Yadgir Anganwadi Recruitment 2022 | Anganwadi Supervisor Vacancy

Yadgir Anganwadi Recruitment 2022 | Anganwadi Supervisor Vacancy

Yadgir Anganwadi Recruitment 2022, Anganwadi Supervisor Vacancy, Women and Child Development Department, ಯಾದಗಿರಿಯಲ್ಲಿ ಅಂಗನವಾಡಿ ಉದ್ಯೋಗಾವಕಾಶ

Yadgir Anganwadi Recruitment 2022

ಸರ್ಕಾರದ ಆದೇಶ ಸಂಖ್ಯೆ : ಮಮಇ 303 ಐಸಿಡಿ 2017 ದಿನಾಂಕ : 23.09.2017 ರ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ನೇಮಕಾತಿಯ ಪರಿಷ್ಕೃತ ಮಾರ್ಗಸೂಚಿಯಂತೆ ಮತ್ತು ಸರ್ಕಾರದ ಸೇರ್ಪಡೆ ಆದೇಶ ಸಂಖ್ಯೆ : ಮಮಇ 303 ಐಸಿಡಿ 2017 ದಿನಾಂಕ : 01.12.2017 ಹಾಗೂ

ಸರ್ಕಾರದ ತಿದ್ದುಪಡಿ ಆದೇಶ ಸಂಖ್ಯೆ : ಮಮಇ 152 ಐಸಿಡಿ 2021 ದಿನಾಂಕ : 01.06.2021 ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿರವರ ಅನುಮೋದನೆಯಂತೆ , ಯಾದಗಿರಿ ಜಿಲ್ಲೆಯ 04 – ಶಿಶು ಅಭಿವೃದ್ಧಿ ಯೋಜನೆಗಳಲ್ಲಿ

ಖಾಲಿ ಇರುವ 07 – ಅಂಗನವಾಡಿ ಕಾರ್ಯಕರ್ತೆ ( ಅನುಬಂಧ -1 ರಲ್ಲಿ ) ಮತ್ತು 24 – ಅಂಗನವಾಡಿ ಸಹಾಯಕಿ ( ಅನುಬಂಧ -2 ರಲ್ಲಿ ) ಗೌರವ ಸೇವೆಯ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ( ವೆಬ್ ಸೈಟ್ ವಿಳಾಸ : anganwadirecruit.kar.nic.in ) ಮೂಲಕ ಈ ಕೆಳಗಿನ ಮಾರ್ಗಸೂಚಿ / ನಿಬಂಧನೆಗಳು ತಿಳಿಸಿರುವಂತೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು ,

ಅರ್ಜಿ ಸಲ್ಲಿಸುವ ಪ್ರಾರಂಭದ ದಿನಾಂಕ : 04.03.2022 ಆಗಿದ್ದು ಕೊನೆಯ ದಿನಾಂಕ : 31.03.2022 ರ ಇರುತ್ತದೆ .

ವಿದ್ಯಾರ್ಹತೆ :

ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಕನಿಷ್ಠ 4ನೇ ತರಗತಿ ಮತ್ತು ಗರಿಷ್ಟ 9ನೇ ತರಗತಿ ಮತ್ತು ತೇರ್ಗಡೆಯಾಗಿರಬೇಕು ಹಾಗು ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್.ಎಸ್‌.ಎಲ್‌.ಸಿ ವಿದ್ಯಾರ್ಹತೆ ಹೊಂದಿರಬೇಕು.

ವಯೋಮಿತಿ :

ಮಾರ್ಚ್ 29/2022ರ ಅನ್ವಯ ಕನಿಷ್ಟ 18 ರಿಂದ ಗರಿಷ್ಟ 35 ವರ್ಷ ವಯೋಮಿತಿಯೊಳಗಿರಬೇಕು.

ವಿಕಲಚೇತನ ಅಭ್ಯರ್ಥಿಗಳಿಗೆ ಮಾತ್ರ 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.

Women and Child Development Department

ಇತರೆ ನಿಬಂಧನೆಗಳು

1. ಅಂಗನವಾಡಿ ಕಾರ್ಯಕರ್ತೆ ಹುದ್ದೆಯು ಗೌರವಧನ ಆಧಾರಿತ ಸೇವೆಯಾಗಿದ್ದು , ಮೀಸಲಾತಿ ತತ್ವಗಳು ಅನ್ವಯಿಸುವುದಿಲ್ಲ .

ಖಾಲಿ ಇರುವ ಅಂಗನವಾಡಿ ಕೇಂದ್ರದ ಗ್ರಾಮಾಂತರ ಪ್ರದೇಶದ ಕಂದಾಯ ಗ್ರಾಮ / ನಗರ ಪ್ರದೇಶದ ಕಂದಾಯ ವಾರ್ಡ್‌ನ ಒಟ್ಟು ಜನಸಂಖ್ಯೆಯು ಶೇಕಡಾ 40 ಕ್ಕಿಂತ ಹೆಚ್ಚು

ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ವರ್ಗದವರನ್ನು ಒಳಗೊಂಡಿದ್ದಲ್ಲಿ ಆ ವರ್ಗದವರನ್ನು ಮಾತ್ರ ಆ ಗ್ರಾಮದ ಸದರಿ ಕೇಂದ್ರಕ್ಕೆ ಕಾರ್ಯಕರ್ತೆ ಹುದ್ದೆಗೆ ನಿಗದಿತ ವಿದ್ಯಾರ್ಹತೆಯ ಅನುಸಾರ ಪರಿಗಣಿಸಲಾಗುವುದು .

2. ಶೇಕಡಾ 25 ಕ್ಕಿಂತ ಹೆಚ್ಚು ಅಲ್ಪಸಂಖ್ಯಾತ ( ಮುಸ್ಲಿಮರು , ಕ್ರಿಶ್ಚಿಯನ್ನರು , ಜೈನರು , ಬೌದ್ಧರು , ಪಾರ್ಸಿಗಳು ಮತ್ತು ಸಿಕ್ಕರು ) ಜನಸಂಖ್ಯೆಯಿರುವ ಇರುವ ಪ್ರದೇಶದ ಅಂಗನವಾಡಿ ಕೇಂದ್ರಗಳಲ್ಲಿ ಕನ್ನಡ ಭಾಷೆಯೊಂದಿಗೆ ಆಯಾ ಅಲ್ಪ ಸಂಖ್ಯಾತ ಸಮುದಾಯದ ಭಾಷೆ ಬಲ್ಲವರನ್ನು ಕಾರ್ಯಕರ್ತೆ / ಸಹಾಯಕಿ ಹುದ್ದೆಗೆ ಆಯ್ಕೆ ಮಾಡಲಾಗುವುದು .

3. ಅಂಗನವಾಡಿ ಕಾರ್ಯಕರ್ತೆ / ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸಿದವರಲ್ಲಿ ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಸಮಾನ ಅಂಕ ಗಳಿಸಿದ್ದಲ್ಲಿ ವಯೋಹಿರಿಯರನ್ನು ಪರಿಗಣಿಸಲಾಗುವುದು .

4. ಅಂಗನವಾಡಿ ಕಾರ್ಯಕರ್ತೆಯರ ಆಯ್ಕೆಗೆ ಎಸ್.ಎಸ್.ಎಲ್.ಸಿ ಕನಿಷ್ಠ ವಿದ್ಯಾರ್ಹತೆ ನಿಗಧಿಪಡಿಸಲಾಗಿದ್ದು , ಎಸ್.ಎಸ್.ಎಲ್.ಸಿಯಲ್ಲಿ ಪಡೆದಿರುವ ಶೇಕಡವಾರು ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು ,

ಹಾಗೂ ಮಾಜಿ ದೇವದಾಸಿಯರು , ಯೋಜನಾ ನಿರಾಶ್ರಿತರು , ವಿಚ್ಛೇದಿತ ಮಹಿಳೆಯರು , ಪರಿತ್ಯಕ್ತಿಯರು ಹೆಚ್ಚಿನ

5 ಬೋನಸ್ ಅಂಕಗಳಿಗೆ ಅರ್ಹರಿರುತ್ತಾರೆ . ಈ ಬಗ್ಗೆ ಸಕ್ಷಮ ಪ್ರಾಧಿಕಾರದಿಂದ ಪಡೆದ ದಾಖಲಾತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು

ಆನ್ ಲೈನ್‌ನಲ್ಲಿ ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲೆಗಳು


1 ) ಅರ್ಜಿ ನಿಗದಿತ ನಮೂನೆಯಲ್ಲಿ ( ಆನ್‌ಲೈನ್‌ನಲ್ಲಿ )

2 ) ಜನನ ಪ್ರಮಾಣ ಪತ್ರ / ಜನ್ಮ ದಿನಾಂಕವಿರುವ ಎಸ್.ಎಸ್.ಎಲ್.ಸಿ ಅಂಕಪಟ್ಟಿ ,

3 )ನಿಗದಿತ ವಿದ್ಯಾರ್ಹತೆಯ ಅಂಕಪಟ್ಟಿ ,

4 ) ಮೂರು ವರ್ಷದೊಳಗಿನ ತಹಶೀಲ್ದಾರ್‌ರವರಿಂದ ಪಡೆದ ವಾಸಸ್ಥಳ ದೃಢೀಕರಣ ಪತ್ರ

5 ) ಅಭ್ಯರ್ಥಿಗಳ ಜಾತಿ ಪ್ರಮಾಣ ಪತ್ರ

6 ) ವಿಧವೆಯಾಗಿದ್ದಲ್ಲಿ , ಪತಿಯ ಮರಣ ಪ್ರಮಾಣ ಪತ್ರ , ( ವಿಧವಾ ವೇತನದ ದೃಢೀಕರಣವನ್ನು ಪರಿಗಣಿಸುವುದಿಲ್ಲ )

7 ) ರೈತ ಮಹಿಳೆ ವಿಧವೆಯಾಗಿದ್ದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿ ಎಂದು ಉಪ ವಿಭಾಗಾಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ

8 ) ವಿಕಲಚೇತನರಾಗಿದ್ದಲ್ಲಿ , ಅಂಗವಿಕಲತೆ ಪ್ರಮಾಣ ಪತ್ರ ( ಅಂಗವಿಕಲ ವೇತನದ ದೃಢೀಕರಣವನ್ನು ಪರಿಗಣಿಸುವುದಿಲ್ಲ ) .

9) ವಿಚ್ಛೇದಿತರಾಗಿದ್ದಲ್ಲಿ , ವಿಚ್ಛೇದನ ಪ್ರಮಾಣ ಪತ್ರ ( ನ್ಯಾಯಾಲಯದಿಂದ ವಿಚ್ಛೇಧನ ಪತ್ರ )

10 ) ಮಾಜಿ ದೇವದಾಸಿಯಾಗಿದ್ದಲ್ಲಿ ದೇವದಾಸಿ ಬಗ್ಗೆ ಮಹಿಳಾ ಅಭಿವೃದ್ಧಿ ನಿಗಮದ ಅಧಿಕಾರಿಗಳಿಂದ ಪ್ರಮಾಣ ಪತ್ರ

11 ) ಪರಿತ್ಯಕ್ತಿಯಾಗಿದ್ದಲ್ಲಿ ಪರಿತ್ಯಕ್ಕೆ ಬಗ್ಗೆ ಗ್ರಾಮ ಪಂಚಾಯ್ತಿಯಿಂದ ಪಡೆದ ಪ್ರಮಾಣ ಪತ್ರ ,

12 ) ಇಲಾಖಾ ಸುಧಾರಣಾ ಸಂಸ್ಥೆ ರಾಜ್ಯ ಸುಧಾರಣಾ ಸಂಸ್ಥೆಯ ನಿವಾಸಿಯಾಗಿದ್ದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ ( ಇಲಾಖಾ ಸಂಸ್ಥೆಯ ನಿವಾಸಿಯಾಗಿದ್ದಲ್ಲಿ ಮಾತ್ರ )

13 ) ಯೋಜನಾ ನಿರಾಶ್ರಿತರಾಗಿದ್ದಲ್ಲಿ ತಹಶೀಲ್ದಾರ್‌ರವರಿಂದ ಪಡೆದ ಪ್ರಮಾಣ ಪತ್ರ

Yadgir Anganwadi Recruitment 2022

ಸಾಮಾನ್ಯ ಅರ್ಹತೆಗಳು :

1. ಅರ್ಜಿ ಸಲ್ಲಿಸಲು ನಿಗಧಿಪಡಿಸಿರುವ ಅಂತಿಮ ದಿನಾಂಕ : 29-03-2022ಕ್ಕೆ ಅಭ್ಯರ್ಥಿಯ ವಯಸ್ಸು 18 ರಿಂದ 35 ವಯೋಮಿತಿಯೊಳಗಿರಬೇಕು . ವಿಕಲಚೇತನ ಅಭ್ಯರ್ಥಿಯಾಗಿದ್ದಲ್ಲಿ ವಯಸ್ಸು 45 ವಯೋಮಿತಿ ಯೊಳಗಿರಬೇಕು .

2. ಅಭ್ಯರ್ಥಿಯು ಸ್ಥಳೀಯ ಮಹಿಳೆಯಾಗಿದ್ದು , ಅಂಗನವಾಡಿ ಕಾರ್ಯಕರ್ತೆ ಹುದ್ದೆ ಖಾಲಿ ಇರುವ ಅದೇ ಗ್ರಾಮ / ಪುರಸಭೆ ವ್ಯಾಪ್ತಿಯಾಗಿದ್ದಲ್ಲಿ ವಾರ್ಡ್ ವ್ಯಾಪ್ತಿಯ ನಿವಾಸಿಯಾಗಿರಬೇಕು .

3.ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗಧಿ ಪಡಿಸಿದ ದಿನಾಂಕದ ಮೂರು ವರ್ಷದೊಳಗಿನ ಸಂಬಂಧಿಸಿದ ತಾಲೂಕಿನ ತಹಶೀಲ್ದಾರ್ ಉಪತಹಶೀಲ್ದಾರ್‌ರವರಿಂದ ಪಡೆದ ವಾಸಸ್ಥಳ ದೃಢೀಕರಣ ಪತ್ರವನ್ನು ಅರ್ಜಿಯೊಂದಿಗೆ ಕಡ್ಡಾಯವಾಗಿ ಸಲ್ಲಿಸತಕ್ಕದ್ದು .

ಇದನ್ನು ಓದಿ: ರಾಜೇಂದ್ರ ಪ್ರಸಾದ್ ಅವರ ಜೀವನ ಚರಿತ್ರೆ

4. ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು , ಹೆಚ್ಚಿನ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದು . ಹೆಚ್ಚಿನ ವಿದ್ಯಾರ್ಹತೆಯನ್ನು ಆಯ್ಕೆಗೆ ಅಂಕಗಳಿಸಿದ ಪರಿಗಣಿಸಲಾಗುವುದಿಲ್ಲ .

Yadgir Anganwadi Recruitment 2022

5. ಕರ್ನಾಟಕ ಪರೀಕ್ಷಾ ಮಂಡಳಿ ನಡೆಸುವ ಮುಕ್ತ ಶಾಲೆ ಮುಕ್ತ ವಿದ್ಯಾಲಯಗಳಲ್ಲಿ ಎಸ್.ಎಸ್.ಎಲ್.ಸಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳು ಪ್ರಥಮ / ದ್ವಿತೀಯ ಭಾಷೆಯಾಗಿ ಕನ್ನಡ ಹಾಗೂ

ಸಾಮಾನ್ಯ ಗಣಿತ ಮತ್ತು ಸಮಾಜ ಶಾಸ್ತ್ರ / ಸಮಾಜ ವಿಜ್ಞಾನ ವಿಷಯಗಳನ್ನು ಕಡ್ಡಾಯವಾಗಿ ವ್ಯಾಸಂಗ ಮಾಡಿದ್ದು , ಪ್ರಮಾಣ ಪತ್ರ / ಅಂಕ ಪಟ್ಟಿಯು ಗರಿಷ್ಠ 625 , ಕನಿಷ್ಠ 219 ಅಂಕಗಳನ್ನು ಹೊಂದಿದ್ದಲ್ಲಿ , ಅಂತಹ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದು .

6. ಬೇರೆ ರಾಜ್ಯಗಳಲ್ಲಿ ವ್ಯಾಸಂಗ ಮಾಡಿದ್ದು , ಕನ್ನಡವನ್ನು ಪ್ರಥಮ / ದ್ವಿತೀಯ ಭಾಷೆಯಾಗಿ ಅಭ್ಯಾಸ ಮಾಡಿದ್ದರೂ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ನಿಗದಿಪಡಿಸಿದ ಗರಿಷ್ಠ ಅಂಕಗಳು

ಹಾಗೂ ಕರ್ನಾಟಕ ರಾಜ್ಯದಲ್ಲಿ ನಿಗದಿಪಡಿಸಿದ ಗರಿಷ್ಠ ಅಂಕಗಳಲ್ಲಿ ವ್ಯತ್ಯಾಸವಿದ್ದಲ್ಲಿ ಕರ್ನಾಟಕದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿಗಳನ್ನು ಮಾತ್ರ ಪರಿಗಣಿಸಲಾಗುವುದು .

anganwadi jobs in mysore

7. ಅಂಗನವಾಡಿ ಕಾರ್ಯಕರ್ತೆಯರು ಶಾಲಾಪೂರ್ವ ಶಿಕ್ಷಣವನ್ನು ಹಾಗೂ ದಾಖಲೆಗಳನ್ನು ಕನ್ನಡದಲ್ಲಿ ನಿರ್ವಹಿಸಬೇಕಾಗಿರುವುದರಿಂದ ಅಭ್ಯರ್ಥಿಗಳು

ಯಾವುದೇ ಭಾಷಾ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದರೂ ಹಾಗೂ ಯಾವುದೇ ರಾಜ್ಯದಲ್ಲಿ ವ್ಯಾಸಂಗ ಮಾಡಿದ್ದರೂ ಸಹ ಅವರು ಕನ್ನಡ ಭಾಷೆಯನ್ನು ಪ್ರಥಮ | ದ್ವಿತೀಯ ಭಾಷೆಯಾಗಿ ವ್ಯಾಸಂಗ ಮಾಡಿರಬೇಕು .

ಹಾಗೂ ಮಾತೃ ಭಾಷೆ ಕನ್ನಡವಲ್ಲದೇ ಇರುವ ಅಭ್ಯರ್ಥಿಗಳಿಗೆ ಆಯ್ಕೆ ಸಮಯದಲ್ಲಿ ಸಂದರ್ಶನ ಏರ್ಪಡಿಸಿ ಅವಶ್ಯವಿದ್ದಲ್ಲಿ ಕನ್ನಡ ಭಾಷೆಯ ಜ್ಞಾನ ಕುರಿತಂತೆ ಪರೀಕ್ಷಿಸಿ ಅವರನ್ನು ಆಯ್ಕೆ ಮಾಡುವ ಬಗ್ಗೆ ಸಮಿತಿ ನಿರ್ಧರಿಸುತ್ತದೆ .

8. ಆಸಿಡ್ ದಾಳಿಗೆ ತುತ್ತಾದ ಮಹಿಳೆಯರು ಅಂಗನವಾಡಿ ಕಾರ್ಯಕರ್ತೆ / ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದಲ್ಲಿ , ಇತರ ಎಲ್ಲಾ ಸ್ವೀಕೃತ ಅರ್ಜಿಗಳನ್ನು ಪರಿಗಣಿಸದೆ ಮೊದಲ

ಆದ್ಯತೆಯ ಮೇರೆಗೆ ನೇರವಾಗಿ ಅವರನ್ನೇ ಆಯ್ಕೆ ಮಾಡಲಾಗುವುದು . ಆದರೆ ಸ್ಥಳೀಯರು , ನಿಗದಿತ ವಿದ್ಯಾರ್ಹತೆ ಮತ್ತು ವಯೋಮಿತಿಯೊಳಗೆ ಇರಬೇಕಾಗಿರುವುದು ಕಡ್ಡಾಯ .

Yadgir Anganwadi Recruitment 2022

9. ಅಂಗನವಾಡಿ ಕಾರ್ಯಕರ್ತೆ / ಸಹಾಯಕಿ ಹುದ್ದೆಗಳಿಗೆ ಬಾಲನ್ಯಾಯ ಕಾಯ್ದೆಯಡಿ ಇಲಾಖೆಯ ಸಂಸ್ಥೆಗಳಲ್ಲಿ ಹಾಗೂ ರಾಜ್ಯ ಮಹಿಳಾ ನಿಲಯಗಳಲ್ಲಿ ಆಶ್ರಯ ಪಡೆದ ಹಾಲಿ / ಮಾಜಿ ನಿವಾಸಿಗಳು ಅರ್ಜಿ ಸಲ್ಲಿಸಿದ್ದಲ್ಲಿ

ಕ್ರಮ ಸಂಖ್ಯೆ ( 8 ) ನೇ ಯವರನ್ನು ಹೊರತು ಪಡಿಸಿ ಇತರೆ ಎಲ್ಲಾ ಸ್ವೀಕೃತ ಅರ್ಜಿಗಳನ್ನು ಪರಿಗಣಿಸದೇ ಎರಡನೇ ಆದ್ಯತೆ ಮೇರೆಗೆ ನೇರವಾಗಿ ಅವರನ್ನೇ ಆಯ್ಕೆ ಮಾಡಲಾಗುವುದು .

ಇವರಿಗೆ ವಾಸಸ್ಥಳ ದೃಢೀಕರಣ ಕಡ್ಡಾಯವಲ್ಲ ಆದರೆ ನಿಗದಿತ ವಿದ್ಯಾರ್ಹತೆ ಮತ್ತು ವಯೋಮಿತಿಯೊಳಗೆ ಇರಬೇಕಾಗಿರುವುದು ಕಡ್ಡಾಯ .

anganwadi jobs in mysore 2022

ಕೊಡಗು ಅಂಗನವಾಡಿ ನೇಮಕಾತಿ 2022

10. ಅ . ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ವಿಧವೆಯರು ಅರ್ಜಿ ಸಲ್ಲಿಸಿದಾಗ ಕ್ರಮ ಸಂಖ್ಯೆ ( 8 ) ಮತ್ತು ( 9 ) ರ ಅಭ್ಯರ್ಥಿಗಳನ್ನು ಹೊರತುಪಡಿಸಿ

ಇತರ ಎಲ್ಲಾ ಸ್ವೀಕೃತ ಇತರ ಎಲ್ಲಾ ಸ್ವೀಕೃತ ಅರ್ಜಿಗಳನ್ನು ಪರಿಗಣಿಸದೇ ನೇರವಾಗಿ ವಿಧವೆಯರನ್ನೇ ಆಯ್ಕೆ ಮಾಡಲಾಗುವುದು ,

Anganwadi Jobs in Mysore karnataka

ಆದರೆ ಅರ್ಜಿ ಸಲ್ಲಿಸಿದ ನಂತರ ವಿಧವೆಯಾದಲ್ಲಿ ಪರಿಗಣಿಸಲಾಗುವುದಿಲ್ಲ . ವಿಧವೆ ಅಭ್ಯರ್ಥಿಯು ಎಸ್.ಎಸ್.ಎಲ್.ಸಿ ಉತ್ತೀರ್ಣ ಸ್ಥಳೀಯರು ಮತ್ತು ವಯೋಮಿತಿಯೊಳಗಿರಬೇಕಾಗಿರುವುದು ಕಡ್ಡಾಯ.

Anganwadi Jobs in Mysore

ಅರ್ಜಿ ಸಲ್ಲಿಸುವುದು ಹೇಗೆ

ಅಧಿಸೂಚನೆಯನ್ನು ಓದಲು ಹಾಗು ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

ಅರ್ಜಿ ಸಲ್ಲಿಸಲು ಈಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

ಅಂಗನವಾಡಿ ಸಹಾಯಕಿಯ ಹುದ್ದೆಗಾಗಿ ಅರ್ಜಿ – ಕ್ಲಿಕ್ ಮಾಡಿ

ಅಂಗನವಾಡಿ ಕಾರ್ಯಕರ್ತೆಯ ಹುದ್ದೆಗಾಗಿ ಅರ್ಜಿ- ಕ್ಲಿಕ್ ಮಾಡಿ

ಕೊಡಗಿನಲ್ಲಿ ಅಂಗನವಾಡಿ ಉದ್ಯೋಗಾವಕಾಶ ಮಹಿಳೆಯರಿಗೆ ಗುಡ್ ನ್ಯೂಸ್ : ಇಲ್ಲಿ ನೋಡಿ

ಇತರೆ ವಿಷಯಗಳನ್ನು ಓದಲು ಈ ಕೆಳಗೆ ಕಾಣಿಸುವ ವಿಷಯದಮೇಲೆ ಕ್ಲಿಕ್ ಮಾಡಿ

ಪ್ರಬಂಧಗಳ ಪಟ್ಟಿ

Leave a Reply

Your email address will not be published. Required fields are marked *