ಪ್ರಥಮ ಪಿಯುಸಿ ಕನ್ನಡ ಬೋಳೇಶಂಕರ ನೋಟ್ಸ್ | 1st PUC Kannada Boleshankara Notes

boleshankara kannada notes | ಬೋಳೇಶಂಕರ ನೋಟ್ಸ್

Boleshankara Kannada Notes, ಬೋಳೇಶಂಕರ ನಾಟಕ, 1st puc kannada boleshankara notes, bole shankara 1st puc kannada notes, ಪ್ರಥಮ ಪಿ.ಯು.ಸಿ ಬೋಳೇಶಂಕರ ನಾಟಕ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 1st Puc Boleshankara Kannada Notes Question Answer Summary Guide Mcq Pdf Download in Kannada Medium Karnataka State Syllabus , Kseeb Solutions For Class 11 Kannada Boleshankara Notes 1st Puc Kannada Boleshankara Notes 1st Puc Kannada Boleshankara Nataka Notes Pdf Boleshankara Lesson in Kannada first puc kannada notes

ಪರಿವಿಡಿ

boleshankara kannada notes

  • ಚಂದ್ರಶೇಖರ ಕಂಬಾರ

ನಾಟಕಕಾರರ ಪರಿಚಯ : ಡಾ ॥ ಚಂದ್ರಶೇಖರ ಕಂಬಾರ

ಇವರ ಸಾಹಿತ್ಯ ಸಾಧನೆಗಾಗಿ ಭಾರತದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಎನಿಸಿದ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ .

ಬೆಳಗಾವಿ ಜಿಲ್ಲೆಯ ಘೋಡಗೇರಿಯವರು .

ತಂದೆ : ಬಸವಣ್ಣೆಪ್ಪ

ತಾಯಿ : ಚೆನ್ನಮ್ಮನವರ

ಕಾದಂಬರಿಗಳು

ಜಿಕೆ ಮಾಸ್ತರರ
ಪ್ರಣಯ ಪ್ರಸಂಗ
ಶಿಖರಸೂರ್ಯ

ಕವನ ಸಂಕಲನಗಳು

ಮುಗುಳು
ಹೇಳತೇನ ಕೇಳಾ
ತಕರಾರಿನವರು
ಬೆಳ್ಳಿಮೀನು
ಅಕ್ಕಕ್ಕು ಹಾಡುಗಳು

ನಾಟಕಗಳು

ಸಿರಿಸಂಪಿಗೆ
ಜೈಸಿದನಾಯ್ಕ
ಬೆಂಬತ್ತಿದ್ದ ಕಣ್ಣು
ಸಂಗ್ಯಾಬಾಳ್ಯಾ

ಪ್ರಶಸ್ತಿಗಳು

ಇವರಿಗೆ ನಾಡೋಜ ,
ಪದ್ಮಶ್ರೀ
ಕುಮಾರನ್ ಆಶನ್
ಠಾಗೋರ್
ಕಬೀರ ಸಮ್ಮಾನ್
ಹಾಗೂ ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ .

84 ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನಅಧ್ಯಕ್ಷರಾಗಿದ್ದರು

ಪಾತ್ರಗಳು :

ಕೋಡಂಗಿ
ಭಾಗವತ
ಬೋಳೇಶಂಕರ
ಸರದಾರ
ಸೋಮಣ್ಣ
ಸರದಾರನ ಹೆಂಡತಿ
ಸಾತ್ಕಾರ ಕಾಮಣ್ಣ
ಸಾತ್ಕಾರಣ್ಣನ ಹೆಂಡತಿ
ಪಿಶಾಚಿಗಳು

ರಾಜ
ಮಂತ್ರಿ
ರಾಜಕುಮಾರಿ
ಸೈನಿಕರು
ಹುಡುಗಿಯರು
ಸೈತಾನ
ಸೇವಕರು
ಸಿಪಾಯಿಗಳು
ಜನರು ,

ನಾಟಕದ ಸಾರಾಂಶ / ವಿಮರ್ಶೆ

Boleshankara Kannada Notes

ಕಂಬಾರರು ಜಾನಪದ ಸತ್ವವನ್ನು ಹೀರಿಕೊಂಡ ಕವಿ
ಉತ್ತರ ಕರ್ನಾಟಕದ ಆಡುಭಾಷೆಯನ್ನು ಲೀಲಾಜಾಲವಾಗಿ ಅವರು ಬಳಸುವುದರಿಂದ ಆ ವಲಯದ ಜನರ ಮಾತು ತುಂಬ ಹಿತ ; ಆತ್ಮೀಯತೆಯನ್ನುಂಟು ಮಾಡುವಂತಹುದು .

ಕಂಬಾರರ ಎಲ್ಲ ನಾಟಕಗಳಲ್ಲಿ ಹಾಡಿಗೆ ಪ್ರಾಧಾನ್ಯವಿದೆ . ಅಂತೆಯೇ ‘ ಬೋಳೇಶಂಕರ ‘ ನಾಟಕವೂ ಅಲ್ಲಲ್ಲಿ ಹಾಡಿನಿಂದ ಕೂಡಿರುವುದನ್ನು ನೀವುನೋಡಬಹುದು .

ಬೆಪ್ಪುತಕ್ಕಡಿ


ನೂತನ ಪಾತ್ರಗಳನ್ನು ನಾಟಕಕಾರರು ನಾಟಕದ ಆರಂಭದಲ್ಲಿ ತುಂಬ ಚೆನ್ನಾಗಿ ಪಾತ್ರಗಳ ಸಂಭಾಷಣೆಯ ಮೂಲಕ ಪರಿಚಯಿಸಿದ್ದಾರೆ .
ಕೋಡಂಗಿ ,ಭಾಗವತರ ಪರಿಚಯ ಈ ಮೂಲಕ ಸಾಗಿದೆ . ಕೋಡಂಗಿ ಶಿವಾಪುರದವನು , ಇವನ ಯಜಮಾನ – ಬೆಪ್ಪುತಕ್ಕಡಿ ಬೋಳೇಶಂಕರ , ಅವನಲ್ಲಿ ಕೋಡಂಗಿ ಕೆಲಸಕ್ಕಿದ್ದನು .


ಇದಕ್ಕಾಗಿ ಅವನು ಪಡೆಯುತ್ತಿದ್ದ ಸಂಬಳ ದಿನಕ್ಕೆ 10 ಏಟುಗಳು ಕೆನ್ನೆಗೆ ತಿನ್ನುತಿದ್ದನು , ಅಂತಹ ಏಟುಗಳೆಂಬ ಸಂಬಳವನ್ನು ತೆಗೆದುಕೊಂಡು ಏನು ಮಾಡುತ್ತೀಯಾ ? ಎಂಬ ಭಾಗವತನ ಸಹಜ ಪ್ರಶ್ನೆಗೆ ಕೋಡಂಗಿಯು “ ಅದನ್ನು ಮದುವೆಯಾದ ಮೇಲೆ ಹೆಂಡತಿಗೆ ಕೊಡುತ್ತೇನೆ ‘ ‘ ಎಂದು ಹೇಳುವುದರ ಮೂಲಕ ಪ್ರೇಕ್ಷಕರು ನಗೆಗಡಲಿನಲ್ಲಿ ಮುಳುಗುವಂತೆ ಮಾಡಿದ್ದಾರೆ .

ಭಾಗವತನು ಬೋಳೇಶಂಕರನ ಕಥೆ ಹೇಳಲಾರಂಭಿಸುತ್ತಾನೆ . ಬೋಳೇಶಂಕರನ ಮೂಲಪುರುಷ ಯಾರಿರಬಹು ದೆಂಬುದನ್ನು ಚರ್ಚೆಗೊಳಪಡಿಸಿ ಆ ಮೂಲಕ ಪುರುಷ ಮಂಗನಂಥ ಮಾನವನೋ ? ಮಾನವನಂಥ ಮಂಗನೋ ? ಎಂಬ
ಮಾರ್ಮಿಕ ಪ್ರಶ್ನೆಯನ್ನೆಸೆಯುತ್ತಾನೆ .

ಬೋಳೇಶಂಕರನ ಕಥೆಗೆ ಮುನ್ನಾ ಕೋಡಂಗಿಯು ಶಿವಾಪುರದ ಬಗ್ಗೆ ಒಂದು ಹಾಡನ್ನು ಹೇಳಿ ಕುಣಿಯಲೆಂದು ಭಾಗವತ ಆಶಿಸುತ್ತಾನೆ .

ಕೋಡಂಗಿಯು ಕುಣಿಯುತ್ತಾ ಹಾಡಿದ ಹಾಡಿನಲ್ಲಿ ಶಿವಾಪುರವೆಂಬ ಊರು ಪಾಪವನ್ನು ಓಡಿಸುವ ನದಿಯ ದಡದಲ್ಲಿದೆ ಆ ಊರಿನ ಜನ ಉಗುರು ಬೆಚ್ಚನೆಯ ಪ್ರೀತಿಯನ್ನು ಅನುಭವಿಸುತ್ತಾರೆಂದು ಹೇಳುವುದರ ಮೂಲಕ ಆ ಜನರ ಜೀವನ ಪ್ರೀತಿಯನ್ನು ನಾಟಕಕಾರರು ತುಂಬ ಚೆನ್ನಾಗಿ ವಿವರಿಸುತ್ತಾ ಹೋಗಿದ್ದಾರೆ .

boleshankara kannada notes

ಭಾಗವತನು ಬೋಳೇಶಂಕರನ ಕಥೆಯ ಹಿನ್ನೆಲೆಯಾಗಿ ಆದಿ ಕಾಲದಲ್ಲಿ ಹುಟ್ಟಿ ಬೆಳೆದು ವಿಕಾಸಗೊಂಡ ಪಕ್ಷಿ , ಪ್ರಾಣಿಗಳು ಹಾಗೂ ಪ್ರಕೃತಿಯ ಚೆಲುವನ್ನು ಸಂಕ್ಷಿಪ್ತವಾಗಿ ವರ್ಣಿಸಿ , ಶಿವಾಪುರದಲ್ಲಿ ಮೂವರು ಸೋದರರಿದ್ದರು .

ಮೊದಲನೆಯವನು ಸರದಾರ ಸೋಮಣ್ಣ , ಯಾವಾಗಲೂ ಆಳುವ ಸ್ವಭಾವದವ ಕುರಿ , ಕೋಳಿಗಳನ್ನಲ್ಲದೆ ಮನುಷ್ಯರನ್ನೂ ಕೊಲ್ಲ ಕ್ರೂರಿ ಎಂದೂ ಎರಡನೆಯವನು ಸವ್ಕಾರ್ ಕಾಮಣ್ಣ : ಹೊಟ್ಟೆ ಮಜಬೂತಣ್ಣನೆನಿಸಿದ ಅವನು ಎಣಿಕೆ ಮಾಡುವುದು ನಿಪುಣ ,

ಅವನಿಗೆ ಊರಿನಲ್ಲಿ ಯಾರಾರ ಜಮೀನು ಎಷ್ಟು ಎಪ್ಪಿದೆ ಎಂಬ ಲೆಕ್ಕಾಚಾರ ಚೆನ್ನಾಗಿ ಗೊತ್ತಿತ್ತೆಂದೂ ಪರಿಚಯಿಸುವು ಮೂರನೆಯ ಸೋದರನೆ ಬೆಪ್ಪತಕ್ಕಡಿ ಬೋಳೇಶಂಕರ : ಅವನು ಮಹಾ ಅಹಿಂಸಾವಾದಿ ; ನೊಣವನ್ನೂ ಕೊಂದವನಲ್ಲ : ಮಳೆ ಬರೋದನ್ನ ಒ0ದು ವಾರಕ್ಕೆ ಮೊದಲೇ ಹೇಳಬಲ್ಲವನಾಗಿದ್ದನು : ಕಾಲುವೆ ತೋಡಬಲ್ಲ .

ಹಕ್ಕಿಗಳ ಹಾಡಿಗೆ ಅರ್ಥ ಹೇಳಬಲ್ಲ . ಪ್ರಕೃತಿ ಪ್ರೇಮಿಯಾಗಿದ್ದನೆಂದು ಅವನ ಗುಣ , ನಡವಳಿಕೆಗಳನ್ನು ವಿವರಿಸಿದನು .

ಬೋಳೇಶಂಕರನನ್ನು ಊರಿನವರು – ಮನೆಯವರು ‘ ಬೆಪ್ತಕ್ಕಡಿ ‘ ಎಂದೇ ತಿಳಿದಿದ್ದರು . ಒಮ್ಮೆ ಇವನ ಅಣ್ಣ ಹಣ ಕೊಟ್ಟು ‘ ಎಣಿಸು ‘ ಎಂದಾಗ ಹಣವನ್ನು ಎಣಿಸಿ ” ಮೂರು ಕೈಯಿದೆ ‘ ‘ ಎಂದನಂತೆ . ಆಗ ಮನೆಯವರೆಲ್ಲ ಬಿದ್ದು ಬಿದ್ದು ನಕ್ಕರು . ಆಗ ಅವರ ಅತ್ತಿಗೆ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಳು .

ಆಗ ಇನ್ನೊಬ್ಬರನ್ನು ನೋಡಿ ನಕ್ಕರೆ ತಲೆಗೆ ಏಟು ಬೀಳುವುದೆಂದು ನೀತಿ ಹೇಳಿದನು . ಭಾಗವತನು ಕೋಡ೦ಗಿಯ ಬುದ್ಧಿಶಕ್ತಿಯನ್ನು ಪರೀಕ್ಷಿಸಲು ಒಂದು ಲೆಕ್ಕ ಕೊಟ್ಟನು . “ ನಿನ್ನ ಹತ್ತಿರ ಹತ್ತು ರೂಪಾಯಿ ಗಳಿವೆ ; ಕಳ್ಳ ಬಂದು ಐದನ್ನೊಯ್ಯುತ್ತಾನೆ .

ಆಗ ನಿನ್ನಲ್ಲಿ ಎಷ್ಟು ಹಣ ಉಳಿಯುತ್ತದೆ ? ‘ ಎಂಬ ಪ್ರಶ್ನೆಗೆ ಕೋಡಂಗಿ ‘ ಐದು ರೂಪಾಯಿ ಗಳು ‘ ‘ ಎಂದು ಉತ್ತರಿಸಿದನು . ಆ ಹೊತ್ತಿಗೆ ಅಲ್ಲಿಗೆ ಬಂದ ಬೋಳೇಶಂಕರ ‘ ಉತ್ತರ ತಪ್ಪು ಕಳ್ಳ ಒಯ್ಯುವುದಾದರೆ ಹತ್ತು ರೂಪಾಯಿಗಳನ್ನೂ ಒಯ್ಯುತ್ತಾನೆ . ಆದ್ದರಿಂದ ಉಳಿವ ಹಣ ಸೊನ್ನೆ ‘ ಎಂದು ತಿದ್ದಿದನು .

ನಾಟಕಕಾರರು ಬೋಳೇಶಂಕರನನ್ನು ಬಹಳ ಒಳ್ಳೆಯ ಸಮಯಕ್ಕೆ ಪ್ರವೇಶಿಸುವ ಹಾಗೆ ಮಾಡಿರುವರಲ್ಲದೆ ಅವನ ಬುದ್ಧಿ ಚಾತುರವನ್ನು ಪ್ರಕಟಿಸಿದ್ದಾರೆ .

Boleshankara Kannada Notes

ಕೋಡಂಗಿಯು ಬೋಳೇಶಂಕರನನ್ನು ಪ್ರಶಂಸಿಸುತ್ತಾನೆ . ಬೋಳೇಶಂಕರ ಆಗ ಒಂದು ಒಳ್ಳೆಯ ಹಾಡನ್ನು ಹಾಡಿದನು .
ಇದು ಒಂದು ಸೊಗಸಾದ ಹಾಡು . ಈ ಪ್ರಕೃತಿಯ ಚೆಲುವೆಲ್ಲವೂ ದೇವರಿಂದ ನಿರ್ಮಾಣಗೊಂಡಿದ್ದು , ಪ್ರಕೃತಿಯ ಚೆಲುವನ್ನು ನೋಡುವ ಕಣ್ಣುಗಳು ಧನ್ನ ಗುಡ್ಡದಂಚಿನಲ್ಲಿ ಕಾಣುವ ಚಂದ್ರ , ಆಕಾಶದಲ್ಲಿ ಕಣ್ಣುಬಿಡುವ ತಾರೆಗಳುಸಾವ್ಯಾರಣ್ಣನು ಬೆಟ್ಟದ ಮೇಲೆ ಕೆಂಪು ಹೂವಿನ ಮಳೆ ಇದೆ .

ಅಲ್ಲಿಂದ ದೇವತೆ ಕೈ ಮಾಡಿ ಕರೆದಂತೆ ಕಾಣಿಸುತ್ತಿದೆ ಭೋಳೇಶಂಕರನಿಗೆ ಕಾಣಿಸುತ್ತಿದೆಯೇ ? ಎಂದಾಗ ಅವನು ತನಗೆ ದೇವತೆ ಕಾಣುತ್ತಿಲ್ಲವೆಂದನು . ಸರದಾರನ ಹೆಂಡತಿಯು ದೇವತೆಗಳು ಮನುಷ್ಯರಿಗೆ ಮಾತ್ರ ಕಾಣಿಸುವುದು ; ನಿನಗೆ ಪಿಶಾಚಿಗಳು ಕಾಣುತ್ತವೆ ‘ ಎಂದು ಹಾಸ್ಯ ಮಾಡಿದಳು . ಆದರೆ ಭೋಳೇಶಂಕರ ಅತ್ತಿಗೆಗೆ ಸರಿಯಾದ ಉತ್ತರವನ್ನೇ ಕೊಟ್ಟನು .

” ಬೆಟ್ಟದ ಮೇಲಿರುವುದು ಗಿಡ , ಮರ , ಮಳೆಗಳು ಮಾತ್ರ ಅಲ್ಲಿ ದೇವತೆಗಳು ಕಾಣುತ್ತಿದ್ದಾರೆ ಎನ್ನುವುದಾದರೆ ಅದು ಪಿಶಾಚಿಗಳ ಕೃತ್ಯವೇ ಇರಬೇಕು ನಿಮ್ಮನ್ನು ನೋಡಿ ನಗು ಬರುವಂತಾಗಿದೆ ಎಂದನು .

ಬೋಳೇಶಂಕರ ನೋಟ್ಸ್

ಸಾವ್ಯಾರಣ್ಣನ ಹೆಂಡತಿಗೆ ರೇಗಿತು . ರೊಟ್ಟಿ ಎಷ್ಟು ತಿಂದೆ ಎಂಬ ಲೆಕ್ಕವೂ ತಿಳಿಯದವನು ತಮ್ಮನ್ನು ನೋಡಿ ನಗುವುದೆಂದ ರೇನರ್ಥ ? ಎಂದು ಸಾವ್ಯಾರಣ್ಣನ ಹೆಂಡತಿ ಹೇಳಿದರೆ , ಸರದಾರನ ಹೆಂಡತಿಯು ” ಈ ಬೆಪ್ಪಕ್ಕಡಿಗೆ ಮನುಷ್ಯರೆಂದರೆ ಆಗದು ಅವನು ಎತ್ತನ್ನು ತು ೦ ಬ ಇಷ್ಟಪಡುತ್ತಾನೆ . ಏಕೆಂದರೆ ಎತ್ತಿಗಿಂತ ಸ್ವಲ್ಪ ಬುದ್ಧಿ ಜಾಸ್ತಿ ತನಗಿದೆ ಎಂದುಕೊಂಡಿದ್ದಾನೆ ‘ ಎಂದು ಅಪಹಾಸ್ಯ ಮಾಡಿದಳು .

ಬೋಳೇಶ ೦ ಕರ ತಾನು ಬುದ್ದಿವಂತನಲ್ಲವೆಂಬುದನ್ನು ಒಪ್ಪುವುದಾಗಿ ಹೇಳಿ ಆ ಕಾರಣದಿಂದ ಉಳಿದವರಾಡಿದ ಮಾತುಗಳ ಅರ್ಥವಾಗುತ್ತಿಲ್ಲ . ಅರ್ಥವಾದರೂ ತನಗೇನು ಬೇಕೋ ಅದನ್ನೇ ತಾನು ಮಾಡುವವನು , ತನ್ನ ಬಗ್ಗೆ ನಂಬಿಕೆ ಇಲ್ಲದಿದ್ದರೆ ಎಲ್ಲರೂ ನರಕಕ್ಕೆ ಹೋಗಬಹುದೆಂದನು . ಆಗ ಅವನ ಅತ್ತಿಗೆಯರಿಗೆ ರೇಗಿತು .

ನರಕಕ್ಕೆ ಹೋಗು ಎಂದು ಬೈದರೂ ಎಲ್ಲರೂ ಸುಮ್ಮನಿರುವುದು ಸರಿಯಲ್ಲ , ಇವನ ಜೊತೆಗಿರುವುದೇ ಅವಮಾನ : ಇವನಿಂದ ದೂರವಾಗಿ ಯಾವುದಾದರೊಂದು ಅಂಗಡಿಯಲ್ಲಿ ಲೆಕ್ಕ ಬರೆದುಕೊಂಡು ಜೀವಿಸುವುದು ಸರಿ

ಇರೋ ಆಸ್ತಿಯನ್ನು ಮೂರು ಪಾಲು ಮಾಡಿ ಅವರವರ ಪಾಲನ್ನು ತೆಗೆದುಕೊಳ್ಳುವುದೇ ಸರಿ ಎಂದು ಒಬ್ಬ ಅತ್ತಿಗೆ ಹೇಳಿದರೆ , ಮತ್ತೊಬ್ಬಳು ” ಇವನಿಗೆ ಹೆಂಡತಿ ಮಕ್ಕಳಿಲ್ಲ ; ಮುಂದೆಯೂ ಯಾವ ಹುಡುಗಿಯೂ ಇವನನ್ನು ಮದುವೆಯಾಗಲು ಒಪ್ಪುವುದಿಲ್ಲ . ಆದ್ದರಿಂದ ಇವನಿಗೆ ಆಸ್ತಿ ಕೊಡುವುದು ಬೇಡ ‘ ಎಂದು ಸಲಹೆ ನೀಡಿದಳು .

ಬೋಳೇಶಂಕರನ ಸೋದರರಾದ ಸರದಾರ ಮತ್ತು ಸಾವ್ಯಾರಣ್ಣ ಅವರು ಈ ಮಾತುಗಳನ್ನು ಒಪ್ಪಿ , ಆಸ್ತಿಯನ್ನು ಪಾಲು ಮಾಡಿಕೊಳ್ಳಲು ನಿರ್ಧರಿಸಿದರು . ಆಗ ಬೋಳೇಶಂಕರನು ತನ್ನ ಸೋದರರಿಗಾಲಿ , ಅತ್ತಿಗೆಯರಿಗಾಗಲೀ ಹೊಲದಲ್ಲಿ ದುಡಿದು ಅಭ್ಯಾಸವಿಲ್ಲ . ಆಸ್ತಿ ಪಾಲು ಮಾಡಿಕೊಂಡರೆ ಅಣ್ಣಂದಿರಿಗೆ ಕಷ್ಟವೆಂದನು .

ಆದರೆ ಅತ್ತಿಗೆಯರು ಬಾಯಿ ಹಾಕಿ ಚೆನ್ನಾಗಿ ಬೋಳೆಶಂಕರನನ್ನು ಬೈದು , ಬೆಪ್ತಕ್ಕಡಿ ಬೋಳೇಶಂಕರನಿಗೆ ನದಿ ಹತ್ತಿರದ ಕಲ್ಲುಮೊರಡಿಯ ಭಾಗ ಕೊಟ್ಟು ಉಳಿದವರು ಫಲವತ್ತಾದ ಭೂಮಿಯನ್ನು ಪಾಲಾಗಿ ತೆಗೆದುಕೊಳ್ಳಬೇಕೆಂದರು .

ಬೆಳೆಯನ್ನು ಬೆಳೆಯಲಾಗದ ಭೂಮಿಯನ್ನು ಬೋಳೇಶಂಕರನಿಗೆ ಕೊಟ್ಟಾಗ ಅವನು ” ” ನಿಮಗೇನು ಬೇಕೋ ಅದನ್ನು ತೊಗಂಡು ನಿಮ್ಮ ಪಿಶಾಚಿಗಳ ಸಮೇತ ಹೋಗಿ ‘ ಎಂದು ಬೈದನು .

ಹೀಗೆ ಬೈಸಿಕೊಂಡರೂ ತಮಗೆ ಲಾಭದ ಭೂಮಿ ಸಿಕ್ಕಿತೆಂದು ಅಣ್ಣಂದಿರು ತೆಪ್ಪಗಾದರು . ತನಗೆ ತನ್ನ ಅಭಿಪ್ರಾಯದಂತೆ ನಡೆದುಕೊಳ್ಳುವ ಸ್ವಾತಂತ್ರ್ಯವಿದೆ ಎಂದು ಹೇಳಿದನಲ್ಲದೆ ಬದುಕಿನಲ್ಲಿ ಮುಳ್ಳು ಹಾಸಿಗೆ ಮೇಲೆ ಮಲಗಿದರೂ ಹೂವಿನ ಹಾಗೆ ನಗುತ್ತಿರಬೇಕೆ ೦ ದು ಜೀವನ ಸಿದ್ಧಾಂತವನ್ನು ಬೋಧಿಸಿದನು .

ನಗಬೇಕೋ ತಮ್ಮಾ ನಗಬೇಕೋ

ನಾಟಕಕಾರರಾದ ಚಂದ್ರಶೇಖರ ಕಂಬಾರರು ಈ ಅಂಕದಲ್ಲಿ ಬೋಳೇಶಂಕರ ಮತ್ತು ಪಿಶಾಚಿಗಳ ನಡುವೆ ನಡೆಯುವ ಸಂಭಾಷಣೆಯನ್ನು ಬರೆದಿದ್ದಾರೆ . ಪಿಶಾಚಿಯೊಂದು ಕುಣಿಯುತ್ತಾ ಬಂದು ‘ ನಗಬೇಕೋ ತಮ್ಮನಗಬೇಕೋ ‘ ಎಂಬ ಹಾಡನ್ನು ಹೇಳುತ್ತದೆ , ಆದರೆ ಬೋಳೇಶಂಕರ ಹಾಡಿದ ಹಾಡನ್ನೇ ಪಿಶಾಚಿಯು ಹೇಳುವುದಿಲ್ಲ . ನಮ್ಮ ಬೆರಳಿನಿಂದ ನಮ್ಮ ಕಣ್ಣಿಗೆ ನಾವೇ ಚುಟ್ಟಿಕೊಂಡರೂ ನಗುತ್ತಿರಬೇಕು .

ಈ ನಗು ಸಾಮಾನ್ಯ ನಗುವಲ್ಲ : ಕಟ್ಟಿಸಿಕೊಂಡ ಚಿನ್ನದ ಹಲ್ಲುಗಳು ಆ ನಗುವಿನ ಕಂಪನದಿಂದ ಉದುರಬೇಕು ಎಂದು ಪಿಶಾಚಿಗಳು ಹೇಳುತ್ತವೆ . ಪಿಶಾಚಿಯು ತನ್ನನ್ನು ಪರಿಚಯ ಮಾಡಿಕೊಡುವುದಕ್ಕೆ ಭಾಗವತರು ಹೆದರುವುದರಿಂದ ತಾನೇ ತನ್ನ ಪರಿಚಯ ಮಾಡಿಕೊಡುವುದಾಗಿ ಹೇಳಿತು . ತಾನು ಪಿಶಾಚಿ , ಸೈತಾನನ ಪರಿವಾರದಲ್ಲಿದ್ದವನು . ಆದರೆ ಸೈತಾನನಿಗಿರುವ ಶಕ್ತಿ ತನಗಿಲ್ಲ .

ಆದರೆ ಸೈತಾನನ ಶಕ್ತಿಯಲ್ಲಿ ಒಂದಂಶ ಉಂಟು , ಬೇರೆ ಪಿಶಾಚಿಗಳಿಗಿರುವ ದುಷ್ಟತನ ತನಗಿಲ್ಲ . ಆದರೂ ಜನಕ್ಕೆ ಯಾವುದಾದ ರೊಂದು ಅಂಟು ರೋಗವನ್ನು ಅಂಟಿಸಿ ,

ಸಂತೋಷಪಡುವ ಸ್ವಭಾವ ತನ್ನದು ಮನುಷ್ಯನಲ್ಲಿರುವ ದೌರ್ಬಲ್ಯಗಳನ್ನು ಗುರುತಿಸಿ ಅವರ ಮನಸ್ಸಿನೊಳಗೆ ಪ್ರವೇಶಿಸುವ ಶಕ್ತಿ ತನಗಿದೆ , ಸೈತಾನನ ದೊರೆಯೇ ಬೋಳೇಶಂಕರನ ಸೋದರರಲ್ಲಿ ಜಗಳ ಹುಟ್ಟಿಸಬೇಕೆಂದು ಹೇಳಿರುವುದುದರಿಂದ ತಾನು ಭೂಲೋಕಕ್ಕೆ ಬಂದಿರುವುದು.

Boleshankara Kannada Notes

ಬೋಳೇಶಂಕರ ನಾಟಕ ಕನ್ನಡ ನೋಟ್ಸ್ । Boleshankara Kannada Notes
ಪ್ರಥಮ ಪಿಯುಸಿ ಕನ್ನಡ ಬೋಳೇಶಂಕರ ನೋಟ್ಸ್

ಒಂದು ವಾಕ್ಯದಲ್ಲಿ ಉತ್ತರಿಸಿ

ಬೋಳೇ ಶಂಕರನ ಊರು ಯಾವುದು ?

ಬೋಳೇಶಂಕರನ ಊರು ‘ ಶಿವಾಪುರ ‘

ಬೋಳೇಶಂಕರ ಅಣ್ಣ ಅತ್ತಿಗೆಯರಿಗೆ ಉಂಟಾದ ಆಸೆ ಯಾವುದು ?

ಬೋಳೇಶಂಕರನ ಅಣ್ಣ ಹಾಗೂ ಅತ್ತಿಗೆಯರಿಗೆ ಶಿವಾಪುರದ ಬಳಿ ಇದ್ದ ಎತ್ತರವಾದ ಬೆಟ್ಟದ ನೆತ್ತಿಯಿಂದ ಕೆಳಕ್ಕೆ ನೆಗೆಯುವ ಆಸೆ ಉಂಟಾಯಿತು .

ಪಿಶಾಚಿಗಳು ಮನುಷ್ಯರನ್ನು ಯಾವುದರ ಮೂಲಕ ಪ್ರವೇಶಿಸುತ್ತವೆ ?

ಪಿಶಾಚಿಗಳು ಮನುಷ್ಯರನ್ನು ಅವರ ದೌರ್ಬಲ್ಯಗಳ ಮೂಲಕ ಪ್ರವೇಶಿಸುತ್ತವೆ .

‘ ಬದುಕಿನ ಬಗ್ಗೆ ಅವನಿಗೆ ಒಂದೂ ತಕರಾರಿಲ್ಲ ‘ ಎಂದು ಪಿಶಾಚಿಯು ಯಾರ ಬಗ್ಗೆ ಹೇಳುತ್ತದೆ ?

‘ ಬದುಕಿನ ಬಗ್ಗೆ ಅವನಿಗೆ ಒಂದೂ ತಕರಾರಿಲ್ಲ ‘ ಎಂದು ಪಿಶಾಚಿಯು ಬೋಳೇಶಂಕರನ ಬಗ್ಗೆ ಹೇಳುತ್ತದೆ .

ಪಿಶಾಚಿಗಳು ಯಾರ ಹೆಸರು ಕೇಳಿದರೆ ಹೆದರುತ್ತವೆ ?

ಪಿಶಾಚಿಗಳು ‘ ಶಿವ’ನ ಹೆಸರನ್ನು ಕೇಳಿದರೆ ಹೆದರುತ್ತವೆ .

ಬೋಳೇಶಂಕರನ ಹೊಟ್ಟೆನೋವು ಯಾವುದರಿಂದ ಮಾಯವಾಯಿತು ?

ಬೋಳೇಶಂಕರನ ಹೊಟ್ಟೆನೋವು ಬೇರನ್ನು ತಿನ್ನುವುದರಿಂದ ಮಾಯವಾಯಿತು .

ಬೋಳೇಶಂಕರ ಎಲ್ಲಿ ಕುಳಿತು ಊಟ ಮಾಡಬೇಕೆಂದು ಅವನ ಅತ್ತಿಗೆ ಹೇಳುತ್ತಾಳೆ ?

ಬೋಳೇಶಂಕರನು ದನದ ಕೊಟ್ಟಿಗೆಯಲ್ಲಿ ಕುಳಿತು ಊಟ ಮಾಡಬೇಕೆಂದು ಅವನ ಅತ್ತಿಗೆ ಹೇಳುತ್ತಾಳೆ .

ಬೋಳೇಶಂಕರನಿಂದ ಬೇರು ಕಿತ್ತುಕೊಳ್ಳಲು ಪಿಶಾಚಿ ಯಾವ ವೇಷದಲ್ಲಿ ಬರುತ್ತದೆ ?

ಬೋಳೇಶಂಕರನಿಂದ ಬೇರು ಕಿತ್ತುಕೊಳ್ಳಲು ಪಿಶಾಚಿಯು ಮುದುಕಿಯ ವೇಷದಲ್ಲಿ ಬರುತ್ತದೆ .

ರಾಜಕುಮಾರಿಗೆ ಬಂದ ರೋಗ ಯಾವುದು ?

ರಾಜಕುಮಾರಿಗೆ ಬಂದುದು ಹೊಟ್ಟೆನೋವಿನ ರೋಗ

ಹುಡುಗಿಯರ ಹಾಡಿಗೆ ಬೋಳೇಶಂಕರ ಬಹುಮಾನವಾಗಿ ಏನನ್ನು ಕೊಡುವನು ?

ಹುಡುಗಿಯರ ಹಾಡಿಗೆ ಬೋಳೇಶಂಕರ ಬಹುಮಾನವಾಗಿ ಚಿನ್ನದ ನಾಣ್ಯಗಳನ್ನು ಕೊಟ್ಟನು .

ಸೈನಿಕರು ಯಾವುದಕ್ಕೆ ಜಯವಾಗಲಿ ಎಂದು ಹಾಡಿದರು ?

ಸೈನಿಕರು ಕೋವಿಗೆ – ಹಿಂಸೆಗೆ ಜಯವಾಗಲಿ ಎಂದು ಹಾಡಿದರು .


ಕತ್ತಲೆಯ ನಿಜ ಜನಕನು ಯಾರು ?

ಸರ್ವರ ಕೆಡುಕಿನ ಒಡೆಯನಾದ ಸೈತಾನನೇ ಕತ್ತಲೆಯ ನಿಜ ಜನಕ

ಅಣ್ಣಂದಿರಿಗೆ ಯಾವ ರೋಗ ಹಿಡಿದಿದೆ ಎಂದು ಬೋಳೇಶಂಕರ ಹೇಳುತ್ತಾನೆ ?

ಅಣ್ಣಂದಿರಿಬ್ಬರಿಗೂ ಅತಿಯಾಸೆಯ ರೋಗ ಹಿಡಿದಿದೆ ಎಂದು ಬೋಳೇಶಂಕರ ಹೇಳಿದನು .

ಬೋಳೇಶಂಕರ ನಾಟಕ ಕನ್ನಡ ನೋಟ್ಸ್ । Boleshankara Kannada Notes
ಬೋಳೇಶಂಕರ ನಾಟಕ ಕನ್ನಡ ನೋಟ್ಸ್ । Boleshankara Kannada Notes

ಸಂದರ್ಭದೊಡನೆ ವಿವರಿಸಿ

ಬ್ಯಾಂಕಿನಲ್ಲಿ ಕೂಡಿಸಿಟ್ಟು ಮದುವೆ ಆದಮೇಲೆ ಹೆಂಡತಿಗೆ ಕೊಡ್ತೀನಿ.

Boleshankara Kannada Notes
ಮೇಲಿನ ವಾಕ್ಯವನ್ನು ಡಾ. ಚಂದ್ರಶೇಖರ ಕಂಬಾರರ ಬೋಳೆಶಂಕರ ಎಂಬ ನಾಟಕದಿಂದ ಆರಿಸಲಾಗಿದೆ. ಈ ಮಾತನ್ನು ಕೋಡಂಗಿಯು ಸೂತ್ರದಾರನಿಗೆ ಹೇಳಿದನು.

ಕೋಡಂಗಿಯು ತಾನು ಬೋಳೆಶಂಕರನಲ್ಲಿ ಕೆಲಸಕ್ಕೆ ಇದ್ದೇನೆ ಎಂದು ಭಾಗವತನೊಂದಿಗೆ ಹೇಳುತ್ತಿದ್ದಾಗ ಭಾಗವತನು ನಿನ್ನ ಸಂಬಳ ಎಷ್ಟು ಎಂದು ಕೇಳುತ್ತಾನೆ.

ಅದಕ್ಕೆ ಉತ್ತರವಾಗಿ ದಿನಕ್ಕೆ ಕೆನ್ನೆಮೇಲೆ ಹತ್ತು ಏಟು ಎಂದು ಹೇಳುತ್ತಾನೆ. ಭಾಗವತನು ಅದನ್ನೇ ಲೆಕ್ಕಾ ಹಾಕಿ ದಿನಕ್ಕೆ ಹತ್ತಾದರೆ ತಿಂಗಳಿಗೆ ಮುನ್ನೂರಾಯ್ತು ವರ್ಷಕ್ಕೆ ಮೂರು ಸಾವಿರದ ಆರುನೂರು ಏಟು ಯಾರಿಗುಂಟು ಯಾರಿಗಿಲ್ಲ.

ಇಷ್ಟೆಲ್ಲಾ ಸಂಬಳ ತೆಗೆದುಕೊಂಡು ಏನು ಮಾಡುತ್ತೀ ಎಂದಾಗ ಕೋಡಂಗಿ ಈ ಮೇಲಿನಂತೆ ಹೇಳುತ್ತಾನೆ.

ಇವನಿಗೇನು ಹೆಂಡತೀನೇ ಮಕ್ಕಳೇ?

ಬೋಳೇಶಂಕರ ನೋಟ್ಸ್

ಈ ಮೇಲಿನ ವಾಕ್ಯವನ್ನು ಡಾ. ಚಂದ್ರಶೇಖರ ಕಂಬಾರರ ಬೋಳೆಶಂಕರ ಎಂಬ ನಾಟಕದಿಂದ ಆರಿಸಲಾಗಿದೆ. ಈಮಾತನ್ನು ಸರದಾರನ ಹೆಂಡತಿ ಸರದಾರನಿಗೆ ಹೇಳುತ್ತಾಳೆ.

ಆಸ್ತಿಯನ್ನು ಹಂಚಿಕೊಳ್ಳುವ ವಿಷಯಬಂದಾಗ ಬೋಳೇಶಂಕರನು ತನ್ನ ಅಣ್ಣಂದಿರನ್ನು ಕುರಿತು “ ನೀವಾಗಲಿ ನಿಮ್ಮ ಹೆಂಡಂದಿರಾಗಲಿ ಹೊಲದಲ್ಲಿ ದುಡಿದವರಲ್ಲ, ಕಷ್ಟಪಟ್ಟವರಲ್ಲ” – ಹೇಗೆ ಬದುಕುತ್ತೀರಿ ಎಂಬ ಅರ್ಥದಲ್ಲಿ ಕೇಳಿದರೆ ಸರದಾರ ಅಣ್ಣ ಆಸ್ತಿಯನ್ನು ಮೂರು ಭಾಗ ಮಾಡೋಣ ಒಂದು ಭಾಗ ನೀನು ತಗೋ ಎಂದಾಗ ಸರದಾರನ ಹೆಂಡತಿ ಈ ಮೇಲಿನ ಮಾತನ್ನು ಹೇಳುತ್ತಾಳೆ.


ಒಂದು ವೇಳೆ ಮದುವೆಯಾಗಲು ಒಪ್ಪಿದರೂ ಯಾರೂ ಹೆಣ್ಣು ಕೊಡಲು ಮುಂದೆ ಬರುವುದಿಲ್ಲ ಎಂದು ಕೇವಲವಾಗಿ ಮಾತನಾಡುತ್ತಾಳೆ

ಕೊಳೆತ ಬಲೆ ಹಾಕಿ ಎಳೆದರೂ ಬರುವಂಥವರು


ಚಂದ್ರಶೇಖರ ಕಂಬಾರ ಅವರು ರಚಿಸಿರುವ ಬೋಳೇಶಂಕರ ‘ ಎಂಬ ನಾಟಕದಿಂದ ಈ ಸಾಲನ್ನು ತೆಗೆದುಕೊಳ್ಳಲಾಗಿದೆ . ಮೊದಲನೆಯ ಪಿಶಾಚಿ ಈ ಮಾತುಗಳನ್ನು ಮುಂದೆ ಹೇಳುತ್ತದೆ .

ಸೈತಾನನು ಮೂರು ಪಿಶಾಚಿಗಳನ್ನು ಭೂಲೋಕಕ್ಕೆ ಕಳುಹಿಸಿ ಬೋಳೇಶಂಕರ ಹಾಗೂ ಅವನ ಸೋದರರ ನಡುವೆ ಕಲಹ ಹುಟ್ಟಿಸಿ ಎಲ್ಲರನ್ನು ನಾಶ ಮಾಡಲು ಕಳುಹಿಸಿಕೊಟ್ಟನು . ಬೋಳೇಶಂಕರ ಮುಗ್ಧನಾಗಿದ್ದರೂ – ಲೋಕದ ದೃಷ್ಟಿಯಿಂದ ದಡ್ಡನೆನಿಸಿದರೂ ಪಿಶಾಚಿಗಳ ತಂತ್ರಕ್ಕೆ ಬಲಿಯಾಗಲಿಲ್ಲ .

ಆದರೆ ಬೋಳೇಶಂಕರನ ಸೋದರರು ಪಿಶಾಚಿಗಳ ತಂತ್ರಕ್ಕೆ ಬಲಿಯಾದರು . ಬೋಳೇಶಂಕರನ ಸೋದರರ ದೌರ್ಬಲ್ಯದ ಪರಮಾವಧಿಯನ್ನು ಒಂದನೆಯ ಪಿಶಾಚಿಯು ಈ ಮೇಲಿನ ಮಾತುಗಳ ಮೂಲಕ ತಿಳಿಸುತ್ತದೆ . ಕೊಳೆತ ಬಲೆಯನ್ನು ನೀರಿನಲ್ಲಿ ಬೀಸಿ ಎಳೆದಾಗ ಸಾಮಾನ್ಯವಾಗಿ ಬಲೆ ಹರಿಯುತ್ತದೆ .

ಆದರೆ ಮೀನುಗಳ ತೂಕ ತೀರಾ ಕಡಿಮೆ ಇದ್ದರೆ ಒಂದೆರಡು ಮೀನುಗಳು ಸಿಕ್ಕಿಹಾಕಿಕೊಳ್ಳಬಹುದು . ಇದರಂತೆ ಬೋಳೇಶಂಕರನ ಸೋದರರನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಕೊಂಚವೂ ಶ್ರಮವಾಗಲಿಲ್ಲವೆಂದು ಪಿಶಾಚಿ ಹೇಳಿಕೆ ನೀಡಿದೆ . ಆಸೆಯೆಂಬ ಪಾಶಕ್ಕೆ ಸಿಲುಕುವ ಮನುಷ್ಯನನ್ನು ಸೋಲಿಸುವುದು ಸುಲಭವೆಂದು ಇದರಿಂದ ತಿಳಿಯುತ್ತದೆ .

ಒಂದು ಹೊತ್ತು ರೊಟ್ಟಿ ತಿನ್ನದಿದ್ದರೆ ನಾನೇನು ಸಾಯವುದಿಲ್ಲ .

” ಡಾ ॥ ಚಂದ್ರಶೇಖರ ಕಂಬಾರ ಅವರು ಬರೆದಿರುವ ‘ ಬೋಳೇಶಂಕರ ‘ ಎಂಬ ನಾಟಕದಿಂದ ಈ ವಾಕ್ಯವನ್ನು ಸ್ವೀಕರಿಸಿದೆ . ಬೋಳೇಶಂಕರ ಈ ಮಾತುಗಳನ್ನು ತನಗೆ ತಾನೇ ಹೇಳಿಕೊಳ್ಳುತ್ತಾನೆ . ಬೋಳೇಶಂಕರನನ್ನು ನಾಶ ಮಾಡಲು ಪಿಶಾಚಿಗಳು ಅನೇಕ ಉಪಾಯಗಳನ್ನು ಮಾಡಲಾರಂಭಿಸಿದವು .

Boleshankara Kannada Notes

ಆದರೆ ಅವು ಜಯಶೀಲವಾಗಲಿಲ್ಲ . ಬೋಳೇಶಂಕರನ ಆಹಾರವನ್ನು ಕದ್ದರೆ ಅವನು ಕೋಪಿಸಿಕೊಂಡು ವಾಚಾಮಗೋಚರವಾಗಿ ಬಯ್ಯುತ್ತಾನೆ , ಆಗ ಅವನ ದುರ್ಬಲ ಮನಸ್ಸಿನ ಮೂಲಕ ಅವನ ಬುದ್ಧಿಯನ್ನು ಪ್ರವೇಶಿಸಲು ಅನುಕೂಲವಾಗುತ್ತದೆ ಎಂದು ಬೋಳೇಶಂಕರನ ರೊಟ್ಟಿಯನ್ನು ಪಿಶಾಚಿ ಕದಿಯಿತು .

ಹಸಿದು ಬಂದ ಬೋಳೇಶಂಕರ ತನ್ನ ರೊಟ್ಟಿ ಇಲ್ಲದಿರುವುದನ್ನು ನೋಡಿ “ ಯಾರೋ ಹಸಿದವರು ತಿಂದಿದ್ದಾರೆ . ಒಂದು ಹೊತ್ತು ರೊಟ್ಟಿ ತಿನ್ನದಿದ್ದರೆ ನಾನೇನು ಸಾಯುವುದಿಲ್ಲ ‘ ಎಂದು ಸಮಾಧಾನ ಮಾಡಿಕೊಂಡನೇ ವಿನಾ ಕೋಪಿಸಿಕೊಳ್ಳಲಿಲ್ಲ . ಇದರಿಂದ ಪಿಶಾಚಿಯ ತಂತ್ರ ವಿಫಲವಾಯಿತು .

ನಾನೇನಾದರೂ ರಾಜನಾದರೆ ನಿಮ್ಮಂಥ ಸೋಂಬೇರಿಗಳಿಗೆ ಊಟ ಹಾಕೋದೇ ಇಲ್ಲ


.ಡಾ . ಚಂದ್ರಶೇಖರ ಕಂಬಾರರು ಬರೆದಿರುವ ‘ ಬೋಳೇಶಂಕರ ‘ ನಾಟಕದಿಂದ ಈ ವಾಕ್ಯವನ್ನು ಎತ್ತಿಕೊಳ್ಳಲಾಗಿದೆ . ಬೋಳೇಶಂಕರನು ಈ ಮಾತುಗಳನ್ನು ಆಕ್ರೋಶದಿಂದ ಒಂದನೆಯ ಪಿಶಾಚಿಗೆ ಹೇಳುತ್ತಾನೆ . ಬೋಳೇಶಂಕರನನ್ನು ನಾಶ ಮಾಡಲು ಪಿಶಾಚಿಯು ಬೋಳೇಶಂಕರನ ರೊಟ್ಟಿಯನ್ನು ಕದ್ದು ತಿಂದಿತು .

ಆದರೆ ಇದರಿಂದ ಬೋಳೇಶಂಕರ ಕೋಪಗೊಳ್ಳಲಿಲ್ಲ . ಆಗ ಪಿಶಾಚಿಯು ಮನುಷ್ಯರ ವೇಷವನ್ನು ಹಾಕಿಕೊಂಡು ಬಂದು ಬೋಳೇಶಂಕರನೊಡನೆ ಸಂಭಾಷಣೆಯನ್ನಾರಂಭಿಸಿತು . ಎರಡು ಎರಡು ಸೇರಿ ಐದಾಗುವ ಆಟವನ್ನಾಡಲು ಪಿಶಾಚಿ ಕರೆದಾಗ ಬೋಳೇಶಂಕರ ಅದನ್ನು ಟೀಕಿಸಿದನು .

ಪಿಶಾಚಿಯು ತಾನು ಕೇಳಿದಂತೆ ತನಗೆ ಐದು ರೂಪಾಯಿಗಳನ್ನು ಕೊಡದಿದ್ದರೆ ಹಣವನ್ನು ಕದಿಯುವುದಾಗಿ ಹೇಳಿತು . ಆಗ ಬೋಳೇಶಂಕರ ‘ ಕದ್ದರೆ ಕೈ ಮುರಿಯುವುದಾಗಿ ಹೇಳಿದನು . ಆಗ ಪಿಶಾಚಿ ಜೋರು ಮಾಡಿತು . ಬೋಳೇಶಂಕರ ಇನ್ನೂ ಹೆಚ್ಚಾಗಿ ಜೋರುಮಾಡಿ ತಕ್ಷಣ ತೊಲಗದಿದ್ದರೆ ಕಾಲು ಮುರಿಯುವುದಾಗಿ ಹೇಳುವುದರ ಜೊತೆಗೆ ತನ್ನ ರಾಜ್ಯದಲ್ಲಿ ಸೋಮಾರಿಗಳಿಗೆ ಊಟವನ್ನು ಹಾಕುವುದೇ ಇಲ್ಲ ‘ ಎಂದು ಘೋಷಿಸಿದನು .

ಹೆಣ್ಣಿದ್ದ ಮನೆಯ ಸೌಭಾಗ್ಯವೇ ಬೇರೆ

” ಡಾ ಚಂದ್ರಶೇಖರ ಕಂಬಾರ ಅವರು ಬರೆದಿರುವ ‘ ಬೋಳೇಶಂಕರ ‘ ಎಂಬ ನಾಟಕದಿಂದ ಈ ವಾಕ್ಯವನ್ನು ತೆಗೆದು ಕೊಳ್ಳಲಾಗಿದೆ . ಬೋಳೇಶಂಕರನು ಈ ಮಾತುಗಳನ್ನು ಸಾತ್ಕಾರನಿಗೆ ಹೇಳುತ್ತಾನೆ .

ಬೋಳೇಶಂಕರನ ಅಣ್ಣಂದಿರು ತಮ್ಮ ಹೆಂಡತಿಯರ ಮಾತುಗಳಿಗೆ ಒಪ್ಪಿ ಪಿತ್ರಾರ್ಜಿತ ಆಸ್ತಿಯನ್ನು ಪಾಲು ಮಾಡಿಕೊಂಡು ಬೋಳೇಶಂಕರನಿಂದ ದೂರವಾದರು .

ಬೋಳೇಶಂಕರನಿಗೆ ನ್ಯಾಯವಾಗಿ ಕೊಡಬೇಕಾದುದನ್ನು ಕೊಡದೆ ಕಲ್ಲುನೆಲವನ್ನು ಬಿಟ್ಟುಕೊಟ್ಟರು . ಆದರೆ ಆ ಆಸ್ತಿಯನ್ನು ಬೋಳೇಶಂಕರನ ಸೋದರರು ಕಳೆದುಕೊಂಡು ಕೆಲವೇ ದಿನಗಳಲ್ಲಿ ಮತ್ತೆ ಬೋಳೇಶಂಕರನ ಬಳಿ ಆಶ್ರಯಕ್ಕೆ ಬರುವಂತಾಯಿತು . ಆಗ ಬೋಳೇಶಂಕರ ಅವರಿಗೆ ಆಶ್ರಯ ಕೊಡಲೊಪ್ಪಿ ತನ್ನ ಮನೆಯಲ್ಲಿ ಅತ್ತಿಗೆಯರು ಇರುವುದರಿಂದ ಎಲ್ಲ ಸೋದರರೂ ಒಟ್ಟಿಗೆ ಕುಳಿತು ಊಟ ಮಾಡಬಹುದು .

ಮನೆಗೆ ಹೆಣ್ಣು ಭೂಷಣವೆಂದು ಹೇಳುತ್ತಾರೆ ಎಂದು ಹೇಳಿ , ಈ ಮೇಲಿನ ಮಾತುಗಳನ್ನಾಡಿದನು . ಆದರೆ ಆ ಹೆಣ್ಣುಗಳು ( ಅತ್ತಿಗೆಯರು ) ರಾಕ್ಷಸಿಯರಾಗಿದ್ದರು . ಇವನ ಆಶ್ರಯದಲ್ಲಿದ್ದರೂ ಇವನಿಗೆ ಮನೆಯೊಳಗೆ ಊಟ ಹಾಕದ ದನದ ಕೊಟ್ಟಿಗೆಯಲ್ಲಿ ಊಟ ಮಾಡಂದರು .

” ಹಸಿರು ಸಾಮ್ರಾಜ್ಯದ ನಮ್ಮ ಪ್ರಜೆ ಕಾಣಯ್ಯ ನಾನು

ಡಾ . ಚಂದ್ರಶೇಖರ ಕಂಬಾರ ಅವರು ಬರೆದಿರುವ ‘ ಬೋಳೇಶಂಕರ ‘ ಎಂಬ ನಾಟಕದಿಂದ ಆರಿಸಲಾಗಿರುವ ಈ ವಾಕ್ಯವನ್ನು ಬೋಳೇಶಂಕರನೇ ಕೋಡಂಗಿಗೆ ಹೇಳುತ್ತಾನೆ . ಬೋಳೇಶಂಕರನಿಗೆ ಆಸ್ತಿಯಲ್ಲಿ ನಾಮಹಾಕಿ ದೂರ ಹೋದ ಸಹೋದರರು ಎಲ್ಲವನ್ನು ಕಳೆದುಕೊಂಡು ಬೋಳೇಶಂಕರನ ಬಳಿ ಆಶ್ರಯಕ್ಕೆ ಬಂದರು .

ಬೋಳೇಶಂಕರ ಅಣ್ಣ ಹಾಗೂ ಅತ್ತಿಗೆಯರಿಗೆ ತನ್ನ ಮನೆಯಲ್ಲಿ ಆಶ್ರಯ ಕೊಟ್ಟರೂ ಅವನ ಅತ್ತಿಗೆಯರು ಬೋಳೇಶಂಕರನಿಗೆ ಅವನ ಮನೆಯಲ್ಲಿ ಅವನಿಗೆ ಊಟ ಹಾಕಲಿಲ್ಲ . ದನದ ಕೊಟ್ಟಿಗೆಗೆ ಹೋಗಿ ಊಟ ಮಾಡೆಂದರು . ಅದನ್ನು ಕೋಡಂಗಿ ತೀವ್ರವಾಗಿ ಆಕ್ಷೇಪಿಸಿದನು .

Boleshankara Kannada Notes

ಆಗ ಬೋಳೇಶಂಕರ ತಾವಿಬ್ಬರೂ ತೋಟಕ್ಕೆ ಹೋಗಿ ಊಟ ಮಾಡೋಣ , ಅಲ್ಲಿ ಹಸಿರಿನ ಸಾಮ್ರಾಜ್ಯವಿದೆ . ಆ ಹಸಿರನ್ನು ನೋಡಿ ಆನಂದಿಸಬೇಕು . ತಾನು ಹಸಿರು ಸಾಮ್ರಾಜ್ಯದ ನನ್ನ ಪ್ರಜೆ ಎಂದು ಹೇಳುತ್ತಾನೆ . ಬೋಳೇಶಂಕರ ಬದುಕಿನಲ್ಲಿ ಎಂತಹ ಕಷ್ಟ – ಅವಮಾನ ಅನ್ಯಾಯಗಳನ್ನೂ ಸಹಿಸುತ್ತಿದ್ದನು .

ರಾಜಕುಮಾರಿಗೆ ಬಂದಿರೋದು ರಾಜರೋಗ

” ಡಾ । ಚಂದ್ರಶೇಖರ ಕಂಬಾರ ಅವರು ಬರೆದಿರುವ ‘ ಬೋಳೇಶಂಕರ ‘ ಎಂಬ ನಾಟಕದಿಂದ ಈ ವಾಕ್ಯವನ್ನು ಆರಿಸಲಾಗಿದೆ . ಇದನ್ನು ಮಂತ್ರಿಯು ರಾಜನೆದುರು ಹೇಳುತ್ತಾನೆ .

ರಾಜಕುಮಾರಿಗೆ ಪಿಶಾಚಿಯ ಪ್ರಭಾವದಿಂದ ಹೊಟ್ಟೆನೋವುಂಟಾಯಿತು . ಊರಿನ ಯಾವ ವೈದ್ಯರೂ ಹೊಟ್ಟೆನೋವನ್ನು ವಾಸಿಮಾಡಲಾಗಲಿಲ್ಲ .

ಆಗ ರಾಜನು ರಾಜಕುಮಾರಿಯ ಹೊಟ್ಟೆನೋವನ್ನು ವಾಸಿ ಮಾಡಿದವರಿಗೆ ಸಂಪೂರ್ಣ ರಾಜ್ಯ ವನ್ನಿತ್ತು ರಾಜಕುಮಾರಿಯನ್ನು ಕೊಟ್ಟು ಮದುವೆ ಮಾಡುವುದಾಗಿ ಡಂಗೂರ ಹೊಡಿಸಿದನು .

ಆಗ ಬೋಳೇಶಂಕರ ತಾನು ರಾಜಕುಮಾರಿಯ ರೋಗವನ್ನು ವಾಸಿಪಡಿಸುವುದಾಗಿ ಆರಮನೆಗೆ ಬಂದನು . ಆಗ ಮಂತ್ರಿಯು ಬೋಳೇಶಂಕರನ ಇತಿವೃತ್ತವನ್ನು ತಿಳಿದು ಈ ಮೇಲಿನ ಮಾತುಗಳನ್ನು ಹೇಳಿ ಇಂತಹ ಬೆಪ್ಪುತಕ್ಕಡಿಗಳು ರಾಜಕುಮಾರಿಯ ರಾಜರೋಗವನ್ನು ವಾಸಿಮಾಡಲು ಸಾಧ್ಯವಿಲ್ಲವೆ ೦ ದನು , ಆದರೆ ಬೋಳೇಶಂಕರನಿಂದಲೇ ರಾಜರೋಗ ವಾಸಿಯಾಯಿತು .

ರಾಜರಾಣಿಯರಿಂದ ಹಿಡಿದು ಎಲ್ಲರೂ ದುಡೀತಾರೆ

ರಾಜನಾಗಿದ್ದು ದೋಳೇಶಂಕರ ಮಂತ್ರಿಗೆ ಹೇಳುತ್ತಾನೆ . ಡಾ . ಚಂದ್ರಶೇಖರ ಕಂಬಾರ ರಚಿಸಿರುವ ‘ ಬೋಳೇಶಂಕರ ‘ ಎಂಬ ನಾಟಕದಿಂದ ಆರಿಸಲಾಗಿರುವ ಈ ವಾಕ್ಯವನ್ನು ಬೋಳೇಶಂಕರನು ರಾಜಕುಮಾರಿಗೆ ಬಂದ ರಾಜರೋಗವನ್ನು ವಾಸಿ ಪಡಿಸಿದ ಮೇಲೆ ರಾಜನು ತಾನು ಕೊಟ್ಟ ತಿಳಿಸುತ್ತಾನೆ

ಆಗ ಬೋಳೇಶಂಕರ ತನ್ನನ್ನು ರಾಜನನ್ನಾಗಿ ಮಾಡಿದರೆ ತಾನು ಯಾವ ರೀತಿಯ ಆಡಳಿತ ನಡೆಸುವನೆಂಬುದನ್ನು ಮಾತಿನಂತೆ ಬೋಳೇಶಂಕರನಿಗೆ ರಾಜ್ಯವನ್ನು ಹಾಗೂ ರಾಜಕುಮಾರಿಯನ್ನು ಸ್ವೀಕರಿಸಬೇಕೆಂದು ಮಂತ್ರಿಯ ಮೂಲಕ ನೀಳುತ್ತಾ ಈ ಮೇಲಿನ ಮಾತುಗಳನ್ನು ಹೇಳುತ್ತಾನೆ , ತನ್ನ ರಾಜ್ಯದಲ್ಲಿ ಎಲ್ಲರೂ ದುಡಿಯಬೇಕು , ದುಡಿಯದವರಿಗೆ ಸ್ಥಾನವಿಲ್ಲ .

ರಾಣಿಯೂ ದುಡಿಯಬೇಕಾಗುತ್ತದೆ . ರಾಜನಾದರೂ ತಾನೂ ದುಡಿಯುತ್ತೇನೆ . ತನ್ನ ರಾಜ್ಯದಲ್ಲಿ ಸೈನ್ಯವಿರುವುದಿಲ್ಲ . ತೆರಿಗೆ ಹಾಕುವುದಿಲ್ಲ . ನಾಣ್ಯಗಳ ಚಲಾವಣೆಯೂ ಇರುವುದಿಲ್ಲ . ಸೋರಿಬೇರಿಗಳಿಗೆ ಅವಕಾಶವಿಲ್ಲ ಎಂದು ಹೇಳುತ್ತಾನೆ . ದುಡಿಮೆಗೆ ಲೋಳೇಶಂಕರ ಪ್ರಾಶಸ್ತ್ರ ನೀಡುತ್ತಿದ್ದನು .

ದಾರಿತಪ್ಪಿದವರಿಗೆ ಗಾದೆ ಬಲ್ಲವರು ಬುದ್ಧಿ ಹೇಳುತ್ತಾರೆ

” ಡಾ || ಚಂದ್ರಶೇಖರ ಕಂಬಾರ ಅವರು ಬರೆದಿರುವ ಜೋಳೇಶಂಕರ ‘ ಎಂಬ ನಾಟಕದಿಂದ ಆರಿಸಲಾಗಿರುವ ಈ ವಾಕ್ಯವನ್ನು ಬೋಳೇಶಂಕರ ಮಂತ್ರಿಯೊಡನೆ ಸಂಭಾಷಣೆ ಮಾಡುತ್ತಾ ಹೇಳುತ್ತಾನೆ .

ಆದ್ದರಿಂದ ರಾಜನು ತಾನು ಮಾತಿನಂತೆ ರಾಜ್ಯ ಹಾಗೂ ರಾಜಕುಮಾರಿಯನ್ನು ಬೋಳೇಶಂಕರನಿಗೆ ಕೊಡುವುದಾಗಿ ಮಂತ್ರಿಯ ಮೂಲಕ ಹೇಳಿ ಕಳುಹಿಸಿದಾಗ ಬೋಳೇಶಂಕರ ಕೆಲವು ನಿಯಮಗಳನ್ನು ಒಡ್ಡುತ್ತಾನೆ .

ಆಗ ಮಂತ್ರಿಯು ಅವನೊಡನೆ ಚರ್ಚೆಗಿಳಿಯುತ್ತಾನೆ . ತಾನು ರಾಜನಾದರೆ ಸೈನಿಕರನ್ನು ಇಟ್ಟುಕೊಳ್ಳುವುದಿಲ್ಲವೆಂದಾಗ ಶತ್ರುರಾಜರು ದಂಡೆತ್ತಿ ಬಂದಾಗ ಅವರನ್ನು ಎದುರಿಸುವುದು ಹೇಗೆಂದು ಮಂತ್ರಿ ಪ್ರಶ್ನಿಸಿದನು . ತನ್ನ ರಾಜ್ಯದಲ್ಲಿ ನಾಣ್ಯದ ಚಲಾವಣೆ ಇರುವುದಿಲ್ಲ .

ಎಲ್ಲರೂ ದುಡಿದು ತಿನ್ನುತ್ತಾರೆ . ಕಾನೂನಿನ ರಕ್ಷಣೆಗೆ ಕನ್ನಡದ ಗಾದೆ ಮಾತುಗಳನ್ನು ತಿಳಿದವರು ಅದರ ಸಹಾಯದಿಂದ ನೀತಿಯನ್ನು ಹೇಳಿ ಪ್ರಜೆಗಳು ಸನ್ನಡತೆಯಲ್ಲಿರುವ ಹಾಗೆ ಮಾಡುವರೆಂದು ಬೋಳೇಶಂಕರ ವಿವರಿಸುತ್ತಾ ಮಾತುಗಳನ್ನಾಡುತ್ತಾನೆ .

ಚಿನ್ನ ತಿಂದು ಬದುಕಲಾಗುತ್ತ

” ಡಾ || ಚಂದ್ರಶೇಖರ ಕಂಬಾರ ರಚಿಸಿರುವ ‘ ಬೋಳೇಶಂಕರ ‘ ಎಂಬ ನಾಟಕದಿಂದ ಈ ವಾಕ್ಯವನ್ನು ಎತ್ತಿಕೊಳ್ಳಲಾಗಿದೆ . ಭೋಳೇಶಂಕರನು ಈ ಮಾತುಗಳನ್ನು ಡಬ್ಬುಗೆ ಹೇಳುತ್ತಾನೆ .

ಡಬ್ಬು ಬೋಳೇಶಂಕರನ ಬಳಿಗೆ ಬಂದು ಒಂದೆರಡು ಚೀಲಗಳ ಧಾನ್ಯದಿಂದ ಒಂದೆರಡು ಚೀಲ ಚಿನ್ನದ ನಾಣ್ಯಗಳನ್ನು ತಯಾರಿಸಿಕೊಡಬೇಕೆಂದು ಕೇಳಿಕೊಳ್ಳುತ್ತಾನೆ .

ಬೋಳೇಶಂಕರ ಒಪ್ಪಿ ” ಹಂಡೋಲ್ ಬಂಡೋಲ್‌ ಚಿಗರಿ ಚಿಕಲಕ ಬಕಲಕ ಎ ೦ ಬ ಮಂತ್ರವನ್ನು ಹೇಳಿ ಧಾನ್ಯವೆಲ್ಲ ಚಿನ್ನದ ನಾಣ್ಯಗಳಾಗಿ ಪರಿವರ್ತನೆಯಾಗುವ ಹಾಗೆ ಮಾಡಿದನು . ಅದನ್ನು ನೋಡಿ ಡಬ್ಬುಗೆ ಪರಮಾನ ೦ ದವಾಯಿತು .

ಅವನ ಸಂತೋಷವನ್ನು ಕಂಡ ಬೋಳೇಶಂಕರನು ಆ ಚಿನ್ನದ ನಾಣ್ಯಗಳನ್ನು ಪುನಃ ಧಾನ್ಯವನ್ನಾಗಿ ಬೇಕಾದರೆ ಪರಿವರ್ತಿಸುವುದಾಗಿ ಹೇಳಿದಾಗ ” ” ಬೇಡ ಬೇಡ , ಚಿನ್ನ ಸಾಕನ್ನೋದುಂಟೆ ” ಎಂದನು . ಆಗ ಬೋಳೇಶಂಕರ ಈ ಮೇಲಿನ ಮಾತುಗಳನ್ನು ಹೇಳಿದ್ದಾನೆ .

ಇಂದು ಜನರು ಎಲ್ಲ ನೈತಿಕ ಮೌಲ್ಯಗಳನ್ನು ಬದಿಗೊತ್ತಿ ಹಣ ಮಾಡಿಕೊಳ್ಳುತ್ತಿರುವುದನ್ನು ಈ ಪ್ರಸಂಗ ವಿಮರ್ಶಿಸುತ್ತಿದೆ .

ಜನ ಎಲ್ಲಿ ಸೇರಿದರೆ ಅಲ್ಲೇ ದರ್ಬಾರು .

” ಡಾ ॥ ಚಂದ್ರಶೇಖರ ಕಂಬಾರ ಅವರು ರಚಿಸಿರುವ ‘ ಬೋಳೇಶಂಕರ ‘ ನಾಟಕದಿಂದ ತೆಗೆದುಕೊಂಡಿರುವ ಈ ವಾಕ್ಯವನ್ನು ಬೋಳೇಶಂಕರ ಸಾತ್ಕಾರನಿಗೆ ಹೇಳುತ್ತಾನೆ . ಬೋಳೇಶಂಕರನ ಸೋದರರು ಆಸ್ತಿ ವಿಭಾಗಿಸಿಕೊಂಡುಹೋಗಿ ಎಲ್ಲವನ್ನು ಕಳೆದುಕೊಂಡು ಬೋಳೇಶಂಕರನ ಬಳಿ ಬಂದರು .

ತಮ್ಮನು ರಾಜನಾದ ಸಂಗತಿ ತಿಳಿದು ಸಂತೋಷವಾಯಿತು ಎಂದು ಅಣ್ಣಂದಿರು ಹೇಳಿದಾಗ ಬೋಳೇಶಂಕರನು ಆಗಾಗ್ಗೆ ಸಂತೋಷ ಪಡೋದು ಆರೋಗ್ಯಕ್ಕೆ ಒಳ್ಳೆಯದು ‘ ಎನ್ನುತ್ತಾನೆ .

ಆಗ ಸಾಷ್ಕಾರನು ಯಾವ ವೈಭವವೂ ಇಲ್ಲದ ಬೋಳೇಶಂಕರನ ರಾಜ್ಯಾಧಿಕಾರವನ್ನು ಕಂಡು ‘ ಇದೇ ಏನಪ್ಪ ನಿನ್ನ ದರ್ಬಾರು ‘ ಎಂದು ವ್ಯಂಗ್ಯವಾಗಿ ನುಡಿದನು

Boleshankara Kannada Notes

ನಾವು ಜಗಳದ ಭಾಷೆ ಆಡಿದರೆ ಅವರು ಸ್ನೇಹದ ಭಾಷೆ ಆಡುತ್ತಾರೆ


ಡಾ ಚಂದ್ರಶೇಖರ ಕಂಬಾರ ಅವರು ರಚಿಸಿರುವ ‘ ಬೋಳೇಶಂಕರ ‘ ಎಂಬ ನಾಟಕದಿಂದ ಆರಿಸಿರುವ ಈ ವಾಕ್ಯವನ್ನು ಸೈನಿಕನೊಬ್ಬನು ಸೈತಾನನಿಗೆ ಹೇಳುತ್ತಾನೆ .

ಸೈತಾನನು ಮೂರು ಪಿಶಾಚಿಗಳಿಗೆ ತರಬೇತಿ ನೀಡಿ ” ಬೋಳೇಶಂಕರ ಹಾಗೂ ಅವನ ಸೋದರರ ನಡುವೆ ಜಗಳ ಉಂಟಾಗುವ ಹಾಗೆ ಮಾಡಿ , ಬೋಳೇಶಂಕರನನ್ನು ನಿರ್ನಾಮ ಮಾಡಿ ‘ ಎಂದು ಕಳುಹಿಸಿಕೊಟ್ಟನು .

ಆದರೆ ಆ ಮೂರೂ ಪಿಶಾಚಿಗಳೂ ಮಾಡಿದ ಎಲ್ಲ ಪ್ರಯತ್ನಗಳೂ ವಿಫಲವಾದುದಲ್ಲದೆ ಅವು ಸತ್ತೇ ಹೋದವು . ಆಗ ಸೈತಾನ ತಾನೇ ಸ್ವತಃ ಬೋಳೇಶಂಕರನನ್ನು ನಿರ್ನಾಮ ಮಾಡಲು ಒಂದು ಸೈನಿಕರಿಗೆ ಯದ್ವಾತದ್ವಾ ನಡೆದುಕೊಳ್ಳಲು ಹೇಳಿದನು .

ಆದರೆ ಈ ಸೈನಿಕರು ಜನರೊಡನೆ ಎಷ್ಟೋ ಜಗಳವಾಡಲು ಪ್ರಯತ್ನಿಸಿದರೂ ಬೋಳೇಶಂಕರನ ರಾಜ್ಯದ ಜನ ಜಗಳವಾಡಲಿಲ್ಲ .

ಜನರ ಮನೆಗೆ ನುಗ್ಗಿ , ಕಳ್ಳತನ ಮಾಡಲು ಹೋದರೆ ಕದಿಯುವುದೇಕೆ ? ಬೇಕಾದುದೆಲ್ಲವನ್ನು ತೆಗೆದುಕೊಂಡು ಹೋಗಿ ‘ ಎಂದು ಎಲ್ಲವನ್ನು ಕೊಟ್ಟುಬಿಡುತ್ತಿದ್ದರು . ಈ ಅನುಭವವನ್ನು ಸೈನಿಕನು ಸೈತಾನನಿಗೆ ಹೇಳಿ ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿದನು .

Boleshankara Kannada Notes

ಕಲಸ ಮಾಡಿದವರು ಊಟ ಮಾಡಿದ ನಂತರ ಸೋಮಾರಿಗಳ ಊಟ

” ಡಾ . ಚಂದ್ರಶೇಖರ ಕಂಬಾರರು ರಚಿಸಿರುವ ‘ ಬೋಳೇಶಂಕರ ‘ ಎಂಬ ನಾಟಕದಿಂದ ಈ ವಾಕ್ಯವನ್ನು ಸ್ವೀಕರಿಸಿದೆ . ಬೋಳೇಶಂಕರ ಈ ಮಾತುಗಳನ್ನು ಮನುಷ್ಯನ ವೇಷದಲ್ಲಿ ಬಂದ ಸೈತಾನನಿಗೆ ಹೇಳುತ್ತಾನೆ . ಸೈತಾನನು ಊಟ ಬೇಕೆಂದು ಬೋಳೇಶಂಕರನ ಬಳಿ ಬಂದಾಗ ಅವನು ಊಟ ಮಾಡಲು ಹೇಳುತ್ತಾನೆ .

ಆದರೆ ಊಟ ಬಡಿಸಲು ಬಂದ ರಾಣಿಯು ಸೈತಾನನ ಅಂಗೈಯನ್ನು ತೋರಿಸಲು ಹೇಳುತ್ತಾಳೆ . ಆ ಅಂಗೈಯನ್ನು ನೋಡಿ ಈತ ಕಷ್ಟಪಟ್ಟು ಕೆಲಸ ಮಾಡಿದವನಲ್ಲವೆಂದು ಗ್ರಹಿಸಿ ಊಟದ ಸಾಲಿನಿಂದ ಎಬ್ಬಿಸಿ ನಿನ್ನ ಊಟದ ಸರದಿ ಆಮೇಲೆ ” ಎಂದುಬಿಡುತ್ತಾಳೆ .

ಈ ಮಾತುಗಳನ್ನನುಸರಿಸಿ ಬೋಳೇಶಂಕರನು ಸೈತಾನನಿಗೆ ಈ ಮೇಲಿನ ಮಾತುಗಳನ್ನು ಹೇಳುತ್ತಾನೆ . ಬೋಳೇಶಂಕರನ ರಾಜ್ಯದಲ್ಲಿ ಎಲ್ಲರಿಗೂ ಊಟ ದೊರಕುತ್ತಿತ್ತು . ಆದರೆ ಕೆಲಸ ಮಾಡಿದವರಿಗೆ ಮೊದಲು ಊಟ ದೊರಕುತ್ತಿತ್ತು .

ತಲೆಯಿಂದ ಕೆಲಸ ಮಾಡುವುದು ಹೇಗೆಂದು ನಿಮಗೆ ಹೇಳಿಕೊಡುತ್ತೇನೆ

ಡಾ । ಚಂದ್ರಶೇಖರ ಕಂಬಾರ ಅವರು ರಚಿಸಿರುವ ಬೋಳೇಶಂಕರ ‘ ಎಂಬ ನಾಟಕದಿಂದ ಈ ಸಾಲನ್ನು ಎತ್ತಿಕೊಳ್ಳಲಾಗಿದೆ . ಸೈತಾನನಿಗೆ ‘ ಸೋಮಾರಿ ಆಮೇಲೆ ನಿನಗೆ ಊಟ ‘ ಎಂದು ಬೋಳೇಶಂಕರ ಹಾಗೂ ಅವನ ಹೆಂಡತಿ ಹೇಳಿದ ಮೇಲೆ ಅವನು ರಾಜ ರಾಣಿಯರನ್ನು ತಲೆಯಿಂದ ಕೆಲಸ ಮಾಡಲು ತಿಳಿಯದ ದಡ್ಡರೆಂದು ಬೈದು , ತಾನು ತಲೆಯಿಂದ ಹೇಗೆ ಕೆಲಸ ಮಾಡುವುದೆ ೦ ಬುದನ್ನು ಹೇಳಿಕೊಡುವುದಾಗಿ ಹೇಳುತ್ತಾನೆ

ಬೆಪ್ಪುತಕ್ಕಡಿಗಳ ರಾಜ್ಯದಲ್ಲಿ ಮಾತ್ರ ಜನ ಕೈಯಿಂದ ಕೆಲಸ ಮಾಡುತ್ತಾರೆ . ಬುದ್ಧಿವ ೦ ತರೆಲ್ಲರೂ ಕೆಲಸ ಮಾಡುವುದು ತಲೆಯಿಂದ ಎಂದು ಸೈತಾನ ವಾದಿಸುತ್ತಾನೆ .

ಅಲ್ಲದೆ ಕೈಯಿಂದ ಕೆಲಸ ಮಾಡುವುದಕ್ಕಿಂತ ತಲೆಯಿಂದ ಕೆಲಸ ಮಾಡುವುದು ಹೆಚ್ಚು ಲಾಭಕರವೆಂದೂ ಸೈತಾನ ಹೇಳುತ್ತಾನೆ . ಆದರೆ ಇದನ್ನು ಕಲಿಸುವ ಸಾಹಸಕ್ಕೆ ಕೈ ಹಾಕಿ ತಲೆಯೊಡೆದುಕೊಂಡು ಸೈತಾನ ಸಾಯುತ್ತಾನೆ .

ಬಂಧುಗಳೇ , ಚರಿತ್ರೆ ಮುಂದೆ ಮುಂದೆ ಹೋಗುತ್ತದೆ ಹಿಂದುಹಿಂದಲ್ಲ

” ಡಾ . ಚಂದ್ರಶೇಖರ ಕಂಬಾರ ಅವರು ಬರೆದಿರುವ ‘ ಜೋಳೇಶಂಕರ ‘ ಎಂಬ ನಾಟಕದಿಂದ ಈ ಸಾಲನ್ನು ಆಯ್ದು ಕೊಳ್ಳಲಾಗಿದೆ . ಸೈತಾನನು ಬೋಳೇಶಂಕರ ಹಾಗೂ ಅವನ ರಾಜ್ಯದ ಜನರನ್ನು ಬಯ್ಯುತ್ತಾ ಈ ಮೇಲಿನ ಮಾತುಗಳನ್ನು ಹೇಳುತ್ತಾನೆ .

ಸೈತಾನನು ಬೋಳೇಶಂಕರನ ರಾಜ್ಯದ ಜನರಿಗೆ ತಲೆಯಿಂದ ಹೇಗೆ ಕೆಲಸ ಮಾಡುವುದೆಂಬುದನ್ನು ವಿವರಿಸಿದನು . ಆದರೆ ಆ ವಿಚಾರ ಬೋಳೇಶಂಕರನಿಗಾಗಲೀ , ಅವನ ರಾಜ್ಯದ ಜನರಿಗಾಗಲೀ ಅರ್ಥವಾಗಲಿಲ್ಲ .

ಅವರು ಕೇಳಿದ ಹುಟ್ಟು ಪ್ರಶ್ನೆಗಳಿಂದ ಸೈತಾನನು ಸಹನೆಯನ್ನು ಕಳೆದುಕೊಂಡನು , ಆಗ ಅವನೊಂದು ದೀರ್ಘ ಭಾಷಣವನ್ನು ಮಾಡುವಂತಾಯಿತು.

ಬೋಳೇಶಂಕರ ನಾಟಕ ಕನ್ನಡ ನೋಟ್ಸ್ । Boleshankara Kannada Notes
ಬೋಳೇಶಂಕರ ನಾಟಕ ಕನ್ನಡ ನೋಟ್ಸ್ । Boleshankara Kannada Notes

2 – 3 ವಾಕ್ಯಗಳಲ್ಲಿ ಉತ್ತರಿಸಿ


ಬೆಟ್ಟದ ಮೇಲಿನ ದೇವತೆಯು ಬೋಳೇಶಂಕರನ ಅಣ್ಣ ಅತ್ತಿಗೆಯರಿಗೆ ಹೇಗೆ ಕಾಣಿಸುತ್ತದೆ ?

ಶಿವಾಪುರದ ಬೆಟ್ಟದ ಮೇಲಿನ ದೇವತೆಯು ಕೈ ಮಾಡಿ ಕರೆದಂತೆ ಬೋಳೇಶಂಕರನ ಅಣ್ಣ ಅತ್ತಿಗೆಯರಿಗೆ ಕಾಣಿಸಿತು .

ಆ ದೇವತೆಗೆ ದುಂಡಗೆ ಉರಿಯುವ ಕಣ್ಣುಗಳಿವೆ ಎಂಬಂತೆ ತೋರಿತು . ಆ ದೇವತೆಗಳಿಗೆ ಎತ್ತಿನ ಹಾಗೆ ಕೊಂಬುಗಳಿದ್ದಂತೆ ಕಾಣಿಸಿತು . ಆದರೆ ಬೋಳೇಶಂಕರನಿಗೆ ಮಾತ್ರ ಈ ದೇವತೆಗಳು ಕಾಣಿಸಲಿಲ್ಲ .


ಸಾವಾದಣ್ಣನು ತನ್ನ ಸಹೋದರರಿಗೆ ಆಸ್ತಿಯನ್ನು ಹೇಗೆ ಹಂಚಿದ ?

ಸಾತ್ಕಾರಣ್ಣನು ದುಡ್ಡಿರೋ ಪೆಟ್ಟಿಗೆ ಹಾಗೂ ಆಭರಣಗಳನ್ನು ತಾನಿಟ್ಟುಕೊಂಡನು , ಒಳ್ಳೆಯ ಗದ್ದೆ , ತೋಟ , ಹೊಲಗಳನ್ನು ತನ್ನ ಮತ್ತೊಬ್ಬ ಸೋದರನಾದ ಸರದಾರನಿಗೆ ಹಂಚಿಕೊಟ್ಟನು . ನದಿಯ ಹತ್ತಿರವಿದ್ದ ಕಲ್ಲು ಮೊರಡಿಯನ್ನು – ಯಾವುದೇ ಬೆಳೆಯನ್ನು ಬೆಳೆಯಲಾಗದ ಜಾಗವನ್ನು ಬೋಳೇಶಂಕರನಿಗೆ ಹಂಚಿಕೆ ಮಾಡಿಕೊಟ್ಟನು .

ರೈತಾನನು ಮೂರು ಪಿಶಾಚಿಗಳನ್ನು ಭೂಲೋಕಕ್ಕೆ ಕಳುಹಿಸಿದ್ದು ಏಕೆ ?

ಸೈತಾನನು ಬೋಳೇಶಂಕರ ಹಾಗೂ ಅವನ ಸೋದರರ ನಡುವೆ ವಿರಸವನ್ನು ಹುಟ್ಟಿಸಿ , ಪರಸ್ಪರ ಜಗಳವಾಡುವ ಹಾಗೆ ಮಾಡಿ ಮೂವರನ್ನೂ ನರಕ ಲೋಕ ಸೇರುವ ಹಾಗೆ ಮಾಡುವ ಉದ್ದೇಶದಿಂದ ಮೂವರು ಪಿಶಾಚಿಗಳನ್ನು ಭೂಲೋಕಕ್ಕೆ ಕಳುಹಿಸಿ ಕೊಟ್ಟನು .

ಕೋಡಂಗಿಯು ತಾನು ಬೆಳಿಗ್ಗೆಯಿಂದ ಏನೇನು ಕೆಲಸ ಮಾಡಿದೆನೆಂದು ಹೇಳುತ್ತಾನೆ ?

ಕೋಡ ೦ ಗಿಯು ಬೆಳಗಿನಿಂದ ಹದಿನೆಂಟು ರೊಟ್ಟಿ ತಿಂದೆ : ಎಂಟು ಮುದ್ದೆ ನುಂಗಿದೆ : ಸೊಲಗಿ ಅನ್ನ ಉಂಡೆ ಗಡಿಗೆ ಅ ೦ ಬಲಿ ಕುಡಿದೆ ; ಗಡದ್ದಾಗಿ ಮೂರು ಗಂಟೆ ನಿದ್ದೆ ಮಾಡಿದೆ ಎಂದು ತಾನು ಮಾಡಿದ ಕೆಲಸಗಳನ್ನು ವಿವರಿಸಿದನು .

ರಾಜಕುಮಾರಿಯ ಹೊಟ್ಟೆನೋವು ವಾಸಿ ಮಾಡುವವರಿಗೆ ಏನೇನು ಬಹುಮಾನ ಕೊಡುವುದಾಗಿ ಡಂಗುರ ಸಾರಿಸು ತ್ತಾರೆ ?

ಅನೇಕ ವೈದ್ಯರು ರಾಜಕುಮಾರಿಯ ಹೊಟ್ಟೆಯ ನೋವನ್ನು ವಾಸಿಪಡಿಸಲು ಯತ್ನಿಸಿ ವಿಫಲರಾದ ಮೇಲೆ ರಾಜಕುಮಾರಿಯ ಹೊಟ್ಟೆನೋವು ವಾಸಿ ಮಾಡಿಸುವವರಿಗೆ ಇಡೀ ರಾಜ್ಯವನ್ನು ಕೊಡುವುದರ ಜೊತೆಗೆ ರಾಜಕುಮಾರಿಯನ್ನು ಕೊಟ್ಟು ಮದುವೆ ಮಾಡುವುದಾಗಿ ರಾಜನು ಡಂಗುರ ಸಾರಿಸುತ್ತಾರೆ .

ಪಿಶಾಚಿಗಳು ಯಾವುದರಿ ೦ ದ ನಾಣ್ಯ ಹಾಗೂ ಸಿಪಾಯಿಗಳನ್ನು ಮಾಡಿಕೊಡುತ್ತವೆ ?

ಪಿಶಾಚಿಗಳು ಧಾನ್ಯದಿಂದ ಚಿನ್ನದ ನಾಣ್ಯಗಳನ್ನು ಹಾಗೂ ಹುಲ್ಲಿನಿಂದ ಸಿಪಾಯಿಗಳನ್ನು ಮಾಡಿಕೊಡುವ ವಿದ್ಯೆಯನ್ನು ಮೋಳೇಶಂಕರನಿಗೆ ಕಲಿಸಿಕೊಡುತ್ತವೆ .

ಬೋಳೇಶಂಕರ ಹುಡುಗಿಯರಿಗೆ ಚಿನ್ನ ಕೊಟ್ಟಿದ್ದಕ್ಕೆ ಸಾವ್ಯಾರಣ್ಣನು ಏನು ಹೇಳುತ್ತಾನೆ ?

ಸಾತ್ಕಾರಣ್ಣನು , ಬೇಜವಾಬ್ದಾರಿ ಹುಡುಗಿಯರಿಗೆ ಆಡೋ ಮಕ್ಕಳಿಗೆ ಚಿನ್ನದ ನಾಣ್ಯ ಕೊಟ್ಟಿದ್ದು ಸರಿಯಲ್ಲವೆ ೦ ದನು . ಚಿನ್ನದ ನಾಣ್ಯಗಳನ್ನು ತನಗೆ ಕೊಡಬೇಕಾಗಿತ್ತೆಂದನು .

ತನಗೆ ಚಿನ್ನದ ನಾಣ್ಯಗಳನ್ನು ಕೊಟ್ಟಿದ್ದರೆ ಪ್ರಪಂಚದ ಮೂಲೆ ಮೂಲೆಗಳಿಗೆ ಹೋಗಿ ವ್ಯಾಪಾರ ಮಾಡಿ ಚಿನ್ನದ ರಾಶಿಯನ್ನು ಸಂಪಾದಿಸುತ್ತಿದ್ದುದಾಗಿ ಹೇಳಿದನು .

Boleshankara Kannada Notes

ಸೈತಾನನ ಆಗಮನವನ್ನು ಭಾಗವತ ಹೇಗೆ ತಿಳಿಸಿದ್ದಾನೆ ?

ಸೈತಾನನ ಆಗಮನವನ್ನು ‘ ಸೈತಾನನು ಸರ್ವ ರೀತಿಗಳ ಕೆಡುಕಿನ ಒಡೆಯನಾಗಿದ್ದಾನೆ . ಅವನು ಗಹಗಹಿಸಿ ಬರುವುದರಿಂದ ಆವನ ಹಲ್ಲುಗಳ ಪ್ರದರ್ಶನವಾಗುತ್ತದೆ ; ಅವನು ಬಂದರೆ ಎಲ್ಲರ ಮನಸ್ಸುಗಳು ಶಾಂತಿಯನ್ನು ಕಳೆದುಕೊಂಡು ನರಕವನ್ನನುಭ ವಿಸುವಂತಾಗುತ್ತದೆ .

ಅವನು ಮಹಾ ಅಜ್ಞಾನಿ , ಆದ್ದರಿಂದ ಇತರರಲ್ಲಿರುವ ಜ್ಞಾನದ ಬೆಳಕನ್ನು ಓಡಿಸಿ ಅಜ್ಞಾನವೆಂಬ ಕತ್ತಲೆಯನ್ನು ಆವರಿಸುವ ಹಾಗೆ ಮಾಡುವನೆಂದು ಭಾಗವತ ತಿಳಿಸಿದನು .

ಸೈತಾನನಿಗೆ ಮೊದಲ ಪಂಕ್ತಿಯ ಊಟ ನಿರಾಕರಿಸಿದ್ದು ಏಕೆ ?

ಬೋಳೇಶ ೦ ಕರನು ರಾಜನಾಗಿದ್ದಾಗ ಮೊದಲ ಪಂಕ್ತಿಯಲ್ಲಿ ಚೆನ್ನಾಗಿ ದುಡಿದು ಬದುಕುವವರಿಗೆ ಊಟ ಹಾಕುವ ನಿಯಮವನ್ನು ಮಾಡಲಾಗಿತ್ತು . ಸೈತಾನನ ಅಂಗೈಯನ್ನು ನೋಡಿದಾಗ ಅದು ದುಡಿದಿರುವ ಕೈ ಎನಿಸಲಿಲ್ಲ .

ಆದ್ದರಿಂದ ರಾಣಿ ಮತ್ತು ರಾಜರಿಬ್ಬರೂ ಅವನಿಗೆ ಮೊದಲ ಪಂಕ್ತಿಯಲ್ಲಿ ಊಟ ಹಾಕಲು ನಿರಾಕರಿಸಿ ಎರಡನೆಯ ಪಂಕ್ತಿಯಲ್ಲಿ ಕುಳಿತು ಊಟ ಮಾಡಲು ಹೇಳಿದರು .

Boleshankara Kannada Notes


ಬೋಳೇಶಂಕರ ಏನೆಂದು ಡಂಗುರ ಸಾರಿಸುತ್ತಾನೆ ?

ಸೈತಾನನು ಮನುಷ್ಯ ವೇಷಧಾರಿಯಾಗಿ ಒಂದು ಬೋಳೇಶಂಕರ ಹಾಗೂ ಅವನ ರಾಜ್ಯದ ಜನರಿಗೆ ತಲೆಯಿಂದ ಹೇಗೆ ಕೆಲಸ ಮಾಡುವುದೆಂಬುದನ್ನು ಹೇಳಿಕೊಡುವುದಾಗಿ ತಿಳಿಸಿದಾಗ ಬೋಳೇಶಂಕರನು ಡಂಗೂರ ಸಾರುವನನ್ನು ಕರೆಸಿ ” ನಮ್ಮ ರಾಜ್ಯಕ್ಕೊಬ್ಬ ದೊಡ್ಡ ಮನುಷ್ಯ ಬಂದಿದ್ದಾನೆ . ತಲೆಯಿಂದ ಕೆಲಸ ಮಾಡೋದನ್ನ ಕಲಿಸಿಕೊಡ್ತಾನೆ . ಜನ ಎಲ್ಲರೂ ಊರಾಚೆ ಎತ್ತರ ವಾದ ಗೋಪುರ ಇದೆಯಲ್ಲಾ ಅಲ್ಲಿ ಸೇರಬೇಕು ‘ ‘ ಎಂದು ಡಂಗುರ ಸಾರಿಸಿದನು .

ಇತರೆ ವಿಷಯಗಳನ್ನು ಓದಿರಿ

ಡೌನ್ಲೋಡ್ ಪಿಡಿಎಫ್ ಇಲ್ಲಿ ಕ್ಲಿಕ್ ಮಾಡಿ

2 thoughts on “ಪ್ರಥಮ ಪಿಯುಸಿ ಕನ್ನಡ ಬೋಳೇಶಂಕರ ನೋಟ್ಸ್ | 1st PUC Kannada Boleshankara Notes

Leave a Reply

Your email address will not be published. Required fields are marked *