Vibhakti Pratyaya Chart | Kannada Vibhakti Pratyaya | vibhakti pratyaya galu | ವಿಭಕ್ತಿ ಪ್ರತ್ಯಯಗಳು

vibhakti pratyaya chart

Vibhakti Pratyaya Chart | Kannada Vibhakti Pratyaya | Vibhakti Pratyaya Galu | ವಿಭಕ್ತಿ ಪ್ರತ್ಯಯಗಳು

vibhakti pratyaya chart | kannada vibhakti pratyaya | vibhakti pratyaya galu | ವಿಭಕ್ತಿ ಪ್ರತ್ಯಯಗಳು, vibhakti pratyaya in kannada, pdf, notes

ವಿಭಕ್ತಿ ಪ್ರತ್ಯಯಗಳು

ನಾಮ ಪದಗಳ ಮೂಲ ರೂಪಕ್ಕೆ ನಾಮ ಪುಕೃತಿ ಎಂದು ಹೇಳುತ್ತೇವೆ.ನಾಮ ಪ್ರಕೃತಿಗಳ ಜೊತೆ ಪ್ರತ್ಯಯಗಳು ಸೇರಿ ನಾಮಪದಗಳಾಗುತ್ತವೆ . ಈ ರೀತಿ “ ನಾಮ ಪ್ರಕೃತಿಗಳ ಜೊತೆ ಸೇರುವ ಅಕ್ಷರಗಳಿಗೆ ವಿಭಕ್ತಿ ಪ್ರತ್ಯಯವೆಂದು ಹೆಸರು ಅಥವಾ ” ನಾಮ ಪ್ರಕೃತಿಗಳಿಗೆ ಇರುವ ಸಂಭಂಧವನ್ನು ತಿಳಿಸಲುಸೇರಿರುವ ಪ್ರತ್ಯಯಕ್ಕೆ ವಿಭಕ್ತಿ ಪ್ರತ್ಯಯವೆಂದುಹೆಸರು . ಅಥವಾ ಕ್ರಿಯಾಪದದೊಂದಿಗೆ ನಾಮಪದಗಳ ಸಮಭಂಧವನ್ನು ತಿಳಿಸುವ ಕರ್ತೃ , ಕರ್ಮ , ಕರಣ , ಸಂಪುಧಾನ , ಅಪಾದಾನ , ಅಧಿಕರಣ , ಮುಂತಾದ ಕಾರಕಾರ್ಥಗಳನ್ನು ವಿಭಜಿಸಿ ಹೇಳುವ ಪ್ರತ್ಯಯಗಳನ್ನು ವಿಭಜಿಸಿ ಪ್ರತ್ಯಯ ‘ ಎಂದು ಕರೆಯಲಾಗಿದೆ .

vibhakti pratyaya chart
vibhakti pratyaya chart

” ವಿಭಕ್ತಿಗಳಿಗೆ ಪ್ರತ್ಯಯಗಳು ಸೇರಿ ಒಂದು ಪೂರ್ಣ ನಾಮಪದವಾಗುತ್ತದೆ.ಈ ವಿಭಕ್ತಿ ಪ್ರತ್ಯಯಗಳನ್ನು ಪುಲಿಂಗ , ಸ್ತ್ರೀಲಿಂಗ , ನಪುಂಸಕಲಿಂಗ , ಹಾಗೂ ಸರ್ವನಾಮ ಪದಗಳಿಗೆ ಅಳವಡಿಸಿ ಬರೆಯಬಹುದು ….

ಮೊದಮೊದಲು 8 ವಿಭಕ್ತಿ ಪ್ರತ್ಯಯಗಳು ಇದ್ದವು. ಆದರೆ ಈಗ ಸಂಬೋಧನಾ ವಿಭಕ್ತಿ ಯನ್ನು ಬಿಟ್ಟು 7 ವಿಭಕ್ತಿಗಳನ್ನು ಕಾಣಬಹುದು.

ಅವುಗಳೆಂದರೆ: ಪ್ರಥಮ, ದ್ವಿತೀಯ, ತೃತೀಯ, ಚತುರ್ಥಿ, ಪಂಚಮಿ, ಷಷ್ಠಿ, ಸಪ್ತಮೀವಿಭಕ್ತಿ ಗಳೆಂದು.

ಹಳೆಗನ್ನಡ ಪ್ರತ್ಯಗಳು: ಕ್ರಮವಾಗಿ:- ಮ್, ಅಮ್, ಇಮ್,ಗೆ(ಕೆ),

ಅತ್ತಣಿಂ, ಅ, ಒಳ್.

ಹೊಸಗನ್ನಡ ಪ್ರತ್ಯಯಗಳು: ಕ್ರಮವಾಗಿ:- ಉ,ಅನ್ನು,ಇಂದ,ಗೆ(ಕೆ),ದೆಸೆಯಿಂದ, ಅ,ಅಲ್ಲಿ

vibhakti pratyaya chart

ಸಂಖ್ಯೆ ವಿಭಕ್ತಿ ಅರ್ಥ (ಕಾರಾಕಾರ್ಥ) ಹೊಸಗನ್ನಡ ಪ್ರತ್ಯಯ ಹಳಗನ್ನಡ ಪ್ರತ್ಯಯ
ಪ್ರಥಮ ಕರ್ತೃರ್ಥ/ಮಾಡುಗ(ಕೆಲಸ ಮಾಡುವ ನಾಮಪದ) ಮ್
ದ್ವಿತೀಯಾ ಕರ್ಮಾರ್ಥ/ಕೆಲಸವು ಈ ನಾಮಪದದ ಮೇಲೆ ನಡೆಯುವುದು ಅನ್ನು ಅಂ
ತೃತಿಯಾ ಕರಣಾರ್ಥ (ಸಾಧನಾರ್ಥ)/ಕೆಲಸಕ್ಕೆ ಕಾರಣ/ಇದನ್ನು ಬಳಸಿ ಬೇರೊಂದು ನಾಮಪದ ಕೆಲಸ ನಡೆಸುವುದು ಇಂದ ಇಂ, ಇಂದಂ, ಇಂದೆ, ಎ
ಚತುರ್ಥೀ ಸಂಪ್ರದಾನ (ಕೊಡುವಿಕೆ)/ತಲುಪುವ ಜಾಗ ಗೆ, ಇಗೆ, ಕ್ಕೆ, ಆಕ್ಕೆ ಗೆ, ಕೆ, ಕ್ಕೆ
ಪಂಚಮೀ ಅಪಾದಾನ (ಅಗಲಿಕೆ)/ಪ್ರೇರಣೆ ದೆಸೆಯಿಂದ ಅತ್ತಣಿಂ, ಅತ್ತಣಿಂದಂ, ಅತ್ತಣಿಂದೆ
ಷಷ್ಠೀ ಸಂಬಂಧ/ನಂಟು/ಬೆಸುಗೆ
ಸಪ್ತಮೀ ಅಧಿಕರಣ/ಜಾಗ ಅಲ್ಲಿ, ಒಳು, ಆಗೆ ಒಳ್

ಮನೆ ಎಂಬ ನಾಮಪದಕ್ಕೆ ಏ೦ಟು ವಿಭಕ್ತಿ ಪ್ರತ್ಯಯಗಳನ್ನು ಸೇರಿಸುವುದು ಹೇಗೆಂದು ಕೆಳಗೆ ಕೊಡಲಾಗಿದೆ.

  • ಪ್ರಥಮ ವಿಭಕ್ತಿ: ಮನೆ + ಉ = ಮನೆಯು
  • ದ್ವಿತೀಯ ವಿಭಕ್ತಿ: ಮನೆ + ಅನ್ನು = ಮನೆಯನ್ನು
  • ತೃತೀಯ ವಿಭಕ್ತಿ: ಮನೆ + ಇಂದ = ಮನೆಯಿಂದ
  • ಚತುರ್ಥೀ ವಿಭಕ್ತಿ: ಮನೆ + ಗೆ = ಮನೆಗೆ
  • ಪಂಚಮೀ ವಿಭಕ್ತಿ: ಮನೆ + ದೆಸೆಯಿಂದ = ಮನೆಯ ದೆಸೆಯಿಂದ
  • ಷಷ್ಠೀ ವಿಭಕ್ತಿ: ಮನೆ + ಅ = ಮನೆಯ
  • ಸಪ್ತಮೀ ವಿಭಕ್ತಿ: ಮನೆ + ಅಲ್ಲಿ = ಮನೆಯಲ್ಲಿ, ಮನೆಯೊಳು, ಮನೆಯಾಗ
  • ಸಂಭೋದನ ವಿಭಕ್ತಿ: ಮನೆ + ಆ = ಮನೆಯಾ
“ರಾಮನ ಹೆಂಡತಿ ಸೀತೆ”- ಇಲ್ಲಿ ರಾಮ, ಹೆಂಡತಿ ಮತ್ತು ಸೀತೆ ಈ ಮೂರೂ ಪದಗಳು ಪ್ರಕೃತಿ ಪದಗಳು.
ಈ ಪದಗಳಿಗೆ ಪ್ರತ್ಯಯಗಳನ್ನು ಸೇರಿಸಿದಾಗ ವಾಕ್ಯ ಅರ್ಥಪೂರ್ಣವಾಗುತ್ತದೆ. ಉದಾ : ರಾಮ+ಅ=ರಾಮನ ಆಗುತ್ತದೆ. ಅ ಎಂಬ ಷಷ್ಠಿ ವಿಭಕ್ತಿ ಪ್ರತ್ಯಯವು ಪದದ ಕೊನೆಯಲ್ಲಿ ಸೇರಿದಾಗ ನ ಆಗುತ್ತದೆ.
ALL COMPETITIVE EXAMS KANNADA IMPORTATION NOTES SPARDHAVANI

ಪ್ರಬಂಧಗಳ ಪಟ್ಟಿ

ಇತರೆ ಪ್ರಮುಖ ವಿಷಯಗಳನ್ನು ಓದಿ
ಗೊರೂರು ರಾಮಸ್ವಾಮಿ ಅಯ್ಯಂಗಾರ್ ಕರ್ನಾಟಕ ಏಕೀಕರಣ ಪ್ರಶ್ನೆ ಉತ್ತರ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ದುರ್ಗಸಿಂಹ ಕವಿ ಪರಿಚಯ ಚಾವುಂಡರಾಯ ನನ್ನು ಕುರಿತು ಬರೆಯಿರಿ

Leave a Reply

Your email address will not be published. Required fields are marked *