ಬಾದಾಮಿ ಚಾಲುಕ್ಯರ ಇತಿಹಾಸ | Badami Chalukya History in Kannada

Badami Chalukya in Kannada | ಬಾದಾಮಿ ಚಾಲುಕ್ಯರ ಇತಿಹಾಸ

Badami Chalukya in Kannada, ಬಾದಾಮಿ ಚಾಲುಕ್ಯರ ಇತಿಹಾಸ, badami chalukya kannada, badami chalukya dynasty in kannada, information, pdf, dynasty, badami chalukya history in kannada

Badami Chalukya in Kannada

  • ಪ್ರಸ್ತುತ ಬಾದಮಿಯು – ಇಂದಿನ ಬಾಗಲಕೋಟ ಜಿಲ್ಲೆಯಲ್ಲಿದೆ
  • ಚಾಲುಕ್ಯರ ರಾಜಧಾನಿ – ಬಾದಾಮಿ
  • ಬಾದಾಮಿಯ ಪ್ರಾಚೀನ ಹೆಸರು – ವಾತಾಪಿ
  • ಬಾದಾಮಿ ಚಾಲುಕ್ಯರ ರಾಜ್ಯ ಲಾಂಛನ – ವರಾಹ
  • ಬಾದಾಮಿ ಚಾಲುಕ್ಯರು ರಾಜ್ಯ ಭಾರ ಮಾಡಿದ್ದ ಅವಧಿ ಕ್ರಿ.ಶ. 6 – 8 ಶತಮಾನದವರೆಗೆ
  • ಬಾದಾಮಿ ಚಾಲುಕ್ಯರ ಕಾಲದಲ್ಲಿ ಅಸ್ತಿತ್ವಕ್ಕೆ ಬಂದ ವಾಸ್ತುಶಿಲ್ಪ ಶೈಲಿಯ ಹೆಸರು – ವೇಸರ ಶೈಲಿ ( ಕರ್ನಾಟಕ ಶೈಲಿ )
  • ಬಾದಾಮಿ ಚಾಲುಕ್ಯರ ಕಲೆ ಬೆಳವಣಿಗೆಯನ್ನು “ಸುವರ್ಣ ಯುಗ ” ಎಂದು ಹೇಳಿದವರು – ಡಾ//.ಶಿವರಾಮ
  • ಕರ್ನಾಟಕವನ್ನಾಳಿದ ಮೊಟ್ಟಮೊದಲ ವಿಶಾಲ ಸಾಮ್ರಾಜ್ಯ
  • ಸ್ಥಾಪಕರು – ಜಯಸಿಂಹ ಮತ್ತು ರಣರಾಗ
  • ರಾಜಧಾನಿ – ವಾತಾಪಿ ( ಬಾದಾಮಿ )
  • ಲಾಂಛನ – ವರಾಹ

badami chalukya information in kannada

  • ಒಂದನೆಯ ಪುಲಿಕೇಶಿ (ಕ್ರಿ.ಶ. ೫೪೩ – ೫೬ ೬ )
  • ಒಂದನೆಯ ಕೀರ್ತಿವರ್ಮ (ಕ್ರಿ.ಶ. ೫೬ ೬ – ೫೯ ೭ )
  • ಮಂಗಳೇಶ (ಕ್ರಿ.ಶ. ೫೯ ೭ – ೬ ೦೯ )
  • ಇಮ್ಮಡಿ ಪುಲಿಕೇಶಿ (ಕ್ರಿ.ಶ. ೬ ೦೯ – ೬ ೪೨ )
  • ಒಂದನೆಯ ವಿಕ್ರಮಾದಿತ್ಯ (ಕ್ರಿ.ಶ. ೬ ೫೫ – ೬ ೮೦ )
  • ವಿನಯಾದಿತ್ಯ (ಕ್ರಿ.ಶ. ೬ ೮೦ – ೬ ೯ ೬ )
  • ವಿಜಯಾದಿತ್ಯ (ಕ್ರಿ.ಶ. ೬ ೯ ೬ – ೭೩೩ )
  • ಎರಡನೆಯ ವಿಕ್ರಮಾದಿತ್ಯ (ಕ್ರಿ.ಶ. ೭೩೩ – ೭೪೬ )
  • ಎರಡನೆಯ ಕೀರ್ತಿವರ್ಮ (ಕ್ರಿ.ಶ. ೭೪೬ – ೭೫೩ )
  • ಕ್ರಿ.ಶ. ೭೫೩ರಲ್ಲಿ ರಾಷ್ಟ್ರಕೂಟರ ದಂತಿದುರ್ಗನು ಕೀರ್ತಿವರ್ಮನ್ನು ಸೋಲಿಸುವುದರೊಂದಿಗೆ ಈ ಚಾಲುಕ್ಯ ಸಾಮ್ರಾಜ್ಯಕ್ಕೆ ತೆರೆ ಬಿದ್ದಿತು.

Badami Chalukya in Kannada history

1 ನೇ ಪುಲಿಕೇಶಿ ( ಕ್ರಿ.ಶ. 540/547 ರಿಂದ 566/567 )

  •  ಚಾಲುಕ್ಯರ ನಿಜವಾದ ಸಂಸ್ಥಾಪಕ
  •  ಕದಂಬರ ಸಾಮಂತಿಕೆಯನ್ನು ಕಿತ್ತೊಗೆದು ಸ್ವತಂತ್ರ ಘೋಷಿಸಿದ ಮೊದಲ ಅರಸು
  •  ಬಾದಾಮಿಯನ್ನು ರಾಜಧಾನಿಯಾಗಿ ನಿರ್ಮಿಸಿದ .
  • ಇವನ ಬಿರುದುಗಳು – ಶ್ರೀ ವಲ್ಲಭ , ಸತ್ಯಾಶ್ರಯ , ಧರ್ಮಮಹಾರಾಜ , ರಣವಿಕ್ರಮ .
  •  ಮಂಗಳೇಶನ ಮಹಾಕೂಟ ಸ್ತಂಭಶಾಸನದಲ್ಲಿ ‘ ಪ್ರಿಯತನುಜ ಎಂದು ವರ್ಣನೆ
  • ಇವನ ರಾಣಿ ದುರ್ಲಬ ದೇವಿ ಮತ್ತು ಇಂದುಕಾಂತಿ
  • ಮಕ್ಕಳು – ಕೀರ್ತಿವರ್ಮ ಮತ್ತು ಮಂಗಳೇಶ .

Badami Chalukya in Kannada

1 ನೇ ಕೀರ್ತಿವರ್ಮ : ( ಕ್ರಿ.ಶ. 567-598 ) .

  • ಕೊಡಚಿಯ ತಾಮ್ರಪಟದಲ್ಲಿ ಕತ್ತಿಯರಸನೆಂದು ಇವನನ್ನು ಉಲ್ಲೇಖಿಸಿದೆ .
  •  ಮಹಾಕೂಟ ಸ್ತಂಭಶಾಸನವು ಇವರ ಸೈನಿಕ ದಿಗ್ವಿಜಯ ತಿಳಿಸುತ್ತದೆ .
  •  ಐಹೊಳೆ ಶಾಸನವು ಇವನನ್ನು ” ನಳರ ಮೌರ್ಯರ ಕದಂಬರ ಕಾಳರಾತ್ರಿ ” ಎಂದು ವರ್ಣಿಸಿದೆ .
  •  ಬಾದಾಮಿಯ ವೈಷ್ಣವ ಗುಹಾಲಯ ಇವನ ಆಜ್ಞೆಯಂತೆ ನಿರ್ಮಾಣವಾಯಿತು .
  •  ಇವನ ಮಕ್ಕಳು -2 ನೇ ಪುಲಿಕೇಶಿ , ವಿಷ್ಣುವರ್ಧನ , ಧಾರಾಶಯ , ಜಯಸಿಂಹ ಮತ್ತು ಬುದ್ಧ ವರಸ .
  •  ಬಳ್ಳಾರಿಯ ನಳರು , ಶಿವಮೊಗ್ಗದ ಸೇಂದ್ರಕರು , ಕೊಂಕಣದ ಮೌರ್ಯರು ಬನವಾಸಿ ಕದಂಬರು ಇವನಿಂದ ಸೋತರು .

Badami Chalukya in Kannada Histroy

ಮಂಗಳೇಶ ( ಕ್ರಿ.ಶ. 598-603 ) .
  •  ಕೀರ್ತಿವರ್ಮನ ತಮ್ಮ
  •  ಕ್ರಿ.ಶ. 602 ರಲ್ಲಿ ಕಳಚೂರ್ಯರ ರಾಜ ಬದ್ದ ರಾಜನನ್ನು ಸೋಲಿಸಿ ಗುಜರಾತ್ ಮತ್ತು ಖಾಂದೇಶಗಳನ್ನು ಗೆದ್ದು ಉತ್ತರದಲ್ಲಿ ಮಹಾನದಿವರೆಗೆ ರಾಜ್ಯವನ್ನು ವಿಸ್ತರಿಸಿದೆ .
  •  ಸತತ 18 ಯುದ್ಧಗಳಲ್ಲಿ ಜಯಶಾಲಿ ವೀರನಾದ ರತ್ನಗಿರಿ ಸಮೀಪದ ಲೇವಾದ್ವೀಪದ ರಾಜ – ಸ್ವಾರಾಜರನನ್ನು ಸೋಲಿಸಿದ .
  •  ಬಾದಾಮಿ ಬೆಟ್ಟದಲ್ಲಿ ವೈಷ್ಣವ ಗುಹಾಲಯವನ್ನು ತನ್ನ ಅಣ್ಣ ಕೀರ್ತಿವರ್ಮನ ಆಣತಿಯಂತೆ ನಿರ್ಮಿಸಿದ .

Badami Chalukya in Kannada dynasty

ಇಮ್ಮಡಿ ಪುಲಿಕೇಶಿ ( ಕ್ರಿ.ಶ. 609-642 ) .
  •  ಬಾದಾಮಿ ಚಾಲುಕ್ಕದಲ್ಲಿ ಅತ್ಯಂತ ಪ್ರಸಿದ್ಧ ರಾಜ .
  • ಕ್ರಿ.ಶ. 609 ರಲ್ಲಿ ತನ್ನ ಚಿಕ್ಕಪ್ಪ ಮಂಗಳೇಶನನ್ನು ಕೊಂದು ಅಧಿಕಾರಕ್ಕೆ ಬಂದ ಬಿರುದುಗಳು – ಪರಮೇಶ್ವರ ಶ್ರೀ ಪದ್ಧಿವಲ್ಲಭ ಪರಮಭಸ್ಮಾರಕ , ಸಾಹಸರಸಿಕ , ಸಮಸ್ತ ಭುವನಾಶ್ರಯ , ಶಿಲಾದಿತ್ಯ ಮಹಾರಾಜ ,
  •  ಐಹೊಳೆ ಶಾಸನವು ಇವನ ದಿಗ್ವಿಜಯ ಮತ್ತು ಚಾಲುಕ್ಯ ಸಂತತಿಯ ಪೂರ್ಣಾಂಶದ ವಿವರಗಳನ್ನು ತಿಳಿಸಲು ಸಹಕಾರಿಯಾಗಿದೆ ,
  •  ಐಹೊಳೆ ಶಾಸನವು ಐಹೊಳೆಯ ಮೆಗತಿ ಜಿನಾಲಯದ ಗೋಡೆಯ ಮೇಲೆ ಜೈನಕವಿ ರವಿಕೀರ್ತಿಯಿಂದ ರಚಿತವಾಗಿದೆ .
  •  ಬಳೆ ಶಾಸನವು ಕ್ರಿ.ಶ. 643 ರಲ್ಲಿ ಸಂಸ್ಕೃತ ಭಾಷೆಯಲ್ಲಿ ಆದರೆ ಕನ್ನಡ ಬರಹದಲ್ಲಿ ಕೆತ್ತಲ್ಲದೆ ,
  • ರವಿಕೀರ್ತಿಯು ತನ್ನನ್ನು ಕಾಳಿದಾಸ ಮತ್ತು ಭಾರವಿಗಳಿಗೆ ಹೋಲಿಸಿಕೊಂಡಿದ್ದಾನೆ
  • ಇಮ್ಮಡಿ ಪುಲಿಕೇಶಿಯಿಂದ ಸೋತವರು ರಾಷ್ಟ್ರಕೂಟರಾದ ಅಪಾಯಕ ಮತ್ತು ಗೋವಿಂದ , ಬನವಾಸಿಯ ಕದಂಬರು , ಚೇಳರು , ಜಾಟರು , ಮಾಳರು , ಗೂರ್ಜರು , ಚೇಳದು ಚೋರರು , ಪಾಂಡರು , ಕೊಂಕಣದ ಮರು , ಪಲ್ಲವರು ಕಳಿಂಗ ರಾಜ್ಯ ವೆಂಗಿರಾ ಇತ್ಯಾದಿ
  • ಗುಜರಾತ್ ಅನ್ನು ಜಯಿಸಿ ಅಲ್ಲಿ ತನ್ನ ತಮ್ಮ ಜಯಸಿಂಹನನ್ನು ಮಾಂಡಲಿಕನನ್ನಾಗಿ ಮಾಡಿದ . ಹಾಗೆಯೇ ಪೂರ್ವದ ವೆಂಗಿಮಂಡಲವನ್ನು ಗೆದ್ದು ಮತ್ತೊಬ್ಬ ತಮ್ಮ ಕುಬ್ಬ ವಿಷ್ಣುವರ್ಧನನ್ನು ಅದರ ಮುಖ್ಯಸ್ಥನನ್ನಾಗಿ ಮಾಡಿದ ಮುಂದೆ ಕುಬ್ಬ ವಿಷ್ಣುವರ್ಧನ ಸ್ವತಂತ್ರ ವೆಂಗಿ ಚಾಲುಕ್ಯ ವಂಶಕ್ಕೆ ಅಸ್ತಿಭಾರ ಹಾಕಿದನು .
  • ಇಮ್ಮಡಿ ಪುಲಿಕೇಶಿಯ ಅತ್ಯಂತ ಪ್ರಮುಖ ಯುದ್ಧವೆಂದರೆ ಉತ್ತರಾಪಥೇಶ್ವರನಾದ ಹರ್ಷವರ್ಧನ ವಿರುದ್ಧ ಕ್ರಿ.ಶ. 630-634ರಲ್ಲಿ ನಡೆಯಿತು .
  • ಇಮ್ಮಡಿ ಪುಲಿಕೇಶಿ ಮತ್ತು ಹರ್ಷವರ್ಧನ ನಡುವಿನ ಯುದ್ಧವನ್ನು ಐಹೊಳೆ ಶಾಸನ ಮತ್ತು ಹೂಯಾನ್ ತ್ಸಾಂಗ್ ಬರವಣಿಗೆಗಳು ತಿಳಿಸುತ್ತದೆ .
  • ಇವರೀರ್ವರ ನಡುವಣ ಯುದ್ಧ ನರ್ಮದೆಯ ದಂಡೆಯಲ್ಲಿ ನಡೆಯಿತು .
  •  ಹರ್ಷವರ್ಧನ ಸೋತು , ಸ್ನೇಹಸು ಬೆಳಸಿದ ನರ್ಮದಾ ನದಿ ಇವರಿಬ್ಬರ ನಡುವಣ ಗಡಿಯಾಯಿತು
  • ಹರ್ಷವರ್ಧನನ ವಿರುದ್ಧ ಜಯದಿಂದಾಗಿ ” ಪರಮೇಶ್ವರ ಎಂಬ ಬಿರುದು ಧರಿಸಿದ ,
  • ಪರ್ಶಿಯಾದ ದೊರೆ ಖಸ್ತು ಪುಲಿಕೇಶಿಯ ಆಸ್ಥಾನಕ್ಕೆ ಕಾರ್ಯಭಾರಿಯೊಬ್ಬನನ್ನು ಕಳುಹಿಸಿದ ಇದಕ್ಕೆ ಸಾಕ್ಷಿ ಅಜಂತಾದ ಗುಹೆಯಲ್ಲಿನ ಮತ್ತು ಅರಬ್ ಇತಿಹಾಸಕಾರ ತಬರಿಯ ದಾಖಲೆ
  •  ಪ್ರಸಿದ್ಧ ಚೀನಿಯಾತ್ರಿಕ ಹ್ಯಾನ್‌ತಾಂಗ ಇವನ ಆಸ್ಥಾನಕ್ಕೆ ಬಂದಿದ್ದನು .
  •  ಈತ ಪಲ್ಲವ ದೊರೆ ಮಹೇಂದ್ರವರ್ಮನನ್ನು ಎರಡು ಭಾರಿ ಸೋಲಿಸಿದ .
  •  ಪಲ್ಲವ ದೊರೆ ಒಂದನೇ ನರಸಿಂಹವರ್ಮನು ಇಮ್ಮಡಿ ಪುಲಿಕೇಶಿಯನ್ನು ಪಾರಿಯಾತ್ರ , ಮಣಿಮಂಗಲ , ಸುರಮಾರ ಕದನಗಳಲ್ಲಿ ಸಂಪೂರ್ಣವಾಗಿ ಸೋಲಿಸಿದ ಪಲ್ಲವರು ಕ್ರಿ.ಶ. 642 ರಲ್ಲಿ ಬಾದಾಮಿಗೆ ಮುತ್ತಿಗೆ ಹಾಕಿದರು . ಪುಲಿಕೇಶಿ ಹೋರಾಡುತ್ತಲೇ ಮಡಿದ .
  • ಇಮ್ಮಡಿ ಪುಲಿಕೇಶಿ ಸಾವಿನಿಂದ ಕ್ರಿ.ಶ. 642 ರಿಂದ 655 ರವರೆಗೆ 13 ವರ್ಷಗಳು ಪಲ್ಲವರು ಬಾದಾಮಿ ಮತ್ತು ಸಾಮ್ರಾಜ್ಯದ ದಕ್ಷಿಣ ಭಾಗಗಳನ್ನು ತಮ್ಮಲ್ಲಿ ಇಟ್ಟುಕೊಂಡಿದ್ದರು .
  •  ಇಮ್ಮಡಿ ಪುಲಿಕೇಶಿಯ ಮಕ್ಕಳು – ಆದಿತ್ಯವರ್ಮ , ಚಂದ್ರಾದಿತ್ಯ , 1 ನೇ ವಿಕ್ರಮಾದಿತ್ಯ , ಜಯಸಿಂಹ ,

Badami Chalukya in Kannada pdf

1 ನೇ ವಿಕ್ರಮಾದಿತ್ಯ ( ಕ್ರಿ.ಶ. 655-682 )

  •  ಪುಲಿಕೇಶಿಯ ಮೂರನೆ ಮಗನಾದ ಈತನು ಪಲ್ಲವರ ವಶವಾಗಿದ್ದ ಬಾದಾಮಿಯನ್ನು ಮತ್ತೆ ವಶಪಡಿಸಿಕೊಂಡು ಸಾಮ್ರಾಜ್ಯವನ್ನು ಮರಳಿ ಪಡೆದ
  •  ಪಲ್ಲವ ದೊರೆಗಳಾದ ನರಸಿಂಹವರ್ಮ , ಮಹೇಂದ್ರವರ್ಮ -2 ಮತ್ತು ಪರಮೇಶ್ವರಮ ಈ ಮೂವರ ವಿರುದ್ಧ ಹೋರಾಡಿದ
  • ಇವನ ಅತ್ತಿಗೆ ಅಂದರೆ ಚಂದ್ರಾದಿತ್ಯನ ಮಡದಿ ವಿಜಯಾಂಕಾ ಹೊರಡಿಸಿದ ನೆರೂರು ತಾಮ್ರ ಪಟವು ಈತನು ಪಟ್ಟವೇರಿದ ವರ್ಷ ಕ್ರಿ.ಶ. 635 ಎಂದು ತಿಳಿಸುತ್ತದೆ .
  •  ಗಂಗರ ಶಾಸನಗಳ ಪ್ರಕಾರ ಕ್ರಿ.ಶ. 670 ರಲ್ಲಿ ಇವನು ಪಲ್ಲವ ಪರಮೇಶ್ವರವರ್ಮನನ್ನು ವಿಳಂದ ಎಂಬಲ್ಲಿ ಸೋಲಿಸಿ ಆಗೋದಯ ಎಂಬ ಕಂಠಿ ಹಾರವನ್ನು ಪಡೆದನು .
  •  ದಂಡಯಾತ್ರೆಗಳಿಗೆ ತನ್ನ ಮಗ ವಿನಯಾದಿತ್ಯ ಮತ್ತು ಮೊಮ್ಮಗ ವಿಜಯಾದಿತ್ಯ ನೆರವು ನೀಡಿದರು .
  • ಇವನ ತಮ್ಮ ಗುಜರಾತಿನ ಮಾಂಡಲಿಕನಾದ ಜಯಹನು ಮೈತ್ರಿಕ ವಂಶದ ವಲ್ಲಭಿಯ ಅರಸನಾದ ವಚ್ಚವ ಅಥವಾ 3 ನೇ ಶಿಲಾದಿತ್ಯನನ್ನು ಸೋಲಿಸಿದೃಮ ಇಮ್ಮಡಿಪುಲಿಕೇಶಿಯು ಕನೂಜಿನ ಜಯವರ್ಧನನ್ನು ಸೋಲಿಸಿದಷ್ಟೇ ಮಹತ್ವವನ್ನು ಈ ಘಟನೆಗೆ ನೀಡಲಾಗಿದೆ
  • ಇವನಸೋದರ ಚಂದ್ರಾದಿತ್ಯನ ರಾಣಿ ವಿಜಯಾಂಕ ಸಂಸ್ಕೃತ ಕವಿಯತ್ರಿ ಆಗಿದ್ದಳು ಜೊತೆಗೆ ಸತಾರಾ ಪ್ರದೇಶ ಮಾಂಡಳಿಕಳೂ ಆಗಿದ್ದಳು .
  • ಇವನ ಬಿರುದುಗಳು : – ಶ್ರೀವಲ್ಲಭ , ರಾಣರಸಿಕ ಅನಿವಾರಿತ ರಾಜಮಲ್ಲ ಇತ್ಯಾದಿ .

Badami Chalukya in Kannada

ವಿನಯಾದಿತ್ಯ ( ಕ್ರಿ.ಶ. 682-696 ) 

  • 1 ನೇ ವಿಕ್ರಮಾದಿತ್ಯ ಮಗನಾದ ಇವನ ಕನೂಜಿನ ದೊರೆ ಯಶೋವರ್ಮನನ್ನು ಸೋಲಿಸಿದನೆಂದು ಹೇಳಲಾಗಿದೆ .
  •  ತನ್ನ ತಂದೆಯಷ್ಟೇ ಪರಾಕ್ರಮಿಯಾಗಿದ್ದ ಈತನು ಪಲ್ಲವ , ಕಳಭ್ರ , ಕೇರಳ ಹೈಹಯರೊಡನೆ ಹೋರಾಡಿ ಪಾರಸಿಕ ಕಮೇರ ( ಕಾಂಬೋಡಿಯ ) ಮತ್ತು ಸಿಂಹಳದಿಂದ ಕಪ್ಪವನ್ನು ವಸೂಲಿ ಮಾಡಿದ
  • ಇವನು ಕಾಂಬೋಡಿಯಾದ ಮೇಲೂ ದಂಡೆತ್ತಿ ಹೋಗಿರಬಹುದೆಂದು ನಂಬಲಾಗಿದೆ .
  •  ಕ್ರಿ.ಶ. 692 ರಲ್ಲಿ ಚೀನಾಕ್ಕೆ ಒಂದು ರಾಯಾಭಾರ ನಿಯೋಗವನ್ನು ಕಳುಹಿಸಿದ್ದನು .
  •  ಇವನ ಮೊದಲ ಮಗ ವಿಜಯಾದಿತ್ಯನು ಉತ್ತರ ಭಾರತದ ಮೇಲೆ ದಂಡೆತ್ತಿ ಹೋಗಿ ಕನೂಜಿನ ಯಶೋವರ್ಮನನ್ನು ಸೋಲಿಸಿದನು ಆದರೆ ಸೆರೆಸಿಕ್ಕಿದ , ಇದರಿಂದ ದುಃಖತಪ್ತನಾದ ವಿಜಯಾದಿತ್ಯ ಇದೇ ನೋವಿನಲ್ಲಿ ಸಾವನ್ನಪ್ಪಿದ .
  • ಮುಂದೆ ವಿಜಯಾದಿತ್ಯ ಸೆರೆಯಿಂದ ತಪ್ಪಿಸಿಕೊಂಡು ಬಂದು ಪಟ್ಟಾಭಿಷಿಕ್ತನಾದ ( ಕ್ರಿ.ಶ. 696-734 )
  • ವಿಜಯಾದಿತ್ಯನ ಎರಡನೇ ಮಗ ಅರಿಕೇಸರಿಯು ವೇಮುಲವಾಡದ ಚಾಲುಕ್ಯ ಮನೆತನದ ಸ್ಥಾಪಕ .

Badami Chalukya in Kannada notes

 

ವಿಜಯಾದಿತ್ಯ ( ಕ್ರಿ.ಶ. 696-764 ) 

  • ಚಾಲುಕ್ಯ ಸಾಮ್ರಾಜ್ಯದ ಪುನರ್ ಸ್ಥಾಪನೆಯ ಕಾರ್ಯದಲ್ಲಿ ತನ್ನ ತಾತ ವಿಕ್ರಮಾದಿತ್ಯನಿಗೆ ಮತ್ತು ತಂದೆ ವಿನಯಾದಿತ್ಯನಿಗೆ ನೆರವು ನೀಡಿದ್ದನು .
  •  ಬಾದಾಮಿಯಲ್ಲಿ ಬ್ರಹ್ಮ ವಿಷ್ಣು ಮಹೇಶ್ವರ ಮೂರ್ತಿಗಳನ್ನು ಪ್ರತಿಷ್ಠಾಪಿಸಿದನು .
  •  ಪಟ್ಟದಕಲ್ಲಿನ ವಿಜಯೇಶ್ವರ ಅಥವಾ ಇಂದಿನ ಸಂಗಮೇಶ್ವರ ದೇವಾಲಯ ನಿರ್ಮಿಸಿದ
  •  ಇವನ ಮಗಳಾದ ವಿಜಯ ಮಹಾದೇವಿ ಗಂಗದೊರೆ ಶ್ರೀಪುರುಷನನ್ನು ವಿವಾಹವಾದಳು .
  •  ಇವನ ಎರಡನೇ ಮಗ ಭೀಮನೆಂಬಾತನು ಕಲ್ಯಾಣಿ ಚಾಲುಕ್ಯರ ಮೂಲಪುರುಷನೆಂದು ಹೇಳಲಾಗುತ್ತದೆ .

Badami Chalukya in Kannada Notes

ಎರಡನೇ ವಿಕ್ರಮಾದಿತ್ಯ ( ಕ್ರಿ.ಶ. 734-746 )

  •  ವಿಜಯಾದಿತ್ಯನ ಮಗನಾದ ಇವನು ತನ್ನ ತಂದೆಯ ಕಾಲದಲ್ಲೇ ಕಂಚಿಯ ಮೇಲೆ ದಾಳಿ ಮಾಡಿದ ನಂತರ ಕ್ರಿ.ಶ. 735 ರಲ್ಲಿ ಕಂಚಿಗೆ ಮುತ್ತಿಗೆ ಹಾಕಿ ವಶಪಡಿಸಿಕೊಂಡನು . ಆದರೆ ಈತ ಹಿಂದೆ ಪಲ್ಲವರು ಬಾದಾಮಿಯನ್ನು ಸೂರೆಗೊಂಡತ ಕಂಚಿಯನ್ನು ಸೂರೆಮಾಡಲಿಲ್ಲ , ರಾಜಧಾನಿ ಕಂಚಿಗೆ ಯಾವುದೇ ಹಾನಿ ಮಾಡದೇ ಔದಾರ್ಯದಿಂದ ನಡೆದುಕೊಂಡು ಅಲ್ಲಿನ ರಾಜ ಸಿಂಹೇಶ್ವರ ಅಥವಾ ಕೈಲಾಸನಾಥ ದೇವಾಲಯಕ್ಕೆ ಅಪಾರ ಧನವನ್ನು ದಾನಮಾಡಿದನು .
  •  ಆ ದೇವಾಲಯದ ಕಂಬದ ಮೇಲೆ ತನ್ನ ವಿಜಯದ ಸ್ಮಾರಕವಾಗಿ ಕನ್ನಡ ಶಾಸನವೊಂದನ್ನು ಅವನು ಬರೆಸಿದ್ದಾನೆ
  •  ಕದಿಯ ಮೇಲಿನ ವಿಜಯದ ನೆನಪಿಗಾಗಿ ಈತನ ರಾಣಿಯರಾದ ಹೈಹಯ ವಂಶದ ಲೋಕಮಹಾದೇವಿ ಮತ್ತು ತೈಲೋಕ್ಷ ಮಹಾದೇವಿಯವರು ಪಟ್ಟದಕಲ್ಲಿನಲ್ಲಿ ಲೋಕೇಶ್ವರ ಮತ್ತು ಲೋಳೇಶ್ವರ ದೇವಾಲಯವನ್ನು ನಿರ್ಮಿಸಿದರು .
  • ಇವನು ಪಾಂಡ್ಯ , ಚೋಳ ಕಳಭ್ರರನ್ನು ಸೋಲಿಸಿ ದಕ್ಷಿಣದ ಮಹಾಸಾಗರದಲ್ಲಿ ಮಹಾಸ್ತಂಭವೊಂದನ್ನು ನಿರ್ಮಿಸಿರವೆಂದು ಕಂಚಿಯ ಶಾಸನ ತಿಳಿಸುತ್ತದೆ .
  • ಇವನ ಕಾಲದ ಮತ್ತೊಂದು ಸಾಧನೆಯೆಂದರೆ ಗುಜರಾತಿನ ಮೇಲೆ ದಂಡೆತ್ತಿ ಬಂದ ( ಕ್ರಿ.ಶ. 739 ) ಅರಬ್ಬರನ್ನು ( ತೈಜಿಕರು ) ಹಿಮ್ಮೆಟ್ಟಿಸಲಾಯಿತು . ( ಗುಜರಾತಿನ ಮಂಡಲಕನಾದ ಅವನಿಜಾಶ್ರಯ ಪುಲಿಕೇಶಿಯು ಈ ಸಾಧನೆ ಮಾಡಿದೆ )

Badami Chalukya in Kannada history questions and answers

2ನೇ ಕೀರ್ತಿವರ್ಮ ( ಕ್ರಿ.ಶ. 746-753 )

  •  ಎರಡನೇ ವಿಕ್ರಮಾದಿತ್ಯನ ಮಗನಾದ ಈತ ಬಾದಾಮಿ ಚಾಲುಕ್ಯರ ಕೊನೆಯ ರಾಜ .
  •  ಕಂಚಿಯ ದಂಡಯಾತ್ರೆಯ ಕಾಲದಲ್ಲಿ ತನ್ನ ತಂದೆಗೆ ನೆರವಾಗಿದ್ದನು .
  •  ಕ್ರಿ.ಶ. 753 ರಲ್ಲಿ ರಾಷ್ಟ್ರಕೂಟ 1 ನೇ ಕೃಷ್ಣನು ಈತನನ್ನು ಸಂಪೂರ್ಣವಾಗಿ ಸೋಲಿಸಿ ಬಾದಾಮಿ ಚಾಲುಕ್ಯ ಮನೆತನವನ್ನು ಅಂತ್ಯಗೊಳಿಸಿದನು .

ಕೊಡುಗುಗಳು ( ಮುಖ್ಯಾಂಶಗಳು ) .

  • ಕದಂಬರು ಮತ್ತು ಗುಪ್ತರ ಆಡಳಿತದ ಉತ್ತಮ ಅಂಶಗಳನ್ನು ಪಡೆದು ತಮ್ಮದೇ ಆದ ಆಡಳಿತ ವ್ಯವಸ್ಥೆಯನ್ನು ರೂಪಿಸಿದ್ದರು .
  • ಗುಪ್ತರ ಬಿರುದಾದ ರಾಜಾಧಿರಾಜ ಎಂಬ ಬಿರುದು ಧರಿಸಿದ್ದರು .
  • ಆಡಳಿತದಲ್ಲಿ ರಾಜನಿಗೆ ಸಲಹೆ ನೀಡುತ್ತಿದ್ದ ವಿದ್ವಾಂಸ ಗುರುಗಳೆಂದರೆ ಇಮ್ಮಡಿ ಪುಲಿಕೇಶಿ ಕಾಲದಲ್ಲಿ ನಾಗವರ್ಧನಾ ಚಾರ್ಯರು , 1 ನೇ ವಿಕ್ರಮಾದಿತ್ಯನ ಕಾಲದಲ್ಲಿ ಸುದರ್ಶನಚಾರ್ಯರು , 1 ನೇ ಕೀರ್ತಿವರ್ಮನ ಕಾಲದಲ್ಲಿ ವ್ಯಾಘ್ರಸ್ವಾಮಿ ಮುಂತಾದವರು .
  • ಚಾಲುಕ್ಯರ ಸೇನೆಯನ್ನು ” ಕರ್ಣಾಟ ಬಲ ” ಎಂದು ಕರೆಯಲಾಗಿತ್ತು .
  •  ಯುದ್ಧದ ಆನೆಗಳಿಗೆ ಮದ್ಯ ಕುಡಿಸಿ ಉತ್ತೇಜಿಸಲಾಗುತ್ತಿತ್ತೆಂದು ಹ್ಯಾಂಗ ತಿಳಿಸಿದ್ದಾನೆ .
  •  ರಾಜ್ಯಕ್ಕೆ ಆದಾಯದ ಮೂಲ ಭೂಕಂದಾಯವಾಗಿದ್ದು ಇದನ್ನು ಸಿದ್ಧಾಯ ಎನ್ನುತ್ತಾರೆ .
  •  ಚಾಲುಕ್ಯರ ಸೇನಾ ಶಿಬಿರಗಳನ್ನು ವಿಜಯ ಸೃಂದಾವಾರ ಎನ್ನುವರು .

ಪ್ರಮುಖ ತೆರಿಗೆಗಳು

 ಪನ್ನೆಯ – ವೀಳ್ಯದೆಲೆ ಮೇಲಿನ ಸುಂಕ

ಹೇರ್ಜುಂಕ – ಭಾರದ ಮೇಲೆ ಅಥವಾ ಹೇರುಗಳ ಮೇಲಿನ ತೆರಿಗೆ

 ಕಿರುಕುಳ – ವಸ್ತುಗಳ ಮೇಲಿನ ತೆರಿಗೆ

ವಡ್ಡಾರಾವುಲ – ರಾಜನ ಪರಿವಾರದವರ ವೆಚ್ಚಕ್ಕಾಗಿ ಹಾಕುತ್ತಿದ್ದ ತೆರಿಗೆ

ಬಳ್ಳಾರಿಯ ಕುರುಗೋಡಿನಲ್ಲಿ ಭೂ ಅಳತೆಮಾಡುವ ಅಳತೆಗೋಲನ್ನು ಕೆತ್ತಲಾಗಿದೆ .

ಚಾಲುಕ್ಯರ ನಾಣ್ಯಗಳನ್ನು ಮೊದಲಿಗೆ ಗದ್ಯಾಣ ಎಂತಲು ನಂತರ ವರಾಹಗಳೆಂದು ಕರೆಯಲಾಯಿತು ( ಇವುಗಳ ತೂಕ 120 ಗ್ರೇನ ) .

ಚಾಲುಕ್ಯರ ಪ್ರಮುಖ ಮಾಂಡಲಿಕ ಅರಸುಗಳೆಂದರೆ- ಗಂಗರು , ಅಳುಪರು , ಸೇಂದ್ರಕರು , ಬಾಣರು .

ಗಣಿಕೆಯರು ಅಥವಾ ವೇಶೈಯರು ಸಮಾಜದಲ್ಲಿ ಉತ್ತಮ ಸ್ಥಾನ ಹೊಂದಿದ್ದರು . ದಾನಧರ್ಮಗಳಿಗೆ ಇವರು ಹೆಸರಾಗಿದ್ದರು

Badami Chalukya Dynasty in Kannada vastu shilpa

ಕಲೆ ಮತ್ತು ವಾಸ್ತುಶಿಲ್ಪ
  •  ಚಾಲುಕ್ಯರನ್ನು ಕರ್ನಾಟಕ ದೇವಾಲಯದ ವಾಸ್ತುಶಿಲ್ಪದ ಪ್ರವರ್ತಕರೆಂದು ವರ್ಣಿಸಲಾಗಿದೆ .
  •  ಚಾಲುಕ್ಯರು ಕಲಾಕ್ಷೇತ್ರಕ್ಕೆ ಮಹತ್ವಪೂರ್ಣ ಕೊಡುಗೆ ನೀಡಿದ್ದು 100 ಕ್ಕೂ ಹೆಚ್ಚಿನ ಕಲಾ ರಚನೆಗಳು ಮಲಪ್ರಭಾ ಕಣಿವೆಯಲ್ಲಿ ಹರಡಿಕೊಂಡಿವೆ .
  • ಹೊಸ ಕಲಾಶೈಲಿಯ ನಿರ್ಮಾಪಕರಾದ ಇತರ ಶೈಲಿಯನ್ನು ವೇಸರ ಶೈಲಿ ಅಥವಾ ಚಾಲುಕ್ಯ ಶೈಲಿಯೆಂದು ಕರೆಯಲಾಗುತ್ತದೆ . ಇದು ಉತ್ತರದ ನಾಗರಶೈಲಿ ಮತ್ತು ದಕ್ಷಿಣದ ದ್ರಾವಿಡ ಶೈಲಿಗಳ ಸಂಗಮ ಶೈಲಿಯಾಗಿದೆ ,

ಚಾಲುಕ್ಯರ ದೇಹದ ಶೈಲಿಯ ಲಕ್ಷಣಗಳು

  • ಚಿಕ್ಕದಾದ ಮತ್ತು ಸಾದಾ ತಳವಿನ್ಯಾಸ , ಕೆಲವು ದೇವಾಲಯಗಳಲ್ಲಿ ಲಾಳಾಕಾರದ ತಳವಿನ್ಯಾಸ , ಚೌಕಾಕಾರದ ಗರ್ಭಗುಡಿ ಮತ್ತು ಶಿಬಿರ
  • ಸಭಾಮಂಟಪ , ಸುಕನಾಸಿ , ಮುಖಮಂಟಪ
  • ಗರ್ಭಗುಡಿಯ ಸುತ್ತಲೂ ಪ್ರದಕ್ಷಿಣಾ ಪಥವಿದೆ .
  • ನದಿತೀರ , ಕೊಳ , ಬಾವಿ , ಗುಡ್ಡದ ಮೇಲೆ ನಿರ್ಮಾಣ ,
  • ಗೋಡೆಗಳು , ಮುಂಬಾಗಿಲು ಮತ್ತು ಭಾವಣಿ ಮೇಲೆ ಅಲಂಕೃತ ಕೆತ್ತನೆ
  •  ಗುಜರಾತ್ ಮತ್ತು ಮೆಗಿ ಚಾಲುಕ್ಯರ ಕಲೆಯ ಮೇಲು ಇವರ ಪ್ರಭಾವವಿದೆ .
  •   ಡಾ . ಎಂ . ಶೇಷಾದ್ರಿಯವರು “ ಚಾಲುಕ್ಯರು ರಾಕ್ಷಸರಂತೆ ಕಡಿದು ರತ್ನಗಾರರಂತೆ ಮುಗಿಸಿದ್ದಾರೆ ”ಎಂದು ವರ್ಣಿಸಿದ್ದಾರೆ .

Badami Chalukya in Kannada shasana information in kannada

ಗುಹಾಂತರ ದೇವಾಲಯಗಳು

1.ನೆಯದು ಶೈವಗುಹೆ

23 ವಿಷ್ಣು ಗುಹೆ

3.ಜೈನ ಗುಹೆ

ಆಧುನಿಕ ಕರ್ನಾಟಕ ಇತಿಹಾಸ

ದೇವಾಲಯಗಳು

  • ಐಹೊಳೆ : – ಇಲ್ಲಿ 70 ಕ್ಕೂ ಹೆಚ್ಚು ಚಾಲುಕ್ಯರ ದೇವಾಲಯಗಳು ರಚನೆಯಾಗಿದೆ .
  • ಕಲಾವಿಮರ್ಶಕ ಪರ್ಸಿಬ್ರೌನ್ ” ಐಹೊಳೆಯನ್ನು ಭಾರತೀಯ ದೇವಾಲಯದ ವಾಸ್ತುಶಿಲ್ಪದ ತೊಟ್ಟಿಲು ” ಎಂದು ವರ್ಣಿಸಿದ್ದಾರೆ .

ಚಿತ್ರಕಲೆ :

  • ಬಾದಾಮಿಯ ಒಂದು ಮತ್ತು ಎರಡನೇ ಗುಹೆಗಳಲ್ಲಿ ಹಾಗೂ ಅಜರಿತಾದ ಒಂದನೇ ಗುಹೆಯಲ್ಲಿ ಇವರ ಚಿತ್ರಕಲೆಗಳನ್ನು ಕಾಣಬಹುದು ,
  • ಅಜಂತಾದ 1 ನೇ ಗುಹೆಯಲ್ಲಿನ ವರ್ಣಚಿತ್ರದಲ್ಲಿ ಇಮ್ಮಡಿ ಪುಲಿಕೇಶಿಯು ಪರ್ಶಿಯಾದ ದೊರೆ ಖುಸ್ರುವಿನ ರಾಯಭಾರಿಯನ್ನು ಬರಮಾಡಿಕೊಳ್ಳುತ್ತಿರುವ ದೃಶ್ಯವಿದೆ .
  •  ಬಾದಾಮಿಯ 2 ನೆಯ ಗುಹೆಯಲ್ಲಿ ನಾಲ್ಕು ಸುಂದರ ವರ್ಣ ಚಿತ್ರಗಳನ್ನು ಕಾಣಬಹುದು ಇವುಗಳನ್ನು ಸ್ವಲ್ಪಾ ಕ್ಯಾಮರಿಶ್ ಎಂಬ ವಿದೇಶಿ ಮಹಿಳೆ ಪತ್ತೆ ಹಚ್ಚಿದಳು .

Badami Chalukya in Kannada Karnataka

  • ಪ್ರಥಮ ವಾತಾಪಿ ನಿರ್ಮಾಪಕ – ಒಂದನೇ ಕೀರ್ತಿ ವರ್ಮ
  • ಐಹೋಳೆಶಾಸನವು ನಿರ್ಮಾಣವಾದುದು – ಕ್ರಿ.ಶ.634
  • ಐಹೋಳೆಶಾಸನವನ್ನು – ಮೇಗುತಿ ಜಿನ ದೇವಾಲಯದಲ್ಲಿ ಕೆತ್ತಲಾಗಿದೆ
  • ಐಹೋಳೆ ಶಾಸನವು – ಕನ್ನಡ ಭಾಷೆ ಹಾಗೂ ಸಂಸ್ಕೃತ ಲಿಪಿಯಲ್ಲಿದೆ
  • ಐಹೋಳೆ ಶಾಸನವು ಪುರಿ ಬಂದರನ್ನು – ಪಶ್ಚಿಮ ಕರಾವಳಿಯ ಲಕ್ಷ್ಮೀ ಎಂದು ಬಣ್ಣಿಸಲಾಗಿದೆ
  • ವೆಂಗಿ ಚಾಲುಕ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದವರು – ವಿಷ್ಣುವರ್ಧನ
  • ಯುದ್ಧ ಮಲ್ಲ ಎಂಬ ಬಿರುದನ್ನು ಹೊಂದಿದ್ದವನು – ವಿನಯಾದಿತ್ಯ
  • ರನ್ನನು ತನ್ನ ಗಾದಯುದ್ದ ಕೃತಿಯಲ್ಲಿ ವಿನಯಾದಿತ್ಯನನ್ನ – ದುರ್ಧರ ಮಲ್ಲ ಎಂದು ವರ್ಣಿಸಿದ್ದಾನೆ
  • ಪಟ್ಟದ ಕಲ್ಲಿನ ವಿಜಯೇಶ್ವರ ( ಸಂಗಮೇಶ್ವರ ) ದೇವಾಲಯದ ನಿರ್ಮಾತೃ – ವಿಜಯಾದಿತ್ಯ
  •  ಸಂಪೂರ್ಣ ಕರ್ನಾಟಕವನ್ನು ಒಂದೇ ಮನೆತನದ ಆಳ್ವಿಕೆಗೊಳಪಡಿಸಿದ ಮೊದಲ ರಾಜ ಮನೆತನ
  • ಮೂಲ ಪುರುಷ – ಒಂದನೇ ಜಯಸಿಂಹ
  •  ರಾಜಧಾನಿ – ವಾತಾಪಿ ( ಬಾದಾಮಿ )
  •  ಅತ್ಯಂತ ಪ್ರಸಿದ್ದ ದೊರೆ – ಇಮ್ಮಡಿ ಪುಲಕೇಶಿ ( ಕ್ರಿ.ಶ. 609-42 ) ಈತನಿಗೆ “ ಪಕ್ಷಿಣ ಪಥೇಶ್ವರ ‘ ಬಿರುದು ಇತ್ತು
  • ಈತ ಹರ್ಷವರ್ಧನನ ( ಉತ್ತರ ಪಥೇಶ್ವರ ) ಸಮಕಾಲೀನ
  •  ಇವನ ಆಸ್ಥಾನಕ್ಕೆ ‘ ನ್ಯೂಯನ್ ತ್ಸಾಂಗ್ ‘ ಭೇಟಿ ನೀಡಿದ್ದ
  •  ನರ್ಮರಾ ಕದನ – ಇಮ್ಮಡಿ ಪುಲಿಕೇಶಿ ಮತ್ತು ಹರ್ಷವರ್ಧನನ ನಡುವೆ ನಡೆಯಿತು ,
  • ಐಹೋಳೆ ಶಿಲಾಶಾಸನ ( ಕ್ರಿ . ಶ . 634 ) ರವಿಕೀರ್ತಿಯು ಸಂಸ್ಕೃತ ಭಾಷೆಯಲ್ಲಿದ್ದು ಇಮ್ಮಡಿ ಪುಲಿಕೇಶಿಯ ಸಾಧನೆಗಳ ಬಗ್ಗೆ ಮಾಹಿತಿ
  • ಪಲ್ಲವ ದೊರೆ 1 ನೇ ನರಸಿಂಹವರ್ಮನು ಇಮ್ಮಡಿ ಪುಲಕೇಶಿಯನ್ನು ಸೋಲಿಸಿ ‘ ವಾತಾಪಿಕೊಂಡ ಎಂಬ ಬಿರುದು ಪಡೆಯುತ್ತಾನೆ .
  • ಪಟ್ಟದಕಲ್ಲು – ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಗೆ ಸೇರಿರುವ ಐತಿಹಾಸಿಕ ತಾಣವಾಗಿದೆ
ಬಾದಾಮಿ ಚಾಲುಕ್ಯರ ಇತಿಹಾಸ | Badami Chalukya in Kannada Best No1 Information
ಬಾದಾಮಿ ಚಾಲುಕ್ಯರ ಇತಿಹಾಸ | Badami Chalukya in Kannada Best No1 Information
ಬಾದಾಮಿ ಚಾಲುಕ್ಯರ ಇತಿಹಾಸ | Badami Chalukya in Kannada Best No1 Information
ಬಾದಾಮಿ ಚಾಲುಕ್ಯರ ಇತಿಹಾಸ | Badami Chalukya in Kannada Best No1 Information

Badami Chalukya in Kannada PDF Notes

FAQ

ಪ್ರಸ್ತುತ ಬಾದಮಿಯು ಯಾವ ಜಿಲ್ಲೆಯಲ್ಲಿದೆ?

ಇಂದಿನ ಬಾಗಲಕೋಟ ಜಿಲ್ಲೆಯಲ್ಲಿದೆ

ಬಾದಾಮಿ ಚಾಲುಕ್ಯರ ರಾಜ್ಯ ಲಾಂಛನ?

ವರಾಹ

ಪ್ರಬಂಧಗಳ ಪಟ್ಟಿ

ಬಾದಾಮಿ ಚಾಲುಕ್ಯರ ಇತಿಹಾಸ | Badami Chalukya in Kannada Best No1 Information
ಬಾದಾಮಿ ಚಾಲುಕ್ಯರ ಇತಿಹಾಸ | Badami Chalukya in Kannada Best No1 Information
 

1 thoughts on “ಬಾದಾಮಿ ಚಾಲುಕ್ಯರ ಇತಿಹಾಸ | Badami Chalukya History in Kannada

Leave a Reply

Your email address will not be published. Required fields are marked *