ಕವಿರಾಜಮಾರ್ಗ ಬಗ್ಗೆ ಮಾಹಿತಿ | Kavirajamarga in Kannada

kavirajamarga in kannada | ಕವಿರಾಜಮಾರ್ಗ ಬಗ್ಗೆ ಮಾಹಿತಿ

kavirajamarga in kannada, ಕವಿರಾಜಮಾರ್ಗ ಬಗ್ಗೆ ಮಾಹಿತಿ, saramsha, summary, poet,pdf, kavirajamarga information in kannada, essay, notes, about

Granthagalu in Kannada

ಕವಿರಾಜಮಾರ್ಗ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಇದು ಸಂಪೂರ್ಣವಾಗಿ ಉಚಿತವಾಗಿದೆ.

Spardhavani Telegram
ಕವಿರಾಜಮಾರ್ಗ ಬಗ್ಗೆ ಮಾಹಿತಿ । Kavirajamarga in Kannada Best No1 Information In Kannada
ಕವಿರಾಜಮಾರ್ಗ ಬಗ್ಗೆ ಮಾಹಿತಿ । Kavirajamarga in Kannada Best No1 Information In Kannada

kavirajamarga book written by

ಕನ್ನಡ ಸಾಹಿತ್ಯದಲ್ಲಿ ಉಪಲಬ್ಧವಾಗಿರುವ ಮೊದಲ ಪ್ರಾಚೀನ ಗ್ರಂಥ / ಅಂಲಕಾರ ಶಾಸ್ತ್ರ / ಲಕ್ಷಣ ಗ್ರಂಥ / ಚಾರಿತ್ರಿಕ ಗ್ರಂಥ , ವಿಮರ್ಶಕ ಗ್ರಂಥ ಮತ್ತು ವಿವೇಕಪರ ಗ್ರಂಥವೂ ಕೂಡ ಆಗಿದೆ .

ಅಮೋಘವರ್ಷ ನೃಪತುಂಗನ ಆಸ್ಥಾನದ ಕವಿ ಶ್ರೀವಿಜಯನಿಂದ ರಚಿತವಾಗಿದೆ ( ಇದು ಗೊಂದಲಕ್ಕೆ ಸೃಷ್ಟಿಯಾಗಿದೆ ಏಕೆಂದರೆ ಪ್ರತಿ ಪರಿಚ್ಛೇದದ ಅಂತ್ಯದಲ್ಲಿ ನೃಪತುಂಗ ದೇವಾನು ಮತಮಪ ಕವಿರಾಜ ಮಾರ್ಗ ಎಂದಿದೆ , ಆದರೂ ಸಹ ಒಟ್ಟಿನಲ್ಲಿ ರಚನೆಕಾರರಿಗಿಂತ ಗ್ರಂಥದ ವಿಷಯವು ಮುಖ್ಯವಾಗಿದೆ .

ಕವಿರಾಜ ಮಾರ್ಗಕ್ಕೆ ದಂಡಿಯ ಕಾವ್ಯದರ್ಶಿ ಆಧಾರವಾಗಿದೆ . ಪರಿಚ್ಛೇದಗಳಿವೆ

1 ) ದೋಷಾನುವರ್ಣನ ನಿರ್ಣಯ

2 ) ಶಬ್ದಲಂಕಾರ ವರ್ಣನ ನಿರ್ಣಯ

3 ) ಅರ್ಥಲಂಕಾರ ವರ್ಣನ ನಿರ್ಣಯ

ಇದರಲ್ಲಿ ಮೂರು ಇದೊಂದು ಅಲಂಕಾರ ಗ್ರಂಥವಾದರೂ ಸಾಂಸ್ಕೃತಿಕವಾಗಿ ಈ ಗ್ರಂಥಕ್ಕೆ ಅತ್ಯಂತ ಮಹತ್ವವಿದೆ . ಕನ್ನಡ ನಾಡು- ನುಡಿ ಸಾಂಸ್ಕೃತಿಯ ದೃಷ್ಟಿಯಿಂದ ಅನೇಕ ಮಹತ್ವ ಮಾಹಿತಿಗಳು ಕವಿರಾಜ ಮಾರ್ಗದಲ್ಲಿ ದೊರೆತಿವೆ .

* ಇದು ದಂಡಿಯ ಕಾವ್ಯದರ್ಶಿ ಆಧಾರ ಗ್ರಂಥವಾಗಿದೆ .

* ಅಭಿಮಾನಿಗಳತ್ಯುಗ್ರರ್ ಎಂಬ ಮಾತು ಈ ಕೃತಿಯಲ್ಲಿದೆ .

ಕವಿರಾಜಮಾರ್ಗ ಬಗ್ಗೆ ಮಾಹಿತಿ । Kavirajamarga in Kannada Best No1 Information In Kannada
ಕವಿರಾಜಮಾರ್ಗ ಬಗ್ಗೆ ಮಾಹಿತಿ । Kavirajamarga in Kannada Best No1 Information In Kannada

ಈ ಗ್ರಂಥದ ವೈಶಿಷ್ಟ್ಯಗಳು :

1 ) ಚಾರಿತ್ರಿಕವಾಗಿ ಕನ್ನಡದ ಮೊದಲ ಉಪಲಬ್ಧ ಕೃತಿ

2 ) ಕನ್ನಡ ನಾಡಿನ ಬಗ್ಗೆ ವಿಸ್ತಾರಾವಾಗಿ ಮಾಹಿತಿ ನೀಡುತ್ತದೆ .

“ ಕಾವೇರಿಯಿಂದ ಮಾ ಗೋದಾವರಿ ವರಮಿರ್ಪನಾಡಿದು ಕನ್ನಡ ದೊಳ್ ಭಾವಿಸಿದ ಜನಪದಂ ವಸುಧಾವಲಯ ವಿಲೀನ ವಿಶದ ವಿಷಯ ವಿಶೇಷಂ ” ಎಂದು ಹೇಳಲಾಗಿದೆ .

ಕವಿರಾಜ ಮಾರ್ಗಕಾರನ ಪ್ರಕಾರ ತಿರುಳುಗನ್ನಡ ಸೀಮೆ ಎಂದರೆ ಕುಂತಳ ದೇಶದ ಕೋಪಣ ಪುಲಿಗೆರಿ ನಡುವಿನ ಭಾಗ .

ಕನ್ನಡ ಭಾಷೆಯ ಬಗ್ಗೆ

* ಮೊದಲು ದಕ್ಷಿಣೋತ್ತರ ಮಾರ್ಗಗಳನ್ನು ಕವಿರಾಜ ಮಾರ್ಗದಲ್ಲಿ ಹೆಸರಿಸಿರುವುದರಿಂದ ಉಪಭಾಷೆ ಪ್ರಾಂತೀಯ ಭಾಷೆಗಳಿದ್ದ ವೆಂಬುದನ್ನು ತಿಳಿಯಬಹುದು .

ಕನ್ನಡ ಅವಸ್ಥಾಂತರದ ಬಗ್ಗೆ ಮಾಹಿತಿ ಸಿಗುತ್ತದೆ . “ ಪಳಗನ್ನಡವನ್ನು ಮುಲಗೆಡಿಸಿ ನುಡಿದವರ್ ” ಎಂದು ಹೇಳಲಾಗಿದೆ .

ಗದ್ಯ ಕಥೆ – ಬೆದಂಡೆ , ಚೆತ್ತಾಣ , ಪಗರಣ ಈ ಪ್ರಾಚೀನ ಸಾಹಿತ್ಯ ರೂಪಗಳು ಉಲ್ಲೇಖವಾಗಿವೆ .

ಕನ್ನಡ ಜನರ ಉದಾರತೆಯನ್ನು ಗುರುತಿಸಬಹುದು

ಕಸವರವೆಂಬುದು ನೆರೆಳೆ ಸೈರಿಸಲಾರ್ಪೊಡೆ ಪರ ವಿಚಾರಮಂ ಧರ್ಮಮಂ ” ( ಬೇರೆಯವರ ವಿಚಾರ ಧರ್ಮವನ್ನು ಸಹಿಸು ವುದಕ್ಕಿಂತ ಬೇರೆ ಐಶ್ವರವಿಲ್ಲ ) ಈ ಪದಗಳು ಕನ್ನಸಡಿಗರ ಮನಸ್ಸು 9 ನೇ ಶತಮಾನದ ವೇಳೆಗೆ ಸಹಬಾಳ್ವೆಯ ಪರಿಕಲ್ಪನೆಯ ಬಗೆಗೆ ಚಿಂತನೆ ಮಾಡುತ್ತಿತ್ತೆಂಬುದನ್ನು ಕಾಣಬಹುದು .

ಪದನರಿದು ನುಡಿಯಲುಂ ನುಡಿ

ದುದನರಿದಾರಯಲು ಮಾರ್ಪರಾ ನಾಡರ್ವಗಳ

ಚದುರರ್ ನಿಜದಿಂ ಕುರಿತೋ

ದದೆಯಂ ಕಾವ್ಯ ಪ್ರಯೋಗ ಪರಿಣತಮತಿಗಳ್

kavirajamarga in kannada

ಕವಿರಾಜಮಾರ್ಗ ಬಗ್ಗೆ ಮಾಹಿತಿ । Kavirajamarga in Kannada Best No1 Information In Kannada
ಕವಿರಾಜಮಾರ್ಗ ಬಗ್ಗೆ ಮಾಹಿತಿ । Kavirajamarga in Kannada Best No1 Information In Kannada

ಅಕ್ಷರ ಸಂಸ್ಕೃತದಿಂದ ವಂಚಿತರಾದ ಜನರ ಸಹ ಸಾಹಿತ್ಯದಲ್ಲಿ ಪ್ರವೇಶ ಹೊಂದಿರುವುದನ್ನು ಗಮನಿಸಬಹುದು . ಈ ಕಾಲಕ್ಕೆ ಮೌಖಿಕ ಪರಂಪರೆಯು ಅಸ್ತಿತ್ವದಲ್ಲಿತ್ತು . ಎಂಬುದನ್ನು ಅರಿಯಬಹುದಾಗಿದೆ .

ಪುರ್ವಾಚಾರ್ಯ ದೇಸಿಯನೆ ನಿರಿಸಿ ಖಂಡ ಪ್ರಾಸಮನತಿಶಯ ಮಿದೆಂದು ಯತಿಯಂ ಮಿಕ್ಕರ್ ” ಎಂಬ ಮಹತ್ವದ ಸಂಗತಿ ನಿವೇದನೆ ಮಾಡಿರುವ ಕೃತಿ ಕವಿರಾಜಮಾರ್ಗ .

( ಮೊದಲು ಯತಿ , ಪ್ರಾಸ ಇದರಲ್ಲಿ ಬಳಕೆಯಾಗಿವೆ )

ಕವಿರಾಜ ಮಾರ್ಗದಲ್ಲಿ ಹೆಸರಿಸಿರುವ ಕನ್ನಡದ ಪ್ರಸಿದ್ಧ

ಗದ್ಯ ಕವಿಗಳು : – ವಿಮಳೋದಯ , ನಾಗಾರ್ಜುನ , ದುರ್ವಿನೀತ , ಜಯಬಂಧು

ಪದ್ಯ ಕವಿಗಳು

ಶ್ರೀವಿಜಯ , ಕವೀಶ್ವರ , ಪಂಡಿತ , ಚಂದ್ರ ಲೋಕಪಾಲ

ಕಾವ್ಯವನ್ನು ಕುರಿತು “ ಪದ್ಯ ಸಮಸ್ತ ಜನ ಹೃದ್ಯಂ ಎಂದಿರುವುದು ಕವಿರಾಜ ಮಾರ್ಗದಲ್ಲಿ

ಮೊದಲು ಅಲಂಕಾರಗಳನ್ನು ಪ್ರಸ್ತಾಪನೆ ಮಾಡಿರುವುದು ಈ ಕೃತಿಯಲ್ಲಿ

ಎಫ್ ಎ ಕ್ಯೂ

ಕನ್ನಡ ಸಾಹಿತ್ಯದಲ್ಲಿ ಉಪಲಬ್ಧವಾಗಿರುವ ಮೊದಲ ಪ್ರಾಚೀನ ಗ್ರಂಥ?

ಕವಿರಾಜಮಾರ್ಗ

ಶ್ರೀ ವಿಜಯ ಬರೆದ ಗ್ರಂಥ?

ಕವಿರಾಜಮಾರ್ಗ

ಇನ್ನಷ್ಟು ಓದಿ …

ಕರ್ನಾಟಕದ ನದಿಗಳು

ಕವಿಗಳ ಹೆಸರು ಮತ್ತು ಬಿರುದುಗಳು

English Grammar in Kannada

ಕನ್ನಡ ವ್ಯಾಕರಣ ಓದಲು ಈ ಕೆಳಗೆ ಕ್ಲಿಕ್ ಮಾಡಿ

ಇತಿಹಾಸ ನೋಟ್ಸ್ ಓದಲು ಈ ಕೆಳಗೆ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *