ಶಾತವಾಹನರು । satavahana history in kannada । satavahana dynasty in kannada | ಶಾತವಾಹನರ ಇತಿಹಾಸ

satavahana history in kannada

ಪರಿವಿಡಿ

ಶಾತವಾಹನರು । satavahana history in kannada । satavahana dynasty in kannada

satavahana history in kannada, ಶಾತವಾಹನರ ಇತಿಹಾಸ, Satavahana Dynasty in Kannada, satavahana rajadhani in kannada karnataka

satavahana history in kannada

 • ಕರ್ನಾಟಕವನ್ನು ಆಳಿದ ಮೊದಲ ರಾಜಮನೆತನ
 • ಶಾತವಾಹನ ಶಕೆಯ ಆರಂಭ – ಕ್ರಿ.ಶ.78.
 • ರಾಜಧಾನಿ ಪೈತಾನ (ಪ್ರತಿಷ್ಠಾನ )
 • ರಾಜ್ಯ ಲಾಂಛನ :- ವರಾಹ
 • ಮೌರ್ಯರ ಸಾಮಂತರಾಗಿದ್ದ ಇವರು ಅವರ ಪತನದೊಂದಿಗೆ ದಕ್ಷಿಣದಲ್ಲಿ ಅಧಿಕಾರಕ್ಕೆ ಬಂದು ಕ್ರಿ.ಶ 23 ರದಲ್ಲಿ ಸಾಮ್ರಾಜ್ಯ ಸ್ಥಾಪಿಸಿ ಕ್ರಿ.ಶ. 220 ರ ತನಕ ಆಳಿದರು .
 •  ಇವರ ಮೂಲ ನಿವಾಸ – ಸಾತಹನಿಹಾರ ಅಂದರೆ ಈಗಿನ ಧಾರವಾಡ ಮತ್ತು ಬಳ್ಳಾರಿ ಜಿಲ್ಲೆಯ ಭಾಗ
 • ಶಾತವಾಹನರು ಸುಮಾರು – 460 ವರ್ಷ ಸಾಮ್ರಾಜ್ಯ ಆಳಿದರು .
 • ಇವರನ್ನು ಆಂಧ್ರ ಭೃತ್ಯ ಎನ್ನುವರು ಅಂದರೆ – ಮೌರ್ಯರ ಸೇವಕರಾಗಿದ್ದು , ಆಶೋಕನ ನಂತರ ದಕ್ಷಿಣಕ್ಕೆ ಬಂದು ಸ್ವತಂತ್ರ ರಾಜ್ಯ ನಿರ್ಮಿಸಿದರೆಂದು ತಿಳಿದುಬರುತ್ತದೆ .
 • ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಭೂಮಿಯನ್ನು ದಾನವಾಗಿ ನೀಡಿದ ವಂಶ -ಶಾತವಾಹನರು
 • ಚಿತ್ರದುರ್ಗ ಮತ್ತು ಚಂದ್ರವಳ್ಳಿಯಲ್ಲಿ ನಡೆದ ಭೂ ಸಂಶೋಧನೆಗಳು ಶಾತವಾಹನರ ಬಗ್ಗೆ ಹೆಚ್ಚು ಬೆಳಕು ಬೀರುತ್ತವೆ
 • ಈ ಕಾಲದ ನಾಣ್ಯಗಳು ಚಿತ್ರದುರ್ಗದ ಚಂದ್ರವಳ್ಳಿಯಲ್ಲಿ ದೊರೆತಿದೆ
 • ಶಾತವಾಹನರ ಅಧೀನರಾಗಿ – ಜಾಟರು ( ಬನವಾಸಿ ) ಬಾಣರು ( ಪುರ್ವ ಮೈಸೂರಿನ ಭಾಗ ) ಅಳುಪರು ( ಪಶ್ಚಿಮ ಘಟ್ಟ ಪ್ರದೇಶ ) ಸೇಂದ್ರಕರು ( ನಾಗರಬಂಡ ) ಮತ್ತು ನಳರು ( ಬಳ್ಳಾರಿ ಸುತ್ತಮುತ್ತ ) ಆಳುತ್ತಿದ್ದರು.
 • ಶಾತವಾಹನ ನಂತರ ಕುಂತಲವನ್ನು ಆಳಿದವರೆಂದರೆ – ಚೂಟರು ನಂತರ ಕದಂಬರು ಮತ್ತು ಗಂಗರು ಆಳಿದರು .
 • ಹಿರೇಹಡಗಲಿ ಶಾಸನದ ಪ್ರಕಾರ ಶಾತವಾಹನರ ಮೂಲ – ಶತಾಹನಿರಟ್ಟ ( ಬಳ್ಳಾರಿ )
 • ಅಶೋಕನ 12 ನೇ ಶಾಸನವು ಇವರನ್ನು ಆಂಧ್ರ ಭೃತ್ಯರೆಂದು ಹೆಸರಿಸಿದೆ .
 • ಶಾತವಾಹನರನ್ನು “ ಕುಂತಲ ದೊರೆ “ ಎಂದು ಸಂಭೋದಿಸಿದ ಕೃತಿಯ ಹೆಸರೇನು – ರಾಜ ಶೇಖರ ಕವಿಯ “ಕಾವ್ಯ ಮಿಮಾಂಸೆ “ .
 • ಬನವಾಸಿಯ ಪ್ರಾಚೀನ ಹೆಸರು – ವೈಜಯಂತಿ ಪುರ ( ವಿಜಯ ಪಕಾಕೆಪುರ ) .
 • ಮೂರು ಸಾಗರಗಳ ಒಡೆಯರು ಎಂದು ಕರೆಯಲ್ಪಟ್ಟವರು – ಶಾತವಾಹನರು .
 • ಆಂದ್ರ ಭೃತೃಗಳು ಎಂದು ಕರೆಯಲ್ಪಟ್ಟವರು – ಶಾತವಾಹನರು .
 • ಮೌರ್ಯರ ಪತನಾ ನಂತರ ದಖನ್ ಪ್ರಸ್ಥಭೂಮಿಯಲ್ಲಿ ಪ್ರಪ್ರಥಮ ಐತಿಹಾಸಿಕ ಹಿರಿಯ ಸಾಮ್ರಾಜ್ಯ ವನ್ನು ಸ್ಥಾಪಿಸಿದವರು – ಶಾತವಾಹನರು
 • ಎಲ್.ಡಿ.ಬಾರ್ನೆಟ್ ಪ್ರಕಾರ ಶಾತವಾಹನರ ಮೊದಲ ರಾಜಧಾನಿ ಶೀ ಕಾಕುಲು ಹಾಗೂ ನಂರದ ರಾಜಧಾನಿ – ಧನ್ಯ ಕಟಕ .

ಶಾತವಾಹನರ ರಾಜಕೀಯ ಇತಿಹಾಸ

 • ಶಾತವಾಹನರ ಸಂತತಿಯ ಸ್ಥಾಪಕ:- ಸಿಮುಕ
 • ಮಗದದ ಕಣ್ಣ ವಂಶದ ಕೊನೆಯ ರಾಜ ಸುಶರ್ಮನನ್ನು ಸೋಲಿಸಿದವರು ಸಿಮುಖ
 • ಇವನ ತಮ್ಮ – ಕಂನ್ಹೆ / ಕೃಷ್ಣಮನು – ನಾಸಿಕದಲ್ಲಿ ಬೌದ್ಧ ಗುಹಾಲಯ ನಿರ್ಮಿಸಿದ .
 • ಗೌತಮಿಪುತ್ರನ ನಾಸಿಕ ಶಾಸನದಲ್ಲಿ ಸಿಮುಖನನ್ನು ಏಕಬ್ರಾಹ್ಮಣ ಎಂದು ಕರೆಯಲಾಗಿದ್ದು , ಕ್ಷತ್ರಿಯರ ದರ್ಪ ಮುರಿದವನೆಂದು ವರ್ಣಿಸಿದೆ .
 • 1ನೇ ಶಾತಕರ್ಣಿ
 • ಒಂದನೇ ಶಾತಕರ್ಣಿ ಈತ – ಸಿಮುಖನ ಮಗ .
 • “ ದಕ್ಷಿಣ ಪಥ ಸಾರ್ವಬೌಮ “ ಹಾಗೂ ಅಪ್ರತ್ರಿಹಿತ ಎಂಬ ಬಿರುದುಳ್ಳ ಅರಸ – ಒಂದನೇ ಶಾತಕರ್ಣಿ .
 •  ಅಶ್ವಮೇಧ , ರಾಜಸೂಯಯಾಗ ಆಚರಿಸಿ , ” ದಕ್ಷಿಣಪಥಪತಿ ” ( ದಕ್ಷಿಣಪಥ ಸಾರ್ವಭೌಮ ) ಮತ್ತು ಅಪ್ರತಿಹತ ಎಂಬ ಬಿರುದುಗಳನ್ನು ಧರಿಸಿದ್ದ .
 • ಇವನ ಮಡದಿ – ನಾಗನಿಕ ( ನಾಯನಿಕ ) ಇವಳ ಶಾಸನ – ನಾನಾಘಾಟ್ ಶಾಸನ .
 • ಸಿಮುಖನನ್ನು “ ರಾಜ ಸಿಮುಖ ಶಾತವಾಹನ “ ಎಂದು ವರ್ಣಿಸಿರುವ ಶಾಸನ – ನಾನಾ ಘಾಟ್ ಶಾಸನ .
 • ಸಿಮುಖನಿಗೆ “ ಶಾತವಾಹನ “ ಎಂಬ ಹೆಸರನ್ನು ಕೊಟ್ಟಿರುವ ಗ್ರಂಥ – ಜೈನ ಗ್ರಂಥ
 • ಸಿಮುಖನ ನಂತರ ಅಧಿಕಾರಕ್ಕೆ ಬಂದವರು – ಇವನ ತಮ್ಮ ಕೃಷ್ಣ .

ಹಾಲ

 • ಶಾತವಾಹನರ 17 ನೇ ರಾಜ .
 • ಶಾತವಾಹನ ಶಕೆಯನ್ನು ಆರಂಭಿಸಿದವರು – ಶಾತವಾಹನರು ( ಹಾಲ )
 • ಲೀಲಾವಾಯಿ ಕೃತಿ – ಇವನ ಆಳ್ವಿಕೆ ಬಗ್ಗೆ ವರ್ಣನೆ ನೀಡುತ್ತದೆ .
 • ಲೀಲಾವಾಯಿ ಕೃತಿ ಪ್ರಕಾರ – ಈತ ಸಿಂಹಳ ( ಶ್ರೀಲಂಕಾ ) ಗೆದ್ದು , ಅಲ್ಲಿನ ರಾಜನ ಮಗಳು ಲೀಲಾವತಿಯನ್ನು ಸಪ್ತಗೋದಾವರಿ ಭೀಮಂ ಅಥವಾ ದ್ರಾಕ್ಷಾರಾಮ ಎಂಬ ಸ್ಥಳದಲ್ಲಿ ವಿವಾಹವಾದ .
 • ಹಾಲನ ನಂತರ ಶಕರು ಈ ಸಾಮ್ರಾಜ್ಯದ ಹಲವು ಭಾಗಗಳನ್ನು ವಶಪಡಿಸಿಕೊಂಡರು . ಶಕರ ಆಕ್ರಮಣದಿಂದಾಗಿ ಶಾತವಾಹನರು ಒಂದು ಶತಮಾನ ಕಾಲ ದುರ್ಬಲವಾದರು .
 • ಈತನು ಪ್ರಾಕೃತದಲ್ಲಿ – ಗಾಥಸಪ್ತಶತಿ ಅಥವಾ ಶಟಾಸ್ತಿ ಎಂಬ ಕೃತಿ ಬರೆದಿದ್ದಾನೆ .
 • ಹಾಲನ ಆಸ್ಥಾನ ಕವಿ ಗುಣಾಡ್ಯನು ಪೈಶಾಚಿ ಭಾಷೆಯಲ್ಲಿ ಬೃಹತ್ಕಥಾ ಗ್ರಂಥ ರಚಿಸಿದ್ದಾನೆ . ಈ ಕೃತಿಯನ್ನು ಕ್ಷೇಮೇಂದ್ರನು ಸಂಸ್ಕೃತಕ್ಕೆ ಅನುವಾದಿಸಿದ್ದಾನೆ .
 • ಕ್ರಿ.ಶ. 78 ರ ಶಾಲಿವಾಹನ ಶಕ ವರ್ಷವನ್ನು ಈತ ಆರಂಭಿಸಿದ ಎಂಬುದು ಹಲವರ ಅಭಿಮತ ( ಕುಶಾನರ ರಾಜ ಕಾನಿಷ್ಕ ಆರಂಭಿಸಿದ ಎಂಬ ಅಭಿಪ್ರಾಯವೂ ಇದೆ . )

ಗೌತಮಿ ಪುತ್ರ ಶಾತಕರ್ಣಿ : ಕ್ರಿ.ಶ. 106-130 / ಕ್ರಿ.ಶ. 70-95 

 • ಪ್ರಸಿದ್ಧ ರಾಜ , ಶಾತವಾಹನ ವೈಭವದ ಪುನರ್ ಸ್ಥಾಪಕ .
 • ಇವನ ಕಾಲದಲ್ಲಿ ಶಾತವಾಹನರು ಪುನಃ ಪ್ರಬಲರಾದರು .
 • ಈತನ ತಾಯಿ ಗೌತಮೀ ಬಾಲಶ್ರೀಯು ಕೆತ್ತಿಸಿರುವ ನಾಕ್ ಶಾಸನವು ಈತನನ್ನು ಶಕ , ಯವನ ಮತ್ತು ಪತ್ನವ ನಿರ್ಮೂಲನೆಂದು ವರ್ಣಿಸಿದೆ .
 • ಶತ ಕ್ಷತ್ರಪ ನಹಪಾಣ ಮತ್ತು ಅವನ ಅಳಿಯ ಉಷವದತ್ತನನ್ನು ಕೊಂದು ಕ್ಷತ್ರಪ ವಂಶವನ್ನು ನಿರ್ಮೂಲನೆ ಮಾಡಿದ . ಈ ವಿಜಯದ ಸಂಕೇತವಾಗಿ ನಹಪಗಾನ ನಾಣ್ಯಗಳ ಮೇಲೆ ತನ್ನ ರಾಜ ಚಿಹ್ನೆಯನ್ನು ಪುನಃ ಮುದ್ರಿಸಿ ಆಚರಣೆಗೆ ತಂದ .
 • ಇತರೆ ಬಿರುದುಗಳು – ವರವರ್ಣ ವಿಕ್ರಮ , ಚತುರ ವಿಕ್ರಮ , ಸಹಾರಾತವಂಶ ನಿರವಶೇಷಕದ .
 • ತ್ರೈ ಸಮುದ್ರ ತೋಯಾ ಪಿತಾವಾಹನ ಹಾಗೂ ಶಾತವಾಹನ ಕುಲ ಪ್ರತಿಷ್ಠಾಪಿತ ಎಂಬ ಬಿರುದುಳ್ಳ ಅರಸ -ಗೌತಮೀಪುತ್ರ ಶಾತಕರ್ಣಿ( ನಾಸಿಕ ಶಾಸನದಲ್ಲಿ ಉಲ್ಲೇಖ )
 • ತ್ರೈಸಮುದ್ರತೋಯ ಪೀತವಾಹನದ ಅರ್ಥ – ಮೂರು ಸಮುದ್ರಗಳ ನೀರನ್ನು ಕುಡಿದು ಕುದುರೆಯನ್ನು ವಾಹನವಾಗಿ ಪಡೆದವ
 • ಕ್ರಿ.ಶ. 150 ರ ರುದ್ರಧಾಮನ್‌ನ ಜುನಾಘಡ್ ಶಾಸನದ ಪ್ರಕಾರ ಇವನ ಪ್ರದೇಶಗಳನ್ನು ಶಕದೊರೆ ರುದ್ರರಾಮನ್ ಪುನಃ ವಶಪಡಿಸಿಕೊಂಡನು .
 • ನಾಸಿಕ್‌ನ ( ಮಹಾರಾಷ್ಟ್ರ ) ಜೋಗಲತಂಬಿಯಲ್ಲಿ ದೊರೆತಿರುವ ನಹಪಗನ ಬೆಳ್ಳಿಯ ನಾಣ್ಯಗಳ ಮೇಲೆ ಈತನ ಹೆಸರನ್ನು ಮುದ್ರಿಸಲಾಗಿದೆ .
 • ಬ್ರಾಹ್ಮಣನಾಗಿದ್ದರೂ – ಬೌದ್ಧ ಶಿಲ್ಪಕಲಾ ಬೆಳವಣಿಗೆಗೆ ಪ್ರೋತ್ಸಾಹ ನೀಡಿದ .
 • ಶಕಯವನ ಪಲ್ಲವ ನಿಸೂಧನ ಎಂಬ ಬಿರುದನ್ನು ಹೊಂದಿದವರು – ಗೌತಮೀಪುತ್ರ ಶಾತಕರ್ಣಿ
 • ತಾನು ಗೆದ್ದ ಕೆಲವು ಪ್ರದೇಶಗಳನ್ನು ಉಳಿಸಿಕೊಳ್ಳಲೋಸುಗ ರುದ್ರ ದಾಮನ್‌ನೊಂದಿಗೆ ವೈವಾಹಿಕ ಸಂಬಂಧ ಬೆಳೆಸಿದ
 • ಅಶೋಕನ ಈ ಶಾಸನದಲ್ಲಿ ಶಾತವಾಹನರು ಆಂಧ್ರ ಭೃತ್ಯರು ಎಂದು ಕರೆದಿದೆ. – 12 ನೇ ಶಾತವಾಹನ
ವಶಿಷ್ಟಿಪುತ್ರ ಪ್ರಲುಮಾಯಿ
 • ಶಕದೊರೆ ರುದ್ರಧಾಮನ ಮಗಳನ್ನು ವರಿಸಿದ .
 • ದಕ್ಷಿಣಪಥೇಶ್ವರ , ನವನಗರಸ್ವಾಮಿ ಇವನ ಬಿರುದುಗಳು
 • ನವನಗರ / ಪ್ರತಿಷ್ಠಾಪನವನ್ನು ರಾಜಧಾನಿಯಾಗಿ ಮಾಡಿದ
 • ಗಿರ್ನಾರ್ ( ಜುನಾಗಢ ) ಶಾಸನದ ಪ್ರಕಾರ – ರುದ್ರಧಾಮವನಿಂದ ಎರಡು ಬಾರಿ ಸೋತನು
 • ಅಮರಾವತಿ ಬೌದ್ಧ ಸ್ತೂಪ ನಿರ್ಮಾಣ ಮಾಡಿದ
 • ಮೊದಲ ಬಾರಿಗೆ ಅಂದ್ರವನ್ನು ಗೆದ್ದ .
 • ಪುಲುಮಾಯಿಯ ರಾಜಧಾನಿ – ಬನವಾಸಿ .

.

ಶಾತವಾಹನರ ಕೊಡುಗೆಗಳು

ಶಾತವಾಹನರ ಆಡಳಿತ 
 • ಮೌರ್ಯರ ಆಡಳಿತವನ್ನು ಮುಂದುವರಿಸಿಕೊಂಡು ಬಂದರು .
 • ಶಾತವಾಹನರ ಪ್ರಾಂತ್ಯವನ್ನು ಅಹರಗಳೆಂದು ಕರೆಯುವರು .
 • ಅಹರಗಳ ಮುಖ್ಯಸ್ಥ – ಅಮಾತ್ಮ
 • ಪ್ರತಿ ಅಹರದಲ್ಲೂ, “ ನಿಗಮ ” ಎಂಬ ಪಟ್ಟಣಗಳಿದ್ದವು
 • ಗೌತಮೀಪುತ್ರ ಶಾತಕರ್ಣಿ ಕಾಲದಲ್ಲಿ ವಿಷ್ಣುಪಾಲಿಕ , ಶಿವಸ್ಕಂದ , ದತ್ತ ಸ್ಯಾಮಕ ಮುಂತಾದವರು ಅಮಾತ್ಯರಾಗಿ ಸೇವೆ ಸಲ್ಲಿಸಿದರು .
 • ಉದಾ : 1 ನೇ ಶಾತಕರ್ಣಿಯ ರಾಣಿ ನಾಗನಿಕ ಮತ್ತು ಗೌತಮೀಪುತ್ರ ಶಾತಕರ್ಣಿಯ ತಾಯಿ ಗೌತಮಿಬಾಲಾಶ್ರಿ . 1 ನೇ ಶಾತಕರ್ಣಿಯ ಮರಣದ ನಂತರ ಅವನ ಇಬ್ಬರು ಅಪ್ರಾಪ್ತ ವಯಸ್ಕರಾದ ವೇದಿಶ್ರೀ ಮತ್ತು ಸತಿಶ್ರೀ ಪಟ್ಟಕ್ಕೆ ಬಂದಾಗ ಅವನ ರಾಣಿ ನಯನಿಕ ( ನಾಗನಿಕ ) ಪ್ರತಿನಿಧಿಯಾಗಿ ರಾಜ್ಯಾಡಳಿತ ನಡೆಸಿದಳು .
 • ಶಾತವಾಹನರ ಆಡಳಿತದಲ್ಲಿ ಸ್ತ್ರೀಯರು ಭಾಗವಹಿಸುತ್ತಿದ್ದರು .
 • ಪಟ್ಟಣಗಳ ಆಡಳಿತವನ್ನು “ ನಿಗಮ ಸಭೆಗಳು ನೋಡಿಕೊಳ್ಳುತ್ತಿದ್ದವು .
 • ಗ್ರಾಮದ ಅಧಿಕಾರಿಗಳನ್ನು ಮಹಾ ಆರ್ಯಕರೆಂದು ಕರೆಯಲಾಗುತ್ತಿತ್ತು .
 • ಗ್ರಾಮೀಣ ಪ್ರದೇಶದಲ್ಲಿನ ಸೇವಾಧಿಕಾರಿಯನ್ನು ಗೌಲ್ಮಿಕಎನ್ನುವರು .

ಶಾತವಾಹನರ ರಾಜ್ಯದ ಪ್ರಮುಖ ಆಡಳಿತಾಧಿಕಾರಿಗಳು

 • ನಿಬಂಧಕ ( ದಾಖಲೆ ವ್ಯವಸ್ಥಾಪಕ )
 • ಭಾಂಡಗಾರಿಕ ( ಗ್ರಾಗಾಧಿಕಾರಿ )
 • ಹೇರಣಿಕ ( ಹಣಕಾಸು ಅಧಿಕಾರಿ )
 • ಲೇಖಕ ( ರಾಜ್ಯ ಮುಖ್ಯ ಕಾರ್ಯದರ್ಶಿ )

ಶಾತವಾಹನರ ಸಾಮಾಜಿಕ ಜೀವನ

 • ಗೌತಮೀಪುತ್ರ ಶಾತಕರ್ಣಿಯು ವರ್ಣಸಂಕರವನ್ನು ನಿಷೇಧಿಸಿದ
 • ಗ್ರೀಕರು , ಶಕರು , ಪಾರ್ಥಿನಯನ್ನರು ಮೊದಲಾದ ವಿದೇಶಿಯರು ಭಾರತಕ್ಕೆ ಆಗಮಿಸಿ ಭಾರತೀಕರಣಗೊಂಡು ಹಿಂದೂ ಹೆಸರನ್ನು ಪಡೆದು ಹಿಂದೂ ಮಹಿಳೆಯರನ್ನು ವಿವಾಹವಾದ್ದರಿಂದ ಮಿಶ್ರ ಜಾತಿಗಳು ಸೃಷ್ಟಿಯಾಗಲು ಕಾರಣವಾಯಿತು . ಹೀಗೆ ಜಾತಿ ಉಪಜಾತಿಗಳು ಉಂಟಾದರೂ ಜಾತಿವ್ಯವಸ್ಥೆ ಸಂಕೀರ್ಣವಾಗಿರಲಿಲ್ಲ  ಇವುಗಳನ್ನು ವ್ಯಕ್ತಿಗೆ ಅನುಗುಣವಾಗಿ ವಿಭಜಿಸಲಾಯಿತು .
 • ಅವಿಭಕ್ತ ಕುಟುಂಬಗಳು ಸಾಮಾನ್ಯವಾಗಿದ್ದವು
 • ಸವರ್ಣಿಯರು ಮತ್ತು ಶೂದ್ರರ ನಡುವಿನ ವಿವಾಹ ಸಂಬಂಧವನ್ನು “ ವರ್ಣಸಂಕರ ‘ ( ಮಿಶ್ರ ವಿವಾಹ ) ಎನ್ನಲಾಗುತ್ತಿತ್ತು
 • ಸಮಾಜದಲ್ಲಿ ಸ್ತ್ರೀಯರಿಗೆ ಉನ್ನತ ಸ್ನಾನವಿತ್ತು ಆದರೆ ಉಪನಯನ ದೀಕ್ಷೆ ಇರಲಿಲ್ಲ .
 • ಅಂತರ್ಜಾತಿ ವಿವಾಹಗಳು ಸಾಮಾನ್ಯವಾಗಿದ್ದವು

ಶಾತವಾಹನರ ಆರ್ಥಿಕ ವ್ಯವಸ್ಥೆ

 • ಉಪ್ಪಿನ ಉತ್ಪಾದನೆಯ ಸರ್ಕಾರದ ನಿಯಂತ್ರಣಕ್ಕೆ ಒಳಪಟ್ಟಿತ್ತು
 • ಕೃಷಿಯೇ ಮೂಲ ಕಸುಬು , 16 ಭಾಗ ಕಂದಾಯ ವಿಧಿಸಲಾಗಿತ್ತು
 • ಕೃಷ್ಣ – ಗೋದಾವರಿ ನದಿ ನೀರು – ಕೃಷಿಗೆ ಸಹಕಾರಿಯಾಗಿತ್ತು

ಶಾತವಾಹನರ ವ್ಯಾಪಾರ

satavahana history in kannada
 • ತಮಿಳುನಾಡಿನ ಪಾಂಡಿಚೇರಿ ಸಮೀಪವಿರುವ ಅರಿಕಮೇಡು ರೋಮನ್ನರ ಪ್ರಮುಖ ವ್ಯಾಪಾರ ಕೇಂದ್ರ
 • ರೋಮನ್ನರ ಚಿನ್ನದ ನಾಣ್ಯಗಳು – ಚಂದ್ರವಳ್ಳಿ , ಅರಿಕಮೇಡುವಿನಲ್ಲಿ ದೊರೆತಿವೆ .
 • ಪ್ರಮುಖ ಬಂದರುಗಳು – ಸೋಪಾ , ಕಲ್ಯಾಣ , ಬ್ರೋಚ್ .
 • ಪ್ರಮುಖ ವ್ಯಾಪಾರ ಕೇಂದ್ರಗಳು – ಜುನ್ನಾರ , ಪೈಠಾಣ , ಅಮರಾವತಿ , ನಾಸಿಕ್ ವೈಜಯಂತಿ ( ಬನವಾಸಿ ) ಬಟ್ಕಳ ,ಬಾದಾಮಿ
 • ಆಮದು ವಸ್ತುಗಳ – ಸತು , ಸೀಸ ,ದ್ರಾಕ್ಷಾರಸ , ಗೋಮೇದಕ
 • ರೋಮ್‌ಗೆ ರಫ್ತಾಗುತ್ತಿದ್ದ ಪ್ರಮುಖ ವಸ್ತುಗಳು – ಶ್ರೀಗಂಧ ವಸ್ತುಗಳು , ಆಭರಣಗಳು , ರತ್ನ  ಮತ್ತು ವಜ್ರಗಳು ಚಿನ್ನ ಮತ್ತು ಬೆಳ್ಳಿ ಆಭರಣಗಳು, ಮಸ್ಲಿನ್ ಬಟ್ಟೆಗಳು , ಮೆಣಸು , ಏಲಕ್ಕಿ ,
 • 2 ನೇ ಪುಲುಮಾಯಿ ಕಾಲದಿಂದ ಚೀನ ಮತ್ತು ಜಪಾನ್ ದೇಶಗಳ ಸಂಗಡ ವ್ಯಾಪಾರ ಪ್ರಾರಂಭವಾಯಿತು .
 • ಪೂರ್ವ ತೀರದ , ಧಾನ್ಯ ಕಟಕ ಪ್ರಮುಖ ಅಂತರ್ ದೇಶಿಯ ಮಾರುಕಟ್ಟೆ
 • ರೋಮ್ ಮತ್ತು ಈಜಿಪ್ಟ್ ದೇಶಗಳೊಂದಿಗೆ ವಿದೇಶಿ ವ್ಯಾಪಾರ ಹೊಂದಿದ್ದರು .

ಶಾತವಾಹನರ ವೃತ್ತಿ ಸಂಘಗಳು / ಶ್ರೇಣಿಗಳು

 • ಶ್ರೇಣಿಧರ್ಮ ಎಂಬ ತಮ್ಮದೇ ಆದ ಕಾನೂನು ಸಂಹಿತೆಯನ್ನು ರಚಿಸಿಕೊಂಡು ಮೋಸ ,ವಂಚನೆ ಗಳಿಗೆ ಅವಕಾಶವಿಲ್ಲದಂತೆ ವೃತ್ತಿಗಳನ್ನು ಮುಂದುವರಿಸಿಕೊಂಡು ಹೋಗುತ್ತಿದ್ದವು
 • ಶಕರಾಜ ನಹಪಣನ ಅಳಿಯ ಉಷವದತ್ತನು 200 ಕಹವಣ ನಾಣ್ಯಗಳನ್ನು ಸ್ಥಿರಬಂಡವಾಳವನ್ನಾಗಿಟ್ಟು ಶೇ 1 ರ ಬಡ್ಡಿಯಂತೆ ಹಣವನ್ನು ಸಾಲವಾಗಿ ಕೊಡುತ್ತಿದ್ದ ಮತ್ತು 1000 ಕಹರಣಗಳನ್ನು ಇಟ್ಟು ಶೇ . 3 ರಿಂದ 4 ರ ಬಡ್ಡಿಯಂತೆ 20 ಮಂದಿ ಬೌದ್ಧ ಭಿಕ್ಕುಗಳಿಗೆ ತಲಾ 12 ಕಹಪಣಗಳನ್ನು ವಸ್ತ್ರಗಳಿಗಾಗಿ ಕೊಡುತ್ತಿದ್ದ ಎಂದು ನಾಸಿಕ ಶಾಸನವು ಉಲ್ಲೇಯದೆ
 • ಇವುಗಳು ಸ್ವಾಯುತ್ತ ಸಂಸ್ಥೆಗಳಂತೆ ಕಾರ್ಯನಿರ್ವಹಿಸುತ್ತಿದ್ದವು
 • ಆಧುನಿಕ ಬ್ಯಾಂಕುಗಳಂತೆ ಕಾರ್ಯನಿರ್ವಹಿಸುತ್ತಿದ್ದವು
 • ಠೇವಣಿಗಳನ್ನು ಸ್ವೀಕರಿಸಿ , ನಿಗಧಿಯಾದ ದರದಲ್ಲಿ ಬಡ್ಡಿ ನೀಡುತ್ತಿದ್ದವು
 • ಅನೇಕ ಆರ್ಥಿಕ , ಸಾಮಾಜಿಕ ಕಲ್ಯಾಣ ಕಾರ್ಯಗಳನ್ನು ನೆರವೇರಿಸುತ್ತಿದ್ದವು .
 • ಅನಾಥರಿಗೆ , ದಾರಿಹೋಕರಿಗೆ ಉಚಿತ ಊಟ ಮತಿಯನ್ನು ನೀಡುತ್ತಿದ್ದವು
 • ಸಿದ್ಧಲಪುತ್ರನೆಂಬ ಶ್ರೀಮಂತ  ಕುಂಬಾರನು 500 ಕುಂಬಾರರ ಶಾಲೆಗಳನ್ನು ಹೊಂದಿದ್ದು , ಗಂಗಾನದಿಯ ವಿವಿಧ ಬಂದರುಗಳಿಗೆ ಮಡಿಕೆಗಳನ್ನು ಸಾಗಿಸಲು ದೋಣಿಗಳನ್ನು ಹೊಂದಿದ್ದನು ಎಂಬ ವಿಚಾರ ವೃತ್ತಿ ಸಂಘಗಳ ಗಾತ್ರವನ್ನು ತಿಳಿಸುತ್ತದೆ
 • ವಿವಾಹಿತ ಸ್ತ್ರೀಯು ಬೌದ್ಧ ಧರ್ಮದಲ್ಲಿ ಸನ್ಯಾಸಿಯಾಗಿ ಸೇರ್ಪಡೆಯಾಗಬೇಕಾದರೆ ಆಕೆ ತನ್ನ ಪತಿಯ ಅಪ್ಪಣೆಯ ಜೊತೆಗೆ ಸಂಘದ ಅನುಮತಿಯನ್ನು ಸಹ ಪಡೆಯಬೇಕಿತ್ತು ,
 • ವ್ಯಾಪಾರ , ಕೈಗಾರಿಕೆಗಳ ಸ್ಥಾಪನೆಗೆ ಸಾಲದ ಹಣದ ಪೂರೈಕೆ ಮಾಡುತ್ತಿದ್ದವು

ಶಾತವಾಹನರ ಧರ್ಮ 

 • ಬೌದ್ಧ ಧರ್ಮವು ಸಹ ದಕ್ಷಿಣ ಭಾರತದಲ್ಲಿ ಅಸ್ತಿತ್ವದಲ್ಲಿತ್ತು ,
 • ಶಾತವಾಹನರು ವೈಧಿಕ ಧರ್ಮದ ಅನುಯಾಯಿಗಳಾಗಿದ್ದು ವರ್ಣಾಶ್ರಮ ವ್ಯವಸ್ಥೆಯನ್ನು ಪಾಲಿಸುತ್ತಿದ್ದರು .
 •  ರಾಜರು ಯಜ್ಞಯಾಗಗಳನ್ನು ಮಾಡುತ್ತಿದ್ದರು .
 • ಸಿಂಹ ಧ್ವಜ ಮತ್ತು ಧರ್ಮರೆಂಬ ಇಬ್ಬರು ವಿದೇಶಿಯರು ( ಯವನರು / ಗ್ರೀಕರು ) ಬೌದ್ದ ಧರ್ಣ ಸ್ವೀಕರಿಸಿದ್ದರು .
 •  ಶಾತವಾಹನರ ಮಳವಳ್ಳಿ ಸ್ತಂಭ ಶಾಸನದಲ್ಲಿ ಭೂದಾನ ( ಬ್ರಹ್ಮದೇಯದಾನ ) ದ 8 ವಿಚಾರಗಳಿವೆ .
 • ಜೈನ ಧರ್ಮದ ದಿಗಂಬರ ಗುರುವಾದ ಕುಂದಾ ಕುಂದಾಚಾರ್ಯರು ಶಾತವಾಹನ ರಾಜರ ಗುರುಗಳಾಗಿದ್ದರು .
 • ಶಾತವಾಹನರಿಗಿಂತ ಮುಂಚೆಯೇ ಜೈನಧರ್ಮಕ್ಕೆ ಪ್ರವೇಶಿಸಿತ್ತು .
 •  ಹಾಲನ ಗಾಥಸಪ್ತಶತಿ ಕೃತಿಯು – ಶಿವ ಮತ್ತು ಗೌರಿಯ ಸ್ತೋತ್ರದಿಂದ ಆರಂಭವಾಗುತ್ತದೆ .

ಶಾತವಾಹನರ ಚಲಾವಣೆಯಲ್ಲಿದ್ದ ನಾಣ್ಯಗಳು 

 • ಕುಷಣ : ಬೆಳ್ಳಿ
 • ಪಣ : ದೀನಾರ (ಚಿನ್ನ)
 • ಕರ್ಷಪಣ : ( ತಾಮ್ರ ಮತ್ತು ಬೆಲ್ಲ
 • ನಾಣ್ಯಗಳ ತೂಕ 35 ರಿಂದ 560 ಗ್ರಾಂ .
 • ಗದ್ಯಾಣ : ಸುವರ್ಣ ( ಚಿನ್ನ )
 •  ನಾಣ್ಯಗಳ ಮೇಲಿರುವ ಚಿತ್ರಗಳು – ಆನೆ , ಕುದುರೆ , ಸಿಂಹ ಮತ್ತು ಬಾಣದ ಚಿಹ್ನೆಗಳು

ಶಾತವಾಹನರ ಸಾಹಿತ್ಯ

 • ಮಹಾರಾಷ್ಟ್ರ ಪ್ರಾಕೃತವು ಶಾತವಾಹನರ ರಾಜ ಭಾಷೆ
 • ಇವರ ಕಾಲ ಪ್ರಾಕೃತ ಭಾಷೆಯ ಚಿನ್ನದ ಯುಗ

ಶಾತವಾಹನರ ಪ್ರಮುಖ ಕೃತಿಕಾರರು ಮತ್ತು ಕೃತಿಗಳು

 •  ಹಾಲ : ಗಾಥಸಪ್ತಶತಿ
 • ಕುಂದ ಕುಂದಾಚಾರ್ಯ -ಪ್ರಬಿತಸಾರ
 •  ದ್ವಾದಶ – ಪ್ರೇಕಗ್ರಂಥ
 • ಗುಣಾಢ್ಯ : ಬೃಹತ್ಕಥಾ ( ವೈಶಾಚಿಭಾಷೆ )
 • ಸರ್ವವರ್ಮ – ಕಾತಂತ್ರ ವ್ಯಾಕರಣ
 • ರಾಯನಸಾರ , ಸಮಯಸಾರ , ಪ್ರವಚನಸಾರ

ಶಾತವಾಹನರ ಕಲೆ ಮತ್ತು ವಾಸ್ತುಶಿಲ್ಪ

 • ಶಾತವಾಹನರ ಕಲಾ ಬೆಳವಣಿಗೆಯನ್ನು 3 ಭಾಗಗಳಾಗಿ ವಿಂಗಡಿಸಬಹುದು .
 • ಶಿಲ್ಪಕಲೆ
 • ಚಿತ್ರಕಲೆ
 • ಶಿಲಾಕಟ್ಟಡಗಳು ( ವಾಸ್ತುಶಿಲ್ಪ )

ಶಾತವಾಹನರ ಶಿಲಾಕಟ್ಟಡಗಳಲ್ಲಿ 3 ವಿಧಗಳು

 • ಚೈತ್ಯಾಲಯಗಳು
 •  ವಿಹಾರಗಳು
 • ಸ್ಕೂಪಗಳು

ಶಾತವಾಹನರ ಚೈತ್ರಾಲಯಗಳು ಇವು ಬೌದ್ಧರ ಪ್ರಾರ್ಥನಾ ಮಂದಿರಗಳು

 • ಬಾಜ , ಬೇಡ , ನಾಸಿಕ್ , ಆಂತಾದ 9 ಮತ್ತು 10 ನೇ ಗುಹೆಗಳು
 • ಕಾರ್ಲೆ , ಕೊಂಡಣ್ಣ , ಪೀತಲ್ ಕೋರ .

ಶಾತವಾಹನರ ಚಿತ್ರಕಲೆ

 • ಅಜಂತಾದ 9 ಮತ್ತು 10 ನೇ ಗುಹೆಗಳಲ್ಲಿ ಕಂಡು ಬರುತ್ತವೆ .
 • ಕಲ್ಲ ವಗ್ಗ ಎಂಬ ಗ್ರಂಥದಲ್ಲಿನ 2 ಅಧ್ಯಾಯಗಳು – ಇವರ ಕಾಲದ ಚಿತ್ರಕಲೆಯನ್ನು ವರ್ಣಿಸುತ್ತವೆ .

ಶಾತವಾಹನರ ವಿಹಾರಗಳು 

 • ಇವುಗಳು ಬೌದ್ಧ ಸನ್ಯಾಸಿಗಳ ವಾಸಸ್ಥಳಗಳು ಸಾಮಾನ್ಯವಾಗಿ ಪ್ರತಿ ಚೈತ್ಯಾಲಯ ಬಳಿ ಇವುಗಳು ಇರುತ್ತವೆ . ಇವುಗಳನ್ನು ಸಂಘರಾಮಗಳೆಂತಲೂ ಕರೆಯುವರು .
 • ಅಜಂತಾದ 12 ಗುಹೆ ಶಾತವಾಹನರ ಅತಿ ಪ್ರಾಚೀನ ವಿಹಾರವಾಗಿದೆ .

ಶಾತವಾಹನರ ಸ್ಕೂಪಗಳು 

 • ಬೌದ್ಧ ಸನ್ಯಾಸಿಗಳ ಸಮಾಧಿ ಸ್ಥಳಗಳು ಇವಾಗಿದೆ .
 • ಉದಾ : ಕಾರ್ಲೆ , ಜಗ್ಗಯ್ಯಪೇಟೆ ಭಟ್ಟಿ ಪ್ರೋಲು ಅಮರಾವತಿ ( ಅತಿದೊಡ್ಡ ಸ್ತೂಪ ) ನಾಗಾರ್ಜುನಕೊಂಡ ( ಪ್ರಮುಖ ಸ್ತೂಪ )
ಇತರೆ ಪ್ರಮುಖ ಮಾಹಿತಿ ಲಿಂಕ್ : 
ಕರ್ನಾಟಕದ 31 ಜಿಲ್ಲೆಗಳ ಹೆಸರು ಕನ್ನಡದ ಪ್ರಮುಖ ವಚನಕಾರರು ಮತ್ತು ಅಂಕಿತನಾಮ  

Leave a Reply

Your email address will not be published. Required fields are marked *