ತತ್ವಪದಗಳು ಪ್ರಶ್ನೋತ್ತರಗಳು | Tatva Padagalu Poems Notes

Tatva Padagalu Poems Notes

ತತ್ವಪದಗಳು ಪ್ರಶ್ನೋತ್ತರಗಳು, ತತ್ವಪದಗಳು 9ನೇ ತರಗತಿ, ತತ್ವಪದಗಳು ಪದ್ಯದ ಸಾರಾಂಶ, ತತ್ವಪದಗಳು notes, ತತ್ವಪದಗಳು ನೋಟ್ಸ್,Tatva Padagalu Poems Notes, 9ನೇ ತರಗತಿ ತತ್ವಪದಗಳು ಪದ್ಯ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 9th Standard Kannada Tatva Padagalu Poem Notes Question Answer

Tatva Padagalu Poems Notes

ನಮ್ಮ ಟೆಲಿಗ್ರಾಮ್ ಗ್ರೂಪ್ ಗೆ ಈಗಲೇ ಜಾಯಿನ್ ಆಗಿ

Spardhavani Telegram

ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ. Tatva Padagalu Poems Notes

ಬಿದಿರಿನ ಚಪ್ಪರವು ಏನನ್ನು ಕೊಡುತ್ತದೆ ?

ಬಿದಿರಿನ ಚಪ್ಪರವು ನೆರಳನ್ನು ಕೊಡುತ್ತದೆ .

ಬಿದಿರು ಶಿಶುನಾಳಾಧೀಶನಿಗೆ ಏನಾಗುತ್ತದೆ ?

ಬಿದಿರು ಶೀಶುನಾಳಧೀಶನಿಗೆ ಓಲಗವಾಗುತ್ತದೆ .

ಯಾರ ಸ್ನೇಹವು ಸಾಯುವತನಕ ಬೇಡ ಎಂದಿದ್ದಾರೆ ?

ಗುರುಕರುಣೆ ಇಲ್ಲದವನ ಸ್ನೇಹ ಸಾಯುವತನಕ ಬೇಡ ಎಂದಿದ್ದಾರೆ .

ತತ್ತ್ವಪದಕಾರರು ಯಾರ ಸೇವೆ ಮಾಡಬೇಕು ಎಂದಿದ್ದಾರೆ ?

ತತ್ತ್ವಪದಕಾರರು ಸಾಧು – ಸತ್ಪರುಷರ ಸೇವೆ ಮಾಡಬೇಕು ಎಂದಿದ್ದಾರೆ .

ಬಿದಿರು ಹೇಗೆ ಬೆಳೆಯಿತು ?

ಬಿದಿರು ಹುಟ್ಟುತ್ತಾ ಹುಲ್ಲಿನಂತಿದ್ದ ಬೆಳೆಬೆಳೆಯುತ್ತ ದಿವಿಯಾಗುತ್ತದೆ .

ಯಾರ ಸ್ನೇಹವನ್ನು ಮಾಡಿ ಕೆಡಬಾರದು ?

ಹೀನ ಮನುಷ್ಯನ ಸ್ನೇಹ ಮಾಡಿ ಕೆಡಬಾರದು .

ಕೊಟ್ಟಿರುವ ಪ್ರಶ್ನೆಗಳಿಗೆ 3-4 ವಾಕ್ಯಗಳಲ್ಲಿ ಉತ್ತರ ಬರೆಯಿರಿ .

‘ ಗುರುಕರುಣೆ ‘ ಪದ್ಯದ ಮೂರು ಮತ್ತು ನಾಲ್ಕನೆಯ ಚರಣದಲ್ಲಿ ಏನನ್ನು ಮಾಡಬಾರದೆಂದು ತತ್ತ್ವ ಸಾರಿದ್ದಾರೆ ?

ಅಕ್ಕ – ತಂಗಿಯರು ಎಂದು ಬಾಯಲಿ ಕರೆದು ಅವರನ್ನು ಕೆಟ್ಟದಾಗಿ ನೋಡಬಾರದು , ಮನಸ್ಸಿನಲ್ಲಿ ಕೆಟ್ಟ ಆಲೋಚನೆ ಮಾಡಬಾರದು . ಬರೀ ಊಟ ಮಾಡುತ್ತಾ ಸಮಯವನ್ನು ವ್ಯರ್ಥ ಹಾಳುಮಾಡಬಾರದು .

ಮೇಲು – ಕೀಳು ಎಂಬ ಭಾವನೆಯನ್ನು ಬಿಟ್ಟು ಬದುಕಬೇಕು . ಎಳೆಗರು ಎತ್ತಾಗದೆ ಎಂಬಂತೆ ಹಿಂದೆ ಕಿರಿದಾಗಿರುವುದು ಇಂದು ಹಿರಿದಾಗುತ್ತದೆ . ಯಾವುದನ್ನೂ ಉಪೇಕ್ಷೆ ಮಾಡಬಾರದು .

ಒಂದನ್ನು ಮತ್ತೊಂದಕ್ಕೆ ಹೋಲಿಸಿ ಸರಿ ಮಾಡಲು ಬೇಡ , ಅವುಗಳಿಗೆ ಅವುಗಳದ್ದೆ ಸ್ಥಾನವಿದೆ . ಯಾವಾಗಲೂ ಗುರು ಮಹಾಂತೇಶ ಧ್ಯಾನವನ್ನು ಮಾಡುತ್ತಾ ಜೀವನ ನಡೆಸಬೇಕು .

ಧಾನ್ಯಗಳನ್ನು ಕುಟ್ಟಲು , ಬೀಸಲು , ಕೇರಲು ಬಿದಿರು ಹೇಗೆ ಸಹಾಯಕವಾಗಿರುತ್ತದೆ ?

ಬಿದಿರು ಧಾನ್ಯಗಳನ್ನು ಕುಟ್ಟಲು ಒನಕೆಯಾಗಿ ಬೀಸುವ ಕಲ್ಲಿನ ಗೂಟವಾಗಿ ಅಕ್ಕಿ ರಾಗಿ , ಕೇರುವ ಮರವಾಗಿ ಸಹಾಯಕವಾಗಿರುತ್ತದೆ .

ತತ್ತ್ವಪದಕಾರರು ಸ್ನೇಹ ಮಾಡುವ ಬಗೆಗೆ ಏನೆಂದು ತಿಳಿಸಿದ್ದಾರೆ ?

ಗುರುಕರುಣವಿಲ್ಲದವನ ಸ್ನೇಹ ಸಾವುತನಕ ಮಾಡಬಾರದು . ಮಾತಿನೊಳಗ ಮಾತಿಲ್ಲದವನ ಸ್ನೇಹ ಜಾತಿಜನ್ಮಕಬೇಡ . ಹೀನ ಮನುಷ್ಯನ ಸ್ನೇಹ ಮಾಡಿ ನೀನು ಕೆಡಲಿಬೇಡ ,

ಮಾತಿನೊಳಗೆ ಮಾತಿಲ್ಲದವನ ಸ್ನೇಹ ಜನ್ಮ ಇರುವವರೆಗೆ ಬೇಡ , ಹೀನ ಮನುಷ್ಯನ ಸ್ನೇಹವನ್ನು ಮಾಡಿ ಕೆಡಬಾರದೆಂದು ತತ್ತ್ವಪದಕಾರರು ಹೇಳಿದ್ದಾರೆ .

ಬಿದಿರು ಮಕ್ಕಳಿಗೆ , ರೈತರಿಗೆ ಮಹಾತ್ಮರಿಗೆ ಯಾವ ರೀತಿಯಲ್ಲಿ ಉಪಯೋಗವಾಗುತ್ತದೆ ?

ಬಿದಿರು ಮಕ್ಕಳಿಗೆ ತೂಗುವ ತೊಟ್ಟಿಲಾಗಿ ಉಪಯೋಗವಾಗುತ್ತದೆ . ಮಕ್ಕಳು ನಿದ್ದೆ ಮಾಡಲು ಬಹು ಉಪಯೋಗಿ , ರೈತರಿಗೆ ಹೊಲದಲ್ಲಿ ಬೀಜ ಬಿತ್ತಲು ಸಹಕಾರಿಯಾದ ಕೂರಿಗೆಯಾಗಿ ಉಪಯೋಗವಾಗಿದೆ . ಮಹಾತ್ಮರ ಕೈಯಲ್ಲಿನ ಬೆತ್ತವಾಗಿ ಬಿದಿರು ಉಪಯೋಗವಾಗಿದೆ .

Tatva Padagalu Poems Notes PDF

ತತ್ವಪದಗಳು ಪ್ರಶ್ನೋತ್ತರಗಳು | Tatva Padagalu Poems Notes
ತತ್ವಪದಗಳು ಪ್ರಶ್ನೋತ್ತರಗಳು | Tatva Padagalu Poems Notes

ಕೊಟ್ಟಿರುವ ಪ್ರಶ್ನೆಗಳಿಗೆ 8-10 ವಾಕ್ಯಗಳಲ್ಲಿ ಉತ್ತರ ಬರೆಯಿರಿ . Tatva Padagalu Poems Notes

‘ ಬಿದಿರು ‘ ಪದ್ಯದ ಸಾರಾಂಶವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ .

ಉತ್ತರ : ಸಂತ ಶಿಶುನಾಳ ಶರೀಫರ ತತ್ತ್ವಪದದಲ್ಲಿ ಪ್ರಕೃತಿಯಲ್ಲಿ ಬೇಡವಾದ ವಸ್ತು ಯಾವುದೂ ಇಲ್ಲ . ಅದರಲ್ಲೂ ಕೆಲವು ವಸ್ತುಗಳು ಬಹು ಉಪಯೋಗಿಗಳು . ಹುಟ್ಟಿನಿಂದ ಸಾವಿನ ತನಕ ದಿನನಿತ್ಯ ಬಳಸುವ ಅತ್ಯಮೂಲ್ಯ ವಸ್ತು ನೀರು ಇದರಂತೆ

ಬಿದಿರು ಬಹು ಉಪಯೋಗಿ , ಸಮಾಜದಲ್ಲಿ ಎಲ್ಲರಿಗೂ ಎಲ್ಲಾ ಸಂದರ್ಭಗಳಲ್ಲೂ ಬೇಕಾದ ಈ ಅಮೂಲ್ಯ ಅತ್ಯಗತ್ಯ ಬಿದಿರನ್ನು ಸಂತ ತನ್ನ ದೃಷ್ಟಿಯಲ್ಲಿ ನೋಡಿದ ಪರಿ ಈ ತತ್ತ್ವಪದದಲ್ಲಿ ಸರಳ ಸುಂದರವಾಗಿ ಚಿತ್ರಿತವಾಗಿದೆ .

ಹುಟ್ಟುತ ಹುಲ್ಲು ನಾನಾದೆ ಬೆಳೆ ಬೆಳೆಯುತ್ತ ದಿವಿನಾದೆ ಮಕ್ಕಳನ್ನು ತೂಗುವತೊಟ್ಟಿಲಾಗುತ್ತದೆ . ಪಲ್ಲಕ್ಕಿಯ ದಂಡಿಗೆಯಾಗಿ , ಪತ್ರೆಗೆ ಬುಟ್ಟಿ ತಾನಾಗಿ , ಮಹಾತ್ಮರ ಕೈಗೆ ಬೆತ್ತವಾಗಿ , ಒನಕೆಯಾಗಿ , ಅಂಬಿಗಗೆ ಕೋಲಾಗಿ ಬಹು ಉಪಯೋಗಿ , ರೈತನಿಗೆ ಬಿತ್ತುವ ಕೂರಿಗ್ಯಾಗಿ ಉಪಯೋಗವಾಗುತ್ತದೆ .

ಬೀಸುಕಲ್ಲಿನ ಗೂಟವಾಗಿ ಮೊರವಾಗಿ ಬೆತ್ತವಾಗಿ ಊರುಗೋಲಾಗಿ , ಕೋಲಾಗಿ ಬಂಡಿಯಾಗಿ ನಂದಿ ಕೋಲಾಗಿ , ಚಪ್ಪರವಾಗಿ ಕೊಳಲು , ಮಗುವಿನಿಂದ ಮುದುಕರವರೆಗೆ ಎಲ್ಲರ ಅಗತ್ಯಗಳನ್ನು ಪೂರೈಸುವಲ್ಲಿ ಬಿದಿರು ಬಹು ಉಪಯೋಗಿ

, ಆಡುವ ಕೋಲಾಗಿ , ಹೂಡಲು ಚಕ್ಕಡಿಯಾಗಿ , ಸಿದ್ದರಾಮೇಶಗೆ ನಂದಿ ಕೋಲಾಗಿ , ನೆರಳಿಗೆ ಚಪ್ಪರವಾಗಿ , ಏಕದಂಡಿಗೆ ಕೊಳವೆಯಾಗಿ , ಶಿಶುನಾಳಾಧೀಶಗೆ ಓಲಗವಾಗಿ ಬಿದಿರು ಸಾರ್ಥಕವಾಗುತ್ತದೆ .

ಗುರುಕರುಣೆ ‘ ಪದ್ಯದ ಸಾರಾಂಶವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ .

ಉತ್ತರ : ಕಡಕೋಳ ಮಡಿವಾಳಪ್ಪರವರ ತತ್ತ್ವಪದದಲ್ಲಿ ಸ್ನೇಹ , ಸಂಬಂಧ , ಸೇವೆಗಳ ಬಗ್ಗೆ ವಿವರಿಸಿದ್ದಾರೆ . ಮಾನವನು ತನ್ನ ಜೀವನದಲ್ಲಿ ಅನುಸರಿಸಬೇಕಾದ ನಡೆನುಡಿಗಳನ್ನು ಬಹುಸುಂದರವಾಗಿ ಚಿತ್ರಿಸುತ್ತದೆ ನಮ್ಮ ಎಲ್ಲ ಕಾರ್ಯಗಳಿಗೆ ಗುರುಕರುಣೆ ಅತ್ಯಗತ್ಯ.ಯಾವ ವ್ಯಕ್ತಿಯು ಗುರುಗಳ ಮೇಲೆ ಗೌರವ ,

ಅಭಿಮಾನ ಇಲ್ಲವೋ , ಗುರುಗಳ ಅನುಗ್ರಹ , ಕೃಪೆಯನ್ನು ಗಳಿಸಿಲ್ಲವೋ , ಗುರುಕರುಣೆ ಇಲ್ಲದವನ ಸ್ನೇಹ ಸಾಯುತನಕ ಮಾಡಬಾರದು ಎಂದಿದ್ದಾರೆ ತತ್ತ್ವಪದಕಾರರು . ಸಾಧು ಸತ್ಪರುಷರ ಸೇವೆಯನ್ನು ಮಾಡಿ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು .

ಕೆಟ್ಟ ಮನುಷ್ಯರ ಸ್ನೇಹವನ್ನು ಮಾಡಿ ಕೆಡಬಾರದು . ಹೀನ ಮನುಷ್ಯರ ಸ್ನೇಹವನ್ನು ಮಾಡದಿರುವುದು ಒಳ್ಳೆಯದು ಎಂದಿದ್ದಾರೆ . ಅಕ್ಕ ತಂಗಿಯರೆಂದು ಬಾಯಿಯಲ್ಲಿ ಕರೆದು ಅವರನ್ನು ಕೆಟ್ಟ ದೃಷ್ಟಿಯಿಂದ ನೋಡಬಾರದು . ನಿತ್ಯ ಕಾಲದಲ್ಲಿ ಆಹಾರವನ್ನು ಸೇವಿಸುತ್ತಾ ಸಮಯವನ್ನು ವ್ಯರ್ಥ ಮಾಡಬಾರದು .

ಮೇಲು ಕೀಳೂ ಎಂಬ ಭಾವನೆಯಿಲ್ಲದೆ , ಎಳೆಗರು ಎತ್ತಾಗದೆ ಎಂಬಂತೆ ಹಿಂದೆ ಕಿರಿದಾಗಿರುವುದು ಇಂದು ಹಿರಿದಾಗುತ್ತದೆ . ಯಾವುದನ್ನೂ ಉಪೇಕ್ಷೆ ಮಾಡಬಾರದು .

ಒಂದನ್ನು ಮತ್ತೊಂದಕ್ಕೆ ಹೋಲಿಸಿ ಸರಿ ಮಾಡಲು ಬೇಡ . ಅವುಗಳಿಗೆ ಅವುಗಳದ್ದೆ ಸ್ಥಾನವಿದೆ . ಗುರು ಮಹಾಂತೇಶನ ಸೇವೆಯನ್ನು ಮಾಡುತ್ತಾ ಇರುವುದೇ ಉತ್ತಮ ಗುಣಗಳು ಎಂದು ತತ್ತ್ವಪದಕಾರರು ಅಭಿಪ್ರಾಯ ಪಡುತ್ತಾರೆ .

ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ . Tatva Padagalu Poems Notes

“ ಬೆಳೆ ಬೆಳೆಯುತ್ತ ದಿವಿನಾದ ”

ಆಯ್ಕೆ : ಈ ವಾಕ್ಯವನ್ನು ಸಂತ ಶಿಶುನಾಳ ಶರೀಫರವರು ಬರದಿರುವ ‘ ಬಿದಿರು ‘ ತತ್ತ್ವಪದವನ್ನು ವಿದ್ವಾನ್ ಸದ್ಯೋಜಾತಮೂರ್ತಿ ಸಂಪಾದಿಸಿರುವ ‘ ಶಿಶುನಾಳರ ಗೀತೆಗಳು ‘ ಸಂಕಲನದಿಂದ ಆಯ್ತು ‘ ತತ್ತ್ವಪದಗಳು ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಬಿದಿರು ಹುಟ್ಟುತ್ತಾ ಹುಲ್ಲಾಗಿ ಬೆಳೆಬೆಳೆಯುತ್ತಾ ದಿವಿಯಾಗಿ ಬೆಳೆದು ವಿವಿಧ ಉಪಯೋಗಿ ವಸ್ತುಗಳನ್ನು ಮಾಡಲು ಅನುಕೂಲಕರವಾಗುತ್ತದೆ ಎಂದು ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ

ಸ್ವಾರಸ್ಯ : ಬಿದಿರು ಯಾವ ರೀತಿ ಹುಟ್ಟಿ ಬೆಳೆಯುತ್ತದೆ ಎಂಬುದನ್ನು ತತ್ವಪದಕಾರರು ಸ್ವಾರಸ್ಯಕರವಾಗಿ ವರ್ಣಿಸಿದ್ದಾರೆ .

“ ನಿತ್ಯಕಾಲದಲ್ಲಿ ಅಶನವ ಉಂಡು ಹೊತ್ತು ಗಳಿಯಲಿಬೇಡ ”

ಆಯ್ಕೆ : ಕಡಕೋಳ ಮಡಿವಾಳಪ್ಪನವರ ತತ್ತ್ವಪದದ ಈ ವಾಕ್ಯವನ್ನು ಆಯ್ದ ತತ್ತ್ವಪದಗಳು ‘ ಸಂಕಲನದಿಂದ ಆಯ್ದು ‘ ತತ್ತ್ವಪದಗಳು ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಮನುಷ್ಯನು ಕೆಲಸ ಮಾಡುವ ಸಮಯದಲ್ಲಿ ಊಟವನ್ನು ಮಾಡುತ್ತಾ ಸಮಯವನ್ನು ವ್ಯರ್ಥ ಮಾಡಿಕೊಳ್ಳಬಾರದು . ಮೇಲು – ಕೀಳು ಎಂಬ ಭಾವನೆಯನ್ನು ಬಿಟ್ಟು ಬದುಕಬೇಕು ಎಂದು ಹೇಳುವ ಸಂದರ್ಭದಲ್ಲಿ ಈ ಮಾತನ್ನು ತತ್ತ್ವಪದಕಾರರು ಹೇಳಿದ್ದಾರೆ .

ಸ್ವಾರಸ್ಯ : ಮನುಷ್ಯನ ಜೀವನವು ಅಮೂಲ್ಯವಾದದು ಅದನ್ನು ಸುಮ್ಮನೆ ಊಟ ಮಾಡಿಕೊಂಡು ವ್ಯರ್ಥ ಮಾಡಬಾರದು . ಉಪಯುಕ್ತವಾದ ಕೆಲಸದಲ್ಲಿ ತೊಡಗಿ ಸಾರ್ಥಕತೆ ಮಾಡಿಕೊಳ್ಳಬೇಕು ಎಂಬುದು ಸ್ವಾರಸ್ಯಕರವಾಗಿ ಮೂಡಿ ಬಂದಿದೆ .

“ ಮಹಾತ್ಮರ ಕೈಗೆ ಬೆತ್ತ ನಾನಾದೆ ”

ಆಯ್ಕೆ : ಈ ವಾಕ್ಯವನ್ನು ಸಂತ ಶಿಶುನಾಳ ಶರೀಫರವರು ಬರದಿರುವ ‘ ಬಿದಿರು ‘ ತತ್ತ್ವಪದವನ್ನು ವಿದ್ವಾನ್ ಸದ್ಯೋಜಾತಮೂರ್ತಿ ಸಂಪಾದಿಸಿರುವ ‘ ಶಿಶುನಾಳರ ಗೀತೆಗಳು ‘ ಸಂಕಲನದಿಂದ ಆಯ್ದು ‘ ತತ್ತ್ವಪದಗಳು ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಬಿದಿರು ಮಕ್ಕಳಿಗೆ ತೂಗುವ ತೊಟ್ಟಿಲಾಗಿದೆ . ರೈತರಿಗೆ ಹೊಲದಲ್ಲಿ ಬೀಜ ಬಿತ್ತಲು ಉಪಯೋಗವಾಗುತ್ತದೆ . ಮಹಾತ್ಮರ ಕೈಗೆ ಬೆತ್ತವಾಗಿ ಬಿದಿರು ಉಪಯೋಗುತ್ತದೆ . ಬಿದಿರಿನ ಉಪಯೋಗಗಳನ್ನು ವರ್ಣಿಸುವ ಸಂದರ್ಭದಲ್ಲಿ ಈ ಮಾತು ಬಂದಿದೆ .

ಸ್ವಾರಸ್ಯ : ಬಿದಿರಿನ ಉಪಯೋಗಗಳು ಸ್ವಾರಸ್ಯಕರವಾಗಿ ಮೂಡಿ ಬಂದಿವೆ .

” ಹೀನ ಮನುಷ್ಯನ ಸ್ನೇಹ ಮಾಡಿ ನೀನು ಕೆಡಬೇಡ

ಆಯ್ಕೆ : ಕಡಕೋಳ ಮಡಿವಾಳಪ್ಪನವರ ತತ್ತ್ವಪದದ ಈ ವಾಕ್ಯವನ್ನು ಆಯ್ದ ತತ್ತ್ವಪದಗಳು ‘ ಸಂಕಲನದಿಂದ ಆಯ್ದು ‘ ತತ್ತ್ವಪದಗಳು ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಗುರುಕರುಣೆಯಿಲ್ಲದವನ ಸ್ನೇಹವನ್ನು ಸಾಯುತನಕ ಮಾಡಬಾರದು ಮಾತಿನೊಳಗೆ ಮಾತಿಲ್ಲದವನ ಸ್ನೇಹ ಮಾಡಬಾರದು . ಹೀನ ಮನುಷ್ಯನ ಸ್ನೇಹವನ್ನು ಮಾಡಿ ಕೆಡಬಾರದೆಂದು ಎಂದು ಹೇಳುವ ಸಂದರ್ಭದಲ್ಲಿ ತತ್ತ್ವಪದಕಾರರು ಈ ಮಾತನ್ನು ಹೇಳಿದ್ದಾರೆ .

ಸ್ವಾರಸ್ಯ : ಮಾನವನು ಹೇಗೆ ಬದುಕಬೇಕೆಂದು , ಯಾರ ಸ್ನೇಹವನ್ನು ಮಾಡಬೇಕು . ಯಾರ ಸ್ನೇಹವನ್ನು ಮಾಡಬಾರದು ಎಂಬ ಸಂದೇಶವನ್ನು ನೀಡಿರುವುದು ಸ್ವಾರಸ್ಯಕರವಾಗಿದೆ .

Tatva Padagalu Poems Notes
Tatva Padagalu Poems Notes

ಸಂಬಂದಿಸಿದ ಇತರೆ ವಿಷಯಗಳು

ವಾಲಿಬಾಲ್ ಪಾಠದ ಪ್ರಶ್ನೆ ಉತ್ತರ

9ನೇ ತರಗತಿ ಕನ್ನಡ ನೋಟ್ಸ್

ರಾಮರಾಜ್ಯ ಪಾಠದ ಪ್ರಶ್ನೆ ಉತ್ತರಗಳು

ರಾಮರಾಜ್ಯ ಪಾಠದ ಸಾರಾಂಶ

ಪಾರಿವಾಳ ಪದ್ಯದ ಪ್ರಶ್ನೋತ್ತರಗಳು

9ನೇ ತರಗತಿ ಪಾರಿವಾಳ ಪದ್ಯದ ಸಾರಾಂಶ

ಸಿರಿಯನಿನ್ನೇನ ಬಣ್ಣಿಪೆನು ಪ್ರಶ್ನೋತ್ತರಗಳು

ಬಲಿಯನಿತ್ತೊಡೆ ಮುನಿವೆಂ ಸಾರಾಂಶ

ಹೇಮಂತ ಕನ್ನಡ ನೋಟ್ಸ್

Leave a Reply

Your email address will not be published. Required fields are marked *