ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ । Kannada Gadegalu With Explanation In Kannada

ಕನ್ನಡ ಗಾದೆಗಳು ಮತ್ತು ವಿವರಣೆ Gadegalu in Kannada

ಕನ್ನಡ ಗಾದೆಗಳು ಮತ್ತು ವಿವರಣೆ, 50 Gadegalu in Kannada,100 Gadegalu in Kannada With Explanation Gade Mathu in Kannada With Explanation in Kannada, ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ Pdf free Download

ಪರಿವಿಡಿ

ಕನ್ನಡ ಗಾದೆಗಳು ಮತ್ತು ವಿವರಣೆ

Spardhavani Telegram
ಕನ್ನಡ ಗಾದೆಗಳು ಮತ್ತು ವಿವರಣೆವೀಕ್ಷಿಸಿ Download PDF
ಮನಸಿದ್ದರೆ ಮಾರ್ಗ ಗಾದೆ ಮಾತು ಪ್ರಬಂಧ ವಿಸ್ತರಣೆವೀಕ್ಷಿಸಿDownload PDF
ತಾಳಿದವನು ಬಾಳಿಯಾನು ಗಾದೆ ಮಾತುವೀಕ್ಷಿಸಿDownload PDF
  • ತಾಳಿದವನು ಬಾಳಿಯಾನು ಗಾದೆ ಮಾತು ವಿವರಣೆ
  • ಕಾಯಕವೇ ಕೈಲಾಸ ಗಾದೆ ಮಾತು ವಿವರಣೆ
  • ಕೈ ಕೆಸರಾದರೆ ಬಾಯಿ ಮೊಸರು ಗಾದೆ ಮಾತು ವಿವರಣೆ
  • ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಗಾದೆ ಮಾತು
  • ಆರೋಗ್ಯವೇ ಭಾಗ್ಯ ಗಾದೆ ಮಾತು
  • ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಗಾದೆ ಮಾತು ವಿವರಣೆ
  • ಹಿತ್ತಲ ಗಿಡ ಮದ್ದಲ್ಲ ಗಾದೆ ಮಾತು ವಿವರಣೆ
  • ದೂರದ ಬೆಟ್ಟ ನುಣ್ಣಗೆ ಗಾದೆ ಮಾತು ವಿವರಣೆ
  • ಮನಸ್ಸಿದ್ದರೆ ಮಾರ್ಗ ಗಾದೆ ಮಾತು ಕನ್ನಡ ವಿವರಣೆ
  • ಗುಣ ನೋಡಿ ಗೆಳೆತನ ಮಾಡು ಗಾದೆ ಮಾತು ವಿವರಣೆ
  • ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು
  • ಅಂಕೆ ಇಲ್ಲದ ಕಪಿ ಲಂಕೆ ಸುಟ್ಟಿತು

Kannada Gadegalu With Explanation In Kannada

ಕನ್ನಡ ಗಾದೆಗಳು ಮತ್ತು ವಿವರಣೆ । Gadegalu in Kannada Best No1 Gade Mathugalu
ಕನ್ನಡ ಗಾದೆಗಳು ಮತ್ತು ವಿವರಣೆ । Gadegalu in Kannada Best No1 Gade Mathugalu

ತಾಳಿದವನು ಬಾಳಿಯಾನು ಗಾದೆ ಮಾತು ವಿವರಣೆ

ತಾಳಿದವನು ಬಾಳಿಯಾನು ಮನುಷ್ಯನ ಸಾಮಾನ್ಯ ಗುಣವೆಂದರೆ ಒಮ್ಮೆಲೇ ಎಲ್ಲವನ್ನೂ ಸಾಧಿಸಿಬಿಡಬೇಕೆಂಬುದು . ಹೇಗಾದರೂ ಮಾಡಿ ಆದಷ್ಟು ಬೇಗ ಎತ್ತರಕ್ಕೆ ಬೆಳೆಯಬೇಕು , ಸಮಾಜದಲ್ಲಿ ವಿಶೇಷ ಗೌರವ ಸಂಪಾದಿಸಬೇಕು ಎಂಬುದೇ ಆಗಿದೆ . ಆದರೆ ಇವುಗಳನ್ನು ಪಡೆಯಲು ಕೇವಲ ಮಾತಿನಿಂದ ಸಾಧ್ಯವಾಗದು .

ಅದಕ್ಕೆ ಸಮಯ ಬರಬೇಕು . ಪ್ರಯತ್ನ ನಿರಂತರವಾಗಿ ಸಾಗಬೇಕು ಎಂಬುದು ಈ ಗಾದೆಯ ಸಾಮಾನ್ಯ ಅರ್ಥ . ಮನುಷ್ಯ ಸಮಾಜ ಜೀವಿ . ಸಮಾಜದಲ್ಲಿ ಅವನು ಎಲ್ಲರೊಡನೆ ಬೆರೆತು ಬಾಳಬೇಕಾಗುತ್ತದೆ .

ಆಸೆ – ಆಕಾಂಕ್ಷೆಗಳು , ಗೌರವಾದರಗಳು ಪಡೆಯಬೇಕು ನಿಜ ಆದರೆ , ಅದಕ್ಕೆ ಮುಖ್ಯವಾಗಿ ತಾಳ್ಮೆ ಬೇಕು , ಅವಸರದಿಂದ ಯಾವ

mqdefault 3
ಕನ್ನಡ ಗಾದೆಗಳು ಮತ್ತು ವಿವರಣೆ । Gadegalu in Kannada Best No1 Gade Mathugalu

ಕೆಲಸವನ್ನು ಮಾಡಬಾರದು . ಸಹನೆ – ತಾಳ್ಮೆ ಪ್ರತಿಯೊಬ್ಬರ ಜೀವನದ ಉಸಿರಾಗಬೇಕು … ಯಾವುದೇ ಸಮಯದಲ್ಲಿ ಸಹನೆಯನ್ನು ಛಿದ್ರಗೊಂಡು ಕಳೆದುಕೊಳ್ಳಬಾರದು , ವಾದ – ವಿವಾದಗಳಿಂದ ಮಾನಸ್ಸು ಏನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ . ಸುಖ – ಶಾಂತಿ – ನೆಮ್ಮದಿ ಬೇಕು .

ಇದು ಎಲ್ಲರೂ ಒಪ್ಪಲೇ ಬೇಕಾದ ಮಾತು . ಆದರೆ ಅದನ್ನು ಗಳಿಸಲು ಪ್ರಯತ್ನ ಹಾಗೂ ತಾಳ್ಮೆ ಇರಲೇಬೇಕು . ಸಂದರ್ಭಕ್ಕೆ ಅನುಸಾರವಾಗಿ ತಾಳ್ಮೆಯಿಂದ ವರ್ತಿಸಿದರೆ ಎಲ್ಲರ ಮನಸ್ಸನ್ನೂ ಗೆಲ್ಲಬಹುದು .

ಮಾವಿನ ಗಿಡ ಹಾಕಿದ ಕೂಡಲೇ ಮರವಾಗಿ ಹಣ್ಣು ಬೇಕೆಂದರೆ ಸಾಧ್ಯವಿಲ್ಲ , ಯಶಸ್ಸಿಗೂ ತಾಳ್ಮೆ ಬಹಳ ಮುಖ್ಯ

ಕನ್ನಡ ಗಾದೆಗಳು ಮತ್ತು ವಿವರಣೆ PDF

ಕನ್ನಡ ಗಾದೆಗಳು ಮತ್ತು ವಿವರಣೆ । Gadegalu in Kannada Best No1 Gade Mathugalu
ಕನ್ನಡ ಗಾದೆಗಳು ಮತ್ತು ವಿವರಣೆ । Gadegalu in Kannada Best No1 Gade Mathugalu

ಕಾಯಕವೇ ಕೈಲಾಸ ಗಾದೆ ಮಾತು ವಿವರಣೆ

ಕಾಯಕವೇ ಕೈಲಾಸ ಇದು ಬಸವಣ್ಣನವರ ಅತಿ ಜನಪ್ರಿಯ ಬೋಧನೆ . ಕಾಯಕವೆಂದರೆ ಕೆಲಸ ಆ ಕೆಲಸವನ್ನು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಮಾಡಿದರೆ ಕೈಲಾಸ ಪ್ರಾಪ್ತಿಯಾಗುವುದೆಂದು ಕ್ರಾಂತಿಕಾರಿ ಬಸವಣ್ಣನವರೇ ಪ್ರತಿಪಾದಿಸಿದ್ದಾರೆ .

ಸಮಾಜದಲ್ಲಿನ ಪ್ರತಿಯೊಬ್ಬ ವ್ಯಕ್ತಿಯೂ ದುಡಿದು ತಿನ್ನಬೇಕು , ಸ್ವಾವಲಂಬಿಯಾಗಬೇಕು ಎಂಬುದು ಹನ್ನೆರಡನೇ ಶತಮಾನದ ಶಿವಶರಣ ಬಸವಣ್ಣನವರ ಮಾರ್ಗದರ್ಶನ .

ಅದು ಈಗಲೂ ಹೆಚ್ಚು ಸೂಕ್ತವೆನಿಸಿದೆ . ಇದೇ ಮಾತನ್ನು ಬೈಬಲ್‌ನಲ್ಲಿಯೂ ಹೇಳಲಾಗಿದೆ .

“ ಯಾರು ದುಡಿಯಲಾರನೋ ಅವನು ತಿನ್ನಲು ಅರ್ಹನಲ್ಲ ” ಎಂದು ಬೈಬಲ್‌ನಲ್ಲಿ ಉಲ್ಲೇಖಿಸಲಾಗಿದೆ . ಪ್ರತಿಯೊಬ್ಬನು ಹೀಗೆ ದುಡಿದು ತನಗೆ ತನ್ನ ಪರಿವಾರದವರಿಗೆ ಅಗತ್ಯವಾದ ಮೂಲಭೂತ – ಸೌಲಭ್ಯಗಳನ್ನು ಒದಗಿಸಿದರೆ , ಭೂಲೋಕವೆ ಸ್ವರ್ಗವಾಗುವುದಲ್ಲಿ ಸಂಶಯವಿಲ್ಲ . ಇದನ್ನು ಶ್ರಮದ ಜೀವನ ಎಂದು ಹೇಳಲಾಗಿದೆ .

ಕೈ ಕೆಸರಾದರೆ ಬಾಯಿ ಮೊಸರು ಗಾದೆ ಮಾತು ವಿವರಣೆ

ಕೈ ಕೆಸರಾದರೆ ಬಾಯಿ ಮೊಸರು ಗಾದೆಗಳು ವೇದಗಳಿಗೆ ಸಮಾನ . ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ . ಗಾದೆಗಳು ಹಿರಿಯರ ಮನದಾಳದಿಂದ ಮೂಡಿ ಬಂದಿದ್ದು ಲೋಕಾನುಭವವನ್ನು ಹೊಂದಿದೆ . ಕೈ ಕೆಸರಾಗುವುದು ಎಂದರೆ , ಇಲ್ಲಿ ಕಷ್ಟಪಟ್ಟು ಕೆಲಸ ಮಾಡುವುದನ್ನು ಪ್ರತಿಬಿಂಬಿಸುತ್ತದೆ .

ಕಷ್ಟಪಟ್ಟರೆ ಫಲ ದೊರೆಯುತ್ತದೆ ಎಂಬುದು ಮತ್ತೊಂದು ಗಾದೆಯ ಮಾತು . – ಇಲ್ಲಿ ನೆನಪಾಗುತ್ತದೆ . ಅಂದರೆ ಪ್ರತಿಯೊಬ್ಬರೂ ಕಷ್ಟಪಟ್ಟು ಕೆಲಸ ಮಾಡಬೇಕು . ಹಾಗಾದಾಗ ಮಾತ್ರ ಸಂಪಾದನೆಯಾಗಿ ಜೀವನ ನೆಮ್ಮದಿಯಾಗುತ್ತದೆ .

ಕನ್ನಡ ಗಾದೆಗಳು ಮತ್ತು ವಿವರಣೆ

ತಂದೆಯ ಅಥವಾ ಪಿತ್ರಾರ್ಜಿತ ಆಸ್ತಿ ಇದೆಯೆಂದು ಸುಮ್ಮನೆ ಕುಳಿತು ತಿನ್ನುತ್ತಿದ್ದರೆ ಅದು ಎಲ್ಲಿಯವರೆಗೆ ಬರುತ್ತದೆ ! ನಿಧಾನವಾಗಿ ಕರಗಿಹೋಗುತ್ತದೆ . ಕೂಡಿಟ್ಟ ಹಣ , ಕಟ್ಟಿಕೊಟ್ಟ ಬುತ್ತಿ ಎಲ್ಲಿಯವರೆಗೆ ಬರುತ್ತದೆ ? ಕುಳಿತು ತಿನ್ನುವವನಿಗೆ ಕುಡಿಕೆ ಹೊನ್ನು ಸಾಲದು ಎಂಬುದು ಇನ್ನೊಂದು ಗಾದೆ .

ದುಡಿಮೆಯೇ ದುಡ್ಡಿನ ತಾಯಿ ಎಂದು ತಿಳಿದು ಹಣ ಸಂಪಾದಿಸಿ ಸುಖ ಬೆಳಸಿಕೊಳ್ಳಬೇಕು . ಎಂದಿಗೂ ಪಡೆಯುವ ಮನೋಭಾವ ಸೋಮಾರಿಗಳಾಗಬಾರದು . ಪ್ರತಿಯೊಂದು ನಿಮಿಷವೂ ದುಡಿದು ತಿನ್ನಬೇಕು ಎಂಬುದು ಈ ಗಾದೆಯ ಆಶಯ .

ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಗಾದೆ ಮಾತು

ಕುಂಬಾರ ಒಬ್ಬ ಮಡಿಕೆ ಮಾಡಬೇಕೆಂದರೆ ಬಹಳ ಕಷ್ಟ ಪಡಬೇಕಾಗುತ್ತದೆ. ಮಡಕೆ ಮಾಡಲು ಬೇಕಾದ ಮಣ್ಣನ್ನು ಸರಿಯಾದ ಕಡೆಯಿಂದ ಹೊತ್ತು ತರಬೇಕು. ಅದಕ್ಕೆ ನೀರು ಹಾಕಿ ಚೆನ್ನಾಗಿ ತುಳಿದು ಹಸನು ಮಾಡಬೇಕು.

ಅದಾದ ನಂತರ ಮಡಕೆ ಮಾಡುವ ಚಕ್ರದಲ್ಲಿ ಹಸನಾದ ಮಣ್ಣನ್ನು ಇಟ್ಟು ಚಕ್ರ ತಿರುಗಿಸಿ ಮಡಕೆ ಆಕಾರ ಕೊಡಬೇಕು. ಅದನ್ನೂ ಬಲು ಜಾಗರೂಕತೆಯಿಂದ, ತಾಳ್ಮೆಯಿಂದ ಗಮನವಿಟ್ಟು ಮಾಡಬೇಕು.

ಇಲ್ಲವಾದರೆ ಮಡಕೆಯ ಆಕಾರ ಹಾಳಾಗಬಹುದು ಅಥವಾ ಮಡಕೆಗೆ ಸಣ್ಣ ತೂತು ಬಿದ್ದರೂ ಅಷ್ಟು ಮಣ್ಣು ಹಾಳಾಗುತ್ತದೆ. ನಂತರ ಆಕಾರ ಪಡೆದ ಹಸಿ ಮಡಕೆಯನ್ನು ಸ್ವಲ್ಪ ಒಣಗಿಸಿ, ಒಲೆಯಲ್ಲಿಟ್ಟು ಹದವಾಗಿ ಬೇಯಿಸಬೇಕು. ನಂತರವೇ ಒಂದು ಒಳ್ಳೆಯ ಮಡಕೆ ತಯಾರಾಗುತ್ತದೆ.

ನಂತರ ಅದನ್ನು ಒಡೆಯದಂತೆ ಜೋಪಾನ ಮಾಡಬೇಕು. ಗ್ರಾಹಕರಿಗೆ ಆಕರ್ಷಿಸುವಂತೆ ಒಪ್ಪವಾಗಿ ಜೋಡಿಸಬೇಕು. ಇಷ್ಟೆಲ್ಲಾ ಕಷ್ಟ ಪಟ್ಟ ನಂತರವೇ ಕುಂಬಾರನಿಗೆ ಮಡಿಕೆಯ ವ್ಯಾಪಾರವಾಗಿ ಲಾಭವಾಗಲು ವರುಷವಾದರೂ ಬೇಕಾಗುತ್ತದೆ. ಆದರೆ ದೊಣ್ಣೆಯಿಂದ ಅದೇ ಮಡಿಕೆಯನ್ನು ಒಂದು ನಿಮಿಷದಲ್ಲಿ ಹೊಡೆದು ನಾಶ ಮಾಡಬಹುದು.

ಈ ಗಾದೆಯಿಂದ ನಾವು ತಿಳಿದುಕೊಳ್ಳುವುದೇನೆಂದರೆ ತಾಳ್ಮೆಯಿಂದ ಎಂತಹ ಕೆಲಸವನ್ನು ಬೇಕಾದರೂ ಸಾಧಿಸಬಹುದು. ಆದರೆ ಅದೇ ಬುದ್ಧಿಯನ್ನು ಸಿಟ್ಟಿನ ಕೈಗೆ ಕೊಟ್ಟರೆ ಪಟ್ಟ ಶ್ರಮವೆಲ್ಲ ವ್ಯರ್ಥವಾಗಿ ಹೋಗುತ್ತದೆ. ಆದ್ದರಿಂದ ಯಾವುದೇ ಕೆಲಸವನ್ನು ಗಮನವಿಟ್ಟು, ತಾಳ್ಮೆವಹಿಸಿ, ಗೌರವಿಸಿ ಮಾಡಬೇಕು. ಹಾಗಾದಾಗ ಮಾತ್ರ ಅದರ ಫಲವನ್ನು ನಾವು ಅನುಭವಿಸಬಹುದು.

ಆರೋಗ್ಯವೇ ಭಾಗ್ಯ ಗಾದೆ ಮಾತು

ಹಲವಾರು ಭಾಗ್ಯಗಳಲ್ಲಿ ಆರೋಗ್ಯ ಭಾಗ್ಯ ಬಹಳ ಮುಖ್ಯವಾದುದು . ಮಾತ್ರವಲ್ಲದೆ ಅತ್ಯಂತ ಅವಶ್ಯಕವೂ ಆಗಿದೆ . ಆರೋಗ್ಯ ಒಂದಿದ್ದರೆ ಇಡೀ ಜಗತ್ತನ್ನೇ ಗೆಲ್ಲಬಹುದು .

ಸುಖ ಜೀವನಕ್ಕೆ ಆರೋಗ್ಯವೇ ನಾಂದಿ ಎಂಬುದನ್ನು ಈ ಗಾದೆ ತಿಳಿಸುತ್ತದೆ . ಸಂಪತ್ತು ಎಂದಿಗೂ ಶಾಶ್ವತವಲ್ಲ . ಅಲ್ಲದೆ ಅವುಗಳನ್ನು ಸಂಪಾದಿಸಲು ಸಾಧ್ಯ .

ಆದರೆ ಆರೋಗ್ಯ ಎಲ್ಲೆಂದರಲ್ಲಿ ದೊರೆಯುವುದಿಲ್ಲ . ಇದು ನಿರಂತರ ಪ್ರಯತ್ನ , ಅಭ್ಯಾಸ , ಆಹಾರ ಪದ್ಧತಿ ಇವುಗಳನ್ನು ಅವಲಂಬಿಸಿರುತ್ತದೆ .

ಕನ್ನಡ ಗಾದೆಗಳು ಮತ್ತು ವಿವರಣೆ

ಉತ್ತಮ ಆರೋಗ್ಯ ಒಂದಿದ್ದರೆ ಜೀವನದಲ್ಲಿ ಯಶಸ್ಸು ಖಂಡಿತವಾಗಿ ದೊರೆಯುತ್ತದೆ . ಆರೋಗ್ಯ ಆರೋಗ್ಯ ಚೆನ್ನಾಗಿಲ್ಲದಿ ಚೆನ್ನಾಗಿಲ್ಲದಿದ್ದರೆ ಶ್ರೀಮಂತನಾದರೂ ಪ್ರಯೋಜನವಿಲ್ಲ . ಅದು ತಿನ್ನಬಾರದು , ಇದು ತಿನ್ನಬಾರದು ಎಂಬ ಕಟ್ಟಳೆಗಳು ವಿಧಿಸಲ್ಪಡುತ್ತವೆ .

ಆರೋಗ್ಯ ಭಾಗ್ಯ ಇಲ್ಲದಿದ್ದರೆ ಇತರ ಭಾಗ್ಯಗಳು ನಿರರ್ಥಕ . ಎಲ್ಲಾ ಇದ್ದೂ ಆರೋಗ್ಯವಿಲ್ಲದಿದ್ದರೆ ಬದುಕೇ ಬರಡು . ಎಲ್ಲಾ ಸಿರಿ – ಸಂಪತ್ತನ್ನು ಗಳಿಸುವುದಕ್ಕೆ ಮುನ್ನ ಆರೋಗ್ಯ ಸಂಪತ್ತನ್ನು ಗಳಿಸಿಕೊಳ್ಳುವುದು ಬಹಳ ಮುಖ್ಯ .

ಆರೋಗ್ಯದಿಂದಲೇ ನೆಮ್ಮದಿ , ಶಾಂತಿ , ಸಂತೋಷ , ಸಾಧನೆ , ಸಂಯಮ , ಹುರುಪು , ಗೌರವ , ಆದರ , ಉತ್ಸಾಹ , ಸಾಮರ್ಥ್ಯ ದೊರೆಯುತ್ತದೆ .

ಆದುದರಿಂದ ಪ್ರತಿಯೊಬ್ಬರೂ ಆರೋಗ್ಯವನ್ನು ಗಳಿಸಿಕೊಳ್ಳಲು ನಿರಂತರ ಪ್ರಯತ್ನ ಮಾಡಬೇಕು . ಆರೋಗ್ಯವೇ ಸಿರಿ , ಆರೋಗ್ಯವೇ ಮಹಾ ಭಾಗ್ಯ ಎಂಬುದನ್ನು ಮರೆಯಬಾರದು .

small kannada gadegalu

ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಗಾದೆ ಮಾತು ವಿವರಣೆ

ಸಂಪೂರ್ಣವಾಗಿ ಈ ಒಂದು ಗಾದೆಯನ್ನು ಎಲ್ಲರೂ ಅರ್ಥಮಾಡಿಕೊಂಡರೆ ಸಾಮಾನ್ಯವಾಗಿ ಈ ಪ್ರಪಂಚದಲ್ಲಿ ಸಮಸ್ಯೆಗಳು ಎಂಬುದೇ ಉದಯವಾಗುವುದಿಲ್ಲ .

ಅರ್ಥಗರ್ಭಿತ ಗಾದೆ ಇದು , ಒಂದು ವಾಕ್ಯದಲ್ಲಿ ಅದ್ಭುತ ಅರ್ಥ ಅಡಕವಾಗಿದೆ . ನಾವು ಕಷ್ಟಪಟ್ಟು ಆರ್ಜಿಸಿದ ಹಣ , ಆಸ್ತಿ , ಪಾಸ್ತಿಗಳನ್ನು ನಾವು ಎತ್ತಿಟ್ಟು , ಕೂಡಿಟ್ಟು ಬಚ್ಚಿಟ್ಟರೆ ಅದನ್ನೆಲ್ಲಾ ಬಿಟ್ಟು ಹೋಗಬೇಕಾಗುತ್ತದೆ .

ಏಕೆಂದರೆ ಮುಂದಿದೆ ಸಾವು . ಆದಕಾರಣ ನಾವು ಆರ್ಜಿಸಿದ್ದನ್ನು ಆದಷ್ಟು ದಾನ , ಧರ್ಮ , ಸತ್ಕಾರ್ಯಗಳಿಗೆ ಬಳಸಬೇಕು ಆಗಲೇ ಆಸ್ತಿಪಾಸ್ತಿಗಳು ಸಾರ್ಥಕತೆಯನ್ನು ಆರ್ಜಿಸಿದ ಹಣ , ಪಡೆದುಕೊಳ್ಳುವುದು .

ನೆನಪಿರಲಿ ! ನೀವು ತಿಂದಿದ್ದು ಮಣ್ಣುಪಾಲು ಇತರರಿಗೆ ದಾನವಾಗಿ ಕರುಣಾ ಹೃದಯದಿಂದ , ಯಾವುದೇ ರೀತಿಯ ಫಲವನ್ನು ಅಪೇಕ್ಷಿಸದೆ ನೀಡುವುದು ನಿಮ್ಮ ಪಾಲು .

ಈ ಸತ್ಯಾಂಶವನ್ನು ಸ್ಪಷ್ಟವಾಗಿ ಅರಿತುಕೊಂಡು ಸ್ವಾರ್ಥವನ್ನು ತೊರೆದು ನಿಸ್ವಾರ್ಥ ಗುಣವನ್ನು ಮೈಗೂಡಿಸಿಕೊಂಡು ಸಾರ್ಥಕತೆಯನ್ನು ಪಡೆದುಕೊಳ್ಳಬೇಕು . ಕೊಟ್ಟು ಕೆಟ್ಟ ಎಂದು ಭಾವಿಸಬೇಡಿ . ಕೊಟ್ಟಿದ್ದೇ ನಿಮ್ಮದು , ಬಚ್ಚಿಟ್ಟಿದು ಪರರದು . ಆದ್ದರಿಂದ ಸಾವು ಸನಿಹಕೆ ಬರುವ ಮುನ್ನ ವಿವೇಕಯುಕ್ತವಾಗಿ ಕೊಟ್ಟುಬಿಡಿ ಇಲ್ಲದೆ ಹೋದರೆ ಬಿಟ್ಟುಹೋಗಬೇಕಾಗುತ್ತದೆ .

ನೀವು ಕಷ್ಟಪಟ್ಟು ಆರ್ಜಿಸಿದ ಹಣ ಭದ್ರವಾಗಿ ನಿಮ್ಮ ಹಿಂದೆ ಬರಬೇಕೆಂದರೆ , ಸುರಕ್ಷಿತವಾಗಿ ಇರಬೇಕೆಂದರೆ ಅದನ್ನು ಬಚ್ಚಿಡಬೇಡಿ , ವಿವೇಕಯುಕ್ತವಾಗಿ ದಾನ ಧರ್ಮಗಳನ್ನು ಮಾಡಿ ; ಆಗ ಎಂಬ ದಿವ್ಯ ಸಂದೇಶವನ್ನು ಈ ಗಾದೆಯು ಕೊಟ್ಟಿದ್ದು ನಿಮ್ಮದಾಗುತ್ತದೆ ಒಂದೇ ವಾಕ್ಯದಲ್ಲಿ ಅರ್ಥವಾಗುವಂತೆ ವಿವರಿಸುತ್ತದೆ .

ಕನ್ನಡ ಗಾದೆಗಳು ಮತ್ತು ವಿವರಣೆ Essay

ಕನ್ನಡ ಗಾದೆಗಳು ಮತ್ತು ವಿವರಣೆ । Gadegalu in Kannada Best No1 Gade Mathugalu
ಕನ್ನಡ ಗಾದೆಗಳು ಮತ್ತು ವಿವರಣೆ । Gadegalu in Kannada Best No1 Gade Mathugalu
ಹಿತ್ತಲ ಗಿಡ ಮದ್ದಲ್ಲ ಗಾದೆ ಮಾತು ವಿವರಣೆ

ಯಾವುದೋ ರೋಗಕ್ಕೆ ಕಂಡಕಂಡ ಗಿಡದ ರಸವಾಗಲೀ, ಬೇರಾಗಲೀ ಔಷಧವಾಗಲಾರದು ಎಂಬುದು ಈ ಗಾದೆಮಾತಿನ ಸ್ಥೂಲ ಅರ್ಥ. ಆದರೆ ಇದರ ಒಳಾರ್ಥವೇ ಬೇರೆ.

ನಾವು ಯಾವುದೇ ಸಮಸ್ಯೆಗೆ ಪರಿಹಾರ ಹುಡುಕುವಾಗ ತುರ್ತು ಉಪಾಯಗಳನ್ನೇ ಹುಡುಕುತ್ತೇವೆ. ಉದಾಹರಣೆಗೆ ಬಿದ್ದು ಗಾಯವಾದರೆ ಕೂಡಲೇ ಅದನ್ನು ತಣ್ಣೀರಿನಿಂದ ತೊಳೆದು ಅದಕ್ಕೆ ಪೌಡರ್ ಹಚ್ಚುತ್ತೇವೆ.

ಆದರೆ ಹೀಗೆ ತಕ್ಷಣ ಕೈಗೆ ಸಿಕ್ಕಿದ ವಸ್ತುವನ್ನು ಬಳಸುವುದು ಕೆಲವೊಮ್ಮೆ ಅಪಾಯಕಾರಿಯಾಗುತ್ತದೆ. ಗಾಯಕ್ಕೆ ಸೂಕ್ತವಾಗ ಔಷಧವನ್ನು ಹಚ್ಚುವುದೇ ಸರಿಯಾದ ಮಾರ್ಗ.

ಹಾಗೆಯೇ ಜೀವನದಲ್ಲಿ ನಾವು ಎದುರಿಸುವ ಹಲವು ಸಮಸ್ಯೆಗಳಿಗೆ ನಾವು ತಾತ್ಕಾಲಿಕ ಪರಿಹಾರವನ್ನು ಹುಡುಕುವುದು ಸರಿಯಲ್ಲ ಎಂಬುದೂ ಈ ಗಾದೆಯ ಸರಿಯಾದ ಅರ್ಥ. ಉದಾಹರಣೆಗೆ ಹಣದ ಸಮಸ್ಯೆ ಬಂದಾಗ ತಕ್ಷಣ ಸಾಲ ಮಾಡುವುದಕ್ಕೆ ಮುಂದಾಗುತ್ತಾರೆ.

ಆದರೆ ಮೈ ಮುರಿದು ದುಡಿದು ಸಂಪಾದಿಸುವುದೇ ಹಣದ ಸಮಸ್ಯೆ ಪರಿಹಾರಕ್ಕೆ ಸೂಕ್ತವಾದ ಉತ್ತರವಾಗಿದೆ. ಹೀಗೆ ನಾವು ಬದುಕಿನಲ್ಲಿ ಹಠಾತ್ ನಿರ್ಧಾರಗಳನ್ನು ಮಾಡುವ ಬದಲು ಖಾಯಂ ಪರಿಹಾರಕ್ಕಾಗಿ ಪ್ರಯತ್ನಿಸಬೇಕು.

ಕೈಗೆ ಸಿಕ್ಕಿದ್ದೇ ಪರಿಹಾರ ಎಂದುಕೊಳ್ಳಬಾರದು.

ದೂರದ ಬೆಟ್ಟ ನುಣ್ಣಗೆ ಗಾದೆ ಮಾತು ವಿವರಣೆ

ದೂರದ ಬೆಟ್ಟ ನುಣ್ಣಗೆ ದೂರದಿಂದ ಒಂದು ಬೆಟ್ಟವನ್ನು ನೋಡಿದರೆ ಅದು ಅಂದವಾಗಿ ಕಾಣಿಸುತ್ತದೆ . ಕಣ್ಣಿಗೆ ಕಾಣುವ ವಸ್ತುಗಳು ದೂರದಲ್ಲಿದ್ದರೆ ಅದು ಎಷ್ಟು ಸುಂದರವಾಗಿದೆ ಎಂದೆನಿಸುತ್ತದೆ .

ಆದರೆ ಹತ್ತಿರ ಹೋದಾಗಲೇ ಅದರಲ್ಲಿ ಎಷ್ಟು ಕಲ್ಲು – ಮುಳ್ಳುಗಳು , ಸಣ್ಣ ಸಣ್ಣ ಗಿಡಗಳು ಇಲ್ಲವೇನೋ ಎಂದೆನಿಸುವುದು . ಮೇಲ್ನೋಟಕ್ಕೆ ತುಂಬಿ ಅಂದವೇ ಯಾವುದನ್ನೂ ನಂಬಬಾರದು . ಅಂದರೆ ಈ ಗಾದೆಯ ಒಳಮರ್ಮವೇನೆಂದರೆ , ಕೆಲವರು ನೋಡಲು ಒಳ್ಳೆಯವರ ಹಾಗೆ ಕಾಣಿಸುತ್ತಾರೆ .

ಆದರೆ ಹೃದಯದಲ್ಲಿ ವಿಷ ತುಂಬಿಕೊಂಡು ಕೆಟ್ಟ ಕೆಲಸಗಳನ್ನು ಮಾಡುತ್ತಾರೆ . ಆದುದರಿಂದ ಇಲ್ಲಿ ಎಚ್ಚರಿಕೆ ಬಹಳ ಮುಖ್ಯ . ವಿಶೇಷವಾಗಿ ಹುಳುಕುಗಳು ಕಣ್ಣಿಗೆ ಕಾಣುವುದು ಸುಂದರವಾಗಿರಬಹುದು ಆದರೆ , ಅವುಗಳನ್ನು ಅದರಲ್ಲಿರುವ ಗಮನಿಸಿದಾಗಲೇ ಕಂಡುಬರುವುದು .

ದೂರದ ಬೆಟ್ಟ ನುಣ್ಣಗೆ , ಸುಂದರವಾಗಿ ಕಾಣಿಸುತ್ತದೆ . ಅದರ ಹತ್ತಿರ ಹೋದಾಗಲೇ ಅದರಲ್ಲಿ ಬರೀ ಕಲ್ಲು , ಮುಳ್ಳು ಹುಳು ಹುಪ್ಪಟೆಗಳಿಂದ ತುಂಬಿಕೊಂಡಿರುತ್ತದೆ , ಎಲ್ಲವೂ ಗೊಂದಲದಂತೆ ಕಾಣುತ್ತದೆ ಎಂದು ಅರಿವಾಗುವುದು .

ಕನ್ನಡ ಗಾದೆಗಳು ಮತ್ತು ವಿವರಣೆ

ಕಾಣದ ವಸ್ತುವಿಗೆ ಸಾಮಾನ್ಯವಾಗಿ ಆಸಕ್ತಿ – ಆಕಾಂಕ್ಷೆಗಳು ಹೆಚ್ಚಾಗಿ ಉಂಟಾಗುವುದು ಸಹಜ . ಆಗತಾನೆ ಪರಿಚಯವಾದ ಸ್ನೇಹಿತರು ಹೆಚ್ಚು ಪ್ರೀತಿಯನ್ನು ತೋರಿಸುತ್ತಾರೆ , ಅತ್ಯಂತ ಆಪ್ತರಂತೆ ವರ್ತಿಸುತ್ತಾರೆ .

ಅರ್ಥಸಹಿತ ಗಾದೆಗಳು ಮೇಲ್ನೋಟಕ್ಕೆ ಅವರು ಅತ್ಯಂತ ಒಳ್ಳೆಯವರೆಂದು ಕಂಡುಬರುತ್ತಾ ಅವರ ಒಡನಾಟಗಳನ್ನು ಚೆನ್ನಾಗಿ ತಿಳಿದುಕೊಂಡರೆ ಆಗ ತಿಳಿಯುತ್ತದೆ , ಯಾವುದನ್ನೇ ಆಗಲಿ ಕೂಡಲೇ ನಂಬಬಾರದು . ಅವರ ನೀಚ ಬುದ್ಧಿ

ಮನಸ್ಸಿದ್ದರೆ ಮಾರ್ಗ ಗಾದೆ ಮಾತು ಕನ್ನಡ ವಿವರಣೆ
download 4 4
ಕನ್ನಡ ಗಾದೆಗಳು ಮತ್ತು ವಿವರಣೆ । Gadegalu in Kannada Best No1 Gade Mathugalu

ದೂರದ ಬೆಟ್ಟ ನುಣ್ಣಗೆ ದೂರದಿಂದ ಒಂದು ಬೆಟ್ಟವನ್ನು ನೋಡಿದರೆ ಅದು ಅಂದವಾಗಿ ಕಾಣಿಸುತ್ತದೆ . ಕಣ್ಣಿಗೆ ಕಾಣುವ ವಸ್ತುಗಳು ದೂರದಲ್ಲಿದ್ದರೆ ಅದು ಎಷ್ಟು ಸುಂದರವಾಗಿದೆ ಎಂದೆನಿಸುತ್ತದೆ .

ಆದರೆ ಹತ್ತಿರ ಹೋದಾಗಲೇ ಅದರಲ್ಲಿ ಎಷ್ಟು ಕಲ್ಲು – ಮುಳ್ಳುಗಳು , ಸಣ್ಣ ಸಣ್ಣ ಗಿಡಗಳು ಇಲ್ಲವೇನೋ ಎಂದೆನಿಸುವುದು . ಮೇಲ್ನೋಟಕ್ಕೆ ತುಂಬಿ ಅಂದವೇ ಯಾವುದನ್ನೂ ನಂಬಬಾರದು . ಅಂದರೆ ಈ ಗಾದೆಯ ಒಳಮರ್ಮವೇನೆಂದರೆ , ಕೆಲವರು ನೋಡಲು ಒಳ್ಳೆಯವರ ಹಾಗೆ ಕಾಣಿಸುತ್ತಾರೆ .

ಆದರೆ ಹೃದಯದಲ್ಲಿ ವಿಷ ತುಂಬಿಕೊಂಡು ಕೆಟ್ಟ ಕೆಲಸಗಳನ್ನು ಮಾಡುತ್ತಾರೆ . ಆದುದರಿಂದ ಇಲ್ಲಿ ಎಚ್ಚರಿಕೆ ಬಹಳ ಮುಖ್ಯ . ವಿಶೇಷವಾಗಿ ಹುಳುಕುಗಳು ಕಣ್ಣಿಗೆ ಕಾಣುವುದು ಸುಂದರವಾಗಿರಬಹುದು ಆದರೆ , ಅವುಗಳನ್ನು ಅದರಲ್ಲಿರುವ ಗಮನಿಸಿದಾಗಲೇ ಕಂಡುಬರುವುದು .

ದೂರದ ಬೆಟ್ಟ ನುಣ್ಣಗೆ , ಸುಂದರವಾಗಿ ಕಾಣಿಸುತ್ತದೆ . ಅದರ ಹತ್ತಿರ ಹೋದಾಗಲೇ ಅದರಲ್ಲಿ ಬರೀ ಕಲ್ಲು , ಮುಳ್ಳು ಹುಳು ಹುಪ್ಪಟೆಗಳಿಂದ ತುಂಬಿಕೊಂಡಿರುತ್ತದೆ , ಎಲ್ಲವೂ ಗೊಂದಲದಂತೆ ಕಾಣುತ್ತದೆ ಎಂದು ಅರಿವಾಗುವುದು .

ಕಾಣದ ವಸ್ತುವಿಗೆ ಸಾಮಾನ್ಯವಾಗಿ ಆಸಕ್ತಿ – ಆಕಾಂಕ್ಷೆಗಳು ಹೆಚ್ಚಾಗಿ ಉಂಟಾಗುವುದು ಸಹಜ . ಆಗತಾನೆ ಪರಿಚಯವಾದ ಸ್ನೇಹಿತರು ಹೆಚ್ಚು ಪ್ರೀತಿಯನ್ನು ತೋರಿಸುತ್ತಾರೆ , ಅತ್ಯಂತ ಆಪ್ತರಂತೆ ವರ್ತಿಸುತ್ತಾರೆ .

ಅರ್ಥಸಹಿತ ಗಾದೆಗಳು 26. ಮನಸ್ಸಿದ್ದರೆ ಮಾರ್ಗ ಯಾವುದೇ ಕೆಲಸ ಮಾಡಬೇಕಾದರೆ ಆಸಕ್ತಿ ಇರಬೇಕು . ಮಾಡಬೇಕೆಂಬ ಹಂಬಲ ಹಾಗೂ ಮನಸ್ಸಿರಬೇಕು .

ಕೆಲಸವನ್ನು ಮಾಡಿಯೇ ಮುಗಿಸಬೇಕು ಮನಸ್ಸು ಇರಬೇಕು . ಮನಸ್ಸಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದು ಈ ಗಾದೆಯ ಸಾಮಾನ್ಯ ಅರ್ಥ . ಎಂಬ ಯಶಸ್ಸಿನ ಹಾದಿಯಲ್ಲಿ ಅನೇಕ ಅಡ್ಡಿ – ಆತಂಕಗಳು ನಿರಂತರವಾಗಿ ಬರುತ್ತಿರುತ್ತವೆ .

ಅದಕ್ಕೆ ಗಮನಕೊಡದೇ ಹೇಗಾದರೂ ಮಾಡಿ ಕಾರ್ಯವನ್ನು ಮಾಡಿ ಮುಗಿಸಬೇಕು ಎಂಬ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು , ಸಂಕಲ್ಪ ಮಾಡಿಕೊಳ್ಳಬೇಕು . ಬೇಸರಿಕೆ ಇಲ್ಲಿ ಸಲ್ಲದು .

ಕೆಲಸ ಮಾಡಲೇಬೇಕೆಂಬ ಮನಸ್ಸಿದ್ದರೆ ಮಾರ್ಗ ತಾನಾಗಿಯೇ ಸಿಗುತ್ತದೆ . ಮನಸ್ಸಿಲ್ಲದೆ ಮಾಡುವ ಯಾವುದೇ ಕೆಲಸ ಯಶಸ್ವಿಯಾಗುವುದಿಲ್ಲ .

“ ಇದು ನನ್ನ ಕೆಲಸ ಈ ಕೆಲಸವನ್ನು ಎಲ್ಲರೂ ಮೆಚ್ಚುವಂತಿರಬೇಕು , ನನ್ನ ಕೆಲಸವನ್ನು ಎಲ್ಲರೂ ಹೊಗಳಬೇಕು ” ಎಂಬ ಮನದಾಸೆಯನ್ನು ತುಂಬಿಕೊಂಡು ಮನಸ್ಸು ಮಾಡಿ ಕೆಲಸ ಮಾಡಬೇಕು .

ನನ್ನಿಂದ ಆಗುವುದಿಲ್ಲ , ಈ ಕೆಲಸ ಕಷ್ಟ , ಮುಗಿಸಲು ಸಾಧ್ಯವಿಲ್ಲ ಎಂದು ಅಂದುಕೊಂಡರೆ ಯಾವುದೂ ಸಾಧ್ಯವಿಲ್ಲ .

ನನ್ನ ಕೈಯಲ್ಲಿ ಏನೂ ಆಗುವುದಿಲ್ಲ . ಎಲ್ಲಾ ದೇವರ ದಯೆ ಎಂದು ಕುಳಿತರೆ ಮಾರ್ಗ ಸಿಗುವುದಿಲ್ಲ . ಮಾಡಬೇಕೆಂಬ ಮನಸ್ಸಿದ್ದರೆ ಮಾತ್ರ ದೈವಾನುಗ್ರಹ ದೊರೆತು ಮಾರ್ಗ ಸಿಗುತ್ತದೆ .

ಕನ್ನಡ ಗಾದೆಗಳು ಮತ್ತು ವಿವರಣೆ Kannada PDF

images 18
ಕನ್ನಡ ಗಾದೆಗಳು ಮತ್ತು ವಿವರಣೆ । Gadegalu in Kannada Best No1 Gade Mathugalu
ಗುಣ ನೋಡಿ ಗೆಳೆತನ ಮಾಡು ಗಾದೆ ಮಾತು ವಿವರಣೆ

ನಮ್ಮ ಕಷ್ಟಕಾಲದಲ್ಲಿ ಸಂಭಂದಿಕರು ಮುಖ ತಿರುಗಿಸಿದರೂ, ನಮ್ಮ ಸಹಾಯಕ್ಕೆ ಬರುವವರು ನಮ್ಮ ಗೆಳೆಯರು. ಒಬ್ಬ ಒಳ್ಳೆಯ ಗೆಳೆಯನಿಂದ ಜೀವನ ಸಾರ್ಥಕ್ಯ ಪಡೆಯುತ್ತದೆ. ಗೆಳೆಯ ನಮ್ಮ ಗುರುವಾಗಿ, ಸಹಭಾಗಿಯಾಗಿ, ತಂದೆಯಾಗಿ, ತಾಯಿಯಾಗಿ, ನಮ್ಮ ಒಳ್ಳೆಯ-ಕೆಟ್ಥದ್ದರಲ್ಲಿ ಪಾಲುದಾರನಾಗಿ, ಮಾರ್ಗದರ್ಶಕನಾಗಿ ನಮ್ಮ ಬೆನ್ನೆಲುಬಾಗಿ ನಿಂತಿರುತ್ತಾನೆ.

ಆದ್ದರಿಂದ ಒಂದು ಒಳ್ಳೆಯ ಗೆಳೆಯ ನಮಗೆ ಅತ್ಯಂತ ಅಗತ್ಯ.

ಹಾಗಾದ್ರೆ ಗೆಳೆಯರನ್ನು ಹೇಗೆ ಅಯ್ಕೆಮಾಡಿಕೊಳ್ಳೋಣ? ಅವನ ಬಳಿ ಹಣ ಇದೆಯೆಂದೆ? ಅವನ ಬಳಿ ಶಕ್ತಿ ಇದೆಯೆಂದೆ? ಅವನಿಗೆ ತುಂಬಾ ಜನ ಬೆಂಬಲಿಗರು ಇದ್ದಾರೆಂದೆ? ಅಥವಾ ಅವನ ತುಂಬಾ ಸುಂದರವಾಗಿದ್ದಾನೆಂದೆ?

ಈ ಗಾದೆಯು ಇಂಥಾ ಆಯ್ಕೆಯಲ್ಲಿ ನಮಗೆ ಮಾರ್ಗದರ್ಶಿಯಾಗಿರುತ್ತದೆ. ಗುಣವಂತನಾದವನೇ ಒಳ್ಳೆಯ ಗೆಳೆಯನಾಗಾಬಲ್ಲ ಎಂಬ ಗುಟ್ಟನ್ನು ಈ
ಗಾದೆ ಹೇಳುತ್ತದೆ. ಎಷ್ಟೇ ಸುಂದರನಾಗಿರಲಿ, ಶಕ್ತಿಶಾಲಿಯಾಗಿರಿ, ಸಿರಿವಂತನಾಗಿರಲಿ, ಅವನು ಗುಣವಂತನಾಗಿರದಲ್ಲಿ ಅವನು ಒಳ್ಳೆಯ ಗೆಳೆಯನಾಗಲು ಸಾಧ್ಯವಿಲ್ಲ.

ಕನ್ನಡ ಗಾದೆಗಳು ಮತ್ತು ವಿವರಣೆ Notes

ಕನ್ನಡ ಗಾದೆಗಳು ಮತ್ತು ವಿವರಣೆ । Gadegalu in Kannada Best No1 Gade Mathugalu
ಕನ್ನಡ ಗಾದೆಗಳು ಮತ್ತು ವಿವರಣೆ । Gadegalu in Kannada Best No1 Gade Mathugalu


ಕರುಣೆ, ವಿಶಾಲ ಹೃದಯ, ಸಹಾಯ ಮನೋಭಾವ, ಮುಂತಾದ ಗುಣಗಳೇ ಒಳ್ಳೆಯ ಗೆಳೆಯನ ಲಕ್ಷಣ. ಬಡವನಾದರೂ, ಸಹಾಯ ಮಾಡುವ ಮನಸ್ಸಿದ್ದರೆ ತನ್ನ ಕೈಲಾದಷ್ಟನ್ನು ಮಾಡಿ, ನಮಗೆ ಸಹಕಾರಿಸುತ್ತಾನೆ.

ಆದ್ದರಿಂದ ಮುಂದಿನ ಸಲ ಗೆಳೆತನ ಬೇಳೆಸುವಾಗ “ಗುಣ ನೋಡಿ ಗೇಳೆತನ ಮಾಡು”

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ನೋಡಲು ಗಾತ್ರದಲ್ಲಿ ಚಿಕ್ಕದಾದರೂ ಅದರ ಕೀರ್ತಿ ದೊಡ್ಡದಿರಬಹುದು . ವ್ಯಕ್ತಿಯನ್ನು ಅವನ ವ್ಯಕ್ತಿತ್ವ ಗುಣ , ಸಾಧನೆ ಇವುಗಳಿಂದ ಗುರುತಿಸಬೇಕೆ ವೇಷ – ಭೂಷಣಗಳಿಂದಲ್ಲ .

ಹೊರತು ಅವನ ಆಕಾರದಿಂದ , ಶ್ರೀಮಂತಿಕೆಯಿಂದ ಒಬ್ಬ ವ್ಯಕ್ತಿಯನ್ನು ಗುರುತಿಸುವುದು ಸರಿಯಲ್ಲ ಎಂಬುದೇ ಈ ಗಾದೆಯ ಅರ್ಥ ಇಲ್ಲಿ ವ್ಯಕ್ತಿಗಳು ಮುಖ್ಯವಲ್ಲ .

ಅವರು ಸಾಧಿಸಿದ ಸಾಧನೆಗಳು ಮುಖ್ಯ . ನೋಡಲು ಚಿಕ್ಕವರಾದರೂ ಅವರು ಮಾಡಿದ ಕಾರ್ಯಗಳು ಬಹಳ ಅಮೂಲ್ಯವಾದುದು , ಬೆಲೆಯುಳ್ಳದ್ದು , ಸಮಾಜದಲ್ಲಿ ಸಿರಿತನ – ಬಡತನ ಇವುಗಳಿಂದ ವ್ಯಕ್ತಿತ್ವವವನ್ನು ಗುರುತಿಸಲಾಗುತ್ತದೆ .

ಅರ್ಥಸಹಿತ ಗಾದೆಗಳು ಅಳಿಲೊಂದು ಸೇತುವೆಯ ಬಡವರು ಎಷ್ಟೇ ಸಾಧನೆ ಮಾಡಿದರೂ ಅವರಿಗೆ ಪ್ರಚಾರ ಸಿಗುವುದಿಲ್ಲ . ಆದರೆ ಮುಂದೊಂದು ದಿನ ಅವನ ಸಾಧನೆ ಗಮನಕ್ಕೆ ಬರದೆ ಇರುವುದಿಲ್ಲ . ಈ ನಿಟ್ಟಿನಲ್ಲಿ ರಾಮಾಯಣದ ಒಂದು ಸಣ್ಣ ಪ್ರಸಂಗ ನೆನಪಿಗೆ ಬರುತ್ತದೆ .

ನಿರ್ಮಾಣದ ಕಾರ್ಯದಲ್ಲಿ ಮಾಡಿದ ಕಾರ್ಯವನ್ನು ವಾನರರು ಗುರುತಿಸಲಿಲ್ಲ . ಆದರೆ ಶ್ರೀರಾಮ ಅದರ ಸೇವೆಯನ್ನು ಗಮನಿಸಿದ .

ಇದರಿಂದ ಅಳಿಲು ಶ್ರೀರಾಮನ ಕೃಪಾಕಟಾಕ್ಷಕ್ಕೆ ಪಾತ್ರವಾಯಿತು . ಖಡ್ಗ ಒಬ್ಬ ವ್ಯಕ್ತಿಯನ್ನು ಕೊಲ್ಲಬಹುದು . ಆದರೆ ಸೂಕ್ಷ್ಮವಾದ ಸೂಜಿಯು ತನ್ನ ಸಾಮರ್ಥ್ಯದಿಂದ ವ್ಯಕ್ತಿಯ ಪ್ರಾಣವನ್ನು ಉಳಿಸಬಲ್ಲದು .

ಅಂಕೆ ಇಲ್ಲದ ಕಪಿ ಲಂಕೆ ಸುಟ್ಟಿತು

ತನ್ನಮೇಲೆ ತನಗೆ ಪರಿಜ್ಞಾನವಿಲ್ಲದ ಕಪಿ ತನ್ನ ಬಲಕ್ಕೆ ಬೆಂಕಿ ಬಿದ್ದರು ಸಹ ಅದನ್ನು ಗಮನಿಸದೆ ಇಡೀ ಕಾಡನ್ನೆಲ್ಲ ಸುತ್ತಾಡಿಕೊಂಡು ಬಂದು ಎಲ್ಲಕಡೆ ಬೆಂಕಿ ತಗಲುವಂತೆ ಮಾಡಿ ಲಂಕೆಯನೆಲ್ಲ ಸುಟ್ಟಿತು ಅಂತ ನಾವು ಇಲ್ಲಿ ವಿವರಿಸಬಹುದು ಆದರೆ ಈ ಗಾದೆ ಮಾತಿನ ಒಳ ಅರ್ಥವೇ ಬೇರೆ.

ಸಮಾಜದಲ್ಲಿ ಒಬ್ಬೊಬ್ಬ ವ್ಯಕ್ತಿಯ ಗುಣ ನಡವಳಿಕೆ ಒಂದೊಂದು ರೀತಿ ಇರುತ್ತದೆ ಕೇಳುವರು ಒಳ್ಳೆಯವರಾದರೆ ಇನ್ನು ಕೆಲವರು ಬೇರೆಯವರ ಮಾತನ್ನು ಕೇಳಿಕೊಂಡು ಇನ್ನೊಬ್ಬರ ಹತ್ತಿರ ಅದನ್ನ ಹೇಳಿ ಒಳ್ಳೆಯವರಗಳು ಪ್ರಯತ್ನಿಸುತ್ತಾರೆ.

ಆದರೆ ಹೀಗೆ ಮಾಡುವವರಿಗೆ ತನ್ನ ಬಾಲಕ್ಕೆ ಬೆಂಕಿ ಬಿದ್ದಿದೆ ಅನುವುದೇ ಗೊತ್ತಿರುವುದಿಲ್ಲ ಇವರು ಬರಿ ಬೇರೆಯವರ ಬಗ್ಗೆನೇ ಯೋಚನೆ ಮಾಡ್ತಾರೆ ಅದನ್ನೇ ಬೇರೆಯವರಿಗೆ ಚಾಡಿ ಮಾತುಗಳನ್ನು ಆಡುತ್ತಾರೆ. ಮುಂದೊಂದು ದಿನ ಅದೇ ಬೆಂಕಿಯಲ್ಲಿ ಅವರೇ ಬಿದ್ದು ಒದ್ದಾಡುತ್ತಿರುತ್ತಾರೆ.

ಆದ್ದರಿಂದ ಈ ಗಾದೆ ಮಾತಿನಿಂದ ನಾವು ಕಲಿಯುವುದು ಏನು ಅಂದರೆ ನಾವು ಬೇರೆಯವರ ಬಗ್ಗೆ ಮಾತನಾಡುವ ಮೊದಲು ನಾವು ನಮ್ಮ ಬಗ್ಗೆ ತಿಳಿದುಕೊಂಡು ಮಾತನಾಡಬೇಕು ನಾವು ಏನು ಹೇಗಿದ್ದೀವಿ ಅನ್ನುವುದರ ಯೋಚನೆ ಮಾಡಿ ಮಾತನಾಡಬೇಕು ಅನ್ನುವುದು ಇದರ ಅರ್ತವಾಗಿದೆ.

ಕನ್ನಡ ಗಾದೆಗಳು ಮತ್ತು ವಿವರಣೆ Gadegalu

images 14 Copy 1
ಕನ್ನಡ ಗಾದೆಗಳು ಮತ್ತು ವಿವರಣೆ । Gadegalu in Kannada Best No1 Gade Mathugalu
ಇನ್ನಷ್ಟು ಗಾದೆಮಾತುಗಳು

ಭಾಷೆ ತಿಳಿಯದಿದ್ದರೂ ಹಾಸ್ಯಕ್ಕೆ ಕಡಿಮೆಯಿಲ್ಲ.
ಭಿಕಾರಿಯಾದವ ಕಾಶಿಗೆ ಹೋದರೂ, ಭಿಕ್ಷಾನ್ನವಲ್ಲದೆ ಪಕ್ವಾನ್ನ ಉಂಡಾನೇ?
ಮಣದಷ್ಟು ಮಾತಿಗಿಂತ ಕಣದಷ್ಟು ಕೆಲಸ ಲೇಸು.
ಮಳೆ ನೀರನ್ನು ಬಿಟ್ಟು ಮಂಜಿನ ನೀರಿಗೆ ಕೈಯೊಡ್ಡಿದ ಹಾಗೆ.
ದುಡಿಯೋ ತನಕ ಮಡದಿ.
ಸಾಲಗಾರನ ಹೆಂಡತಿ ಶೋಕಿಮಾಡಿದರೇನು?
ವೈಕುಂಠಕ್ಕೆ ಹೋಗಲಿಕ್ಕೆ ಕುಂಟು ದಾಸಯ್ಯನ ಮಧ್ಯಸ್ತಿಕೆಯೇ?
ಮೂರು ಕಾಸಿನ ಮಾಂಸವಿಲ್ಲದಿದ್ದರೂ, ಮಾತು ಮಾತ್ರ ಜೋರು.
ರೊಕ್ಕ ಕೊಟ್ಟು ರಟ್ಟೆ ಮುರಿಸಿಕೊಂಡಂತೆ
ಜಾತಿ ನೀತಿಯಿಲ್ಲ, ಮಾರಿಗೆ ಕರುಣೆ ಇಲ್ಲ.
ಹೂಡಿದರೆ ಒಲೆ, ಮಡಿದರೆ ಮನೆ.
ಹತ್ತು ಜನರ ಹುಲ್ಲು ಕಡ್ಡಿ ಒಬ್ಬನಿಗೆ ತಲೆ ಹೊರೆ.
ಪಂಗಡವಾದವ ಸಂಗಡ ಬಂದಾನೆ?
ಅಗ್ನಿಗೆ ತಂಪುಂಟೆ, ವಿಷಕ್ಕೆ ರುಚಿಯುಂಟೆ, ದಾರಿಕೋರನಿಗೆ ಧರ

ಕುಂಬಾರನ ಮಗಳು ಲಾಭ ಬಂದ ಹೊರತು ಮಡಿಕೆ ಒಡೆಯುವುದಿಲ್ಲ.
ಕಾಗೆಗೆ ಯಜಮಾನನ ಸ್ಥಾನ ಕೊಟ್ಟರೆ ಮನೆ ತುಂಬಾ ಪಿಷ್ಟ.
ಇತರರ ಕಣ್ಣಿನ ಕಸ ಕಾಣುವುದು, ತನ್ನ ಕಣ್ಣಿನ ಕಸ ಕಾಣುವುದಿಲ್ಲ.
ತನ್ನ ಮೊಸರನ್ನು ಯಾರೂ ಹುಳಿ ಅನ್ನುವುದಿಲ್ಲ.
ನಾನು ಅಗೆಯುವಲ್ಲಿ ಕಲ್ಲು, ಅಜ್ಜ ಅಗೆಯುವಲ್ಲಿ ಮಣ್ಣು.
ದಡ್ಡ ಮನುಷ್ಯ ನೆಲಕ್ಕೆ ಭಾರ, ಅನ್ನಕ್ಕೆ ಖಾರ.
ದಡ್ಡನಿಗೆ ಹಗಲು ಕಳೆಯುವುದಿಲ್ಲ, ಒಳ್ಳೆಯವನಿಗೆ ರಾತ್ರಿ ಸಾಲುವುದಿಲ್ಲ.
ಹುಲಿಯ ಬಣ್ಣವನ್ನು ಮೆಚ್ಚಿ, ನರಿ ತನ್ನ ಕೂದಲನ್ನು ಭಸ್ಮ ಮಾಡಿಕೊಂಡಂತೆ.
ಬಾಯಲೆಲ್ಲಾ ವೇದಾಂತ, ಮಾಡುವುದೆಲ್ಲಾ ರಾದ್ಧಾಂತ.
ತಿನ್ನಲು, ಉಣ್ಣಲು ಇದ್ದರೆ ಯಾವತ್ತೂ ನೆಂಟರು.
ಶರೀರಕ್ಕೆ ಸುಖ, ಹೊಟ್ಟೆಗೆ ದುಃಖ.


ನೂರಾರು ರೋಗಿಗಳನ್ನು ಕೊಂದು ಒಬ್ಬ ವೈದ್ಯ ಆದಂತೆ !
ವಿವಿಧ ರೋಗಗಳಿಗೆ ಮದ್ದಿವೆ, ಹೊಟ್ಟೆ ಉರಿಗೆ ಮದ್ದಿಲ್ಲ.
ಅಡಿಕೆಕಾಯಿಯನ್ನು ಚೀಲದೊಳಗೆ ಹಾಕಬಹುದು, ಮರ ಆದ ನಂತರ ಹಾಕಬಹುದೇ?
ಲಾಭ ನೋಡಿ ಬಾಳೆ ಹಣ್ಣು ತಿಂದಂತೆ.
ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು.
ಹತ್ತು ಮಕ್ಕಳ ತಾಯಿ ದಾರಿಯಲ್ಲಿ ಸಿಕ್ಕಿದ್ದನ್ನು ತಿಂದಂತೆ.
ತಾಯಿಯನ್ನು ಹೊಡೆಯಬಾರದು, ಗುಬ್ಬಿಯ ಗೂಡನ್ನು ತೆಗೆಯಬಾರದು.
ನಾಯಿಯು ನಮ್ಮನ್ನು ಕಚ್ಚಿದರೆ ನಾಯಿಯನ್ನು ಕಚ್ಚಲು ನಮ್ಮಿಂದ ಆಗುವುದೇ?
ಬೆಲ್ಲ ಇದ್ದಲ್ಲಿ ನೊಣ ತಿರುಗಾಡಿದಂತೆ.
ಹುಣಸೆ ಹುಳಿಯೆಂದು ಅಂಬಡೆ ತಿಂದ ಹಾಗೆ.
ಮೃತ್ಯು ಬಂದ ಮೇಲೆ ವೈದ್ಯ ಬಂದ.
ಶಸ್ತ್ರದಿಂದಾದ ಗಾಯ ಮಾಯುತ್ತದೆ, ನಾಲಿಗೆಯಿಂದಾದ ಗಾಯ ಮಾಯುವುದಿಲ್ಲ.

ದೂರವಿದ್ದ ಮಗನಿಗೂ, ಹತ್ತಿರವಿದ್ದ ಮಗನಿಗೂ ಸರಿಬಾರದು.
ದೊಂಬರಾಟ ಆಡಬಹುದು ಮಕ್ಕಳಾಟ ಆಡೊಕ್ಕಾಗಲ್ಲ.
ನನಗೆ ನಿನಗೆ ಹಿತ ಇಲ್ಲ, ನಿನ್ನ ಬಿಟ್ಟು ನನಗೆ ಗತಿ ಇಲ್ಲ ಎಂದಂತೆ.
ನೆಂಟ್ರು ಮನೆಗೆ ಮೂಲ, ಕುಂಟೆತ್ತು ಹೊಲಕ್ಕೆ ಮೂಲ.
ನರಗುಂದಕ್ಕೆ ಹೊದರೆ ಕುರು ತಪ್ಪೀತೆ?
ನಾಮವಿದ್ದವನಿಗೆ ಕಾಮ ಕಡಿಮೆಯೇ?
ಹಲ್ಲಿ ಶಕುನ ಕೇಳಿ ಕಲ್ಲಿಂದ ಹೊಡೆಸಿಕೊಂಡಂತೆ.

ಸದಾಚಾರಣೆಯ ಉದಾಹರಣೆಯೇ ಉತ್ತಮವಾದ ಉಪದೇಶ.
ಪ್ರಾಮಾಣಿಕತೆಯಿಂದಲೇ ಪಾರಮಾರ್ಥ
ಕರೆದುಣ್ಣುವ ಕೆಚ್ಚಲನ್ನು ಕೊರೆದುಂಡ ಹಾಗೆ.
ಉದ್ದುದ್ದ ಮಾತಿನವರ ಮೊಳಕೈ ಮೊಂಡ.
ಕಿಡಿ ಸಣ್ಣದಾದರೂ ಕಾಡೆಲ್ಲವನ್ನು ಸುಡುತ್ತದೆ.
ನೋಡಿ ನಡೆದವರಿಗೆ ಕೇಡಿಲ್ಲ.
ಕೃತಿ ಇಲ್ಲದ ಮಾತು ಕಸ ಬೆಳೆದ ತೋಟವಿದ್ದಂತೆ.
ಚಿಂತೆ ಮಾಡಿದರೆ ಸಂತೆ ಸಾಗೀತೆ?
ದುಡ್ಡನ್ನು ಕಾದಿಟ್ಟುಕೊಳ್ಳದವನು ಹಣವಂತನು ಹೇಗೆ ಆದಾನು?
ಮಕ್ಕಳ ಬಾಯಿಗೆ ಹಣ್ಣು ಕೊಟ್ಟು ಮಣ್ಣು ಬಿಡಿಸು.
ತಾಯಿ ಬೇಕು ಇಲ್ಲವೇ ಬಾಯಿ ಬೇಕು.

ಕನ್ನಡ ಗಾದೆಗಳು ಮತ್ತು ವಿವರಣೆ

images 14 Copy Copy 1
ಕನ್ನಡ ಗಾದೆಗಳು ಮತ್ತು ವಿವರಣೆ । Gadegalu in Kannada Best No1 Gade Mathugalu

ಸೀರಿಗೇಡಿಗೆ ಸೀರೆ ಉಡಿಸಿದರೆ ಕೆರಿ ದಂಡಿ ಮ್ಯಾಗ ನಿಂತು ಕೇಕೆ ಹಾಕಿದಳು.
ಪೀತಾಂಬರ ಉಟ್ಟರೂ ಕೊತ್ತಂಬರಿ ಮಾರೋದು ತಪ್ಪಲಿಲ್ಲ.
ಪೇಚಾಟದಲ್ಲಿ ಬಿದ್ದವನಿಗೆ ಪೀಕಲಾಟವೇ ಗತಿ.
ಹಾರುವನ ತೊತ್ತಾಗಬೇಡ ಗಾಣಿಗನ ಎತ್ತಾಗಬೇಡ.
ಮಂತ್ರಕ್ಕಿಂತ ಉಗುಳೇ ಹೆಚ್ಚು.
ಹಂಪಿಗೆ ಹೋಗುವುದಕ್ಕಿಂತ ಕೊಂಪೆಯಲ್ಲಿರುವುದೇ ಲೇಸು.
ಎಡಗಣ್ಣು ಹೊಡೆದರೆ ನಾರಿಗೆ ಶುಭ.

ನಿನ್ನಲ್ಲಿರುವ ಮಾನ ನಿನಗೆ ಕೊಡುವುದು ಬಹುಮಾನ.
ಮಾಟ ಮಾಡಿದೋನ ಮನೆ ಹಾಳು.
ಒಬ್ಬರ ಕೂಳು ಇನ್ನೊಬ್ಬರ ಕುತ್ತು.
ಒಳಿತಾಗಿ ಮುಗಿದಿದ್ದೆಲ್ಲವೂ ಒಳ್ಳೆಯದೇ.
ಹೊಳೆಯುವುದೆಲ್ಲಾ ಚಿನ್ನವಲ್ಲ.
ಓಡಿದವನಿಗೆ ಓಣಿ ಕಾಣಲಿಲ್ಲ, ಹಾಡಿದವನಿಗೆ ಹಾದಿ ಕಾಣಲಿಲ್ಲ.
ಬರಿಗೈಯವರ ಬಡಿವಾರ ಬಹಳ.
ಎಲ್ಲ ಕೆಡುಕಿಗೂ ಮೂಲ ಹೊಟ್ಟೆಕಿಚ್ಚು.
ಸ್ವರ್ಗದಲ್ಲಿ ಸೇವೆಗೈಯುವುದಕ್ಕಿಂತ ನರಕದಲ್ಲಿ ಆಳುವುದೇ ಲೇಸು.
ಅರೆಗೊಡದ ಅಬ್ಬರವೇ ಬಹಳ.
ಮರಿ ಮಾಡುವ ಮೊದಲೇ ಮೊಟ್ಟೆಗಳನ್ನು ಎಣಿಸಬೇಡ.
ಆಪತ್ತಿಗಾದವನೇ ನಿಜವಾದ ಗೆಳೆಯ.
ಇಂದಿನ ಸೋಲು ನಾಳಿನ ಗೆಲುವು.
ಧೈರ್ಯವಿದ್ದವನಿಗೆ ದೈವವೂ ಅನುಕೂಲ.
ದುಡ್ಡಿಗಿಂತ ದೊಡ್ಡ ಹೆಸರೇ ಉತ್ತಮ.

ನಿನ್ನದಲ್ಲ ಸರ್ವ ಆಸ್ತಿ, ಒಳ್ಳೆಯದಲ್ಲ ಗರ್ವ ಜಾಸ್ತಿ.
ಮನಸ್ಸು ಇಲ್ಲದಿದ್ದರೆ ಗಟ್ಟಿ, ಎಲ್ಲವೂ ಮೂರಾಬಟ್ಟಿ.
ಮಾಡಿ ಉಣ್ಣು ಬೇಡಿದಷ್ಟು, ತಗಾದೆ ಮಾಡದೇ ಉಣ್ಣು ನೀಡಿದಷ್ಟು.
ಒಣ ಮಾತು ಒಣಗಿದ ಹುಲ್ಲು, ಒಳ್ಳೆಯ ಮಾತು ಬೆಳ್ಳಗಿನ ಹಾಲು
ತತ್ವದಲ್ಲಿ ಸತ್ವ ಹುಡುಕು, ವ್ಯಥೆಯಲ್ಲಿ ಕಥೆ ಹುಡುಕು.
ಇಲಿ ಸಿಕ್ಕರೆ ಬೆಕ್ಕು ಆಗುವುದು ಹುಲಿ.
ಕಾಗೆಯ ಕೈಯಲ್ಲಿ ಕೊಟ್ಟರೆ ಕಾರಭಾರ, ಅದು ಮಾಡುವುದೇ ಉಪಕಾರ?
ಹೋಗುವುದು ಮೂಡಿದ ಹೊತ್ತು, ಹೋಗೋದಿಲ್ಲ ಆಡಿದ ಮಾತು.
ದೈವ ಕಾಡುವುದು ವಿಧಿಗಾಗಿ, ನೀರು ಸಮುದ್ರ ಸೇರುವುದು ನದಿಗಾಗಿ.
ಬಡವರ ಕಣ್ಣೀರಿಗೆ ಕರುಣೆ ಬಂದೀತೆ ಬೆಣ್ಣೆಗೆ?
ಸಲುಗೆ ಕೊಟ್ಟರೆ ಸಾಕೂ ಹೆಗ್ಗಣವೂ ಸಹ ಏರುವುದು ಹೆಗಲಿಗೆ.
ಹುಟ್ಟಿದ ಮಗು ತರುವುದು ತೊಟ್ಟಲಿಗೆ ನಗು.
ಸ್ವಾರ್ಥ ಉಳಿಸಿದವ ಪಾಪಾತ್ಮ, ನಿಸ್ವಾರ್ಥ ಗಳಿಸಿದವ ಪುಣ್ಯಾತ್ಮ.
ಬೇಸರವಿರಬಾರದು, ಅವಸರ ಮಾಡಬಾರದು.

ಕನ್ನಡ ಗಾದೆಗಳು ಮತ್ತು ವಿವರಣೆ Kannada

20210606 175329 1
ಕನ್ನಡ ಗಾದೆಗಳು ಮತ್ತು ವಿವರಣೆ । Gadegalu in Kannada Best No1 Gade Mathugalu

ಮನೆಯೆಂಬ ಮರ ಮುರಿಯಬಾರದು, ಮನಸ್ಸೆಂಬ ಮಾರ್ಗ ಕತ್ತರಿಸಬಾರದು.
ದುಷ್ಟರ ಸಂಗದಿ ನೆರಳು ಕೊಯ್ಯದೆ ಬಿಡದು ಕೊರಳು.
ನೀನಾಗದೆ ರಣಹೇಡಿ, ಕೀರ್ತಿ ಪಡೆ ಪ್ರಾಣ ನೀಡಿ.
ನಿನ್ನಲ್ಲಿ ನೀ ಹುಡುಕು, ಅರಿಷಡ್ವರ್ಗಗಳ ಹೊರ ಹಾಕು.
ಸಜ್ಜನರ ಮಾತು ಸಿಹಿ, ದುರ್ಜನರ ತುತ್ತು ಕಹಿ.
ಬುದ್ಧಿ ಇದ್ದವನಲ್ಲಿ ಶ್ರದ್ಧೆ, ನಿದ್ದೆ ಬಾರದವನಲ್ಲಿ ವಿದ್ಯೆ.
ಉಗಮವಾಗದಿರಲಿ ಹಿಂಸೆ, ಹೆಚ್ಚಿಗೆಯಾಗದಿರಲಿ ಆಸೆ.
ನಾಳೆ ಎಂದವನಿಗೆ ಹಾಳು, ಇಂದೇ ಎಂದವನಿಗೆ ಬೀಳಾಗದು ಬಾಳು.
ಆಳಾಗದವ ಅರಸನಲ್ಲ, ಹಟ ಹಿಡಿದವ ಸಾಮ್ರಾಟನಲ್ಲ.
ಉಂಡಿದ್ದು ಹೊಟ್ಟೆಗಾಗಿ, ಮಾಡಿದ್ದು ಬಟ್ಟೆಗಾಗಿ.
ವಿಶ್ವಾಸಿ ನೀನಾಗು, ಘಾತುಕಕ್ಕೆ ಬಗ್ಗದೆ ಮುನ್ನುಗ್ಗು.
ಹೆಂಡತಿಯ ಮಾತು ಆಗದಿರಲಿ ಕೊಯ್ದುಕೊಳ್ಳುವಂತೆ ಕತ್ತು.
ಕಣ್ಣಿಗೆ ಕಂಡದ್ದೆಲ್ಲಾ ನುಣ್ಣಗಿರುವುದಿಲ್ಲ.

FAQ

ಗಾದೆಗಳು ಎಂದರೇನು?

ಗಾದೆ ಒಂದು ನಾಡಿನ ಜನಸಾಮಾನ್ಯರು ನಿತ್ಯ ವ್ಯವಹಾರದಲ್ಲಿ ಸಹಜವಾಗಿ ಬಳಸುವ ರೂಡಿಗತ ಅಲಂಕಾರಿಕ ಮಾತು. ಇದು ಯಾರಿಂದ ಯಾವಾಗ ಹುಟ್ಟುತ್ತದೋ ಹೇಳಲಾಗದು. ಒಂದು ವಿಶೇಷ ಅನುಭವವು ಇಲ್ಲಿ ನುಡಿಗಟ್ಟಿನಲ್ಲಿ ರೂಪುಗೊಳ್ಳುತ್ತದೆ.

ಗಾದೆ ಪದದ ಉತ್ಪತ್ತಿ ?

‘ಗಾಥಾ’ ಎಂಬ ಪ್ರಾಕ್ರತ ಪದದ ಮತ್ತೊಂದು ರೂಪವವೇ ಗಾದೆ. 

ಕನ್ನಡ ಗಾದೆಗಳು ಮತ್ತು ವಿವರಣೆ Gade PDF

download 5 4
ಕನ್ನಡ ಗಾದೆಗಳು ಮತ್ತು ವಿವರಣೆ । Gadegalu in Kannada Best No1 Gade Mathugalu

ಇತರೆ ಪ್ರಬಂಧಗಳನ್ನು ಓದಿ

ಹವ್ಯಾಸಗಳು ಬಗ್ಗೆ ಪ್ರಬಂಧ

ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಅವರ ಜೀವನ ಚರಿತ್ರೆ

ತುಂಬಿದ ಕೊಡ ತುಳುಕುವುದಿಲ್ಲ ಗಾದೆ ಮಾತು ಅರ್ಥ ವಿವರಣೆ

ಒಂದು ರಾಷ್ಟ್ರ-ಒಂದು ಭಾಷೆ ಪ್ರಬಂಧ

ಧಾರ್ಮಿಕ ಹಬ್ಬಗಳು ಪ್ರಬಂಧ

Leave a Reply

Your email address will not be published. Required fields are marked *