ಕ್ರಿಯಾಸಮಾಸ ಕನ್ನಡ ವ್ಯಾಕರಣ Kriya Samas Examples in Kannada

kriya samasa examples in kannada

ಕ್ರಿಯಾಸಮಾಸ Kriya Samas Examples in Kannada

kriya samasa examples in kannada, ಕ್ರಿಯಾಸಮಾಸ, kriya samasa kannada, ಕ್ರಿಯಾ ಸಮಾಸ ಎಂದರೇನು? ಉದಾಹರಣೆ ನೀಡಿ, kriya samasa udaharan in kannada, kriya samasa in kannada, kriya samasa 10 examples in kannada

Kriya Samasa Examples in Kannada

ಕ್ರಿಯಾಸಮಾಸವನ್ನು ಉದಾಹರಣೆ ಸಹಿತ ಈ ಕೆಳಗೆ ನೀಡಲಾಗಿದೆ ಇದು ಸಂಪೂರ್ಣವಾಗಿ ಉಚಿತವಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

Spardhavani Telegram

 

ಕ್ರಿಯಾ ಸಮಾಸಕ್ಕೆ ಉದಾಹರಣೆ

ಮೇಲಿನ ವಾಕ್ಯಗಳಲ್ಲಿ ಗೆರೆ ಎಳೆದಿರುವ ಸಮಸ್ತಪದಗಳನ್ನು ಬಿಡಿಸಿದರೆ-

ಮನೆಯನ್ನು + ಕಟ್ಟಿದನು
ಕಣ್ಣನ್ನು + ಕಾಣದೆ
ಊರನ್ನು + ಸೇರಿದನು
ಮೈಯನ್ನು + ಮರೆತು
ಎಂದು ಆಗುವುವು. ಪೂರ್ವದಲ್ಲಿರುವ ಪದಗಳೆಲ್ಲ ದ್ವಿತೀಯಾವಿಭಕ್ತ್ಯಂತಗಳಾದ ನಾಮಪದ ಗಳಾಗಿವೆ.

ಉತ್ತರದಲ್ಲಿ ಮಾತ್ರ ಕಟ್ಟಿದನು, ಸೇರಿದನು ಎಂಬ ಕ್ರಿಯಾಪದಗಳೂ, ಕಾಣದೆ, ಮರೆತು ಇತ್ಯಾದಿ ಅಪೂರ್ಣ ಕ್ರಿಯೆಗಳೂ (ಕೃದಂತಗಳೂ) ಇವೆ. ಅಂದರೆ ಉತ್ತರ ಪದಗಳೆಲ್ಲ ಕ್ರಿಯೆಯಿಂದ ಕೂಡಿವೆ ಎನ್ನಬಹುದು.

ಕ್ರಿಯಾ ಸಮಾಸ ಉದಾಹರಣೆ | Kriya Samasa Examples in Kannada Best No1 Vyakarana
 

kriya samasa kannada

ಒಟ್ಟಿನಲ್ಲಿ ಮೇಲೆ ಹೇಳಿದ ಎಲ್ಲ ಪೂರ್ವಪದಗಳು ದ್ವಿತೀಯಾಂತ ನಾಮಪದಗಳಿಂದಲೂ, ಉತ್ತರಪದವು ಕ್ರಿಯೆಯಿಂದಲೂ ಕೂಡಿವೆ ಎನ್ನಬಹುದು.

ಕೆಲವು ಕಡೆ-ನೀರಿನಿಂದ+ಕೂಡಿ=ನೀರ್ಗೂಡಿ, ಹೀಗೆ ತೃತೀಯಾಂತ ವಾಗಿಯೂ ಪೂರ್ವಪದವಿರಬಹುದು.

ಆದರೆ ದ್ವಿತೀಯಾವಿಭಕ್ತ್ಯಂತವಾಗಿರುವುದೇ ಹೆಚ್ಚು. ಸೂತ್ರವನ್ನು ಈ ಕೆಳಗಿನಂತೆ ಹೇಳಬಹುದು.

ಕ್ರಿಯಾ ಸಮಾಸ ಎಂದರೇನು

ಕ್ರಿಯಾಸಮಾಸ:- “ಪೂರ್ವಪದವು ಪ್ರಾಯಶಃ ದ್ವಿತೀಯಾಂತವಾಗಿದ್ದು ಉತ್ತರದಲ್ಲಿರುವ ಕ್ರಿಯೆಯೊಡನೆ ಸೇರಿ ಆಗುವ ಸಮಾಸವನ್ನು ಕ್ರಿಯಾಸಮಾಸವೆನ್ನುವರು.”
ಪ್ರಾಯಶಃ ಎಂದು ಸೂತ್ರದಲ್ಲಿ ಹೇಳಿರುವುದರಿಂದ ಬೇರೆ ವಿಭಕ್ತಿಗಳು ಬರುತ್ತವೆಂದು ತಿಳಿಯಬೇಕು. ಈ ಸಮಾಸದಲ್ಲಿ ಅರಿಸಮಾಸ ದೋಷವಿಲ್ಲ.

ಕನ್ನಡ – ಕನ್ನಡ ಶಬ್ದಗಳು ಸೇರಿ ಆಗುವ ಸಮಾಸಕ್ಕೆ

ಉದಾಹರಣೆಮೈಯನ್ನು + ತಡವಿ = ಮೈದಡವಿ (ತಕಾರಕ್ಕೆ ದಕಾರಾದೇಶ)
ಕೈಯನ್ನು + ಮುಟ್ಟಿ = ಕೈಮುಟ್ಟಿ
ಕಣ್ಣನ್ನು + ಮುಚ್ಚಿ = ಕಣ್ಣುಮುಚ್ಚಿ
ತಲೆಯನ್ನು + ಕೊಡವಿ = ತಲೆಗೊಡವಿ (ಕಕಾರಕ್ಕೆ ಗಕಾರಾದೇಶ) (ತಲೆಕೊಡವಿ)
ಮೈಯನ್ನು + ಮುಚ್ಚಿ = ಮೈಮುಚ್ಚಿ
ತಲೆಯನ್ನು + ತೆಗೆದನು = ತಲೆದೆಗೆದನು (ತಕಾರಕ್ಕೆ ದಕಾರಾದೇಶ)
ಕಣ್ಣನ್ನು + ತೆರೆದನು = ಕಣ್ಣು ತೆರೆದನು
ಕಣ್ಣಂ + ತೆರೆ = ಕಣ್ದೆರೆ (ಹ.ಗ. ರೂಪ) (ತಕಾರಕ್ಕೆ ದಕಾರಾದೇಶ)
ಕೈಯನ್ನು + ಪಿಡಿದು = ಕೈವಿಡಿದು (ಪಕಾರಕ್ಕೆ ವಕಾರಾದೇಶ)
ಮಣೆಯನ್ನು + ಇತ್ತು = ಮಣೆಯಿತ್ತು
ಬಟ್ಟೆಯನ್ನು + ತೋರು = ಬಟ್ಟೆದೋರು (ತಕಾರಕ್ಕೆ ದಕಾರಾದೇಶ)
ಕೈಯನ್ನು + ಕೊಟ್ಟನು = ಕೈಕೊಟ್ಟನು
ದಾರಿಯನ್ನು + ಕಾಣನು = ದಾರಿಗಾಣನು (ಕಕಾರಕ್ಕೆ ಗಕಾರಾದೇಶ)

kriya samasa in kannada

ಕ್ರಿಯಾ ಸಮಾಸ ಉದಾಹರಣೆ | Kriya Samasa Examples in Kannada Best No1 Vyakarana
ಕ್ರಿಯಾ ಸಮಾಸ ಉದಾಹರಣೆ | Kriya Samasa Examples in Kannada Best No1 Vyakarana

ಪೂರ್ವಪದವು ಬೇರೆ ವಿಭಕ್ತ್ಯಂತ ತರುವುದಕ್ಕೆ-

ನೀರಿನಿಂದ + ಕೂಡಿ = ನೀರ್ಗೂಡಿ (ಕಕಾರಕ್ಕೆ ಗಕಾರ)
ಬೇರಿನಿಂದ + ಬೆರಸಿ = ಬೇರುವೆರಸಿ (ಬಕಾರಕ್ಕೆ ವಕಾರ)
ಕಣ್ಣಿನಿಂದ + ಕೆಡು = ಕೆಂಗೆಡು (ಕಕಾರಕ್ಕೆ ಗಕಾರ)

ಹಳಗನ್ನಡ ಕ್ರಿಯಾಸಮಾಸ ರೂಪಗಳು-

ಮೈಯಂ + ತೊಳೆದು = ಮೈದೊಳೆದು
ಒಳ್ಳುಣಿಸಂ + ಇಕ್ಕಿ = ಒಳ್ಳುಣಿಸಿಕ್ಕಿ
ಮುದ್ದಂ + ಗೈದು = ಮುದ್ದುಗೈದು
ವಿಳಾಸಮಂ + ಮೆರೆದು = ವಿಳಾಸಂಮೆರೆದು
ಬೇರಿನಂ + ಬೆರೆಸಿ = ಬೇರ‍್ವೆರಸಿ
ಕೈಯಂ + ತೊಳೆದು = ಕೈದೊಳೆದು

ಸಂಸ್ಕೃತ ನಾಮಪದದೊಡನೆ ಕನ್ನಡದ ಕ್ರಿಯೆಯು ಸೇರಿ ಆಗುವ ಕ್ರಿಯಾಸಮಾಸದ ಉದಾಹರಣೆಗಳು-

ಕಾರ‍್ಯವನ್ನು + ಮಾಡಿದನು = ಕಾರ‍್ಯಮಾಡಿದನು
ಸತ್ಯವನ್ನು + ನುಡಿದನು = ಸತ್ಯನುಡಿದನು
ಮಾನ್ಯವನ್ನು + ಮಾಡಿದನು = ಮಾನ್ಯಮಾಡಿದನು
ಕಾವ್ಯವನ್ನು + ಬರೆದನು = ಕಾವ್ಯಬರೆದನು

ಇತರೆ ವಿಷಯಗಳನ್ನು ಓದಿರಿ 

Leave a Reply

Your email address will not be published. Required fields are marked *