Samasagalu In Kannada, ಸಮಾಸಗಳು ಕನ್ನಡ ವ್ಯಾಕರಣ, Kannada Samasagalu, samasagalu kannada grammar, samasagalu kannada vyakarana, kannada grammar samasagalu examples, kannada samasagalu quiz, kannada samasagalu, ಸಮಾಸಗಳು ಉದಾಹರಣೆ 10, ಕನ್ನಡ ಸಮಾಸಗಳು
Samasagalu In Kannada
ಈ ಲೇಖನದಲ್ಲಿ ಸಮಾಸಗಳ ಬಗ್ಗೆ ಮಾಹಿತಿಯನ್ನು ನೀಡಲಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ ಇದು ಸಂಪೂರ್ಣವಾಗಿ ಉಚಿತವಾಗಿದೆ.
ನಮ್ಮ ಟೆಲಿಗ್ರಾಮ್ ಗ್ರೂಪ್ ಗೆ ಈಗಲೇ ಜಾಯಿನ್ ಆಗಿ
ಕನ್ನಡ ಸಮಾಸ ಎಂದರೇನು
ಎರಡು ಅಥವಾ ಅನೇಕ ಪದಗಳನ್ನು ಅರ್ಥಕ್ಕನುಸಾರವಾಗಿ ಸೇರಿಸಿ ಒಂದೇ ಪದವನ್ನಾಗಿ ಮಾಡುವ
ಪ್ರಕ್ರಿಯೆಯನ್ನು ಸಮಾಸ ಎನ್ನುತ್ತಾರೆ.
ಮೊದಲ ಪದ-ಪೂರ್ವಪದ ಎರಡನೆಯ ಪದ-ಉತ್ತರಪದ
ಸಮಾಸದ ವಿಧಗಳು
೧) ತತ್ಪುರುಷ ಸಮಾಸ : – ಪೂರ್ವಪದ – ನಾಮಪದ , ಉತ್ತರಪದ -ನಾಮಪದ (ಪ್ರಧಾನ)
೨) ಕರ್ಮಧಾರೆಯ ಸಮಾಸ :- ಪೂರ್ವಪದ – ಗುಣವಾಚಕ , ಉತ್ತರಪದ -ನಾಮಪದ
೩) ದ್ವಿಗು ಸಮಾಸ :- ಪೂರ್ವಪದ – ಸಂಖ್ಯಾವಾಚಕ , ಉತ್ತರಪದ -ನಾಮಪದ
೪) ಅಂಶಿ ಸಮಾಸ :- ಅಂಶ ,ಅಂಶಿ
೫) ದ್ವಂದ್ವ ಸಮಾಸ :- ಎಲ್ಲಾ ಪದಗಳ ಅರ್ಥ ಪ್ರಧಾನ
೬) ಕ್ರಿಯಾ ಸಮಾಸ :- ಪೂರ್ವಪದ – ನಾಮಪದ , ಉತ್ತರಪದ –ಕ್ರಿಯಾಪದ
೭) ಬಹುವ್ರೀಹಿ ಸಮಾಸ :- ಅನ್ಯಪದ ಪ್ರಧಾನ
೮) ಗಮಕ ಸಮಾಸ :- ಪೂರ್ವಪದ – ಸರ್ವನಾಮ ಅಥವಾ ಕೃದಂತ ,ಉತ್ತರಪದ -ನಾಮಪದ
ತತ್ಪುರುಷ ಸಮಾಸ
ಪೂರ್ವಪದ – ನಾಮಪದ , ಉತ್ತರಪದ -ನಾಮಪದ ,ಉತ್ತರ ಪದ ಅರ್ಥ ಪ್ರಧಾನ
ನಾಮಪದ :- ಯಾವುದೇ ಒಬ್ಬ ವ್ಯಕ್ತಿ,ಒಂದು ಸ್ಥಳ,ಒಂದು ವಸ್ತು,ಪ್ರಾಣಿ ಇತ್ಯಾದಿ ಹೆಸರುಗಳು.
ಉದಾಹರಣೆ : ರಾಮ, ಮನೆ, ಮರ,ಬೆಟ್ಟ,ತಾವರೆ,ದೈವ
ಬೆಟ್ಟದ + ತಾವರೆ , ತಲೆಯಲ್ಲಿ + ನೋವು , ಧನದ + ಹರಣ , ಪರರ + ಧನ
ಪೂವಿನ + ತೋಟ ,ಸ್ವಾಮಿಗೆ + ದ್ರೋಹ , ದೈವದ + ಭಕ್ತಿ , ಕಾಲಿನ + ಬಳೆ
ಕರ್ಮಧಾರೆಯ ಸಮಾಸ
ಪೂರ್ವಪದ – ಗುಣವಾಚಕ , ಉತ್ತರಪದ -ನಾಮಪದ
ಗುಣವಾಚಕ :-ವಸ್ತುಗಳ ಗುಣ,ಸ್ವಭಾವ ರೀತಿಗಳನ್ನು ತಿಳಿಸುವ ಪದಗಳು.
ಉದಾಹರಣೆ : ಕೆಂಪು,ದೊಡ್ಡ, ಹಿರಿದು
ಹಿರಿದು + ಮರ ಕಡಿದು + ಏಕಾಂತ
ಇರಿದು + ಮಾವು ಪಿರಿಯ + ಮಗ
ಮೆಲುವಾದ + ಮಾತು ನಲ್ಲಿತು + ಕುದುರೆ
ಹೊಸತು + ಕನ್ನಡ ಪಿರಿದು + ಮರ
ಅತಿಯಾದ + ಕುಟಿಲ ಹಿರಿದು + ತೊರೆ
ದ್ವಿಗು ಸಮಾಸ
ಪೂರ್ವಪದ – ಸಂಖ್ಯಾವಾಚಕ , ಉತ್ತರಪದ -ನಾಮಪದ
ಸಂಖ್ಯಾವಾಚಕ :- ಸಂಖ್ಯೆಯನ್ನು ಹೇಳುವ ಪದಗಳು
ಉದಾಹರಣೆ : ಒಂದು,ಎರಡು,ಮೂರು, ಷಟ್(ಷಣ್) ,ಸಪ
ಮೂರು +ಗಾವುದು ಏಕ + ಅಕ್ಷ ಷಟ್ + ಕೋನ
ಮೂರು +ಕಣ್ಣು ಎಂಟು + ದೆಸೆ ನಾಕು +ಆಳು
ಸಪ್ತಗಳಾದ +ಸ್ವರಗಳು ಒಂದು + ಕಟ್ಟು
ಅಂಶಿ ಸಮಾಸ
ಪೂರ್ವಪದ ಅಂಶ , ಉತ್ತರಪದ ಅಂಶಿ
ಅoಶ:- ಒಂದು ಭಾಗ
ಉದಾಹರಣೆ : ಕಾಲು.ತಲೆ
ಅಂಶಿ:- ಒಂದು ಭಾಗದಲ್ಲಿ ಮತ್ತೊಂದು ಭಾಗ
ಉದಾಹರಣೆ : ಹಿಂಗಾಲು.ಮು೦ಗಾಲು
ಹಿ೦ದಲೆ,ಮು೦ದಲೆ
ಕಾಲಿನ + ಹಿಂದೆ ಕೈ + ಮುಂದೆ ರಾತ್ರಿಯ + ನಡು
ಕಾಲಿನ + ಮಂದೆ ತಲೆಯ + ಮುಂದೆ ಕೈಯ + ಅಡಿ
ತಲೆಯ + ಹಿಂದೆ ಅಡವಿಯ + ನಡು ಬೆರಳಿನ + ತುದಿ
ಕಣ್ಣ+ಕಡೆ ತುಟಿಯ + ಕೆಳಗೆ ಮೂಗಿನ + ತುದಿ
ದ್ವಂದ್ವ ಸಮಾಸ
ಎರಡು ಅಥವಾ ಎರಡಕ್ಕಿಂತ ಹೆಚ್ಚು ನಾಮ ಪದಗಳಿದ್ದು , ಎಲ್ಲಾ ಪದಗಳ ಅರ್ಥ ಪ್ರಧಾನ
ಗಿರಿಯೂ+ವನವೂ+ದುರ್ಗವೂ ಮಾದ್ರರೂ + ಮಾಗದರೂ +ಯಾದವರು
ಕರಿಯೂ+ತುರಗವೂ+ರಥವೂ ಸರ‍್ಯನೂ +ಚಂದ್ರನೂ
ಹನುಮನೂ +ಭೀಮನೂ +ರಾಮನೂ ಕೆರೆಯೂ +ಕಟ್ಟೆಯೂ +ಬಾವಿಯೂ
ಭೀಮನೂ +ಅರ್ಜುನನೂ ಲವನೂ + ಕುಶನೂ
ಕ್ರಿಯಾ ಸಮಾಸ
ಪೂರ್ವಪದ – ನಾಮಪದ ಉತ್ತರಪದ –ಕ್ರಿಯಾಪದ
ಕ್ರಿಯಾಪದ :-ಭಾಷೆಯಲ್ಲಿ ಕ್ರಿಯೆಯನ್ನು (ಕರ‍್ಯ) ತಿಳಿಸುವ ಪದಗಳು
ಉದಾಹರಣೆ :- ತೆರೆ,ಮುಚ್ಚು,ಏರಿಸು,ಕೇಳಿ ಬರೆಯುತ್ತಾನೆ,ನೋಡುತ್ತಾನೆ.
ಮೈಯನ್ನು+ಮುಚ್ಚು ಕೈಯನ್ನು + ಕೊಳ್ವುದು ಕೈಯನ್ನು + ಆನು
ಕಣ್ಣನ್ನು+ತೆರೆ ಸಾಕ್ಷಿಯನ್ನು + ಮಾಡಿ ಹೊಗೆಯನ್ನು + ತೋರು
ಕಣ್ಣಿನಿಂದ +ಕೆಡು ಬಲಕ್ಕೆ + ಬಂದು ಸೊಲ್ಲನ್ನು + ಕೇಳಿ
ಬಿಲ್ಲನ್ನು + ಕೊಂಡು ಬಿಲ್ದಿರುವನ್ನು +ಏರಿಸಿ ಮೋಸವನ್ನು +ಮಾಡು
ಬಹುವ್ರೀಹಿ ಸಮಾಸ
ಎರಡು ಅಥವಾ ಎರಡಕ್ಕಿಂತ ಹೆಚ್ಚು ನಾಮ ಪದಗಳು ಸೇರಿ ಸಮಾಸವಾದಾಗ , ಅನ್ಯಪದ ಪ್ರಧಾನ
ಹಣೆಯಲ್ಲಿ ಕಣ್ಣು ಉಳ್ಳವನು ಆವನೋ ಅವನು -ಹಣೆಗಣ್ಣ-ಶಿವ
ಮೂರು ಕಣ್ಣು ಉಳ್ಳವನು ಆವನೋ ಅವನು ಮುಕ್ಕಣ್ಣ-ಶಿವ
ಚಕ್ರವು ಪಾಣಿಯಲ್ಲಿ ಆವನಿಗೋ ಅವನು ಚಕ್ರಪಾಣಿ-ವಿಷ್ಣು
ಉದರದಲ್ಲಿ ಕಮಲ ಉಳ್ಳವ ಅಬ್ಜೋದರ –ವಿಷ್ಣು
ಘಟದಲ್ಲಿ ಸಂಭೂತನಾದವನು ಆವನೋ ಅವನು ಘಟಸಂಭೂತ –ದ್ರೋಣ
ಗಾಂಡಿವವನ್ನು ಪಡೆದವನು ಆವನೋ ಅವನು ಗಾಂಡಿವಿ -ಅರ್ಜುನ
ಪವನನ ನಂದನ ಆವನೋ ಅವನು ಪವನನಂದನ – ಭೀಮ
ಇನನ ತನುಜ ಆವನೋ ಅವನು ಇನತನೂಜ -ಕರ್ಣ
ಧನಜರಿಗೆ ರಿಪು ಆವನೋ ಅವನು ದನುಜರಿಪು -ಕೃಷ್ಣ
ಮುರನ ಅರಿ ಆವನೋ ಅವನು ಮುರಾರಿ -ಕೃಷ್ಣ
ಮೇದಿನಿಗೆ ಪತಿ ಆವನೋ ಅವನು ಮೇದಿನೀಪತಿ –ರಾಜ
ರಾಜಿವನ ಸಖ ಆವನೋ ಅವನು ರಾಜೀವಸಖ -ಸರ‍್ಯ
ಮದದಿಂದ ಅಂದನು ಆವನೋ ಅವನು ಮದಾಂಧ
ಗಮಕ ಸಮಾಸ
ಪೂರ್ವಪದ – ಸರ್ವನಾಮ ಅಥವಾ ಕೃದಂತ ಉತ್ತರಪದ -ನಾಮಪದ
ಅದು+ ಕಲ್ಲು ಇದು+ಬೆಕ್ಕು ನೆಯ್ದುದು +ವಸ್ತ್ರ + ಹುಡುಗ
ಈ ಕೆಳಗಿನ ಪ್ರಶ್ನೆಗಳಿಗೆ ಅಥವಾ ಅಪೂರ್ಣ ಹೇಳಿಕೆಗಳಿಗೆ ನಾಲ್ಕು ಪರ್ಯಾಯ ಉತ್ತರಗಳನ್ನು
ಸೂಚಿಸಲಾಗಿದೆ. ಅವುಗಳಲ್ಲಿ ಹೆಚ್ಚು ಸೂಕ್ತವಾದ ಉತ್ತರವನ್ನು ಆರಿಸಿ, ಕ್ರಮಾಕ್ಷರದೊಂದಿಗೆ ಪೂರ್ಣ
ಉತ್ತರವನ್ನು ಬರೆಯಿರಿ.
೧) ದ್ವಂದ್ವ ಸಮಾಸದ ಪದವಿದು :
(ಎ) ಮೋಸಮಾಡು (ಬಿ) ನಡುರಾತ್ರಿ (ಸಿ) ಸರ‍್ಯಚಂದ್ರರು (ಡಿ) ಪೆರ್ಮರ
೨) ಕರ್ಮಧಾರೆಯ ಸಮಾಸದ ಪದವಿದು :
(ಎ) ಮೋಸಮಾಡು (ಬಿ) ನಡುರಾತ್ರಿ (ಸಿ) ಸರ‍್ಯಚಂದ್ರರು (ಡಿ) ಪೆರ್ಮರ
೩) ಮೆಲ್ವಾತು’ ಪದದಲ್ಲಿ ಏರ್ಪಟ್ಟ ಸಮಾಸ :
(ಎ) ಅಂಶಿ (ಬಿ) ಕರ್ಮಧಾರೆಯ (ಸಿ) ಕ್ರಿಯಾ (ಡಿ) ಗಮಕ ಸಮಾಸ
೪) ಕ್ರಿಯಾಸಮಾಸ ಸಮಾಸದ ಪದವಿದು :
(ಎ) ಬಿಲ್ದಿರುವನೇರಿಸಿ (ಬಿ) ತಲೆನೋವು (ಸಿ) ನೇಯ್ದವಸ್ತç (ಡಿ) ಪೆರ್ಮಗ
೫)
ನಟ್ಟಡವಿ’ ಪದದಲ್ಲಿ ಏರ್ಪಟ್ಟ ಸಮಾಸವಿದು :
(ಎ) ಅಂಶಿ (ಬಿ) ಕರ್ಮಧಾರೆಯ (ಸಿ) ತತ್ಪುರುಷ (ಡಿ) ಬಹುವ್ರೀಹಿ ಸಮಾಸ
ಮೊದಲೆರಡು ಪದಗಳಿಗೆ ಇರುವ ಸಂಬo ಧದoತೆ ಮೂರನೆಯ ಪದಕ್ಕೆ ಸರಿ ಸಂಬo ಧಹೊ೦ದುವ ಪದಗಳನ್ನು ಬರೆಯಿರಿ.
೬) ಹೊಗೆದೋರು : ಕ್ರಿಯಾಸಮಾಸ :: ಹೆದ್ದಾರಿ : _
೭) ಸ್ವಾಮಿದ್ರೋಹ :ತತ್ಪುರುಷ ಸಮಾಸ :: ಮುಂಗೈ :
೮) ಹಣೆಗಣ್ಣ : ಬಹುವ್ರೀಹಿ :: ಬೆಟ್ಟದಾವರೆ : _
೯) ಬಿಲ್ಲನ್ನು + ಕೊಂಡು :ಬಿಲ್ಗೊಂಡು :: ತಲೆಯ + ಮುಂದೆ: _______
೧೦) ನೆಯ್ದವಸ್ತç:ಗಮಕಸಮಾಸ :: ಸರ‍್ಯಚಂದ್ರರು :____
ಉತ್ತರಗಳು:
೧) (ಸಿ) ಸರ‍್ಯಚಂದ್ರರು
೨) (ಡಿ) ಪೆರ್ಮರ
೩) (ಬಿ) ಕರ್ಮಧಾರೆಯ
೪) (ಎ) ಬಿಲ್ದಿರುವನೇರಿಸಿ
೫) (ಎ) ಅಂಶಿ
೬) ಕರ್ಮಧಾರೆಯ
೭) ಅಂಶಿ
೮) ತತ್ಪುರುಷ ಸಮಾಸ
೯) ಮುಂದಲೆ
೧೦) ದ್ವಂದ್ವ ಸಮಾಸ
ಇತರೆ ವಿಷಯಗಳು
- 10ನೇ ತರಗತಿ ಭಗತ್ಸಿಂಗ್ ಕನ್ನಡ ನೋಟ್ಸ್
- ಸರ್.ಎಂ. ವಿಶ್ವೇಶ್ವರಯ್ಯನವರ ಬಗ್ಗೆ
- ಭಾಗ್ಯಶಿಲ್ಪಿಗಳು ಪಾಠದ ಸಾರಾಂಶ
- 10ನೇ ತರಗತಿ ಯುದ್ಧ ಪಾಠದ ಸಾರಾಂಶ
- ಶಬರಿ ಪಾಠದ ಸಾರಾಂಶ ಕನ್ನಡ
- ಲಂಡನ್ ನಗರ ಪಾಠದ ಪ್ರಶ್ನೆ ಉತ್ತರಗಳು
- ಶಬರಿ ಪಾಠದ ಪ್ರಶ್ನೆ ಮತ್ತು ಉತ್ತರ
- 10ನೇ ತರಗತಿ ಕನ್ನಡ ಶಬರಿ ಪಾಠದ ಪ್ರಶ್ನೋತ್ತರಗಳು
- 10th ಹಸುರು ಪದ್ಯ ನೋಟ್ಸ್