ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು | Ninna Muttina Sattigeyanittu Salahu Notes

ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು | Ninna Muttina Sattigeyanittu Salahu Notes

ninna muttina sattigeyanittu salahu notes , ninna muttina sattigeyanittu salahu saramsha, ninna muttina sattigeyanittu salahu, ninna muttina sattigeyanittu salahu kannada saramsha, ninna muttina sattigeyanittu salahu kannada notes, ninna muttina sattigeyanittu salahu 9th kannada notes, ninna muttina sattigeyanittu salahu kannada, ninna muttina sattigeyanittu salahu question answer kannada, ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು, ninna muttina sattigeyanittu salahu pdf

Ninna Muttina Sattigeyanittu Salahu Notes

ನಮ್ಮ ಟೆಲಿಗ್ರಾಮ್ ಗ್ರೂಪ್ ಗೆ ಈಗಲೇ ಜಾಯಿನ್ ಆಗಿ

Spardhavani Telegram

ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ . Ninna Muttina Sattigeyanittu Salahu Notes

ಗಾನರಾಣಿಯರು ಹರಿಶ್ಚಂದ್ರನನನ್ನು ಏನನ್ನು ಕೊಡು ಎಂದು ಕೇಳಿದರು ?
ಗಾನರಾಣಿಯರು ಹರಿಶಂದ್ರನನ್ನು ಮುತ್ತಿನ ಸತ್ತಿಗೆಯನ್ನು ಕೊಡು ಎಂದು ಹೇಳಿದರು .

ಸತ್ತಿಗೆಯು ಯಾವಾಗ ದೈವ ಸ್ವರೂಪ ಎಂದು ಹರಿಶ್ಚಂದ್ರನು ಹೇಳುತ್ತಾನೆ ?
ರಾಜರಿಗೆ ಪಟ್ಟ ಕಟ್ಟುವಾಗ ಸತ್ತಿಗೆಯು ದೈವ ಸ್ವರೂಪವಾಗುತ್ತದೆ ಎಂದು ಹರಿಶಂದ್ರನು ಹೇಳುತ್ತಾನೆ .

ಗಾನರಾಣಿಯರು ಅವನೀಶನನ್ನು ನೋಡಲು ಬಂದದ್ದನ್ನು ಕವಿಯು ಯಾವುದಕ್ಕೆ ಹೋಲಿಸಿದ್ದಾನೆ ?
ಗಾನರಾಣಿಯರು ಅವನೀಶನನ್ನು ನೋಡಲು ಬಂದದ್ದನ್ನು ಕವಿಯು ಕಾಳರಾತ್ರಿಯ ಕನ್ನೆಯರು ಹಗಲನ್ನು ನೋಡುವುದಕ್ಕೆಂದು ಬಂದಂತೆ ಎಂದು ಹೋಲಿಸಿದ್ದಾರೆ .

ಗಾನರಾಣಿಯರಿಗೆ ಹರಿಶ್ಚಂದ್ರನು ಯಾವ ಬಹುಮಾನವನ್ನು ಕೊಟ್ಟನು ?
ಗಾನ ರಾಣಿಯರಿಗೆ ಹರಿಶ್ಚಂದ್ರನು ಮುತ್ತಿನಹಾರ ( ಸರ್ವಾಭರಣ ) ವನ್ನು ಬಹುಮಾನವಾಗಿ ಕೊಟ್ಟನು .

ಕೊಟ್ಟಿರುವ ಪ್ರಶ್ನೆಗಳಿಗೆ 3-4 ವಾಕ್ಯಗಳಲ್ಲಿ ಉತ್ತರಿಸಿ . Ninna Muttina Sattigeyanittu Salahu Notes

ಹರಿಶ್ಚಂದ್ರನು ಮುತ್ತಿನ ಸತ್ತಿಗೆಯನ್ನು ಏಕೆ ಕೊಡಲು ಸಾಧ್ಯವಿಲ್ಲ ಎಂದು ಹೇಳಿದನು ?:

ಹರಿಶ್ಚಂದ್ರನು ಗಾನರಾಣಿಯರಿಗೆ ಮುತ್ತಿನ ಮಣಿಹಾರವನ್ನು ಉಡುಗೊರೆಯಾಗಿ ನೀಡಲು ಹೋದನು . ಅದನ್ನು ಒಪ್ಪದ ಅಂಗನೆಯರು ಅವನ ಬಳಿಯಿರುವ ಮುತ್ತಿನ ಸತ್ತಿಗೆಯನ್ನು ನೀಡಬೇಕೆಂದು ಕೇಳಿದರು .

ಆಗ ಹರಿಶಂದ್ರನು “ ಸೂರ್ಯವಂಶದ ಪರಂಪರೆಯಲ್ಲಿ ಹುಟ್ಟಿದ ರಾಜರಿಗೆ ಪಟ್ಟವನ್ನು ಕಟ್ಟುವ ಸಮಯದಲ್ಲಿ ಸತ್ತಿಗೆಯು ಇಲ್ಲದಿದ್ದರೆ ದೊರೆತನವು ಶೋಭಿಸುವುದಿಲ್ಲ .

ಭೂಮಿಯಲ್ಲಿ , ಯುದ್ಧರಂಗದಲ್ಲಿ ಸತ್ತಿಗೆಯನ್ನು ಕಂಡ ಶತ್ರುಗಳು ನಿಲ್ಲುವುದಿಲ್ಲ ಸತ್ತಿಗೆಯ ಕೆಳಗಿನ ನೆರಳಲ್ಲಿ ಇದ್ದವರಿಗೆ ವಿಪತ್ತುಗಳು , ಎಡರುತೊಡರುಗಳು ಇರುವುದಿಲ್ಲ . ಬಡತನ , ರೋಗ ಅಪಕೀರ್ತಿ , ಸೋಲಿನ ಭಯವು ಇರುವುದಿಲ್ಲ ” , ಆದ್ದರಿಂದ ಈ ಮುತ್ತಿನ ಸತ್ತಿಗೆಯನ್ನು ಕೊಡಲು ಸಾಧ್ಯವಿಲ್ಲ ಎಂದು ಹರಿಶಂದ್ರನು ಹೇಳಿದನು .

ವಿಶ್ವಾಮಿತ್ರನ ತಪೋಬಲದಿಂದ ಜನಿಸಿದ ಕನೈಯರ ರೂಪಲಾವಣ್ಯ ಹೇಗಿತ್ತು ? ವಿವರಿಸಿ .

ಕಾಳರಾತ್ರಿಯ ಕನೈಯರು ಹಗಲನ್ನು ನೋಡುವುದಕ್ಕೆಂದು ಬಂದರೋ ಸುರಾಸುರರು ಸಮುದ್ರ ಮಥಿಸುವಾಗ ಹೊರಹೊಮ್ಮಿದ ಹೊಸ ವಿಷದ ಹೊಗೆ ಆವರಿಸಿ ಜಲದೇವಿಯರೆಲ್ಲ ಕಂದು ಬಣ್ಣಕ್ಕೆ ತಿರುಗಿ

ಮನನೊಂದು ಮಾಣಿಸರ್ ಆದಂತೆ ಕಮಲಜ ನೀಲವರ್ಣಕ್ಕೆ ತಿರುಗಿ ಮತ್ಥಳಿಯಾದನೋ ಎಂಬಂತೆ ಜೀವಂತ ಪುತ್ಥಳೀಯರಂತೆ ವಿಶ್ವಾಮಿತ್ರನ ತಪೋಬಲದಿಂದ ಜನಿಸಿದ ಕನ್ನೆಯರು ಇದ್ದರು ಎಂದು ಅವರ ರೂಪಲಾವಣ್ಯ ಹೀಗಿತ್ತು ಎಂದು ವರ್ಣಿಸಿದ್ದಾರೆ .

ಮುತ್ತಿನ ಸತ್ತಿಗೆಯ ವಿಶೇಷತೆ ಕುರಿತು ಹರಿಶ್ಚಂದ್ರನು ಏನು ಹೇಳುತ್ತಾನೆ ?

ಗಾನರಾಣಿಯರು ಸುಡುವ ಬಿಸಿಲನ್ನು ಸಹಿಸಲು ಸಾಧ್ಯವಿಲ್ಲ ನಿನ್ನ ಮುತ್ತಿನಸತ್ತಿಗೆಯನ್ನು ಕೊಡು ಎಂದು ಹರಿಶ್ಚಂದ್ರ ರಾಜನ್ನು ಕೇಳುತ್ತಾರೆ . ಆಗ ಹರಿಶ್ಚಂದ್ರನು ಗಾನರಾಣಿಯರಿಗೆ “ ಈ ಸತ್ತಿಗೆಯನ್ನು ಸಾಮಾನ್ಯ ಜನರಿಗೆ ಕೊಡಬಾರದು .

ವಂಶಪರಂಪರೆಯಿಂದ ಬಂದಿದ್ದರಿಂದ ತಂದೆಯು , ಪಟ್ಟವನ್ನು ಕಟ್ಟುವ ಸಮಯದಲ್ಲಿ ಇದನ್ನು ಪೂಜಿಸಿಕೊಳ್ಳುವುದಿರಿಂದ ಇದು ದೇವರು . ಎಲ್ಲರಿಗೂ ನೆರಳನ್ನು ನೀಡುವ ತಾಯಿ . ಯುದ್ಧದಲ್ಲಿ ಶತ್ರುಗಳನ್ನು ನಡುಗಿಸುವ ಇದು ಚದುರಂಗಬಲಕ್ಕೆ ಸಮಾನ ” ಎಂದು ಹರಿಶಂದ್ರನು ಮುತ್ತಿನ ಸತ್ತಿಗೆಯ ವಿಶೇಷತೆಯನ್ನು ಕುರಿತು ಹೇಳಿದನು .

ಗಾನರಾಣಿಯರು ಏನೆಂದು ಹರಿಶ್ಚಂದ್ರನನ್ನು ಕೀರ್ತಿಸಿ ಹಾಡಿದರು ? ವಿವರಿಸಿ .

ಉತ್ತರ : ವಿಶ್ವಾಮಿತ್ರನು ನಿರ್ಮಿಸಿದ ಗಾನರಾಣಿಯರು ಧೀರ , ವೀರ ರಾಯರರಾಯ ರಾಯಜಗಜಟ್ಟಿ , ಭಾಪು , ಅದಟರಾಯ , ಮಝೇರೇ ರಾಯ , ರಾಯಭುಜಬಲಭೀಮ ,

ರಾಯಕೋಲಾಹಲ , ರಾಯಮರ್ಧನ , ರಾಯ ಕಂಟಕ ಚಿರಂಜೀವಿಯಾಗು ಎಂದು ಹರಿಶಂದರಾಜನ ಕೀರ್ತಿಯನ್ನು ಕೊಂಡಾಡುತ್ತಾ ದಂಡಿಗೆ ಹಿಡಿದು ಹಾಡಲು ಪ್ರಾರಂಭಿಸಿದರು .

Ninna Muttina Sattigeyanittu Salahu Notes

ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು | Ninna Muttina Sattigeyanittu Salahu Notes
ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು | Ninna Muttina Sattigeyanittu Salahu Notes

ಕೊಟ್ಟಿರುವ ಪ್ರಶ್ನೆಗಳಿಗೆ ಸುಮಾರು 8-10 ವಾಕ್ಯಗಳಲ್ಲಿ ಉತ್ತರಿಸಿ Ninna Muttina Sattigeyanittu Salahu Notes

ಹರಿಶ್ಚಂದ್ರ ಮತ್ತು ಗಾನರಾಣಿಯರ ನಡುವೆ ನಡೆದ ಸಂವಾದವನ್ನು ಸಂಗ್ರಹಿಸಿ ಬರೆಯಿರಿ .

ಹರಿಶ್ಚಂದ್ರನ ಮನಸ್ಸಿನಲ್ಲಿ ಸಂತೋಷ , ಸಂತಸವನ್ನು ಮೂಡಿಸಿದ ಗಾನರಾಣಿಯರಿಗೆ ಸರ್ವಾಭರಣವನ್ನು ಬಹುಮಾನವಾಗಿ ಕೊಡುತ್ತಾನೆ .

ಆಗ ಗಾನರಾಣಿಯರು “ ಬಡತನ ಬಂದ ಸಮಯದಲ್ಲಿ ಆನೆ ದೊರಕಿದರೆ ಏನು ಉಪಯೋಗ , ಬಾಯಾರಿಕೆಯ ಸಮಯದಲ್ಲಿ ನೀರು ಬೇಕು ತುಪ್ಪ ಸಿಕ್ಕರೆ ಪ್ರಯೋಜನವೇನು ? ಸಾಯುವ ಸಮಯದಲ್ಲಿ ರಾಜ ಪದವಿ ಸಿಕ್ಕರೆ ಉಪಯೋಗವಿಲ್ಲ .

ಅದಕ್ಕಾಗಿ ಸಮುದ್ರದಲ್ಲಿ ಮುಳುಗುವವನಿಗೆ ತೆಪ್ಪ ಕೊಡಬೇಕು . ಬಡವನಿಗೆ ಚಿನ್ನವನ್ನು ಕೊಟ್ಟರೆ , ರೋಗಿಗೆ ಅಮೃತವನ್ನು ಕೊಟ್ಟರೆ ಸಂತೋಷ ಪಡುತ್ತಾರೆ . ನಮಗೆ ನಿನ್ನ ಮುತ್ತಿನ ಸತ್ತಿಗೆಯನ್ನು ಕೊಟ್ಟರೆ ಸಂತೋಷವಾಗುತ್ತದೆ .

ಎಂದಾಗ ಹರಿಶಂದನು “ ಸೂರ್ಯವಂಶದ ಪರಂಪರೆಯಲ್ಲಿ ಹುಟ್ಟಿದ ರಾಜರಿಗೆ ಪಟ್ಟವನ್ನು ಕಟ್ಟುವ ಸಮಯದಲ್ಲಿ ಸತ್ತಿಗೆಯು ಇಲ್ಲದಿದ್ದರೆ ದೊರೆತನವು ಶೋಭಿಸುವುದಿಲ್ಲ . ಭೂಮಿಯಲ್ಲಿ , ಯುದ್ಧರಂಗದಲ್ಲಿ ಸತ್ತಿಗೆಯನ್ನು ಕಂಡ ಶತ್ರುಗಳು ನಿಲ್ಲುವುದಿಲ್ಲ .

ಸತ್ತಿಗೆಯ ಕೆಳಗಿನ ನೆರಳಲ್ಲಿ ಇದ್ದವರಿಗೆ ವಿಪತ್ತುಗಳು , ಎಡರುತೊಡರುಗಳು ಇರುವುದಿಲ್ಲ . ಬಡತನ , ರೋಗ , ಅಪಕೀರ್ತಿ , ಸೋಲಿನ ಭಯವು ಇರುವುದಿಲ್ಲ . ಆದ್ದರಿಂದ ಮುತ್ತಿನ ಸತ್ತಿಗೆಯನ್ನು ಕೊಡಲು ಸಾಧ್ಯವಿಲ್ಲ .

“ ಈ ಸತ್ತಿಗೆಯನ್ನು ಸಾಮಾನ್ಯ ಜನರಿಗೆ ಕೊಡಬಾರದು . ವಂಶಪರಂಪರೆಯಿಂದ ಬಂದಿದ್ದರಿಂದ ತಂದೆಯು , ಪಟ್ಟವನ್ನು ಕಟ್ಟುವ ಸಮಯದಲ್ಲಿ ಇದನ್ನು ಪೂಜಿಸಿಕೊಳ್ಳುವುದಿರಿಂದ ಇದು ದೇವರು , ಎಲ್ಲರಿಗೂ ನೆರಳನ್ನು ನೀಡುವ ತಾಯಿ , ಯುದ್ಧದಲ್ಲಿ ಶತ್ರುಗಳನ್ನು ನಡುಗಿಸುವ ಇದು ಚದುರಂಗಬಲಕ್ಕೆ ಸಮಾನ ” ಎಂದು ಹೇಳುತ್ತಾನೆ

ಹರಿಶ್ಚಂದ್ರನು ನೀಡಿದ ಬಹುಮಾನವನ್ನು ತಿರಸ್ಕರಿಸಿ ಗಾನರಾಣಿಯರು ಹೇಳಿದ ಮಾತುಗಳನ್ನು ತಿಳಿಸಿ ,

ವಿಶ್ವಾಮಿತನು ತನ್ನ ತಪೋಬಲದಿಂದ ಗಾನರಾಣಿಯರನ್ನು ಸೃಷ್ಟಿಸಿ , ಹರಿಶಂದ್ರನನ್ನು ಪರೀಕ್ಷಿಸಲು ಕಳುಹಿಸುತ್ತಾನೆ , ಬೇಟೆಯಾಡಿ ಆಯಾಸಗೊಂಡಿದ್ದ ಹರಿಶಂದ್ರನನ್ನು ಅವರು ತಮ್ಮ ಹಾಡು , ನೃತ್ಯಗಳಿಂದ ಸಂತೋಷ ಪಡಿಸುತ್ತಾರೆ .

ಅವರ ಹಾಡು ಮತ್ತು ನೃತ್ಯವನ್ನು ಮೆಚ್ಚಿದ ಹರಿಶಂದ್ರನು ತನ್ನ ಕೊರಳಲ್ಲಿದ್ದ ಮುತ್ತಿನ ಹಾರವನ್ನು ಬಹುಮಾನವನ್ನಾಗಿ ಕೊಡಲು ಹೋಗುತ್ತಾನೆ . ಆದರೆ ಆ ಗಾನರಾಣಿಯರು . ಬಹುಮಾನವನ್ನು ತಿರಸ್ಕರಿಸಿ “ ಬಡತನವಿದ್ದಾಗ ಆನೆ ದೊರಕಿ ಫಲವೇನು ?

ಬಾಯಾರಿಕೆಯ ಸಮಯದಲ್ಲಿ ತುಪ್ಪ ದೊರಕಿ ಫಲವೇನು ? ರೋಗಿಗೆ ರಂಭೆ ದೊರಕಿ ಫಲವೇನು ? ಸಾವಿನ ಸಮಯದಲ್ಲಿ ಭೂಮಿಯ ಒಡೆತನ ದೊರಕಿ
ಫಲವೇನು ?

ಕಡುಬಿಸಿಲಿನಲ್ಲಿ ಬಳಲಿ ಬೆಂಡಾದ ಸಮಯದಲ್ಲಿ ನೀನು ನಮಗೆ ಒಡವೆಗಳನ್ನು ಕೊಟ್ಟು ಫಲವೇನು ? ಭೂಪಾಲ ಎಂದರು . ಅದರ ಬದಲು “ ಕಡಲಿನಲ್ಲಿ ಮುಳುಗುವವನಿಗೆ ತೆಪ್ಪವನ್ನು , ದಾರಿದ್ರವಿರುವವನಿಗೆ ನಿಧಿಯನ್ನು , ಅತಿರೋಗಿಗೆ ಅಮೃತವನ್ನು ಕೊಟ್ಟರೆ ,

ಅವರು ಸಂತೋಷ ಪಡುತ್ತಾರೆ . ಈ ಸುಡುಸುಡುವ ಬಿರುಬಿಸಿಲಿನಲ್ಲಿ ಇರುವ ನಮಗೆ ನಿಮ್ಮ ಮುತ್ತಿನ ಸತ್ತಿಗೆಯನ್ನು ಕೊಟ್ಟು ಸಲಹು ” ಎಂದು ಹರಿಶಂದ್ರನನ್ನು ಕೇಳುತ್ತಾರೆ .

ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ . Ninna Muttina Sattigeyanittu Salahu Notes

“ ಅನುನಯದೊಳೆಲ್ಲವಂ ಕೊಡಬಹುದು ಬಿಡಬಹುದು ”

. ಆಯ್ಕೆ : ಈ ವಾಕ್ಯವನ್ನು ‘ ರಾಘವಾಂಕ ‘ ಕವಿ ವಿರಚಿತವಾದ ಪ್ರಸ್ತುತ ಪದ್ಯಭಾಗವನ್ನು ಶ್ರೀ ಟಿ . ಎಸ್ . ವೆಂಕಣ್ಣಯ್ಯ ಅವರು ಸಂಪಾದಿಸಿರುವ ‘ ಹರಿಶ್ಚಂದ್ರ ಕಾವ್ಯ ಸಂಗ್ರಹ ‘ ಗ್ರಂಥದಿಂದ ಆಯ್ದ ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ . ವ್ಯಕ್ತಿಯನ್ನು ಎದು

ಸಂದರ್ಭ : ಗಾನ ರಾಣಿಯರು ಹರಿಶ್ಚಂದ್ರನನ್ನು ಮುತ್ತಿನ ಸತ್ತಿಗೆಯನ್ನು ಬಹುಮಾನವಾಗಿ ಕೊಡು ಎಂದು ಕೇಳಿದ ಸಂದರ್ಭದಲ್ಲಿ ಪ್ರೀತಿಯಿಂದ ಎಲ್ಲವನ್ನು ಕೊಡಬಹುದು . ತಾಯಿ , ತಂದೆ , ಸತಿ , ಪರಿವಾರವನ್ನು ಕೊಡುವ ಜನರು ಇದ್ದಾರೆ ಲೋಕದಲ್ಲಿ ಎಂದು ಹರಿಶ್ಚಂದ್ರನು ಈ ಮಾತನ್ನು ಹೇಳುತ್ತಾನೆ .

ಸ್ವಾರಸ್ಯ : ಪ್ರೀತಿಯಿಂದ ಎಲ್ಲವನ್ನೂ ದಾನವಾಗಿ ಕೊಡಬಹುದು ಎಂಬ ಹರಿಶ್ಚಂದ್ರನ ಮಾತಿನ ಮೂಲಕ ಕವಿ ಸ್ವಾರಸ್ಯಕರವಾಗಿ ಮೂಡಿ ಬಂದಿದೆ .

“ ಬಡತನದ ಹೊತ್ತಾನೆ ದೊರಕಿ ಫಲವೇನು ”

ಆಯ್ಕೆ : ಈ ವಾಕ್ಯವನ್ನು ‘ ರಾಘವಾಂಕ ‘ ಕವಿ ವಿರಚಿತವಾದ ಪ್ರಸ್ತುತ ಪದ್ಯಭಾಗವನ್ನು ಶ್ರೀ ಟಿ . ಎಸ್ . ವೆಂಕಣ್ಣಯ್ಯ ಅವರು ಸಂಪಾದಿಸಿರುವ ‘ ಹರಿಶ್ಚಂದ್ರ ಕಾವ್ಯ ಸಂಗ್ರಹ ‘ ಗ್ರಂಥದಿಂದ ಆಯ್ದ ‘ ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಗಾನರಾಣಿಯರು ಹರಿಶಂದ್ರನನ್ನು ತಮ್ಮ ಹಾಡು , ನೃತ್ಯಗಳಿಂದ ಸಂತೋಷ ಪಡಿಸುತ್ತಾರೆ .

ಅವರ ಹಾಡು ಮತ್ತು ನೃತ್ಯವನ್ನು ಮೆಚ್ಚಿದ ಹರಿಶಂದ್ರನು ತನ್ನ ಕೊರಳಲ್ಲಿದ್ದ ಮುತ್ತಿನ ಹಾರವನ್ನು ಬಹುಮಾನವನ್ನಾಗಿ
ಕೊಡಲು ಹೋಗುತ್ತಾನೆ . ಆದರೆ ಆ ಗಾನರಾಣಿಯರು ಬಹುಮಾನವನ್ನು ತಿರಸ್ಕರಿದ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾರೆ .

ಸ್ವಾರಸ್ಯ : ಬಹುಮಾನವನ್ನು ಕೊಡುವಾಗ ಯಾರಿಗೆ ಯಾವ ವಸ್ತು ಅವಶ್ಯಕತೆ ಇದೆಯೋ ಅದನ್ನು ಬಹುಮಾನವಾಗಿ ಕೊಟ್ಟರು ಬಹುಮಾನ ಪಡೆದವರು ಸಂತೋಷ ಪಡುತ್ತಾರೆ ಎಂಬುದು ಸ್ವಾರಸ್ಯಕರವಾಗಿದೆ .

“ ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ಭೂಭುಜಯೆಂದರು ”

ಆಯ್ಕೆ : ಈ ವಾಕ್ಯವನ್ನು ‘ ರಾಘವಾಂಕ ‘ ಕವಿ ವಿರಚಿತವಾದ ಪ್ರಸ್ತುತ ಪದ್ಯಭಾಗವನ್ನು ಶ್ರೀ ಟಿ . ಎಸ್ . ವೆಂಕಣ್ಣಯ್ಯ ಅವರು ಸಂಪಾದಿಸಿರುವ ‘ ಹರಿಶ್ಚಂದ್ರ ಕಾವ್ಯ ಸಂಗ್ರಹ ‘ ಗ್ರಂಥದಿಂದ ಆಯ್ದ ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಗಾನರಾಣಿಯರು “ ಕಡಲಿನಲ್ಲಿ ಮುಳುಗುವವನಿಗೆ ತೆಪ್ಪವನ್ನು , ದಾರಿದ್ರವಿರುವವನಿಗೆ ನಿಧಿಯನ್ನು , ಅತಿರೋಗಿಗೆ ಅಮೃತವನ್ನು ಕೊಟ್ಟರೆ , ಅವರು ಸಂತೋಷ ಪಡುತ್ತಾರೆ .

ಈ ಸುಡುಸುಡುವ ಬಿರುಬಿಸಿಲಿನಲ್ಲಿ ಇರುವ ನಮಗೆ ನಿಮ್ಮ ಮುತ್ತಿನ ಸತ್ತಿಗೆಯನ್ನು ಕೊಟ್ಟು ಸಲಹು ” ಎಂದು ಹರಿಶಂದ್ರನನ್ನು ಕೇಳುವ ಸಂದರ್ಭದಲ್ಲಿ ಗಾನರಾಣಿಯರು ಈ ಮಾತನ್ನು ಹೇಳಿದ್ದಾರೆ .

ಸ್ವಾರಸ್ಯ : ಗಾನರಾಣಿಯರು ಹರಿಶ್ಚಂದ್ರನ ವಂಶ ಪರಂಪಾರ್ಯವಾಗಿ ಬಂದಿದ್ದ ಮುತ್ತಿನ ಸತ್ತಿಗೆಯನ್ನೇ ಬಹುಮಾನ ಕೇಳಿರುವುದು ಸ್ವಾರಸ್ಯಕರವಾಗಿದೆ .

” ಸಂದ ಕಾರಿರುಳು ಕನ್ನೆಯರು ಹಗಲಂ ನೋಡಲೆಂದು ಬಂದರೆ

ಆಯ್ಕೆ : ಈ ವಾಕ್ಯವನ್ನು ‘ ರಾಘವಾಂಕ ‘ ಕವಿ ವಿರಚಿತವಾದ ಪ್ರಸ್ತುತ ಪದ್ಯಭಾಗವನ್ನು ಶ್ರೀ ಟಿ . ಎಸ್ . ವೆಂಕಣ್ಣಯ್ಯ ಅವರು ಸಂಪಾದಿಸಿರುವ ‘ ಹರಿಶ್ಚಂದ್ರ ಕಾವ್ಯ ಸಂಗ್ರಹ ‘ ಗ್ರಂಥದಿಂದ ಆಯ್ದ ‘ ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ವಿಶ್ವಾಮಿತ್ರನು ಹರಿಶ್ಚಂದ್ರನನ್ನು ಪರೀಕ್ಷಿಸಲು ತನ್ನ ಕೋಪದಿಂದ ಗಾನ ರಾಣಿಯರನ್ನು ಸೃಷ್ಟಿಸಿ , “ ಸರ್ವಬುದ್ಧಿಗಳನ್ನು ಬಳಸಿ ಅವನನ್ನು ಮರುಳು ಮಾಡುತ್ತಿರಿ ” ಎಂದು ಹೇಳಿ , ಹರಿಶ್ಚಂದ್ರನ ಬಳಿಗೆ ಕಳುಹಿಸಿದನು . ಆ ಗಾನ ರಾಣಿಯರ ರೂವನ್ನು ವರ್ಣಿಸುವ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾರೆ .

ಸ್ವಾರಸ್ಯ : ಗಾನ ರಾಣಿಯರನ್ನು ಕವಿ ಕಾರಿರುಳಿಗೆ ಹೋಲಿಸಿ ವರ್ಣಿಸಿರುವುದು ಸ್ವಾರಸ್ಯಕರವಾಗಿದೆ .

Ninna Muttina Sattigeyanittu Salahu Notes

ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು | Ninna Muttina Sattigeyanittu Salahu Notes
ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು | Ninna Muttina Sattigeyanittu Salahu Notes

ಸಂಬಂದಿಸಿದ ಇತರೆ ವಿಷಯಗಳು

ವಾಲಿಬಾಲ್ ಪಾಠದ ಪ್ರಶ್ನೆ ಉತ್ತರ

9ನೇ ತರಗತಿ ಕನ್ನಡ ನೋಟ್ಸ್

ರಾಮರಾಜ್ಯ ಪಾಠದ ಪ್ರಶ್ನೆ ಉತ್ತರಗಳು

ರಾಮರಾಜ್ಯ ಪಾಠದ ಸಾರಾಂಶ

ಪಾರಿವಾಳ ಪದ್ಯದ ಪ್ರಶ್ನೋತ್ತರಗಳು

9ನೇ ತರಗತಿ ಪಾರಿವಾಳ ಪದ್ಯದ ಸಾರಾಂಶ

ಸಿರಿಯನಿನ್ನೇನ ಬಣ್ಣಿಪೆನು ಪ್ರಶ್ನೋತ್ತರಗಳು

ಬಲಿಯನಿತ್ತೊಡೆ ಮುನಿವೆಂ ಸಾರಾಂಶ

ಹೇಮಂತ ಕನ್ನಡ ನೋಟ್ಸ್

ತತ್ವಪದಗಳು ಪ್ರಶ್ನೋತ್ತರಗಳು

Leave a Reply

Your email address will not be published. Required fields are marked *