ಗಾಂಧಿ ನೋಟ್ಸ್ ಪ್ರಥಮ ಪಿಯುಸಿ ಕನ್ನಡ | 1st PUC Kannada Gandhi Lesson Notes

1st puc kannada gandhi lesson notes । ಗಾಂಧಿ ಪಾಠದ ನೋಟ್ಸ್

1st PUC Kannada Gandhi Lesson Notes, ಗಾಂಧಿ ಪಾಠದ ನೋಟ್ಸ್, 1st puc kannada notes gandhi lesson with question answer, ಪ್ರಥಮ ಪಿಯುಸಿ ಕನ್ನಡ ಗಾಂಧಿ ಪಾಠದ ನೋಟ್ಸ್ ಪ್ರಶ್ನೋತ್ತರಗಳು, 1st Puc Kannada Gandhi Lesson Notes Question Answer Summary Mcq Pdf Download in Kannada Medium Karnataka State Syllabus , Kseeb Solutions For Class 11 Kannada Chapter 1 Notes 1st Puc Kannada Gandhi Lesson Question Answers Gandhi Lesson Notes Kannada 1st Puc Kannada 1st Lesson Notes kannada 1st puc gandhi pdf

1st puc kannada gandhi lesson notes

Spardhavani Telegram

ಲೇಖಕರ ಪರಿಚಯ

ಡಾ ।। ಬೆಸಗರಹಳ್ಳಿ ರಾಮಣ್ಣ

ಡಾ . ಬೆಸಗರಹಳ್ಳಿ ರಾಮಣ್ಣ : ಕನ್ನಡದ ಪ್ರಸಿದ್ಧ ಕಥೆಗಾರ ಮತ್ತು ವೈದ್ಯರಾಗಿದ್ದರು

ಜನನ : 1938

ಸ್ಥಳ : ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ‘ ಬೆಸಗರಹಳ್ಳಿ ‘ ಎಂಬ ಗ್ರಾಮ

ತಂದೆ : ಚಿಕ್ಕ ಎಲ್ಲೇಗೌಡ

ತಾಯಿ : ದೊಡ್ಡ ತಾಯಮ್ಮ

ವ್ಯಾಸಂಗ : ಬೆಸಗರಹಳ್ಳಿ , ಮದ್ದೂರು , ಮೈಸೂರುಗಳಲ್ಲಿ ವ್ಯಾಸಂಗ ನಡೆಸಿದ ರಾಮಣ್ಣನವರು 1968 ರಲ್ಲಿ ಎಂ.ಬಿ.ಬಿ.ಎಸ್ . ಪದವಿ ಪಡೆದು ವೈದ್ಯರಾದರು .

ಮೈಸೂರಿನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗಲೇ ಕಥೆಗಳನ್ನು ಬರೆಯತೊಡಗಿದ ರಾಮಣ್ಣನವರು ಪ್ರಜಾವಾಣಿಯ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆಯುವುದರೊಂದಿಗೆ ಸಣ್ಣ ಕಥೆಗಾರರಾಗಿ ಗಮನ ಸೆಳೆದರು .

ಕಥಾ ಸಂಕಲನಗಳು :

  • ನೆಲದ ಒಡಲು
  • ಗರ್ಜನೆ
  • ಹರಕೆಯ ಹಣ
  • ಒಂದು ಹುಡುಗನಿಗೆ ಬಿದ್ದ ಕನಸು
  • ಕೊಳಲು
  • ಖಡ್ಗ
ಕಿರುಕಾದಂಬರಿ

ತೋಳಗಳ ನಡುವೆ

ಸಮಗ್ರ ಕಥೆಗಳ ಸಂಕಲನ

ಮೊದಲು ‘ ಕನ್ನಂಬಾಡಿ ‘ ಎಂಬ ಹೆಸರಿನಲ್ಲಿ ಪ್ರಕಟಗೊಂಡಿದ್ದು ಇದೀಗ ‘ ಕಣಜ ‘ ಎಂಬ ಬೃಹತ್ ಸಂಕಲನದಲ್ಲಿ ಸೇರಿವೆ

ಪ್ರಶಸ್ತಿ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ

ನಿಧನ

1999 ರಲ್ಲಿ ನಿಧನರಾದರು

ಗಾಂಧಿ ನೋಟ್ಸ್ ಪ್ರಥಮ ಪಿಯುಸಿ ಕನ್ನಡ

ಪ್ರಥಮ ಪಿಯುಸಿ ಕನ್ನಡ ಗಾಂಧಿ ನೋಟ್ಸ್ | 1st PUC Kannada Gandhi Lesson Notes

ಒಂದು ವಾಕ್ಯದಲ್ಲಿ ಉತ್ತರಿಸಿ 1st PUC Kannada Gandhi Lesson Notes

ವೈದ್ಯಾಧಿಕಾರಿಯ ಜ್ಞಾಪಕಕ್ಕೆ ಬಂದದ್ದು ಏನು ?

 ವೈದ್ಯಾಧಿಕಾರಿಗೆ ತನ್ನ ಮುಂದೆ ನಿಂತಿರುವ ವ್ಯಕ್ತಿಗಳು ತನ್ನಂತೆಯೇ ಮನುಷ್ಯವರ್ಗಕ್ಕೆ ಸೇರಿದವರೆಂಬುದು ಜ್ಞಾಪಕಕ್ಕೆ ಬಂದಿತು .

ವೈದ್ಯಾಧಿಕಾರಿಯು ಇಲ್ಲಿಯವರೆಗೆ ಯಾವ ರೀತಿಯ ನ್ಯಾಯವನ್ನು ಕಂಡಿರಲಿಲ್ಲ ?

 ವೈದ್ಯಾಧಿಕಾರಿಯು ಅಲ್ಲಿಯವರೆಗೂ ಇಂತಹ ಕಾಕತಾಳ ನ್ಯಾಯವನ್ನು ಕಂಡಿರಲಿಲ್ಲ

ಕುಟುಂಬ ಯೋಜನಾ ವಿಸ್ತರಣಾಧಿಕಾರಿಯ ಹೆಸರೇನು ?

 ನರಸಿಂಹಮೂರ್ತಿ ಎಂಬುದು ಕುಟುಂಬ ಯೋಜನಾ ವಿಸ್ತರಣಾಧಿಕಾರಿಯ ಹೆಸರು .

ಮೊಮ್ಮಗನ ಆಗಲವಾದ ಕಿವಿಗಳ ಕಂಡ ಕರಿಸಿದ್ದೇಗೌಡನು ಯಾರ ಮನೆಗೆ ಹೋದನು ?

ಮೊಮ್ಮಗನ ಅಗಲವಾದ ಕಿವಿಗಳನ್ನು ಕಂಡು ಕರಿಸಿದ್ದೇಗೌಡನು ಜೋಯಿಸರ ಮನೆಗೆ ಹೋದನು .

ಹುಡುಗನಿಗೆ ಮಹಾತ್ಮ ಗಾಂಧಿ ಎಂಬ ಹೆಸರನ್ನು ಇಟ್ಟವರು ಯಾರು ?

ಜೋಯಿಸರ ಸಲಹೆ ಮೇರೆಗೆ ಕರಿಸಿದ್ದೇಗೌಡನು ಹುಡುಗನಿಗೆ ಮಹಾತ್ಮ ಗಾಂಧಿ ಎಂಬ ಹೆಸರಿಟ್ಟನು .

 ಗಾಂಧಿಯನ್ನು ಹೆಚ್ಚಿನ ಪರೀಕ್ಷೆಗಳಿಗೆ ಯಾವ ಆಸ್ಪತ್ರೆಗೆ ಸೇರಿಸಬೇಕೆಂದು ವೈದ್ಯಾಧಿಕಾರಿ ಸೂಚಿಸಿದರು ?

ಜಿಲ್ಲಾ ಕೇಂದ್ರದಲ್ಲಿರುವ ದೊಡ್ಡಾಸ್ಪತ್ರೆಗೆ ಸೇರಿಸಬೇಕೆಂದು ವೈದ್ಯಾಧಿಕಾರಿ ಸೂಚಿಸಿದರು .

ಹಲಸಿನ ಮರ ಮಾರಿದ್ದರಿಂದ ಕರಿಸಿದ್ದೇಗೌಡನಿಗೆ ಸಿಕ್ಕ ಹಣವೆಷ್ಟು ?

ಹಲಸಿನ ಮರ ಮಾರಿದ್ದರಿಂದ ಕರಿಸಿದ್ದೇಗೌಡನಿಗೆ ಇನ್ನೂರಐವತ್ತು ರೂಪಾಯಿಗಳು ಸಿಕ್ಕವು ,

ಪ್ರಥಮ ಪಿಯುಸಿ ಕನ್ನಡ ಗಾಂಧಿ ನೋಟ್ಸ್ | 1st PUC Kannada Gandhi Lesson Notes
ಪ್ರಥಮ ಪಿಯುಸಿ ಕನ್ನಡ ಗಾಂಧಿ ನೋಟ್ಸ್ | 1st PUC Kannada Gandhi Lesson Notes

ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ 1st PUC Kannada Gandhi Lesson Notes

ವೈದ್ಯಾಧಿಕಾರಿಗೆ ಹುಡುಗ ಹೇಗೆ ಕಂಡನು ?

ವೈದ್ಯಾಧಿಕಾರಿಯು ಕತ್ತೆತ್ತಿ ನೋಡಿದಾಗ ಸುಮಾರು ಎತ್ತರದ ನರಪೇತಲ , ಅಗಲ ಕಿವಿಗಳ ಹೊಟ್ಟೆ ಸುಬ್ಬಣ್ಣನೊಬ್ಬ ತನ್ನ ಮುಂದೆ ಅವ್ಯಕ್ತ ನೋವಿನ ರೋಷವನ್ನು ತನ್ನ ಮುಖದ ಮೇಲೆ ಧರಿಸಿ ನಿಂತಿರುವಂತೆ ಹುಡುಗನು ಕಂಡನು .

ವೈದ್ಯಾಧಿಕಾರಿ ಹುಡುಗನನ್ನು ನೋಡಿ ಏನೆಂದು ಕುಚೇಷ್ಟೆ ಮಾಡಿದನು ?

” ನನ್ನನ್ನು ಒಸಿ ನೋಡಿ ” ಎ೦ದ ಗಾಂಧಿಗೆ ವೈದ್ಯಾಧಿಕಾರಿಯು ” ಸ್ವಲ್ಪ ಏನೋ ಚೆನ್ನಾಗಿಯೇ ನೋಡ್ಲೆ , ನಿನ್ನ ಹೊಟ್ಟೆ ದಪ್ಪ ಕೈಕಾಲು ಸಣ್ಣ , ಕಿವಿಗಳು ಮಾತ್ರ ಗಾಂಧಿ ಕಿವಿಗಳು ಇದ್ದಾಗಿವೆಯಪ್ಪಾ ‘ ಎಂದು ಕುಚೇಷ್ಟೆ ಮಾಡಿದನು .

ಹುಡುಗನ ಯಾವ ಮಾತಿಗೆ ವೈದ್ಯಾಧಿಕಾರಿ ಬೆಪ್ಪಾಗಿ ಹೋದ ?

“ ನನ್ನ ಹೆಸರು ದೇವರ ಸತ್ಯವಾಗೂ ಸಾ ಮಹಾತ್ಮ ಗಾಂಧಿ ಅಂತ ‘ ‘ ಎಂದು ಹುಡುಗನು ಧೈರ್ಯವಾಗಿ , ದೃಢ ನಿಲುವಿನಿಂದ ಆಡಿದ ಮಾತಿಗೆ ವೈದ್ಯಾಧಿಕಾರಿಯು ಬೆನ್ನಾಗಿ ಹೋದನು .

ಗಾಂಧಿಯನ್ನು ಪರೀಕ್ಷೆ ಮಾಡಿದ ವೈದ್ಯರು ನಿಂಗಮ್ಮನಿಗೆ ಹೇಳಿದ ಮಾತುಗಳೇನು ?

 ಗಾಂಧಿಯನ್ನು ಪರೀಕ್ಷೆ ಮಾಡಿದ ವೈದ್ಯರು ‘ ನೋಡಮ್ಮ ನಿಮ್ಮುಡುಗನಿಗೆ ಹೊಟ್ಟೇಲಿ ನೀರು ಸೇಳ್ಕೊಂಡಿದೆ . ಜೊತೆಗೆ ಕಾಲುಗಳೂ ಊದಿಕೊಂಡಿವೆ . ಇದು ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆ . ಆಗಲೇ ಕಪ್ಪು ಈಲಿಗೂ ( ಅವರ್ ) ಕಾಯಿಲೆ ಹಬ್ಬ ಅದು ಮುಟ್ಟಿದರೆ ಸಾಕು ಗಾಂಧಿ ನೋವು ಅಂತ ಬಡ್ಕೊತಾನೆ ‘ ‘ ಎಂದು ನಿಂಗಮ್ಮನಿಗೆ ಹೇಳಿದರು .

ನಿಂಗಮ್ಮನ ಗಂಡ ಪ್ರಾಣ ಕಳೆದುಕೊಂಡದ್ದು ಹೇಗೆ ?

ನಿಂಗಮ್ಮನ ಗಂಡ ಒಬ್ಬ ಸಾಹುಕಾರನ ಬಳಿ ಸೇಂದಿ ಇಳಿಸುವ ಕೆಲಸ ಮಾಡುತ್ತಿದ್ದನು . ಒಂದು ದಿನ ಮಠದ ಮೇಲಿಂದ ಬಿದ್ದು ಪ್ರಾಣ ಕಳೆದುಕೊಂಡನು .

ಗಾಂಧಿ ಎಂಬ ಹುಡುಗನ ಕೊನೆಯ ಆಸೆ ಯಾವುದು ?

ಗಾಂಧಿ ಎಂಬ ಹುಡುಗನಿಗೆ ತಾನು ಸತ್ತರೆ , ತನ್ನನ್ನು ಊರಿನಲ್ಲಿರುವ ಹಲಸಿನ ಮರದ ಬುಡದಲ್ಲೇ ಹಾಕಬೇಕು ‘ ಎಂಬ ಆಸೆಯಿತ್ತು

ಊರಿಗೆ ಬಂದ ಕರಿಸಿದ್ದೇಗೌಡ ಏನನ್ನು ಗಿರವಿ ಇಡಲು ಪ್ರಯತ್ನಿಸಿದ ?

ಊರಿಗೆ ಬಂದ ಕರಿಸಿದ್ದೇಗೌಡ ತನ್ನ ಮಗಳ ಹಾಗೂ ಮೊಮ್ಮಗಳ ಓಲೆಗಳನ್ನು ಗಿರವಿ ಇಡಲು ಪ್ರಯತ್ನಿಸಿದ . ಆದರೆ ಯಾರೂ ಒಪ್ಪಲಿಲ್ಲ .

ಪ್ರಥಮ ಪಿಯುಸಿ ಕನ್ನಡ ಗಾಂಧಿ ನೋಟ್ಸ್ | 1st PUC Kannada Gandhi Lesson Notes
ಪ್ರಥಮ ಪಿಯುಸಿ ಕನ್ನಡ ಗಾಂಧಿ ನೋಟ್ಸ್ | 1st PUC Kannada Gandhi Lesson Notes

ಐದಾರು ವಾಕ್ಯಗಳಲ್ಲಿ ಉತ್ತರಿಸಿ 1st PUC Kannada Gandhi Lesson Notes

ವೈದ್ಯಾಧಿಕಾರಿ ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಗಾಂಧಿಯನ್ನು ನಡೆಸಿಕೊಂಡ ರೀತಿಯನ್ನು ನಿರೂಪಿಸಿರಿ .

ಆಸ್ಪತ್ರೆಯ ಸಿಬ್ಬಂದಿಗಳು ಮತ್ತು ವೈದ್ಯಾಧಿಕಾರಿಯು ಕಾಯಿಲೆಯಿಂದ ನರಳುತ್ತಿದ್ದ ಗಾಂಧಿಯನ್ನು ಎಷ್ಟು ಹೊತ್ತು ಕಾದರೂ ವಿಚಾರಿಸದ ನಿರ್ಲಕ್ಷಿಸಿದರು .

ಅಸಹಾಯಕತೆ ಮತ್ತು ಅವಮಾನದಿಂದ ಗಾಂಧಿ ಮತ್ತು ಅವನ ತಾಯಿ ಕಂಗಾಲಾದರು . ಗಾಂಧಿಯು ವೈದ್ಯರ ಬಳಿಗೆ ನುಗ್ಗಿ ಬಂದು ತನ್ನನ್ನು ಪರೀಕ್ಷಿಸುವಂತೆ ಕೇಳಿದಾಗಲೂ ವೈದ್ಯಾಧಿಕಾರಿಯು ಅವನ ದೇಹಸ್ಥಿತಿಯನ್ನು ಗಮನಿಸದೆ ಅವನ ಆಕಾರ , ಕಿವಿಯ ಬಗ್ಗೆ ಕುಚೇಷ್ಟೆ ಮಾಡುವನು .

ಆಸ್ಪತ್ರೆಯ ಉಳಿದ ಸಿಬ್ಬಂದಿಗಳಾದ ನಾಯ್ಡು , ನರಸಿಂಹಮೂರ್ತಿ , ಸರಸಮ್ಮ ಮುಂತಾದವರು ಹುಡುಗನ ಹೆಸರು ‘ ಗಾಂಧಿ ‘ ಎಂಬುದನ್ನು ಕೇಳಿ ಕಿಸಕ್ಕನೆ ನಕ್ಕುಬಿಟ್ಟರು . ನರಸಿಂಹಮೂರ್ತಿಯು

ಹುಡುಗನಿಗೆ ಪ್ರಶ್ನೆಗಳನ್ನು ಕೇಳಿ ಇನ್ನಷ್ಟು ಹಿಂಸಿಸುವನು , ಹೃದಯ ಸಂಬಂಧಿ ತೊಂದರೆ ಮತ್ತು ಮೂತ್ರಕೋಶದ ಒತ್ತಡದಿಂದ ಬಳಲುತ್ತಿದ್ದ ಮುಗ್ಧ ಬಾಲಕನ ಆರೈಕೆಯ ಬಗ್ಗೆ ಗಮನಕೊಡದ , ಅವನ ಹೆಸರು , ಆಕಾರಗಳನ್ನು ತಮಾಷೆ ಮಾಡುತ್ತಾ ನಿಲ್ಲುವ ಅಮಾನುಷ ವರ್ತನೆಯನ್ನು ವೈದ್ಯಾಧಿಕಾರಿ ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ತೋರಿದ್ದಾರೆನ್ನಬಹುದು .

ಅವರೆಲ್ಲರ ನಿರ್ಲಕ್ಷ್ಯ ಈ ಸಂದರ್ಭದಲ್ಲಿ ಎದ್ದುಕಾಣುತ್ತದೆ .

ಗಾಂಧಿ ಪಾಠದ ನೋಟ್ಸ್

ಕರಿಸಿದ್ದೇಗೌಡ ತನ್ನ ಮೊಮ್ಮಗನಿಗೆ ಗಾಂಧಿಯ ಹೆಸರಿಡಲು ಕಾರಣವೇನು ?

15 ವರ್ಷಗಳ ಹಿಂದೆ ತನ್ನ ಮಗಳು ಗಂಡುಮಗುವನ್ನು ಹೆತ್ತಾಗ ಕರಿಸಿದ್ದೇಗೌಡನಿಗೆ ಅಪಾರ ಸಂತೋಷ ವಾಯಿತು . ಅವನು ತನ್ನ ಮೊಮ್ಮಗನ ಅಗಲವಾದ ಕಿವಿಗಳನ್ನು ಕಂಡು ಆನಂದಿಸುತ್ತಾ ಜಾತಕ ಬರೆಸಲು ಜೋಯಿಸರ ಮನೆಗೆ ಓಡಿದನು . ಜೋಯಿಸರು ಮಗು ಬಹು ಪ್ರಶಸ್ತವಾದ ಘಳಿಗೆಯಲ್ಲಿ ಜನಿಸಿದೆಯೆಂದು ಲೆಕ್ಕಾಚಾರ ಮಾಡಿ ಹೇಳಿದರು .

ಅಲ್ಲದೆ ಮಗುವಿನ ಕಿವಿ ಅಗಲವಾಗಿರುವುದರಿಂದಲೂ ಮತ್ತು ಕರಿಸಿದ್ದೇಗೌಡ ಬಹಳ ವರ್ಷಗಳ ಹಿಂದೆ ಶಿವಪುರಕ್ಕೆ ಹೋಗಿ ಮಹಾತ್ಮ ಗಾಂಧೀಜಿಯವರನ್ನು ಖುದ್ದಾಗಿ ದರ್ಶನ ಪಡೆದು ಬಂದವನು ಈ ಸುತ್ತಮುತ್ತಲಿಗೆ ಇವನೊಬ್ಬನೇ ಆದುದರಿಂದ ಮಗುವಿಗೆ ‘ ಮಹಾತ್ಮಗಾಂಧಿ ‘ ಎಂದು ಹೆಸರಿಡಲು ಕರಿಸಿದ್ದೇಗೌಡನಿಗೆ ಜೋಯಿಸರು ಸಲಹೆ ನೀಡಿದರು .

ಆದ್ದರಿಂದಲೇ ಕರಿಸಿದ್ದೇಗೌಡನು ತನ್ನ ಮೊಮ್ಮಗನಿಗೆ ಗಾಂಧಿಯ ಹೆಸರನ್ನಿಟ್ಟನು .

ಮೊಮ್ಮಗನ ಪ್ರಾಣ ಉಳಿಸಿಕೊಳ್ಳಲು ಕರಿಸಿದ್ದೇಗೌಡ ಪಟ್ಟ ಪಾಡೇನು ?

ಕರಿಸಿದ್ದೇಗೌಡನ ಜಮೀನನ್ನು ಸರ್ಕಾರ ವಶಪಡಿಸಿಕೊಂಡಿದ್ದರಿಂದ ಅವನು ತನ್ನ ಮೊಮ್ಮಗನ ಆರೋಗ್ಯದ ಕಡೆ ಅವ ಗಮನಕೊಟ್ಟಿರಲಿಲ್ಲ . ಮಗಳು ವೈದ್ಯರು ‘ ದೊಡ್ಡಾಸ್ಪತ್ರೆಗೆ ಕರೆದೊಯ್ಯಬೇಕೆಂದು ಹೇಳಿದ್ದಾರೆಂದಾಗ ಅವನ ಎದೆ ಧಸಕ್ಕೆಂದಿತು .

ದೊಡ್ಡಾಸ್ಪತ್ರೆಯ ವೈದ್ಯರು ಮಾತ್ರ ಬರೆದುಕೊಟ್ಟು ಸಾಗಹಾಕಲು ನೋಡಿದಾಗ ಕರಿಸಿದ್ದೇಗೌಡನು “ ಏಂ ದಮ್ಮಯ್ಯ , ಏನೋ ನನ್ ಮೊಮ್ಮಗನನ್ನ ಕಾಪಾಡಿ , ಇಲ್ಲಿ ಓಸಿ ದಿನ ಇಟ್ಕಂಡು ಉಳಿಸಿಕೊಡಿ ‘ ಎಂದು ಕಣ್ಣೀರು ಸುರಿಸಿದನು .

ಗಂಡಸರ ವಾರ್ಡಿಗೆ ಸೇರಿಸಿದ ನಂತರ ಕಾಸಿಗಾಗಿ ಪರದಾಡುವನು , ಎಂ.ಡಿ. ಪಾಸು ಮಾಡಿದ್ದ ದೊಡ್ಡ ವೈದ್ಯರು ಚೀಟಿಯಲ್ಲಿ ಬರೆದ ಔಷಧಿಗಳನ್ನು ಬೇಗನೆ ತರಿಸಬೇಕೆಂದು ಒತ್ತಾಯ ಮಾಡಿದಾಗ , ಮಗಳು ಮತ್ತು ಮೊಮ್ಮಗಳ ಓಲೆಗಳನ್ನು ಒತ್ತೆ ಇಡಲು ನೋಡಿದನು . ಯಾರೂ ಸಮ್ಮತಿಸದಿದ್ದಾಗ ಎರಡು ದಿನ ಪರದಾಡಿ ಇನ್ನೂರೈವತ್ತು ರೂಪಾಯಿಗೆ ಹಲಸಿನ ಮಲವನ್ನು ಮಾರಿ ಆಸ್ಪತ್ರೆಗೆ ಬರುವಷ್ಟರಲ್ಲಿ ಮೊಮ್ಮಗ ಸತ್ತಿದ್ದನು .

ಹೀಗೆ ಮೊಮ್ಮಗನನ್ನು ಕಾಪಾಡಲು ಕರಿಸಿದ್ದೇಗೌಡನು ಸರ್ವರೀತಿಯಲ್ಲಿ ಪ್ರಯತ್ನಿಸಿದನಾದರೂ ನಿರಾಶ ನಾಗುವಂತಾಯಿತು .

ಗಾಂಧಿ ಎಂಬ ಹುಡುಗನ ಸಾವಿನ ಸಂದರ್ಭವನ್ನು ವಿವರಿಸಿರಿ .

ಬಡತನ ಮತ್ತು ಅಸಹಾಯಕತೆಯಿಂದಾಗಿ ಸಮಾಜದ ನಿರ್ಲಕ್ಷ್ಯಕ್ಕೊಳಗಾದ ಗಾಂಧಿ ಎ0ಬ ಹುಡುಗನ ಸಾವಿನ ಸಂದರ್ಭ ಕರುಳು ಮಿಡಿಯುವಂತಿದೆ . ತನ್ನ ತಾಯಿ ತಂಗಿಯರ ಓಲೆಗಳನ್ನು ತನಗಾಗಿ ಅಡವಿಡಲು ಒಯ್ಯುತ್ತಿರುವುದನ್ನು ಕಂಡ ಗಾಂಧಿಯು ತನ್ನ ಅಜ್ಜನಾದ ಕರಿಸಿದ್ದೇಗೌಡನಿಗೆ ‘ ಆಯ್ತಾ ನನ್ನ ಊರಿಗೆ ಕರ್ಕೊಂಡು ನಡಿ .

ನನ್ನ ಹಣೇಬರಹ ಇದ್ದ೦ ಗಾಯ್ತದೆ ‘ ‘ ಎನ್ನುವನು . ಅವನು ಅಯ್ಯನಿಗೆ ತನ್ನ ಮೇಲೆ ಎಷ್ಟು ಪ್ರೀತಿಯಿದೆ ಎಂಬುದನ್ನು ಬಲ್ಲವನಾಗಿದ್ದನು . ತಾನು ಸತ್ತರೆ ಹಲಸಿನ ಮರದ ಬುಡದಲ್ಲಿ ತನ್ನನ್ನು ಹೂಳಬೇಕೆಂದು ತನ್ನ ಕೊನೆಯ ಆಸೆಯನ್ನು ಗಾಂಧಿ ತಿಳಿಸಿದ್ದ .

ಆದರೆ ಅದೇ ಹಲಸಿನ ಮರವನ್ನು ಮಾದಿ ಇನ್ನೂರೈವತ್ತು ರೂಪಾಯಿಗಳೊಂದಿಗೆ ತನ್ನ ಮೊಮ್ಮಗನನ್ನು ಉಳಿಸಿಕೊಳ್ಳಲೆಂದು ಬರುವ ಕರಿಸಿದ್ದೇಗೌಡನು ಮೊಮ್ಮಗನ ಶವವನ್ನು ಬಿಡಿಸಿಕೊಂಡು ಊರಿಗೆ ಕೊಂಡೊಯ್ಯುವ ಸಂದರ್ಭ ಎದುರಾಗುತ್ತದೆ . ಬಡ ಕುಟುಂಬದ ರೋಗಿಷ್ಠ ಹುಡುಗನೊಬ್ಬ ಬಡತನ ಮತ್ತು ಕೈಗೆಟುಕದ ವೈದ್ಯಕೀಯ ಸೌಲಭ್ಯಗಳಿಂದಾಗಿ ಮರಣವನ್ನಪ್ಪಬೇಕಾಗುತ್ತದೆ .

ಪ್ರಥಮ ಪಿಯುಸಿ ಕನ್ನಡ ಗಾಂಧಿ ನೋಟ್ಸ್ | 1st PUC Kannada Gandhi Lesson Notes
ಪ್ರಥಮ ಪಿಯುಸಿ ಕನ್ನಡ ಗಾಂಧಿ ನೋಟ್ಸ್ | 1st PUC Kannada Gandhi Lesson Notes

ಸಂದರ್ಭಸೂಚಿಸಿ , ಸ್ವಾರಸ್ಯವನ್ನು ವಿವರಿಸಿ 1st PUC Kannada Gandhi Lesson Notes

 “ ಇಲ್ಲಿ ನನ್ನ ನಿನ್ನ ರಾಗವ ಯಾರು ಕೇಳಾರು ? ”

ಡಾ ।। ಬೆಸಗರಹಳ್ಳಿ ರಾಮಣ್ಣನವರು ಬರೆದಿರುವ ‘ ಗಾಂಧಿ ‘ ಎಂಬ ಕಥೆಯಿಂದ ಆಯ್ದುಕೊಂಡಿರುವ ಈ ಮೇಲಿನ ವಾಕ್ಯವನ್ನು ಗಾಂಧಿಯ ತಾಯಿ , ಗಾಂಧಿಯನ್ನು ಉದ್ದೇಶಿಸಿ ಹೇಳುವಳು .

ಹೊತ್ತು ಹುಟ್ಟುವ ಮುಂಚೆಯೇ ಹಳ್ಳಿಯಿಂದ ಹೊರಟು ಬಂದು ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ಕಾಯುತ್ತಿರುವ ಗಾಂಧ ಎಂಬ ಹುಡುಗ ಮತ್ತು ಅವನ ತಾಯಿಯನ್ನು ಆಸ್ಪತ್ರೆಯಲ್ಲಿ ಯಾರೂ ಕೇಳುವವರೇ ಗತಿಯಿರಲಿಲ್ಲ .

ಕಾದೂ ಕಾದೂ ಸುಸ್ತಾದ ಗಾಂಧಿಯು ತಾಯಿಯನ್ನು ನಾವು ಹೊತ್ತು ಹುಟ್ಟುವ ಮುಂಚೆಯೇ ಬಂದಿದ್ದೇವಲ್ಲಾ ? ಎಂದು ಕೇಳಿದಾಗ ಕಾದೂ ಕಾದೂ ಜಿಗುಪ್ಪ – ಅವಮಾನಗಳಿಂದ ನೋಯುತ್ತಾ ನಿಂತಿದ್ದ ಅವನ ತಾಯಿಯು ಇಲ್ಲಿ ನನ್ನ ನಿನ್ನ ರಾಗವ ಯಾರು ಕೇಳಾರು ? ‘ ಎಂದು ನುಡಿಯುವಳು . ಬಡವರನ್ನು ಆಸ್ಪತ್ರೆಯವರು ತಾತ್ಸಾರದಿಂದ ನಡೆಸಿಕೊಳ್ಳುತ್ತಿರುವುದಕ್ಕೆ ಅವಳ ಈ ಮಾತು ಕನ್ನಡಿ ಹಿಡಿದಿದೆ .

ಇದ್ದು ನಾನು ಯಾವ ರಾಜ್ಯ ಆಳಬೇಕು .

 ಡಾ | ಬೆಸಗರಹಳ್ಳಿ ರಾಮಣ್ಣನವರು ಬರೆದಿರುವ ‘ ಗಾಂಧಿ ‘ ಎಂಬ ಸಣ್ಣಕತೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದು ಕೊಳ್ಳಲಾಗಿದೆ . ಗಾಂಧಿ ಎಂಬ ಹುಡುಗನು ತನ್ನ ತಾಯಿಯನ್ನು ಉದ್ದೇಶಿಸಿ ಈ ಮಾತನ್ನಾಡುವನು .

ಬೆಳಿಗ್ಗೆಯಿಂದ ಕಾಯುತ್ತಿದ್ದರೂ ಆಸ್ಪತ್ರೆಯ ಸಿಬ್ಬಂದಿ ಯಾರೊಬ್ಬರೂ ವಿಚಾರಿಸದಿರುವುದರಿಂದ ಬೇಸತ್ತ ಗಾಂಧಿಯು ನಾನು ಇದ್ದರಷ್ಟು ಸತ್ತರೆಷ್ಟು ನಡಿಯಪ್ಪಾ ಊರಿಗೆ ಹೋಗೋಣ ‘ ‘ ಎನ್ನುತ್ತಾನೆ .

ಮೂರೊತ್ತು ಸಾಯ್ತಿನಿ ತಾಯಿಗೆ ಸಾಯ್ತಿನಿ ಎಂದೆನ್ನಬಾರದೆಂದು ತಾಯಿಯು ಹೇಳಿದಾಗ , ಗಾಂಧಿಯು ‘ ಇದ್ದು ನಾನು ಯಾವ ರಾಜ್ಯ ಆಳಬೇಕು ? ‘ ‘ ಎಂಬ ಮಾತನ್ನು ಹೇಳುವನು . ವಯಸ್ಸಿಗೆ ಮೀರಿದ ಅನುಭವದ ಮಾತುಗಳು ತನ್ನ ಮಗನ ಬಾಯಲ್ಲಿ ಬಂದುದನ್ನು ನೋಡಿ ತಾಯಿ ಮರುಗುವಳು .

ಮೊದಲೇ ತೂರಾಡ್ತಿ , ಬಿದ್ದುಗಿದ್ದು ಬುಟ್ಟಿ ಕನ

ಡಾ | ಬೆಸಗರಹಳ್ಳಿ ರಾಮಣ್ಣನವರು ಬರೆದಿರುವ ‘ ಗಾಂಧಿ ‘ ಎಂಬ ಸಣ್ಣಕತೆಯಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸ ಲಾಗಿದೆ . ತಾಯಿಯು ತನ್ನ ಮಗ ಗಾಂಧಿಯನ್ನು ಉದ್ದೇಶಿಸಿ ಈ ಮಾತನ್ನಾಡಿದ್ದಾಳೆ .

ಬೆಳಿಗ್ಗೆಯಿಂದ ಕಾದರೂ ಆಸ್ಪತ್ರೆಯ ಸಿಬ್ಬಂದಿ ಗಾಂಧಿ ಮತ್ತು ಅವನ ತಾಯಿಯನ್ನು ವಿಚಾರಿಸಲೇ ಇಲ್ಲ . ತಾಯಿಯು ಅಸಹಾಯಕತೆಯಿಂದ ಕಣ್ಣೀರೊರೆಸಿಕೊಳ್ಳುತ್ತಿರುವುದನ್ನು ನೋಡಿ ಗಾಂಧಿಗೆ ತನ್ನ ಕಾಯಿಲೆ ಮರೆತುಹೋಗುವಂತಹ ಕೋಪ ಬಂದಿತು .

ತನ್ನ ದೇಹವನ್ನು ಪೀಡಿಸುತ್ತಿರುವ ಕಾಯಿಲೆಯ ನೋವು , ತಮ್ಮ ಅಸಹಾಯಕತೆ , ಅವಮಾನಗಳನ್ನು ಸಹಿಸಲಾಗದೆಂದು ಅವನ ವೈದ್ಯರು ಕೋಣೆಗೆ ನುಗ್ಗಲು ಧಡಕ್ಕನೆ ಎದ್ದು ನಿಂತನು .

ಆಗ ತಾಯಿಯು ಮೊದಲೇ ಕಾಯಿಲೆಯಿಂದ ಸಣ್ಣಗೆ ಸೊರಗಿರುವ ತನ್ನ ಮಗನಿಗೆ ‘ ‘ ಮೊದಲೇ ತೂರಾಡ್ತಿ ಬಿದ್ದುಗಿದ್ದು ಬಿಟ್ಟಿಯಪ್ಪಾ ‘ ‘ ಎಂಬ ಈ ಮೇಲಿನ ಮಾತನ್ನು ಹೇಳುವಳು .

” ಇವನ್ನ ಸಾಕ್ಷಾತ್ ಗಾಂಧಿ ಅಂತ್ತೇ ತಿಳ್ಕೊಂಡು ಬಿಟ್ರಿ ? “

ಡಾ । ಬೆಸಗರಹಳ್ಳಿ ರಾಮಣ್ಣನವರು ಬರೆದಿರುವ ‘ ಗಾಂಧಿ ‘ ಎಂಬ ಸಣ್ಣಕತೆಯಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿಯು ಈ ಮೇಲಿನ ಮಾತನ್ನಾಡುವನು .

ತಮ್ಮೆದುರು ಚಿಕಿತ್ಸೆಗಾಗಿ ಒತ್ತಾಯಿಸಿ ನಿಂತ ಗಾಂಧಿಯನ್ನು ನೋಡಿ ವೈದ್ಯರಿಗೆ ಕುಚೇಷ್ಟೆ ಮಾಡಬೇಕೆನಿಸಿತು . ಅವನ ಕಿವಿಗಳು ಗಾಂಧೀಜಿಯ ಕಿವಿಗಳಂತೆ ಅಗಲವಾಗಿವೆ ಎಂದವರು ಛೇಡಿಸಿದರು .

ಆದರೆ ರೋಗಿಯ ಹೆಸರು ನಿಜಕ್ಕೂ ‘ ಗಾಂಧಿ ‘ ಎಂದು ತಿಳಿದಾಗ ಅವರು ಬೆರಗಿನಿಂದ ತಾಯಿಗೆ ‘ ‘ ಏನಮ್ಮ ಹುಡುಗಾಟಕ್ಕೆ ನಾನು ಇವನ ಕಿವಿಗಳು ಗಾಂಧೀಜಿಗೆ ಇದ್ದಂತಿದ ಅಂದ್ರೆ ಇವನ್ನ ಸಾಕ್ಷಾತ್ ಗಾಂಧಿ ಅಂತ್ತೇ ತಿಳ್ಕೊಂಡುಬಿಟ್ರ ? ‘ ಎಂದು ಆಕ್ಷೇಪಿಸಿದರು . ಆಗ ತಾಯಿಯು ದೇವರ ಮೇಲೆ ಆಣೆ ಮಾಡಿ ನಿಜಕ್ಕೂ ತನ್ನ ಮಗನ ಹೆಸರು ‘ ಗಾಂಧಿ ‘ ಎಂಬುದೇ ಎಂದು ದೃಢಪಡಿಸುವಳು .

1st PUC Kannada Gandhi Lesson Notes

“ ಲೋ ಹುಡುಗ ಆ ಫೋಟೋ ಯಾರದಯ್ಯ ? ”

ಡಾ . ಬೆಸಗರಹಳ್ಳಿ ರಾಮಣ್ಣನವರು ಬರೆದಿರುವ ‘ ಗಾಂಧಿ ‘ ಎಂಬ ಸಣ್ಣಕತೆಯಿಂದ ಈ ಮೇಲಿನ ವಾಕ್ಯವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ .

ವೈದ್ಯಾಧಿಕಾರಿಯು ತನ್ನೆದುರು ಚಿಕಿತ್ಸೆಗಾಗಿ ನಿಂತಿರುವ ಹುಡುಗನ ಹೆಸರು ‘ ಗಾಂಧಿ ‘ ಎಂದು ತಿಳಿದು ಚೆನ್ನಾಗಿಹೋದನು . ತಾನು ಕಾಕತಾಳೀಯವಾಗಿ ಗಾಂಧೀಜಿಯ ಕಿವಿ ಎಂದುದಕ್ಕೂ ಹುಡುಗ ತನ್ನ ಹೆಸರು ಗಾಂಧಿ ಎಂದುದಕ್ಕೂ ಅವನಿಗೆ ವಿಪರೀತ ಆಶ್ಚರ್ಯವಾಯಿತು .

ಅದನ್ನು ಅವನು ತನ್ನ ಸಹೋದ್ಯೋಗಿಗಳಾದ ನರಸಿಂಹಮೂರ್ತಿ , ನಾಯ್ಡು , ಸರಸಮರಿಗೆ ತಿಳಿಸಿದಾಗ ಅವರೆಲ್ಲಾ ನಕ್ಕುಬಿಟ್ಟರು . ಕುಟುಂಬ ಯೋಜನೆಯ ವಿಸ್ತರಣಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ನರಸಿಂಹಮೂರ್ತಿಯು

ಅದನ್ನು ನಂಬಲಿಲ್ಲ , ಖಾತರಿಪಡಿಸಿಕೊಳ್ಳಲು ಗಾಂಧಿಯನ್ನು ಪ್ರಶ್ನಿಸುತ್ತಾ ವೈದ್ಯಾಧಿಕಾರಿಗಳ ಕುರ್ಚಿಯ ಮೇಲೆ ಗೋಡೆಗೆ ತೂಗು ಹಾಕಿರುವ ಫೋಟೋ ಒಂದನ್ನು ತೋರಿಸಿ ‘ ‘ ಲೋ ಹುಡುಗ ಆ ಫೋಟೋ ಯಾರದಯ್ಯ ? ‘ ಎಂದು ಪ್ರಶ್ನಿಸಿದನು . ಅದನ್ನು ಗಾಂಧೀಜಿಯದೆಂದು ಬಾಲಕ ಸರಿಯಾಗಿಯೇ ಗುರುತಿಸುವ ಸಂದರ್ಭವಿದಾಗಿದೆ .

“ ಓಹೋ ! ಇವನ ಹೆಸರು ಮಹಂತೇಗೌಡ ಅಂತ ಅಲ್ವ ? “

 ಡಾ || ಬೆಸಗರಹಳ್ಳಿ ರಾಮಣ್ಣನವರು ಬರೆದಿರುವ ‘ ಗಾಂಧಿ ‘ ಎಂಬ ಸಣ್ಣ ಕತೆಯಲ್ಲಿ ಜಿಲ್ಲಾಸ್ಪತ್ರೆಯ ಗುಮಾಸ್ತನು ಈ ಮೇಲಿನ ಮಾತುಗಳನ್ನಾಡುವುದನ್ನು ಗಮನಿಸುತ್ತೇವೆ .

ಗಾಂಧಿಯನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಚೀಟಿ ಬರೆದುಕೊಟ್ಟಿದ್ದರಿಂದ ಸಂಸಾರ ಸಮೇತ ಜಿಲ್ಲಾಸ್ಪತ್ರೆಗೆ ಗಾಂಧಿಯ ಕುಟುಂಬ ಬಂದಿತು .

ಅಲ್ಲಿಯ ಗುಮಾಸ್ತ ಚೀಟಿಯಲ್ಲಿದ್ದ ‘ ಮಹಾತ್ಮ ಗಾಂಧಿ ‘ ಎಂಬ ಹೆಸರನ್ನು ಎರಡು ಮೂರು ಬಾರಿ ಓದಿಕೊಂಡವನು ಬಹುಶಃ ಚೀಟಿ ಬರೆದಿರುವ ವೈದ್ಯಾಧಿಕಾರಿಯು ಮಹಂತೇಗೌಡ ‘ ಎಂದು ಬರೆಯುವುದರ ಬದಲು ತಪ್ಪಾಗಿ ಮಹಾತ್ಮ ಗಾಂಧಿ ಎಂದು ಬರೆದಿರಬಹುದೆಂದು ಭಾವಿಸಿ ,

ಅದನ್ನು ಖಚಿತಪಡಿಸಿಕೊಳ್ಳಲು ‘ ‘ ಓಹೋ ! ಇವನ ಹೆಸರು ‘ ಮಹಂತೇಗೌಡ ‘ ಅಂತ ಅಲ್ವೆ ? ನಿಮ್ಮ ಡಾಕ್ಟ್ರು ಇವನ್ನ ಮಹಾತ್ಮಗಾಂಧಿ ‘ ಅಂತ ಬರೆದುಬುಟ್ಟವರಲ್ಲ ! ‘ ‘ ಎಂದು ನಗುತ್ತಾ ಪ್ರಶ್ನಿಸುವ ಸಂದರ್ಭವಿದು , ಹುಡುಗನ ಹೆಸರು ‘ ಮಹಾತ್ಮಗಾಂಧಿ ಎಂದೇ ತಿಳಿದಾಗ ಗುಮಾಸ್ತನು ಬಿಟ್ಟಿಬಾಯಿ ಬಿಟ್ಟಹಾಗೇ ನಿಂತು ಗಾಂಧಿಯನ್ನು ನೋಡಿದನು .

 “ ಇಲ್ಲೇ ಒಸಿ ದಿನ ಇಸ್ಕೊಂಡು ಉಳಿಸಿಕೊಡಿ .

 ” ಡಾ . ಬೆಸಗರಹಳ್ಳಿ ರಾಮಣ್ಣನವರು ಬರೆದಿರುವ ‘ ಗಾಂಧಿ ‘ ಎಂಬ ಕತೆಯಲ್ಲಿ ಈ ಮೇಲಿನ ವಾಕ್ಯವಿದೆ . ಜಿಲ್ಲಾಸ್ಪತ್ರೆಯ ವೈದ್ಯರನ್ನುದ್ದೇಶಿಸಿ ಗಾಂಧಿಯ ತಾತನಾದ ಕರಿಸಿದ್ದೇಗೌಡನು ಈ ಮಾತನ್ನಾಡುವನು .

ಜಿಲ್ಲಾಸ್ಪತ್ರೆಯಲ್ಲಿ ಗಾಂಧಿಗೆ ಚಿಕಿತ್ಸೆ ಕೊಡಿಸಬೇಕೆಂದು ಕರಿಸಿದ್ದೇಗೌಡ ಅವನನ್ನು ಜಿಲ್ಲಾಸ್ಪತ್ರೆಯ ವೈದ್ಯರ ಬಳಿ ಕರೆದೊಯ್ಯುವನು , ಗಾಂಧಿಯನ್ನು ಪರೀಕ್ಷಿಸಿ ವೈದ್ಯರು ಅವನ ಹೃದಯ ಮತ್ತು ಮೂತ್ರಪಿಂಡಗಳ ಸಮಸ್ಯೆಗೆ ಸಂಬಂಧಿಸಿದ ಔಷಧಿಗಳನ್ನು ಬರೆದುಕೊಟ್ಟರು .

ಆನಂತರ ಅದನ್ನು ಸೇವಿಸುವ ಸಮಯ , ರೀತಿಗಳ ಬಗ್ಗೆ ವಿವರಿಸಿ ಊರಿಗೆ ಕರೆದೊಯ್ಯಲು ತಿಳಿಸಿದರು . ಆಸ್ಪತ್ರೆಯಲ್ಲೇ ಇಟ್ಟುಕೊಂಡು ವಾಸಿ ಮಾಡುವರೆಂದು ನಿರೀಕ್ಷಿಸಿದ್ದ ಕರಿಸಿದ್ದೇಗೌಡನಿಗೆ ವೈದ್ಯರಾಡಿದ ಮಾತುಗಳಿ ೦ ದ ಕತ್ತಿಡಿದು ನೀರಿಗೆ ಅದುಮಿದಂತಾಯಿತು .

ಅವನು ವೈದ್ಯರಿಗೆ ಕೈ ಮುಗಿದು ” ಇಲ್ಲೇ ಒಸಿ ದಿನ ಇಡ್ಕೊಂಡು ಉಳಿಸಿಕೊಡಿ ” ಎ ೦ ದು ಬೇಡಿಕೊಂಡನು . ವೈದ್ಯರು ಸಮ್ಮತಿಸಿ , ಗಂಡಸರ ವಾರ್ಡಿನಲ್ಲಿ ದಾಖಲು ಮಾಡಲು ಸೂಚಿಸುವ ಸಂದರ್ಭವಿದು .

1st puc kannada notes

” ಮನುಪು ಸಾಯ್ದೆ ಕಲ್ಲು ಸತ್ತಾದ , ಸುಮ್ಮಿರು ಮಂಡೆ . ”

 ಡಾ ।। ಬೆಸಗರಹಳ್ಳಿ ರಾಮಣ್ಣನವರು ಬರೆದಿರುವ ‘ ಗಾಂಧಿ ‘ ಎಂಬ ಸಣ್ಣ ಕತೆಯ ಮುಕ್ತಾಯ ಭಾಗದಲ್ಲಿ ಕರಿಸಿದ್ದೇಗೌಡನು ಈ ಮೇಲಿನ ಮಾತನ್ನಾಡುವನು .

 ಗಾಂಧಿಯ ಚಿಕಿತ್ಸೆಗಾಗಿ ಕರಿಸಿದ್ದೇಗೌಡನು ಹಲಸಿನ ಮರವನ್ನು ಇನ್ನೂರ ಐವತ್ತು ರೂಪಾಯಿಗಳಿಗೆ ಮಾರುವಷ್ಟರಲ್ಲಿ ಎರಡು ದಿನವಾಯಿತು . ಅವನು ಆಸ್ಪತ್ರೆಗೆ ಬಂದಾಗ ಮಗಳು ಮೊಮ್ಮಗಳು ಅಳುತ್ತಾ ನಿಂತುದನ್ನು ನೋಡಿ ಅವನಿಗೆ ಗಾಂಧಿಯ ಸಾವಿನ ವಿಚಾರ ಅರ್ಥವಾಯಿತು .

ಅವನು ಯಾವಾಗ ಜೀವ ಹೋಯಿತೆಂದು ಕೇಳಿದಾಗ , ಅವನ ಮಗಳು ರಾತ್ರಿಯಲ್ಲಿ ‘ ಎಂದುತ್ತರಿಸಿ ಅಳಲಾರಂಭಿಸಿದಳು . ಅವಳನ್ನು ಸಂತೈಸುತ್ತಾ ಕರಿಸಿದ್ದೇಗೌಡನು ಮನುಪು ಸಾಯ್ದೆ ಕಲ್ಲು ಸತ್ತಾದ , ಸುಮಿರು ಎನ್ನುವನು . ಮೊಮ್ಮಗನ ಸಾವನ್ನು ಸಮಚಿತ್ತದಿಂದ ಸ್ವೀಕರಿಸುವ ಕರಿಸಿದ್ದೇಗೌಡನ ವ್ಯಕ್ತಿತ್ವ ನೆನಪಿನಲ್ಲುಳಿಯುವಂತಾದ್ದು .

ಇತರೆ ವಿಷಯಗಳನ್ನು ಓದಿರಿ

ಡೌನ್ಲೋಡ್ ಪಿಡಿಎಫ್ ಇಲ್ಲಿ ಕ್ಲಿಕ್ ಮಾಡಿ

2 thoughts on “ಗಾಂಧಿ ನೋಟ್ಸ್ ಪ್ರಥಮ ಪಿಯುಸಿ ಕನ್ನಡ | 1st PUC Kannada Gandhi Lesson Notes

Leave a Reply

Your email address will not be published. Required fields are marked *