ಬಲಿಯನಿತ್ತೊಡೆ ಮುನಿವೆಂ ಸಾರಾಂಶ | Baliyanittode Munivem Summary in Kannada

ಬಲಿಯನಿತ್ತೊಡೆ ಮುನಿವೆಂ ಸಾರಾಂಶ | Baliyanittode Munivem Summary in Kannada

ಬಲಿಯನಿತ್ತೊಡೆ ಮುನಿವೆಂ ಸಾರಾಂಶ, baliyanittode munivem summary in kannada, ಬಲಿಯನಿತ್ತೊಡೆ ಮುನಿವೆಂ ಪದ್ಯದ ಸಾರಾಂಶ, baliyanittode munivem kannada notes, baliyanittode munivem saramsha, baliyanittode munivem summary in kannada

Baliyanittode Munivem Summary in Kannada ಬಲಿಯನಿತ್ತೊಡೆ ಮುನಿವೆಂ ಸಾರಾಂಶ

ನಮ್ಮ ಟೆಲಿಗ್ರಾಮ್ ಗ್ರೂಪ್ ಗೆ ಈಗಲೇ ಜಾಯಿನ್ ಆಗಿ

Spardhavani Telegram

ರಾಜಪುರವೆಂಬ ಪಟ್ಟಣ . ಅದರ ದೊರೆ ಮಾರಿದತ್ತ , ಆ ಪುರದಲ್ಲಿ ಚಂಡಮಾರಿಯ ದೇವಾಲಯವಿತ್ತು . ಆಶ್ವಯುಜ ಹಾಗೂ ಚೈತ್ರಋತುಗಳಲ್ಲಿ ದೊರೆ ಮತ್ತು ಪ್ರಜೆಗಳು ಜಾತ್ರೆ ನಡೆಸಿ ದೇವಿಯನ್ನು ಆರಾಧಿಸುತ್ತಿದ್ದರು . ಒಮ್ಮೆ ಚೈತ್ರಮಾಸದಲ್ಲಿ ಜಾತ್ರೆ ನಡೆಯಬೇಕಿತ್ತು . ಮಾರಿಗೆ ಬಲಿ ಕೊಡುವುದಕ್ಕಾಗಿ ಮಾನವರನ್ನು ಹಿಡಿದುತರುವಂತೆ ಮಾರಿದತ್ತ , ತಳಾರ ಚಂಡಕರ್ಮನಿಗೆ ಆಜ್ಞಾಪಿಸಿದ ಅವನು ಸುದತ್ತಾಚಾರ್ಯ ಮುನಿಗಳೊಡನೆ ಆ ಮರಕ್ಕೆ ಬಂದು ಭಿಕ್ಷೆಗೆ ಹೊರಟಿದ್ದ ಎಳೆವಯಸ್ಸಿನ ಸಹೋದರ ಸಹೋದರಿಯರಾದ ಅಭಯರುಚಿ ಮತ್ತು ಅಭಯಮತಿಯರನ್ನು ಹಿಡಿದುತಂದ , ಮಾರಿಯ ಮನೆಯ ಭಯಂಕರ ದೃಶ್ಯದಿಂದ ಆ ಮಕ್ಕಳು ಸ್ವಲ್ಪವೂ ವಿಚಲಿತರಾಗಲಿಲ್ಲ . ಅವರ ಧೈರ್ಯ , ಕೈರ್ಯಗಳನ್ನು ಕಂಡು ಬೆಕ್ಕಸಬೆರಗಾದ ಮಾರಿದತ್ತ ಅವರನ್ನು ಬಲಿಕೊಡದೆ ಅವರ ವೃತ್ತಾಂತವನ್ನು ತಿಳಿಯಬಯಸಿದ , ಅಭಯರುಚಿ ತಮ್ಮ ಪೂರ್ವ ಕಥೆಯನ್ನು ನಿರೂಪಿಸಿದ .

ಬಲಿಯನಿತ್ತೊಡೆ ಮುನಿವೆಂ ಸಾರಾಂಶ | Baliyanittode Munivem Summary in Kannada

ಉಜ್ಜಯನಿಯ ರಾಜಕುಮಾರ ಯಶೋಧರ , ತಂದೆ ಯಶೌಘ , ತಾಯಿ ಚಂದ್ರಮತಿ , ಪತ್ನಿ ಅಮೃತಮತಿ , ಯಶೋಧರ ಅಮೃತಮತಿಯರು ಅನ್ನೋನ್ಯವಾಗಿದ್ದು ಸುಖದಿಂದಿದ್ದರು, ಅತ್ಯಂತ ಚೆಲುವ. ಸುಂದರ , ಸಕಲ ವಿದ್ಯಾಪಾರಂಗತ ಹಾಗೂ ಸುಸಂಸ್ಕೃತನಾದ ಯಶೋಧರನ ಪತ್ನಿ ಅಮೃತಮತಿಯು ಕುರೂಪಿಯಾದ ಅಷ್ಟಾವಂಕ ಮಾವಟಿಗನ ಗಾನಮಾಧುರ‍್ಯಕ್ಕೆ ಮನಸೋತು ಪತಿಗೆ ದ್ರೋಹ ಬಗೆಯುವಳು . ಪತ್ನಿಯ ಹೇಯಕೃತ್ಯವನ್ನು ಕಣ್ಣಾರೆಕಂಡ ಯಶೋಧರ ಅತ್ಯಂತ ಖಿನ್ನನಾಗುವನು , ತಾಯಿ ಚಂದ್ರಮತಿದೇವಿ ಪರಿಪರಿಯಾಗಿ ಬೇಡಿಕೊಂಡಾಗ ಕಾರಣವನ್ನು ಹೇಳಲಾಗದೆ ಕಳೆದ ರಾತ್ರಿ ದುಸ್ವಪ್ನವೊಂದನ್ನು ಕಂಡದ್ದಾಗಿ ಹೇಳುವನು . ಸ್ವಪ್ನದೋಷ ನಿವಾರಣೆಗಾಗಿ ಪ್ರಾಣಿಬಲಿಯನ್ನು ಕೊಡಲು ಒಪ್ಪದೇ ತಾಯಿಯ ಸಮಾಧಾನಕ್ಕಾಗಿ ಹಿಟ್ಟಿನಿಂದ ಮಾಡಿದ ಕೋಳಿಯೊಂದನ್ನು ಬಲಿಕೊಡಲು ಒಪ್ಪುವನು . ಹಿಟ್ಟಿನ ಕೋಳಿಯನ್ನು ಬಲಿಕೊಟ್ಟಾಗ ಆದರೊಳಗೆ ಅಡಗಿದ್ದ ಬೆಂತರವೊಂದು ಕೂಗಿ ಅಸುನೀಗಿತು . ಇದರಿಂದ ಮತ್ತೂ ಯಶೋಧರ , ಮಗನಾದ ಯಶೋಮತಿಗೆ ಪಟ್ಟಕಟ್ಟಿ ಕಾಡಿಗೆ ತಪಕ್ಕೆ ಹೊರಡಲು ಅನುವಾಗುವನು . ವಿಷಯ ತಿಳಿದ ಅಮೃತಮತಿಯು , ಗಂಡ ಹಾಗೂ ಅತ್ತೆಯನ್ನು ವಿಷವಿಕ್ಕಿ ಕೊಲ್ಲುವಳು .

ಸತ್ತ ಯಶೋಧರ – ಚಂದ್ರಮತಿಯರು ಮುಂದಿನ ಜನ್ಮಗಳಲ್ಲಿ ನವಿಲು – ನಾಯಿ , ಹಾವು ಮುಳ್ಳುಹಂದಿ , ಮೀನು – ಮೊಸಳೆ , ಆಡು – ಹೋತ ಮತ್ತು ಕೋಣ – ಹೋತಗಳಾಗಿ ಕಡೆಗೆ ಕೋಳಿ ಪಿಳ್ಳೆಗಳಾಗಿ ಜನಿಸುವರು . ಒಮ್ಮೆ ಅಕಂಪನಮುನಿಯ ಉಪದೇಶವನ್ನು ಕೇಳಿದ ಕೋಳಿಗಳು ಜ್ಞಾತಿಸ್ಮರಗಳಾಗಿ ವ್ರತವನ್ನು ಆಚರಿಸಿ , ಹರ್ಷದಿಂದ ಕಲೆತಾಗ , ವನವಿಹಾರಕ್ಕೆ ಹೋಗಿದ್ದ ಯಶೋಮತಿಯ ಬಾಣಕ್ಕೆ ತುತ್ತಾಗುವುವು ಬಳಿಕ ಯಶೋಮತಿಯ ಪತ್ನಿ ಕುಸುಮಾವಳಿಯ ಮಕ್ಕಳಾಗಿ ಹುಟ್ಟುವುವು . ಆ ಅವಳಿ ಮಕ್ಕಳೇ ಅಭಯರುಚಿ ಮತ್ತು ಅಭಯಮತಿ , ಅವರು ಮುಂದೆ ಸುದತ್ತಾಚಾರರಲ್ಲಿ ಶಿಷ್ಯವೃತ್ತಿಯನ್ನು ಸ್ವೀಕರಿಸಿದರು .

ಬಲಿಯನಿತ್ತೊಡೆ ಮುನಿವೆಂ ಸಾರಾಂಶ | Baliyanittode Munivem Summary in Kannada
ಬಲಿಯನಿತ್ತೊಡೆ ಮುನಿವೆಂ ಪದ್ಯದ ಸಾರಾಂಶ

ಸಂಬಂದಿಸಿದ ಇತರೆ ವಿಷಯಗಳು

ವಾಲಿಬಾಲ್ ಪಾಠದ ಪ್ರಶ್ನೆ ಉತ್ತರ

9ನೇ ತರಗತಿ ಕನ್ನಡ ನೋಟ್ಸ್

ರಾಮರಾಜ್ಯ ಪಾಠದ ಪ್ರಶ್ನೆ ಉತ್ತರಗಳು

ರಾಮರಾಜ್ಯ ಪಾಠದ ಸಾರಾಂಶ

ಪಾರಿವಾಳ ಪದ್ಯದ ಪ್ರಶ್ನೋತ್ತರಗಳು

9ನೇ ತರಗತಿ ಪಾರಿವಾಳ ಪದ್ಯದ ಸಾರಾಂಶ

ಸಿರಿಯನಿನ್ನೇನ ಬಣ್ಣಿಪೆನು ಪ್ರಶ್ನೋತ್ತರಗಳು

1 thoughts on “ಬಲಿಯನಿತ್ತೊಡೆ ಮುನಿವೆಂ ಸಾರಾಂಶ | Baliyanittode Munivem Summary in Kannada

Leave a Reply

Your email address will not be published. Required fields are marked *