ರಾಷ್ಟ್ರೀಯ ( ರಾಷ್ಟ್ರ ) ಗೀತೆ
- ನಮ್ಮ ರಾಷ್ಟ್ರೀಯ ಗೀತೆ ‘ ಜನಗಣಮನ ‘ ವನ್ನು ರವೀಂದ್ರನಾಥ ಠಾಗೂರ್ ರಚಿಸಿದರು .
- ಜನಗಣಮನ ಗೀತೆಯನ್ನು ಮೊಟ್ಟಮೊದಲ ಬಾರಿಗೆ 1911 . ಡಿಸೆಂಬರ್ 27 ರಂದು ಕಲ್ಕತ್ತಾದಲ್ಲಿ ನಡೆದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಮಾವೇಶದಲ್ಲಿ ಹಾಡಲಾಯಿತು .
- ಠಾಗೂರ್‌ರ ‘ ಜನಗಣ ಮನ ‘ ಕ್ಕೆ 2011 , ಡಿಸೆಂಬರ್ 27 ಕ್ಕೆ 100 ವರ್ಷ ತುಂಬಿತು .
- ರಾಷ್ಟ್ರೀಯ ಗೀತೆಯನ್ನು ರವೀಂದ್ರನಾಥ ಠಾಗೂರ್ ” ಗೀತಾಂಜಲಿ ‘ ಗ್ರಂಥದಲ್ಲಿ ರಚಿಸಿದರು .
- ‘ ಗೀತಾಂಜಲಿ ‘ ಗ್ರಂಥಕ್ಕೆ , ರವೀಂದ್ರನಾಥ ಠಾಗೂರ್‌ರವರಿಗೆ 1913 ರಲ್ಲಿ ನೊಬೆಲ್ (ಸಾಹಿತ್ಯ ಕ್ಷೇತ್ರ ) ಪ್ರಶಸ್ತಿ ದೊರೆತಿದೆ .
- ನೊಬೆಲ್ ಪ್ರಶಸ್ತಿ ಪಡೆದ ಏಷ್ಯಾದ ಮೊದಲ ವ್ಯಕ್ತಿ ರವೀಂದ್ರನಾಥ ಠಾಗೂರ್ .
- 1915 ರಲ್ಲಿ ಬ್ರಿಟಿಷ್ ಸಾಮ್ರಾಜ್ಯ , ರವೀಂದ್ರನಾಥ ಠಾಗೂರ್‌ರವರಿಗೆ ನೈಟ್‌ಹುಡ್ ( knighthood ) ಎಂಬ ಬಿರುದನ್ನು ನೀಡಿ ಸತ್ಕರಿಸಿತು . ಆದರೆ ಠಾಗೂರರು ಈ ಪ್ರಶಸ್ತಿಯನ್ನು ನಿರಾಕರಿಸಿದರು .
- ವಿಶ್ವ ಮಾನವತ್ವ , ದೇಶ ಭಕ್ತಿ – ಭಾವಗಳಿಗೆ ಪ್ರತೀಕವಾಗಿ ನಿಲ್ಲುವ ‘ ಜನಗಣಮನ ‘ , ರಾಷ್ಟ್ರೀಯ ಗೀತೆಯಾಗಿ 1950 ರ ಜನವರಿ 24 ರಂದು ಜಾರಿಗೆ ಬಂದಿತು .
- ರಾಷ್ಟ್ರೀಯ ಗೀತೆ ಮೊದಲು ಬೆಂಗಾಲಿ ಭಾಷೆಯಲ್ಲಿ ಬರೆಯಲ್ಪಟ್ಟಿತು .
- 1912 ರ ಜನವರಿಯಲ್ಲಿ ‘ ಭಾರತ ವಿಧಾತ ‘ ಹೆಸರಿನೊಂದಿಗೆ ಠಾಗೂರ್ ‘ ತತ್ವ ಬೋಧಿನಿ ‘ ಪತ್ರಿಕೆಯಲ್ಲಿ ಪ್ರಕಟಿಸಿದರು .
- ಠಾಗೂರ್‌ರ ‘ ಜನಗಣಮನ ‘ ಭಾರತ ದೇಶಕ್ಕೆ , ಅಮರ್ ಸೋನಾರ್‌ಬಾಂಗ್ಲಾ ‘ ಬಾಂಗ್ಲಾದೇಶಕ್ಕೆ ರಾಷ್ಟ್ರೀಯ ಗೀತೆಗಳಾಗಿ ಸ್ವೀಕರಿಸಲ್ಪಟ್ಟವು .
- ಮಾರ್ನಿಂಗ್ ಸಾಂಗ್ ಆಫ್ ಇಂಡಿಯಾ ‘ ಎಂಬ ನಾಮದೊಂದಿಗೆ 1919 ರಲ್ಲಿ ರಾಷ್ಟ್ರಗೀತೆ ( ಅಂದಿನ ಕೋಲಾರ ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ರವೀಂದ್ರನಾಥ ಟ್ಯಾಗೂರರು ಕಾರ್ಯನಿಮಿತ್ತ ಬಿಡದಿಯಾಗಿದ್ದಾಗ ) ಇಂಗ್ಲಿಷ್‌ಗೆ ಅನುವಾದಿಸಲ್ಪಟ್ಟಿತು .
- ರಾಷ್ಟ್ರೀಯ ಗೀತೆಯನ್ನು ಪೂರ್ಣವಾಗಿ ಹಾಡಲು ಬೇಕಾಗಿರುವ ಸಮಯ 52 ಸೆಕೆಂಡುಗಳು , ಶಾರ್ಟ್ ವರ್ಷನ್‌ನಲ್ಲಿ ಹಾಡಲು ಬೇಕಾಗಿರುವ ಸಮಯ 30 ಸೆಕೆಂಡ್‌ಗಳು .
ಭಾರತದ ರಾಷ್ಟ್ರದ್ವಜ
Spardhavani App Download Now
ರಾಷ್ಟ್ರೀಯ ಚಿಹ್ನೆ
- ನಮ್ಮ ರಾಷ್ಟ್ರೀಯ ಚಿಹ್ನೆ ‘ ಲಯನ್ ಕ್ಯಾಪಿಟಲ್ ‘ ( ಸಾರನಾಥದಲ್ಲಿನ ಅಶೋಕನ ಧರ್ಮಸೂಪದ ಮೇಲಿರುವ ನಾಲ್ಕು ಸಿಂಹಗಳು ) .
- ‘ ಸತ್ಯಮೇವ ಜಯತೇ ‘ ದೇವನಾಗರಿ ಲಿಪಿಯಲ್ಲಿರುವ ವಾಕ್ಯ ಈ ಚಿಹ್ನೆಯ ಪೀಠಭಾಗದ ಮೇಲೆ ಇರುತ್ತದೆ . ಈ ವಾಕ್ಯವನ್ನು ಮುಂಡಕೋಪನಿಷತ್‌ನಿಂದ ಸ್ವೀಕರಿಸಲಾಗಿದೆ .
- ಜನವರಿ 26 , 1950 ರಂದು ಈ ಚಿಹ್ನೆಯನ್ನು ಸಂವಿಧಾನ ಸಭೆ , ನಮ್ಮ ‘ ರಾಷ್ಟ್ರೀಯ ಚಿಹ್ನೆ ಯಾಗಿ ಅಂಗೀಕರಿಸಿತು .
- ರಾಷ್ಟ್ರೀ ಯ ಚಿಹ್ನೆಯ ವೃತ್ತಾಂತ :ನಾಲ್ಕು ಸಿಂಹಗಳ . ಚಿಹ್ನೆಯನ್ನು ಅಶೋಕ ಕ್ರಿ.ಪೂ. 242-232ರ ನಡುವೆ ಸಾರನಾಥದಲ್ಲಿ ತನ್ನ ಧರ್ಮಸೂಪದ ಮೇಲೆ ನಿರ್ಮಿಸಿದನು .
- ಗೌತಮ ಬುದ್ಧ ತನ್ನ ಮೊದಲ ಸಂದೇಶವನ್ನು ನೀಡಿದ ಸ್ಥಳದಲ್ಲೇ ಅಶೋಕ ಈ ಧರ್ಮಸ್ತೂಪವನ್ನು ನಿರ್ಮಿಸಿದನು
Spardhavani App Download Now