ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ಸಾರಾಂಶ । Ninna Muttina Sattigeyanittu Salahu Summary

ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ಸಾರಾಂಶ । Ninna Muttina Sattigeyanittu Salahu Summary

Ninna muttina sattigeyanittu salahu summary, ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ಪದ್ಯ, ninna muttina sattigeyanittu salahu, ninna muttina sattigeyanittu salahu notes, ninna muttina sattigeyanittu salahu saramsha, ninna muttina sattigeyanittu salahu kannada saramsha, ninna muttina sattigeyanittu salahu kannada notes,ninna muttina sattigeyanittu salahu 9th kannada notes, ninna muttina sattigeyanittu salahu kannada

Ninna Muttina Sattigeyanittu Salahu Summary

ನಮ್ಮ ಟೆಲಿಗ್ರಾಮ್ ಗ್ರೂಪ್ ಗೆ ಈಗಲೇ ಜಾಯಿನ್ ಆಗಿ

Spardhavani Telegram

ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ಸಾರಾಂಶ

ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ಸಾರಾಂಶ । Ninna Muttina Sattigeyanittu Salahu Summary
ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ಸಾರಾಂಶ । Ninna Muttina Sattigeyanittu Salahu Summary

ಒಮ್ಮೆ ದೇವ ಸಭೆ ನಡೆದಿದ್ದಾಗ ಇಂದ್ರನು ” ಭೂಲೋಕದಲ್ಲಿ ಸತ್ಯವಂತ ಅರಸ ಯಾರು ? ” ಎಂದು ವಸಿಷ್ಠರಲ್ಲಿ ವಿಚಾರಿಸಿದನು . ಆಗ ಅವನು “ ಅಯೋಧ್ಯೆಯನ್ನಾಳುತ್ತಿರುವ ಹರಿಶ್ಚಂದ್ರನ ಹೆಸರನ್ನು ಹೇಳಿ ಆತನ ಸತ್ಯನಿಷ್ಠೆಯನ್ನು ವಿವರಿಸಿದನು . ವಸಿಷ್ಠ ಹೇಳಿದ್ದನ್ನೆಲ್ಲ ವಿರೋಧಿಸುವ ಸ್ವಭಾವದವನಾದ ವಿಶ್ವಾಮಿತ್ರ ಅದನ್ನು ಅಲ್ಲಗಳೆದನು .

ಸಾಲದ್ದಕ್ಕೆ ಹರಿಶ್ಚಂದನ ಬಾಯಿಂದ ಸುಳ್ಳನ್ನು ಹೇಳಿಸಿಯೇ ಸಿದ್ಧ ಎಂದು ಪಂಥವೊಡ್ಡಿದನು . ಹರಿಶ್ಚಂದ್ರನು ಲೋಕ ಕಲ್ಯಾಣಾರ್ಥವಾಗಿ ತನ್ನ ಅರಮನೆಯಲ್ಲಿ ನಡೆಸುತ್ತಿದ್ದ ಬಹು ಸುವರ್ಣಯಾಗಶಾಲೆಗೆ ವೇಷಮರೆಸಿಕೊಂಡು ಬಂದು ಬಹುದೊಡ್ಡ ದಾನವನ್ನು ಕೇಳಿ ಕೊಡಲಾಗದ ಸ್ಥಿತಿಗೆ ಆತನನ್ನು ತಂದೊಡ್ಡಿ ಸತ್ಯವ್ರತಕ್ಕೆ ಭಂಗ ತರಬೇಕೆಂದು ವಿಶ್ವಾಮಿತ್ರನು ಯೋಚಿಸಿದನು .

ಆದರೆ ಹರಿಶ್ಚಂದ್ರ ಆತ ಕೇಳಿದಷ್ಟೆಲ್ಲವನ್ನೂ ಭಯಭಕ್ತಿಯಿಂದ ನೀಡಿ ಸೈ ಎನಿಸಿಕೊಂಡನು . ಹೀಗೆ ಮೊದಲ ಪ್ರಯತ್ನದಲ್ಲೇ ಎಡವಿದ ವಿಶ್ವಾಮಿತ್ರ ಹೇಗಾದರೂ ಮಾಡಿ ಆತನನ್ನು ಮಣಿಸಲೇ ಬೇಕೆಂದುಕೊಂಡು ಇನ್ನೊಂದು ತಂತ್ರವನ್ನು ಹೂಡಿದನು . ಬೇಟೆಯ ನೆವದಲ್ಲಿ ಹರಿಶ್ಚಂದ್ರನನ್ನು ಕಾಡಿನಲ್ಲಿ ಅಲೆದಾಡಿಸಿ ಕಾಡಬೇಕೆಂದು ಯೋಚಿಸಿದನು .

ವಿವಿಧ ಮೃಗಪಕ್ಷಿಗಳನ್ನು ಸೃಷ್ಟಿಸಿ ನಾಡಿನ ಬೆಳೆಗಳನ್ನು ಕೆಡಿಸುವಂತೆ ಮಾಡಿದರೆ ರೈತಾಪಿ ಜನರು ರಾಜನಿಗೆ ಮೊರೆಯಿಡುತ್ತಾರೆ . ಆಗ ಹರಿಶ್ಚಂದ್ರ ಬೇಟೆಗೆಂದು ಕಾಡಿಗೆ ಬಂದೇ ಬರುತ್ತಾನೆ . ಎಂದು ನಿಶ್ಚಯಿಸಿದ ವಿಶ್ವಾಮಿತ್ರ ಕೂಡಲೇ ಕಾರ್ಯಪ್ರವೃತ್ತನಾದನು .

ಆತನು ತಪಃಪ್ರಭಾವದಿಂದ ಕಣ್ಮುಚ್ಚಿ ತೆರೆಯುವುದರೊಳಗೆ ನಾನಾವಿಧವಾದ ಪ್ರಾಣಿಪಕ್ಷಿಗಳು ಹುಟ್ಟಿಕೊಂಡು ನಾಡಿನ ಕೃಷಿಭೂಮಿಗೆ ಲಗ್ಗೆಯಿಟ್ಟವು . ಇದರಿಂದಾಗಿ ಎಲ್ಲೆಲ್ಲೂ ಹಾಹಾಕಾರವೆದ್ದಿತು . ರೈತರೆಲ್ಲರು ಅರಮನೆಗೆ ಬಂದು ತಮ್ಮ ದೊರೆಯ ಮುಂದೆ ಗೋಳಿಟ್ಟರು .

ನಾಡಿನ ಅನ್ನದಾತರ ಮೊರೆಯನ್ನು ತಾಳ್ಮೆಯಿಂದ ಆಲಿಸಿದ ಹರಿಶ್ಚಂದ್ರನು ತನ್ನ ಹೆಂಡತಿ , ಮಗ ಹಾಗೂ ಪರಿವಾರದೊಂದಿಗೆ ಬೇಟೆಗೆ ಹೊರಡಲು ನಿರ್ಧರಿಸಿದನು . ಕಾಡುದಾರಿಯಲ್ಲಿ ಸಿಗುವ ವಸಿಷ್ಠಾಶ್ರಮಕ್ಕೆ ಭೇಟಿ ನೀಡಿ ಗುರುಗಳ ಆಶೀರ್ವಾದ ಪಡೆದನು , ಅವರಿಂದ “ ಅಯ್ಯಾ ನಿನ್ನ ಕುಲಾಚಾರಕ್ಕೆ ಧಕ್ಕೆಯಾಗದಂತೆ ನಡೆದುಕೊ .

ಸತ್ಯನಿಷ್ಠೆಯನ್ನು ಉಳಿಸಿಕೊ , ಮುಂದೆ ದಾರಿಯಲ್ಲಿ ಸಿಗುವ ವಿಶ್ವಾಮಿತ್ರನ ಆಶ್ರಮ ಪ್ರದೇಶಕ್ಕೆ ತಪ್ಪಿಯೂ ಕಾಲಿರಿಸಬೇಡ ” ಎಂಬ ಎಚ್ಚರಿಕೆಯ ಸೂಚನೆಯನ್ನು ಪಡೆದು ಪರಿವಾರದೊಂದಿಗೆ ಬೇಟೆಗೆ ಹೊರಟನು , ಬೇಟೆಯನ್ನು ಆಡುತ್ತಾ ಅವನು ಅವನಿಗೆ ಅರಿವಿಲ್ಲದಂತೆ ವಿಶ್ವಾಮಿತ್ರನ ತಪೋವನವನ್ನು ಪ್ರವೇಶಿಸಿದನು .

ಆಗ ವಿಶ್ವಾಮಿತ್ರನು ಹರಿಶ್ಚಂದ್ರನನ್ನು ಪರೀಕ್ಷಿಸಲು ತನ್ನ ಕೋಪದಿಂದ ಗಾನ ರಾಣಿಯರನ್ನು ಸೃಷ್ಟಿಸಿ , “ ಸರ್ವಬುದ್ಧಿಗಳನ್ನು ಬಳಸಿ ಅವನನ್ನು ಮರುಳು ಮಾಡುತ್ತಿರಿ ” ಎಂದು ಹೇಳಿ , ಹರಿಶ್ಚಂದ್ರನ ಬಳಿಗೆ ಕಳುಹಿಸಿದನು . ಮುಂದೇನಾಯಿತೆಂಬುದನ್ನು ಇಲ್ಲಿ ಆಯ್ಕೆ ಮಾಡಿದ ಪದ್ಯಗಳು ತಿಳಿಸುತ್ತವೆ.

ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ಸಾರಾಂಶ । Ninna Muttina Sattigeyanittu Salahu Summary
ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ಸಾರಾಂಶ । Ninna Muttina Sattigeyanittu Salahu Summary

ಸಂಬಂದಿಸಿದ ಇತರೆ ವಿಷಯಗಳು

ವಾಲಿಬಾಲ್ ಪಾಠದ ಪ್ರಶ್ನೆ ಉತ್ತರ

9ನೇ ತರಗತಿ ಕನ್ನಡ ನೋಟ್ಸ್

ರಾಮರಾಜ್ಯ ಪಾಠದ ಪ್ರಶ್ನೆ ಉತ್ತರಗಳು

ರಾಮರಾಜ್ಯ ಪಾಠದ ಸಾರಾಂಶ

ಪಾರಿವಾಳ ಪದ್ಯದ ಪ್ರಶ್ನೋತ್ತರಗಳು

9ನೇ ತರಗತಿ ಪಾರಿವಾಳ ಪದ್ಯದ ಸಾರಾಂಶ

ಸಿರಿಯನಿನ್ನೇನ ಬಣ್ಣಿಪೆನು ಪ್ರಶ್ನೋತ್ತರಗಳು

ಬಲಿಯನಿತ್ತೊಡೆ ಮುನಿವೆಂ ಸಾರಾಂಶ

ಹೇಮಂತ ಕನ್ನಡ ನೋಟ್ಸ್

ತತ್ವಪದಗಳು ಪ್ರಶ್ನೋತ್ತರಗಳು

1 thoughts on “ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ಸಾರಾಂಶ । Ninna Muttina Sattigeyanittu Salahu Summary

Leave a Reply

Your email address will not be published. Required fields are marked *