ಸಾಮಾನ್ಯ ಜ್ಞಾನ ಭಾಗ -15 | Karnataka GK Questions in Kannada

GK Kannada Questions

karnataka history gk questions in kannada, Karnataka GK Questions in Kannada, ಸಾಮಾನ್ಯ ಜ್ಞಾನ, Karnataka General knowledge Questions and Answers On Topics like Geography, History, Politics, Districts & Divisions

GK Kannada Questions

Spardhavani Telegram

GK Kannada Questions

 • ಜನತಾ ಸಾರ್ವಭೌಮತ್ವ , ಪ್ರಾತಿನಿಧಿಕ ಸರ್ಕಾರ , ನಾಗರೀಕ ಸ್ವಾತಂತ್ರ್ಯ , ಸ್ವಾವಲಂಭಿ ಆರ್ಥಿಕತೆ , ಜಾತ್ಯಾತೀತತೆ , ವಿದೇಶಾಂಗ ನೀತಿ ಇವು ಭಾರತದ ರಾಷ್ಟ್ರೀಯ ಚಳುವಳಿಯ ಉದಾತ್ತ ಮೌಲ್ಯಗಳಾಗಿವೆ .
 • ಭಾರತದ ರಾಷ್ಟ್ರೀಯ ಚಳುವಳಿಯ ಉದಾತ್ತ ಮೌಲ್ಯಗಳು ಭಾರತದ ಸಂವಿಧಾನದ ರಚನೆಗೆ ಒಂದು ನಿರ್ದಿಷ್ಟ ನೆಲೆಯನ್ನು ಕಲ್ಪಿಸಿಕೊಟ್ಟವು .
 • ಕ್ರಿ.ಶ. 1600 ರಲ್ಲಿ ಈಸ್ಟ್ ಇಂಡಿಯಾ ಕಂಪನಿಯು ಭಾರತಕ್ಕೆ ಆಗಮಿಸಿತು .
 • ಈಸ್ಟ್ ಇಂಡಿಯಾ ಕಂಪನಿಯು 1757 ರ ಪ್ಲಾಸಿ ಕದನದ ನಂತರ ಭಾರತದಲ್ಲಿ ರಾಜಕೀಯ ಅಧಿಕಾರವನ್ನು ಪಡೆಯಿತು .
 • 1857 ರಲ್ಲಿ ನಡೆದ ಸಿಪಾಯಿ ದಂಗೆಯನ್ನು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆಯಲಾಗಿದೆ .
 • 1857 ರ ದಂಗೆಯ ಪರಿಣಾಮವಾಗಿ ಭಾರತವು ಈಸ್ಟ್ ಇಂಡಿಯಾ ಕಂಪನಿಯ ಆಡಳಿತ ಕೊನೆಗೊಂಡು ಇಂಗ್ಲೆಂಡ್‌ನ ನೇರ ಆಳ್ವಿಕೆಗೆ ಒಳಪಟ್ಟಿತು .
 • 1885 ಡಿಸೆಂಬರ್ 24 ರಂದು ಎ.ಓ.ಹ್ಯಮ್‌ರವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸನ್ನು ಸ್ಥಾಪಿಸಿದರು .
 • 1909 ರಲ್ಲಿ ಮಿಂಟೋ ಮಾರ್ಲೆ ಸುಧಾರಣೆಗಳು ಜಾರಿಗೆ ಬಂದವು .
 • 1919 ರಲ್ಲಿ ಮಾಂಟೆಗೊ ಚೆಲ್ಸ್‌ಸ್ಟರ್ಡ್ ವರದಿಯು ಅನುಷ್ಠಾನಕ್ಕೆ ಬಂದಿತು .
 • 1935 ರ ಭಾರತ ಸರ್ಕಾರದ ಕಾಯ್ದೆಯು ಜಾರಿಗೆ ಬಂದಿತು .
 • 1947 ರ ಭಾರತ ಸ್ವಾತಂತ್ರ್ಯದ ಕಾಯ್ದೆಯು ಜಾರಿಗೆ ಬಂದಿತು .
 • ಭಾರತದ ಸಂವಿಧಾನದ ಬೆಳವಣಿಗೆಯಲ್ಲಿ 1909 , 1919 , 1935 , 1947 ರ ಕಾಯಿದೆಗಳು ಪ್ರಮುಖ ಪಾತ್ರ ವಹಿಸಿದವು .

GK Kannada Questions

 • 1909 ರ ಕಾಯಿದೆಯು ಪ್ರಥಮ ಬಾರಿಗೆ ಮುಸ್ಲಿಂ ಸಮುದಾಯಕ್ಕೆ ಪ್ರತ್ಯೇಕ ಮತದಾರ ಕ್ಷೇತ್ರವನ್ನು ಕಲ್ಪಿಸಿದವು .
 • ಮಾರ್ಲೆ – ಮಿಂಟೋ ಸುಧಾರಣೆಗಳು ವಿಫಲಗೊಂಡಿದ್ದಕ್ಕಾಗಿ ಕಾಂಗ್ರೆಸ್ ‘ ಹೋಮ್‌ರೂಲ್ ‘ ಚಳುವಳಿಯನ್ನು ಪ್ರಾರಂಭಿಸಿತು .
 • ಭಾರತದಲ್ಲಿ ಪ್ರಾತಿನಿಧಿಕ ಸರ್ಕಾರವನ್ನು ಸ್ಥಾಪಿಸುವ ಉದ್ದೇಶದಿಂದ ಸೆಕ್ರೆಟರಿ ಆಫ್ ಸ್ಟೇಟ್ ಆಗಿದ್ದ ಮಾಂಟಿಗೋ ವೈಸ್‌ರಾಯ್ ಆಗಿದ್ದ ಚೆಲ್ಸ್‌ಸ್ಪರ್ಡ್ ಒಂದು ವರದಿಯಾಗಿ ಸಿದ್ಧಪಡಿಸಿದರು .
 • 1919 ರ ಕಾಯಿದೆಯು ಭಾರತ ಸರ್ಕಾರದ ಕಾಯ್ದೆ 9 ಮಾಂಟೆಗೊ ಚೆಲ್ಸ್‌ ಸ್ಟರ್ಡ್ ವರದಿ ಎಂದು ಪ್ರಸಿದ್ದಿಯಾಗಿದೆ
GK Kannada Questions
GK Kannada Questions
 • 1919 ರ ವರದಿಯು ಪ್ರಾಂತ್ಯಗಳಲ್ಲಿ ದ್ವಿಸರ್ಕಾರ ಪದ್ಧತಿಯನ್ನು ಜಾರಿಗೆ ತರುವಂತೆ ಶಿಫಾರಸ್ಸು ಮಾಡಿತು .
 • 1919 ರ ಕಾಯಿದೆಯು ದ್ವಿಸದನ ಪದ್ಧತಿಗೆ ಅನುವು ಮಾಡಿಕೊಟ್ಟಿತು .
 • 1919 ರ ಸುಧಾರಣೆಗಳು ವಿಫಲಗೊಂಡ ಪರಿಣಾಮವಾಗಿ , ಭಾರತದಾದ್ಯಂತ ಅಸಹಕಾರ ಚಳುವಳಿಯು ಪ್ರಾರಂಭಗೊಂಡಿತು .
 • ಭಾರತದಲ್ಲಿಯ ಅಸಹಕಾರ ಚಳುವಳಿಯ ಪರಿಣಾಮವಾಗಿ ಬ್ರಿಟಿಷ್ ಸರಕಾರ ಸೈಮನ್‌ರ ನೇತೃತ್ವದಲ್ಲಿ ಶಾಸನಾತ್ಮಕ ಆಯೋಗ ರಚಿಸಲು ಮುಂದಾಯಿತು .
 • ಸೈಮನ್ ಆಯೋಗವು ಭಾರತಕ್ಕೆ ಡೊಮಿನಿಯನ್ ಸ್ಥಾನಮಾನ ನೀಡಬೇಕು ಎಂದು ಘೋಷಿಸಿತು . 1 1930 ರಲ್ಲಿ ಲಂಡನ್‌ನಲ್ಲಿ ನಡೆದ ಪ್ರಥಮ ದುಂಡು ಮೇಜಿನ ಸಮ್ಮೇಳನದಲ್ಲಿ ಗಾಂಧೀಜಿಯವರು ಪಾಲ್ಗೊಂಡರು .
 • 1931 ರಲ್ಲಿ ಲಂಡನ್‌ನಲ್ಲಿ ನಡೆದ ದ್ವಿತೀಯ ದುಂಡು ಮೇಜಿನ ಸಮ್ಮೇಳನದಲ್ಲಿ ಅಂಬೇಡ್ಕರ್‌ರವರು ಭಾಗವಹಿಸಿದರು .
 • 1932 ರಲ್ಲಿ ತೃತೀಯ ದುಂಡು ಮೇಜಿನ ಸಮ್ಮೇಳನವು ಜರುಗಿತು . 7 1932 ರಲ್ಲಿ ಬ್ರಿಟಿಷ್ ಸರಕಾರ ಶ್ವೇತಪತ್ರವನ್ನು ಹೊರಡಿಸಿತು .
 • ಭಾರತದಲ್ಲಿ ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿಯನ್ನು ಶ್ವೇತಪತ್ರವನ್ನು ಘೋಷಿಸಿತು . 0 ಗಾಂಧೀಜಿಯವರು ಅಸ್ಪೃಶ್ಯರಿಗೆ ಪ್ರತ್ಯೇಕ ಮತಾಧಿಕಾರವನ್ನು ವಿರೋಧಿಸಿ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡರು .

GK Kannada Questions

 • ಗಾಂಧಿ ಮತ್ತು ಅಂಬೇಡ್ಕರ್ ನಡುವೆ 24 ನೇ ಸೆಪ್ಟೆಂಬರ್ 1932 ರಂದು ‘ ಪೂನಾ ಒಪ್ಪಂದ ‘ ಏರ್ಪಟ್ಟಿತು .
 • 1935 ರ ಕಾಯಿದೆಯು ಭಾರತ ಬ್ರಿಟಿಷ್ ಪ್ರಾಂತ್ಯಗಳು ಮತ್ತು ಘಟಕಗಳಾಗಿ ದೇಶೀಯ ಸಂಸ್ಥಾನಗಳನ್ನೊಳಗೊಂಡ ಭಾರತದ ಸಂಯುಕ್ತ ಪದ್ಧತಿಗೆ ಅವಕಾಶ ಕಲ್ಪಿಸಿತು .
 • 1935 ರ ಕಾಯಿದೆಯನ್ವಯ ಕೇಂದ್ರ ಪಟ್ಟಿಯಲ್ಲಿ 50 , ಪ್ರಾಂತ್ಯಗಳ ಪಟ್ಟಿಯಲ್ಲಿ 54 ಹಾಗೂ ಸಮವರ್ತಿ ಪಟ್ಟಿಯಲ್ಲಿ 36 ವಿಷಯಗಳನ್ನು ಹಂಚಿತು .
 • ಪ್ರಪ್ರಥಮ ಬಾರಿಗೆ ದೆಹಲಿಯಲ್ಲಿ ಭಾರತದ ಫೆಡರಲ್ ನ್ಯಾಯಾಲಯದ ಅಸ್ತಿತ್ವಕ್ಕೆ 1935 ರ ಕಾಯಿದೆಯು ಅವಕಾಶ ನೀಡಿತು .
 • 1935 ರ ಕಾಯಿದೆಯಂತೆ ಪ್ರಾಂತ್ಯಗಳು ಸ್ವಾಯತ್ತ ಆಡಳಿತಾತ್ಮಕ ಘಟಕಗಳಾದವು .
 • 1939 ರಲ್ಲಿ ಕಾಂಗ್ರೆಸ್ ಪಕ್ಷವು ಭಾರತಕ್ಕೆ ಸಂವಿಧಾನವನ್ನು ರಚಿಸಲು ರಾಜ್ಯಾಂಗ ರಚನಾ ಸಮಿತಿಯನ್ನು ರಚಿಸಬೇಕೆಂಬ ಬೇಡಿಕೆಯನ್ನು ಮತ್ತಷ್ಟು ಪ್ರಬಲಗೊಳಿಸಿತು

GK Kannada Questions pdf

 • ಕ್ರಿಪ್ಸ್ ಆಯೋಗವು ಸಂವಿಧಾನವನ್ನು ರಚಿಸಲು ರಾಜ್ಯಾಂಗ ರಚನಾ ಸಮಿತಿಯನ್ನು ಬ್ರಿಟಿಷ್ ಸರಕಾರ ರಚನೆ ಮಾಡಬೇಕು ಎಂದು ಹೇಳಿತು .
 • ಬ್ರಿಟಿಷ್ ಸರ್ಕಾರ ಭಾರತಕ್ಕೆ ಕ್ಯಾಬಿನೆಟ್ ಮಿಷನ್‌ನ್ನು 1946 ರಲ್ಲಿ ಕಳುಹಿಸುವುದಾಗಿ ಘೋಷಿಸಿತು ,
 • ಕ್ಯಾಬಿನೆಟ್ ಮಿಷನ್ ಪ್ರಕಾರ ಸಂವಿಧಾನ ರಚನಾ ಸಭೆಯನ್ನು ರಚಿಸಲಾಯಿತು .
 • ಸಂವಿಧಾನ ರಚನಾ ಸಭೆಯ ಅಧ್ಯಕ್ಷತೆಯನ್ನು 1946 ರಲ್ಲಿ ಡಾ ಬಾಬು ರಾಜೇಂದ್ರ ಪ್ರಸಾದ್‌ರವರು ವಹಿಸಿಕೊಂಡರು .
 • 1947 ರಲ್ಲಿ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷತೆಯನ್ನು ಡಾ || ಬಿ.ಆರ್ . ಅಂಬೇಡ್ಕರ್‌ರವರು ವಹಿಸಿಕೊಂಡಿದ್ದರು .
 • 1947 ರ ಭಾರತ ಸ್ವಾತಂತ್ರ್ಯ ಕಾಯ್ದೆಯು 15 ನೇ ಆಗಸ್ಟ್ 1947 ರಂದು ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ಸ್ವತಂತ್ರ ಡೊಮಿನಿಯನ್‌ಗಳನ್ನು ಸ್ಥಾಪಿಸಲು ಅವಕಾಶ ನೀಡಿತು .
 • 1946 ರ ಸೆಪ್ಟೆಂಬರ್ 2 ರಂದು ಸಂವಿಧಾನ ರಚನಾ ಸಭೆಯು ಭಾರತದ ಮಧ್ಯಂತರ ಸರ್ಕಾರವನ್ನು ರಚಿಸಿತು .
 • ಮಧ್ಯಂತರ ಸರ್ಕಾರವು 15 ನೇ ಆಗಸ್ಟ್ 1947 ರ ವರೆಗೆ ಅಸ್ತಿತ್ವದಲ್ಲಿತ್ತು .

GK Kannada Questions in karnataka

 • ವೈಸ್‌ರಾಯ್‌ರವರ ಕಾರ್ಯಕಾರಿ ಮಂಡಳಿಯ ಉಪಾಧ್ಯಕ್ಷರು ಜವಹರಲಾಲ್ ನೆಹರು ರವರು ಆಗಿದ್ದರು .
 • ಭಾರತದ ಪ್ರಪ್ರಥಮ ಪ್ರಧಾನಮಂತ್ರಿಯಾಗಿ ಪಂಡಿತ ಜವಹರಲಾಲ್ ನೆಹರು ರವರು ಅಧಿಕಾರ ವಹಿಸಿಕೊಂಡರು .
 • ಸ್ವತಂತ್ರ ಭಾರತವು 26 ನೇ ನವೆಂಬರ್ 1949 ರಂದು ಸಂವಿಧಾನವನ್ನು ಅಂಗೀಕರಿಸಿತು .
  ಲಾಹೋರ್ ಕಾಂಗ್ರೆಸ್ ಅಧಿವೇಶನದಲ್ಲಿ ಪೂರ್ಣ ಸ್ವರಾಜ್ಯ ಘೋಷಿಸಿದ ನೆನಪಿಗಾಗಿ ಜನವರಿ 26 , 1950 ರಂದು ಸಂವಿಧಾನವನ್ನು ಜಾರಿಗೊಳಿಸಲಾಯಿತು .
 • ಭಾರತದಲ್ಲಿ ಲೋಕಸಭೆಗೆ ಮೊದಲ ಮಹಾ ಚುನಾವಣೆ ಅಕ್ಟೋಬರ್ 1951 ರಿಂದ ಫೆಬ್ರವರಿ 1952 ರ ವರೆಗೆ ನಡೆದವು .

GK Kannada Questions notes

 • ಪ್ರಥಮ ಮಹಾಚುನಾವಣೆಯು ಲೋಕಸಭೆಯ 489 ಸ್ಥಾನಗಳಿಗೆ ನಡೆಯಿತು , 1 ಮೊದಲ ಮಹಾಚುನಾವಣೆಯಲ್ಲಿ 45 % ರಷ್ಟು ಮತದಾನವಾಗಿತ್ತು .
 • ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 364 ರಷ್ಟು ಸ್ಥಾನಗಳಲ್ಲಿ ಗೆಲ್ಲುವುದರೊಂದಿಗೆ ನಿಚ್ಚಳ ಬಹುಮತವನ್ನು ಪ್ರಥಮ ಚುನಾವಣೆಯಲ್ಲಿ ಸಾಧಿಸಿತು .
 • ಪ್ರಥಮ ಲೋಕಸಭೆಯಲ್ಲಿ 491 ಸ್ಥಾನಗಳಿದ್ದು ಇದರಲ್ಲಿ 2 ಆಂಗ್ಲೋ ಇಂಡಿಯನ್ ಸದಸ್ಯರನ್ನು ನಾಮಕರಣ ಬಾಡಲಾಯಿತು .
 • ಭರತದ ಲೋಕಸಭೆಯ ಪ್ರಪ್ರಥಮ ಸ್ಪೀಕರ್‌- ಶ್ರೀ . ಜಿ.ವಿ.ಮಾವಳಂಕರ್‌ , 0 ಇಡಿಯನ್ ಸ್ಟೇಟ್ ಡಿಪಾರ್ಟ್‌ಮೆಂಟಿನ ಅಧಿಕಾರವನ್ನು ಸರ್ದಾರ್ ವಲ್ಲಬ್‌ಬಾಯಿ ಪಟೇಲ್‌ರವರು ವಹಿಸಿಕೊಂಡರು .
 • ಇಂಯನ್ ಸ್ಟೇಟ್ ಡಿಪಾರ್ಟ್‌ಮೆಂಟ್ ಎಂಬುದು ಕೇಂದ್ರ ಸರ್ಕಾರ ಮತ್ತು ಭಾರತ ರಾಜ್ಯಗಳ ನಡುವಿನ ವಿಷಕುಗಳನ್ನು ನಿರ್ವಹಿಸುತ್ತದೆ .
 • ಇಂಡಿರುನ್ ಸ್ಟೇಟ್ ಡಿಪಾರ್ಟ್‌ಮೆಂಟ್‌ನ ಕಾರ್ಯದರ್ಶಿಯಾಗಿ ವಿ.ಪಿ.ಮೆನನ್ ಕಾರ್ಯ ನಿರ್ವಹಿಸಿದರು .
 • “ ಇನ್ ಮಂ ಆಫ್ ಆಕ್ಸೆಷನ್ ” ಒಂದು ಒಡಂಬಡಿಕೆ , ಹಲವು ದೇಶೀಯ ಸಂಸ್ಥಾನಗಳು ರಕ್ಷಣೆ , ವಿದೇಶಾಂಗ ವ್ಯವಹ ಮತ್ತು ಸಂಪರ್ಕಗಳಿಗೆ ಸಂಬಂಧಪಟ್ಟಂತೆ ಭಾರತದ ಸಂಘದಲ್ಲಿ ಸೇರಲು ಮಾಡಿಕೊಂಡ ಒಡಂಬಡಿಕೆಯಾಗಿದೆ .
 • 1949 ಅಂತ್ಯದ ವೇಳೆಗೆ ಸುಮಾರು 600 ದೇಶೀಯ ಸಂಸ್ಥಾನಗಳು ‘ ಇನ್‌ಸ್ಟುಮೆಂಟ್ ಆಫ್ ಆಕ್ಸೆಷನ್ ‘ ಗೆ ಸಹಿ ಹಾಕಿದವು .
 • ಜುನಾಗಡ , ಹೈದರಾಬಾದ್ , ಕಾಶ್ಮೀರ , ಉದಯಪುರ : ತಿರುವಾಂಕೂರು ರಾಜ್ಯಗಳು ಭಾರತ ಒಕ್ಕೂಟವನ್ನು ಸೇರಲು ನಿರಾಕರಿಸಿದವು .
 • PEPSU : Patiyaala and Eastern Punjab States Union .
 • ಪಟೇಲ್ ಸ್ಟೀಮ್ – ಪಟೇಲ್‌ರ ನೇತೃತ್ವದಲ್ಲಿ ಮೂರು ಹಂತದಲ್ಲಿ ನಡೆದ ದೇಶೀಯ ಸಂಸ್ತಾನಗಳ ಏಕೀಕರಣದ ವಕ್ರಿಯೆಯಾಗಿದೆ .
 • ಜುನಾಗಡದ ನವಾಬನು ಪಾಕಿಸ್ತಾನದೊಂದಿಗೆ ಸೇರ್ಪಡೆಯಾಗುವುದಾಗಿ ಘೋಷಿಸಿದನು .
 • 1948 ಸೆಪ್ಟೆಂಬರ್ 18 ರಂದು ಭಾರತದ ಸೇನೆಯು ಹೈದರಾಬಾದನ್ನು ಪ್ರವೇಶಿಸಿ ಪೋಲಿಸ್ ಕಾರ್ಯಾಚರಣೆಯನ್ನು ಮಾಡಿತು . ಇದುವೇ ‘ ಆಪರೇಷನ್ ಪೋಲೋ ‘ ಎಂದು ಪ್ರಸಿದ್ಧವಾಗಿದೆ .
 • ಜಮ್ಮು ಕಾಶ್ಮೀರವನ್ನು ಹಿಂದೂ ರಾಜ ಹರಿಸಿಂಗ್‌ನು ಆಳುತ್ತಿದ್ದನು . 0 ಕಾಶ್ಮೀರದ ರಾಜ ಹರಿಸಿಂಗ್‌ನನ್ನು ಪದಚ್ಯುತಿಗೊಳಿಸಲು ನ್ಯಾಷನಲ್ ಕಾನ್‌ಫರೆನ್‌ನ ಶೇಕ್ ಅಬ್ದುಲ್ಲಾ ನೇತೃತ್ವದಲ್ಲಿ ಬೃಹತ್ ಚಳುವಳಿ ನಡೆಯಿತು .
 • 1947 ಅಕ್ಟೋಬರ್ 26 ರಂದು ರಾಜ ಹರಿಸಿಂಗ್‌ನು ಭಾರತದೊಂದಿಗೆ ಕಾಶ್ಮೀರ ವಿಲೀನಗೊಳಿಸುವ ‘ ಆಕ್ಷೇಷನ್ ‘ ಪತ್ರಕ್ಕೆ ಸಹಿ ಹಾಕಿದನು .
GK Kannada Questions | ಸಾಮಾನ್ಯ ಜ್ಞಾನ ಭಾಗ -15
GK Kannada Questions | ಸಾಮಾನ್ಯ ಜ್ಞಾನ ಭಾಗ -15

GK Kannada Questions in kannada

 • ಸಂವಿಧಾನ ರಚನಾ ಸಭೆಯು 370 ನೇ ವಿಷಯ ಮೂಲಕ ರಾಜ್ಯಕ್ಕೆ ಪ್ರತ್ಯೇಕ ಸಂವಿಧಾನ ಮತ್ತು ಇತರ ಸವಲತ್ತುಗಳನ್ನು ನೀಡಲಾಯಿತು .
 • 1954 ರ ಫೆಬ್ರವರಿಯಲ್ಲಿ ಭಾರತದೊಂದಿಗಿನ ಕಾಶ್ಮೀರ ಸೇರ್ಪಡೆಯ ಒಪ್ಪಂದವನ್ನು ಸಂವಿಧಾನ ಸಭೆಯು ಅನುಮೋದಿಸಿತು .
 • ಸರ್ದಾರ ವಲ್ಲಬಬಾಯಿ ಪಟೇಲರು ರಾಜ್ಯಗಳ ಏಕೀಕರಣದಲ್ಲಿ ಸಲ್ಲಿಸಿದ ಕೊಡುಗೆಗಾಗಿ ಇವರನ್ನು ‘ ಉಕ್ಕಿನ ಮನುಷ್ಯ ‘ ಎಂದು ಕರೆಯಲಾಗುತ್ತದೆ .
 • ಮೋತಿಲಾಲ್ ನೆಹರು ಸಮಿತಿಯು ಭಾಷೆಯ ಆಧಾರದ ಮೇಲೆ ರಾಜ್ಯಗಳ ಪುನರಚನೆಯಾಗಬೇಕು ಎಂದು ಶಿಫಾರಸ್ಸು ಮಾಡಿತು .
 • 1953 ಅಕ್ಟೋಬರ್ 1 ರಂದು ಪ್ರಥಮ ಭಾಷಾವಾರು ರಾಜ್ಯವಾಗಿ ಆಂಧ್ರಪ್ರದೇಶ ಅಸ್ತಿತ್ವಕ್ಕೆ ಬಂದಿತು .
 • 1956 ನವಂಬರ್‌ನಲ್ಲಿ ರಾಜ್ಯ ಪುನರಚನಾ ಕಾಯ್ದೆಯು ಜಾರಿಗೆ ಬಂದಿತು .
 • 1956 ರ ರಾಜ್ಯ ಮನರ್ – ರಚನಾ ಕಾಯ್ದೆಯು 14 ರಾಜ್ಯಗಳನ್ನು ಮತ್ತು 6 ಕೇಂದ್ರಾಡಳಿತ ಪ್ರದೇಶಗಳನ್ನು ರಚಿಸಿತು .
 • ಬಾಂಬೆ ರಾಜ್ಯದಿಂದ 1960 ರಲ್ಲಿ ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳು ಅಸ್ತಿತ್ವಕ್ಕೆ ಬಂದವು .
 • 1960 ರಲ್ಲಿ ಪಂಜಾಬ್ ಪ್ರಾಂತ್ಯವನ್ನು ಪಂಜಾಬ್ ಮತ್ತು ಹರಿಯಾಣ ಎಂಬ ಎರಡು ರಾಜ್ಯಗಳನ್ನಾಗಿ ವಿಂಗಡಿಸಲಾಯಿತು . – ಸಂಸತ್ತು 1972 ರಲ್ಲಿ ಈಶಾನ್ಯ ಪ್ರದೇಶಗಳ ಮನರಚನೆ ಕಾಯಿದೆಯನ್ನು ಜಾರಿಗೆ ತಂದು ಮಣಿಪುರ , ಮೇಘಾಲಯ , ತ್ರಿಪುರಾ ರಾಜ್ಯಗಳನ್ನು ರಚಿಸಿತು .
 • 2014 ನೇ ಜೂನ್ 2 ರಂದು ತೆಲಂಗಣಾ ರಾಜ್ಯವು ಅಸ್ತಿತ್ವಕ್ಕೆ ಬಂದಿತು .
 • ಪ್ರಸ್ತುತವಾಗಿ ಭಾರತವು 29 ರಾಜ್ಯಗಳನ್ನು ಮತ್ತು 7 ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ .
 • ಅಸ್ಸಾಂ ರಾಜ್ಯದಿಂದ – ಶೆರ್ಬಿ ಅಂಗ್‌ಲಾಂಗ್ ಮಹಾರಾಷ್ಟ್ರದಿಂದ ವಿದರ್ಭ – ಉತ್ತರ ಪ್ರದೇಶದಿಂದ ಹರಿತ ಪ್ರದೇಶ , ಪೂರ್ವಾಂಚಲ ರಾಜ್ಯಗಳ ರಚನೆಗಾಗಿ ಹೋರಾಟಗಳು ನಡೆಯುತ್ತಿವೆ

GK Kannada Questions with answers

ಇನ್ನಷ್ಟು ಓದಿ

ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು-01

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು-02

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು-03

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು-04

Karnataka GK Questions in Kannada-05

ಜನರಲ್ ಪ್ರಶ್ನೆಗಳು 2022-06

GK Kannada Questions kannada

Leave a Reply

Your email address will not be published. Required fields are marked *