Vruksha Sakshi Kannada Notes, vruksha sakshi kannada notes pdf, vruksha sakshi kannada lesson notes, 10th class kannada vruksha sakshi notes, 10th kannada lesson vruksha sakshi notes, class 10 kannada vruksha sakshi notes, ವೃಕ್ಷಸಾಕ್ಷಿ ಪಾಠದ ಪ್ರಶ್ನೋತ್ತರಗಳು ನೋಟ್ಸ್, ವೃಕ್ಷಸಾಕ್ಷಿ ಪಾಠದ ಪ್ರಶ್ನೋತ್ತರಗಳು ,
ವೃಕ್ಷಸಾಕ್ಷಿ ಪಾಠದ ಪ್ರಶ್ನೆ ಉತ್ತರ, ವೃಕ್ಷಸಾಕ್ಷಿ ಪಾಠದ ನೋಟ್ಸ್
Vruksha Sakshi Kannada Notes
ವೃಕ್ಷಸಾಕ್ಷಿ ಪಾಠದ ಪ್ರಶ್ನೋತ್ತರಗಳನ್ನು ಈ ಲೇಖನದಲ್ಲಿ ನೀಡಲಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.
ನಮ್ಮ ಟೆಲಿಗ್ರಾಮ್ ಗ್ರೂಪ್ ಗೆ ಈಗಲೇ ಜಾಯಿನ್ ಆಗಿ
ಕೊಟ್ಟಿರುವ ಪಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ ಉತ್ತರಿಸಿ
ಧರ್ಮಬುದ್ಧಿಯು ತನ್ನ ಬೆಳಗಿನ ಹೊತ್ತನ್ನು ಹೇಗೆ ಕಳೆದನು?
ಸೂರ್ಯೋದಯವಾದೊಡನೆ ಧರ್ಮಬುದ್ಧಿಯು ದೇವಗುರು, ಧ್ವಜಪೂಜೆಗಳಂ ಮಾಡುತ್ತಾ ಬೆಳಗಿನ ಹೊತ್ತನ್ನು ಕಳೆದನು.
ಧರ್ಮಾಧಿಕರಣರು ವಟವೃಕ್ಷದ ಸಮೀಪಕ್ಕೆ ಯಾಕೆಬಂದರು?
ವೃಕ್ಷಸಾಕ್ಷಿಯ ಮಾತನ್ನು ಕೇಳಲು ಧರ್ಮಾಧಿಕರಣರು ವಟವೃಕ್ಷದ ಸಮೀಪಕ್ಕೆ ಬಂದರು.
‘ವೃಕ್ಷ ಸಾಕ್ಷಿ’ ಕತೆಯನ್ನು ಯಾವ ಕೃತಿಯಿಂದ ಆರಿಸಲಾಗಿದೆ?
ವೃಕ್ಷ ಸಾಕ್ಷಿ’ ಕತೆಯನ್ನು ‘ದುರ್ಗಸಿಂಹ’ನ ಕರ್ಣಾಟಕ ಪಂಚತಂತ್ರಂ) ಎಂಬ ಕೃತಿಯಿಂದ ಆರಿಸಲಾಗಿದೆ.
ದುಪ್ಪಬುದ್ಧಿಯು ಧರ್ಮಬುದ್ಧಿಯ ಮೇಲೆ ಯ ಆರೋಪವನ್ನು ಹೊರಿಸಿದನು?
ದುಷ್ಟಬುದ್ಧಿಯು ಧರ್ಮಬುದ್ಧಿಯ ಮೇಲೆ ಹೊನ್ನನ್ನು ಅಪಹರಿಸಿದನೆಂಬ ಆರೋಪವ ಹೊರಿಸಿದನು.
ಧರ್ಮಾಧಿಕರಣರು ಯಾಕೆ ವಿಸ್ಮಯ ಹೊಂದಿದರು?
ದುಷ್ಟಬುದ್ಧಿಯು ವೃಕ್ಷವನ್ನು ಸಾಕ್ಷಿಯಾಗಿತ್ತೆಂದು ಹೇಳಿದ್ದನ್ನು ಕೇಳಿ ವಿಸ್ಮಯ ಹೊಂದಿದನು.
ಕೆಳಗೆ ಕೊಟ್ಟಿರುವ ಪುಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಿಗೆ ಉತ್ತರಿಸಿ:
ಧರ್ಮಾಧಿಕಾರಿಗಳು ವಟವೃಕ್ಷಕ್ಕೆ ಏನೆಂದು ಕೇಳಿದರು?
ಧರ್ಮಾಧಿಕಾರಿಗಳು ವಟವೃಕ್ಷಕ್ಕೆ ವಂದಿಸಿ, ನೀನು ಯಕ್ಕಾದಿ, ದಿವ್ಯ ದೇವತೆಗಳು ನಿಮ್ಮಲ್ಲಿ ವಾಸವಾಗಿದ್ದಾರೆ, ನಿನ್ನನ್ನು ಸಾಕ್ಷಿಮಾಡಿ ಕೇಳುತ್ತಿದ್ದೇವೆ. ನೀನು ತಪ್ಪದೇ ನುಡಿಯೆಂದು ಧರ್ಮಾಧಿಕಾರಿಗಳು ನುಡಿದರು.
ದುಷ್ಕೃಬುದ್ದಿಯು ತನ್ನ ತಂದೆಗೆ ಏಕಾಂತದಲ್ಲಿ ಏನೆಂದು ಹೇಳಿದನು?
‘ದುಷ್ಟಬುದ್ಧಿಯು ತನ್ನ ತಂದೆಯನ್ನು ಏಕಾಂತದಲ್ಲಿ ಕರೆದು, ವೃಕ್ಷದ ಪೊಟರೆಯಲ್ಲಿ ಅವಿತಿದ್ದು ಧರ್ಮಾಧಿಕಾರಿ ಬಂದು ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಧರ್ಮ ಬುದ್ದಿಯೇ ಹಣವನ್ನು ಕದ್ದನೆಂದು ಹೇಳಬೇಕು’ ಎಂದು ಹೇಳಿಕೊಟ್ಟನು.
ಧರ್ಮಬುದ್ಧಿಗೆ ದುಷ್ಕೃಬುದ್ದಿಯು ಯಾವ ಸಲ ಯಿತ್ತನು? ಕತ್ತಲಾಗುತ್ತಿರುವುದರಿಂದ ಇಷ್ಟೊಂದು ಹೊನ್ನನ್ನು ತೆಗೆದುಕೊಂಡು ಹೋಗುವುದು ಬೇಡ, ಇಲ್ಲೆ ನೆಲದಲ್ಲಿ ಹುಗಿದಿಟ್ಟು ಹೋಗೋಣ. ಸಮಯ ನೋಡಿ ಬಂದು ತೆಗೆದುಕೊಳ್ಳೋಣ ಎಂಬುದಾಗಿ ಸಲಹೆಯಿತ್ತನು.
ಕೊಟ್ಟ, ಪಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ ಉತ್ತರಿಸಿ
ದುಷ್ಕೃಬುದ್ಧಿಯ ತಂತ್ರ ಅವನಿಗೆ ತಿರುಗುಬಾಣ ಆದಬಗೆಯನ್ನು ತಿಳಿಸಿ.
ದುಷ್ಕೃಬುದ್ಧಿ, ಧನವನ್ನೆಲ್ಲ ಲಪಟಾಯಿಸಲು ಸುಳ್ಳು ಹೇಳಿ, ಧರ್ಮ ಬುದ್ದಿಯನ್ನು ಕಳ್ಳ-ಸುಳ್ಳ ಎಂದು ಸಾಬೀತು ಪಡಿಸಲು ವೃಕ್ಷ ಸಾಕ್ಷಿಯಿಟ್ಟು, ಕೊನೆಗೆ ಆ ವೃಕ್ಷಸಾಕ್ಷಿಯಿಂದಲೇ ತಾನೇ ಸುಳ್ಳು ಹೇಳಿ ವಂಚಿಸಿದವನು ಎಂಬುದನ್ನು ಒಪ್ಪಿಕೊಳ್ಳಬೇಕಾದ ಸ್ಥಿತಿ ಬರುತ್ತದೆ. ಇದೇ ಆತನಿಗೆ ತಿರುಗುಬಾಣವಾಗುತ್ತದೆ.
ದುಷ್ಟಬುದ್ಧಿ, ಧರ್ಮಬುದ್ಧಿಯ ಹಣವನ್ನೆಲ್ಲಾ ಕದ್ದೊಯ್ಯುದುದೇ ಅಲ್ಲದೇ, ಧರ್ಮಬುದ್ಧಿಯೇ ತನ್ನ ಹೊನ್ನನ್ನೆಲ್ಲಾ ಕದ್ದಿರುವನೆಂದು ಇದಕ್ಕೆ ಆ ಪ್ರದೇಶದಲ್ಲಿ ಕೇವಲ ವಟವೃಕ್ಷವೊಂದೇ ಇದ್ದುದ್ದು, ಆ ವೃಕ್ಷವೊಂದೇ ಸಾಕ್ಷಿ ಎಂದು ಧರ್ಮಾಧಿಕಾರಿಗಳಿಗೆ ದೂರು ಕೊಡುತ್ತಾನೆ. ಧರ್ಮಾಧಿಕಾರಿ, ಧರ್ಮಬ ಆಶ್ಚರ್ಯವಾಗುತ್ತದೆ. ಪರೀಕ್ಷಿಸಲ ಮುಂದಾದ ದುಷ್ಕೃ ಬುದ್ದಿ ಪೇಚಿಗೆ ಸಿಲುಕುತ್ತಾನೆ.
ಆಗ ತನ್ನ ತಂದೆಯನ್ನು ಏಕಾಂತದಲ್ಲಿ ಸಂಧಿಸಿ, ಆತನು ಪೊಟರೆಯಲ್ಲಿ ಅವಿತು ಕುಳಿತು ವೃಕ್ಷಸಾಕ್ಷಿ ಹೇಳುವ ರೀತಿಯಲ್ಲಿಯೇ “ಧರ್ಮಬುದ್ಧಿಯೇ ಹಣವನ್ನು ದೋಚಿದನೆಂದು ಹೇಳಬೇಕು” ಎಂದು ಒತ್ತಾಯಿಸುತ್ತಾನೆ. ಆತನ ದೆ ಪೇಮಮತಿ ಬಹಳವಾಗಿ ತಂದೆ ಮಗನಿಗೆ ಬುದ್ದಿ ಹೇಳಿದರು ಕೇಳುವ ಸ್ಥಿತಿಯಲ್ಲಿ ಅವನಲ್ಲಿ ಇರುವುದಿಲ್ಲ. ಆಮಿಷದಿಂದಲೂ ಒಪ್ಪದ ತಂದೆಗೆ ಬೆದರಿಕೆಯಿಂದ ಒಪ್ಪಿಸುತ್ತಾನೆ.
ಕೊನೆಗೆ ಸಾಕ್ಷಿಯೂ ಹೇಳುತ್ತಾನೆ. ಧರ್ಮಬುದ್ಧಿಯು ದುಷ್ಟಬುದ್ಧಿಯ ಕುತಂತ್ರಕ್ಕೆ ಪರಿತಂತ್ರ ಹೂಡಿ, ಅಲ್ಲಿ ಸರ್ಪವೊಂದು ತನ್ನ ಹೊನ್ನನ್ನು ಸುತ್ತು ಕುಳಿತಿದೆಯೆಂದು
ಅದನ್ನು ಕೊಂದರೆ ನಮಗೆ ಹೊನ್ನು ದೊರೆಯುವುದೆಂದು ಹೇಳಿದ್ದಾಗ ಪೊಟರೆಗೆ ಬೆಂಕಿ ಇಡಿಸಲಾಗುತ್ತದೆ. ಇದರಿಂದ ಗಾಬರಿಯಾಗಿ ಪೇಮಮತಿ ಪೊಟರೆ ಪೊಟರೆಯಿಂದ ಹೊರಬಂದು ಎಲ್ಲವನ್ನು ತಿಳಿಸಿ ಸತ್ಯ ಏನೆಂಬುದನ್ನು ವಿವರಿಸಿ ಕ್ಷಮೆ ಯಾಚಿಸುತ್ತಾನೆ. ಈ ರೀತಿ ದುಷ್ಟಬುದ್ಧಿಯು ಮಾಡಿದ ಕುತಂತ್ರ ಆತನಿಗೆ ತಿರುಗುಬಾಣವಾಗಿ ಸತ್ಯ ಹೊರಬರಲು ಅವಕಾಶವಾಗುತ್ತದೆ.
‘ವೃಕ್ಷಸಾಕ್ಷಿ’ ಪಾಠದಲ್ಲಿ ನೀವು ಮೆಚ್ಚುವ ಪಾತ್ರ ಯಾವುದು?ಯಾವುದು?ಏಕೆ?
‘ವೃಕ್ಷಸಾಕ್ಷಿ’ ಪಾಠದಲ್ಲಿ ನಾವು ಕ್ಷುವ ಪಾತ್ರ ಧರ್ಮಬುದ್ಧಿ. ಏಕೆಂದರೆ ವ್ಯಾಪಾರಧರ್ಮ ಮರೆತಿರ ಯು ವ್ಯಾಪಾರಿ, ಆದರೆ ಸಹಜವಾಗಿ ಹೇಳುವ ಸುಳ್ಳು, ಕಳ್ಳತನ, ಕಪಟ ಅವನಲ್ಲಿ ಇರಲಿಲ್ಲ. ಕೊನೆಯಲ್ಲಿ ಹೇಳಿದರೂ ಅದನ್ನು ತನ್ನ ಸತ್ಯ ಕುನ್ನು ನಿರೂಪಿಸಲು ಕೈಗೊಂಡ ಒಂದು ತಂತ್ರವಾಗಿತ್ತು.
ಧರ್ಮಬುದ್ಧಿ, ಆಧ್ಯಾತ್ಮಿಕ ಮನೋಭಾವವುಳ್ಳ, ಬುದ್ಧಿವುಳ್ಳವನು. ಪ್ರತಿದಿನ ಸೂರ್ಯೋದಯಕ್ಕೆ ಎದ್ದು ನಿತ್ಯಕರ್ಮಗಳನ್ನು ಪೂರೈಸಿ ದೇವರು, ಗುರುಗಳು, ಬ್ರಾಹ್ಮಣರ ಪೂಜೆಗೈದು ಅವರ ಅನುಗ್ರಹ ಬೇಡಿ ನಂತರ ತನ್ನ ವಾಣಿಜ್ಯ ಧರ್ಮವನ್ನು ಪಾಲಿಸುವವ.
ಪ್ರತಿಯೊಬ್ಬ ಮನುಷ್ಯನಲ್ಲಿಯೂ ಇರಲೇಬೇಕಾದ ಅತಂತ ಮಹತ್ವವುಳ್ಳ ಈ ಆಧ್ಯಾತ್ಮಿಕ ಗುಣ ಮೆಚ್ಚಲೇಬೇಕು.
ಧರ್ಮಬುದ್ಧಿಯಲ್ಲಿ ನಾವು ಮೆಚ್ಚಬಹುದಾದ ಮತ್ತೊಂದು ಮಹತ್ವಪೂರ್ಣ ಗುಣವೆಂದರೆ- ಆತನ ವಿನಯತೆ, ವಿಧೇಯತೆ ಸೌಮ್ಯಗುಣವುಳ್ಳ ಧರ್ಮಬುದ್ಧಿಯು ಧರ್ಮಾಧಿಕಾರಿಯ ಬಳಿ ಆಗಲಿ, ದುಷ್ಟಬುದ್ಧಿಯ ಬಳಿಯಾಗಲಿ ಕಠೋರವಾಗಿ ವರ್ತಿಸದೇ ಬಹಳ ಸೌಮ್ಯತೆ ಯಿಂದ ವಿಧೇಯತೆಯಿಂದ ಹಾಗೂ ಮೆಲುನುಡಿಯಲ್ಲಿ ವ್ಯವಹರಿಸುವ ಗುಣ ಮೆಚ್ಚುವಂತಹುದು. ಧರ್ಮಬುದ್ಧಿ ಮಹಾಬುದ್ದಿವಂತ, ವೃಕ್ಷಸಾಕ್ಷಿಗೆ ದುಷ್ಟಬುದ್ಧಿ ಹೇಳಿದಾಗ ದೈವ ನಂಬಿಕೆ ಅವನ ವಿಶ್ವಾಸವಾಗಿತ್ತು.
ಧರ್ಮಾಧಿಕಾರಿಯ ಮಾತಿಗೆ ಒಪ್ಪಿ ವೃಕ್ಷದ ಬಳಿ ಸಾಗಲು ವೃಕ್ಷದ ದಿಗಳು ಮ ಬ ಬರದಂತೆ ಪೊಟರೆಯಿಂದ ಮನುಷ್ಯನಂತೆ ನುಡಿಗಳು ಕೇಳಿಬಂದಾಗ ಬಹಳ ಚಾಣಾಕ್ಷತೆಯಿಂದ ಯಾರಿಗೂ ಅನುಮಾನ ಬರದಂತೆ ವೃಕ್ಷಕ್ಕೆ ಒಂದು ಪ್ರದಕ್ಷಿಣೆ ಬಂದು ಅಲ್ಲಿ ಮನುಷ್ಯ ಸಂಚಾರದ ಕುರುಹುಗಳನ್ನು ತಿಳಿದು “ವಜವನ್ನು ವಜ್ರದಿಂದಲೇ ಕತ್ತರಿಸಬೇಕು”, ಎಂಬಂತೆ ಸುಳ್ಳನ್ನು ಸುಳ್ಳಿನಿಂದಲೇ, ಸತ್ಯವನ್ನು ಬಹಿರಂಗ ಪಡಿಸಬೇಕೆಂದು ತಂತ್ರದಿಂದ ವೃಕ್ಷದ ಪೊಟರೆಯಲ್ಲಿ ಅಡಗಿದ್ದ ದುಷ್ಟಬುದ್ಧಿ ಪೇಮಮತಿ ಪೊಟರೆಯಿಂದ ಹೊರಬಂದು ತಪ್ಪು ಒಪ್ಪಿಕೊಳ್ಳುವಂತೆ ಮಾಡಿದನು. ಆದ್ದರಿಂದ ಧರ್ಮ ಬುದ್ಧಿಯ ಎಲ್ಲಾ ಗುಣಗಳು, ಆತನ ಎಲ್ಲವೂ ಮೆಚ್ಚಿಕೊಳ್ಳಬಹುದಾಗಿದೆ.
ಸಂದರ್ಭಾನುಸಾರ ಶಾರಳ್ಳಿ, ಬರೆಯಿರಿ
ನಿನ್ನ ಪಳುವಗೆ ನಮ್ಮ ಕುಲಮನೆಲ್ಲ ಮನರೆವ ಬಗೆ’
ಪ್ರಸ್ತಾವನೆ: ಪ್ರಸ್ತುತ ಈ ವಾಕ್ಯವನ್ನು ‘ದುರ್ಗಸಿಂಹ’ನಿಂದ ರಚಿತವಾದ ‘ವೃಕ್ಷಸಾಕ್ಷಿ’ ಎಂಬ ಗದ್ಯಭಾಗದಿಂದ ಆರಿಸಲಾಗಿದ್ದು, ಇದನ್ನು “ಕರ್ಣಾಟಕ ಪಂ ಕೃತಿಯಿಂದ ಆರಿಸಲಾಗಿದೆ ಎಂಬ
ಸಂದರ್ಭ: ದುಷ್ಟಬುದ್ಧಿಯು ತಂದೆಗೆ ಏಕಾಂತದಲ್ಲಿ ಕರೆದು ವಟವೃಕ್ಷದ ಪೊಟರೆಯಲ್ಲಿ ಅಡಗಿಕುಳಿತು, ಸಾಕಪ್ಪ ಬು ಕೇಳ ಇನ್ನು ಲಪಟಾಯಿಸಿರುವನೆಂದು ಹೇಳಬೇಕೆಂದು ಕೇಳಲು ಆತನ ತಂದೆ ಪೇಮಾವತಿ ಮಗನಿಗೆ ಸಾಕಷ್ಟು, ಬುದ್ಧಿ ಹೇಳುತ್ತಾನೆ. ಆ ಸಂದರ್ಭದಲ್ಲಿ ಮೂಡಿಬಂದ ವಾಕ್ಯ ಇದಾಗಿದೆ.
ವಿವರಣೆ: ನಿನಂತ ಮಗನಿಂದ ನಮ್ಮ ಕುಲದ ಮರ್ಯಾದೆ ನಾಶವಾಗುವುದು ಎಂಬ ನೀತಿಯುಕ್ತ ಮಾತು ಇದಾಗಿದೆ. ವಿಶೇಷತೆ: ಸುಳ್ಳು ಹೇಳುವುದರಿಂದ ನಮಗೆ ಒಳ್ಳೆಯದಾಗದು ಎಂಬ ನೀತಿ ಇಲ್ಲಿದೆ.
“ಈತನ ಮಾತು ಅಶ್ರುತ ಪೂರ್ವ”
ಪುಸ್ತಾವನೆ: ಪುಸ್ತುತ ಈ ವಾಕ್ಯವನ್ನು ‘ದುರ್ಗಸಿಂಹ’ನಿಂದ ರಚಿತವಾದ ‘ವೃಕ್ಷಸಾಕ್ಷಿ’ ಎಂಬ ಆರಿಸಲಾಗಿದ್ದು, ಇದನ್ನು “ಕರ್ಣಾಟಕ ಪಂಚತಂತ್ರಂಎಂಬ ಕೃತಿಯಿಂದ ಆರಿಸಲಾಗಿದೆ.
ಸಂದರ್ಭ: ದುಷ್ಟಬುದ್ಧಿಯು ರ್ಮಾಧಿಕಾರಿ ಬಳಿ ಬಂದು ತಾನು ಹಾಗೂ ಧರ್ಮಬುದ್ಧಿಯ ಹಣವನ್ನೆಲ್ಲ ಹೂತಿಟ್ಟು ನಂತರ ಅದನ್ನೆಲ್ಲಾ ದುಷ್ಪಬುದ್ಧಿಯೇ ಅಪಹರಿಸಿ, ದುರಾಸೆಯಿಂದ ಹಾಗೂ ತನ್ನ ಮೇಲೆ ಅಪವಾದ ಬಾರದಿರಲೆಂದು ಕುತಂತ್ರ ಮಾಡಿ ಧರ್ಮಾಧಿಕಾರಿಗಳ ಹತ್ತಿರ ಸಭೆಯಲ್ಲಿ ತಮ್ಮ ಹೊನ್ನನ್ನೆಲ್ಲಾ ಈ ಧರ್ಮಬುದ್ಧಿಯೇ ಲಪಟಾಯಿಸಿರುವನೆಂದು ಹೇಳಲು ಧರ್ಮಾಧಿಕಾರಿ ಇದಕ್ಕೆ ಸಾಕ್ಷಿ ಏನೆಂದು ಕೇಳಲು ದುಷ್ಟಬುದ್ಧಿಯು ಏನೂ ಹೇಳಲೂ ತೋಚದೆ ಅದು ನಿರ್ಜನ ಪ್ರದೇಶವಾದ್ದರಿಂದ ಅಲ್ಲಿ ವಟವೃಕ್ಷವೇ ಸಾಕ್ಷಿ ಎಂಬುದಾಗಿ ಹೇಳುತ್ತಾನೆ. ಇದನೇ ಕೇಳಿದ ಧರ್ಮಾಧಿಕಾರಿಗೆ ಬಹಳ ಆಶ್ಚರ್ಯವಾಗಿ ಈ ಮೇಲಂಡ ಮಾತನ್ನು ಹೇಳುತ್ತಾನೆ.
ವಿವರಣೆ: ಈತನು ಹೇಳುತ್ತಿರುವುದು ಬಹಳ ಆಶ್ಚರ್ಯವಾಗಿದೆ. ಇದನ್ನು ಪರೀಕ್ಷಿಸಬೇಕೆಂದು ಹೇಳುವುದೇ ಇದರ ಸ್ವಾರಸ್ಯ. ವಿಶೇಷತೆ: ಈ ವಾಕ್ಯದಲ್ಲಿ ಧರ್ಮಾಧಿಕಾರಿಗಳ ಮುಂದಾಲೋಚನೆಯ ಬಗ್ಗೆ ತಿಳಿದುಬರುತ್ತದೆ.
“ಹೊನ್ನ ನೆಲ್ಲಮಂ ನೀನೆ ಕೊಂಡೆ”
ಪ್ರಸ್ತಾವನೆ: ಪ್ರಸ್ತುತ ಈ ಓದುರ್ಗಸಿಂಹ’ನಿಂದ ರಚಿತವಾದ ‘ವೃಕ್ಷಸಾಕ್ಷಿ’ ಎಂಬ ಗದ್ಯಭಾಗದಿಂದ ಆರಿಸಲಾಗಿದ್ದು, ಇದನ್ನು “ಕರ್ಣಾಟಕ ಪಂಚತಂತ್ರಂ) ಎಂಬ ಕೃತಿಯಿಂದ ಆರಿಸಲಾಗಿದೆ.
ಈ ಸಂದರ್ಭ: ಈ ವಾಕ್ಯವನ್ನು ದುಪ್ರಬುದ್ಧಿಯು, ಧರ್ಮಬುದ್ಧಿಗೆ ತಾವು ಹಿಂದಿನ ರಾತ್ರಿ ಹೋಗಿದ್ದೆವು ಹೊನ್ನನ್ನೆಲ್ಲ ನೀನೆ ತೆಗೆದುಕೊಂಡಿರುವೆ ಎಂಬುದಾಗಿ ಹೇಳುತ್ತಾನೆ.
ವಿವರಣೆ: ‘ಹೊನ್ನೆಲ್ಲ ವನ್ನು ನೀನೇ ಕೊಂಡೊಯ್ದಿದ್ದೀಯ’ ಎಂಬುದು ಇದರ ಭಾವಾರ್ಥವಾಗಿದ್ದರು, ಪರೋಕ್ಷವಾಗಿ ದುಪ್ಪಬುದ್ಧಿಯೇ ಆ ಪೊನ್ನನ್ನು ಭೂಮಿ ಅಗೆದು ತೆಗೆದುಕೊಂಡು, ತನ್ನ ದುರಾಸೆ, ಸ್ವಾರ್ಥತೆಗಾಗಿ ಧರ್ಮಬುದ್ಧಿಯ
ಮೇಲೆ ಆರೋಪ ಹೊರಡಿಸಿರುವುದು ಇದರ ಮುಖ್ಯ ಅರ್ಥವಾಗಿದೆ.
ವಿಶೇಷತೆ: ನಡುಗನ್ನಡದ ಭಾಷೆಯಲ್ಲಿ ಅಂದಿನ ಜನರ ವ್ಯಾಪಾರಿಯ ವಿವಿಧ ಮುಖಗಳು ಕಾಣಲು ಬರುವುದು.
ಲೇಖಕರ ಪರಿಚಯ:
ದುರ್ಗಸಿಂಹ (ಕ್ರಿ.ಶ.1031) ಕಿಸುಕಾಡು ನಾಡಿ ಸಯ್ಯಡಿಯವನು. (ಈಗಿನ ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ) ಒಂದನೆಯ ಜಗದೇಕಮಲ್ಲನ ಆಸ್ಥಾನದಲ್ಲಿ ದಂಡನಾಯಕನೂ ವಿಗ್ರಹಿಯೂ ಆಗಿದ್ದನು. ಮತಧರ್ಮ ಸಮನ್ವಯಕಾರನಾದ ಈತ ಸಯ್ಯಡಿಯಲ್ಲಿ ಹಲವಾರು ಹರಹರಭವನಗಳನ್ನು ನಿರಿಸಿದನೆಂದು ತಿಳಿದುಬಂದಿದೆ. “ಪಂಚತಂತ್ರ’ ಎಂಬ, ಚಂಪೂಕಾವ್ಯದ ಕರ್ತೃ, ಪಂಚತಂತ್ರದಲ್ಲಿ ಬೇಧ, ಪರೀಕ್ಷಾ, ವಿಶ್ವಾಸ, ವಂಚನಾ ಮತ್ತು ತಂತ್ರಗಳನ್ನಾಧರಿಸಿ 48 ಪದ್ಯಗಳಿಂದಲೂ ೨೯ ಎಂಬ ಐದು ವೆ. ಕಾವ್ಯವು 457 ಅದರಲ್ಲಿ, “ವೃಕ್ಷಸಾಕ್ಷಿ’ ಎಂಬ ಒಂದು ವಿಶಿಷ್ಟ್ಯ ಕತೆ
ಸಂಬಂದಿಸಿದ ಇತರೆ ವಿಷಯಗಳು
- 10ನೇ ತರಗತಿ ಭಗತ್ಸಿಂಗ್ ಕನ್ನಡ ನೋಟ್ಸ್
- ಸರ್.ಎಂ. ವಿಶ್ವೇಶ್ವರಯ್ಯನವರ ಬಗ್ಗೆ
- ಭಾಗ್ಯಶಿಲ್ಪಿಗಳು ಪಾಠದ ಸಾರಾಂಶ
- 10ನೇ ತರಗತಿ ಯುದ್ಧ ಪಾಠದ ಸಾರಾಂಶ
- ಶಬರಿ ಪಾಠದ ಸಾರಾಂಶ ಕನ್ನಡ
- ಲಂಡನ್ ನಗರ ಪಾಠದ ಪ್ರಶ್ನೆ ಉತ್ತರಗಳು
- ಶಬರಿ ಪಾಠದ ಪ್ರಶ್ನೆ ಮತ್ತು ಉತ್ತರ
- 10ನೇ ತರಗತಿ ಕನ್ನಡ ಶಬರಿ ಪಾಠದ ಪ್ರಶ್ನೋತ್ತರಗಳು
- 10th ಹಸುರು ಪದ್ಯ ನೋಟ್ಸ್