ಕರ್ನಾಟಕದ ನದಿಗಳ ಪಟ್ಟಿ | Karnataka Rivers Names in Kannada

karnataka nadigalu in kannada । ಕರ್ನಾಟಕದ ನದಿಗಳು

karnataka nadigalu in kannada, ಕರ್ನಾಟಕದ ನದಿಗಳು, ಕರ್ನಾಟಕದ ನದಿಗಳ ಹೆಸರು, karnataka rivers list in kannada, karnataka rivers names in kannada, karnataka rivers name list in kannada

ಪರಿವಿಡಿ

Karnataka Nadigalu In Kannada

ಕರ್ನಾಟಕದಲ್ಲಿ ಹರಿಯುವ ನದಿಗಳಕುರಿತು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಈ ಕೆಳಗೆ ತಿಳಿಸಲಾಗಿದೆ ನೀವು ಈ ಲೇಖನವನ್ನು ಸಂಪೂರ್ಣವಾಗಿ ಓದಿದಮೇಲೆ ನಿಮ್ಮ ಗೆಳೆಯ ಗೆಳತಿಯರಿಗೂ ಶೇರ್ ಮಾಡಿ ಅವರಿಗೂ ಉಪಯುಕ್ತವಾಗಲಿ.

Spardhavani Telegram
ಕರ್ನಾಟಕ ನದಿಗಳು | Karnataka Nadigalu In Kannada Best No1 information
ಕರ್ನಾಟಕ ನದಿಗಳು | Karnataka Nadigalu In Kannada Best No1 information

ಕರ್ನಾಟಕದ ನದಿಗಳ ಹೆಸರು

ಸ್ಥಳ ನದಿ ಯೋಜನೆ
ಲಕ್ಕವಳ್ಳಿತುಂಗಾ ನದಿಭದ್ರಾ ಯೋಜನೆ
ಗಾಜನೂರುತುಂಗಾ ನದಿತುಂಗಾ ಆಣೆಕಟ್ಟು
ಬೀಚನಹಳ್ಳಿಕಬಿನಿಕಬಿನಿ ಯೋಜನೆ
ಬಿರುವಾಳುನುಗುನುಗು ಯೋಜನೆ
ಹಿಡಕಲ್ಘಟಪ್ರಭಾಘಟಪ್ರಭಾ ಯೋಜನೆ
ಹದಗೂರುಹಾರಂಗಿಹಾರಂಗಿ ಯೋಜನೆ
ಮಾರಿಕಣಿವೆವೇದಾವತಿವಾಣಿವಿಲಾಸ ಸಾಗರ ಯೋಜನೆ
ಕನ್ನಂಬಾಡಿಕಾವೇರಿಕೃಷ್ಣರಾಜಸಾಗರ ಯೋಜನೆ
ಮಲ್ಲಾಪುರತುಂಗಭದ್ರಾತುಂಗಭದ್ರಾ ಯೋಜನೆ
ಗೋರೂರುಹೇಮಾವತಿಹೇಮಾವತಿ ಆಣೆಕಟ್ಟು
ಬ್ಯಾಲಲ್ಲಿಮಾಂಜಾನದಿಕಾರಂಜಾ ಯೋಜನೆ
ತರೀಕೆರೆಭದ್ರಾಲಕ್ಕವಳ್ಳಿ
ಸಾಗರಶರಾವತಿಲಿಂಗನಮಕ್ಕಿ
ಜೊಯ್ದಾಕಾಳಿಸೂಪಾ ಆಣೆಕಟ್ಟು
ಆಲಮಟ್ಟಿಕೃಷ್ಣಾಲಾಲ್ ಬಹದ್ದೂರ್ ಶಾಸ್ತ್ರಿ ಆಣೆಕಟ್ಟು
ಮನವಳ್ಳಿಮಲಪ್ರಭಾಮಲಪ್ರಭಾ ಯೋಜನೆ
ಅಬ್ಬಗುಳಿಪುರಚಿಕ್ಕಹೊಳೆಚಿಕ್ಕಹೊಳೆ ಯೋಜನೆ
ಹೇರೂರುಬೆಣ್ಣೆತೊರೆಬೆಣ್ಣೆತೊರೆ ಯೋಜನೆ
ನಾರಾಯಣಪುರಕೃಷ್ಣಾನಾರಾಯಣಪುರ ಆಣೆಕಟ್ಟು
ಸವದತ್ತಿಮಲಪ್ರಭಾನವಿಲುತೀರ್ಥ
ಶಿವಮೊಗ್ಗತುಂಗಾ ಗಾಜನೂರು
ಕುಣಿಗಲ್ಶಿಂಶಾಮಾರಕನಹಳ್ಳಿ
ಕಲಬುರ್ಗಿಗಂಡೋರಿನಾಗಂಡೋರಿನಾಲಾ
ಪಶ್ಚಿಮಘಟ್ಟವಾರಾಹಿವಾರಾಹಿ
ಯಗಚಿಯಗಚಿಯಗಚಿ ಆಣೆಕಟ್ಟು
karnataka pramuka nadigalu in kannada
ಕರ್ನಾಟಕ ನದಿಗಳು | Karnataka Nadigalu In Kannada Best No1 information
ಕರ್ನಾಟಕ ನದಿಗಳು | Karnataka Nadigalu In Kannada Best No1 information

Karnataka Rivers Names in Kannada

ಕರ್ನಾಟಕದ ಪ್ರಮುಖ ನದಿಗಳ ಹೆಸರು ಮತ್ತು ಅದರ ಚುಟುಕು ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ

ಕಾವೇರಿ ನದಿ ಬಗ್ಗೆ ಮಾಹಿತಿ

ದಕ್ಷಿಣ ಗಂಗೆ’ ಯೆಂದು ಪ್ರಸಿದ್ಧಿ ಪಡೆದಿರುವ ಕಾವೇರಿ ಕರ್ನಾಟಕದ ಮಹಾನದಿಯಾಗಿದೆ. ತುಲಾಮಾಸದಲ್ಲಿ ಕಾವೇರಿ ಸ್ನಾನ ಮಾಡಿದರೆ ಸಕಲ ಪಾಪಗಳೂ ನಾಶವಾಗುವುದೆಂಬ ನಂಬಿಕೆಯಿದೆ. ಕೊಡಗರು ಕಾವೇರಿಯನ್ನ ತಮ್ಮ ಕುಲದೈವದಂತೆ ಪೂಜಿಸುತ್ತಾರೆ. ಕಾವೇರಿಯು ಪುರಾಣಗಳಲ್ಲಿ ವರ್ಣಿಸಲಾದ ಸಪ್ತ ಪುಣ್ಯ ನದಿಗಳಲ್ಲಿ ಒಂದು, ಹಾಗೂ ದಕ್ಷಿಣದಲ್ಲಿರುವ ಏಕೈಕ ಮಹಾ ನದಿ.

ಅರ್ಕಾವತಿ ನದಿ

ಭಾರತದ ನದಿಗಳಲ್ಲೊಂದು. ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದಲ್ಲಿ ಉಗಮಿಸುವ ಇದು ಕಾವೇರಿ ನದಿಯ ಉಪನದಿಯಾಗಿದೆ. ಕೋಲಾರ, ರಾಮನಗರ ಮತ್ತು ಬೆಂಗಳೂರು ಗ್ರಾಮೀಣ ಜಿಲ್ಲೆಗಳ ಮೂಲಕ ಹರಿದು ಇದು ಕನಕಪುರದಿಂದ ಸುಮಾರು 45 ಕಿ.ಮೀ ದೂರವಿರುವ ಸಂಗಮದಲ್ಲಿ ಕಾವೇರಿ ನದಿಯನ್ನು ಸಂಗಮಿಸುತ್ತದೆ.

ಅರ್ಕಾವತಿ: ಕಾವೇರಿಯ ಮುಖ್ಯ ಉಪನದಿಗಳಲ್ಲೊಂದು. ಚಿಕ್ಕಬಳ್ಳಾಪುರ ಸಮೀಪದ ನಂದಿದುರ್ಗದಲ್ಲಿ
ಹುಟ್ಟಿ ಬೆಂಗಳೂರು ಜಿಲ್ಲೆಯಲ್ಲಿ ಉತ್ತರದಿಂದ ದಕ್ಷಿಣಕ್ಕೆ ಹರಿಯುತ್ತದೆ. 161 ಕಿಮೀ ಉದ್ದವಿದೆ.

ಕಬಿನಿ ನದಿ

ಕಬಿನಿ ಮತ್ತು ಕಪಿಲಾ ಎಂದೂ ಕರೆಯಲ್ಪಡುವನಂತಹ ಕಬಿನಿ ನದಿಯು ದಕ್ಷಿಣ ಭಾರತದ ನದಿಗಳಲ್ಲಿ ಒಂದು . ಕೇರಳ ರಾಜ್ಯದ ವಯನಾಡ್ ಜಿಲ್ಲೆಯಲ್ಲಿ, ಪನಮರಮ್ ಮತ್ತು ಮಾನಂತವಾಡಿ ನದಿಗಳ ಸಂಗಮದಿಂದ ಹುಟ್ಟಿ ಪೂರ್ವಾಭಿಮುಖವಾಗಿ ಹರಿದು ಕರ್ನಾಟಕದ ತಿರುಮಕೂಡಲು ನರಸೀಪುರದಲ್ಲಿ ಕಾವೇರಿ ನದಿಯನ್ನು ಸೇರುತ್ತದೆ. ಮುಂದೆ ತಮಿಳುನಾಡಿನ ಮೂಲಕ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ.

ಕಾಳಿ ನದಿ

ಕಾಳಿ ನದಿಯು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮೂಲಕ ನದಿ. ದಿಗ್ಗಿ ನದಿಯಿಂದ ಹುಟ್ಟುವ ಕಾಳಿ ನದಿಯು ಸುಮಾರು 4 ಲಕ್ಷ ಜನರ ಜೀವನಾಡಿಯಾಗಿದೆ. ಹಲವಾರು ಅಣೆಕಟ್ಟುಗಳನ್ನು ಕಾಳಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಗಣೇಶಗುಡಿ ಬಳಿ ಇರುವ ಸುಪಾ ಅಣೆಕಟ್ಟು ಕಾಳಿ ನದಿಗೆ ಕಟ್ಟಲಾಗಿರುವ ದೊಡ್ಡ ಅಣೆಕಟ್ಟು ಎನ್ನಲಾಗಿದೆ. ಸುಪಾ ಅಣೆಕಟ್ಟಿನಲ್ಲಿ ಜಲವಿದ್ಯುತ್ ಉತ್ಪಾದಿಸಲಾಗುತ್ತಿದೆ.

ಕುಮದ್ವತಿ

ಕುಮದ್ವತಿ ನದಿಯು ತುಂಗಾಭದ್ರೆಯ ಉಪನದಿಯಾಗಿದೆ . ಇದು ಹೊಸನಗರ ತಾಲೂಕಿನ ಹುಂಚಾದ ಹತ್ತಿರ ಬಿಲೇಶ್ವರ ಬೆಟ್ಟದಲ್ಲಿ ಹುಟ್ಟಿ ಕುಂಸಿ ಮತ್ತು ಶಿಕಾರಿಪುರಗಳ ಮುಲಕ ಉತ್ತರಕ್ಕೆ ಹರಿದು ಹಿರೇಕೇರೂರು ತಾಲ್ಲೂಕನ್ನು ಪ್ರವೇಶಿಸಿ ಹರಿಹರದಿಂದ ಸ್ವಲ್ಪ ಮೇಲೆ ಮುದೇನೂರು ಗ್ರಾಮದ ಹತ್ತಿರ ತುಂಗಾಭದ್ರಾ ನದಿಯನ್ನು ಸೇರುತ್ತದೆ.

ಇದಕ್ಕೆ ಚೊರಾಡಿ ನದಿ ಎಂಬ ಹೆಸರೂ ಇದೆ. ಈ ನದಿಯ ಉದ್ದ ಸುಮಾರು 96 ಕಿಲೋಮೀಟರ್ಗಳು.ಈ ನದಿಯ ಮಾಸೂ ಮಡಗ ಕೆರೆಗೆ ನೀರನ್ನು ಒದಗಿಸುತ್ತದೆ.ಇದಕ್ಕೆ ಅನೇಕ ಕಡೆ ಚಿಕ್ಕ ಪುಟ್ಟ ಅನೆಕಟ್ಟುಗಳನ್ನು ನಿರ್ಮಿಸಿ ನೀರಾವರಿಗಾಗಿ ಬಳಸಲಾಗುತ್ತದೆ.ಮಳೆಗಾಲದಲ್ಲಿ ತುಂಬಿ ಹರಿಯುವ ನದಿ ಮಿಕ್ಕ ಕಾಲದಲ್ಲಿ ಸಾಧಾರಣವಾಗಿರುತ್ತದೆ.

ಕುಮಾರಧಾರ ನದಿ

ಕರ್ನಾಟಕದ ಸುಳ್ಯ ತಾಲೂಕಿನ 2 ಪ್ರಮುಖ ನದಿಗಳಲ್ಲಿ ಒಂದಾದ ಇದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಯನ್ನು ಸಂಗಮಿಸುತ್ತದೆ. ಇದು ಮುಂದೆ ಪಶ್ಚಿಮಾಭಿಮುಖವಾಗಿ ಹರಿದು ಮಂಗಳೂರಿನ ಸಮೀಪ ಅರಬ್ಬಿ ಸಮುದ್ರವನ್ನು ಸೇರುತ್ತದೆ.

ಕರ್ನಾಟಕದ ಪ್ರಮುಖ ದೇವಳಗಳಲ್ಲಿ ಒಂದಾದ ಕುಕ್ಕೆ ಸುಬ್ರಹ್ಮಣ್ಯದ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು ಕುಮಾರಧಾರ ನದಿಯ ಸಮೀಪದಲ್ಲಿ ಸ್ಥಿತವಾಗಿದೆ.

ಕೇದಕ ನದಿ

karnataka nadigalu in kannada

ಕೇದಕ ನದಿಯು ಭಾರತದ ನದಿಗಳಲ್ಲೊಂದಾಗಿದೆ ಕರ್ನಾಟಕದ ಕುಂದಾಪುರ ಮತ್ತು ಗಂಗೊಳ್ಳಿ ಪ್ರದೇಶಗಳ ಮೂಲಕ ಹಾದು ಹೋಗುತ್ತದೆ. ಪಶ್ಚಿಮಾಭಿಮುಖವಾಗಿ ಹರಿದು ಅರಬ್ಬಿ ಸಮುದ್ರವನ್ನು ಸೇರುವ ಮೊದಲು ಇದು ಸೌಪರ್ಣಿಕ, ವರಾಹಿ, ಚಕ್ರ ಮತ್ತು ಕುಬ್ಜ ನದಿಗಳನ್ನು ಸಂಗಮಿಸುತ್ತದೆ.

ಗಂಗವಲ್ಲಿ ನದಿ

ಗಂಗಾವಳ್ಳಿ ನದಿಯನ್ನ ಬೇಡ್ತಿ ನದಿ ಎಂದು ಸಹ ಕರೆಯಲಾಗುತ್ತದೆ .ಇದು ಪಶ್ಚಿಮ ಘಟ್ಟಗಳಿಂದ ಧಾರವಾಡದ ದಕ್ಷಿಣ ಭಾಗದಿಂದ ( ಸೋಮೇಶ್ವರ ದೇವಸ್ಥಾನದ ಸಮೀಪ ) ಹುಟ್ಟಿಕೊಂಡಿದೆ.

ನಂತರ ಅರೇಬಿಯನ್ ಸಮುದ್ರವನ್ನು ಸೇರಲು ಪಶ್ಚಿಮ ದಿಕ್ಕಿನಲ್ಲಿ ಹರಿಯುತ್ತದೆ.ಗಂಗಾ ದೇವಿಯಿಂದ ಗಂಗಾವಲ್ಲಿ ಎಂಬ ಹೆಸರು ಬಂದಿದೆ. ಈ ಪ್ರದೇಶದಲ್ಲಿ ಇರುವ ಗ್ರಾಮವು ಗಂಗವಲ್ಲಿ ಎಂಬ ಹೆಸರನ್ನು ಹೊಂದಿದೆ.

ಈ ನದಿಯು 3,574 ಕಿ.ಮಿ 2 (1,380 ಚದರ ಮೈಲಿ) ನಷ್ಟು ಸಂಗ್ರಹಣಾ ಪ್ರದೇಶವನ್ನು ಹೊಂದಿದೆ ಮತ್ತು ಇದು ಒಟ್ಟು 152 ಕಿ.ಮಿ ( 94 ಮೈಲಿ ) ಉದ್ದವನ್ನು ಗಂಗಾವಳ್ಳಿ ಹೊಂದಿದೆ.

ಗುರುಪುರ ನದಿ

ಗುರುಪುರ ನದಿ ಫಾಲ್ಗುಣಿ ನದಿ ಎಂದೂ ಸಹ ಕರೆಯಲಾಗುತ್ತದೆ. ಗುರುಪುರ ನದಿ ದಕ್ಷಿಣ ಕನ್ನಡ ಜಿಲ್ಲೆಯ ನದಿಗಳಲ್ಲೊಂದು. ಇದು ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ, ಪಶ್ಚಿಮಾಭಿಮುಖವಾಗಿ ಹರಿದು ಮಂಗಳೂರಿನ ಸಮೀಪ ಅರಬ್ಬಿ ಸಮುದ್ರವನ್ನು ಸೇರುತ್ತದೆ.

ಇದು ಮಂಗಳೂರು ನಗರದ ಈಶಾನ್ಯ ಭಾಗದಲ್ಲಿರುವ ಗುರುಪುರ ಎಂಬ ಪಟ್ಟಣದ ದಕ್ಷಿಣ ಭಾಗದಲ್ಲಿ ಪಶ್ಚಿಮಕ್ಕೆ ಹರಿದು ಹಾದುಹೋಗುವ ಕಾರಣ “ಗುರುಪುರ” ಹೆಸರನ್ನು ಪಡೆಯುತ್ತದೆ. ಈ ಊರು ಬೆಂಗಳೂರಿನಿಂದ ಪಶ್ಚಿಮದ ದಿಕ್ಕಿನಲ್ಲಿ 345 ಕಿಲೋಮೀಟರ್ ದೂರದಲ್ಲಿ ಇದೆ.

ನವ ಮಂಗಳೂರು ಬಂದರ ( ರೇವು ) ಮತ್ತು ಮಂಗಳೂರು ರಸಗೊಬ್ಬರ ಕಾರ್ಖಾನೆಗಳು ಗುರುಪುರ ನದಿಯ ಉತ್ತರ ತೀರದಲ್ಲಿ ಇವೆ. ಒಂದು ಕಾಲದಲ್ಲಿ ನೇತ್ರಾವತಿ ನದಿಯು ಮಂಗಳೂರು ನಗರದ ದಕ್ಷಿಣ ಗಡಿಯಾಗಿ ಮತ್ತು ಈ ಗುರುಪುರ ನದಿಯು ಮಂಗಳೂರು ನಗರದ ಉತ್ತರದ ಗಡಿಯಾಗಿ ಹರಿಯುತ್ತಿದ್ದವು. ಈಗ ಮಂಗಳೂರು ನಗರ ಈ ಎರಡು ನದಿಗಳ ಗಡಿ ದಾಟಿ ಬೆಳೆದಿದೆ.

ಘಟಪ್ರಭಾ

ಈ ನದಿಯು ಸಹ್ಯಾದ್ರಿ ಪರ್ವತಶ್ರೇಣಿಯಲ್ಲಿ, ಸಮುದ್ರ ಮಟ್ಟದಿಂದ 884 ಮೀಟರ ಎತ್ತರದಲ್ಲಿ ಜನಿಸುತ್ತದೆ. 283 ಕಿಮೀ ದೂರದಷ್ಟು ಹರಿದ ಬಳಿಕ ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದಿಂದ ಈಶಾನ್ಯ ದಿಕ್ಕಿಗೆ 35 ಕಿ.ಮೀ ದೂರದಲ್ಲಿ ಕೃಷ್ಣಾ ನದಿಯನ್ನು ಸಂಗಮಿಸುತ್ತದೆ. ಘಟಪ್ರಭಾ ನದಿಯ ಜಲಾನಯನ ಪ್ರದೇಶವು 8829 ಚದುರು ಕಿ.ಮೀ ವಿಸ್ತಾರವಾಗಿದೆ.

ಉಪನದಿಗಳು

ಹಿರಣ್ಯಕೇಶಿ ಹಾಗು ತಾಮ್ರಪರ್ಣ ಮಾರ್ಕಂಡೇಯ ನದಿಗಳು ಘಟಪ್ರಭಾದ ಉಪನದಿಗಳಾಗಿವೆ.

karnataka rivers list in kannada

ಆಣೆಕಟ್ಟುಗಳು

ಘಟ ಪ್ರಭಾ ನದಿಗೆ ಗೋಕಾಕ ತಾಲೂಕಿನ ಧೂಪದಾಳ ಗ್ರಾಮದ ಹತ್ತಿರ 1897 ನೆಯ ಇಸವಿಯಲ್ಲಿ ಒಂದು ತಡೆಗೋಡೆಯನ್ನು ನಿರ್ಮಿಸಲಾಗಿದೆ.

ಈ ತಡೆಗೋಡೆಯಿಂದ 71 ಕಿಮೀ ಉದ್ದದ ಕಾಲುವೆ ಮಾಡಲಾಗಿದ್ದು, ಇದರಿಂದ 4,25,000 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸಲಾಗುತ್ತಿದೆ.

ಸ್ವಾತಂತ್ರ್ಯಾನಂತರ ಕರ್ನಾಟಕ ಸರಕಾರವು ಈ ಕಾಲುವೆಯನ್ನು 109 ಕಿ.ಮೀ ವರೆಗೆ ನಿರ್ಮಾಣ ಮಾಡಿದೆ. ಹಾಗು ಹಿಡಕಲ್ ಗ್ರಾಮದ ಹತ್ತಿರ ಕಟ್ಟಲಾದ ಜಲಾಶಯದಿಂದ 659 ದಶಲಕ್ಷ ಘನಮೀಟರುಗಳಷ್ಟು ನೀರನ್ನು ಸಂಗ್ರಹಿಸಲಾಗುತ್ತಿದೆ. ಇದರಿಂದಾಗಿ ನೀರಾವರಿ ಪ್ರದೇಶದ ಒಟ್ಟು ವಿಸ್ತೀರ್ಣವು 1,29,614 ಹೆಕ್ಟೇರ್‍ನಷ್ಟು ವಿಸ್ತಾರವಾಗಿದೆ.

ಚಕ್ರ ನದಿ

ಚಕ್ರ ನದಿ ಕರ್ನಾಟಕದ ಕುಂದಾಪುರ ಮತ್ತು ಗಂಗುಲ್ಲಿ ಪ್ರದೇಶಗಳ ಮೂಲಕ ಹರಿದ ಹೋಗುವ ಚಕ್ರ ನದಿಯು ಭಾರತದ ನದಿಗಳಲ್ಲೊಂದು.

ಪಶ್ಚಿಮಾಭಿಮುಖವಾಗಿ ಹರಿಯುವ ಇದು ಮೊದಲು ಸೌಪರ್ಣಿಕ, ವರಾಹಿ ಮತ್ತು ಕುಬ್ಜ ನದಿಗಳನ್ನು ಕೂಡಿ ಅಂತಿಮವಾಗಿ ಅರಬ್ಬಿ ಸಮುದ್ರವನ್ನು ಸೇರುತ್ತದೆ.

ಚಿತ್ರಾವತಿ ನದಿ

ದಕ್ಷಿಣ ಭಾರತದ ಅಂತರ್ರಾಜ್ಯ ನದಿಯಾಗಿದ್ದು ಇದು ಪೆನ್ನಾರ್ ನದಿಯ ಉಪನದಿಯಾಗಿದೆ. ಕರ್ನಾಟಕದಲ್ಲಿ ಹುಟ್ಟಿ , ಅದು ಆಂಧ್ರಪ್ರದೇಶದ ಕಡೆಗೆ ಹರಿಯುತ್ತದೆ ಮತ್ತು ಅದರ ಜಲಾನಯನ ಪ್ರದೇಶ 5,900 km2. ವಿಸ್ತೀರ್ಣವಿದೆ. ಪುಟ್ಟಪರ್ತಿ ಯಾತ್ರಾಸ್ಥಳವು ಈ ನದಿಯ ದಡದಲ್ಲಿದೆ.

ಚುಲ್ಕಿ ನಾಲಾ

ಚುಲ್ಕಿನಾಲಾ ನದಿ ಇದು ಬೀದರ್ ಜಿಲ್ಲೆಯ ಬಸವಕಲ್ಯಾನ್ ತಾಲ್ಲೂಕಿನಲ್ಲಿರುವ ಚೌಕಿವಾಡಿಯಲ್ಲಿ ಪ್ರಾರಂಭವಾಗುತ್ತದೆ.

ಇದು ಬೀದರ್ ಜಿಲ್ಲೆಯಲ್ಲಿ 42 ಕಿ.ಮೀ.ಗೆ ಹರಿಯುತ್ತದೆ ಮತ್ತು ಕರಣಜ ನದಿಗೆ ಸೇರುತ್ತದೆ.ನೀರಾವರಿ ಮತ್ತು ಕುಡಿಯುವ ನೀರಿನ ಉದ್ದೇಶಗಳಿಗಾಗಿ ಬೀದರ್ ಜಿಲ್ಲೆಯ ಬಸವ ಕಲ್ಯಾಣ ತಾಲ್ಲೂಕಿನ ಮುಸ್ತಪುರ್ ಗ್ರಾಮದ ಹತ್ತಿರ ಒಂದು ಸಂಯೋಜಿತ ಅಣೆಕಟ್ಟು ನಿರ್ಮಾಣವಾಗಿದೆ.

ಅಣೆಕಟ್ಟು 0.93 ಟಿಎಂಸಿ ಅಡಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. 243.55 ಚದರ ಕಿ.ಮೀ.ಇದು ಬಸವಕಲ್ಯಾಣ ಪಟ್ಟಣಕ್ಕೆ ಕುಡಿಯುವ ನೀರನ್ನು ಒದಗಿಸುತ್ತದೆ.

karnataka rivers name list in kannada

ಕರ್ನಾಟಕ ನದಿಗಳು | Karnataka Nadigalu In Kannada Best No1 information
ಕರ್ನಾಟಕ ನದಿಗಳು | Karnataka Nadigalu In Kannada Best No1 information

ತುಂಗಭದ್ರ ನದಿ

ಈ ನದಿಯು ದಕ್ಷಿಣ ಭಾರತದ ಪ್ರಮುಖ ನದಿಗಳಲ್ಲಿ ಒಂದು.

ತುಂಗಾ ನದಿ ಮತ್ತು ಭದ್ರಾ ನದಿಗಳು ಶಿವಮೊಗ್ಗ ಜಿಲ್ಲೆಯ ಕೂಡಲಿಯಲ್ಲಿ ಸೇರಿ, ಈ ನದಿಯು ಪ್ರಾರಂಭವಾಗುತ್ತದೆ.

ಮುಂದೆ ಇದು ಆಂಧ್ರ ಪ್ರದೇಶದ ಕರ್ನೂಲು ಬಳಿ ಇದಕ್ಕಿಂತ ದೊಡ್ಡದಾದ ಕೃಷ್ಣಾ ನದಿಯನ್ನು ಸೇರುತ್ತದೆ.

ಈ ನದಿಯ ಒಟ್ಟು ಉದ್ದ ಸುಮಾರು 610 ಕಿ.ಮಿ.ಗಳು. ಇದರಲ್ಲಿ 380 ಕಿ.ಮಿ.ನಷ್ಟು ಕರ್ನಾಟಕದಲ್ಲಿ ಹರಿಯುತ್ತದೆ.

ದಂಡಾವತಿ ನದಿ

ಈ ನದಿಯು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ಪ್ರವಹಿಸುವ ಸಣ್ಣ ನದಿ.

ದಂಡಾವತಿ ನದಿಯ ಉಗಮವು ಸೊರಬ ತಾಲೂಕಿನ, ಸೊರಬ ಪಟ್ಟಣದಿಂದ ದಕ್ಷಿಣಕ್ಕೆ 15 ಕಿಮೀ ದೂರದಲ್ಲಿರುವ ಕುಪ್ಪೆ ಗ್ರಾಮದ ಹತ್ತಿರವಿರುವ ಕಟ್ಟಿನಕೆರೆಯಾಗಿದೆ,

ಕಟ್ಟಿನಕೆರೆ ಕೋಡಿ ಮತ್ತು ಸುತ್ತಲಿನ ನೀರಿನ ಹರಿವು ಸೇರಿ ದಂಡಾವತಿ ನದಿಯಾಗಿ ಮುಂದೆ ಸಾಗುತ್ತದೆ.

ದಂಡಾವತಿ ನದಿಯು ಉತ್ತರಾಭೀಮುಕವಾಗಿ 55 ಕಿಮೀ ದೂರ ಹರಿದು ಅನವಟ್ಟಿ ಬಳಿಯ ಬಂಕಸಾಣ ಎಂಬ ಸ್ಥಳದಲ್ಲಿ ವರಾದಾ ನದಿಗೆ ಸೇರುತ್ತದೆ.

ಮುಂದೆ ವರದಾ ನದಿಯು ತುಂಗಭದ್ರ ನದಿಗೆ ಸೇರುತ್ತದೆ ನಂತರ ತುಂಗಭದ್ರ ನದಿಯು ಕೃಷ್ಣಾ ನದಿಗೆ ಸೇರಿ ಅಂತಿಮವಾಗಿ ಭಾರತದ ಪೂರ್ವ ಕರಾವಳಿಯಲ್ಲಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ.

ದಂಡಾವತಿ ನದಿಯು ಒಟ್ಟು 1,18,88 ಚ.ಕಿ.ಮೀ ಜಲಾನಯನ ಪ್ರದೇಶವನ್ನು ಹೊಂದಿದೆ

ಸೊರಬದ ಶ್ರೀ ರಂಗನಾಥ ದೇವಸ್ಥಾನವು ದಂಡಾವತಿ ನದಿಯ ಬಲ ದಂಡೆಯ ಮೇಲಿದೆ.

ದಕ್ಷಿಣ ಪಿನಾಕಿನಿ ನದಿ

karnataka nadigalu in kannada

ದಕ್ಷಿಣ ಪಿನಾಕಿನಿ ನದಿ ಕರ್ನಾಟಕ ರಾಜ್ಯದ ನದಿಗಳಲ್ಲಿ ಒಂದಾಗಿದೆ.

ದಕ್ಷಿಣ ಪೆನ್ನಾರ್, ಪೊನ್ನೈಯಾರ್ ಹಾಗೂ ತಮಿಳಿನಲ್ಲಿ ತೆನ್ ಪೆನ್ನೈ ಎಂದೂ ಈ ನದಿಗೆ ಕರೆಯುತ್ತಾರೆ

ಈ ನದಿಯು ಚಿಕ್ಕಬಳ್ಳಾಪುರದ ನಂದಿಬೆಟ್ಟಗಳಲ್ಲಿ ಹುಟ್ಟುತ್ತದೆ.

ಕರ್ನಾಟಕ ಹಾಗೂ ತಮಿಳುನಾಡಿನ ಮೂಲಕ ಹರಿದು ಬಂಗಾಳ ಕೊಲ್ಲಿಯನ್ನು ಬಂದು ಸೇರುತ್ತದೆ.

ದೂಧಗಂಗಾ ನದಿ

ಈ ನದಿ ಕೃಷ್ಣಾ ನದಿಯ ಉಪನದಿಗಳಲ್ಲಿ ಒಂದಾಗಿದೆ.

ಇದು ಪಶ್ಚಿಮ ಘಟ್ಟದ ಸಿಂಧುದುರ್ಗ ಎಂಬಲ್ಲಿ ಹುಟ್ಟುತ್ತದೆ.

ಅಲ್ಲಿಂದ ಪೂರ್ವಾಭಿಮುಖವಾಗಿ ಹರಿದು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆ ಮತ್ತು ಕರ್ನಾಟಕದ ಬೆಳಗಾವಿ ಜಿಲ್ಲೆಗಳಲ್ಲಿ ಹರಿದು ಕೃಷ್ಣಾ ನದಿಯನ್ನು ಸೇರುತ್ತದೆ.

ದೂಧಗಂಗಾ ನದಿಗೆ ಕೊಲ್ಲಾಪುರ ಜಿಲ್ಲೆಯಲ್ಲಿ ಆಣೆಕಟ್ಟು ಕಟ್ಟಿ ಕಾಳಮ್ಮವಾಡಿ ಜಲಾಶಯವನ್ನು ನಿರ್ಮಾಣ ಮಾಡಲಾಗಿದೆ.

ನಂದಿನಿ ನದಿ

ನಂದಿನಿ ನದಿಯ ದಂಡೆಯ ಮೇಲಿರುವ ಕಟೀಲು ದುಗಾ೯ಪರಮೇಶ್ವರಿ ದೇವಸ್ಥಾನ ಇದೆ

ಈ ದೇವಾಲಯವು ನಂದಿನಿ ಎಂಬ ಪುಟ್ಟ ನದಿಯ ಮದ್ಯದಲ್ಲಿರುವ ಒಂದು ಸಣ್ಣ ದ್ವೀಪದಲ್ಲಿ ನೆಲೆಗೊಂಡಿದೆ

ನೇತ್ರಾವತಿ ನದಿ

ಈ ನದಿಯು ದಕ್ಷಿಣ ಕನ್ನಡ ಜಿಲ್ಲೆಯ ಒಂದು ಪ್ರಮುಖ ನದಿ.

ಚಿಕ್ಕಮಗಳೂರು ಜಿಲ್ಲೆಯ ಸಂಸೆಯಲ್ಲಿ ಉಗಮವಾಗುತ್ತದೆ

ನೇತ್ರಾವತಿ ನದಿಯು ಮುಂದೆ ಉಪ್ಪಿನಂಗಡಿಯಲ್ಲಿ ಕುಮಾರಧಾರೆ ನದಿಯೊಂದಿಗೆ ಸಂಗಮವಾಗಿ ಅರಬ್ಬೀ ಸಮುದ್ರವನ್ನು ಸೇರುತ್ತದೆ.

ಕರ್ನಾಟಕದ ಪ್ರಮುಖ ತೀರ್ಥಸ್ಥಳಗಳಲ್ಲಿ ಒಂದಾದ ಧರ್ಮಸ್ಥಳದ ಮೂಲಕ ಈ ನದಿಯು ಹಾದು ಹೋಗುತ್ತದೆ.

ಆದ್ದರಿಂದಲೇ ನೇತ್ರಾವತಿ ನದಿಯನ್ನು ಭಾರತದ ಪವಿತ್ರ ನದಿಗಳಲ್ಲೊಂದು ಎಂದು ಪರಿಗಣಿಸಲಾಗುತ್ತದೆ.

ನೇತ್ರಾವತಿ – ಕರ್ನಾಟಕದ ಕರಾವಳಿಯ ಒಂದು ಮುಖ್ಯ ನದಿ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಂತ ದೊಡ್ಡದು.

ಸ್ಥೂಲವಾಗಿ ಪಶ್ಚಿಮಾಭಿಮುಖವಾಗಿ ಸಾಗಿ, ಒಟ್ಟು ಸುಮಾರು 160 ಕಿಮೀ. ದೂರ ಹರಿದು ಮಂಗಳೂರಿನ ಪಡುಬದಿಯಲ್ಲಿ ಅರಬ್ಬಿ ಸಮುದ್ರವನ್ನು ಸೇರುತ್ತದೆ.

ಪಯಸ್ವಿನಿ ನದಿ

ಪಯಸ್ವಿನಿ ನದಿ ಮಡಿಕೇರಿ ತಾಲೂಕಿನ ಭಾಗಮಂಡಲದ ಪಶ್ಚಿಮ ದಿಕ್ಕಿನಲ್ಲಿ ಉಗಮಗೊಳ್ಳುತ್ತದೆ.

ಇದು ಜೋಡುಪಾಲದ ಮೂಲಕ ಅರಂತೋಡು, ಸುಳ್ಯ, ಪೈಚಾರ್, ಜಾಲ್ಸೂರು, ಪಂಜಿಕಲ್ಲು, ಮದೇವರಗುಂಡ, ಮುರೂರು ಹಾದು ಮುಡೂರಿನಲ್ಲಿ ಕೇರಳವನ್ನು ಸೇರುತ್ತದೆ.

download 8 4

ಪಾಲಾರ್ ನದಿ

ಪಾಲಾರ್ ನದಿಯು ದಕ್ಷಿಣ ಭಾರತದ ನದಿಗಳಲ್ಲೊಂದು.

ಕೋಲಾರ ಜಿಲ್ಲೆಯ ನಂದಿ ಬೆಟ್ಟದಲ್ಲಿ ಹುಟ್ಟುತ್ತದೆ.

ಪಾಲಾರ್ ನದಿಯು ಪಶ್ಚಿಮಾಭಿಮುಖವಾಗಿ ಹರಿದು ಕರ್ನಾಟಕದಲ್ಲಿ 93 ಕಿ.ಮೀ., ಆಂಧ್ರ ಪ್ರದೇಶದಲ್ಲಿ 33 ಕಿ.ಮೀ. ಹಾಗೂ ತಮಿಳು ನಾಡಿನಲ್ಲಿ 222 ಕಿ.ಮೀ. ದೂರವನ್ನು ಪರಿಕ್ರಮಿಸಿ, ಚೆನ್ನೈಯಿಂದ 100 ಕಿ.ಮೀ ದಕ್ಷಿಣಕ್ಕಿರುವ ವಯಲೂರು ಸಮೀಪದಲ್ಲಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ.

ಪೆನ್ನಾರ್ ನದಿ

ಈ ನದಿಯು ದಕ್ಷಿಣ ಭಾರತದ ನದಿಗಳಲ್ಲೊಂದು.

ಕರ್ನಾಟಕ ದ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟಗಳಲ್ಲಿ ಉಗಮಿಸುತ್ತದೆ.

ಇದು ಆಂಧ್ರ ಪ್ರದೇಶದ ಮೂಲಕ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ.

ಕರ್ನಾಟಕದಲ್ಲಿ ಇದನ್ನು ಉತ್ತರ ಪಿನಾಕಿನಿ ಎಂದು ಸಹ ಕರೆಯುತ್ತಾರೆ.

ಮಲಪ್ರಭಾ ನದಿ

ಈ ನದಿಯು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕನಕುಂಬಿ ಗ್ರಾಮದಿಂದ ಪಶ್ಚಿಮಕ್ಕೆ 16 ಕಿಲೊಮೀಟರ ದೂರದಲ್ಲಿ, ಸಮುದ್ರ ಮಟ್ಟದಿಂದ 792 ಮೀಟರ ಎತ್ತರದಲ್ಲಿ ಸಹ್ಯಾದ್ರಿ ಪರ್ವತಶ್ರೇಣಿಯಲ್ಲಿ ಹುಟ್ಟುತ್ತದೆ.

304 ಕಿಲೊಮೀಟರುಗಳವರೆಗೆ ಕಟಗಿನಹಳ್ಳಿ ಗ್ರಾಮದ ಮುಖಾಂತರ ಹರಿದು ಕೃಷ್ಣಾ ನದಿಯನ್ನು, ಸಮುದ್ರಮಟ್ಟದಿಂದ 488 ಮೀಟರ ಎತ್ತರದಲ್ಲಿರುವ ಕೂಡಲ ಸಂಗಮದಲ್ಲಿ ಕೂಡುತ್ತದೆ.

ಕೂಡಲ ಸಂಗಮದ ವರೆಗೆ ಇದರ ಜಲಾನಯನ ಪ್ರದೇಶದ ವಿಸ್ತೀರ್ಣ 11,549 ಚದುರು ಕಿಲೊಮೀಟರುಗಳು.

ಈ ನದಿ ಕರ್ನಾಟಕ ರಾಜ್ಯದ ಪಶ್ಚಿಮದ ಮಲೆನಾಡು ಜಿಲ್ಲೆಗಳಲ್ಲಿ ಹರಿಯುವ ಹೇಮಾವತಿ ನದಿಯ ಪ್ರಮುಖ ಉಪನದಿ.

ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್‍ಗಿರಿ ಬೆಟ್ಟಗಳಲ್ಲಿ ಹುಟ್ಟಿ ದಕ್ಷಿಣ ದಿಕ್ಕಿಗೆ ಹರಿಯುತ್ತದೆ.

ಪಶ್ಚಿಮ ಭಾಗದಿಂದ ಹರಿದುಬರುವ ವಾಟೆಹೊಳೆ ಮತ್ತು ಬೆರೆಂಜಿಹಳ್ಳ ಇದರ ಉಪನದಿಗಳು.

ಪ್ರಖ್ಯಾತ ಬೇಲೂರು ಪಟ್ಟಣದ ಬಳಿ ಹಾದು ಹಾಸನ ತಾಲ್ಲೂಕಿನ ಗೊರೂರು ಬಳಿ ಹೇಮಾವತಿ ನದಿಯನ್ನು ಸೇರುತ್ತದೆ.

ಲಕ್ಷ್ಮಣ ತೀರ್ಥ ನದಿ

ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಉಗಮಿಸುತ್ತದೆ

ಲಕ್ಷ್ಮಣತೀರ್ಥ ನದಿಯು ಭಾರತದ ನದಿಗಳಲ್ಲೊಂದು.

ಲಕ್ಷ್ಮಣ ತೀರ್ಥ ನದಿಯ ಇತಿಹಾಸ

ಈ ನದಿಯು ಪೂರ್ವಾಭಿಮುಖವಾಗಿ ಹರಿದು ಮುಂದೆ ಕೃಷ್ಣರಾಜ ಸಾಗರದ ಸಮೀಪ ಕಾವೇರಿ ನದಿಯನ್ನು ಸೇರುತ್ತದೆ.

ಕೊಡಗು ಜಿಲ್ಲೆಯ ಮುನಿಕಾಡು ಅರಣ್ಯದಲ್ಲಿ ಹುಟ್ಟುವ ‘ಲಕ್ಷ್ಮಣ ತೀರ್ಥ’ ನದಿಯು ಒಟ್ಟು ಉದ್ದ 180 ಕಿ.ಮೀಗಳು.ಈ ನದಿಯು ಕಾವೇರಿ ನದಿಯನ್ನು ಸೇರುತ್ತದೆ.

ವರದಾ ನದಿ

karnataka nadigalu in kannada

ವರದಾ ನದಿ ಯು ಮಧ್ಯ ಕರ್ನಾಟಕದ ಒಂದು ನದಿಯಾಗಿದೆ.

ಶಿವಮೊಗ್ಗ ಜಿಲ್ಲೆಯ ವರದಮೂಲದಲ್ಲಿ ಉಗಮಿಸುತ್ತದೆ

ಈ ನದಿಯು ಕರ್ನಾಟಕದ ಹಾವೇರಿ ಹಾಗೂ ಬಳ್ಳಾರಿ ಜಿಲ್ಲೆಗಳ ಮುಖಾಂತರ ಹರಿದು ಹೋಗುತ್ತಾ, ಗಲಗನಾಥ ಸಮೀಪದಲ್ಲಿ ತುಂಗಭದ್ರಾ ನದಿಯನ್ನು ಸೇರುತ್ತದೆ.

ವರದಮೂಲ ವನ್ನು ತೀರ್ಥ ಗ್ರಾಮ ಎಂದೂ ಸಹ ಕರೆಯಲಾಗುತ್ತದೆ.

ವಾರಾಹಿ ನದಿ

ವಾರಾಹಿ ನದಿ ಪೂರ್ವ ಕರ್ನಾಟಕದ ನದಿಗಳಲ್ಲೊಂದಾಗಿದೆ

ಇದು ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ ಕುಂದಾಪುರದ ಬಸ್ರೂರು ಹಾಗೂ ಗಂಗೊಳ್ಳಿ ಪ್ರದೇಶಗಳ ಮೂಲಕ ಹರಿದು ಹೋಗುತ್ತದೆ.

ಮುಂದೆ ಹರಿಯುತ್ತಾ ಸೌಪರ್ಣಿಕಾ , ಕೇದಕ, ಚಕ್ರ ಹಾಗೂ ಕುಬ್ಜ ನದಿಗಳನ್ನು ಸಂಗಮಿಸಿ, ಅರಬ್ಬಿ ಸಮುದ್ರವನ್ನು ಸೇರುತ್ತದೆ.

ಯದೂರಿನ ಸಮೀಪ ವಿದ್ಯುತ್ ಉತ್ಪಾದನೆಗಾಗಿ ಈ ನದಿಗೆ ಅಡ್ಡಲಾಗಿ ವಾರಾಹಿ ಅಣೆಕಟ್ಟನ್ನು ಕಟ್ಟಲಾಗಿದೆ.

ಇದಕ್ಕೆ ಮಾಣಿ ಅಣೆಕಟ್ಟು ಎಂತಲೂ ಕರೆಯುತ್ತಾರೆ.

ವೇದಾವತಿ ನದಿ

ವೇದಾವತಿ ನದಿಯು ಪಶ್ಚಿಮ ಘಟ್ಟಗಳಲ್ಲಿ ಉಗಮಿಸುತ್ತದೆ

ನಂತರ ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳಲ್ಲಿ ಹರಿದು ತುಂಗಭದ್ರಾ ನದಿಯೊಂದಿಗೆ ಸೇರುತ್ತದೆ.

ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದ ಬಳಿ ಹುಟ್ಟುವ ‘ವೇದಾ’ ನದಿಗೆ ಕಡೂರು ಬಳಿಯ ಮದಗದಕೆರೆಯಿಂದ ಹರಿದು ಬರುವ ‘ಆವತಿ ಹಳ್ಳ’ವು ಸಂಗಮಿಸುವುದರೊಂದಿಗೆ ‘ವೇದಾವತಿ ನದಿ’ಯಾಗಿ ಹರಿದು ಮುಂದೆ ಸಾಗುತ್ತದೆ.

ಹಿರಿಯೂರು ಬಳಿಯ ಮಾರಿಕಣಿವೆ ಎಂಬಲ್ಲಿ ಸರ್ ಎಂ. ವಿಶ್ವೇಶ್ವರಯ್ಯನವರು ಕಟ್ಟಿದ ಮೊದಲ ಅಣೆಕಟ್ಟೆಯಾದ ‘ವಾಣಿವಿಲಾಸಸಾಗರ’ವನ್ನು ವೇದಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.

ಅಲ್ಲಿಂದ ಮುಂದೆ ಹರಿದು ಆಂದ್ರಪ್ರದೇಶದ ಬಳಿಯಲ್ಲಿ ‘ಹಗರಿ ನದಿ’ಯಾಗಿ ಹರಿದು ಮುಂದೆ ತುಂಗಭದ್ರಾ ನದಿಯಲ್ಲಿ ವಿಲೀನವಾಗುತ್ತದೆ.

ಅದಕ್ಕೂ ಮೊದಲು ‘ಸುವರ್ಣಮುಖಿ’ ಎಂಬ ನದಿಯೊಂದು ಈ ನದಿಯೊಂದಿಗೆ ಸಂಗಮಿಸುತ್ತದೆ.

ಶರಾವತಿ

ಶರಾವತಿ ನದಿಯು ಕರ್ನಾಟಕದ ಪ್ರಮುಖ ನದಿಗಳಲ್ಲೊಂದು.

ಈ ನದಿಯು ಭಾರತದ ಪಶ್ಮಿಮ ದಿಕ್ಕಿನಲ್ಲಿ ಹರಿಯುವ ನದಿಗಳಲ್ಲಿ ಒಂದಾಗಿದೆ.

ಆಣೆಕಟ್ಟು 2.4ಕಿ. ಮೀ. ಉದ್ದವನ್ನು ಹೊಂದಿದೆ.

ಹೊನ್ನಾವರದಲ್ಲಿ ಅರಬ್ಬಿ ಸಮುದ್ರಕ್ಕೆ ಸೇರುವ ಶರಾವತಿ ನದಿಯು ಹರಿಯುವ ಉದ್ದ ಸುಮಾರು 128 ಕಿ.ಮೀ. ಹೊನ್ನಾವರದಲ್ಲಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆ ಕರ್ನಾಟಕದಲ್ಲೇ ಅತ್ಯಂತ ಉದ್ದದ ಸೇತುವೆ.

ಜೋಗದಲ್ಲಿ ಶರಾವತಿ 900 ಅಡಿ ಧುಮುಕಿ ಜೋಗ ಜಲಪಾತವನ್ನು ಸೃಷ್ಟಿಸಿದೆ.

ಸಾಗರದ ಬಳಿ ಲಿಂಗನಮಕ್ಕಿಯಲ್ಲಿ ಶರಾವತಿಗೆ ಆಣೆಕಟ್ಟನ್ನು ಕಟ್ಟಲಾಗಿದೆ.

ಆಣೆಕ‌ಟ್ಟೆಯ ಕೆಳಭಾಗದಲ್ಲಿ ಶರಾವತಿ ಜಲವಿದ್ಯುದಾಗಾರ ಯೋಜನೆಯು ಕಾರ್ಯನಿರ್ವಹಿಸುತ್ತಿದೆ.

ದೀರ್ಘಕಾಲದವರೆಗೆ ಕರ್ನಾಟಕದ ವಿದ್ಯುತ್ ಬೇಡಿಕೆಯ ಬಹು ಪಾಲನ್ನು ಈ ಯೋಜನೆಯೇ ಪೂರೈಸುತ್ತಿತ್ತು.

ನದಿ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶವು ಅನೇಕ ಜೀವವೈವಿಧ್ಯತೆಯಿಂದ ಸಮೃದ್ಧವಾಗಿದೆ ಮತ್ತು ಅನೇಕ ರೀತಿಯ ಅಪರೂಪದ ಜಾತಿಯ ಸಸ್ಯ ಮತ್ತು ಪ್ರಾಣಿಗಳಿಗೆ ನೆಲೆಯಾಗಿದೆ.

images 14 2

ಶಾಲ್ಮಲಾ ನದಿ

karnataka nadigalu in kannada

ಈ ನದಿ ಧಾರವಾಡದಲ್ಲಿ ಹುಟ್ಟುವ ಒಂದು ನದಿ.

ಶಾಲ್ಮಲಾ ನದಿ ಅರಬ್ಬೀ ಸಮುದ್ರವನ್ನು ಸೇರುತ್ತದೆ.

ಶಾಲ್ಮಲಾ ನದಿಯ ಉಗಮ ಸ್ಥಾನ ಧಾರವಾಡದ ಸೋಮೇಶ್ವರ ಗುಡಿ.

ಇದು ಊರಿನ ಮಧ್ಯಭಾಗದಿಂದ ಕಲಘಟಗಿ ರಸ್ತೆಯ ದಿಕ್ಕಿನಲಿ ಸುಮಾರು 5 ಕಿಮೀ ದೂರ ಸಾಗಿದರೆ ಬರುತ್ತದೆ.

ಇಂದು ಶಾಲ್ಮಲಾ ಉಗಮ ಸ್ಥಾನದಲ್ಲಿ ನೀರಿದ್ದರೂ, ಧಾರವಾಡದಲ್ಲಿ ಗುಪ್ತಗಾಮಿನಿ. ಈಗ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಹರಿವಿದೆ.

ಶಾಲ್ಮಲಾ ನದಿಯಾ ಉಪನದಿ

ಬೇಡ್ತಿ, ಹುಬ್ಬಳಿ ತಾಲೂಕಿನಲ್ಲಿ ಹುಟ್ಟಿ, ಕಲಘಟಗಿ ಬಳಿ ಶಾಲ್ಮಲಾ ನದಿಯೊಂದಿಗೆ ಸಂಗಮಗೊಳ್ಳುತ್ತದೆ. ಅಲ್ಲಿಂದ ಪೂರ್ವಕ್ಕೆ 25 ಕಿಮೀ ಹರಿದು ಉತ್ತರ ಕನ್ನಡ ಜಿಲ್ಲೆಯನ್ನು ಶಾಲ್ಮಲಾ ಎಂಬ ಹೆಸರಿನೊಂದಿಗೆ ಪ್ರವೇಶಿಸುತ್ತದೆ.

ಶಿಂಶಾ ನದಿ

ದಕ್ಷಿಣ ಭಾರತದ ಪ್ರಮುಖ ನದಿಗಳಲ್ಲಿ ಒಂದಾದ

ಕಾವೇರಿ ನದಿಯ ಉಪನದಿಯಾಗಿದೆ.

ತುಮಕೂರು ಜಿಲ್ಲೆಯ ದೇವ ರಾಯನದುರ್ಗ ಬೆಟ್ಟದ ದಕ್ಷಿಣ ಭಾಗದಲ್ಲಿ ಉಗಮಿಸುವ ಈ ನದಿಯು 221 ಕಿ.ಮೀ. ದೂರವನ್ನು ಕ್ರಮಿಸಿ ಕಾವೇರಿ ನದಿಯನ್ನು ಸೇರುತ್ತದೆ.

ಶಿಂಶಾ ನದಿಯು ಸರಾಸರಿ ಸಮುದ್ರ ಮಟ್ಟದಿಂದ ಸುಮಾರು 914 ಮೀ ಎತ್ತರದಿಂದ ಹರಿದುಬರುತ್ತದೆ.

ಶಿಂಶಾ ನದಿಯು ಹುಟ್ಟಿ ಬರುವ ಸ್ಥಳ ದೇವರಾಯನದುರ್ಗ ಬೆಟ್ಟ

ದೇವರಾಯನದುರ್ಗ ಬೆಟ್ಟದಲ್ಲಿ ನರಸಿಂಹಸ್ವಾಮಿಯ ಎರಡು ದೇವಾಲಯಗಳಿವೆ.

ತುಮಕೂರು ಜಿಲ್ಲೆಯಲ್ಲಿ ಹುಟ್ಟಿ ಬರುವ ಶಿಂಶಾ ನದಿ ಮಂಡ್ಯ ಜಿಲ್ಲೆಯನ್ನು ಸೇರುತ್ತದೆ.

ಮಂಡ್ಯ ಜಿಲ್ಲೆಯಲ್ಲಿನ ಮಳವಳ್ಳಿ ತಾಲೂಕಿನಲ್ಲಿ ಶಿಂಶಾ ನದಿಯ ಒಂದು ಜಲಪಾತವಿದೆ.

ಮರ್ಕೊಣಹಳ್ಳಿ ಅಣೆಕಟ್ಟನ್ನು ಶಿಂಶಾ ನದಿಯ ಅಡ್ಡಲಾಗಿ ಕಟ್ಟಲಾಗಿದೆ.

ಸೀತಾ ನದಿ

ಸೀತಾ ನದಿಯು ನರಸಿಂಹ ಪರ್ವತದ ಬಳಿ ಹುಟ್ಟಿಕೊಂಡಿದೆ

ಅಗುಂಬೆ ಕಾಡುಗಳ ಮೂಲಕ ಹಾದು ಹೆಬ್ರಿ, ಬಾರ್ಕೂರ್ ಬಳಿ ಹರಿಯುತ್ತಾ ಸುವರ್ಣ ನದಿಯ ಸಂಗಮವಾಗಿ ಅರಬ್ಬಿ ಸಮುದ್ರ ಸೇರುತ್ತದೆ.

ಮಳೆಗಾಲದ ಸಮಯದಲ್ಲಿ ನದಿಯಲ್ಲಿ ನೀರಿನ ಹರಿವು ಹೆಚ್ಚಿನ ಮಟ್ಟಕ್ಕೆ ಏರುತ್ತದೆ.

ನದಿ ಮತ್ತು ಅದರ ಸಣ್ಣ ಉಪನದಿಗಳು ಕುಡ್ಲು ಜಲಪಾತ, ಬರ್ಕಾನಾ ಜಲಪಾತ, ಜೊಮ್ಲು ತೀರ್ಥ ಜಲಪಾತ ಮುಂತಾದ ಹಲವಾರು ಜಲಪಾತಗಳನ್ನು ಮಾಡಿದೆ.

ಸೌಪರ್ಣಿಕ ನದಿ

ಅರಬ್ಬಿ ಸಮುದ್ರವನ್ನು ಸೇರುವ ಮೊದಲು ವರಾಹಿ, ಕೇದಕ, ಚಕ್ರ ಮತ್ತು ಕುಬ್ಜ ನದಿಗಳನ್ನು ಸೇರುವ ಸೌಪರ್ಣಿಕ ನದಿಯು ಕರ್ನಾಟಕದ ಕುಂದಾಪುರ ಮತ್ತು ಗಂಗೊಳ್ಳಿ ಪ್ರದೇಶಗಳಲ್ಲಿ ಹರಿಯುವ ಒಂದು ನದಿಯಾಗಿದೆ.

ಹಾರಂಗಿ

ಹಾರಂಗಿ ಕಾವೇರಿ ನದಿಯ ಮುಖ್ಯ ಉಪನದಿಗಳಲ್ಲೊಂದು.

ಇದಕ್ಕೆ ಸುವರ್ಣಾವತಿ ಎಂಬ ಹೆಸರೂ ಇದೆ.

ಈ ನದಿ ಮಡಿಕೇರಿ ತಾಲೂಕಿನ ಬೋರೋ ಬೆಟ್ಟದಲ್ಲಿ ಉಗಮವಾಗಿ ಕುಶಾಲನಗರಕ್ಕೆ ಸ್ವಲ್ಪ ಉತ್ತರದಲ್ಲಿ ಕೂಡಿಗೆ ಎಂಬಲ್ಲಿ ಕಾವೇರಿ ನದಿಯನ್ನು ಸೇರುತ್ತದೆ.

ಹುದುಗೂರು ಎಂಬಲ್ಲಿ ಈ ನದಿಗೆ ಅಡ್ಡಲಾಗಿ 67 ಮೀಟರು ಎತ್ತರದ ಅಣೆ ಕಟ್ಟಲಾಗಿದ್ದು

ಕೊಡಗಿನ ಅತಿ ದೊಡ್ಡ ನೀರಾವರಿ ಯೋಜನೆಯಾಗಿದೆ.

ಹೇಮಾವತಿ

ಹೇಮಾವತಿ ನದಿ ಕಾವೇರಿ ನದಿಯ ಮುಖ್ಯ ಉಪನದಿಗಳಲ್ಲೊಂದು.

ಚಿಕ್ಕಮಗಳೂರು ಜಿಲ್ಲೆಯ ಜಾವಳಿಯ ಪಶ್ಚಿಮ ಘಟ್ಟದ ಶ್ರೇಣಿಯಲ್ಲಿ ಉಗಮಿಸುವ ಈ ನದಿ, ಹಾಸನ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಹರಿದು, ಕೃಷ್ಣರಾಜಸಾಗರದ ಹಿನ್ನೀರಿನಲ್ಲಿ ಕಾವೇರಿ ನದಿಯನ್ನು ಸೇರುತ್ತದೆ.

ಕೃಷ್ಣರಾಜಪೇಟೆ ತಾಲ್ಲೂಕಿನ ಅಂಬಿಗರಹಳ್ಳಿ ಬಳಿಯ ಸಂಗಮದಲ್ಲಿ ಕಾವೇರಿ ನದಿಯಲ್ಲಿ ಸೇರ್ಪಡೆಗೊಳ್ಳುತ್ತದೆ.

ಹಾಸನ ಜಿಲ್ಲೆಯ ಗೊರೂರಿನಲ್ಲಿ ಹೇಮಾವತಿ ನದಿಗೆ ಅಡ್ಡವಾಗಿ ಅಣೆಕಟ್ಟೆಯನ್ನು ಕಟ್ಟಲಾಗಿದೆ.

ಈ ನದಿಯು ಸುಮಾರು 245 ಕಿ.ಮೀ ಉದ್ದ ಹಾಗು 5410 ಕಿ.ಮೀ ಕಾಲುವೆ ಪ್ರದೇಶವನ್ನು ಒಳಗೊಡಿದೆ.

FAQ

ಪೂರ್ವಾಭಿಮುಖವಾಗಿ ಹರಿಯುವ ನದಿಗಳನ್ನು ಹೆಸರಿಸಿ?

1) ಘಟಪ್ರಭಾ. 2) ಮಲಪ್ರಭಾ. 3) ಭೀಮಾ. 4) ತುಂಗಭದ್ರಾ. 5) ಡೋಣಿ.

ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳನ್ನು ಹೆಸರಿಸಿ?

) ಕಾಳಿ. 2) ಶರಾವತಿ. 3) ನೇತ್ರಾವತಿ. 4) ಬೇಡ್ತಿ. 5) ಅಘನಾಶಿನಿ. 6) ವಾರಾಹಿ. 7) ಮಹಾದಾಯಿ.

ಸಂಬಂದಿಸಿದ ಇತರೆ ವಿಷಯಗಳು

1 thoughts on “ಕರ್ನಾಟಕದ ನದಿಗಳ ಪಟ್ಟಿ | Karnataka Rivers Names in Kannada

Leave a Reply

Your email address will not be published. Required fields are marked *