chandassu in kannada, ಕನ್ನಡ ಛಂದಸ್ಸು, chandassu kannada grammar, ಛಂದಸ್ಸು – ಕನ್ನಡ ವ್ಯಾಕರಣ, ಲಘು ಗುರು ಉದಾಹರಣೆ, FDA, SDA, KPSC, PDO, KAS, KSP, PC, kannada chandassu vyakarana, kannada chandassu examples, kannada chandassu grammar, ಕನ್ನಡ ಛಂದಸ್ಸು ಕೃತಿ, kannada chandassu galu
Chandassu In Kannada Vyakarana
ಪರಿವಿಡಿ
ಛಂದೋಂಬುಧಿ ಎಂಬ ಕನ್ನಡ ಛಂದಸ್ಸನ್ನು ತಿಳಿಸುವ ಗ್ರಂಥವನ್ನು ಕ್ರಿ.ಶ. ೯೯೦ ರ ಸುಮಾರಿನಲ್ಲಿ ೧ನೆಯ ನಾಗವರ್ಮನೆಂಬುವನು ಬರೆದನು. ಇವನು ಕರ್ನಾಟಕ ಕಾದಂಬರಿಯೆಂಬ ಇನ್ನೊಂದು ಗ್ರಂಥವನ್ನೂ ಬರೆದಿದ್ದಾನೆ.
ಕೆಲವು ಪ್ರಮುಖ ಛಂದೋಗ್ರಂಥಗಳು
chandassu in kannada
ಮಾನಸೋಲ್ಲಾಸ ಅಥವಾ ಅಭಿಲಷೀತಾರ್ಥ ಚಿಂತಾಮಣಿ ಕರ್ತೃ : –
3 ನೇ ಸೋಮೇಶ್ವರ
ಈ ಕೃತಿಯಲ್ಲಿ ಛಂದಸ್ಸು ಕೂಡ ಬಳಕೆಯಾಗಿದೆ . ಛಂದೋವಿಚಿತಿ ಕೃತಿಯ ಕರ್ತೃ : – 2 ನೇ ನಾಗವರ್ಮ ಇದರಲ್ಲಿ ಕೂಡ ಛಂದಸ್ಸು ಬಳಕೆಯಾಗಿದೆ .
ಛಂದೋಂಬುಧಿಕರ್ತೃ
1 ನೇ ನಾಗವರ್ಮ ಕಾಲ ಕ್ರಿ.ಶ0 99
ಇದು ಕನ್ನಡದ ಅತೀ ಪ್ರಾಚೀನ ಛಂದೋಗ್ರಂಥ ಕನ್ನಡ ಛಂದಸ್ಸಿಗೆ ಅಡಿಗಲ್ಲಾದ ಅಥವಾ ನೆಲೆಗಟ್ಟನ್ನು ಒದಗಿಸಿದ ಗ್ರಂಥ . ಇದರಲ್ಲಿ ಒಟ್ಟು 6 ಅಧಿಕಾರ ( ಭಾಗ ಗಳಿವೆ.
ಪಿಂಗಲನ -ಛಂದಃಸೂತ್ರಗಳು ( ಕ್ರಿ.ಪೂ .200 ) :
ಇದು ಸಂಸ್ಕೃತದ ಮೊದಲ ಛಂದೋಗ್ರಂಥವಾಗಿದೆ
ಈಶ್ವರ ಕಏ ( ಕೃತಿ : – ಜಿಹ್ವಾಬಂಧನಂ ) –
ಕಾಲ ಕ್ರಿಶ 1500 .ಇದು ನಾಲ್ಕು ಆಶ್ವಾಸ ( ಭಾಗ ) ಗಳಲ್ಲಿದೆ . ವಾಡಿಯನ್ನು ಕನ್ನಡದಲ್ಲಿ ಮೊದಲಿಗೆ ಇವರು ಪ್ರಸ್ತಾಪಿಸಿದರು .
“ ಛಂದಃಸ್ಥಾರ ” ಕರ್ತೃ – ಗುಣಚಂದ್ರ -ಕ್ರಿ.ಶ .1650 ಐದು ಅಧಿಕಾರಗಳಲ್ಲಿದೆ . ಇವು ಮೂರು ಕನ್ನಡ ಭಾಷೆಯಲ್ಲಿಯೇ ರಚನೆಯಾದ ಛಂದೋಗ್ರಂಥವಾಗಿವೆ
ಕವಿರಾಜ ಮಾರ್ಗ ಕರ್ತೃ : –
ಶ್ರೀವಿಜಯ : -ಕ್ರಿ.ಶ .850 : ಮೊದಲು ಯತಿ ಹಾಗೂ ಪ್ರಾಸ ವಿಷಯಗಳನ್ನು ಪ್ರಸ್ತಾಪ ಇದರಲ್ಲಿ ಮಾಡಲಾಗಿದೆ “ ಛಂದೋನುಶಾಸನಂ ಕರ್ತೃ -ಜಯಕೀರ್ತಿ ಕಾಲ ಕ್ರಿ.ಶ .1050 ಈ ಕೃತಿಯು ಸಂಸ್ಕೃತದ ಛಂದೋಗ್ರಂಥವಾಗಿದೆ
“ ಸಂಗೀತ ರತ್ನಾಕರ ” ಕರ್ತೃ-
ಶಾರ್ಙ್ಗದೇವ ಕಾಲ 13 ನೇ ಶತಮಾನದ ಆದಿ.ಇದರಲ್ಲಿ 7 ಅಧ್ಯಾಯಗಳಿವೆ . ಇದು ಸಂಸ್ಕೃತ ಭಾಷೆಯಲ್ಲಿ ರಚನೆಯಾಗಿದೆ .4 ನೇ ಅಧ್ಯಾಯ ಕನ್ನಡ ಛಂದಸ್ಸನ್ನು ಕುರಿತು ಚರ್ಚಿಸುತ್ತದೆ
ಮಾತ್ರೆ
ಮಾತ್ರೆ ಎಂದರೆ ಒಂದು ಪ್ರಸ್ವ ಅಕ್ಷರವನ್ನು ಉಚ್ಚಾರ ಮಾಡಲು ತೆಗೆದುಕೊಳ್ಳುವ ಕಾಲ ಎಂದು ಅರ್ಥ . ಈ ಮಾತ್ರೆಗಳು ಮೂರು ತೆರನಾಗಿ ಇರುತ್ತವೆ . ಅವುಗಳೆಂದರೆ ಲಘು , ಗುರು , ಪ್ಲುತ .
ಲಘು ಎಂದರೆ ಒಂದು ಪ್ರಸ್ವ ಅಕ್ಷರವನ್ನು ಉಚ್ಚಾರ ಮಾಡುವುದಕ್ಕೆ ತೆಗೆದುಕೊಳ್ಳುವ ಕಾಲ . ಇದನ್ನು ಛಂದಶಾಸ್ತ್ರದಲ್ಲಿ ‘ U ‘ ಎಂಬ ಚಿಹ್ನೆಯಿಂದ ಗುರ್ತಿಸುತ್ತಾರೆ . ಇದಕ್ಕೆ ಅದರದೇ ಆದ ಬೆಲೆಯಿದೆ . ಆದ್ದರಿಂದ ಇದರ ಬೆಲೆ ಒಂದು ಮಾತ್ರೆ
ಗುರು ಎಂದರೆ ಒಂದು ದೀರ್ಘಾಕ್ಷರವನ್ನು ಉಚ್ಛರಿಸಲು ತೆಗೆದುಕೊಳ್ಳುವ ಕಾಲ . ಇದನ್ನು ‘ ಎಂಬ ಚಿಹ್ನೆಯಿಂದ ಗುರ್ತಿಸುತ್ತಾರೆ . ಇದಕ್ಕೆ ಎರಡು ಮಾತ್ರೆಯ ಬೆಲೆ ಇರುತ್ತದೆ .
ಪ್ಲುತ ಎಂದರೆ ಕೆಲವು ಸಂದರ್ಭದಲ್ಲಿ ದೀರ್ಘಾಕ್ಷರವನ್ನು ಸ್ವಲ್ಪ ಎಳೆದು ಉಚ್ಛರಿಸಬೇಕಾಗುತ್ತದೆ . ಇದು ಲಘುವಿನ ಮೂರರಷ್ಟಿರುತ್ತದೆ . ಇದರ ಬೆಲೆ ಮೂರು ಮಾತ್ರೆ ಇದನ್ನು ‘ s ‘ ಚಿಹ್ನೆಯಿಂದ ಗುರ್ತಿಸುತ್ತೇವೆ .
UUU
ಉದಾ : – ಲಘುವಿಗೆ : ಕಮಲ
– –
ಗುರುವಿಗೆ ಮಾಲಾ
U-
ಪ್ಲುತಕ್ಕೆ : ಕುಕೂಕೂ s
ಲಘು ಬರುವ ಸಂದರ್ಭಗಳು
ಒತ್ತಕ್ಷರದ ಹಿಂದಿನ ಪ್ರಸ್ವಾಕ್ಷರಗಳನ್ನು ಬಿಟ್ಟು ಉಳಿದೆಡೆ ಬರುವ ಎಲ್ಲ ಪ್ರಸ್ವ ಅಕ್ಷರಗಳು ಲಘುವಾಗಿರುತ್ತವೆ .
ಶಿಥಿಲದ್ವಿತ್ವದ ಹಿಂದಿನ ಅಕ್ಷರ ಪ್ರಸ್ವಾಕ್ಷರವಾಗಿದ್ದರೆ ಅದು ಲಘುವಾಗಿಯೇ ಇರುತ್ತದೆ. ‘ ಶಿಥಿಲದ್ವಿತ್ವ ‘ ಎಂದರೆ ತೇಲಿಸಿಉಚ್ಛರಿಸುವುದು.
ಉದಾ :
UU – U
ಕುಳಿರ್ಗಾಳಿ ಯಲ್ಲಿ ‘ ರ್ಗಾ ‘ ಎನ್ನುವುದು ಒತ್ತಕ್ಷರವಾಗಿ ದ್ದರೂ ಅದು ಶಿಥಿಲದ್ವಿತ್ವ ಆದ್ದರಿಂದ ಇದರ ಹಿಂದಿನಾಕ್ಷರ ‘ ಳಿ ‘ ಎಂಬುದು ಗುರುವಾಗಬೇಕಾಗಿದ್ದರೂ ಲಘುವಾಗಿರುವುದನ್ನು ಕಾಣಬಹುದು .
ಕನ್ನಡ ಛಂದಸ್ಸು
ಗುರು ಬರುವ ಸಂದರ್ಭ .
ದೀರ್ಘಾಕ್ಷರಗಳೆಲ್ಲವು ಗುರುವಾಗುತ್ತವೆ .
ಉದಾ : –
– –
ಮಾತಾ
ಒತ್ತಕ್ಷರದ ಹಿಂದಿನ ಅಕ್ಷರ ದೀರ್ಘವೇ ಆಗಿರಲಿ ಅಥವಾ ಪ್ರಸ್ವವೇ ಆಗಿರಲಿ ಅದು ಗುರುವಾಗುತ್ತದೆ
ಉದಾ : –
– U U
ಶಾಶ್ವತ
ಸೊನ್ನೆಯಿಂದ ಕೂಡಿದ್ದರೆ ಅದು ಗುರುವಾಗುತ್ತದೆ .
ಉದಾ : –
U – UU – UU
ಮಂಥನ ಅಥವ ನಂದನ
ಪ್ಲುತ ಬರುವ ಸಂದರ್ಭ
ಯಾವ ಅಕ್ಷರದ ಮುಂದೆ ‘ S ‘ ಚಿಹ್ನೆ ಬರುತ್ತದೋ ಅದನ್ನು ಪ್ಲುತ ಎಂದು ಕರೆಯುತ್ತೇವೆ . ಉದ್ದಾರದ ಸಂದರ್ಭದಲ್ಲಿ ಕವಿಗಳು ಈ ಚಿಹ್ನೆಯನ್ನು ಕಾವ್ಯದಲ್ಲಿ ಬಳಸಿರುವುದನ್ನು ಕಾಣಬಹುದು .
_ _ _ _
ಉದಾ : ವೀಣಾs , ರಾಧಾs
ಇತರೆ ವಿಷಯಗಳು
- ವಚನಗಳು
- ಸರ್ವನಾಮ
- ಕನ್ನಡ ನಾಮಪದ
- ಕ್ರಿಯಾಪದಗಳು ಕನ್ನಡ ವ್ಯಾಕರಣ
- ಕರ್ಮಧಾರೆಯ ಸಮಾಸ
- ಅಕ್ಷರ ಗಣ ಕನ್ನಡ ವ್ಯಾಕರಣ
- ರಗಳೆ ಕನ್ನಡ ವ್ಯಾಕರಣ