ಆಧುನಿಕ ಕರ್ನಾಟಕ ಇತಿಹಾಸ | Modern History of Karnataka In Kannada

ಆಧುನಿಕ ಕರ್ನಾಟಕ ಇತಿಹಾಸ | History of Modern Karnataka In Kannada No1 Best Information

ಆಧುನಿಕ ಕರ್ನಾಟಕ

History of modern Karnataka, ಆಧುನಿಕ ಕರ್ನಾಟಕದ ಇತಿಹಾಸ , modern history in kannada , modern history in kannada pdf , modern history of karnataka pdf , modern history kannada

Modern History of Karnataka In Kannada

ಈ ಲೇಖನದಲ್ಲಿ ಆಧುನಿಕ ಕರ್ನಾಟಕ ಇತಿಹಾಸ ಬವಿದ್ಯಾರ್ಥಿಗಳಿಗೆ ಗ್ಗೆ ಮಾಹಿತಿಯನ್ನು ನೀಡಲಾಗಿದೆ ಇದು ಸಂಪೂರ್ಣವಾಗಿ ಉಚಿತವಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು .

Spardhavani Telegram
ಆಧುನಿಕ ಕರ್ನಾಟಕ ಇತಿಹಾಸ | History of Modern Karnataka In Kannada No1 Best Information
ಆಧುನಿಕ ಕರ್ನಾಟಕ ಇತಿಹಾಸ | History of Modern Karnataka In Kannada No1 Best Information

ಕರ್ನಾಟಕ ಏಕೀಕರಣ ಚಳುವಳಿ

ಮುಖ್ಯಾಂಶಗಳು

ಆಧುನಿಕ ಕರ್ನಾಟಕ ಇತಿಹಾಸ | History of Modern Karnataka In Kannada No1 Best Information
ಆಧುನಿಕ ಕರ್ನಾಟಕ ಇತಿಹಾಸ | History of Modern Karnataka In Kannada No1 Best Information
  • ಕನ್ನಡ ಭಾಷಾ ರಾಜ್ಯ ಉದಯಕ್ಕೆ ಮೊದಲಿಗೆ ನಾಂದಿ ಹಾಕಿದವರು ಡೆಪ್ಯುಟಿ ಚನ್ನಬಸಪ್ಪ ,
  •  1890 ರಲ್ಲಿ ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪನೆ . ( ಸ್ಥಾಪಕರು , ಹ.ರಾ. ದೇಶಪಾಂಡೆ )
  • ಕನ್ನಡ ಕುಲ ಪುರೋಹಿತ ಎಂದು ಹೆಸರಾದ ಆಲೂರು ವೆಂಕಟರಾಯರು ” ಕರ್ನಾಟಕ ಗತವೈಭವ ” ಮತ್ತು ” ಕರ್ನಾಟಕ ವೀರ ರತ್ನಗಳು ” ಕೃತಿಯ ಮೂಲಕ ಕನ್ನಡಿಗರಲ್ಲಿ ಭಾಷೆ , ಸಂಸ್ಕೃತಿ , ಚರಿತ್ರೆ ಬಗ್ಗೆ ಅಭಿಮಾನ ಮೂಡಿಸಿ ಏಕೀಕರಣಕ್ಕೆ ಸ್ಫೂರ್ತಿ ನೀಡಿದರು .
  • 1915 ರಲ್ಲಿ ರಚನೆಯಾದ ಕನ್ನಡ ಸಾಹಿತ್ಯ ಪರಿಷತ್ , 1916 ರಲ್ಲಿ ಧಾರವಾಡದಲ್ಲಿ ಸ್ಥಾಪನೆಯಾದ ಕರ್ನಾಟಕ ಸಭಾಗಳು ಏಕೀಕರಣಕ್ಕೆ ಸ್ಫೂರ್ತಿ ನೀಡಿದವು
  •  1920 ರಲ್ಲಿ ಧಾರವಾಡದಲ್ಲಿ ದಿವಾನ್ ವಿ.ಪಿ. ಮಾಧವರಾಯರ ಅಧ್ಯಕ್ಷತೆಯಲ್ಲಿ ಪ್ರಥಮ ರಾಜ್ಯ ರಾಜಕೀಯ ಅಧಿವೇಶನ ನಡೆಯಿತು . ಇಲ್ಲಿ ತೆಗೆದುಕೊಂಡ ತೀರ್ಮಾನದಂತೆ 1920 ರ ನಾಗಪುರ ಕಾಂಗ್ರೆಸ್ ಅಧಿವೇಶನದಲ್ಲಿ ಆಗ್ರಹ ಮಾಡಿದ್ದರಿಂದ ಕನ್ನಡಿಗರಿಗೆ ಪ್ರತ್ಯೇಕವಾದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ( KPCC ) ಸ್ಥಾಪನೆಗೆ ಅವಕಾಶ ದೊರೆಯಿತು . ಇದರ ಪ್ರಥಮ ಅಧ್ಯಕ್ಷರಾಗಿ ಕರ್ನಾಟಕದ ಕೇಸರಿ ಎಂದು ಹೆಸರಾದ ಗಂಗಾಧರರಾವ್ ದೇಶಪಾಂಡೆಯವರು ನೇಮಕವಾದರು .
  • 1924 – ಸಿದ್ದಪ್ಪ ಕಂಬಳಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ಪ್ರಥಮ ಏಕೀಕರಣ ಸಮ್ಮೇಳನ ನಡೆಯಿತು , ಉಯಿಲಗೋಳ ನಾರಾಯಣರಾಯರ ‘ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ‘ ಗೀತೆಯನ್ನು ಇಲ್ಲಿ ಹಾಡಲಾಯಿತು .
  •  1946 ರಲ್ಲಿ ಬೊಂಬಾಯಿಯಲ್ಲಿ ಅಲ್ಲಿನ ಮುಖ್ಯಮಂತ್ರಿ ಬಿ.ಜಿ. ಖೇರ್‌ ಅಧ್ಯಕ್ಷತೆಯಲ್ಲಿ ಕರ್ನಾಟಕ ಏಕೀಕರಣ ಸಭೆ ನಡೆದಾಗ ಸರ್ದಾರ್ ಪಟೇಲ್‌ರವರು ಉದ್ಘಾಟನಾ ಭಾಷಣ ಮಾಡುತ್ತ “ ಸ್ವತಂತ್ರ ಭಾರತದ ಮೊಟ್ಟಮೊದಲ ಕರ್ತವ್ಯವೆಂದರೆ ಭಾಷಾವಾರು ಪ್ರಾಂತ್ಮಗಳ ರಚನೆ ” ಎಂದು ಘೋಷಿಸಿದರು .
  •  1947 ರಲ್ಲಿ ಎಸ್ . ನಿಜಲಿಂಗಪ್ಪನವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಏಕೀಕರಣ ಮಹಾಸಮಿತಿ ರಚನೆಯಾಯಿತು .
  • ಧಾರ್ ಸಮಿತಿ : 1948 ಜನವರಿಯಲ್ಲಿ ಭಾಷಾವಾರು ರಚನೆಯ ಸಾಧಕಬಾಧಕಗಳ ಬಗ್ಗೆ ಅಧ್ಯಯನ ಮಾಡಲು ಸಂವಿಧಾನಾ ರಚನಾ ಸಭೆಯು ಈ ಸಮಿತಿಯನ್ನು ನೇಮಿಸಿತು . 1948 ಡಿಸೆಂಬರ್‌ನಲ್ಲಿ ಇದು ವರದಿ ಸಲ್ಲಿಸಿ ಭಾಷಾವಾರು ರಚನೆಯನ್ನು ವಿರೋಧಿಸಿತು .
  • ಧಾರ್‌ ಸಮಿತಿ ವರದಿಯಿಂದ ರೊಚ್ಚಿಗೆದ್ದ ಜನತೆಯನ್ನು ಸಮಾಧಾನ ಪಡಿಸಲು 1948 ಡಿಸೆಂಬರ್‌ನಲ್ಲಿ ಜೈಪುರದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಕೈಗೊಂಡ ತೀರ್ಮಾನದಂತೆ ಈ ಸಮಸ್ಯೆ ಬಗೆಹರಿಸಲು ಜೆ.ಪಿ.ಪಿ. ಸಮಿತಿಯನ್ನು ನೇಮಸಿತು .
  •  ಜೆ.ವಿ.ಪಿ. ( ಜವಹರಲಾಲ್ ನೆಹರು , ವಲ್ಲಭಬಾಯಿಪಟೇಲ್‌ ಮತ್ತು ಪಟ್ಟಾಭಿಸೀತಾರಾಮಯ್ಯನವರ ನೇತೃತ್ವದ ಸಮಿತಿ ) ಸಮಿತಿಯು 1949 ಏಪ್ರಿಲ್‌ನಲ್ಲಿ ವರದಿ ಸಲ್ಲಿಸಿ , ಅಂದ್ರ ರಚನೆಯನ್ನು ಮಾತ್ರ ಬೆಂಬಲಿಸಿ ಇತರ ಭಾಷಾವಾರು ಪ್ರಾಂತ್ಯಗಳ ನಿರ್ಮಾಣವನ್ನು ವಿರೋಧಿಸಿತು

History of Modern Karnataka Best Information In Kannada

ಆಧುನಿಕ ಕರ್ನಾಟಕ ಇತಿಹಾಸ | History of Modern Karnataka In Kannada No1 Best Information
ಆಧುನಿಕ ಕರ್ನಾಟಕ ಇತಿಹಾಸ | History of Modern Karnataka In Kannada No1 Best Information
  • 1951 ರಲ್ಲಿ ಕೆ . ಆರ್ . ಕಾರಂತ್ ಅಧ್ಯಕ್ಷತೆಯಲ್ಲಿ ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ ಸ್ಥಾಪನೆಯಾಯಿತು .
  •  1952 ಅಕ್ಟೋಬರ್‌ನಲ್ಲಿ ಆಂಧ್ರಪ್ರದೇಶದ ನಿರ್ಮಾಣಕ್ಕಾಗಿ ಪೊಟ್ಟಿ ಶ್ರೀರಾಮುಲು 58 ದಿನಗಳ ಕಾಲ ಅಮರಣಾಂತ ಉಪವಾಸ ಕೈಗೊಂಡು ಡಿಸೆಂಬರ್ 15 ರಂದು ಮರಣ ಹೊಂದಿದರು . ಆಂಧ್ರದಲ್ಲಿ ತೀವ್ರ ಗಲಭೆಗಳು ಆದಾಗ ನೆಹರುರವರು ಡಿಸೆಂಬರ್ 19 ರಂದೇ ಸಂಸತ್ತಿನಲ್ಲಿ ಆಂಧ್ರ ರಚನೆಯನ್ನು ಘೋಷಿಸಿದರು .
  • ಜಸ್ಟಿಸ್ ಕೆ.ಎನ್ , ವಾಂಚೂ ಕಮಿಟಿ : ಈ ಸಮಿತಿಯನ್ನು ಆಂಧ್ರರಚನೆಗಾಗಿ ನೇಮಿಸಲಾಯಿತು . ಈ ಸಮಿತಿಯ ತೀರ್ಮಾನದಂತೆ ಬಳ್ಳಾರಿ ಮೈಸೂರು ಪ್ರಾಂತ್ಯಕ್ಕೆ ಸೇರ್ಪಡೆಯಾಯಿತು .
  • ಕರ್ನಾಟಕ ರಾಜ್ಯ ರಚನೆಗಾಗಿ ಅಂದಾನಪ್ಪ ದೊಡ್ಡ ಮೇಟಿಯವರು ಧಾರವಾಡದ ತಮ್ಮ ಗ್ರಾಮ ಜಕ್ಕುಲಿಯಲ್ಲಿ ಹಾಗೂ ಶಂಕರಗೌಡ ಅಳವಂಡಿಯವರು ಹುಬ್ಬಳ್ಳಿಯ ಅದರಗುಂಚಿಯಲ್ಲಿ ಉಪವಾಸ ಸತ್ಯಾಗ್ರಹ ಹೂಡಿದರು .
  • 1953 ಡಿಸೆಂಬರ್ 29 ರಂದು ಕೇಂದ್ರ ಸರ್ಕಾರವು ಅಂತಿಮವಾಗಿ ಫಜಲ್ ಅಲಿ ಅಧ್ಯಕ್ಷತೆಯಲ್ಲಿ ರಾಜ್ಯಗಳ ಪುನರ್ ವಿಂಗಡನಾ ಆಯೋಗವನ್ನು ರಚಿಸಿತು ಹೆಚ್.ಎನ್ . ಚಂದ್ರು ಮತ್ತು ಕೆ.ಎಮ್ . ಪಣಿಕ್ಕರ್ ಈ ಆಯೋಗದ ಸದಸ್ಯರಾಗಿದ್ದರು
  • ಫಜಲ್ ಅಲಿ ಕಮಿಟಿಯ ವರದಿಯಂತೆ , 1956 ನವೆಂಬರ್ 1 ರಂದು ನವ ಮೈಸೂರು ರಾಜ್ಯ ಉದಯವಾತು

 

ನವ ಮೈಸೂರು ರಾಜ್ಯಕ್ಕೆ ಸೇರ್ಪಡೆಯಾದ ಪ್ರದೇಶಗಳು

History of Modern Karnataka PDF

ಆಧುನಿಕ ಕರ್ನಾಟಕ ಇತಿಹಾಸ | History of Modern Karnataka In Kannada No1 Best Information
ಆಧುನಿಕ ಕರ್ನಾಟಕ ಇತಿಹಾಸ | History of Modern Karnataka In Kannada No1 Best Information
  •  ಹೈದ್ರಾಬಾದ್ ಪ್ರಾಂತ್ಯದಿಂದ – ಬೀದರ್ ಗುಲ್ಬರ್ಗ , ರಾಯಚೂರು .
  •  ಬಳ್ಳಾರಿ
  •  ಬೊಂಬಾಯಿ ಪ್ರಾಂತ್ಯದಿಂದ – ಬೆಳಗಾವಿ ( ಚಂದಗಡ ತಾಲ್ಲೂಕು ಹೊರತು ಪಡಿಸಿ ) ಬಿಜಾಪುರ – ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳು .
  • ಮುಖ್ಯಮಂತ್ರಿ ದೇವರಾಜ ಅರಸ್‌ರವರ ಕಾಲದಲ್ಲಿ 1973 ನವೆಂಬರ್ 1 ರಂದು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಲಾಯಿತು .
  • ಮದ್ರಾಸ್ ಪ್ರಾಂತ್ಯದಿಂದ – ದಕ್ಷಿಣ ಕನ್ನಡ ಜಿಲ್ಲೆ ( ಕಾಸರಗೋಡು ಮತ್ತು ಅಮಿನಿ ದ್ವೀಪಗಳನ್ನು ಬಿಟ್ಟು ) ಕೊಯಮತ್ತೂರು ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕು .  ಕೊಡಗು

ಇತರೆ ಸಂಬಂದಿಸಿದ ವಿಷಯಗಳು 

Leave a Reply

Your email address will not be published. Required fields are marked *