gadhe mathugalu in kannada, gadegalu in kannada, 100 ಗಾದೆಗಳು in kannada, ಗಾದೆ ಮಾತುಗಳು 100 ಗಾದೆಗಳು, 100 ಗಾದೆಗಳು ಗಾದೆ ಮಾತುಗಳು, 10 ಗಾದೆ ಮಾತುಗಳು, 50 ಗಾದೆ ಮಾತುಗಳು, ಗಾದೆ ಮಾತುಗಳು 50 ಗಾದೆಗಳು, ಗಾದೆ ಮಾತುಗಳು ಕನ್ನಡ
Gadhe Mathugalu in Kannada
ನಮ್ಮ ಟೆಲಿಗ್ರಾಮ್ ಗ್ರೂಪ್ ಗೆ ಈಗಲೇ ಜಾಯಿನ್ ಆಗಿ
Gadhe Mathugalu in Kannada
- ದಡನಿಗೆ ಹಗಲು ಕಳೆಯುವುದಿಲ್ಲ, ಒಳ್ಳೆಯವನಿಗೆ ರಾತ್ರಿ ಸಾಲುವುದಿಲ್ಲ
- ದಾನವಾಗಿ ಸಿಕ್ಕಿದರೆ, ನನಗೆ ಒಂದಿರಲಿ ನಮ್ಮಪ್ಪನಿಗೆ ಒಂದಿರಲಿ
- ದಾರಿಯಲ್ಲಿ ಹೋಗುತ್ತಿದ್ದ ಮಾರಿಯನ್ನು ಕರೆದು ಮನೆಗೆ ಸೇರಿಸಿಕೊಂಡಂತೆ
- ದುಡಿಮೆಯೇ ದುಡ್ಡಿನ ತಾಯಿ ದುಡಿಮೆಯೇ ದೇವರು
- ತನ್ನ ಓಣೇಲಿ ನಾಯಿಯೇ ಸಿಂಹ ತ ತನ್ನ ಮೊಸರನ್ನು ಯಾರೂ ಹುಳಿ ಅನ್ನುವುದಿಲ್ಲ .
- ತನ್ನೂರಲಿ ರಂಗ, ಪರೂರಲಿ ಮಂಗ
- ತಮ್ಮನೇಲಿ ಹಗ್ಗಣ ಸತ್ತು ಬಿದ್ದಿದ್ದರೂ ಬೇರೇ ಮನೇ ಸತ್ತ ನೊಣದ ಕಡೆಗೆ ಬೆಟ್ಟು
- ಬಂದದ್ದೆಲ್ಲಾ ಬರಲಿ ಗೋವಿಂದನ ದಯೆಯೊಂದಿರಲಿ
- ಬಡವ ನೀ ಮಡಗಿದ ಹಾಗಿರು
- ಬಡವನ ಕೋಪ ದವಡೆಗೆ ಮೂಲ
- ಪಾಪಿ ಸಮುದ್ರ ಹೊಕ್ಕರೂ ಮೊಳಕಾಲುದ್ದ ನೀರು
- ಪಾಲಿಗೆ ಬಂದದ್ದೆ ಪರಮಾನ್ನ .
- ಪೀತಾಂಬರ ಉಟ್ಟರೂ ಕೊತ್ತಂಬರಿ ಮಾರೋದು ತಪ್ಪಲಿಲ್ಲ
- ಪುರಾಣ ಹೇಳೊಕೆ ; ಬದನೆಕಾಯಿ ತಿನ್ನೋಕೆ
- ನಮ್ಮ ದೇವರ ಸತ್ಯ ನಮಗೆ ಗೊತ್ತು
- ದಡ್ಡ ಮನುಷ್ಯ ನೆಲಕ್ಕೆ ಭಾರ, ಅನ್ನಕ್ಕೆ ಖಾರ
- ಉಗಮವಾಗದಿರಲಿ ಹಿಂಸೆ, ಹೆಚ್ಚಿಗೆಯಾಗದಿರಲಿ ಆಸೆ
- ಉಗಿದರೆ ತುಪ್ಪ ಕೆಡುತ್ತದೆ, ನುಂಗಿದರೆ ಗಂಟಲು ಕೆಡುತ್ತದೆ
- ಉಗುರಿನಲ್ಲಿ ಹೋಗೋ ಚಿಗುರಿಗೆ ಕೊಡಲಿ ಏಕೆ ?
- ಕುಂಬಾರನ ಮಗಳು ಲಾಭ ಬಂದ ಹೊರತು ಮಡಿಕೆ ಒಡೆಯುವುದಿಲ್ಲ.
- ಕಾಗೆಗೆ ಯಜಮಾನನ ಸ್ಥಾನ ಕೊಟ್ಟರೆ ಮನೆ ತುಂಬಾ ಪಿಷ್ಟ.
- ಇತರರ ಕಣ್ಣಿನ ಕಸ ಕಾಣುವುದು, ತನ್ನ ಕಣ್ಣಿನ ಕಸ ಕಾಣುವುದಿಲ್ಲ.
- ತನ್ನ ಮೊಸರನ್ನು ಯಾರೂ ಹುಳಿ ಅನ್ನುವುದಿಲ್ಲ.
- ನಾನು ಅಗೆಯುವಲ್ಲಿ ಕಲ್ಲು, ಅಜ್ಜ ಅಗೆಯುವಲ್ಲಿ ಮಣ್ಣು.
- ದಡ್ಡ ಮನುಷ್ಯ ನೆಲಕ್ಕೆ ಭಾರ, ಅನ್ನಕ್ಕೆ ಖಾರ.
- ದಡ್ಡನಿಗೆ ಹಗಲು ಕಳೆಯುವುದಿಲ್ಲ, ಒಳ್ಳೆಯವನಿಗೆ ರಾತ್ರಿ ಸಾಲುವುದಿಲ್ಲ.
- ಹುಲಿಯ ಬಣ್ಣವನ್ನು ಮೆಚ್ಚಿ, ನರಿ ತನ್ನ ಕೂದಲನ್ನು ಭಸ್ಮ ಮಾಡಿಕೊಂಡಂತೆ.
- ಬಾಯಲೆಲ್ಲಾ ವೇದಾಂತ, ಮಾಡುವುದೆಲ್ಲಾ ರಾದ್ಧಾಂತ.
- ತಿನ್ನಲು, ಉಣ್ಣಲು ಇದ್ದರೆ ಯಾವತ್ತೂ ನೆಂಟರು.
- ಶರೀರಕ್ಕೆ ಸುಖ, ಹೊಟ್ಟೆಗೆ ದುಃಖ.
- ನೂರಾರು ರೋಗಿಗಳನ್ನು ಕೊಂದು ಒಬ್ಬ ವೈದ್ಯ ಆದಂತೆ !
- ವಿವಿಧ ರೋಗಗಳಿಗೆ ಮದ್ದಿವೆ, ಹೊಟ್ಟೆ ಉರಿಗೆ ಮದ್ದಿಲ್ಲ.
- ಅಡಿಕೆಕಾಯಿಯನ್ನು ಚೀಲದೊಳಗೆ ಹಾಕಬಹುದು, ಮರ ಆದ ನಂತರ ಹಾಕಬಹುದೇ?
- ಲಾಭ ನೋಡಿ ಬಾಳೆ ಹಣ್ಣು ತಿಂದಂತೆ.
- ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು.
- ಹತ್ತು ಮಕ್ಕಳ ತಾಯಿ ದಾರಿಯಲ್ಲಿ ಸಿಕ್ಕಿದ್ದನ್ನು ತಿಂದಂತೆ.
- ತಾಯಿಯನ್ನು ಹೊಡೆಯಬಾರದು, ಗುಬ್ಬಿಯ ಗೂಡನ್ನು ತೆಗೆಯಬಾರದು.
- ನಾಯಿಯು ನಮ್ಮನ್ನು ಕಚ್ಚಿದರೆ ನಾಯಿಯನ್ನು ಕಚ್ಚಲು ನಮ್ಮಿಂದ ಆಗುವುದೇ?
- ಬೆಲ್ಲ ಇದ್ದಲ್ಲಿ ನೊಣ ತಿರುಗಾಡಿದಂತೆ.
- ಹುಣಸೆ ಹುಳಿಯೆಂದು ಅಂಬಡೆ ತಿಂದ ಹಾಗೆ.
- ಮೃತ್ಯು ಬಂದ ಮೇಲೆ ವೈದ್ಯ ಬಂದ.
- ಶಸ್ತ್ರದಿಂದಾದ ಗಾಯ ಮಾಯುತ್ತದೆ, ನಾಲಿಗೆಯಿಂದಾದ ಗಾಯ ಮಾಯುವುದಿಲ್ಲ.
- ಚರ್ಮ ಹೋದರೂ ಪರವಾಗಿಲ್ಲ, ಕಾಸು ಹೋಗಬಾರದು ಎಂದಂತೆ.
- ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ ಹೇಳಿದ ಹಾಗೆ.
Gadhe Mathugalu in Kannada
- ಉಂಡಿದ್ದು ಹೊಟ್ಟೆಗಾಗಿ, ಮಾಡಿದ್ದು ಬಟ್ಟೆಗಾಗಿ.
- ವಿಶ್ವಾಸಿ ನೀನಾಗು, ಘಾತುಕಕ್ಕೆ ಬಗ್ಗದೆ ಮುನ್ನುಗ್ಗು.
- ಹೆಂಡತಿಯ ಮಾತು ಆಗದಿರಲಿ ಕೊಯ್ದುಕೊಳ್ಳುವಂತೆ ಕತ್ತು.
- ಕಣ್ಣಿಗೆ ಕಂಡದ್ದೆಲ್ಲಾ ನುಣ್ಣಗಿರುವುದಿಲ್ಲ.
- ನಿನ್ನದಲ್ಲ ಸರ್ವ ಆಸ್ತಿ, ಒಳ್ಳೆಯದಲ್ಲ ಗರ್ವ ಜಾಸ್ತಿ.
- ಮನಸ್ಸು ಇಲ್ಲದಿದ್ದರೆ ಗಟ್ಟಿ, ಎಲ್ಲವೂ ಮೂರಾಬಟ್ಟಿ.
- ಮಾಡಿ ಉಣ್ಣು ಬೇಡಿದಷ್ಟು, ತಗಾದೆ ಮಾಡದೇ ಉಣ್ಣು ನೀಡಿದಷ್ಟು.
- ಒಣ ಮಾತು ಒಣಗಿದ ಹುಲ್ಲು, ಒಳ್ಳೆಯ ಮಾತು ಬೆಳ್ಳಗಿನ ಹಾಲು
- ತತ್ವದಲ್ಲಿ ಸತ್ವ ಹುಡುಕು, ವ್ಯಥೆಯಲ್ಲಿ ಕಥೆ ಹುಡುಕು.
- ಇಲಿ ಸಿಕ್ಕರೆ ಬೆಕ್ಕು ಆಗುವುದು ಹುಲಿ.
- ಕಾಗೆಯ ಕೈಯಲ್ಲಿ ಕೊಟ್ಟರೆ ಕಾರಭಾರ, ಅದು ಮಾಡುವುದೇ ಉಪಕಾರ?
- ಹೋಗುವುದು ಮೂಡಿದ ಹೊತ್ತು, ಹೋಗೋದಿಲ್ಲ ಆಡಿದ ಮಾತು.
- ದೈವ ಕಾಡುವುದು ವಿಧಿಗಾಗಿ, ನೀರು ಸಮುದ್ರ ಸೇರುವುದು ನದಿಗಾಗಿ.
- ಬಡವರ ಕಣ್ಣೀರಿಗೆ ಕರುಣೆ ಬಂದೀತೆ ಬೆಣ್ಣೆಗೆ?
- ಸಲುಗೆ ಕೊಟ್ಟರೆ ಸಾಕೂ ಹೆಗ್ಗಣವೂ ಸಹ ಏರುವುದು ಹೆಗಲಿಗೆ.
- ಹುಟ್ಟಿದ ಮಗು ತರುವುದು ತೊಟ್ಟಲಿಗೆ ನಗು.
- ಸ್ವಾರ್ಥ ಉಳಿಸಿದವ ಪಾಪಾತ್ಮ, ನಿಸ್ವಾರ್ಥ ಗಳಿಸಿದವ ಪುಣ್ಯಾತ್ಮ.
- ಬೇಸರವಿರಬಾರದು, ಅವಸರ ಮಾಡಬಾರದು.
- ಎಚ್ಚರ ತಪ್ಪಿ ಮಾತನಾಡಬಾರದು, ಹುಚ್ಚನಂತೆ ವರ್ತಿಸಬಾರದು.
- ಬಿಡುಕು ಮಾತಿಗೆ ಮಾಡಿಕೊಳ್ಳದಿರು ಕೆಡುಕು.
- ಹಾಲಿಗೆ ಹುಳಿ ಹಿಂಡಿದರೆ ಮೊಸರು, ಮಣ್ಣಿಗೆ ನೀರು ಹಾಕಿದರೆ ಕೆಸರು.
- ಗದ್ದೆ ಸುಟ್ಟರೂ ಹಾಳಾಗದು ಗಾದೆ.
- ನಿನ್ನಲ್ಲಿರುವ ಮಾನ ನಿನಗೆ ಕೊಡುವುದು ಬಹುಮಾನ.
- ರಾವಣನ ಮಾತಿಗೆ ಮನಸೋತವ, ರಾಮನ ಮಾತಿಗೆ ಜಾಣನಾಗುವನೇ?
- ಮನೆಯೆಂಬ ಮರ ಮುರಿಯಬಾರದು, ಮನಸ್ಸೆಂಬ ಮಾರ್ಗ ಕತ್ತರಿಸಬಾರದು.
- ದುಷ್ಟರ ಸಂಗದಿ ನೆರಳು ಕೊಯ್ಯದೆ ಬಿಡದು ಕೊರಳು.
- ನೀನಾಗದೆ ರಣಹೇಡಿ, ಕೀರ್ತಿ ಪಡೆ ಪ್ರಾಣ ನೀಡಿ.
- ನಿನ್ನಲ್ಲಿ ನೀ ಹುಡುಕು, ಅರಿಷಡ್ವರ್ಗಗಳ ಹೊರ ಹಾಕು.
- ಸಜ್ಜನರ ಮಾತು ಸಿಹಿ, ದುರ್ಜನರ ತುತ್ತು ಕಹಿ.
- ಬುದ್ಧಿ ಇದ್ದವನಲ್ಲಿ ಶ್ರದ್ಧೆ, ನಿದ್ದೆ ಬಾರದವನಲ್ಲಿ ವಿದ್ಯೆ.
- ಉಗಮವಾಗದಿರಲಿ ಹಿಂಸೆ, ಹೆಚ್ಚಿಗೆಯಾಗದಿರಲಿ ಆಸೆ.
- ನಾಳೆ ಎಂದವನಿಗೆ ಹಾಳು, ಇಂದೇ ಎಂದವನಿಗೆ ಬೀಳಾಗದು ಬಾಳು.
- ಆಳಾಗದವ ಅರಸನಲ್ಲ, ಹಟ ಹಿಡಿದವ ಸಾಮ್ರಾಟನಲ್ಲ.
- ಮಾಟ ಮಾಡಿದೋನ ಮನೆ ಹಾಳು.
- ಒಬ್ಬರ ಕೂಳು ಇನ್ನೊಬ್ಬರ ಕುತ್ತು.
- ಒಳಿತಾಗಿ ಮುಗಿದಿದ್ದೆಲ್ಲವೂ ಒಳ್ಳೆಯದೇ.
- ಹೊಳೆಯುವುದೆಲ್ಲಾ ಚಿನ್ನವಲ್ಲ.
- ಓಡಿದವನಿಗೆ ಓಣಿ ಕಾಣಲಿಲ್ಲ, ಹಾಡಿದವನಿಗೆ ಹಾದಿ ಕಾಣಲಿಲ್ಲ.
- ಬರಿಗೈಯವರ ಬಡಿವಾರ ಬಹಳ.
- ಎಲ್ಲ ಕೆಡುಕಿಗೂ ಮೂಲ ಹೊಟ್ಟೆಕಿಚ್ಚು.
- ಸ್ವರ್ಗದಲ್ಲಿ ಸೇವೆಗೈಯುವುದಕ್ಕಿಂತ ನರಕದಲ್ಲಿ ಆಳುವುದೇ ಲೇಸು.
- ಅರೆಗೊಡದ ಅಬ್ಬರವೇ ಬಹಳ.
- ಮರಿ ಮಾಡುವ ಮೊದಲೇ ಮೊಟ್ಟೆಗಳನ್ನು ಎಣಿಸಬೇಡ.
- ಆಪತ್ತಿಗಾದವನೇ ನಿಜವಾದ ಗೆಳೆಯ.
- ಇಂದಿನ ಸೋಲು ನಾಳಿನ ಗೆಲುವು.
- ಧೈರ್ಯವಿದ್ದವನಿಗೆ ದೈವವೂ ಅನುಕೂಲ.
- ದುಡ್ಡಿಗಿಂತ ದೊಡ್ಡ ಹೆಸರೇ ಉತ್ತಮ.
- ಪ್ರಯತ್ನಕ್ಕೆ ಪರಮೇಶ್ವರನೂ ಸಹಾಯ ಮಾಡುವನು.
- ಉತ್ತಮವಾದ ನಗು ನೇಸರನ ಮಗು.
- ಸದಾಚಾರಣೆಯ ಉದಾಹರಣೆಯೇ ಉತ್ತಮವಾದ ಉಪದೇಶ.
- ಪ್ರಾಮಾಣಿಕತೆಯಿಂದಲೇ ಪಾರಮಾರ್ಥ
- ಕರೆದುಣ್ಣುವ ಕೆಚ್ಚಲನ್ನು ಕೊರೆದುಂಡ ಹಾಗೆ.
- ಉದ್ದುದ್ದ ಮಾತಿನವರ ಮೊಳಕೈ ಮೊಂಡ.
- ಕಿಡಿ ಸಣ್ಣದಾದರೂ ಕಾಡೆಲ್ಲವನ್ನು ಸುಡುತ್ತದೆ.
- ನೋಡಿ ನಡೆದವರಿಗೆ ಕೇಡಿಲ್ಲ.
ಇತರೆ ಸಂಬಂದಿಸಿದ ವಿಷಯಗಳು
ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ
ಮನಸ್ಸಿದ್ದರೆ ಮಾರ್ಗ ಗಾದೆ ಮಾತು ವಿವರಣೆ
ಕೃಷಿ ಹಾಗೂ ಮಳೆಗೆ ಸಂಬಂಧಿಸಿದ ಗಾದೆ ಮಾತುಗಳು
ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಗಾದೆ
ಇತರೆ ವಿಷಯಗಳು
- 10ನೇ ತರಗತಿ ಭಗತ್ಸಿಂಗ್ ಕನ್ನಡ ನೋಟ್ಸ್
- ಸರ್.ಎಂ. ವಿಶ್ವೇಶ್ವರಯ್ಯನವರ ಬಗ್ಗೆ
- ಭಾಗ್ಯಶಿಲ್ಪಿಗಳು ಪಾಠದ ಸಾರಾಂಶ
- 10ನೇ ತರಗತಿ ಯುದ್ಧ ಪಾಠದ ಸಾರಾಂಶ
- ಶಬರಿ ಪಾಠದ ಸಾರಾಂಶ ಕನ್ನಡ
- ಲಂಡನ್ ನಗರ ಪಾಠದ ಪ್ರಶ್ನೆ ಉತ್ತರಗಳು
- ಶಬರಿ ಪಾಠದ ಪ್ರಶ್ನೆ ಮತ್ತು ಉತ್ತರ
- 10ನೇ ತರಗತಿ ಕನ್ನಡ ಶಬರಿ ಪಾಠದ ಪ್ರಶ್ನೋತ್ತರಗಳು
- 10th ಹಸುರು ಪದ್ಯ ನೋಟ್ಸ್