ = ಮರ + ದ + ಇಂದ = ಮರದಿಂದ ಮರಗಳಿಂದ
ಚತುರ್ಥೀ – ಮರ + ಕ್ಕೆ = ಮರ + + ಕ್ಕೆ, ಇಗೆ = ಮರಕ್ಕೆ ಮರಗಳಿಗೆ
ಪಂಚಮೀ – ಮರ + ದೆಸೆಯಿಂದ = ಮರ + ದ + ದೆಸೆಯಿಂದ = ಮರದ ಮರಗಳ
ದೆಸೆಯಿಂದ ದೆಸೆಯಿಂದ
ಷಷ್ಠೀ – ಮರ + ಅ = ಮರ + ದ + ಅ = ಮರದ ಮರಗಳ
ಸಪ್ತಮೀ – ಮರ + ಅಲ್ಲಿ = ಮರ + ದ + ಅಲಿ ್ಲ = ಮರದಲ್ಲಿ ಮರಗಳಲ್ಲಿ
ಸಂಬೋಧನಾ – ಮರ + ವ = ಮರ + ವ + ಏ ಮರವೇ ಮರಗಳಿರಾ
‘ಮರ’ ಎಂಬ ಅಕಾರಾಂತ ನಪುಂಸಕಲಿAಗ ನಾಮಪ್ರಕೃತಿಯ ಮೇಲೆ ೮ ವಿಧವಾದ ನಾಮ
ವಿಭಕ್ತಿಪ್ರತ್ಯಯಗಳನ್ನು ಹಚ್ಚಿದಾಗ ಪ್ರಥಮಾ, ದ್ವಿತೀಯಾ, ಸಂಬೋಧನೆಗಳಲ್ಲಿ ‘ವ’ ಕಾರವೂ, ಚತುರ್ಥಿಯನ್ನುಳಿದು ಬೇರೆ ಕಡೆಗಳಲ್ಲಿ ‘ದ’ ಕಾರವೂ ಆಗಮಗಳಾಗಿ ಬಂದಿವೆ ಎಂಬುದನ್ನು ಗಮನಿಸಿರಿ.


ಆದ್ದರಿಂದ ಅಕಾರಾಂತ ನಪುಂಸಕಲಿಂಗ ಪ್ರಕೃತಿಗಳ ಮೇಲೆ ಏಕವಚನದಲ್ಲಿ ವಿಭಕ್ತಿ ಪ್ರತ್ಯಯಗಳು ಸೇರುವಾಗ ಪ್ರಾಯಶಃ ಪ್ರಥಮಾ, ದ್ವಿತೀಯ , ಸಂಬೋಧನಗಳಲ್ಲಿ ‘ವ’ ಕಾರವೂ, ತೃತೀಯಾ, ಪಂಚಮೀ, ಷಷ್ಠೀ, ಸಪ್ತಮಿಗಳಲ್ಲಿ ‘ದ’ ಕಾರವೂ ಆಗಮವಾಗಿ ಬರುವುವು.

ವಿಭಕ್ತಿ ಪ್ರತ್ಯಯಗಳ ಪಟ್ಟಿ

‘ಇನ’ ಎಂಬ ಆಗಮ ಬರುವ ವಿಚಾರ

ಗುರು, ಊರು, ಮಗು, ವಧು-ಮೊದಲಾದ ಉಕಾರಾಂತ ಪ್ರಕೃತಿಗಳಿಗೆ

ತೃತೀಯಾ,
ಪಂಚಮಿ, ಷಷ್ಠೀ, ಸಪ್ತಮೀ ವಿಭಕ್ತಿಗಳಲ್ಲಿ ‘ಇನ’ ಎಂಬ ಆಗಮ ವಿಕಲ್ಪವಾಗಿ ಬರುವುದು.

vibhakti pratyaya galu in kannada,
ಉದಾಹರಣೆಗೆ:-
ತೃತೀಯಾ
೧) ಗುರುವಿನಿಂದ (ಇನಾಗಮ) ಗುರುವಿನಿಂದ (ವಕಾರಾಗಮ)

೨) ಊರಿನಿಂದ (ಇನಾಗಮ) ಊರಿಂದ (ಯಾವ ಆಗಮವೂ ಇಲ್ಲ)
೩) ವಧುವಿನಿಂದ (ಇನಾಗಮ) ವಧುವಿನಿಂದ (ವಕಾರಾಗಮ)
೪) ಮಗುವಿನಿಂದ (ಇನಾಗಮ) ಮಗುವಿನಿಂದ (ವಕಾರಾಗಮ)

ಪಂಚಮೀ
(೧) ಗುರುವಿನದೆಸೆಯಿಂದ (ಇನಾಗಮ) —
(೨) ಊರಿನದೆಸೆಯಿಂದ (ಇನಾಗಮ) ಊರದೆಸೆಯಿಂದ (ಯಾವ ಆಗಮವೂ ಇಲ್ಲ)
(೩) ವಧುವಿನದೆಸೆಯಿಂದ (ಇನಾಗಮ) —
(೪) ಮಗುವಿನದೆಸೆಯಿಂದ (ಇನಾಗಮ) —
ಷಷ್ಠೀ
೧)ಗುರುವಿನ
೨)ವಧುವಿನ (ಇನಾಗಮ) —
೩)ಮಗುವಿನ (ಇನಾಗಮ) —
ಸಪ್ತಮೀ
ಗುರುವಿನಲ್ಲಿ (ಇನಾಗಮ) —
ಊರಿನಲ್ಲಿ (ಇನಾಗಮ)
ವಧುವಿನಲ್ಲಿ (ಇನಾಗಮ) —
ಮಗುವಿನಲ್ಲಿ (ಇನಾಗಮ) —

ವಿಭಕ್ತಿ ಪ್ರತ್ಯಯಗಳ ಪಟ್ಟಿ

‘ಅರ’ ಎಂಬಾಗಮ ಬರುವ ವಿಚಾರ

ಉಕಾರಾಂತಗಳಾದ ಹಿರಿದು, ಕಿರಿದು ಮುಂತಾದ ಗುಣವಾಚಕ ಶಬ್ದಗಳು, ಒಂದು ಎಂಬ ಸಂಖ್ಯಾವಾಚಕ ಪದ ಅದು, ಇದು ಮುಂತಾದ ಸರ್ವನಾಮ ಕೊಡುವುದು, ಹೋಗುವುದು ಇತ್ಯಾದಿ ‘ಉದು’ ಪ್ರತ್ಯಯಾಂತ ಕೃದಂತಗಳಿಗೆ ತೃತೀಯಾ, ಪಂಚಮೀ, ಷಷ್ಠೀ, ಸಪ್ತಮೀ
ವಿಭಕ್ತಿಗಳಲ್ಲಿ ‘ಅರ’ ಎಂಬಾಗಮವು ಬರುವುದು.
ಉದಾಹರಣೆಗೆ:-
ಗುಣವಾಚಕಗಳು – ಹಿರಿದು, ಕಿರಿದು-ಇತ್ಯಾದಿ
ಶಬ್ದ:- ಹಿರಿದು

kannada vibhakti pratyaya
ತೃತೀಯಾ ಹಿರಿದು + ಅರ + ಇಂದ = ಹಿರಿದರಿಂದ (ಅರ ಆಗಮ)
ಪಂಚಮೀ ಹಿರಿದು + ಅರ + ದೆಸೆಯಿಂದ = ಹಿರಿದರದೆಸೆಯಿಂದ (ಅರ ಆಗಮ)
ಷಷ್ಠೀ ಹಿರಿದು + ಅರ + ಅ = ಹಿರಿದರ (ಅರ ಆಗಮ)
ಸಪ್ತಮೀ ಹಿರಿದು + ಅರ + ಅಲ್ಲಿ = ಹಿರಿದರಲ್ಲಿ (ಅರ ಆಗಮ)
ಶಬ್ದ:- ಕಿರಿದು

ತೃತೀಯಾ ಕಿರಿದು + ಅರ + ಇಂದ = ಕಿರಿದರಿಂದ (ಅರ ಆಗಮ)
ಪಂಚಮೀ ಕಿರಿದು + ಅರ + ದೆಸೆಯಿಂದ = ಕಿರಿದರದೆಸೆಯಿಂದ (ಅರ ಆಗಮ)
ಷಷ್ಠೀ ಕಿರಿದು + ಅರ + ಅ = ಕಿರಿದರ (ಅರ ಆಗಮ)
ಸಪ್ತಮೀ ಕಿರಿದು + ಅರ + ಅಲ್ಲಿ = ಕಿರಿದರಲ್ಲಿ (ಅರ ಆಗಮ)

ಸಂಖ್ಯಾವಾಚಕ – ಒಂದು

ತೃತೀಯಾ ಒಂದು + ಅರ + ಇಂದ = ಒಂದರಿAದ (ಅರ ಆಗಮ)
ಪಂಚಮೀ ಒಂದು + ಅರ + ದೆಸೆಯಿಂದ = ಒಂದರದೆಸೆಯಿAದ (ಅರ ಆಗಮ)
ಷಷ್ಠೀ ಒಂದು + ಅರ + ಅ = ಒಂದರ (ಅರ ಆಗಮ)

ಸಪ್ತಮೀ ಒಂದು + ಅರ + ಅಲ್ಲಿ = ಒಂದರಲ್ಲಿ (ಅರ ಆಗಮ)

ಸರ್ವನಾಮ –

ಅದು, ಇದು-ಇತ್ಯಾದಿಗಳು
ಶಬ್ದ:- ಅದು
ತೃತೀಯಾ
ಅದು + ಅರ + ಇಂದ = ಅದರಿಂದ (ಅರ ಆಗಮ)
ಪಂಚಮೀ ಅದು + ಅರ + ದೆಸೆಯಿಂದ = ಅದರದೆಸೆಯಿಂದ (ಅರ ಆಗಮ)
ಷಷ್ಠೀ ಅದು + ಅರ + ಅ = ಅದರ (ಅರ ಆಗಮ)
ಸಪ್ತಮೀ ಅದು + ಅರ + ಅಲ್ಲಿ = ಅದರಲ್ಲಿ (ಅರ ಆಗಮ)
ಶಬ್ದ:- ಇದು
ತೃತೀಯಾ ಇದು + ಅರ + ಇಂದ = ಇದರಿಂದ (ಅರ ಆಗಮ)
ಪಂಚಮೀ ಇದು + ಅರ + ದೆಸೆಯಿಂದ = ಇದರದೆಸೆಯಿಂದ (ಅರ ಆಗಮ)
ಷಷ್ಠೀ ಇದು + ಅರ + ಅ = ಇದರ (ಅರ ಆಗಮ)
ಸಪ್ತಮೀ ಇದು + ಅರ + ಅಲ್ಲಿ = ಇದರಲ್ಲಿ (ಅರ ಆಗಮ)

vibhakti pratyaya galu in kannada grammar
‘ಉದು’ ಪ್ರತ್ಯಯಾಂತ ಕೃದಂತಗಳು – ಕೊಡುವುದು, ಹೋಗುವುದು-ಇತ್ಯಾದಿ
ಶಬ್ದ:-
ಕೊಡುವುದು
ತೃತೀಯಾ ಕೊಡುವುದು + ಅರ + ಇಂದ = ಕೊಡುವುದರಿಂದ (ಅರ ಆಗಮ)
ಪಂಚಮಿ ಕೊಡುವುದು + ಅರ + ದೆಸೆಯಿಂದ = ಕೊಡುವುದರದೆಸೆಯಿಂದ (ಅರ ಆಗಮ)
ಷಷ್ಠೀ ಕೊಡುವುದು + ಅರ + ಅ = ಕೊಡುವುದರ (ಅರ ಆಗಮ)
ಸಪ್ತಮೀ ಕೊಡುವುದು + ಅರ + ಅಲ್ಲಿ = ಕೊಡುವುದರಲ್ಲಿ (ಅರ ಆಗಮ)
ಶಬ್ದ:- ಹೋಗುವುದು
ಚತುರ್ಥಿ “ಗೆ-ಇಗೆ ಕ್ಕೆ-ಅಕ್ಕೆ” ವಿಭಕ್ತಿಗಳು.
ಸಾಮಾನ್ಯವಾಗಿ ಅಕಾರಂತ, ಉಕಾರಾಂತ, ಪ್ರಕೃತಿಗಳಿಗೆ ಪುಲ್ಲಿಂಗ, ಸ್ತ್ರೀಲಿಂಗ , ನಪುಂಸಕಲಿಂಗಗಳ ಏಕವಚನ, ಬಹುವಚನಗಳೆರಡರಲ್ಲೂ ‘ಇಗೆ’ ಎಂಬ ಚತುರ್ಥೀವಿಭಕ್ತಿಪ್ರತ್ಯಯ ಬರುವುದು

(ಅ) ಗೆ:- ಹರಿಗೆ, ದೊರೆಗೆ, ಲಕ್ಷ್ಮಿಗೆ , ಕೈಗೆ, ಮೈಗೆ, ವಿಧಿಗೆ, ಅತ್ತೆಗೆ, ತಾಯಿಗೆ, ಮನೆಗೆ.
(ಆ) ಎ, ಐ ಕಾರಾಂತ ಪ್ರಕೃತಿಗಳಿಗೆ ಸಾಮಾನ್ಯವಾಗಿ ‘ಗೆ’ ಪ್ರತ್ಯಯ ಬರುವುದು.
(ಇ) ಇಗೆ:- ರಾಮನಿಗೆ, ಭೀಮನಿಗೆ , ಕಾಮನಿಗೆ, ದೇವರಿಗೆ, ಬ್ರಾಹ್ಮಣನಿಗೆ, ರಾಮರಿಗೆ,
ಬಿಮರಿಗೆ , ಕಾಮರಿಗೆ, ಬ್ರಾಹ್ಮಣರಿಗೆ, ದೇವರಿಗೆ, ಕರುವಿಗೆ, ಹಸುವಿಗೆ, ಅಕ್ಕನಿಗೆ, ಕರುಗಳಿಗೆ, ಹಸುಗಳಿಗೆ, ಅಕ್ಕಂದಿರುಗಳಿಗೆ.
ಸಾಮಾನ್ಯವಾಗಿ ಅಕಾರಾಂತ ನಪುಂಸಕಲಿಂಗಕ್ಕೆ ‘ಕ್ಕೆ’ ಎಂಬ ವಿಭಕ್ತಿಪ್ತತ್ಯಯವು ಬರುವುದು
(ಈ) ಕ್ಕೆ:- ನೆಲಕ್ಕೆ, ಹೊಲಕ್ಕೆ, ಕಣಕ್ಕೆ, ತಿಲಕ್ಕೆ, ತೈಲಕ್ಕೆ, ಪುಸ್ತಕಕ್ಕೆ, – ಇತ್ಯಾದಿ.
ಸಾಮಾನ್ಯವಾಗಿ ‘ಅಕ್ಕೆ’ ಪ್ರತ್ಯಯವು ‘ಉ’ ಕಾರಾಂತಗಳಾದ ನಪುಂಸಕಲಿಂಗಗಳು ಪ್ರಕೃತಿಗಳ ಮೇಲೆ ಬರುತ್ತದೆಂದು ತಿಳಿಯಬೇಕು.
(ಉ) ಅಕ್ಕೆ:- ಒಂದು+ಅಕ್ಕೆ=ಒAದಕ್ಕೆ. ಇದರಂತೆ- ಎರಡಕ್ಕೆ, ಹತ್ತಕ್ಕೆ, ಎಷ್ಟಕ್ಕೆ ಅಷ್ಟಕ್ಕೆ
-ಇತ್ಯಾದಿ.

ಪ್ರಶ್ನೋತ್ತರ

ವಿಭಕ್ತಿ ಪ್ತತ್ಯಯ ಎಂದರೇನು?

ಒಂದು ವಾಕ್ಯ | ಸಾಲಿನಲ್ಲಿ ಇರುವ ಹೆಸರುಪದಗಳ (ನಾಮಪದಗಳ) ನಡುವಣ, ಇಲ್ಲವೆ ಹೆಸರುಪದ ಮತ್ತು ಕ್ರಿಯಾಪದಗಳ ನಡುವಣ ನಂಟನ್ನು ತಿಳಿಸುವ ಪದದ ಪ್ರತ್ಯಯಗಳನ್ನು ವಿಭಕ್ತಿ-ಪ್ರತ್ಯಯಗಳು ಎಂದು ಸಂಸ್ಕೃತದಲ್ಲಿ ಕರೆಯುವರು.

ಪ್ರಥಮ ವಿಭಕ್ತಿಪ್ರತ್ಯಯ

ಇತರೆ ವಿಷಯಗಳನ್ನು ಓದಲು ಈ ಕೆಳಗೆ ಕಾಣಿಸುವ ವಿಷಯದಮೇಲೆ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *