Anarogyada Simha Notes In Kannada, Anarogyada simha poem in kannada notes, Anarogyada simha kannada poem, Anarogyada simha kannada question answer, 3ನೇ ತರಗತಿ ಅನಾರೋಗ್ಯದ ಸಿಂಹ ಪದ್ಯದ ನೋಟ್ಸ್ , 3rd Standard Anarogyada Simha Poem Notes
Anarogyada Simha Notes In Kannada
ನಮ್ಮ ಟೆಲಿಗ್ರಾಮ್ ಗ್ರೂಪ್ ಗೆ ಈಗಲೇ ಜಾಯಿನ್ ಆಗಿ
ಅನಾರೋಗ್ಯದ ಸಿಂಹ ಪದ್ಯದ ಪ್ರಶ್ನೋತ್ತರಗಳನ್ನು ಈ ಲೇಖನದಲ್ಲಿ ನೀಡಲಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಇದು ಸಂಪೂರ್ಣವಾಗಿ ಉಚಿತವಾಗಿದೆ.
ಒಂದು ಪದ / ವಾಕ್ಯದಲ್ಲಿ ಉತ್ತರಿಸು .
ಜಾಣವೈದ್ಯ ನರಿ ಕಾಡಿನ ರಾಜ ಸಿಂಹವನ್ನು ಪರೀಕ್ಷಿಸಿ ಏನೆಂದು ಹೇಳಿತು ?
ಜಾಣವೈದ್ಯ ನರಿ ಕಾಡಿನ ರಾಜ ಸಿಂಹವನ್ನು ಪರೀಕ್ಷಿಸಿ ‘ ಶೀತದಿ ಮೂಗು ಕಟ್ಟಿದೆ ಒಡೆಯ ವಾಸನೆ ಏನು ತಿಳಿಯದು ನನಗೆ ‘ ಎಂದು ಹೇಳಿತು .
ಈ ಪದ್ಯದ ನೀತಿಯೇನು ? ‘
ಉಪಾಯ ಬಲ್ಲವನಿಗೆ ಅಪಾಯವಿಲ್ಲ ‘ ಎಂಬ ಪದ್ಯದ ನೀತಿಯಾಗಿದೆ .
ಕಾಡಿನ ರಾಜ ಸಿಂಹಕ್ಕೆ ಏನಾಯಿತು ?
ಕಾಡಿನ ರಾಜ ಸಿಂಹಕ್ಕೆ ಅನ್ನವೂ ಸೇರದೆ , ನೀರೂ ಸೇರದೇ ಅನಾರೋಗ್ಯ ಉಂಟಾಯಿತು .
ಡಾ . ಹೈನಾ ಕಾಡಿನ ರಾಜ ಸಿಂಹವನ್ನು ಪರೀಕ್ಷಿಸಿ ಏನೆಂದು ಹೇಳಿತು ?
ಡಾ.ಹೈನಾ ಕಾಡಿನ ರಾಜ ಸಿಂಹವನ್ನು ಪರೀಕ್ಷಿಸಿ ‘ ಎಂತಹ ಸುವಾಸನೆ ನಿಮ್ಮ ಉಸಿರಲಿ ‘ ಎಂದು ಹೇಳಿತು .
ಡಾ . ಜೀಬ್ರಾ ಕಾಡಿನ ರಾಜ ಸಿಂಹವನ್ನು ಪರೀಕ್ಷಿಸಿ ಏನೆಂದು ಹೇಳಿತು ?
ಡಾ . ಜೀಬ್ರಾ ಕಾಡಿನ ರಾಜ ಸಿಹವನ್ನು ಪರೀಕ್ಷಿಸಿ ‘ ದುರ್ವಾಸನೆಯ ಉಸಿರಿದೆ ‘ ಎಂದು ಹೇಳಿತು .
ಎರಡು , ಮೂರು ವಾಕ್ಯಗಳಲ್ಲಿ ಉತ್ತರಿಸಿ
ಜಾಣ ವೈದ್ಯ ನರಿ ಕಾಯಿಲೆ ಬಿದ್ದ ಕಾಡಿನ ರಾಜ ಸಿಂಹವನ್ನು ಹೇಗೇ ಪರೀಕ್ಷಿಸಿತು ?
ವೈದ್ಯ ನರಿ ಚಕ್ರವರ್ತಿಯಾದ ಸಿಂಹವನ್ನು ಉಪಚರಿಸುತ್ತ ಬಾಯನ್ನು ತೆಗೆಯಲು ವಿನಂತಿಸಿತು . ಆಗ ಚಕ್ರವರ್ತಿಯಾದ ಸಿಂಹವು ಉಸಿರನು ಕುರಿತು ಏನು ಹೇಳುವಿರಿ ? ‘ ಎಂದು ಕೇಳುತ್ತಾ ತನ್ನ ಬಾಯನ್ನು ತೆರೆಯಿತು . ಆಗ ಬುದ್ಧಿವಂತ ನರಿಯು ‘ ಶೀತದ ಮೂಗು ಕಟ್ಟಿದೆ ಒಡೆಯ ವಾಸನೆ ಏನು ನನಗೆ ತಿಳಿಯದು ” ಎಂದು ತಕ್ಷಣ ಹೇಳುತ್ತಾ ಕ್ಷಮೆಯನ್ನು ಕೇಳಿತು . ಬುದ್ಧಿವಂತ ನರಿಯು ಸಿಂಹದ ಕೋಪಕ್ಕೆ ಬಲಿಯಾಗದೆ ಪಾರಾಯಿತು .
ಡಾ . ಜೀಬ್ರಾ ಕಾಯಿಲೆ ಬಿದ್ದ ಕಾಡಿನ ರಾಜ ಸಿಂಹವನ್ನು ಹೇಗೆ ಪರೀಕ್ಷಿಸಿತು ? ಸಿಂಹವು ಏನು ಮಾಡಿತು ?
ಡಾ.ಜೀಬ್ರಾ ಕಾಯಿಲೆ ಬಿದ್ದ ಕಾಡಿನ ರಾಜ ಸಿಂಹವನ್ನು ಪರೀಕ್ಷಿಸಿ ಬಾಯನ್ನು ತೆಗೆಯಲು ಹೇಳಿತು . ಸಿಂಹವು ಬಾಯನ್ನು ತೆರೆದು ತೋರಿಸಿದ ನಂತರ ‘ ದುರ್ವಾಸನೆಯ ಉಸಿರಿದೆ ‘ ಎಂದು ಹೇಳಿತು . ಆಗ ಸಿಂಹಕ್ಕೆ ಕೋಪವು ಬಂದು ಹೀಗೆ ಹೇಳಲು ಎಂಥ ಧೈರ್ಯ ನಿನಗೆ ಎಂದು ಗರ್ಜಿಸಿತು . ಸತ್ಯವನ್ನು ಹೇಳಿದ ವೈದ್ಯನನ್ನು ಬೈದು ಹೊರಗಡೆ ಓಡಿಸಿತು .
ಕಾಡಿನ ರಾಜ ಸಿಂಹವು ವ್ಯಥೆ ಪಡಲು ಕಾರಣವೇನು ?
ಕಾಡಿನ ರಾಜ ಸಿಂಹವು ವ್ಯಥೆಪಡಲು ಕಾರಣವೇನೆಂದರೆ – ಅದಕ್ಕೆ ಊಟಮಾಡಲು ಅನ್ನವು ಸೇರದಂತಾಯಿತು ಹಾಗೂ ನೀರೂ ಕೂಡ ಸೇರದಂತಾಯಿತು . ಹೀಗಾಗಿ ಸಿಂಹವು ಅನಾರೋಗ್ಯದಿಂದ ಬಹಳಷ್ಟು ನೋವು ಪಟ್ಟಿತು .
ಡಾ . ಹೈನಾ ಕಾಯಿಲೆ ಬಿದ್ದ ಕಾಡಿನ ರಾಜ ಸಿಂಹವನ್ನು ಹೇಗೆ ಪರೀಕ್ಷಿಸಿತು? ಸಿಂಹವು ಏನು ಮಾಡಿತು ?
ಡಾ . ಹೈನಾ ಕಾಯಿಲೆ ಬಿದ್ದ ಕಾಡಿನ ರಾಜ ಸಿಂಹದ ನಾಡಿಯನ್ನು ಹಿಡಿದು ನೋಡಿ ಪರೀಕ್ಷಿಸಿತು . ನಂತರ ಸಿಂಹಕ್ಕೆ ಬಾಯಿಯನ್ನು ತೆರೆಯಲು ಹೇಳಿತು . ‘ ಎಂತಹ ಸುವಾಸನೆ ನಿಮ್ಮ ಉಸಿರಲಿ ‘ ಎನ್ನುತ್ತ ಅದರ ಮುಖವನ್ನು ನೋಡಿತು . ಆಗ ಸಿಂಹವು ಕೋಪಗೊಂಡು ನನ್ನ ಎದುರಿನಲ್ಲೇ ಪ್ರಶಂಸೆ ಮಾಡುತ್ತಿಯಾ ಎಂದು ಹೇಳುತ್ತದೆ . ಇರುವ ಸತ್ಯವ ಹೇಳಲು ಹೆದರಿದ ಡಾ . ಹೈನಾಳನ್ನು ಹೊರ ಹಾಕಿಸಿತು .
ಸಂಬಂದಿಸಿದ ಇತರೆ ವಿಷಯಗಳು
- 10ನೇ ತರಗತಿ ಭಗತ್ಸಿಂಗ್ ಕನ್ನಡ ನೋಟ್ಸ್
- ಸರ್.ಎಂ. ವಿಶ್ವೇಶ್ವರಯ್ಯನವರ ಬಗ್ಗೆ
- ಭಾಗ್ಯಶಿಲ್ಪಿಗಳು ಪಾಠದ ಸಾರಾಂಶ
- 10ನೇ ತರಗತಿ ಯುದ್ಧ ಪಾಠದ ಸಾರಾಂಶ
- ಶಬರಿ ಪಾಠದ ಸಾರಾಂಶ ಕನ್ನಡ
- ಲಂಡನ್ ನಗರ ಪಾಠದ ಪ್ರಶ್ನೆ ಉತ್ತರಗಳು
- ಶಬರಿ ಪಾಠದ ಪ್ರಶ್ನೆ ಮತ್ತು ಉತ್ತರ
- 10ನೇ ತರಗತಿ ಕನ್ನಡ ಶಬರಿ ಪಾಠದ ಪ್ರಶ್ನೋತ್ತರಗಳು
- 10th ಹಸುರು ಪದ್ಯ ನೋಟ್ಸ್