Jobs in Kodagu, Kodagu Anganwadi Recruitment 2022, ಕೊಡಗು ಅಂಗನವಾಡಿ ನೇಮಕಾತಿ 2022, Anganwadi Recruitment in Karnataka, anganwadirecruit,govt jobs
Jobs in Kodagu
ಕೊಡಗು ಜಿಲ್ಲೆಯ ಮಡಿಕೇರಿ , ಸೋಮವಾರಪೇಟೆ ಮತ್ತು ಪೊನ್ನಂಪೇಟೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆಗಳ ಅಂಗನವಾಡಿ ಕಾರ್ಯಕರ್ತೆಯರನ್ನು ಗುರುತಿಸಲು ಉಲ್ಲೇಖ ( 1 ) ರ ನಿರ್ದೇಶನದಂತೆ ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತೀರ್ಣರಾದ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅನುಬಂಧ- I ರ ನಿಬಂಧನೆಗಳಿಗೆ ಒಳಪಟ್ಟು ,
ಅನುಬಂಧ -2 ರಲ್ಲಿ ನಮೂದಿಸಿರುವ ಗ್ರಾಮಗಳಲ್ಲಿ ಖಾಲಿ ಇರುವ ಅಂಗನವಾಡಿ ಕೇಂದ್ರಗಳಿಗೆ ಅರ್ಜಿಗಳನ್ನು ಆನ್ – ಲೈನ್ ಮೂಲಕ ಆಹ್ವಾನಿಸಿ ಪ್ರಕಟಣೆ ಹೊರಡಿಸಲಾಗಿದೆ .
Kodagu Anganwadi Recruitment 2022
ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ದಿನಾಂಕ : ಘಂಟೆಯೊಳಗೆ ಅಥವಾ ಮುಂಚಿತವಾಗಿ ಅರ್ಜಿಯನ್ನು 29-03-2022 ಸಂಜೆ 5:30 www.anganwadirecruit.kar.nic.in ನಲ್ಲಿ ಆನ್ಲೈನ್ ಮುಖಾಂತರ ಸಲ್ಲಿಸಲು ಸೂಚಿಸಿದೆ .
ನಿಗಧಿತ ಅವಧಿಯ ನಂತರ ಅರ್ಜಿಗಳು ಸ್ವೀಕಾರವಾಗುವುದಿಲ್ಲ ಮತ್ತು ಅಪೂರ್ಣ ಮಾಹಿತಿಯನ್ನೊಳಗೊಂಡ ಅರ್ಜಿಗಳು ತಿರಸ್ಕೃತವಾಗುತ್ತದೆ
ವಿದ್ಯಾರ್ಹತೆ :
ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಕನಿಷ್ಠ 4ನೇ ತರಗತಿ ಮತ್ತು ಗರಿಷ್ಟ 9ನೇ ತರಗತಿ ಮತ್ತು ತೇರ್ಗಡೆಯಾಗಿರಬೇಕು ಹಾಗು ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ ವಿದ್ಯಾರ್ಹತೆ ಹೊಂದಿರಬೇಕು.
ವಯೋಮಿತಿ :
ಮಾರ್ಚ್ 29/2022ರ ಅನ್ವಯ ಕನಿಷ್ಟ 18 ರಿಂದ ಗರಿಷ್ಟ 35 ವರ್ಷ ವಯೋಮಿತಿಯೊಳಗಿರಬೇಕು.
ವಿಕಲಚೇತನ ಅಭ್ಯರ್ಥಿಗಳಿಗೆ ಮಾತ್ರ 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.
ಇತರೆ ನಿಬಂಧನೆಗಳು
1. ಅಂಗನವಾಡಿ ಕಾರ್ಯಕರ್ತೆ ಹುದ್ದೆಯು ಗೌರವಧನ ಆಧಾರಿತ ಸೇವೆಯಾಗಿದ್ದು , ಮೀಸಲಾತಿ ತತ್ವಗಳು ಅನ್ವಯಿಸುವುದಿಲ್ಲ .
ಖಾಲಿ ಇರುವ ಅಂಗನವಾಡಿ ಕೇಂದ್ರದ ಗ್ರಾಮಾಂತರ ಪ್ರದೇಶದ ಕಂದಾಯ ಗ್ರಾಮ / ನಗರ ಪ್ರದೇಶದ ಕಂದಾಯ ವಾರ್ಡ್ನ ಒಟ್ಟು ಜನಸಂಖ್ಯೆಯು ಶೇಕಡಾ 40 ಕ್ಕಿಂತ ಹೆಚ್ಚು
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ವರ್ಗದವರನ್ನು ಒಳಗೊಂಡಿದ್ದಲ್ಲಿ ಆ ವರ್ಗದವರನ್ನು ಮಾತ್ರ ಆ ಗ್ರಾಮದ ಸದರಿ ಕೇಂದ್ರಕ್ಕೆ ಕಾರ್ಯಕರ್ತೆ ಹುದ್ದೆಗೆ ನಿಗದಿತ ವಿದ್ಯಾರ್ಹತೆಯ ಅನುಸಾರ ಪರಿಗಣಿಸಲಾಗುವುದು .
2. ಶೇಕಡಾ 25 ಕ್ಕಿಂತ ಹೆಚ್ಚು ಅಲ್ಪಸಂಖ್ಯಾತ ( ಮುಸ್ಲಿಮರು , ಕ್ರಿಶ್ಚಿಯನ್ನರು , ಜೈನರು , ಬೌದ್ಧರು , ಪಾರ್ಸಿಗಳು ಮತ್ತು ಸಿಕ್ಕರು ) ಜನಸಂಖ್ಯೆಯಿರುವ ಇರುವ ಪ್ರದೇಶದ ಅಂಗನವಾಡಿ ಕೇಂದ್ರಗಳಲ್ಲಿ ಕನ್ನಡ ಭಾಷೆಯೊಂದಿಗೆ ಆಯಾ ಅಲ್ಪ ಸಂಖ್ಯಾತ ಸಮುದಾಯದ ಭಾಷೆ ಬಲ್ಲವರನ್ನು ಕಾರ್ಯಕರ್ತೆ / ಸಹಾಯಕಿ ಹುದ್ದೆಗೆ ಆಯ್ಕೆ ಮಾಡಲಾಗುವುದು .
3. ಅಂಗನವಾಡಿ ಕಾರ್ಯಕರ್ತೆ / ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸಿದವರಲ್ಲಿ ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಸಮಾನ ಅಂಕ ಗಳಿಸಿದ್ದಲ್ಲಿ ವಯೋಹಿರಿಯರನ್ನು ಪರಿಗಣಿಸಲಾಗುವುದು .
4. ಅಂಗನವಾಡಿ ಕಾರ್ಯಕರ್ತೆಯರ ಆಯ್ಕೆಗೆ ಎಸ್.ಎಸ್.ಎಲ್.ಸಿ ಕನಿಷ್ಠ ವಿದ್ಯಾರ್ಹತೆ ನಿಗಧಿಪಡಿಸಲಾಗಿದ್ದು , ಎಸ್.ಎಸ್.ಎಲ್.ಸಿಯಲ್ಲಿ ಪಡೆದಿರುವ ಶೇಕಡವಾರು ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು ,
ಹಾಗೂ ಮಾಜಿ ದೇವದಾಸಿಯರು , ಯೋಜನಾ ನಿರಾಶ್ರಿತರು , ವಿಚ್ಛೇದಿತ ಮಹಿಳೆಯರು , ಪರಿತ್ಯಕ್ತಿಯರು ಹೆಚ್ಚಿನ
5 ಬೋನಸ್ ಅಂಕಗಳಿಗೆ ಅರ್ಹರಿರುತ್ತಾರೆ . ಈ ಬಗ್ಗೆ ಸಕ್ಷಮ ಪ್ರಾಧಿಕಾರದಿಂದ ಪಡೆದ ದಾಖಲಾತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು
http anganwadi recruit kar nic
ಆನ್ ಲೈನ್ನಲ್ಲಿ ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲೆಗಳು
1 ) ಅರ್ಜಿ ನಿಗದಿತ ನಮೂನೆಯಲ್ಲಿ ( ಆನ್ಲೈನ್ನಲ್ಲಿ )
2 ) ಜನನ ಪ್ರಮಾಣ ಪತ್ರ / ಜನ್ಮ ದಿನಾಂಕವಿರುವ ಎಸ್.ಎಸ್.ಎಲ್.ಸಿ ಅಂಕಪಟ್ಟಿ ,
3 )ನಿಗದಿತ ವಿದ್ಯಾರ್ಹತೆಯ ಅಂಕಪಟ್ಟಿ ,
4 ) ಮೂರು ವರ್ಷದೊಳಗಿನ ತಹಶೀಲ್ದಾರ್ರವರಿಂದ ಪಡೆದ ವಾಸಸ್ಥಳ ದೃಢೀಕರಣ ಪತ್ರ
5 ) ಅಭ್ಯರ್ಥಿಗಳ ಜಾತಿ ಪ್ರಮಾಣ ಪತ್ರ
6 ) ವಿಧವೆಯಾಗಿದ್ದಲ್ಲಿ , ಪತಿಯ ಮರಣ ಪ್ರಮಾಣ ಪತ್ರ , ( ವಿಧವಾ ವೇತನದ ದೃಢೀಕರಣವನ್ನು ಪರಿಗಣಿಸುವುದಿಲ್ಲ )
7 ) ರೈತ ಮಹಿಳೆ ವಿಧವೆಯಾಗಿದ್ದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿ ಎಂದು ಉಪ ವಿಭಾಗಾಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ
8 ) ವಿಕಲಚೇತನರಾಗಿದ್ದಲ್ಲಿ , ಅಂಗವಿಕಲತೆ ಪ್ರಮಾಣ ಪತ್ರ ( ಅಂಗವಿಕಲ ವೇತನದ ದೃಢೀಕರಣವನ್ನು ಪರಿಗಣಿಸುವುದಿಲ್ಲ ) .
9) ವಿಚ್ಛೇದಿತರಾಗಿದ್ದಲ್ಲಿ , ವಿಚ್ಛೇದನ ಪ್ರಮಾಣ ಪತ್ರ ( ನ್ಯಾಯಾಲಯದಿಂದ ವಿಚ್ಛೇಧನ ಪತ್ರ )
10 ) ಮಾಜಿ ದೇವದಾಸಿಯಾಗಿದ್ದಲ್ಲಿ ದೇವದಾಸಿ ಬಗ್ಗೆ ಮಹಿಳಾ ಅಭಿವೃದ್ಧಿ ನಿಗಮದ ಅಧಿಕಾರಿಗಳಿಂದ ಪ್ರಮಾಣ ಪತ್ರ
11 ) ಪರಿತ್ಯಕ್ತಿಯಾಗಿದ್ದಲ್ಲಿ ಪರಿತ್ಯಕ್ಕೆ ಬಗ್ಗೆ ಗ್ರಾಮ ಪಂಚಾಯ್ತಿಯಿಂದ ಪಡೆದ ಪ್ರಮಾಣ ಪತ್ರ ,
12 ) ಇಲಾಖಾ ಸುಧಾರಣಾ ಸಂಸ್ಥೆ ರಾಜ್ಯ ಸುಧಾರಣಾ ಸಂಸ್ಥೆಯ ನಿವಾಸಿಯಾಗಿದ್ದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ ( ಇಲಾಖಾ ಸಂಸ್ಥೆಯ ನಿವಾಸಿಯಾಗಿದ್ದಲ್ಲಿ ಮಾತ್ರ )
13 ) ಯೋಜನಾ ನಿರಾಶ್ರಿತರಾಗಿದ್ದಲ್ಲಿ ತಹಶೀಲ್ದಾರ್ರವರಿಂದ ಪಡೆದ ಪ್ರಮಾಣ ಪತ್ರ
job vacancy in kodagu
ಸಾಮಾನ್ಯ ಅರ್ಹತೆಗಳು :
1. ಅರ್ಜಿ ಸಲ್ಲಿಸಲು ನಿಗಧಿಪಡಿಸಿರುವ ಅಂತಿಮ ದಿನಾಂಕ : 29-03-2022ಕ್ಕೆ ಅಭ್ಯರ್ಥಿಯ ವಯಸ್ಸು 18 ರಿಂದ 35 ವಯೋಮಿತಿಯೊಳಗಿರಬೇಕು . ವಿಕಲಚೇತನ ಅಭ್ಯರ್ಥಿಯಾಗಿದ್ದಲ್ಲಿ ವಯಸ್ಸು 45 ವಯೋಮಿತಿ ಯೊಳಗಿರಬೇಕು .
2. ಅಭ್ಯರ್ಥಿಯು ಸ್ಥಳೀಯ ಮಹಿಳೆಯಾಗಿದ್ದು , ಅಂಗನವಾಡಿ ಕಾರ್ಯಕರ್ತೆ ಹುದ್ದೆ ಖಾಲಿ ಇರುವ ಅದೇ ಗ್ರಾಮ / ಪುರಸಭೆ ವ್ಯಾಪ್ತಿಯಾಗಿದ್ದಲ್ಲಿ ವಾರ್ಡ್ ವ್ಯಾಪ್ತಿಯ ನಿವಾಸಿಯಾಗಿರಬೇಕು .
3.ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗಧಿ ಪಡಿಸಿದ ದಿನಾಂಕದ ಮೂರು ವರ್ಷದೊಳಗಿನ ಸಂಬಂಧಿಸಿದ ತಾಲೂಕಿನ ತಹಶೀಲ್ದಾರ್ ಉಪತಹಶೀಲ್ದಾರ್ರವರಿಂದ ಪಡೆದ ವಾಸಸ್ಥಳ ದೃಢೀಕರಣ ಪತ್ರವನ್ನು ಅರ್ಜಿಯೊಂದಿಗೆ ಕಡ್ಡಾಯವಾಗಿ ಸಲ್ಲಿಸತಕ್ಕದ್ದು .
ಇದನ್ನು ಓದಿ: ರಾಜೇಂದ್ರ ಪ್ರಸಾದ್ ಅವರ ಜೀವನ ಚರಿತ್ರೆ
4. ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು , ಹೆಚ್ಚಿನ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದು . ಹೆಚ್ಚಿನ ವಿದ್ಯಾರ್ಹತೆಯನ್ನು ಆಯ್ಕೆಗೆ ಅಂಕಗಳಿಸಿದ ಪರಿಗಣಿಸಲಾಗುವುದಿಲ್ಲ .
government jobs in kodagu 2022
5. ಕರ್ನಾಟಕ ಪರೀಕ್ಷಾ ಮಂಡಳಿ ನಡೆಸುವ ಮುಕ್ತ ಶಾಲೆ ಮುಕ್ತ ವಿದ್ಯಾಲಯಗಳಲ್ಲಿ ಎಸ್.ಎಸ್.ಎಲ್.ಸಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳು ಪ್ರಥಮ / ದ್ವಿತೀಯ ಭಾಷೆಯಾಗಿ ಕನ್ನಡ ಹಾಗೂ
ಸಾಮಾನ್ಯ ಗಣಿತ ಮತ್ತು ಸಮಾಜ ಶಾಸ್ತ್ರ / ಸಮಾಜ ವಿಜ್ಞಾನ ವಿಷಯಗಳನ್ನು ಕಡ್ಡಾಯವಾಗಿ ವ್ಯಾಸಂಗ ಮಾಡಿದ್ದು , ಪ್ರಮಾಣ ಪತ್ರ / ಅಂಕ ಪಟ್ಟಿಯು ಗರಿಷ್ಠ 625 , ಕನಿಷ್ಠ 219 ಅಂಕಗಳನ್ನು ಹೊಂದಿದ್ದಲ್ಲಿ , ಅಂತಹ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದು .
6. ಬೇರೆ ರಾಜ್ಯಗಳಲ್ಲಿ ವ್ಯಾಸಂಗ ಮಾಡಿದ್ದು , ಕನ್ನಡವನ್ನು ಪ್ರಥಮ / ದ್ವಿತೀಯ ಭಾಷೆಯಾಗಿ ಅಭ್ಯಾಸ ಮಾಡಿದ್ದರೂ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ನಿಗದಿಪಡಿಸಿದ ಗರಿಷ್ಠ ಅಂಕಗಳು
ಹಾಗೂ ಕರ್ನಾಟಕ ರಾಜ್ಯದಲ್ಲಿ ನಿಗದಿಪಡಿಸಿದ ಗರಿಷ್ಠ ಅಂಕಗಳಲ್ಲಿ ವ್ಯತ್ಯಾಸವಿದ್ದಲ್ಲಿ ಕರ್ನಾಟಕದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿಗಳನ್ನು ಮಾತ್ರ ಪರಿಗಣಿಸಲಾಗುವುದು .
government jobs in kodagu
7. ಅಂಗನವಾಡಿ ಕಾರ್ಯಕರ್ತೆಯರು ಶಾಲಾಪೂರ್ವ ಶಿಕ್ಷಣವನ್ನು ಹಾಗೂ ದಾಖಲೆಗಳನ್ನು ಕನ್ನಡದಲ್ಲಿ ನಿರ್ವಹಿಸಬೇಕಾಗಿರುವುದರಿಂದ ಅಭ್ಯರ್ಥಿಗಳು
ಯಾವುದೇ ಭಾಷಾ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದರೂ ಹಾಗೂ ಯಾವುದೇ ರಾಜ್ಯದಲ್ಲಿ ವ್ಯಾಸಂಗ ಮಾಡಿದ್ದರೂ ಸಹ ಅವರು ಕನ್ನಡ ಭಾಷೆಯನ್ನು ಪ್ರಥಮ | ದ್ವಿತೀಯ ಭಾಷೆಯಾಗಿ ವ್ಯಾಸಂಗ ಮಾಡಿರಬೇಕು .
ಹಾಗೂ ಮಾತೃ ಭಾಷೆ ಕನ್ನಡವಲ್ಲದೇ ಇರುವ ಅಭ್ಯರ್ಥಿಗಳಿಗೆ ಆಯ್ಕೆ ಸಮಯದಲ್ಲಿ ಸಂದರ್ಶನ ಏರ್ಪಡಿಸಿ ಅವಶ್ಯವಿದ್ದಲ್ಲಿ ಕನ್ನಡ ಭಾಷೆಯ ಜ್ಞಾನ ಕುರಿತಂತೆ ಪರೀಕ್ಷಿಸಿ ಅವರನ್ನು ಆಯ್ಕೆ ಮಾಡುವ ಬಗ್ಗೆ ಸಮಿತಿ ನಿರ್ಧರಿಸುತ್ತದೆ .
8. ಆಸಿಡ್ ದಾಳಿಗೆ ತುತ್ತಾದ ಮಹಿಳೆಯರು ಅಂಗನವಾಡಿ ಕಾರ್ಯಕರ್ತೆ / ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದಲ್ಲಿ , ಇತರ ಎಲ್ಲಾ ಸ್ವೀಕೃತ ಅರ್ಜಿಗಳನ್ನು ಪರಿಗಣಿಸದೆ ಮೊದಲ
ಆದ್ಯತೆಯ ಮೇರೆಗೆ ನೇರವಾಗಿ ಅವರನ್ನೇ ಆಯ್ಕೆ ಮಾಡಲಾಗುವುದು . ಆದರೆ ಸ್ಥಳೀಯರು , ನಿಗದಿತ ವಿದ್ಯಾರ್ಹತೆ ಮತ್ತು ವಯೋಮಿತಿಯೊಳಗೆ ಇರಬೇಕಾಗಿರುವುದು ಕಡ್ಡಾಯ .
jobs in kodagu district
9. ಅಂಗನವಾಡಿ ಕಾರ್ಯಕರ್ತೆ / ಸಹಾಯಕಿ ಹುದ್ದೆಗಳಿಗೆ ಬಾಲನ್ಯಾಯ ಕಾಯ್ದೆಯಡಿ ಇಲಾಖೆಯ ಸಂಸ್ಥೆಗಳಲ್ಲಿ ಹಾಗೂ ರಾಜ್ಯ ಮಹಿಳಾ ನಿಲಯಗಳಲ್ಲಿ ಆಶ್ರಯ ಪಡೆದ ಹಾಲಿ / ಮಾಜಿ ನಿವಾಸಿಗಳು ಅರ್ಜಿ ಸಲ್ಲಿಸಿದ್ದಲ್ಲಿ
ಕ್ರಮ ಸಂಖ್ಯೆ ( 8 ) ನೇ ಯವರನ್ನು ಹೊರತು ಪಡಿಸಿ ಇತರೆ ಎಲ್ಲಾ ಸ್ವೀಕೃತ ಅರ್ಜಿಗಳನ್ನು ಪರಿಗಣಿಸದೇ ಎರಡನೇ ಆದ್ಯತೆ ಮೇರೆಗೆ ನೇರವಾಗಿ ಅವರನ್ನೇ ಆಯ್ಕೆ ಮಾಡಲಾಗುವುದು .
ಇವರಿಗೆ ವಾಸಸ್ಥಳ ದೃಢೀಕರಣ ಕಡ್ಡಾಯವಲ್ಲ ಆದರೆ ನಿಗದಿತ ವಿದ್ಯಾರ್ಹತೆ ಮತ್ತು ವಯೋಮಿತಿಯೊಳಗೆ ಇರಬೇಕಾಗಿರುವುದು ಕಡ್ಡಾಯ .
ಕೊಡಗು ಅಂಗನವಾಡಿ ನೇಮಕಾತಿ 2022
10. ಅ . ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ವಿಧವೆಯರು ಅರ್ಜಿ ಸಲ್ಲಿಸಿದಾಗ ಕ್ರಮ ಸಂಖ್ಯೆ ( 8 ) ಮತ್ತು ( 9 ) ರ ಅಭ್ಯರ್ಥಿಗಳನ್ನು ಹೊರತುಪಡಿಸಿ
ಇತರ ಎಲ್ಲಾ ಸ್ವೀಕೃತ ಇತರ ಎಲ್ಲಾ ಸ್ವೀಕೃತ ಅರ್ಜಿಗಳನ್ನು ಪರಿಗಣಿಸದೇ ನೇರವಾಗಿ ವಿಧವೆಯರನ್ನೇ ಆಯ್ಕೆ ಮಾಡಲಾಗುವುದು ,
kodagu district government jobs
ಆದರೆ ಅರ್ಜಿ ಸಲ್ಲಿಸಿದ ನಂತರ ವಿಧವೆಯಾದಲ್ಲಿ ಪರಿಗಣಿಸಲಾಗುವುದಿಲ್ಲ . ವಿಧವೆ ಅಭ್ಯರ್ಥಿಯು ಎಸ್.ಎಸ್.ಎಲ್.ಸಿ ಉತ್ತೀರ್ಣ ಸ್ಥಳೀಯರು ಮತ್ತು ವಯೋಮಿತಿಯೊಳಗಿರಬೇಕಾಗಿರುವುದು ಕಡ್ಡಾಯ.
jobs kodagu
ಅರ್ಜಿ ಸಲ್ಲಿಸುವುದು ಹೇಗೆ
ಅಧಿಸೂಚನೆಯನ್ನು ಓದಲು ಹಾಗು ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಪ್ರಬಂಧಗಳ ಪಟ್ಟಿ
- ಭೂ ಮಾಲಿನ್ಯ ಕುರಿತು ಪ್ರಬಂಧ
- ಆರ್ಟಿಕಲ್ 370 ಕುರಿತು ಪ್ರಬಂಧ
- ರೈತರ ಆತ್ಮಹತ್ಯೆ ಕುರಿತು ಪ್ರಬಂಧ
- ಜಲ ಮಾಲಿನ್ಯ ಬಗ್ಗೆ ಪ್ರಬಂಧ
- ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಬಂಧ
- ಶಬ್ದ ಮಾಲಿನ್ಯ ಕುರಿತು ಪ್ರಬಂಧ
ಇತರೆ ವಿಷಯಗಳನ್ನು ಓದಲು ಈ ಕೆಳಗೆ ಕಾಣಿಸುವ ವಿಷಯದಮೇಲೆ ಕ್ಲಿಕ್ ಮಾಡಿ
- ಕನ್ನಡ
- ಇತಿಹಾಸ
- ಭೂಗೋಳಶಾಸ್ತ್ರ
- ಭಾರತದ ಸಂವಿಧಾನ
- ವಿಜ್ಞಾನ
- ಅರ್ಥಶಾಸ್ತ್ರ
- ಮಾನಸಿಕ ಸಾಮರ್ಥ್ಯ
- ಇಂಗ್ಲೀಷ್ ವ್ಯಾಕರಣ
- ಪ್ರಚಲಿತ ವಿದ್ಯಮಾನ
- ಸಾಮಾನ್ಯ ಜ್ಞಾನ