ತಲಕಾಡಿನ ಗಂಗರ ಇತಿಹಾಸ | Gangaru History in Kannada

ತಲಕಾಡಿನ ಗಂಗರ ಇತಿಹಾಸ | Ganga dynasty In Kannada Best Top1 Information

ತಲಕಾಡಿನ ಗಂಗರ ಇತಿಹಾಸ | Gangaru History in Kannada

Ganga dynasty ,ಕರ್ನಾಟಕ ಆಳಿದ ರಾಜಮನೆತನಗಳು , ತಲಕಾಡಿನ ಗಂಗರ ಇತಿಹಾಸ , gangaru history in kannada , talakadina gangaru in kannada , gangaru in kannada , talakadina gangaru history in kannada

Ganga dynasty In Kannada

Spardhavani Telegram
ತಲಕಾಡಿನ ಗಂಗರ ಇತಿಹಾಸ | Ganga dynasty In Kannada Best Top1 Information
ತಲಕಾಡಿನ ಗಂಗರ ಇತಿಹಾಸ | Ganga dynasty In Kannada Best Top1 Information

ಗಂಗರು ಕರ್ನಾಟಕ ಆಳಿದ ರಾಜಮನೆತನ

ಸುಮಾರು 4 ನೇ ಶತಮಾನದಿಂದ 10ನೇ ಶತಮಾನದವರೆಗೆ ದಕ್ಷಿಣ ಕರ್ನಾಟಕ ಮತ್ತು ತಮಿಳುನಾಡಿನ ಉತ್ತರಭಾಗಗಳನ್ನು ಆಳಿದ ಒಂದು ರಾಜಮನೆತನ. ಇವರ ಸಮಕಾಲೀನರಾದ ಚಾಲುಕ್ಯ, ರಾಷ್ಟ್ರಕೂಟರಷ್ಟು ಪ್ರಬಲರಲ್ಲದಿದ್ದರೂ ಅವರೊಂದಿಗೆ ಸಂಬಂಧಗಳನ್ನು ಬೆಳಸಿ ಸ್ವತಂತ್ರರಾಗಿ ಆಳ್ವಿಕೆ ನಡೆಸಿದರು. ಗಂಗರ ರಾಜಧಾನಿ ಮೊದಲು ಕುವಲಾಳದಲ್ಲಿದ್ದಿತು (ಇಂದಿನ ಕೋಲಾರ). 8ನೆಯ ಶತಮಾನದ ದೊರೆ ಶ್ರೀಪುರುಷ ತಲಕಾಡಿನಿಂದ ಆಳಲು ತೊಡಗಿದನು. ಇದಲ್ಲದೆ ಮಾನ್ಯಪುರದಲ್ಲಿ (ಇಂದಿನ ನೆಲಮಂಗಲ ತಾಲೂಕಿನ ಮಣ್ಣೆ) ರಾಜನಿವಾಸ ಏರ್ಪಟ್ಟಿತ್ತು. ನಂದಿಬೆಟ್ಟ ಗಂಗರಾಜ್ಯದಲ್ಲಿದ್ದ ಪ್ರಮುಖ ಗಿರಿದುರ್ಗ. ಗಂಗರ ಮನೆತನದ ಮೊದಲ ಅರಸನಾದ ಕೊಂಗಣಿವರ್ಮ ಮಾಧವನು ಕೋಲಾರವನ್ನು ತನ್ನ ಮೊದಲ ರಾಜಧಾನಿಯಾಗಿ ಮಾಡಿ 20 ವರುಷ ರಾಜ್ಯವನ್ನು ಆಳಿದನು. ಅವರ ನಿಯಂತ್ರಣದಲ್ಲಿದ್ದ ಪ್ರದೇಶವನ್ನು ಗಂಗಾವತಿ ಎಂದು ಕರೆಯಲಾಗಿದ್ದು ಈಗಿನ ಮೈಸೂರು, ಹಾಸನ, ಚಾಮರಾಜನಗರ, ತುಮಕೂರು, ಕೋಲಾರ, ಮಂಡ್ಯ ಹಾಗು ಬೆಂಗಳೂರನ್ನು ಆವರಿಸಿತ್ತು. ಗಂಗರು ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಕೆಲ ಪ್ರದೇಶಗಳಿಗೆ ರಾಜ್ಯವನ್ನು ವಿಸ್ತರಿಸಿದ್ದರು.

ಗಂಗರು ಕರ್ನಾಟಕ ಆಳಿದ ರಾಜಮನೆತನ

  • ಗಂಗರು ಸುಮಾರು ಕರ್ನಾಟಕವನ್ನು “ 600 ವರ್ಷ” ಗಳ ಕಾಲ ಆಳಿದರು
  • ಗಂಗ ನಾಡಿನ ತಿರುಳು ಭಾಗವನ್ನು “ಗಂಗವಾಡಿ ” ಎಂದು ಕರೆಯಲಾಗುತ್ತಿತ್ತು .
  • ಗಂಗ ಮನೆತನವು ಕ್ರಿ.ಶ.೧೦೦೪ರಲ್ಲಿ ಚೋಳರಿಂದ ಸೋತು ಕೊನೆಗೊಂಡಿತು
ತಲಕಾಡಿನ ಗಂಗರ ಇತಿಹಾಸ | Ganga dynasty In Kannada Best Top1 Information
ತಲಕಾಡಿನ ಗಂಗರ ಇತಿಹಾಸ | Ganga dynasty In Kannada Best Top1 Information

ಗಂಗರ ಮೂಲ:- 

  • ಕನ್ನಡ ಸಿದ್ದಾಂತದ ಪ್ರಕಾರ ಇವರು ಅಚ್ಚ ಕನ್ನಡಿಗರು – ಗಂಗರು ರಾಜಧಾನಿ ತಲಕಾಡು ದಕ್ಷಿಣ ಗಂಗೆ ಕಾವೇರಿ ನದಿಯ ದಡದಲ್ಲಿದ್ದರಿಂದ ಈ ವಂಶಕ್ಕೆ “ಗಂಗ ” ಎಂದು ಹೆಸರು ಬಂದಿದೆ .
  • ಕಣ್ವ ಮೂವಗ ಪ್ರಕಾರ ಿವರು “ ಕಣ್ವ ” ವಂಶದವರು ಎಂದು
  • ತಮಿಳು ಮೂಲ – ಇವರು ಮೂಲತಃ “ಪೆರೂರು ” ಆಗಿದ್ದು ( ಕೊಯಮತ್ತೂರು ) ಇವರು ತಮಿಳು ಮೂಲದಿಂದ ಬಂದವರೆಂದು ಹೇಳಲಾಗಿದೆ .
  • ದೈವಿ ಸಿದ್ದಾಂತದ ಪ್ರಕಾರ ಇವರು ಇಕ್ಷಾಕು ವಂಶದವರೆಂದು ಹೇಳಲಾಗಿದೆ.

ರಾಜಧಾನಿಗಳು :-

1 .ಕೋಲಾರ ( ಕುವಲಾಲಾ ) – ಮೊದಲ ರಾಜಧಾನಿ

2. ತಲಕಾಡು ( ತರ್ತಿಪುರ ) ವಿವರ್ಮನ ಕಾಲದಲ್ಲಿ

3. ಮಾಕುಂದ ( ಚನ್ನಪಟ್ಟಣ ) ಭೂವಿಕ್ರಮ ಕಾಲದಲ್ಲಿ

4 , ಮನ್ನೆ / ಮಾನ್ಯಪುರ ( ನೆಲಮಂಗಲ ) ( ಶ್ರೀಪುರುಷನ ಕಾಲದಲ್ಲಿ )

 

  • ಲಾಂಭನ : ಮದಗಜ
  • ಆಳ್ವಿಕೆ – ಸ್ವತಂತ್ರರಾಗಿ ಕ್ರಿ.ಶ. 350 ರಿಂದ 600 ರವರೆಗೆ
  • ಚಾಲುಕ್ಯರ ಸಾಮಂತರಾಗಿ ಕ್ರಿ.ಶ. 600-757
  •  ರಾಷ್ಟ್ರಕೂಟ ಸಾಮಂತರಾಗಿ ಕ್ರಿ.ಶ. 757-973
  • ಕಲ್ಯಾಣಿ ಚಾಲುಕ್ಯರ ಸಾಮಂತರಾಗಿ ಕ್ರಿ.ಶ. 973-999ರವರೆಗೆ
  • ಇವರು ಆಳಿದ ಪ್ರದೇಶವನ್ನು ಗಂಗವಾಡಿ ಅಥವಾ ಗಂಗವಾಡಿ 96 ಸಾವಿರ ಎಂದು ಕರೆಯುವರು
  • ಗಂಗ ಮನೆತನ ಸ್ಥಾಪಕರು – ದಡಿಗ ಮತ್ತು ಮಾಧವರು
  • ದಡಿಗನ ಮತ್ತೊಂದು ಹೆಸರು ಕೊಂಗಣಿವರ್ಮ
  • ದಡಿಗ ಮತ್ತು ಮಾಧವರಿಗೆ ಗಂಗರ ರಾಜ್ಯ ಕಟ್ಟಲು ಪ್ರೇರೇಪಿಸಿದ ಜೈನ ಗುರುಗಳು – ಸಿಂಹನಂದಿ .

ಗಂಗ ಮನೆತನದ ರಾಜರುಗಳು:- 

  • ಕೊಂಗುಣೀವರ್ಮ, (ಕ್ರಿ.ಶ. 325-350)
  • ಮಾಧವ, (ಕ್ರಿ.ಶ. 350-375)
  • ಆರ್ಯವರ್ಮ, (ಕ್ರಿ.ಶ. 375-400)
  • ಮಾಧವ-3, (ಕ್ರಿ.ಶ. 440-469)
  • ಅವಿನೀತ, (ಕ್ರಿ.ಶ. 469-529)
  • ದುರ್ವಿನೀತ, (ಕ್ರಿ.ಶ. 529-579)
  • ಶ್ರೀವಿಕ್ರಮ, (ಕ್ರಿ.ಶ. 629-654)
  • ಭೂವಿಕ್ರಮ, (ಕ್ರಿ.ಶ. 654-679)
  • ಶಿವಮಾರ-1, (ಕ್ರಿ.ಶ. 679-725)
  • ಶ್ರೀಪುರುಷ, (ಕ್ರಿ.ಶ. 725-788)
  • ಸೈಗೊಟ್ಟ ಶಿವಮಾರ, (ಕ್ರಿ.ಶ. 788-816)
  • ರಾಚಮಲ್ಲ, (ಕ್ರಿ.ಶ. 816-843)
  • ನೀತಿಮಾರ್ಗ ಎರೆಗಂಗ (ಕ್ರಿ.ಶ. 843-870)
  • ರಾಚಮಲ್ಲ-2 (ಕ್ರಿ.ಶ. 870-919)
  • ಎರೆಗಂಗ
  • ಬೂತುಗ-2 (ಕ್ರಿ.ಶ. 936-961)
  • ಮಾರಸಿಂಹ-2 (ಕ್ರಿ.ಶ. 963-974)
  • ರಾಚಮಲ್ಲ-3 (ಕ್ರಿ.ಶ. 974-999)

ದುರ್ವಿನೀತ ( ಕ್ರಿ.ಶ. 555-605 ):-

  • ಮೊದಲ ಪ್ರಸಿದ್ಧ ಗಂಗದೊರೆ .
  • ಸ್ವತಃ ಶ್ರೇಷ್ಠ ವಿದ್ವಾಂಸನಾದ ಈತ ಭಾರವಿಯ ಕಿರಾತಾರ್ಜುನೀಯದ 15 ನೇ ಸರ್ಗಕ್ಕೆ ಭಾಷ್ಯ / ವ್ಯಾಖ್ಯಾನ ಬರೆದಿದ್ದಾನೆ . ಹಾಗೆಯೇ ಗುಣತ್ಮಾನ ಪೈಶಾಚಿಯ ಭಾಷೆಯ ಬೃಹತ್ಕಥಾವನ್ನು ಸಂಸ್ಕೃತಕ್ಕೆ ಭಾಷಾಂತರಿಸಿದ್ದಾರೆ .
  •  ಚಾಲುಕ್ಯ ದೊರೆ ವಿಜಯಾದಿತ್ಯನಿಗೆ ತನ್ನ ಮಗಳನ್ನು ನೀಡಿ ಅವರೊಂದಿಗೆ ವೈವಾಹಿಕ ಸಂಬಂಧ ಬೆಳೆಸಿದ
  • ಶಬ್ದಾವತಾರ ಕೃತಿ ಬರೆದ ಪೂಜ್ಯಪಾದರು ದುರ್ವಿನೀತನ ಗುರುಗಳು .

ಶ್ರೀಪುರುಷ ( ಕ್ರಿ.ಶ. 726-788 ):-

  •  ಗಂಗದೊರೆಗಳಲ್ಲಿನ ಮತ್ತೊಬ್ಬ ಪ್ರಸಿದ್ಧ ಅರಸ
  • ಈತ ಪಲ್ಲವರು ಮತ್ತು ಚಾಲುಕ್ಯರ ನಡುವಿನ ಹೋರಾಟದಲ್ಲಿ ಚಾಲುಕ್ಯರ ಪಕ್ಷ ಸೇರಿ , ಪಲ್ಲವ ದೊರೆ ನಂದಿವರ್ಮನನ್ನು ಸೋಲಿಸಿ , ಪೆರ್ಮನದಿ ಎಂಬ ಬಿರುದು ಪಡೆದನು
  • ಇವನ ಕಾಲದಲ್ಲಿ ಪಲ್ಲವರಾಜ ನಂದಿವರ್ಮನು ಗಂಗರಾಡಿದ ಮೇಲೆ ಆಕ್ರಮಣ ಮಾಡಿ ‘ ಉದ್ರೋದಯ ‘ ಎಂಬ ಅನರ್ಘರತ್ನವನ್ನು ಕೊಂಡೊಯ್ದನು
  •   ಸ್ವತಃ ವಿದ್ವಾಂಸನಾದ ಈತ ಸಂಸ್ಕೃತದಲ್ಲಿ ” ಗಜಶಾಸ್ತ್ರ ‘ ಎಂಬ ಗ್ರಂಥ ರಚಿಸಿದ್ದಾನೆ .
  • ಮಾಕುಂದದಿಂದ ಮಾನ್ಯಪುರಕ್ಕೆ ರಾಜಧಾನಿ ವರ್ಗಾವಣೆ ಮಾಡಿದ ಕಾರಣ ರಾಷ್ಟ್ರಕೂಟದ ಭೀತಿ .

 

ಮಂತ್ರಿ ಚಾವುಂಡರಾಯ:-

  • ಈತನ ತಾಯಿ – ಕಾಳಲಾದೇವಿ
  • ಈತ ಗಂಗರ ಆಸ್ಥಾನದಲ್ಲಿ ಮಂತ್ರಿಯಾಗಿ ಹಾಗೂ ದಂಡನಾಯಕನಾಗಿದ್ದ
  • ಈತ ್ಜಿತಸೇನಾ ಭಟ್ಟರಕ ಹಾಗೂ ನೇಮಿಚಂದ್ರ ಮುನಿಯ ಅನುಯಾಯಿ
  • ಈತನ ಬಿರುದು – ಸತ್ಯವಿದಿಷ್ಠಿರ
  • ಈತನ ಇನ್ನೊಂದು ಮಹಾನ್ ಕಾರ್ಯ – ಚಾವುಂಡರಾಯ ಬಸದಿಯ ನಿರ್ಮಾಣ
  • ಈತನ ಕೃತಿಗಳು – ಸಂಸ್ಕೃತದಲ್ಲಿ “ಚರಿತ್ರಾಸಾರ ” ಕನ್ನಡದಲ್ಲಿ ಚಾವುಂಡರಾಯ ಪುರಣ ಅಥವಾ ಅಥವಾ “ ತ್ರಿಷಷ್ಠಿ ಲಕ್ಷಣ ಮಹಾಪುರರಣ ” ಹಾಗೂ ಲೋಕೋಪಾಕರ ( ವಿಶ್ವಕೋಶ )
  • ಈತನ ಮೊದಲ ಹೆಸರು – ಚಾವುಂಡರಾಜ
  • ರಾಚಮಲ್ಲನು ಚಾವುಂಡರಾಯನಿಗೆ ನೀಡಿದ ಬಿರುದು – “ರಾಯ ’
  • ಚಾವುಂಡರಾಯನ ಮಹಾತ್ಸಾಧಾನೆ – ಶ್ರವಣಬೆಳಗೋಳದ ಬಾಹುಬಲಿಯ ವಿಗ್ರಹ ನಿರ್ಮಾಣ
  • ಗೊಮ್ಮಟೇಶ್ವರ ವಿಗ್ರಹ ನಿರ್ಮಾಣವಾದದು – ಕ್ರಿ.ಶ.981 – 983
  • ಗೊಮ್ಮಟೇಶ್ವರನನ್ನು ಕೆತ್ತಿನೆಯ ಮೇಲ್ವಿಚಾರಕ ಶಿಲ್ಪಿ – ಅರಿಷ್ಟನೇಮಿ
  • 4 ನೇ ರಾಚಮಲ್ಲ ಈತನಿಗೆ ನೀಡಿದ ಬಿರುದು – ಸಮರ ಪರಶುರಾಮ
  • ಈತನ ಆಶ್ರಯ ಪಡೆದ ಕನ್ನಡದ ಹೆಸರಾಂತ ಕವಿ – ರನ್ನ
  • ಈತ ಗಂಗರ ಅರಸ 2ನೇ ಮಾರಸಿಂಹ ಆಳ್ವಿಕೆಯಲ್ಲಿ – ಪ್ರಧಾನ ಮಂತ್ರಿಯಾಗಿ ಹಾಗೂ ದಂಡನಾಯಕನಾಗಿ ನಿಯುಕ್ತಿಗೊಂಡ
  • ಈತನ ಬಿರುದು – ಭುಜ ವಿಕ್ರಮ , ಸಮರ ದುರಂಧರ
  • ಗೋಣೂರು ಕದನದಲ್ಲಿ ಜಗದೇಕ ವೀರನನ್ನು ಸೋಲಿಸಿ “ವೀರ ಮಾರ್ತಂಡ ” ಎಂಬ ಬಿರುದು ಪಡೆದ .
  • ಪಾಂಡ್ಯ ಅರಸ ರಾಜಾದಿತ್ಯನನ್ನು ಸೋಲಿಸಿ “ರಣಸಂಗ ಸಿಂಗ ” ಎಂಬ ಬಿರುದನ್ನು ಪಡೆದ

ಎರಡನೇ ಶಿವಮಾರ ( ಕ್ರಿ.ಶ. 788-81 ):-

  •  ಶ್ರೀಪುರುಷನ ಮಗ ಈತ
  •  ತನ್ನ ಆಳ್ವಿಕೆಯ ಹೆಚ್ಚಿನ ಸಮಯವನ್ನು ರಾಷ್ಟ್ರಕೂಟರ ಬಂಧನದಲ್ಲೇ ಕಳೆದನು .
  •  ಶ್ರೇಷ್ಠ ವಿದ್ವಾಂಸನಾದ ಈತ ಕನ್ನಡದಲ್ಲಿ ” ಗಜ ಶತಕ ‘ ( ಗಜಷಕ ) ಮತ್ತು ಸಂಸ್ಕೃತದಲ್ಲಿ ” ಗಜಮಾತ ಕಲ್ಪನೆ ” ರಚಿಸಿದ್ದಾನೆ .
  • ಶ್ರವಣಬೆಳಗೊಳ ಚಂದ್ರಪ್ರಭಾ ಬಸದಿ ಇವನ ನಿರ್ಮಾಣ ,

ನಾಲ್ಕನೇ ರಾಚಮಲ್ಲ ( ಕ್ರಿ.ಶ. 975-986 ):-

  •  ಗಂಗರ ಕೊನೆಯ ಪ್ರಸಿದ್ಧ ಅರಸ
  • ಇವರ ಪ್ರಸಿದ್ದ ಮಂತ್ರಿ ಮತ್ತು ದಂಡನಾಯಕ ಚಾವುಂಡರಾಯ .
  • ಚಾವುಂಡರಾಯನು 2 ನೇ ಮಾರಸಿಂಹನ ( ಕ್ರಿ.ಶ. 963-974 ) ಕಾಲದಿಂದಲೂ ಮಂತ್ರಿಯಾಗಿದ್ದನು .
  •  ಚಾವುಂಡರಾಯ ಕನ್ನಡದಲ್ಲಿ ಚಾವುಂಡರಾಯ ಪುರಾಣ ಅಥವಾ ತ್ರಿಷಷ್ಟಿಲಕ್ಷಣ ಮಹಾಪುರಾಣವನ್ನು ಮತ್ತು ಸಂಸ್ಕೃತದಲ್ಲಿ ಚರಿಶ್ರಸಾರವನ್ನು ಬರೆದಿದ್ದಾನೆ .
  • ಚಾವುಂಡರಾಯ ಶ್ರವಣಬೆಳಗೊಳದಲ್ಲಿ ಕ್ರಿ.ಶ. 981-982ರಲ್ಲಿ ಜಗದ್ವಿಖ್ಯಾತ ಬಾಹುಬಲಿ ಅಥವಾ ಗೊಮಟೇಶ್ವರ ವಿಗ್ರಹವನ್ನು ಕೆತ್ತಿಸಿದೆ . ಹಾಗೆಯೇ ಅಲ್ಲಿ ಚಾವುಂಡರಾಯ ಬಸದಿ ನಿರ್ಮಿಸಿದ್ದಾನೆ .
  • ಇವನ ಕಾಲದಲ್ಲಿ ದಂಗೆಯೆದ್ದ ಮದುರಚಾಯ್ಯನನ್ನು ಸದೆಬಡಿದು ಗಂಗರಾಜ್ಯ ರಕ್ಷಿಸಿದ ಚಾವುಂಡರಾಯನಿಗೆ “ ಸಮರ ಪರಶುರಾಮ ” ಎಂಬ ಬಿರುದು ನೀಡಿದರು .
  • 4 ನೇ ರಾಚಮಲ್ಲನ ತಂದೆ 2 ನೇ ಮಾರಸಿಂಹನು ಶ್ರವಣಬೆಳಗೊಳದಲ್ಲಿ ಸಲ್ಲೇಖನ ವ್ರತ ಆಚರಿಸಿದರು .

 

ಭೂತುಗ -2 :- 

  • ಕ್ರಿ.ಶ. 949 ರ ತಕ್ಕೊಲಂ ಕದನದಲ್ಲಿ ರಾಷ್ಟ್ರಕೂಟ 3 ನೇ ಕೃಷ್ಣನಿಗೆ ಸಹಾಯಕನಾಗಿ – ಚೋಳದೊರೆ ರಾಜ್ಯಾದಿತನನ್ನು ಕೊಂದು ಹಾಕಿದೆ .
  • ಇವನ ಕಾಲದಲ್ಲಿ ಆತಕೂರಿನಲ್ಲಿ ಹಂದಿಯೊಂದಿಗೆ ಹೋರಾಡಿ ಸಾವನ್ನಪ್ಪಿದ . ನಾಯಿಯ ನೆನಪಿಗಾಗಿ ವೀರಗಲ್ಲನ್ನು ನಡೆಸಲಾಗಿದೆ
  • ಗಂಗರ ಕೊನೆಯ ದೊರೆ ರಕ್ಕಸಗಂಗನನ್ನು ಚೋಳ ದೊರೆ 1 ನೇ ರಾಜೇಂದ್ರ ಚೋಳನು ಸೋಲಿಸಿ ಗಂಗರಾಜ್ಯವನ್ನು ಆಕ್ರಮಿಸಿದ ಇದರೊಂದಿಗೆ ಗಂಗರ ಆಳ್ವಿಕೆ ಕೊನೆಯಾಯಿತು .

 ಕಲೆ ಮತ್ತು ವಾಸ್ತುಶಿಲ್ಪ:- 

  •  ಇವರ ವಾಸ್ತುಶಿಲ್ಪ ರಚನೆಯು ಪಲ್ಲವ ಮತ್ತು ಅದರ ಕಲಾಮಿಶ್ರಣವಾಗಿದೆ .
  •  ಕಂಬಗಳ ಅಡಿಯಲ್ಲಿ ಸಿಂಹಗಳ ಕೆತ್ತನೆ , ಪಿರಮಿಡ್ಡನ ರಚನೆಯ ಗೋಪುರ
  • ಚೌಕಾಕಾರದ ಕಂಬಗಳ ಕೆತ್ತನೆ , ಇವರ ವಾಸ್ತುಶಿಲ್ಪ ಶೈಲಿ ಲಕ್ಷಣಗಳು .

 

ಪ್ರಮುಖ ದೇವಾಲಯಗಳು :-

  • ಕೋಲಾರದ ಕೋಲಾರಮ್ಮನ ದೇವಾಲಯ
  • ನದಿಯ ಭೋಗ ನಂದೀಶ್ವರ
  • ವರುಣದಲ್ಲಿವ – ಮಹಾಲಿಂಗೇಶ್ವರ ದೇವಾಲಯ
  • ಬೇಗೂರಿನ ನಗರೇಶ್ವರ
  • ಮನೆಯ ಕಪಿಲೇಶ್ವರ ನರಸಮಂಗಲದ – ವಿಷ್ಣು ಮತ್ತು ಶಿವ ದೇವಾಲಯ
  • ತಲಾಕಾಡಿನ ಮರುಳೇಶ್ವರ ಮತ್ತು ಪಾತಳೇಶ್ವರ ದೇವಾಲಯ
ತಲಕಾಡಿನ ಗಂಗರ ಇತಿಹಾಸ | Ganga dynasty In Kannada Best Top1 Information
ತಲಕಾಡಿನ ಗಂಗರ ಇತಿಹಾಸ | Ganga dynasty In Kannada Best Top1 Information

ಜೈನ ಬಸದಿಗಳು:-

  • ಶ್ರವಣಬೆಳಗೊಳದಲ್ಲಿನ ಚಂದ್ರಗಿರಿ ಬೆಟ್ಟದಲ್ಲಿ 14 ಬಸದಿಗಳವ – ಇವುಗಳಲ್ಲಿ ಚಂದ್ರ , ಪ್ರಭಾ ಬಸದಿ , ಚಾವುಂಡರಾಯ ಬಸದಿ , ಪಾರ್ಶ್ವನಾಥ ಬಸದಿ ಪ್ರಮುಖವಾದವು .
  •  ಕಂಬದಹಳ್ಳಿಯಲ್ಲಿ ಪಂಚಕೂಟ ಜೈನ ಬಸದಿಗಳಿವೆ
  1. ಗಂಗ ರಾಜ್ಯದ ಸ್ಥಾಪಕರು – ದಡಿಗ ಮತ್ತು ಮಾಧವರು
  2. ಗಂಗರ ಕೊನೆಯ ರಾಜಧಾನಿ – ಮಾನ್ಯ ಪುರ
  3. ಮಾನ್ಯಪುರ ಪ್ರಸ್ತುತ – ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನಲ್ಲಿದೆ
  4. ದುರ್ವೀನಿತನ ಗುರುವಿನ ಹೆಸರು – ಪೂಜ್ಯಾಪಾದ
  5. ಪೂಜ್ಯಪಾದನ ಕೃತಿ – ಶಬ್ದಾವತಾರ
  6. ಚಾವುಂಡರಾಯನ ಕನ್ನಡ ಕೃತಿ ಚಾವುಂಡರಾಯ ಪುರಾಣದ ವಿಷಯ – ಜೈನ 24 ನೇ ತೀರ್ಥಂಕರನನ್ನು ಕುರಿತದ್ದಾಗಿದೆ
  7. ಪೆರ್ಮಾಡಿ ಎಂಬ ಬಿರುದು ಧರಿಸಿದ್ದ ಗಂಗರ ದೊರೆ – ಶ್ರೀಪುರುಷ
  8. ಶ್ರೀಪುರುಷನ ಕಾಲದ ಗಂಗರ ರಾಜಧಾನಿ – ಮಾನ್ಯ ಪುರ
  9. ಗಂಗರ ಆಡಳಿತವನ್ನು ಕೊನೆಗಾಮಿಸಿದವನು – ಚೋಳ ದೊರೆ ಒಂದನೇ ರಾಜೇಂದ್ರ ಚೋಳ
  10. ಸೈಗೊಟ್ಟ ಶಿವಮಾರ ಎಂಬ ಬಿರುದುಳ್ಳ ಅರಸ – 2 ನೇ ಶಿವಮಾರ
  11. ದುರ್ವೀನಿತನ ತಂದೆ ತಾಯಿಗಳು – ಅವನಿತ ಹಾಗೂ ಜೇಷ್ಠದೇವಿ
  12. ವೀರ ಮಾರ್ತಾಂಡ ಎಂಬ ಬಿರುದ್ದನ್ನ ಹೊಂದಿದವರು – ಚಾವುಂಡರಾಯ
  13. ಚಾವುಂಡರಾಯ ಪಾಂಡ್ಯ ಅರಸ ರಾಜ್ಯಾಧಿತ್ಯನನ್ನ ಸೋಲಿಸಿ ಧರಿಸಿದ್ದ ಬಿರುದು – ರಣಸಿಂಗ ಸಿಂಹ
  14. ಗಂಗರ ಕೊನೆಯ ಅರಸ – ರಕ್ಕಸ ಗಂಗ
  15. ಗಂಗರ ಕೊನೆಯ ಪ್ರಮುಖ ದೊರೆ – 4 ನೇ ರಾಚಮಲ್ಲ
  16.  ಇವರ ಮೊದಲ ರಾಜಧಾನಿ – ಕೋಲಾರ ಅಥವಾ ಕುವಲಾಲ
  17. ನಂತರದ ರಾಜಧಾನಿಗಳು – ತಲಕಾಡು , ಮಾನ್ಯಪುರ
  18. ಲಾಂಛನ – ಮದಗಜ ( ಸಲಗ )
  19. ಕರ್ನಾಟಕವನ್ನು ದೀರ್ಘಕಾಲ ಆಳಿದ ಮನೆತನ .
  20. ಗುರು – ಸಿಂಹನಂದ ಪ್ರಮುಖ ಅರಸ – ಶ್ರೀಪುರುಷ ( ಪುಸ್ತಕ – ಗಜಶಾಸ್ತ್ರ )
  21. ಚಾವುಂಡರಾಯನು , 4 ನೇ ರಾಜಮಲ್ಲನ ಆಡಳಿತ ಮಂತ್ರಿಯಾಗಿದ್ದು , ಕ್ರಿಶ 982 ರಲ್ಲಿ ಶ್ರವಣಬೆಳಗೋಳದಲ್ಲಿ 58 ಅಡಿ ಏಕಶಿಲಾ ಗೋಮ್ಮಟೇಶ್ವರ ಪ್ರತಿಮೆಯನ್ನು ಪ್ರತಿಷ್ಠಾಪಿಸಿದರು .
  22. 12 ವರ್ಷಗಳಿಗೊಮ್ಮೆ ಮಹಾ ಮಸ್ತಕಾಭಿಷೇಕವನ್ನು ನಡೆಸುತ್ತಾರೆ .
  23. ಇವರು ಜೈನಧರ್ಮ ಅನುಯಾಯಿಗಳು .
  24. ಕೃತಿಗಳು – * ಚಾವುಂಡರಾಯನ ‘ ಚಾವುಂಡರಾಯ ಪುರಾಣ ‘
  25. ಭಾರವಿಯ ಕಿರತಾರ್ಜುನೀಯ

 

ಇತರೆ ವಿಷಯಗಳನ್ನು ಓದಿ :-

Leave a Reply

Your email address will not be published. Required fields are marked *